ಶ್ಯಾನುಭೋಗ್ ತಿಮ್ಮಪ್ಪಯ್ಯನವರು,

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಳಘಟ್ಟ ಶೇಷಪ್ಪ ತಿಮ್ಮಪ್ಪಯ್ಯನವರು
ಜನನ
ಉದ್ಯೋಗಶ್ಯಾನುಭೋಗರು, ವಾಗ್ಮಿಗಳು,ಸಮಾಜಸೇವಕರು,ದೈವಭಕ್ತರು,ಗಮಕ ಕಲಾಸಕ್ತರು.
ಜೀವನ ಸಂಗಾತಿಸುಬ್ಬಲಕ್ಷಮ್ಮನವರು
ಮಕ್ಕಳುನಾಗಾರಾಜ,ಗೋಪಾಲಕೃಷ್ಣ,ಅನಂತ, ಶಂಕರನಾರಾಯಣ,ವೆಂಕಟೇಶ,ಗಂಗಮ್ಮ,ಸರೋಜ,ಸಾವಿತ್ರಿ
Notes
ಚಿತ್ರದುರ್ಗ ಆಕಾಶವಾಣಿಯ ಸಂವಾದ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದರು.ಆ ಕಾರ್ಯಕ್ರಮದ ಆಡಿಯೋ ಲಭ್ಯವಿದೆ.

ವೃತ್ತಿಯಲ್ಲಿ ಹಳ್ಳಿಯಶ್ಯಾನುಭೋಗರು[ಬದಲಾಯಿಸಿ]

ಕಾಳಘಟ್ಟಗ್ರಾಮದ ನಿವಾಸಿ, [೧]ಶ್ರೀ ತಿಮ್ಮಪ್ಪಯ್ಯನವರು, ಶ್ಯಾನುಭೋಗರ ವಂಶಸ್ತರು. ಅವರ ಕಾರ್ಯ-ವ್ಯಾಪ್ತಿ ಅಲ್ಲಿನ ಅಕ್ಕ-ಪಕ್ಕದ ಹಳ್ಳಿಗಳಿಗೆ ಸೀಮಿತವಾಗಿತ್ತು. ಇವರ ತಂದೆ, ಶ್ಯಾನುಭೋಗ್ ಶ್ರೀ ಶೇಷಪ್ಪನವರು, ತಾಯಿ, ಶ್ರೀಮತಿ. ಗಂಗಮ್ಮನವರು. ಶ್ಯಾನುಭೋಗಿಕೆಯ ಎಲ್ಲ ವಿವರಗಳನ್ನು ಅತ್ಯಂತ ಸಮರ್ಥವಾಗಿ ವಿವರಿಸಿ, ವಿಶ್ಲೇಶಿಸಬಲ್ಲ ಸಾಮರ್ಥ್ಯ ಅವರಿಗಿತ್ತು. ಅವರು ತಮ್ಮ ವೃತ್ತಿಯನ್ನು ಒಂದು ಅಭ್ಯಾಸದ ತರಹ ಭಾವಿಸುತ್ತಿದ್ದರು. ವೃತ್ತಿಗೌರವ, ಅಲ್ಪತೃಪ್ತಿ, ಶಿಸ್ತು, ಸಂಯಮ, ಹಳ್ಳಿಯಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಸೇವಾ ಮನೋಭಾವದಿಂದ ತಮ್ಮ ಹಳ್ಳಿಗಳ ಜನರಲ್ಲದೆ,ಜಿಲ್ಲೆಯ ಹಲವಾರು ಜನ ಅವರನ್ನು ಭೇಟಿಮಾಡುತ್ತಿದ್ದರು. ಅವರ ಮೇಲಧಿಕಾರಿಗಳು ಹಳ್ಳಿಯ,[೨]ಮತ್ತು ಅಕ್ಕ-ಪಕ್ಕದ ಹಟ್ಟಿಗಳ ಪರಿಸರದ ಅಂಕಿ-ಅಂಶಗಳನ್ನು ತಿಮ್ಮಪ್ಪಯ್ಯನವರಿಂದಲೇ ಕೇಳಿಪಡೆಯುತ್ತಿದ್ದರು.[೩]

ಅಪಾರ ದೈವಭಕ್ತಿ[ಬದಲಾಯಿಸಿ]

’ತಾಳ್ಯದ ಆಂಜನೆಯಸ್ವಾಮಿಯ ಭಜನಾವಳಿ”ಯನ್ನು, "ಶ್ರೀ ಗುರುಚರಿತ್ರೆಯ ಸ್ತೊತ್ರಗಳ "ನ್ನೂ ಅಚ್ಚುಕಟ್ಟಾಗಿ, ಮುದ್ರಿಸಿ ಆ ಪುಟ್ಟ ಪುಸ್ತಕಗಳನ್ನು, ೬೦ ರ ದಶಕದಲ್ಲೇ ಭಕ್ತ-ಜನರಿಗೆ ಮುಟ್ಟಿಸಲು ಮಾಡಿದ ಪ್ರಯತ್ನ ಅನನ್ಯ.

