ಸಾಯಿ ಪಲ್ಲವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಯಿ ಪಲ್ಲವಿ
Sai Pallavi at Mca Pre Release Event
Born
ಸಾಯಿ ಪಲ್ಲವಿ ಸೆಂತಮರಾಯಿ

೯ ಮೇ ೧೯೯೨
ಕೊಯಂಬತ್ತೂರು, ತಮಿಳುನಾಡು, ಭಾರತ
Nationalityಭಾರತೀಯ
Alma materಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ
Occupation(s)ನಟಿ, ನರ್ತಕಿ, ವೈದ್ಯೆ

ಸಾಯಿ ಪಲ್ಲವಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಾಯಿ ಪಲ್ಲವಿ ಸೆಂತಮರಾಯಿಯವರು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ನಟಿಸುತ್ತಿರುವ ಭಾರತೀಯ ನಟಿ. ಪ್ರೇಮಂ ಮತ್ತು ಫಿದಾ ಚಲನಚಿತ್ರದಲ್ಲಿ ಇವರ ಅಭಿನಯಕ್ಕಾಗಿ ಎರಡು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.[೧]ಸಾಯಿ ಪಲ್ಲವಿ ಅವರು ೨೦೧೫ ರ ಮಲಯಾಳಂ ಚಿತ್ರ ಪ್ರೇಮಂನಲ್ಲಿ ಮಲಾರ್ ಪಾತ್ರಕ್ಕಾಗಿ ಸಾರ್ವಜನಿಕರ ಗಮನ ಸೆಳೆದರು. ನಂತರ ಅವರು ಕಾಳಿ (೨೦೧೬) ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರೊಂದಿಗೆ ನಟಿಸಿದರು. ವರುಣ್ ತೇಜ್ ಅವರೊಂದಿಗೆ ನಟಿಸಿರುವ ೨೦೧೭ ರ ರೊಮ್ಯಾಂಟಿಕ್ ಚಿತ್ರ ಫಿದಾ[೨]ದಲ್ಲಿ ಭಾನುಮತಿ ಪಾತ್ರದಲ್ಲಿ ನಟಿಸುತ್ತಾ ತೆಲುಗಿಗೆ ಪಾದಾರ್ಪಣೆ ಮಾಡಿದರು. ಫಿದಾವನ್ನು ದೂರದರ್ಶನದಲ್ಲಿ ತೋರಿಸಿದಾಗ , ಐದನೇ ಬಾರಿಗೆ ಸಹ ಇದು ಗರಿಷ್ಠ ಟಿಆರ್ಪಿ ರೇಟಿಂಗ್ ಪಡೆಯಿತು. ೨೦೧೮ ರಲ್ಲಿ ವಿಜಯ್ ನಿರ್ದೇಶನದ ದಿಯಾ ಹೆಸರಿನ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

ಸಾಯಿ ಪಲ್ಲವಿ ಇವರು ವೈದ್ಯರಾಗಿದ್ದು , ಜಾರ್ಜಿಯಾದ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಿಂದ ೨೦೧೬ ರಲ್ಲಿ ಎಂಬಿಬಿಎಸ್ (ವೈದ್ಯಕೀಯ ಪದವಿ) ಮುಗಿಸಿದರು.[೩]

ಜನನ[ಬದಲಾಯಿಸಿ]

ಸಾಯಿ ಪಲ್ಲವಿ ೯ ಮೇ ೧೯೯೨ ರಲ್ಲಿ ಕೋಟಗಿರಿಯ, ತಮಿಳುನಾಡಿನಲ್ಲಿ ಜನಿಸಿದರು.[೪]

ಆರಂಭಿಕ ಜೀವನ[ಬದಲಾಯಿಸಿ]

ಸಾಯಿ ಪಲ್ಲವಿ ಅವರು ಕೋಟಗಿರಿಯ, ದಿ ನೀಲಗಿರಿಸ್,ತಮಿಳುನಾಡಿನಲ್ಲಿ ಜನಿಸಿದರು.ತಮಿಳುನಾಡಿನ ಸೆಂತಮಾರೈ ಕಣ್ಣನ್ ಮತ್ತು ರಾಧಾ ಇವರ ಪುತ್ರಿಯಾಗಿ ಜನಿಸಿದರು. ಅವಳ ಕಿರಿಯ ಸಹೋದರಿ ಪೂಜಾ ಕೂಡ ನಟಿಯಾಗಿ ಕೆಲಸ ಮಾಡಿದ್ದಾರೆ. ಸಾಯಿ ಪಲ್ಲವಿ ಬೆಳೆದು ಕೊಯಂಬತ್ತೂರುನಲ್ಲಿ ಶಿಕ್ಷಣ ಪಡೆದರು. ಅವರು ೨೦೧೬ರಲ್ಲಿ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿಸಿದರು.[೫]

