ಶಾನ್ ಕಾನರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sir

ಶಾನ್ ಕಾನರಿ
2008 ರ ಎಡಿನ್ಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಶಾನ್ ಕಾನರಿ
ಜನನ
ಥಾಮಸ್ ಶಾನ್ ಕಾನರಿ

(೧೯೩೦-೦೮-೨೫)೨೫ ಆಗಸ್ಟ್ ೧೯೩೦
Fountainbridge, Edinburgh, Scotland
ಮರಣ31 October 2020(2020-10-31) (aged 90)
Nassau, The Bahamas
ಉದ್ಯೋಗActor
ಸಕ್ರಿಯ ವರ್ಷಗಳು1954–2003, 2012
ಜೀವನ ಸಂಗಾತಿ
ಮಕ್ಕಳುJason Connery
ಕುಟುಂಬNeil Connery (brother)
Military career
Allegiance ಯುನೈಟೆಡ್ ಕಿಂಗ್ಡಂ
ಶಾಖೆ Royal Navy
ಸೇವಾವಧಿ1946–1949
ಶ್ರೇಣಿ(ದರ್ಜೆ)Able Seaman
ಘಟಕHMS Formidable (67)
ಜಾಲತಾಣseanconnery.com
Signature

ಸರ್ ಥಾಮಸ್ ಸೀನ್ ಕಾನರಿ (ಹುಟ್ಟಿದ್ದು 25 ಆಗಸ್ಟ್ 1930 - 2020), ಸಾಮಾನ್ಯವಾಗಿ ಸೀನ್ ಕಾನರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ, ಇವರು ಅಕಾಡೆಮಿ ಅವಾರ್ಡ್, ಗೋಲ್ಡನ್ ಗ್ಲೋಬ್, ಮತ್ತು BAFTA ಅವಾರ್ಡ್ ವಿಜೇತ ಸ್ಕಾಟಿಷ್ ನಟ ಹಾಗೂ ನಿರ್ಮಾಪಕ.

ಚಿತ್ರರಂಗದಲ್ಲಿ ಇವರು ಜೇಮ್ಸ್ ಬಾಂಡ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿರಪರಿಚಿತರು, 1962 ಮತ್ತು 1983ರ ಮಧ್ಯದಲ್ಲಿ ಏಳು ಬಾಂಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.[೧] 1988ರಲ್ಲಿ, ಕಾನರಿಯವರು ತಮ್ಮ ದ ಅನ್‌ಟಚಬಲ್ಸ್ ಚಿತ್ರದ ಸಹನಟನೆಗಾಗಿ ಅತ್ಯುತ್ತಮ ಸಹನಟ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದರು.[೨] ಅವರ ಚಲನಚಿತ್ರದ ವೃತ್ತಿಜೀವನದಲ್ಲಿ ಮಾರ್ನೀ , ಇಂಡಿಯಾನಾ ಜೋನ್ಸ್ ಅಂಡ್ ಲಾಸ್ಟ್ ಕ್ರುಸೇಡ್ , ದ ಹಂಟ್ ಫಾರ್ ರೆಡ್ ಅಕ್ಟೋಬರ್ , ಡ್ರ್ಯಾಗನ್‌ಹಾರ್ಟ್ , ಮತ್ತು ದ ರಾಕ್ ನಂತಹ ಚಿತ್ರಗಳೂ ಸೇರಿವೆ.

ಕಾನರಿಯವರು "ಸ್ಕಾಟ್‌ನ ಮಹಾನ್ ವ್ಯಕ್ತಿ" ಯಾಗಿ ಆಯ್ಕೆಯಾಗಿದ್ದರು [೩] ಹಾಗೂ 2000ರ ಜುಲೈನಲ್ಲಿ ಕ್ವೀನ್ ಎಲಿಜಬೆತ್ II ಇವರಿಂದ ಸರ್ ಎಂಬ ಗೌರವವನ್ನು ಸ್ವೀಕರಿಸಿದರು.[೪] 1989ರಲ್ಲಿ, ಇವರನ್ನು ಪೀಪಲ್ ಮ್ಯಾಗಜೀನ್ ಸೆಕ್ಸಿಯೆಸ್ಟ್ ಪುರುಷ ನೆಂದು ಘೋಷಿಸಿತು, ಮತ್ತು 1999ರಲ್ಲಿ, ಅವರ 69ನೆಯ ವಯಸ್ಸಿನಲ್ಲಿ, ಶತಮಾನದ ಸೆಕ್ಸಿಯೆಸ್ಟ್ ಪುರುಷ ಎಂದು ಜನರಿಂದ ಚುನಾಯಿಸಲ್ಪಟ್ಟರು.

