ಶುದ್ಧೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶುದ್ಧೀಕರಣ ಎಂದರೆ ವಸ್ತು ಅಥವಾ ರೂಪವನ್ನು ಶುದ್ಧಗೊಳಿಸುವ ಪ್ರಕ್ರಿಯೆ.[೧] ಈ ಪದವನ್ನು ಸಾಮಾನ್ಯವಾಗಿ ಬಹುತೇಕವಾಗಿ ಉಪಯೋಗಿಸಬಲ್ಲ ರೂಪದಲ್ಲಿರುವ, ಆದರೆ ಅದರ ಶುದ್ಧ ರೂಪದಲ್ಲಿ ಹೆಚ್ಚು ಉಪಯುಕ್ತವಾಗಿರುವ ನೈಸರ್ಗಿಕ ಸಂಪನ್ಮೂಲಕ್ಕೆ ಬಳಸಲಾಗುತ್ತದೆ. ಉದಾಹರಣೆಗೆ, ನೈಸರ್ಗಿಕ ಪೆಟ್ರೋಲಿಯಮ್‍ನ ಬಹುತೇಕ ಪ್ರಕಾರಗಳು ನೆಲದಿಂದ ನೇರವಾಗಿ ಹಾಗೆಯೇ ಸುಡುತ್ತವೆ, ಆದರೆ ಅದು ಕಳಪೆಯಾಗಿ ದಹಿಸಿ ಬೇಗನೇ ಇಂಜಿನ್‍ಗೆ ಶೇಷಗಳು ಹಾಗೂ ಉಪ ಉತ್ಪನ್ನಗಳಿಂದ ತಡೆಹಾಕುತ್ತದೆ. ಈ ಪದವು ವಿಶಾಲವಾಗಿದೆ, ಮತ್ತು ಹೆಚ್ಚು ಉಗ್ರ ಪರಿವರ್ತನೆಗಳನ್ನು ಒಳಗೊಳ್ಳಬಹುದು, ಉದಾಹರಣೆಗೆ ಅದಿರನ್ನು ಲೋಹವಾಗಿ ಪರಿವರ್ತಿಸುವುದು.

ದ್ರವಗಳ ಶುದ್ಧೀಕರಣವನ್ನು ಹಲವುವೇಳೆ ಆಸವನ/ ಬಟ್ಟಿ ಇಳಿಸುವಿಕೆ ಅಥವಾ ಆಂಶಿಕ ಆಸವನದ ಮೂಲಕ ನೆರವೇರಿಸಲಾಗುತ್ತದೆ; ಈ ಪ್ರಕ್ರಿಯೆಯು ಉಪಯುಕ್ತವಾಗಿದೆ, ಉದಾಹರಣೆಗೆ, ಪೆಟ್ರೋಲಿಯಮ್‍ನ ವಿಭಿನ್ನ ಅಂಶಗಳನ್ನು ಪ್ರತ್ಯೇಕಿಸುವುದಕ್ಕಾಗಿ.

ಉಲ್ಲೇಖಗಳು[ಬದಲಾಯಿಸಿ]