ಶ್ರೀಯಾ ಶರಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರಿಯಾ ಶರಣ್
ಶ್ರಿಯಾ ಶರಣ್ ಭಟ್ನಾಗರ್[೧]
ಶ್ರಿಯಾ ಶರಣ್
Born
ಶ್ರಿಯಾ ಶರಣ್ ಭಟ್ನಾಗರ್[೨]

(1982-09-11) ೧೧ ಸೆಪ್ಟೆಂಬರ್ ೧೯೮೨ (ವಯಸ್ಸು ೪೧)
Nationalityಭಾರತೀಯ
Other namesಶ್ರಿಯಾ , ಶ್ರೆಯಾ
Alma materಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್ನ್
Occupationನಟಿ
Years active೨೦೦೧ ರಿಂದ
Spouseಆಂಡ್ರೇ ಕೊಸ್ಚೆವ್ (ವಿವಾಹ 2018)[೩]

ಶ್ರಿಯಾ ಶರಣ್, ೧೧ ಸೆಪ್ಟೆಂಬರ್ ೧೯೮೨ ರಂದು ಶ್ರಿಯಾ ಶರಣ್ ಭಟ್ನಾಗರ್ ಎಂಬ ಹೆಸರಿನೊಂದಿಗೆ ಜನಿಸಿದರು. ಇವರು ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದು, ದಕ್ಷಿಣ ಭಾರತೀಯ ಚಿತ್ರರಂಗ, ಬಾಲಿವುಡ್ ಮತ್ತು ಅಮೆರಿಕನ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಡೆಹ್ರಾಡೂನ್ನಲ್ಲಿ ಜನಿಸಿದ್ದರು. ಅವರು ಅವರ ಬಾಲ್ಯದ ಬಹುಭಾಗವನ್ನು ಹರಿದ್ವಾರದಲ್ಲಿ ಕಳೆದರು. ನಂತರ ೨೦೦೧ ರಲ್ಲಿ, ಅವರ ನೃತ್ಯ ಗುರುವಿನಿಂದ ರೆನು ನಾಥನ್ ಅವರ ಚೊಚ್ಚಲ ಸಂಗೀತ ವೀಡಿಯೋ ತಿರ್ಕ್ತಿ ಕ್ಯೂ ಹವಾ ದಲ್ಲಿ ಕಾಣಿಸಿಕೊಳ್ಳಲು ಅವಕಾಶವನ್ನು ಪಡೆದರು. ಇದು ಶ್ರಿಯಾ ಅವರನ್ನು ಅನೇಕ ಭಾರತೀಯ ಚಿತ್ರ ನಿರ್ಮಾಪಕರ ಗಮನಕ್ಕೆ ತಂದುಕೊಟ್ಟಿತು. ಪ್ರಸಿದ್ಧ ನರ್ತಕಿಯಾದ ಆಕೆ ಸಿನೆಮಾಗಳಲ್ಲಿ ಪ್ರಮುಖ ಪಾತ್ರವನ್ನು ಪಡೆದರು. ಆದ್ದರಿಂದ, ೨೦೦೧ ರಲ್ಲಿ ತೆಲುಗು ಚಿತ್ರ ಇಷ್ಟಂ ರೊಂದಿಗೆ ಶ್ರಿಯಾ ತಮ್ಮ ಸಿನಿ ಪಯಣವನ್ನು ಪ್ರಾರಂಭಿಸಿದರು, ಮತ್ತು ೨೦೦೨ ಸಂತೊಷಮ್ ಚಲನಚಿತ್ರದ ಮೂಲಕ ಮೊದಲ ವಾಣಿಜ್ಯ ಯಶಸ್ಸನ್ನು ಗಳಿಸಿದರು.

