ಸರಗೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಗೂರು ಮೈಸೂರು ಜಿಲ್ಲೆಯ ಹೊಸ ತಾಲೂಕಾಗಿದೆ. ಪ್ರಮುಖ ವಾಣಿಜ್ಯ ಸ್ಥಳವಾದ ಸರಗೂರಲ್ಲಿ ಪ್ರಮುಖವಾಗಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಇದೆ. ಪಟ್ಟಣ ಪಂಚಾಯ್ತಿಯೂ ಇದೆ. ನಾಡ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ, ಅರಣ್ಯ, ಕೃಷಿ, ರೇಷ್ಮೆ, ಒಳನಾಡು ಸಾರಿಗೆ ಇಲಾಖೆ ಕಚೇರಿಗಳು, ಸೆಸ್ಕ್ ಕಚೇರಿ, ಪೊಲೀಸ್ ಠಾಣೆ, ವಸತಿಗೃಹಗಳು ಇವೆ.

ಶಿಕ್ಷಣ[ಬದಲಾಯಿಸಿ]

ಸರ್ಕಾರಿ ಕಿರಿಯ, ಹಿರಿಯ, ಪ್ರೌಢ, ಬಾಲಕರ ಹಾಗೂ ಬಾಲಕಿಯರ ಪದವಿಪೂರ್ವ, ಪ್ರಥಮದರ್ಜೆ ಕಾಲೇಜುಗಳಿವೆ. ಜೆಎಶ್‌ಎಸ್ ಶಿಕ್ಷಣ ಸಂಸ್ಥೆಗಳು, ಸ್ವಾಮಿ ವಿವೇಕಾನಂದ ಸಂಸ್ಥೆ, ಲಯನ್ಸ್, ಆರ್‌ಎಲ್‌ಎಫ್ ಶಿಕ್ಷಣ ಸಂಸ್ಥೆಗಳಿವೆ. ಹೊಸ ಬಸ್ ನಿಲ್ದಾಣಕೂಡ ಇದ್ದು, ಸರಗೂರಿನಿಂದ ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯವಿದೆ. ತಾಲೂಕು ಆಸ್ಪತ್ರೆ, ಸ್ವಾಮಿ ವಿವೇಕಾನಂದ ಆಸ್ಪತ್ರೆ, ಕಾರ್ನರ್ ಸ್ಟೋನ್ ಆಸ್ಪತ್ರೆಗಳಿವೆ. 8- 10 ಸಮುದಾಯ ಭವನಗಳಿವೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಸರಗೂರು&oldid=1168249" ಇಂದ ಪಡೆಯಲ್ಪಟ್ಟಿದೆ