ಸೇವಂತಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೇವಂತಿಗೆ
Chrysanthemum sp.
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Chrysanthemum

Type species
Chrysanthemum indicum
Synonyms
  • Chrysanthemum subsect. Dendranthema (DC.) DC. ex Kitam.
  • Neuractis Cass.
  • Pyrethrum sect. Dendranthema DC.
  • Leucanthemum (Tourn.) L.
  • Dendranthema (DC.) Des Moul.
  • Pyrethrum sect. Dendranthema DC.


ಸೇವಂತಿಗೆ ಆಸ್ಟರೇಸಿಯಿ ಕುಟುಂಬದಲ್ಲಿನ ಕ್ರಿಸ್ಯಾಂಥಮಮ್ ಜಾತಿಯ ಒಂದು ಹೂಬಿಡುವ ಸಸ್ಯ. ಅವು ಏಷ್ಯಾ ಮತ್ತು ಈಶಾನ್ಯ ಯೂರೋಪ್‍ಗೆ ಸ್ಥಳೀಯ ಸಸ್ಯ|ಸ್ಥಳೀಯವಾಗಿವೆ. ಬಹುತೇಕ ಪ್ರಜಾತಿಗಳು ಪೂರ್ವ ಏಷ್ಯಾದಿಂದ ಹುಟ್ಟಿಕೊಂಡಿವೆ ಮತ್ತು ಚೀನಾದಲ್ಲಿ ವೈವಿಧ್ಯತೆಯ ಕೇಂದ್ರವಿದೆ[೩].

ಸೇವಂತಿಗೆ ಹೂವಿಗೆ ಆಡುಭಾಷೆಯಲ್ಲಿ ಸೇವಂತಿಗೆ, ಶಾವಂತಿಗೆ, ಶ್ಯಾಮಂತಿಗೆ ಇತ್ಯಾದಿ ಹೆಸರುಗಳಿವೆ. ಸೇವಂತಿಗೆ ಹೂವಿನಲ್ಲಿ ಅನೇಕ ಬಣ್ಣ, ಆಕಾರಗಳಿದ್ದರೂ, ಸಾಧಾರಣವಾಗಿ ಕಂಡು ಬರುವುದು ಹಳದಿ ಬಣ್ಣದ ಹೂವು. ಇತರ ಬಣ್ಣಗಳು - ಬಿಳಿ, ಕೆಂಪು, ನೇರಳೆ, ತಿಳಿ ಗುಲಾಬಿ, ತಿಳಿಗೆಂಪು ಇತ್ಯಾದಿ. ಹಬ್ಬ-ಹರಿದಿನಗಳಲ್ಲಿ ಸೇವಂತಿಗೆ ಹೂವಿನ ಬಳಕೆ ಜಾಸ್ತಿ. ಹೂಗೊಂಚಲು(ಬೊಕೆ) ತಯಾರಿಕೆಯಲ್ಲೂ ಸೇವಂತಿಗೆ ಸೂಕ್ತ ಸ್ಥಾನ ಪಡೆದಿದೆ.

ಬೇಸಾಯ ಕ್ರಮ[ಬದಲಾಯಿಸಿ]

ಜಮೀನನ್ನು ಚೆನ್ನಾಗಿ ಹುಡಿ ಮಾಡಿ ಒಂದೂವರೆ ಅಡಿ ಅಂತರ ಬಿಟ್ಟು ಸಾಲುಗಳನ್ನು ನಿರ್ಮಿಸಬೇಕು. ಕೈಅಳತೆಯಲ್ಲಿ ಗುಂಡಿ ತೆಗೆದು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಬಿಟ್ಟು ಗಿಡಗಳನ್ನು ನಾಟಿ ಮಾಡಬೇಕು. ನಾಟಿಗೆ ಬೇಕಾದ ಸಸಿ ಬೆಳೆಗಾರರ ಬಳಿ ಲಭ್ಯ. ಕೆಲವೊಂದು ಕಂಪೆನಿಗಳು ಸಸಿಯನ್ನು ಪೂರೈಸುತ್ತವೆ. ನಾಟಿಗಿಂತ ಮುಂಚೆ ಗುಂಡಿಗೆ ಒಂಚೂರು ಸುಡುಮಣ್ಣು ಮತ್ತು ಕೊಟ್ಟಿಗೆ ಗೊಬ್ಬರವನ್ನು ನೀಡಿದರೆ ಒಳ್ಳೆಯದು. ಒಂದು ಗುಂಡಿಯಲ್ಲಿ ಒಂದೇ ಗಿಡವನ್ನು ನಾಟಿ ಮಾಡಬೇಕು.ಗಿಡ ನಾಟಿ ಮಾಡಿದ ನಂತರ ಪ್ರತಿದಿನ ಪ್ರತಿಗಿಡಕ್ಕೆ ಒಂದು ಲೋಟದಷ್ಟು ನೀರನ್ನು ನೀಡುತ್ತಿರಬೇಕು. ತಿಂಗಳಿಗೊಮ್ಮೆ ಒಂದು ಬುಡಕ್ಕೆ ಅರ್ಧ ಬುಟ್ಟಿಯಷ್ಟು ಹಟ್ಟಿ ಗೊಬ್ಬರವನ್ನು ನೀಡಬೇಕು. ತಿಂಗಳಿಗೊಮ್ಮೆ ಬುಡಕ್ಕೆ ಮಣ್ಣು ಹಾಕಿದರೆ ಒಳ್ಳೆಯದು.