ಅವರು ಹಿಂದಿ ಮತ್ತು ತಮಿಳು ಚಲನಚಿತ್ರದಲ್ಲಿ ನಟಿಸುವ ಮೊದಲು ಹಲವಾರು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡರು. ೨೦೦೭ ರಲ್ಲಿ, ಅತಿ ಹೆಚ್ಚು ಹಣ ಗಳಿಸಿದ ತಮಿಳು ಚಲನಚಿತ್ರವಾದ ಶಿವಾಜಿ ದ ಬಾಸ್ ಚಲನಚಿತ್ರದಲ್ಲಿ ನಟಿಸಿದರು. ೨೦೦೭ರ ಬಾಲಿವುಡ್ ಸಿನಿಮಾ ಆವಾರಪನ್ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದಳು. ೨೦೦೮ರಲ್ಲಿ, ಶ್ರಿಯಾ ತನ್ನ ಮೊದಲ ಇಂಗ್ಲಿಷ್ ಚಲನಚಿತ್ರವಾದ ಅಮೆರಿಕನ್-ಇಂಡಿಯನ್ ಸಹ-ನಿರ್ಮಾಣದ ದಿ ಅದರ್ ಎಂಡ್ ಆಫ್ ದಿ ಲೈನ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ನಂತರ, ತಮಿಳಿನ ಕಾಂತಾಸ್ವಾಮಿ (೨೦೦೯), ಮಲಯಾಳಂ ಚಲನಚಿತ್ರವಾದ ಪೊಕ್ಕಿರಿ ರಾಜ (೨೦೧೦) ನಂತಹ ಜನಪ್ರಿಯ ಚಲನಚಿತ್ರಗಳಿಂದ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಪ್ರಮುಖ ನಟಿಯರಲ್ಲಿ ಒಬ್ಬರಾದರು.[೪] 2012 ರಲ್ಲಿ, ದೀಪಾ ಮೆಹ್ತಾ ನಿರ್ದೇಶನದಡಿಯಲ್ಲಿ ಬ್ರಿಟಿಷ್-ಕೆನಡಾ ಚಲನಚಿತ್ರ ಮಿಡ್ನೈಟ್ಸ್ ಚಿಲ್ಡ್ರನ್ನಲ್ಲಿ ನಟಿಸಿದಳು, ಇದಕ್ಕಾಗಿ ಅವರು ಅಂತರರಾಷ್ಟ್ರೀಯ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಪವಿತ್ರ (೨೦೧೩) ಮತ್ತು ಚಂದ್ರ (೨೦೧೩) ಮೊದಲಾದ ಚಿತ್ರಗಳಲ್ಲಿ ನಟಿಸಿದ ಇವರು ಮತ್ತಷ್ಟು ವಾಣಿಜ್ಯ ಯಶಸ್ಸನ್ನು ಗಳಿಸಿದರು. 2014 ರಲ್ಲಿ, ಶ್ರಿಯಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ತೆಲುಗು ಚಲನಚಿತ್ರ ಮನಂ ಅಭಿನಯಿಸಿದರು.

ಆರಂಭಿಕ ಜೀವನ[ಬದಲಾಯಿಸಿ]

ಶ್ರಿಯಾ ಶರಣ್ ಭಟ್ನಾಗರ್ ಉತ್ತರ ಭಾರತದ ಹರಿದ್ವಾರದಲ್ಲಿ ೧೧ ಸೆಪ್ಟೆಂಬರ್ ೧೯೮೨ ರಂದು ಪುಷ್ಪೇಂದ್ರ ಶರಣ್ ಭಟ್ನಾಗರ್ ಮತ್ತು ನೀರಾಜಾ ಶರಣ್ ಭಟ್ನಗರ್ಗೆ ಜನಿಸಿದರು.[೫][೬] ಆಕೆಯ ತಂದೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ಗಾಗಿ ಕೆಲಸ ಮಾಡಿದರು ಮತ್ತು ಅವರ ತಾಯಿ ದೆಹಲಿ ಪಬ್ಲಿಕ್ ಶಾಲೆ, ರಾಣಿಪುರ್, ಹರಿದ್ವಾರ ಹಾಗೂ ದೆಹಲಿ ಪಬ್ಲಿಕ್ ಶಾಲೆ, ಮಥುರಾ ರಸ್ತೆ, ನವದೆಹಲಿಯಲ್ಲಿ ರಸಾಯನಶಾಸ್ತ್ರ ಶಿಕ್ಷಕರಾಗಿದ್ದರು. ತಾಯಿಯು ಕಲಿಸಿದ ಎರಡೂ ಶಾಲೆಗಳಿಂದ ಸರನ್ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ.[೭] ಅವರು ಮುಂಬೈನಲ್ಲಿ ವಾಸಿಸುವ ಅಭಿರುಪ್ ಎಂಬ ಹಿರಿಯ ಸಹೋದರನನ್ನು ಹೊಂದಿದ್ದಾರೆ.[೫]

ಹರಿದ್ವಾರದ ಸಣ್ಣ ಪಟ್ಟಣದಲ್ಲಿ ಶ್ರಿಯಾ ಶರಣ್ ಬೆಳೆದರು. ನಂತರ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು ಮತ್ತು ಸಾಹಿತ್ಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು.

ಶ್ರಿಯಾ ಶರಣ್ ಒಬ್ಬ ನಿಪುಣ ನರ್ತಕಿ. ಕತಕ್ ಮತ್ತು ರಾಜಸ್ಥಾನಿ ಜಾನಪದ ನೃತ್ಯದಲ್ಲಿ ತನ್ನ ತಾಯಿಯಿಂದ ಅವಳು ಮೊದಲ ಬಾರಿಗೆ ತರಬೇತಿ ಪಡೆದರು.[೮] ನಂತರ ಶೋವಣ ನಾರಾಯಣರಿಂದ ಕಥಕ್ ಶೈಲಿಯಲ್ಲಿ ತರಬೇತಿ ಪಡೆದರು.[೯] ಅವರು ಕಾಲೇಜಿನಲ್ಲಿ ಹಾಗೂ ಅವರ ಶಿಕ್ಷಕನೊಂದಿಗೆ ಅನೇಕ ನೃತ್ಯ ತಂಡಗಳೊಂದಿಗೆ ತೊಡಗಿದ್ದರು. ಅವರು ಸಾಮಾಜಿಕ ಸಮಸ್ಯೆಗಳು ನೃತ್ಯದ ಮೂಲಖ ಪ್ರದರ್ಶಿಸುತಿದ್ದರು.

ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್)[ಬದಲಾಯಿಸಿ]

ಶ್ರಿಯಾ ಶರಣ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ (ಸಿಸಿಎಲ್) ರಾಯಭಾರಿಯಾಗಿದ್ದಾರೆ.[೧೦] ಇದು ಭಾರತದ ಚಲನಚಿತ್ರ ಮತ್ತು ಕ್ರಿಕೆಟ್ ಎರಡು ಭಾವೋದ್ರೇಕಗಳನ್ನು ಸಂಯೋಜಿಸುತ್ತಿರುವ ಲೀಗ್ ಆಗಿದೆ.[೧೧] ಏಪ್ರಿಲ್ ೨೦೧೦ ರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ನಾಲ್ಕನೇ ಋತುವಿನ ಉದ್ಘಾಟನಾ ಸಮಾರಂಭದಲ್ಲಿ, ಶಾರುಖ್ ಖಾನ್ ಅವರೊಂದಿಗೆ ನೃತ್ಯ ಮಾಡಿದ್ದಾರೆ.[೧೨]

ಪ್ರಶಸ್ತಿಗಳು[ಬದಲಾಯಿಸಿ]

  • ಸೌತ್ ಸ್ಕೋಪ್ ಸ್ಟೈಲ್ ಅವಾರ್ಡ್ (೨೦೦೮) - ಅತ್ಯುತ್ತಮ ತಮಿಳು ನಟಿ - ಸಿವಾಜಿ ದ ಬಾಸ್.
  • ಸ್ಟಾರ್ಡಸ್ಟ್ ಅತ್ಯಾಕರ್ಷಕ ಹೊಸ ಮುಖ ಪ್ರಶಸ್ತಿ (೨೦೦೯) - ಮಿಷನ್ ಇಸ್ತಾಂಬುಲ್.
  • ಅಮೃತ ಮಾತೃಭೂಮಿ ಪ್ರಶಸ್ತಿ (೨೦೧೦) - ಅತ್ಯುತ್ತಮ ನಟಿ - ಕಾಂತಾಸ್ವಾಮಿ.
  • ಐಟಿಎಫಎ (೨೦೧೧) - ಅತ್ಯುತ್ತಮ ನಟಿ - ರವ್ತಿರಾಮ್.
  • ಸೀಮಾ ಪ್ರಶಸ್ತಿ (೨೦೧೫) - ಅತ್ಯುತ್ತಮ ಪೊಷಕ ನಟಿ - ಮಾನಮ್.[೧೩]
  • ಸಂತೋಷಮ್ ಪ್ರಶಸ್ತಿ (೨೦೧೫) - ಅತ್ಯುತ್ತಮ ನಟಿ - ಮಾನಮ್.[೧೪]
  • ಟಿವಿ೯ ರಾಷ್ತೀಯ ಪ್ರಶಸ್ತಿ (೨೦೧೬) - ಅತ್ಯುತ್ತಮ ನಟಿ - ಗೊಪಾಲ ಗೊಪಾಲ.[೧೫]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Sivaji changed my life completely: Shriya Saran". Hindustan Times. 19 January 2012. Retrieved 27 September 2017. Hindi comes naturally to me because it's my mother tongue.
  2. "Shriya Saran: I’ve been infatuated by almost every actor I’ve worked with"
  3. Kapoor, Chetna (20 March 2018). "Shriya Saran marries Russian beau Andrei Koscheev". International Business Times. Retrieved 23 March 2018.
  4. http://movies.ndtv.com/photos
  5. ೫.೦ ೫.೧ https://starsunfolded.com/shriya-saran/
  6. https://timesofindia.indiatimes.com/topic/Shriya-Saran
  7. https://www.imdb.com/name/nm1328152/bio?ref_=nm_ov_bio_sm
  8. https://timesofindia.indiatimes.com/entertainment/tamil/movies/photo-features/shriya-saran-lesser-known-facts/photostory/48911248.cms
  9. https://www.youtube.com/watch?v=sWqw5W1kT0I
  10. https://www.deccanherald.com/content/166681/id-love-work-rajnikanth-again.html
  11. https://www.deccanherald.com/content/165392/unlimited-fun-spectators.html
  12. https://www.deccanherald.com/content/152248/king-khan-saving-grace.html
  13. https://www.ibtimes.co.in/siima-awards-2015-winners-list-photos-live-updates-641938
  14. https://web.archive.org/web/20151008163456/http://www.msn.com/en-in/entertainment/gallery/santosham-awards-2015/ss-BBm4Dt7
  15. http://www.cinejosh.com/news-in-telugu/4/34740/tsr-tv-9-awards-tsr-tv9-awards-2015-tsr-tv9-2016-awards-list-prabhas-best-actor-tsr-tv9-awards-winners-list-t-subbarami-reddy.html