ಸೋರತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ಸೋರತ್ ಒಂದು ಭಾರತೀಯ ಸಂಗೀತದ ಒಂದು ರಾಗವಾಗಿದೆ.  ಉತ್ತರ ಭಾರತದ ಸಿಖ್ ಸಂಪ್ರದಾಯದ ಪವಿತ್ರ ಗ್ರಂಥ  ಶ್ರೀ ಗುರು ಗ್ರಂಥ ಸಾಹಿಬ್ (SGGS.)ನಲ್ಲಿ ಉಲ್ಲೇಖವಾಗಿದೆ. ಗುರು ಗ್ರಂಥ ಸಾಹಿಬ್,(ಸಿಖ್ ಪವಿತ್ರ ಗ್ರಂಥ)ದಲ್ಲಿ ಒಟ್ಟು  31 ರಾಗಗಳಿವೆ ಅದರಲ್ಲಿ ಈ ರಾಗವು  ಒಂಬತ್ತನೆಯ ರಾಗವಾಗಿ ಕಾಣಿಸಿಕೊಂಡಿದೆ.ಈ ರಾಗದಲ್ಲಿ ರಚನೆಗಳು  ಒಟ್ಟು 65 ಪುಟಗಳಿದ್ದು, ಪುಟ ಸಂಖ್ಯೆ ೫೯೫ ರಿಂದ ೬೬೦ರ ವರೆಗೆ ಗುರು ನಾನಕ್,ಗುರು ಅಮರದಾಸಗುರು ರಾಮದಾಸ,ಗುರು ಅರ್ಜುನ, ಮತ್ತು ಗುರು ತೇಜ್ ಬಹಾದೂರ್ ರ ರಚನೆಗಳಿದ್ದು ಒಟ್ಟು ೧೫೦ ಮಂತ್ರಗಳು ಮತ್ತು ಹಲವಾರು ಶ್ಲೋಕಗಳಿವೆ.

ಹಿಂದೂಸ್ತಾನಿ ಪದ್ಧತಿಯಲ್ಲಿ[ಬದಲಾಯಿಸಿ]

ರಾಗ ಸೋರತ್ ರಾಗಮಾಲದಲ್ಲಿ ಮೇಘ ರಾಗದ ರಾಗಿಣಿಯಾಗಿ ಕಾಣಿಸಿಕೊಂಡಿದೆ.ಇಂದು ಇದು ಖಮಾಜ್ ಥಾಟ್‍ಗೆ ಸೇರಿದ ರಾಗವಾಗಿದೆ. ಇದು ಚಳಿಗಾಲದ ರಾಗವಾಗಿದ್ದು ಇದನ್ನು ರಾತ್ರಿಯ ಪ್ರಥಮ ಪ್ರಹರದಲ್ಲಿ ಹಾಡುತ್ತಾರೆ.ಇದರಲ್ಲಿ ಹಗುರವಾದ ಲವಲವಿಕೆಯ ಭಾವ ಇದೆ.ರಾಗ ದೇಶ್ ನ್ನು ಹೋಲುವ ಅಹ್ಲಾದಕರವಾದ ಧ್ವನಿ ಇದಕ್ಕಿದೆ.ಈ ರಾಗದಲ್ಲಿ ಸಂಯೋಜನೆಗೊಂಡ ಕೆಲವು ರಚನೆಗಳಲ್ಲಿ ಗುರುವಿನ ಮಾತುಗಳು ಹೇಗೆ ನಮ್ಮ ಎಲ್ಲಾ ಆತಂಕಗಳನ್ನು ದೂರಮಾಡಬಹುದು ಮತ್ತು ಹೇಗೆ ಸಂತಸವನ್ನು ಕೋಡಬಹುದು ಎಂದು ತೋರಿಸುತ್ತವೆ.

ಆರೋಹ ಮತ್ತು ಅವರೋಹ[ಬದಲಾಯಿಸಿ]

ಆರೋಹ ಮತ್ತು ಅವರೋಹದಲ್ಲಿರುವ ಸ್ವರಗಳ ಪಟ್ಟಿ:

  • ಆರೋಹ:ಸ ರಿ ಮ ಪ ನಿ ಸ
  • ಅವರೋಹ:ಸ ರಿ ನಿ ಧ, ಮ ಪ ಧ ಮ ಗ ರಿ ನಿ ಸ
  • ವಾದಿ: ರಿ
  • ಸಂವಾದಿ: ಧ


ಸಹ ನೋಡಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಸೋರತ್&oldid=1161506" ಇಂದ ಪಡೆಯಲ್ಪಟ್ಟಿದೆ