ಜೀವನ[ಬದಲಾಯಿಸಿ]

ಸಾಯಿ ಪಲ್ಲವಿ ೨೦೧೫ ರಲ್ಲಿ ಮೊದಲ ಬಾರಿಗೆ ಮಲರ್ ಎಂಬ ಪಾತ್ರದಲ್ಲಿ ಮಲಯಾಳಂ ಚಿತ್ರವಾದ ಪ್ರೇಮಂ ಸಿನೆಮಾದಲ್ಲಿ ನಟಿಸಿದರು. ಆಕೆ ೨೦೧೬ರಲ್ಲಿ ಕಾಳಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದಳು. ಅವಳು ೨೦೧೭ ರಲ್ಲಿ ತೆಲುಗು ಚಿತ್ರರಂಗದಲ್ಲಿ ಭಾನುಮತಿಯ ಪಾತ್ರದಲ್ಲಿ ವರುಣ್ ತೇಜ್ ಜೊತೆ ಫಿದಾ ಚಿತ್ರದಲ್ಲಿ ಅಭಿನಯಿಸಿದರು. ಫಿದಾವನ್ನು ಟೆಲಿವಿಷನ್ನಲ್ಲಿ ತೋರಿಸಿದಾಗ, ಇದು ಐದನೇ ಬಾರಿಗೆ ಗರಿಷ್ಠ ಟಿ.ಆರ್ಪಿ ರೇಟಿಂಗ್ ಅನ್ನು ಪಡೆಯಿತು. ೨೦೧೮ ರಲ್ಲಿ ವಿಜಯ್ ನಿರ್ದೇಶಿಸಿದ ದಿಯಾ ಶೀರ್ಷಿಕೆಯೊಂದಿಗೆ ಅವಳು ತಮಿಳು ಚಿತ್ರರಂಗದಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಸಾಯಿ ಪಲ್ಲವಿ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದಾರೆ. ಅವರು ಜಾರ್ಜಿಯಾದ ಟಿಬಿಲಿಸ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಿಂದ ೨೦೧೬ ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು. [೬]

ನೃತ್ಯ ಜೀವನ[ಬದಲಾಯಿಸಿ]

ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು, ತರಬೇತಿ ಪಡೆದ ನರ್ತಕಿಯಾಗಿಲ್ಲದಿದ್ದರು, ಆಕೆಯು ಯಾವಾಗಲೂ ತನ್ನ ತಾಯಿಯಂತೆ ನೃತ್ಯ ಮಾಡಬೇಕೆಂದು ಬಯಸುತ್ತಿದ್ದಳು. ಅವರು ಶಾಲೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮತ್ತು ನರ್ತಕಿಯಾಗಿ ಜನಪ್ರಿಯತೆ ಗಳಿಸಿದರು. ಆಕೆಯ ತಾಯಿಯು ಬೆಂಬಲಿಸಿದ ಕಾರಣದಿಂದಾಗಿ, ಅವರು ೨೦೦೬ರಲ್ಲಿ ವಿಜಯ್ ಟಿವಿಯಲ್ಲಿ ಬರುತ್ತಿದ್ದ ನೃತ್ಯ ರಿಯಲಿಟಿ ಶೋ ಆದ ಯಾರ್ ಅದುತ ಪ್ರಭುದೇವ ದಲ್ಲಿ ಭಾಗವಹಿಸಿದರು ಮತ್ತು ೨೦೦೯ರಲ್ಲಿ ಇಟಿವಿ ತೆಲುಗು ಭಾಷೆಯಲ್ಲಿ ದೀ ಅಲ್ಟಿಮೇಟ್ ಡಾನ್ಸ್ ಷೋ (ಡಿ ೪) ನಲ್ಲಿ ಕಾಣಿಸಿಕೊಂಡರು.

