ಸಹಾನುಭೂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುಕಂಪ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಕನಿಕರ ಲೇಖನಕ್ಕಾಗಿ ಇಲ್ಲಿ ನೋಡಿ.
ವೈದ್ಯಕೀಯ ಸಿಬ್ಬಂದಿ ತೊಳಲಾಡುತ್ತಿರುವ ಮಹಿಳೆಗೆ ನೆರವು ನೀಡುತ್ತಿರುವುದು

ಸಹಾನುಭೂತಿ ಮತ್ತೊಂದು ಜೀವರೂಪದ ಯಾತನೆ ಅಥವಾ ಅಗತ್ಯಕ್ಕೆ ಗ್ರಹಿಕೆ, ಅರಿವು ಅಥವಾ ಪ್ರತಿಕ್ರಿಯೆ.[೧] ಈ ಪರಾನುಭೂತಿಯ ಕಾಳಜಿಯು ದೃಷ್ಟಿಕೋನದಲ್ಲಿನ ಬದಲಾವಣೆಯಿಂದ ಚಾಲಿತವಾಗಿರುತ್ತದೆ, ವೈಯಕ್ತಿಕ ದೃಷ್ಟಿಕೋನದಿಂದ ಅಗತ್ಯ ಹೊಂದಿರುವ ಇನ್ನೊಂದು ಗುಂಪು ಅಥವಾ ವ್ಯಕ್ತಿಯ ದೃಷ್ಟಿಕೋನಕ್ಕೆ.

ಸಹಾನುಭೂತಿಯ ಅನುಭವ ಪಡೆಯುವ ಸಲುವಾಗಿ ನಿರ್ದಿಷ್ಟ ಪರಿಸ್ಥಿತಿಗಳು ಉಂಟಾಗುವ ಅಗತ್ಯವಿರುತ್ತದೆ. ಇವು ಒಬ್ಬ ವ್ಯಕ್ತಿಯತ್ತ ಗಮನ, ಒಂದು ಗುಂಪು/ವ್ಯಕ್ತಿ ಅಗತ್ಯದ ಸ್ಥಿತಿಯಲ್ಲಿದೆ ಎಂದು ನಂಬುವುದು, ಮತ್ತು ನಿರ್ದಿಷ್ಟ ಪರಿಸ್ಥಿತಿಯ ನಿರ್ದಿಷ್ಟ ಲಕ್ಷಣಗಳನ್ನು ಒಳಗೊಂಡಿವೆ. ಮೊದಲು ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿ/ಗುಂಪಿನ ಕಡೆ ಗಮನ ಕೊಡಬೇಕು. ಗಮನಭಂಗಗಳು ಪ್ರಬಲ ಭಾವುಕ ಪ್ರತಿಕ್ರಿಯೆಗಳನ್ನು ಪ್ರಕಟಿಸುವ ಸಾಮರ್ಥ್ಯವನ್ನು ತೀವ್ರವಾಗಿ ಸೀಮಿತಗೊಳಿಸುತ್ತವೆ. ಗಮನಭಂಗಗಳಿಲ್ಲದಿದ್ದರೆ, ಜನರು ವಿವಿಧ ಭಾವನಾತ್ಮಕ ವಿಷಯಗಳು ಮತ್ತು ಅನುಭವಗಳಿಗೆ ಗಮನಕೊಡಬಲ್ಲರು ಮತ್ತು ಪ್ರತಿಕ್ರಿಯಿಸಬಲ್ಲರು. ಗಮನವು ಸಹಾನುಭೂತಿಯ ಅನುಭವವನ್ನು ಸುಗಮವಾಗಿಸುತ್ತದೆ, ಮತ್ತು ಅನೇಕ ಪರಿಸ್ಥಿತಿಗಳಿಗೆ ಅವಿಭಜಿತ ಗಮನ ಕೊಡದೆ ಸಹಾನುಭೂತಿಯನ್ನು ಅನುಭವಿಸಲಾಗುವುದಿಲ್ಲ.

ಸಹಾನುಭೂತಿಯನ್ನು ಹೊರಹೊಮ್ಮಿಸಲು ಒಬ್ಬ ವ್ಯಕ್ತಿ/ಗುಂಪಿನ ಅಗತ್ಯವನ್ನೂ ಪರಿಗಣಿಸಲಾಗುತ್ತದೆ. ಅಗತ್ಯದ ಬದಲಾಗುವ ಸ್ಥಿತಿಗಳಿಗೆ (ಉದಾಹರಣೆಗೆ ಗ್ರಹಿಸಿದ ಈಡಾಗುವಿಕೆ ಅಥವಾ ನೋವು) ಗಮನದಿಂದ ಹಿಡಿದು ಸಹಾನುಭೂತಿ ವರೆಗೆ ಅನನ್ಯ ಮಾನವ ಪ್ರತಿಕ್ರಿಯೆಗಳು ಬೇಕಾಗುತ್ತದೆ. ಕ್ಯಾನ್ಸರ್ ಇರುವ ವ್ಯಕ್ತಿ ನೆಗಡಿ ಇರುವ ವ್ಯಕ್ತಿಗಿಂತ ಸಹಾನುಭೂತಿಯ ಹೆಚ್ಚು ಪ್ರಬಲ ಅನಿಸಿಕೆಯನ್ನು ಪಡೆಯಬಹುದು. ಸಹಾನುಭೂತಿಯು ಸೂಕ್ತವಾದ ಪ್ರತಿಕ್ರಿಯೆಯೆಂದು ಪರಿಗಣಿಸಲಾಗುವ ಪರಿಸ್ಥಿತಿಗಳನ್ನು ವೈಯಕ್ತಿಕ ವ್ಯತ್ಯಾಸಗಳು ಮತ್ತು ಸಾಂದರ್ಭಿಕ ವ್ಯತ್ಯಾಸಗಳೆಂದು ವರ್ಗೀಕರಿಸಲಾಗುತ್ತದೆ.

ಮಾನವ ಅರ್ಹತೆ, ಪರಸ್ಪರಾವಲಂಬನೆ, ಮತ್ತು ಈಡಾಗುವಿಕೆ ಬಗ್ಗೆ ಜನರು ಯೋಚಿಸುವ ರೀತಿಗಳು ಸಹಾನುಭೂತಿಯನ್ನು ಪ್ರೇರೇಪಿಸುತ್ತವೆ. ನೆರವಿಗೆ ಅರ್ಹನೆಂದೆನಿಸುವ ವ್ಯಕ್ತಿಗೆ ಇತರರು ಸಹಾಯ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಾನವ ಪರಸ್ಪರಾವಲಂಬನೆಯಲ್ಲಿ ನಂಬಿಕೆಯು ಸಹಾನುಭೂತಿಯ ವರ್ತನೆಗೆ ಶಕ್ತಿ ಒದಗಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Tear, J; Michalska, KJ (2010). "Neurodevelopmental changes in the circuits underlying empathy and sympathy from childhood to adulthood". Developmental Science. 13 (6): 886–899. doi:10.1111/j.1467-7687.2009.00940.x. PMID 20977559.