ಆರಂಭಿಕ ಜೀವನ[ಬದಲಾಯಿಸಿ]

ಥಾಮಸ್ ಸೀನ್ ಕಾನರಿ ಇವರು ಫೌಂಟೇನ್ ಬ್ರಿಡ್ಜ್‌ನಲ್ಲಿ ಜನಿಸಿದರು, ಎಡಿನ್‌ಬರ್ಗ್ನಿಂದ ಯುಫೆಮಿಯಾ "ಎಫ್ಫೀ" (née Maclean), ಇವರ ತಾಯಿ ಒಬ್ಬ ಸ್ವಚ್ಛಗೊಳಿಸುವವರು ಹಾಗೂ ತಂದೆ ಜೋಸೆಫ್ ಕಾನರಿ ಕಾರ್ಖಾನೆಯ ಕಾರ್ಮಿಕ ಹಾಗು ಲಾರಿ ಚಾಲಕರಾಗಿದ್ದರು.[೫] ಇವರ ತಂದೆ ಕಂಟ್ರಿ ವೆಕ್ಸ್‌ಫೊರ್ಡ್‌ ಮೂಲದ ಐರಿಶ್ ಡಿಸೆಂಟ್‌ರೋಮನ್ ಕ್ಯಾಥೊಲಿಕ್ ಕುಟುಂಬಕ್ಕೆ ಸೇರಿದವರಾಗಿದ್ದರು, ಹಾಗೂ ತಾಯಿಯು ಒಬ್ಬ ಪ್ರೊಟೆಸ್ಟೆಂಟ್. ಇವರಿಗೆ ನೀಲ್ ಎಂಬ ಒಬ್ಬ ಸಹೋದರನಿದ್ದಾನೆ. ಕಾನರಿಯವರು ನಟರಾಗುಗುವ ಮುನ್ನ ತಮ್ಮ ಬಾಲ್ಯದಲ್ಲಿ ಸೀಮಸ್ ಎಂಬ ಐರಿಷ್ ಗೆಳೆಯನನ್ನು ಹೊಂದಿದ್ದರು, ಇಬ್ಬರೂ ಒಟ್ಟಿಗೆ ಇರುವಾಗ ಇಬ್ಬರಿಗೂ ಪರಿಚಯವಿರುವ ಜನರು ಕಾನರಿಯವರ ಮಧ್ಯದ ಹೆಸರಾದ ಸೀನ್ ಎಂದು ಕರೆಯುತ್ತಿದ್ದರು ಎಂದು ಕಾನರಿಯವರು ಹೇಳಿಕೊಂಡಿದ್ದಾರೆ.

ಅವರ ಮೊದಲ ವೃತ್ತಿ ಎಡಿನ್ ಬರ್ಗ್‌ನ ಸೇಂಟ್. ಕತ್‌ಬರ್ಟ್ಸ್ ಕೋ-ಆಪರೇಟೀವ್ ಸೊಸೈಟಿಯಲ್ಲಿ ಹಾಲು ವಿತರಕನ ಕೆಲಸವಾಗಿತ್ತು.[೬] ನಂತರದಲ್ಲಿ ಅವರು ರಾಯಲ್ ನೇವಿ ಸೇರಿದರು ಈ ಸಮಯದಲ್ಲಿ ಅವರು ಎರಡು ಟಾಟ್ಟೂಗಳನ್ನು ಆಯ್ಕೆಮಾಡಿಕೊಂಡಿದ್ದನ್ನು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಿಸಿದ್ದಾರೆ:

’ಇತರೆ ಟಾಟ್ಟೂಗಳಂತೆ, ಅವರವು ಹುಡುಗಾಟಿಕೆಯವಾಗಿರಲಿಲ್ಲ - ಅವರ ಟಾಟ್ಟೂಗಳು ಅವರ ಜೀವನದುದ್ದಕ್ಕೂ ಇದ್ದ ಎರಡು ಜವಾಬ್ದಾರಿಗಳನ್ನು ಅವು ಸೂಚಿಸುತ್ತಿದ್ದವು: ಅವರ ಕುಟುಂಬ ಮತ್ತು ಸ್ಕಾಟ್‌ಲ್ಯಾಂಡ್. ನಂತರ ಆರು ದಶಕಗಳ ನಂತರ, ಅವರ ಟಾಟ್ಟೂಗಳು ಅದೇ ಎರಡು ಆಲೋಚನೆಗಳನ್ನು ಬಿಂಬಿಸುತ್ತಿದ್ದವು: ಒಂದು ಟಾಟ್ಟೂ ತಮ್ಮ ತಂದೆ ತಾಯಿಯರಿಗೆ ಸಲ್ಲಿಸುವಂತಹದ್ದಾಗಿದ್ದು "ಅಮ್ಮ ಮತ್ತು ಅಪ್ಪ," ಎಂದು ಬರೆದಿತ್ತು ಮತ್ತು ಇನ್ನೊಂದರಲ್ಲಿ "ಎಂದೆಂದಿಗೂ ಸ್ಕಾಟ್‌ಲ್ಯಾಂಡ್" ಎಂಬುದನ್ನು ವಿವರಿಸುತ್ತಿತ್ತು.[೭]