ಒಳ್ಳೆಯ ವಾಗ್ಮಿ , ಎಲ್ಲದರಲ್ಲೂ ಮುಂದಾಳತ್ವ[ಬದಲಾಯಿಸಿ]

ಒಳ್ಳೆಯ ವಾಚಾಳತ್ವ ಮತ್ತು ಮಾಹಿತಿಗಳ ಸಂಗ್ರಹಗಳನ್ನು ಅತ್ಯಂತ ಸರಳವಾಗಿಯೂ ಸಂಕ್ಷೇಪವಾಗಿಯೂ ಮನಮುಟ್ಟುವಂತೆ ಕೊಡುವ ವಿವರಗಳನ್ನು ಗಮನಿಸಿ, "ಚಿತ್ರದುರ್ಗದ ಆಕಾಶವಾಣಿ ಕೇಂದ್ರ" ಒಂದು "ಸಂವಾದ ಕಾರ್ಯಕ್ರಮ" ವನ್ನು ಹಮ್ಮಿಕೊಂಡಿತ್ತು. ಸುಮಾರು ೧ ಗಂಟೆಯಕಾಲ, ಆಕಾಶವಾಣಿಯ ವಕ್ತಾರರು ಕೇಳಿದ ಹಲವಾರು ಪ್ರಶ್ನೆಗಳಿಗೆ, ಅತ್ಯಂತ ಸಮರ್ಪಕವಾಗಿ ಉತ್ತರಿಸಿದರು. ಸ್ವಾತಂತ್ರಪೂರ್ವದ ಶ್ಯಾನುಭೋಗ ವೃತ್ತಿಯ ಅನೇಕ ಮಜಲುಗಳನ್ನು ಯಥಾವತ್ತಾಗಿ ಉದಾಹರಣೆಗಳ ಸಮೇತ ಕೊಟ್ಟಿದ್ದನ್ನು ಜಿಲ್ಲೆಯ ಎಲ್ಲಾ, ಶ್ರೊತೃಗಳೂ ಕೇಳಿ ಆನಂದಿಸಿದರು. [೪]ಈ ಸಂವಾದದ ಧ್ವನಿಮುದ್ರಿತ ಕ್ಯಾಸೆಟ್, ಅವರ ಮಕ್ಕಳ ಬಳಿ ದೊರೆಯುತ್ತದೆ. ಆಕಾಶವಾಣಿ,ಚಿತ್ರದುರ್ಗ ಕೇಂದ್ರ, [೫]

ಶ್ಯಾನುಭೋಗರ ನಿವೃತ್ತಿವೇತನ[ಬದಲಾಯಿಸಿ]

ಇದರ ಬಗ್ಗೆ ಸರ್ಕಾರ ತೀವ್ರವಾಗಿ ಯೋಚಿಸುತ್ತಿದೆ.[೬] ಇವರ ನಿವೃತ್ತಿಯ ತರುವಾಯ ಸರಕಾರ ಶ್ಯಾನುಭೋಗಿಕೆ ವೃತ್ತಿಯನ್ನು ವಜಾಗೊಳಿಸಿ ಆ ಜಾಗದಲ್ಲಿ ಸೆಕ್ರೆಟರಿ ಎಂಬ ಹುದ್ದೆಯನ್ನು ಸ್ಥಾಪಿಸಿದರು.ವಂಶಪಾರಂಪರ್ಯ ನೌಕರಿಕೊನೆಗೊಂಡು ವ್ಯಕ್ತಿಯ ಓದಿನ ಅರ್ಹತೆ,ಅನುಭವದ ಮೇಲೆ ನೇಮಕಾತಿಯ ಆರಂಭ ಶುರುವಾಯಿತು.[೭]

ಚಿತ್ರದುರ್ಗದ ಆಕಾಶವಾಣಿಗೆ ನೀಡಿದ ಸಂದರ್ಶನ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಚಿಕ್ಕಜಾಜೂರು/ದುಮ್ಮಿಗೆ, ಬಹಳ ಹತ್ತಿರದ ಗ್ರಾಮ". Archived from the original on 2018-09-15. Retrieved 2018-09-27.
  2. "ಭಾರತದ ಹಳ್ಳಿಗಳ ಸ್ಥಿತಿಗತಿ - ಒಂದು ಇಣುಕುನೋಟ". Archived from the original on 2014-11-22. Retrieved 2014-07-21.
  3. 'Administration and Revenue'[ಶಾಶ್ವತವಾಗಿ ಮಡಿದ ಕೊಂಡಿ]
  4. AGRARIAN RELATIONS IN RAJAPURA PRIOR TO 1950s
  5. ನೂರಾರು ಶ್ಯಾನುಭೋಗರು ನಿರಾಳ ಶುಕ್ರವಾರ, ಸೆಪ್ಟೆಂಬರ್ 11, 2009[ಶಾಶ್ವತವಾಗಿ ಮಡಿದ ಕೊಂಡಿ]
  6. ಶಾನುಭೋಗರಿಗೆ ಪಿಂಚಣಿ ಭತ್ಯೆ ಇನ್ನಾದರೂ ದೊರಕಬಹುದೇ? vijaya karnataka
  7. Village Accountant, Wikipedia Article 'ವಿಲೇಜ್ ಅಕೌಂಟೆಂಟ್ ಹುದ್ದೆ'
  8. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯದನಂತರದ ಶ್ಯಾನುಭೋಗಿಕೆ ವೃತ್ತಿಯ ಹಲವು ಮಜಲುಗಳನ್ನು ಶ್ಯಾನುಭೋಗ್ ತಿಮ್ಮಪ್ಪಯ್ಯನವರು,ಚಿತ್ರದುರ್ಗದ ಆಕಾಶವಾಣಿ ಕೇಂದ್ರದಲ್ಲಿ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದು ಹೀಗೆ' ಆಡಿಯೋ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]