ವಿಷಯಕ್ಕೆ ಹೋಗು

ಸಂಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Map

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಧ್ಯಭಾಗದಲ್ಲಿ ಬರುವ ತಾಲೂಕಿನ ಅತಿದೊಡ್ಡ ಗ್ರಾಮ ಸಂಶಿ (ತಾಪಸಿ), ಕುಂದಗೋಳದಿಂದ ೧೦ ಕಿ.ಮೀ. ಅಂತರದಲ್ಲಿದೆ. ೧೯೪೮ರಲ್ಲಿ ಧಾರವಾಡ ಜಿಲ್ಲೆಯೊಳಗೆ ಸೇರುವ ಮೊದಲು ಜಮಖಂಡಿ ಸಂಸ್ಥಾನದ ಆಡಳಿತದಲ್ಲಿತ್ತು.

ಜನಸಂಖ್ಯೆ

[ಬದಲಾಯಿಸಿ]

2011 ರ ಭಾರತದ ಜನಗಣತಿಯ ಪ್ರಕಾರ ಸಂಶಿಯಲ್ಲಿ 2,681 ಮನೆಗಳಿವೆ ಮತ್ತು ಒಟ್ಟು 12,848 ಜನಸಂಖ್ಯೆಯು 6,501 ಪುರುಷರು ಮತ್ತು 6,347 ಮಹಿಳೆಯರನ್ನು ಒಳಗೊಂಡಿದೆ, ಹಾಗೂ 0-6 ವರ್ಷ ವಯಸ್ಸಿನ 1,415 ಮಕ್ಕಳಿದ್ದಾರೆ.

ಭೂಗೋಳ / ಹವಾಗುಣ

[ಬದಲಾಯಿಸಿ]

ಸಂಶಿಯ ಸುತ್ತಲಿನ ಭೂಪ್ರದೇಶವು ಸಮತಟ್ಟಾಗಿದೆ. ಸಂಶಿಯ ನೈರುತ್ಯಕ್ಕೆ 3 ಮೈಲಿಗಳ (4.8 ಕಿಮೀ) ದೂರದಲ್ಲಿರುವ ಎತ್ತರದ ಸ್ಥಳ, ಸಮುದ್ರ ಮಟ್ಟದಿಂದ 682 ಮೀಟರ್ ಎತ್ತರದಲ್ಲಿದೆ. ಸಂಶಿಯು ದಟ್ಟವಾದ ಜನಸಂಖ್ಯೆಯನ್ನು ಹೊಂದಿದೆ, ಪ್ರತಿ ಚದರ ಕಿಲೋಮೀಟರ್‌ಗೆ 286 ಜನರಿದ್ದಾರೆ. ಸಮೀಪದ ಪ್ರಮುಖ ಪಟ್ಟಣವೆಂದರೆ ಲಕ್ಷ್ಮೇಶ್ವರ ಇದು ಸಂಶಿಯಿಂದ ಪೂರ್ವಕ್ಕೆ 12 ಮೈಲಿಗಳ (19.8 ಕಿಮೀ) ದೂರದಲ್ಲಿದೆ. ಮತ್ತು ಕರ್ನಾಟಕದ ಪ್ರಮುಖ ನಗರವಾದ ಹುಬ್ಬಳ್ಳಿ ಕೇವಲ 30 ಕಿಮೀ ದೂರದಲ್ಲಿದೆ. ಸಂಶಿ ಸುತ್ತಮುತ್ತಲಿನ ಪ್ರದೇಶವು ಹೆಚ್ಚಾಗಿ ಕೃಷಿ ಭೂಮಿಯನ್ನು ಒಳಗೊಂಡಿದೆ.

ಈ ಪ್ರದೇಶದಲ್ಲಿ ಬೆಚ್ಚಗಿನ ವಾತಾವರಣವಿದೆ. ಇಲ್ಲಿನ ಸರಸರಿ ವಾರ್ಷಿಕ ತಾಪಮಾನವು 28 °C ಆಗಿದೆ. ಏಪ್ರಿಲ್ ತಿಂಗಳು ಹೆಚ್ಛು ಬಿಸಿ ಆಗಿರುತ್ತದೆ, ಆಗ ಸರಾಸರಿ ತಾಪಮಾನವು 34 °C ಇರುತ್ತದೆ ಮತ್ತು ಜುಲೈನಲ್ಲಿ 23°C ತಾಪಮಾನ ಇರುತ್ತದೆ. ಸರಾಸರಿ ವಾರ್ಷಿಕ ಮಳೆಯು 936 ಮಿಲಿಮೀಟರ್ ಆಗಿದೆ. ಅತಿ ಹೆಚ್ಚು ಮಳೆ ಬೀಳುವ ತಿಂಗಳು ಆಗಸ್ಟ್, ಅಲ್ಲಿ ಸರಾಸರಿ 161 ಮಿಮೀ ಮಳೆ ಬೀಳುತ್ತದೆ, ಮತ್ತು ಜನವರಿಯಲ್ಲಿ ಅತಿ ಕಡಿಮೆ ಅಂದರೆ ಸರಾಸರಿ 1 ಮಿಮೀ ಮಳೆ ಬರುತ್ತದೆ.[೧]