ಚಲನಚಿತ್ರ ವೃತ್ತಿಜೀವನ[ಬದಲಾಯಿಸಿ]

೨೦೧೪ರಲ್ಲಿ ಅವರು ಜಾರ್ಜಿಯಾ, ಟಿಬಿಲಿಸಿ ಅಧ್ಯಯನ ಮಾಡುವಾಗ ನಿರ್ದೇಶಕ ಅಲ್ಫೋನ್ಸ್ ಪುಥಾರೆನ್ ತನ್ನ ಚಿತ್ರ ಪ್ರೇಮಂರಲ್ಲಿ ಮಲರ್ ಪಾತ್ರವನ್ನು ನಿರ್ವಹಿಸಿದರು. ಅವರು ಚಲನಚಿತ್ರವನ್ನು ರಜಾ ದಿನಗಳಲ್ಲಿ ಚಿತ್ರೀಕರಿಸುತ್ತಿದ್ದರು ಮತ್ತು ಶೂಟಿಂಗ್ ಮುಗಿದ ನಂತರ, ತನ್ನ ಅಧ್ಯಯನಕ್ಕೆ ಮರಳುತ್ತಿದ್ದರು. ಆ ವರ್ಷ ಅವರು ಹಲವಾರು ಅತ್ಯುತ್ತಮ "ಬೆಸ್ಟ್ ಫೀಮೇಲ್ ಡೆಬಟ್" ಪ್ರಶಸ್ತಿಗಳನ್ನು ಗೆದ್ದರು. ಇದರಲ್ಲಿ ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ನಟಿ ಪ್ರಶಸ್ತಿ ಕೂಡ ಪಡೆದರು. ೨೦೧೫ ರ ಅಂತ್ಯದಲ್ಲಿ, ತನ್ನ ಎರಡನೇ ಚಲನಚಿತ್ರವಾದ ಕಾಳಿಯಲ್ಲಿ ನಟಿಸಲು ಅವಳು ಒಂದು ತಿಂಗಳ ವಿರಾಮವನ್ನು ತೆಗೆದುಕೊಂಡಳು. ಇದು ಮಾರ್ಚ್ ೨೦೧೬ ರಲ್ಲಿ ಬಿಡುಗಡೆಯಾಯಿತು. ಪಾತ್ರದಲ್ಲಿ ಆಕೆಯು ಪತಿಯ ತೀವ್ರ ಕೋಪ ವಿಚಾರಗಳನ್ನು ಎದುರಿಸಬೇಕಾಗಿರುವ ಅಂಜಲಿ ಎಂಬ ಯುವ ಪತ್ನಿ ಪಾತ್ರವನ್ನು ಅವಳು ಅಭಿನಯಿಸಿದಳು. ಮಲೆಯಾಳಂ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು. ೨೦೧೭ರಲ್ಲಿ ತೆಲಂಗಾಣದಿಂದ ಸ್ವತಂತ್ರ ಗ್ರಾಮದ ಹುಡುಗಿಯಾದ ಭಾನುಮತಿ ಪಾತ್ರದಲ್ಲಿ ಶೇಖರ್ ಕಮುಲಾ ಅವರ ಫಿಡಾ ಜೊತೆ ತೆಲುಗು ಭಾಷೆಯಲ್ಲಿ ಚೊಚ್ಚಲ ಪ್ರವೇಶ ಪಡೆದರು. ನಿರ್ದೇಶಕ ಎ.ಎಲ್.ವಿಜಯ್ ಅವರ ಮುಂದಿನ ಯೋಜನೆ ದಿಯಾ,ತೆಲುಗು-ದ್ವಿಭಾಷಾ ಚಿತ್ರದಲ್ಲಿ ನಟಿಸಿದರು. ಆನಂತರ, ಬಾಲಾಜಿ ಮೋಹನ್ ನಿರ್ದೇಶಿಸಿದ ಧನುಷ್ ನ ಜೊತೆ ಮಾರಿ ಚಿತ್ರದ ಎರಡನೆಯ ಚಿತ್ರವಾದ ಮಾರಿ ೨ ಚಿತ್ರದಲ್ಲಿ ಅಭಿನಯಿಸಿದರು. ಪಲ್ಲವಿಯವರು ಪಡಿ ಪಡಿ ಲೆಚೆ ಮನಸೂವಿತ್ ಶರ್ವಾನ್ಡ್ ಚಿತ್ರಕ್ಕಾಗಿ ಫೆಬ್ರವರಿ ೨೦೧೮ರಲ್ಲಿ ಚಿತ್ರೀಕರಣ ಪ್ರಾರಂಭಿಸಿದರು. ಇದು ಡಿಸೆಂಬರಲ್ಲಿ ಬಾಕ್ಸ್ ಆಫಿಸ್ ನಲ್ಲಿ ಪ್ರದರ್ಶನಗೊಂಡಿತು.[೭]

ಚಲನಚಿತ್ರಗಳು[ಬದಲಾಯಿಸಿ]

