ಸಂಯುಕ್ತ ಹೊರನಾಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಯುಕ್ತ ಹೊರನಾಡ್
ಜನನ
ಸಂಯುಕ್ತ

೨೩ ಮೇ ೧೯೯೧
ಕರ್ನಾಟಕ, ಭಾರತ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಸಂಯುಕ್ತ ಬೆಳವಾಡಿ
ಸಂಯುಕ್ತ ಹೊರನಾಡ್
ಉದ್ಯೋಗಅಭಿನೇತ್ರಿ
ಸಕ್ರಿಯ ವರ್ಷಗಳು೨೦೦೭–ಇದುವರೆವಿಗೂ
ಪೋಷಕರುಎಂ.ಜಿ.ಸತ್ಯರಾವ್ (ತಂದೆ)
ಸುಧಾ ಬೆಳವಾಡಿ (ತಾಯಿ)
ನೆಂಟರುಬೆಳವಾಡಿ ನಂಜುಂಡಯ್ಯ ನಾರಾಯಣ (ಮೇಕ್ ಅಪ್ ನಾಣಿಯೆಂದೇ ಪ್ರಸಿದ್ಧರು
ನವೆಂಬರ್ ೧೯೨೯- ಡಿಸೆಂಬರ್.೨೦೦೩
), (ಅಜ್ಜ) [೧]
ಭಾರ್ಗವಿ ನಾರಾಯಣ್ (ಅಜ್ಜಿ)
ಪ್ರಕಾಶ್ ಬೆಳವಾಡಿ (ಚಿಕ್ಕಪ್ಪ)

ಸಂಯುಕ್ತ ಹೊರನಾಡ್(ಸಂಯುಕ್ತ ಬೆಳವಾಡಿ) (ಹುಟ್ಟು: ೨೩ ಮೇ ೧೯೯೧) ಭಾರತೀಯ ಚಲನ ಚಿತ್ರ ಕಲಾವಿದೆ. ಕನ್ನಡ ಚಲನ ಚಿತ್ರರಂಗದಲ್ಲಿ ಅಭಿನೇತ್ರಿ. "ಲೈಫು ಇಷ್ಟೇನೇ" ಎನ್ನುವ ಕನ್ನಡ ಚಿತ್ರದಿಂದ ಸಿನೆಮಾರಂಗಕ್ಕೆ ಪಾದಾರ್ಪಣೆಮಾಡಿದ ಸಂಯುಕ್ತ, ತನ್ನ ಮೊದಲನೇ ಚಿತ್ರದಲ್ಲೇ ಯಶಸ್ಸು ಪಡೆದು ಹೆಸರು ಗಳಿಸಿದಳು. ೨೦೧೩ ರಲ್ಲಿ ದಕ್ಷಿಣ ಭಾರತದಿಂದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಳು.(SIIMA)

ಪ್ರಾರಂಭಿಕ ಜೀವನ[ಬದಲಾಯಿಸಿ]

ಸಂಯುಕ್ತ ಹೊರನಾಡು, ಕರ್ನಾಟಕದ ಒಬ್ಬ ರೂಪದರ್ಶಿ (Model) ಮತ್ತು ನಟಿಯೆಂದು ಪ್ರಸಿದ್ಧಿ ಹೊಂದಿದ್ದಾರೆ. ಪದವಿ ಶಿಕ್ಷಣ (ಮೀಡಿಯಾ)ವನ್ನು ಇಂಗ್ಲಿಷ್ ಹಾಗೂ ಮನಸ್ಶಾಸ್ತ್ರದಲ್ಲಿ ಮಾಡಿದ್ದಾಳೆ. ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ Duette Doodles in Aid ಕಿರುತೆರೆಯ ಕಾರ್ಯಕ್ರಮ ನಿರೂಪಕಿಯಾಗಿ (ಆಂಕರ್) ಆಗಿ ಪ್ರಾರಂಭಿಸಿದ ಸಂಯುಕ್ತ, ನಂತರ ಅಭಿನಯದ ಕಡೆ ಹೊರಳಿದರು.

ಸಂಯುಕ್ತ ಹೊರನಾಡ್ ಅಭಿನಯಿಸಿದ ಚಿತ್ರಗಳು[ಬದಲಾಯಿಸಿ]
  1. ಮೊದಲ ಚಿತ್ರ, ಆ ದಿನಗಳು
  2. ಎರಡನೆಯ ಚಿತ್ರ ಲೈಫ್ ಇಷ್ಟೇನೆ (೨೦೧೧)
  3. ಪ್ರಕಾಶ್ ರಾಜ್ ಜೊತೆಗೆ ನಟಿಸಿದ ೩ ಭಾಷೆಗಳಲ್ಲಿ ತಯಾರಾದ (ತಮಿಳು) ಉನ್ ಸಮಯಲ್ ಅರಯಿಲ್, Ullavacharu Biryani (ತೆಲುಗು), ಒಗ್ಗರಣೆ (ಕನ್ನಡ)[೨]
  4. ಜಿಗರ್ ತಂಡ - ರಾಜ್ಯ ಪ್ರಶಸ್ತಿ ಗಳಿಸಿದ ಚಿತ್ರ
  5. ಮಾರಿಕೊಂಡವರು
  6. ದಯವಿಟ್ಟು ಗಮನಿಸಿ
  7. ಅರಿಷಡ್ವರ್ಗ
  8. ಕಾಫಿ ತೋಟ
  9. ಬರ್ಫಿ (೨೦೧೧)

ಉಲ್ಲೇಖಗಳು[ಬದಲಾಯಿಸಿ]

  1. "Nani no more". viggy.com. {{cite web}}: Italic or bold markup not allowed in: |publisher= (help)
  2. Samyukta horanad in awe of Prakash Raj, Jan, 15,2017