ಹೂ ಕಟಾವು[ಬದಲಾಯಿಸಿ]

ವಿಶೇಷವೆಂದರೆ ಮಳೆಗಾಲದಿಂದ ಈ ಪುಷ್ಪಕ್ಕೆ ಯಾವುದೇ ತೊಂದರೆಯಿಲ್ಲ. ಎಲೆಚುಕ್ಕೆ ರೋಗ, ಬೇರುಕೊಳೆ ಕಾಣಿಸಿಕೊಳ್ಳುವ ಪ್ರಮುಖ ರೋಗಗಳು. ಹದಿನೈದು ದಿನಕ್ಕೊಮ್ಮೆ ಹೂವಿನ ಗಿಡಗಳಿಗೆ ಕಹಿಬೇವಿನ ಹಿಂಡಿಯನ್ನು ಸಿಂಪಡಿಸುವ ಮೂಲಕ ಕೀಟಬಾಧೆಗಳನ್ನು ತಡೆಗಟ್ಟಬಹುದು. ಗಿಡಗಳು ಬಾಡಿದಂತೆ ಕಂಡುಬಂದ ಕೂಡಲೇ ಬೇರುಹುಳುರೋಗ ನಿಯಂತ್ರಕ ಸ್ಪ್ರೇಯರ್‌ಗಳನ್ನು ಸಿಂಪಡಿಸಬೇಕು. ಹೂಗಳು ಗಾತ್ರದಲ್ಲಿ ಸಣ್ಣದಾಗಿ ಬಾಡಿದಂತೆ ಕಂಡುಬಂದರೆ ಅಂತಹ ಹೂಗಳನ್ನು ಗಿಡದಿಂದ ಬೇರ್ಪಡಿಸಬೇಕು.ಕೆಂಪು ಮತ್ತು ಮೆಕ್ಕಲು ಮಣ್ಣು ಬೆಳೆಗೆ ಸೂಕ್ತ. ಗಿಡಗಳಿಗೆ ಬಿಸಿಲಿನ ಅಗತ್ಯವಿದ್ದು ಚಳಿಗಾಲದಲ್ಲಿ ಇಳುವರಿ ಕೂಡಾ ಕಡಿಮೆ. ಕಲ್ಲಿನಿಂದ ಕೂಡಿದ ಗುಡ್ಡ ಪ್ರದೇಶದಲ್ಲಿ ಬೆಳೆಯುವಂತಿಲ್ಲ. ಮಧ್ಯಾಹ್ನದ ವೇಳೆ ಅಂದರೆ ಹೆಚ್ಚಾಗಿ ಬಿಸಿಲಿನ ತಾಪವಿರುವ ವೇಳೆ ಹೂ ಕಟಾವು ಮಾಡುವಂತಿಲ್ಲ. ಮಳೆಗಾಲದಲ್ಲಿ ಇಳುವರಿ ಕೂಡಾ ಕಡಿಮೆ. ಗಿಡದಿಂದ ಗಿಡಕ್ಕೆ ಅಂತರವಿದ್ದಷ್ಟು ಇಳುವರಿ ಅಧಿಕ. ಗಿಡಗಳನ್ನು ನೆಲಕ್ಕೆ ಬಾಗದಂತೆ ನೋಡಿಕೊಳ್ಳಬೇಕು. ಕಳೆಗಳನ್ನು ಬೆಳೆಯಲು ಬಿಡಬಾರದು. ಚಳಿಗಾಲದಲ್ಲಿ ಹೂ ಕಟಾವಿಗಿಂತ ಮೊದಲು ನೀರು ಸಿಂಪಡಿಸುವುದು ಒಳ್ಳೆಯದು.

ಸೇವಂತಿಗೆ ಹೂಗಳ ಭಾವಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. conserved type ratified by General Committee, Nicolson, Taxon 48: 375 (1999)
  2. Tropicos, Chrysanthemum L.
  3. https://www.youtube.com/watch?v=egBnPcXCMWg