ವರ್ಷ ವಿಷಯ ಪಾತ್ರ ನಿರ್ದೇಶಕರು ಭಾಷೆ Notes
೨೦೦೫ ಕಸ್ತೂರಿ ಮಾನ್ ಶಾಲೆಯ ಬಾಲಕಿ ಎ.ಕೆ ಲೊಹಿತದಾಸ್ ಅನ್ಕ್ರೆಡಿಕ್ಟೆಡ್ ಪಾತ್ರ
೨೦೦೮ ಧಾಮ್ ಧೂಮ್ ಶೇನ್ಬಾಸ್ ಸಂಬಂಧಿ ಜೀವ (director) ತಮಿಳು
೨೦೧೫ ಪ್ರೇಮಂ ಮಲರ್ ಅಲ್ಫೋನ್ಸ್ ಪುತರ್ ಮಲೆಯಾಳಂ ಮಲಯಾಲಂ ಡೆಬ್ಯೂಟ್
ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ - ಸೌತ್
೨೦೧೬ ಕಾಳಿ ( ೨೦೧೬ಫಿಲ್ಮ್) ಅಂಜಲಿ ಸಮೀರ್ ತಹಿರ್ ಮಲೆಯಾಳಂ ನಾಮನಿರ್ದೇಶನ - ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ - ಮಲಯಾಲಂ
೨೦೧೭ ಫಿದಾ ಭಾನುಮತಿ ಶೇಖರ್ ಕಮ್ಮುಲ ತೆಲುಗು ತೆಲುಗು ಡೆಬ್ಯೂಟ್
ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್- ತೆಲುಗು
ಮಿಡಲ್ ಕ್ಲಾಸ್ ಅಬ್ಬಾಯಿ ಪಲ್ಲವಿ "ಚಿನ್ನಿ" ವೆನು ಸ್ರೀ ರಾಮ್ ತೆಲುಗು
೨೦೧೮ ದಿಯಾ (ಫಿಲ್ಮ್) ತುಳಸಿ ಎ.ಲ್ ವಿಜಯ್ ತಮಿಳು [೮] ತಮಿಳ್ ಡೆಬ್ಯೂಟ್
ದಿಯಾ(ಫಿಲ್ಮ್) ತೆಲುಗು
ಪಡಿ ಪಡಿ ಲೆಚೆ ಮನಸು ವೈಶಲಿ ಹನು ರಘವಪುಡಿ ತೆಲುಗು
ಮಾರಿ ೨[೯] ಅರಾತು ಆನಂದಿ ಬಾಲಾಜಿ ಮೋಹನ್ ತಮಿಳು
೨೦೧೯ ಎನ್ ಜಿ ಕೆ (ಫಿಲ್ಮ್)|ಎನ್ ಜಿ ಕೆ[೧೦] ಮೈತಿಲಿ ಸೆಲ್ವರಘವನ್ ತಮಿಳು ಫಿಲ್ಮಿಂಗ್
ಫಹಧ್ ಫಾಸಿ ಫಿಲ್ಮ್ ಟಿಬಿಎ ವಿವೆಕ್ ಮಲೆಯಾಳಂ

[೧೧]

[೧೨]

ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಪ್ರಶಸ್ತಿ ವಿಭಾಗ ಭಾ‍ಷೆ ಸಿನೆಮಾ ಫಲಿತಾಂಶ
೨೦೧೫ ಏ‌ಷಿಯನೆಟ್ ಫಿಲ್ಮ್ ಅವಾರ್ಡ್ ಸ್ಪೆಶಲ್ ಜೂರಿ ಅವರ್ಡ್ ಮಲಯಾಲಂ ಪ್ರೇಮಂ ಗೆಲುವು
ಏ‌ಷಿಯ ವಿಶನ್ ಅವಾರ್ಡ್ ನ್ಯೂ ಸೆನ್ಸೇಷನ್ ಇನ್ ಆಕ್ಟಿಂಗ್ ಗೆಲುವು
ಫಿಲ್ಮಫೇರ್ ಅವಾರ್ಡ್ ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಡೆಬ್ಯೂಟ್ – ಸೌತ್ ಗೆಲುವು
ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಗೆಲುವು
ವನಿತಾ ಫಿಲ್ಮ್ ಅವಾರ್ಡ್ಸ್ ಬೆಸ್ಟ್ ಡೆಬ್ಯೂಟ್ (ಫೀಮೇಲ್) ಗೆಲುವು
IBNLive ಬೆಸ್ಟ್ ಡೆಬ್ಯೂಟ್ ಗೆಲುವು
೨೦೧೬ ಏಸಿಯನೆಟ್ ಫಿಲ್ಮ ಅವಾರ್ಡ್ಸ್ ಮೋಸ್ಟ್ ಪಾಪ್ಯುಲರ್ ಆಕ್ಟ್ರೆಸ್ ಕಾಳಿ (೨೦೧೬ ಫಿಲ್ಮ್) ಗೆಲುವು
ಫಿಲ್ಮಫೇರ್ ಅವಾರ್ಡ್-ಬೆಸ್ಟ್ ನಟಿ- ಮಲಯಾಲಂ ಫಿಲ್ಮಫೇರ್ ಅವಾರ್ಡ್-ಬೆಸ್ಟ್ ನಟಿ - ಮಲಯಾಲಂ ನಾಮನಿರ್ದೇಶನ
ಸೌತ್ ಇಂಡಿಯನ್ ಇನ್ಟರ್ನ್ಯಾಶನಲ್ ಮೂವಿ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ನಾಮನಿರ್ದೇಶನ
ಅವಾರ್ಡ್ ಬಿಹೈನ್ಡವುಡ್ಸ್ ಗೋಲ್ಡ್ ಮೆಡಲ್ ಬೆಸ್ಟ್ ಆಕ್ಟ್ರೆಸ್ ಗೆಲುವು
೨೦೧೮ ಫಿಲ್ಮಫೇರ್ ಅವಾರ್ಡ್ಸ್ ಫಿಲ್ಮಫೇರ್ ಅವಾರ್ಡ್-ಬೆಸ್ಟ್ ನಟಿ - ತೆಲುಗು ತೆಲುಗು ಫಿದಾ ಗೆಲುವು

ಸೌತ್ ಇಂಡಿಯನ್ ಇನ್ಟರ್ನ್ಯಾಶನಲ್ ಅವಾರ್ಡ್ಸ್

ನಾಮನಿರ್ದೇಶನ

[೧೩]

ಉಲ್ಲೇಖಗಳು[ಬದಲಾಯಿಸಿ]

  1. https://www.filmfare.com/awards/filmfare-awards-south-2018/telugu/nominations/best-actor-female/sai-pallavi
  2. editor, tc (5 June 2019). "Sai Pallavi erring in judgment!". telugucinema.com (in ಇಂಗ್ಲಿಷ್). Archived from the original on 19 ಮಾರ್ಚ್ 2020. Retrieved 19 March 2020. {{cite web}}: |last1= has generic name (help)
  3. "It's Dr Sai Pallavi now! - Times of India". The Times of India (in ಇಂಗ್ಲಿಷ್). Retrieved 19 March 2020.
  4. https://www.google.com/search?rlz=1C1AOHY_en-GBIN814IN814&q=sai+pallavi+family&sa=X&ved=2ahUKEwil0YvMsbPgAhVHfn0KHQqxDOIQ1QIoAXoECAMQAg&biw=1366&bih=677
  5. https://www.google.com/search?q=sai+pallavi&rlz=1C1CHBD_enIN739IN739&source=lnms&tbm=isch&sa=X&sqi=2&ved=0ahUKEwjjpvyHz6HgAhWAH7kGHecICn0Q_AUIDigB&biw=1343&bih=644
  6. https://timesofindia.indiatimes.com/topic/Sai-Pallavi/movies
  7. https://www.filmibeat.com/celebs/sai-pallavi.html
  8. "Diya movie review: Sai Pallavi's stunning performance cannot save this confusing film". Hindustan Times (in ಇಂಗ್ಲಿಷ್). 27 April 2018. Retrieved 19 March 2020.
  9. www.thenewsminute.com https://www.thenewsminute.com/article/sai-pallavi-very-dedicated-actor-director-balaji-mohan-maari-2-93017. Retrieved 19 March 2020. {{cite news}}: Missing or empty |title= (help)
  10. Kumar, Pradeep (25 May 2019). "Sai Pallavi interview: Why she is more than the 'Rowdy Baby' we love". The Hindu (in Indian English). Retrieved 19 March 2020.
  11. https://www.filmibeat.com/celebs/sai-pallavi.html
  12. https://www.google.com/search?hl=en-IN&authuser=0&rlz=1C1AOHY_en-GBIN814IN814&q=sai+pallavi+hindi+dubbed+movies+list&sa=X&sqi=2&ved=2ahUKEwjI3ZLJsrPgAhWKHzQIHVk8CiIQ1QIoBnoECAIQBw&biw=1366&bih=677
  13. https://www.imdb.com/name/nm7367695/awards