ವಿಷಯಕ್ಕೆ ಹೋಗು

ಸ್ವಪೋಷಕಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಪೋಷಕಗಳು ಅದರ ಸುತ್ತಮುತ್ತಲಿನ ಸರಳ ವಸ್ತುಗಳಿಂದ ಸಂಕೀರ್ಣ ಸಾವಯವ ಸಂಯುಕ್ತಳಾದ ಕಾರ್ಬೋಹೈಡ್ರೇಟ್‍ಗಳು, ಕೊಬ್ಬುಗಳು , ಮತ್ತು ಪ್ರೋಟಿನ್‍ಗಳನ್ನು ಉತ್ಪಾದಿಸುತ್ತವೆ. ಇವು ಸಾಮಾನ್ಯವಾಗಿ ಬೆಳಕಿನ (ದ್ಯುತಿಸಂಶ್ಲೇಷಣೆ) ಶಕ್ತಿಯನ್ನು ಅಥವಾ ಅಜೈವಿಕ ರಾಸಾಯನಿಕ ಕ್ರಿಯೆಗಳನ್ನು ( ರಾಸಾಯನಿಕ ಸಂಶ್ಲೇಷಣೆ ಕ್ರಿಯೆಯಿಂದ ) ಬಳಸಿ ಸಂಕೀರ್ಣ ಸಾವಯವ ಸಂಯುಕ್ತಗಳನ್ನು ಉತ್ಪಾದಿಸುತ್ತವೆ. ಆಹಾರ ಸರಪಳಿಯಲ್ಲಿ ಸ್ವಪೋಷಕಗಳು ಉತ್ಪಾದಕರು. ಉದಾಹರಣೆ: ಭೂಮಿಯಲ್ಲಿರುವ ಸಸ್ಯಗಳು, ನೀರಿನಲ್ಲಿ ಇರುವ ಪಾಚಿ. ಇವುಗಳಿಗೆ ಸಾವಯವ ಇಂಗಾಲ ಅಥವಾ ಜೈವಿಕ ಮೂಲದ ಶಕ್ತಿಯ ಅಗತ್ಯವಿಲ್ಲ. ಸ್ವಯಂ ಆಹಾರ ತಯಾರಿಸುವ ಶಕ್ತಿ ಇವುಗಳಿಗೆ ಇವೆ.[] ಹೆಚ್ಚಿನ ಸ್ವಪೋಷಕಗಳು ನೀರನ್ನು ಅಪಕರ್ಷಣಕಾರಿಯಾಗಿ ಬಳಸುತ್ತವೆ. ಆದರೆ ಕೆಲವು ಸ್ವಪೋಷಕಗಳು ಹೈಡ್ರೋಜನ್ ಸಂಯುಕ್ತಗಳಾಗದ ಹೈಡ್ರೋಜನ್ ಸಲ್ಫೈಡ್ ಅನ್ನು ಅಪಕರ್ಷಣಕಾರಿಯಾಗಿ ಬಳಸುತ್ತವೆ. ಕೆಲವು ಸ್ವಪೋಷಕಗಳು ಸೂರ್ಯನ ವಿದ್ಯುತ್ಕಾಂತೀಯ ಶಕ್ತಿಯನ್ನು ಇಂಗಾಲದ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುತ್ತವೆ. ಸ್ವಪೋಷಕಗಳಲ್ಲಿ ಎರಡು ವಿಧಗಳಿವೆ. ಅವುಗಳು:ಫೊಟೊಆಟೊಟ್ರೋಫ್‍ಗಳು ಹಾಗೋ ಕೆಮೊಆಟೊಟ್ರೋಫ್‍ಗಳು.

  • ಫೊಟೊಆಟೊಟ್ರೋಫ್‍ಗಳು ಬೆಳಕನ್ನು ಶಕ್ತಿಯ ಮೂಲವಾಗಿ ಉಪಯೋಗಿಸುತ್ತವೆ.
  • ಕೆಮೊಆಟೊಟ್ರೋಫ್‍ಗಳು ಜೈವಿಕ ಅಥವಾ ಅಜೈವಿಕ ಮೂಲಗಳಿಂದ ದೊರೆಯುವ ಎಲೆಕ್ಟ್ರಾನ್ ದಾನಿಗಳನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳತ್ತವೆ

ಉಲ್ಲೇಖ

[ಬದಲಾಯಿಸಿ]
  1. https://en.wikipedia.org/wiki/Autotroph