ಸೋಮಣ್ಣ ಹೊಂಗಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಸೋಮಣ್ಣ ಹೊಂಗಳ್ಳಿ

ಮಂಗಳೂರು ವಿಶ್ವವಿದ್ಯಾನಿಲಯಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳ ಗಂಗೋತ್ರಿ)ಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1989ರಲ್ಲಿ ಎಂ ಎ ಪದವಿ ಪಡೆದಿರುವ ಇವರು ಕುಂತಿಪೂಜೆ ಎಂಬ ವಿಷಯದ ಬಗ್ಗೆ ಡಾ ಅಂಬಳಿಕೆ ಹಿರಿಯಣ್ಣನವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ 1995ರಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ[೧]. ಕಥೆಗಾರರಾಗಿ, ಜನಪದ ವಿದ್ವಾಂಸರಾಗಿ ಕಾರ್ಯನಿರ್ವಹಿಸಿದ ಇವರ ಆಸಕ್ತಿದಾಯಕ ಕ್ಷೇತ್ರ ಹಳೆಗನ್ನಡ, ಮಧ್ಯಕಾಲೀನ ಕನ್ನಡ ಸಾಹಿತ್ಯದ ಪ್ರಕಾರಗಳಾದ ವಚನ ಮತ್ತು ರಗಳೆ.ಇವರು ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಲ್ಲಿ ಒಂದಾದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜುನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಉಪನ್ಯಾಸಕ ವೃತ್ತಿಯನ್ನು ಪ್ರಾರಂಭಿಸಿದರು.ನಂತರ ಸಹಪ್ರಾಧ್ಯಾಪಕರಾಗಿ ಬಡ್ತಿ ಹೊಂದಿ ಈಗ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

  1. ಮಹಾ ಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕರು
  2. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿಯ ಸದಸ್ಯ
  3. ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳ ಗಂಗೋತ್ರಿ) ವಿಭಾಗ ಮುಖ್ಯಸ್ಥರು.

ಪ್ರಮುಖ ಕೃತಿಗಳು[ಬದಲಾಯಿಸಿ]

  1. ಲಂಬಾಣಿ ಜನಪದ ಸಂಪ್ರದಾಯಗಳು
  2. ಕುಂತಿಪೂಜೆ ಒಂದು ಅಧ್ಯಯನ (ಪಿಎಚ್ ಡಿ ಮಹಾ ಪ್ರಬಂಧ)
  3. ಮೇಗಳಕೇರಿ(ಕಥಾ ಸಂಕಲನ)
  4. ಕ್ವಾರಿ(ಕಾದಂಬರಿ)
  5. ತಮಟೆ (ಕಥಾ ಸಂಕಲನ)
  6. ಲಂಬಾಣಿ ಜನಪದ ಕಥೆಗಳು (ಕಥಾ ಸಂಗ್ರಹ)
  7. ಕಾವೇರಿ ತೀರದಲ್ಲಿಕಾದಂಬರಿ)
  8. ಸಣ್ಣಕಥೆಗಳ ಇತಿಹಾಸ
  9. ತಮಿಳು ನಾಡು ದಲಿತ ಸಾಹಿತ್ಯ
  10. ಹೊಸಗನ್ನಡ ಸಾಹಿತ್ಯ ಪರಿಶೀಲನೆ
  11. ಅಕ್ಕಮಹಾದೇವಿ ವಚನದಲ್ಲಿ ಬಂಡಾಯ
  12. ಆಧುನಿಕ ಕನ್ನಡ ಕಾವ್ಯಗಳ ಪರಿಶೀಲನೆ
  13. ವ್ಯವಸಾಯ ಸಂಬಂಧಿ ಆಚರಣೆಗಳು
  14. ಬಾಗಲೋಡಿ ದೇವರಾಯ ಸಾಹಿತ್ಯ ವಾಚಿಕೆ
  15. ಕನ್ನಂಬಾಡಿ ಸುತ್ತಿನ ಜನಪದ ಕಥೆಗಳು
  16. ತೌಲನಿಕ ಸಾಹಿತ್ಯ- ಹರಿಹರ-ಚಾಮರಸ

ಸಂಪಾದಿತ ಕೃತಿಗಳು[ಬದಲಾಯಿಸಿ]

ಸಂಶೋಧನ ಕೃತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://www.mangaloreuniversity.ac.in/dr-somanna