ವಾಣಿಜ್ಯ/ಕೃಷಿ

[ಬದಲಾಯಿಸಿ]

ಬಯಲು ಸೀಮೆಯ ನಾಡಾದ ಸಂಶಿ ಕಪ್ಪು (ಎರಿ) ಮಣ್ಣಿನ ಭೂಮಿಯನ್ನು ಹೊಂದಿದ್ದು, ಹತ್ತಿ, ಗೋಧಿ, ಜೋಳ, ಹೆಸರು, ಕಡಲೆ, ಕುಸುಬಿ, ಶೇಂಗಾ, ಮುಂತಾದ ಬೆಳೆಗಳನ್ನು ಬೆಳೆಯುವರು. ವ್ಯವಸಾಯವೇ ಮೂಲ ಉದ್ಯೋಗವಾಗಿದೆ. ಸುತ್ತಲಿನ ಸಣ್ಣ ಹಳ್ಳಿಗಳಿಗೆ ಹತ್ತಿರದ ವ್ಯಾಪಾರ, ವ್ಯವಹಾರದ ಸ್ಥಳವಾಗಿದೆ.

ಇತಿಹಾಸ

[ಬದಲಾಯಿಸಿ]

ಪುರಾಣ ಪ್ರಸಿದ್ಧವಾದ ತಾಪಸಿಪುರ, ಸಾಹಸಪುರ ಎಂಬ ನಾಮಾಕಿಂತದಿಂದ ಕೂಡಿದ ಸಂಶಿ ಗ್ರಾಮವು ಮಹಾಭಾರತ ಕಾಲದ ಪಾಂಡವರು ಈ ಮಾರ್ಗವಾಗಿ ವಿರಾಟ ನಗರಕ್ಕೆ (ಹಾನಗಲ್‌) ಹೋದ ವದಂತಿ ಇದ್ದು ಇಲ್ಲಿ ಕ್ರಿ.ಶ. ೧೨ನೇ ಶತಮಾನದ ಚಾಲುಕ್ಯ ಅರಸರ ಇಮ್ಮಡಿ ಸೋಮೇಶ್ವರ ೬ ನೇ ವಿಕ್ರಮಾದಿತ್ಯ ಹಾಗೂ ೨ನೇ ಜಕದೇಕಮಲ್ಲರ ಕಾಲದಲ್ಲಿ ಜಕ್ಕಣರಿಂದ ನಿರ್ಮಿತವಾದ ಚಾಲುಕ್ಯ ಶೈಲಿಯ ಶ್ರೀ ಸಿದ್ದೇಶ್ವರ ದೇವಾಲಯವು ಇದ್ದು ಹಾಗೂ ಅದೇ ಕಾಲದ ನಾಲ್ಕು ಶಿಲಾ ಶಾಸನಗಳು ಮತ್ತು ಶ್ರೀ ಶಂಕರಲಿಂಗ ದೇವಾಲಯ ಕಂಡುಬರುತ್ತವೆ.ಬ್ರಿಟಿಷರ ಕಾಲದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟ ಸಂಶಿಯಲ್ಲಿ ಪೂರ್ವ ಕಾಲದಿಂದಲೂ ೪ ಬಣಗಳಿದ್ದವು. ಅವು ಯಾವುವೆಂದರೆ ೧ ಹಾರುಬಣ ೨ ಹಿರೇಬಣ ೩ ಚಿಕ್ಕ ಬಣ ೪ ಮುಡಸಿ ಬಣ. ಹಾರುಬಣ ಮತ್ತು ಚಿಕ್ಕ ಬಣ ಇವೆರೆಡು ಬಣಗಳ ಪ್ರಮುಖರು ಬ್ರಾಹ್ಮಣ ಸಮಾಜಕ್ಕೆ ಸೇರಿದವರು. ಇನ್ನುಳಿದ ಹಿರೇಬಣ ಹಾಗೂ ಮುಡಸಿಬಣ ಇವು ಲಿಂಗಾಯತ ಪ್ರಮುಖರ ಬಣಗಳು. ಈ ನಾಲ್ವರಿಗೆ ಒಂದೊಂದು ನಿಟ್ಟಿನ ಹದ್ದಿನಲ್ಲಿ ಜಮೀನುಗಳಿರುತ್ತಿದ್ದವಂತೆ.[೨]

