ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ೧೮ ನೇ ಪೀಠಾಧಿಪತಿಗಳು.


ಪೂರ್ವಾಶ್ರಮ[ಬದಲಾಯಿಸಿ]

ಜನನ ಮತ್ತು ಬಾಲ್ಯ[ಬದಲಾಯಿಸಿ]

೧೯೭೭ ಜೂನ್ ೧ರಂದು ಕಲಬುರ್ಗಿ ಜಿಲ್ಲೆ ಹಾಗರಗುಂಡಿಯಲ್ಲಿ ಜನನ. ಮೂಲ ಹೆಸರು ಪರ್ವತಯ್ಯ.[೧]

ವಿದ್ಯಾಭ್ಯಾಸ[ಬದಲಾಯಿಸಿ]

ಇಂಗ್ಲೀಷ್ ತತ್ವಶಾಸ್ತ್ರ ಮತ್ತು ಸಂಸ್ಕೃತ ವಿಷಯದಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ.[೨] ಗುಲಬುರ್ಗಾ ವಿವಿಯಿಂದ ಪದವಿಯಲ್ಲಿ ೬ನೇ ರ‍್ಯಾಂಕ್ ಪಡೆದಿರುವ ಇವರು, ಕನ್ನಡ ವಿಷಯದಲ್ಲಿಯೂ ಸ್ನಾತಕ ಪದವಿ ಪಡೆದಿದ್ದಾರೆ. [೧]

ಸನ್ಯಾಸ[ಬದಲಾಯಿಸಿ]

ವಿದ್ಯಾಭ್ಯಾಸಕ್ಕಾಗಿ ಗವಿಮಠಕ್ಕೆ ಬಂದ ಇವರು ೧೭ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಗುತ್ತಾರೆ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಇವರಿಗೆ ಪರುತದೇವರು ಎಂದು ನಾಮಕರಣ ಮಾಡುವ ಮೂಲಕ ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸುತ್ತಾರೆ. ಮುಂದೆ ಪಟ್ಟಾನಂತರ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎಂದು ಕರೆದಿದ್ದಾರೆ.

೧೮ನೇ ಪೀಠಾಧಿಪತಿಗಳಾಗಿ ಶ್ರೀ ಅಭಿನವ ಗವಿಸಿದ್ದೇಶ್ವರರು[ಬದಲಾಯಿಸಿ]

೨೦೦೨ರ ಡಿಸೆಂಬರ್ ೧೩ರಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ಪಟ್ಟಾಭೀಷೆಕ.[೧]

ಧಾರ್ಮೀಕ/ಆಧ್ಯಾತ್ಮಿಕ ಕಾರ್ಯಗಳು[ಬದಲಾಯಿಸಿ]

ಶೈಕ್ಷಣಿಕ ಕಾರ್ಯಗಳು[ಬದಲಾಯಿಸಿ]

  • ೨೦೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಪ್ರಸಾದ ವ್ಯವಸ್ಥೆಗಾಗಿ ೮ ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ.
  • ಡಿ.ಎಡ್, ಬಿ.ಎಡ್ ಮತ್ತು ಬಿ.ಬಿ.ಎಮ್ ಕಾಲೇಜುಗಳ ಸ್ಥಾಪನೆ.[೩]
  • ವಸತಿ ಶಾಲೆ ಸ್ಥಾಪನೆ - ಸಿ.ಬಿ.ಎಸ್.ಸಿ ಪಠ್ಯಕ್ರಮದೊಂದಿಗೆ[೩]
  • ಪೂರ್ವ ಪ್ರಾಥಮಿಕದಿಂದ ಸ್ನಾಕಕೋತ್ತರ ಪದವಿ ಶಿಕ್ಷಣದವರೆಗೂ ಶಿಕ್ಷಣ ಸಂಸ್ಥೆಗಳ ಸ್ಥಾಪನೆ[೩]

ಸಮಾಜಿಕ ಕಾರ್ಯಗಳು[ಬದಲಾಯಿಸಿ]

  • ಹಿರೇಹಳ್ಳ ಪುನಚ್ಸೇತನ ಟ್ರಸ್ಟ ಸ್ಥಾಪನೆಯೊಂದಿಗೆ 'ಜಲ ದೀಕ್ಷ' ಕಾರ್ಯದಲ್ಲಿ ಸಕ್ರೀಯ - ಜಲಋಷಿ ಎಂದೇ ಖ್ಯಾತಿ.[೧]
  • ತ್ರಿವಿಧ ದಾಸೋಹದೊಂದಿಗೆ ವೃಕ್ಷ ದಾಸೋಹ ಪ್ರಾರಂಭ[೧]
  • ಜಾತ್ರೆಗೊಂದು ಹೊಸರೂಪ-ಹೊಸಮೆರುಗು[೪]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ https://kannada.asianetnews.com/karnataka-districts/koppals-shri-gavisiddeshwara-swamiji-coronation-19-years-completed-grg-r41pyz
  2. https://www.sgvvtrust.org/sgvvt-founders/
  3. ೩.೦ ೩.೧ ೩.೨ https://www.sgcoekoppal.org/sgvvt-founder/
  4. ಗವಿಸಿದ್ದೇಶ್ವರ ಮಠ#ಜಾತ್ರೆಗೊಂದು ಹೊಸರೂಪ-ಹೊಸಮೆರುಗು