ಸಾಹಿತ್ಯ ಅಕಾಡೆಮಿ ಫೆಲೋ ಗೌರವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಿದು. ಭಾರತೀಯ ಭಾಷೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಫೆಲೋ ಗೌರವ ಸಲ್ಲಿಸಲಾಗುತ್ತದೆ. ಹೀಗೆ ಮೊದಲ ಫೆಲೋ ಗೌರವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಭಾರತದ ರಾಷ್ಟ್ರಪತಿಗಳಾಗಿ ದೇಶಕ್ಕೆ ಕೊಡುಗೆ ನೀಡಿದ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಗೆ 1968ರಲ್ಲಿ ಸಂದಿತು. ಇದರ ಜತೆಯಲ್ಲಿ ವಿದೇಶೀ ಲೇಖಕರಿಗೆ ಗೌರವ ಫೆಲೋಶಿಪ್, ಏಷ್ಯಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮಾಡುವವರಿಗೆ ನೀಡಲಾಗುತ್ತಿದ್ದ ಆನಂದ ಕುಮಾರಸ್ವಾಮಿ ಫೆಲೋಶಿಪ್ (ಈಗ ನಿಲ್ಲಿಸಲಾಗಿದೆ), ಸಾರ್ಕ್ ದೇಶಗಳ ಸಾಹಿತಿಗಳಿಗೆ ಸಲ್ಲುವ ಪ್ರೇಮ್‌ಚಂದ್ ಫೆಲೋಶಿಪ್ಗಳನ್ನೂ ಸಾಹಿತ್ಯ ಅಕಾಡೆಮಿ ನೀಡುತ್ತಿದೆ.

ವರ್ಷ ಚಿತ್ರ ಪುರಸ್ಕೃತರು ಉಲ್ಲೇಖ(ಗಳು)
1968 ಎಸ್. ರಾಧಾಕೃಷ್ಣನ್
1969 ಸಿ. ರಾಜಗೋಪಾಲಾಚಾರಿ
 – ತಾರಾಶಂಕರ ಬಂದೋಪಾಧ್ಯಾಯ
ದ. ರಾ. ಬೇಂದ್ರೆ
ಸುಮಿತ್ರಾನಂದನ ಪಂತ್
1973 ಮಾಸ್ತಿ ವೆಂಕಟೇಶ ಅಯ್ಯಂಗಾರ್
1979 ಕೆ. ವಿ. ಪುಟ್ಟಪ್ಪ
1985 ಕೆ. ಶಿವರಾಮ ಕಾರಂತ
1989 ವಿ. ಕೃ. ಗೋಕಾಕ
1994 ಪು. ತಿ. ನರಸಿಂಹಾಚಾರ್
1999 ಕೆ. ಎಸ್. ನರಸಿಂಹಸ್ವಾಮಿ
2004 ಯು. ಆರ್. ಅನಂತಮೂರ್ತಿ
2014 ಎಸ್. ಎಲ್. ಭೈರಪ್ಪ