ಪ್ರಸ್ತುತ

[ಬದಲಾಯಿಸಿ]

ಸಂಶಿಯಲ್ಲಿ ಬ್ರಹ್ಮಾನಂದ ಆಶ್ರಮ ಹಾಗೂ ಶ್ರೀ ಶಿರಹಟ್ಟಿ ಫಕ್ಕಿರೇಶ್ವರರ ಶಾಖಾ ಮಠ, ಸಿದ್ದೇಶ್ವರ ಮಠ ಹಾಗೂ ಸಿದ್ದಾರೂಢ ಮಠ, ಶಂಕರ ಲಿಂಗ ದೇವಾಲಯ ಅಲ್ಲದೇ ಅನೇಕ ದೇವಾಲಯಗಳಿಂದ ಕೂಡಿದ ಧಾರ್ಮಿಕ ಸ್ಥಳವಾಗಿದೆ. ಬ್ರಹ್ಮಾನಂದ ಆಶ್ರಮದ ಮಾದರಿಯ ದೇವಾಲಯಗಳು ರಬಕವಿ(ಬನಹಟ್ಟಿ), ತೇರದಾಳ,ಪರಮಾನಂದವಾಡಿ ಹಾಗೂ ಹುಬ್ಬಳ್ಳಿಯ ರಾಯಾಪುರದಲ್ಲಿವೆ. ಇಂದು ಸಂಶಿಯು ಅನೇಕ ಸರ್ಕಾರಿ ಶಾಲೆಗಳು, ಫಕ್ಕಿರೇಶ್ವರ ಸಂಸ್ಥಾನದ ಪ್ರೌಢಶಾಲೆ, ಬ್ರಹ್ಮಾನಂದ ಸಂಸ್ಥೆಯ ಶಾಲೆಗಳು, ಕೆ.ಎಲ್‌.ಇ. ಸಂಸ್ಥೆಯ ಕಾಲೇಜು, ಮತ್ತು ಸರ್ಕಾರಿ ಐಟಿಐ ಕಾಲೇಜುಗಳಿಂದ ಕೂಡಿದ ಶೈಕ್ಷಣಿಕ ತವರೂರಾಗಿದೆ.

ಸಂಪರ್ಕ

[ಬದಲಾಯಿಸಿ]

ಸಂಶಿಯು ರಸ್ತೆ, ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ[]

ಬಸ್: ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೋಗುವ ರಸ್ತೆಯಲ್ಲಿ ಸಂಶಿಯು ನಡುವಿನ ಕೇಂದ್ರ ಗ್ರಾಮವಾಗಿದೆ, ಸಂಶಿಯಿಂದ ಹುಬ್ಬಳ್ಳಿ-29 ಕಿಮೀ, ಮತ್ತು ಸಂಶಿಯಿಂದ ಲಕ್ಷ್ಮೇಶ್ವರ-20 ಕಿಮೀ ದೂರ್ ಇದೆ, ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಶಿಯಲ್ಲಿ ನಿಲುಗಡೆ ಹೊಂದಿದ್ದು, ಸರ್ಕಾರಿ ಮತ್ತು ಖಾಸಗಿ ಸಾರಿಗೆಯೂ ಲಭ್ಯವಿದೆ.

ರೈಲು: ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಪ್ರತಿದಿನ ಹಲವಾರು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತವೆ, ಇವುಗಳಲ್ಲಿ ಎಲ್ಲಾ ಪ್ಯಾಸೆಂಜರ್ ರೈಲುಗಳು ಸಂಶಿಯಲ್ಲಿ ನಿಲ್ಲುತ್ತವೆ, ಹೆಚ್ಚಿನ ಜನರು ಹುಬ್ಬಳ್ಳಿಗೆ ರೈಲಿನಲ್ಲಿ ಪ್ರಯಾಣಿಸುತ್ತಾರೆ, ಇದು ಅತ್ಯಂತ ಅನುಕೂಲಕರವಾಗಿದ್ದು, ಕೇವಲ 30 ನಿಮಿಷಗಳಿಂದ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಬೆಲೆ ಬರೀ 30 ರೂಪಾಯಿ (ಬಸ್ ದರಕ್ಕಿಂತ ಕಡಿಮೆ),

ಉಲ್ಲೇಖಗಳು

[ಬದಲಾಯಿಸಿ]
  1. "Wikipedia English Page".
"https://kn.wikipedia.org/w/index.php?title=ಸಂಶಿ&oldid=1252913" ಇಂದ ಪಡೆಯಲ್ಪಟ್ಟಿದೆ