ಕಾನರಿಯವರು ನಂತರ ಡುಯೋಡೆನಲ್ ಅಲ್ಸರ್‌ನಿಂದ ಬಳಲುತ್ತಿದ್ದು ವೈದ್ಯಕೀಯ ಕಾರಣಗಳಿಂದಾಗಿ ನೇವಿಯಿಂದ ವಿಸರ್ಜಿಸಲ್ಪಟ್ಟರು. ಅದಾದ ಮೇಲೆ, ಅವರು ಕೋ-ಆಪ್‌ಗೆ ಹಿಂದಿರುಗಿದರು, ಅಲ್ಲಿ ಇತರೆ ಕೆಲಸಗಳ ಜೊತೆಗೆ, ಒಬ್ಬ ಲಾರಿ ಚಾಲಕನಾಗಿ, ಒಬ್ಬ ಕಾರ್ಮಿಕನಾಗಿ, ಎಡಿನ್‌ಬರ್ಗ್ ಕಾಲೇಜ್ ಆಫ್ ಆರ್ಟ್‌ನ ಒಬ್ಬ ಕಲಾವಿದನಿಗೆ ರೂಪದರ್ಶಿಯಾಗಿ , ಮತ್ತು ಹೆಣವನ್ನಿಡುವ ಪೆಟ್ಟಿಗೆಯ ಪಾಲಿಷ್ ಮಾಡುವವನಾಗಿ ಕಾರ್ಯ ನಿರ್ವಹಿಸಿದರು.[೮]

ನಟನಾ ವೃತ್ತಿ[ಬದಲಾಯಿಸಿ]

ಸ್ವಲ್ಪ ಹೆಚ್ಚು ಹಣ ಗಳಿಸುವ ಉದ್ದೇಶದಿಂದ, ಅವರು 1951ರ ಕೊನೆಯ ಭಾಗದಲ್ಲಿ ಕಿಂಗ್ಸ್ ಥಿಯೇಟರ್‌ನ ತೆರೆಯ ಹಿಂಬಾಗದಲ್ಲಿ ಸಹಾಯಕನಾಗಿ ಕೆಲಸ ಮಾಡಿದರು.[೯] ಈ ಕೆಲಸಗಳಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿದರು, ಮತ್ತು ಒಂದು ವೃತ್ತಿ ಜೀವನ ಪ್ರಾರಂಭವಾಯಿತು.

ಜೊತೆಯಲ್ಲಿಯೇ ಅವರು ಬಾಡಿಬಿಲ್ಡಿಂಗ್ ಅನ್ನು ಹವ್ಯಾಸವಾಗಿ ಬೆಳೆಸಿಕೊಂಡರು. ಅವರ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಹೇಳಿಕೆಯಂತೆ ಅವರು 1950ರ ಮಿಸ್ಟರ್. ಯೂನಿವರ್ಸ್ ಸ್ಪರ್ಧೆಯಲ್ಲಿ ಮೂರನೆಯವಗಾಗಿ ಆಯ್ಕೆಯಾಗಿದ್ದರು, ಬಹಳಷ್ಟು ಮೂಲಗಳು ಅವರನ್ನು 1953ರ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದವು ಕಿರಿಯರ ವರ್ಗದಲ್ಲಿ ಮೂರನೆಯವರು[೯] ಅಥವಾ ಉದ್ದನೆಯ ವ್ಯಕ್ತಿ ವರ್ಗೀಕರಣದಲ್ಲಿ ಭಾಗವಹಿಸಲು ವಿಫಲರಾದರು.[೧೦] ಇನ್ನೊಬ್ಬ ಸ್ಪರ್ಧಿಯು ಸೌತ್ ಪೆಸಿಫಿಕ್ ನಿರ್ಮಾಣದಲ್ಲಿ ಆಡಿಷನ್‌ಗಳು ನಡೆಯುವುದರ ಬಗ್ಗೆ ಉಲ್ಲೇಖಿಸಿದರು;[೯] ಕಾನರಿಯವರು ಒಂದು ಸಣ್ಣ ಪಾತ್ರವನ್ನು ಗಳಿಸಿದರು.

ಕಾನರಿಯವರು ಒಬ್ಬ ಒಳ್ಳೆಯ ಫುಟ್ಬಾಲ್ ಆಟಗಾರರೂ ಆಗಿದ್ದರು, ಬಾಲ್ಯದ ದಿನಗಳಲ್ಲಿ ಬಾನಿರಿಗ್ಗ್ ರೋಸ್‌ಗಾಗಿ ಆಟ ಆಡಿದ್ದರು. ಅವರು ಈಸ್ಟ್ ಫಿಫೆಯ ಜೊತೆ ಪರೀಕ್ಷಾ ಪಂದ್ಯದಲ್ಲಿ ಅವಕಾಶವನ್ನು ಗಳಿಸಿದ್ದರು. ಮಾಂಚೆಸ್ಟರ್ ಯುನೈಟೆಡ್‌ನ ನಿರ್ವಾಹಕ ಆಯ್ಕೆಮಾಡಿದ ಆಟಗಾರನಾಗಿ ಸೌತ್ ಪೆಸಿಫಿಕ್ ಜೊತೆಯಲ್ಲಿ ಪ್ರವಾಸದಲ್ಲಿದ್ದಾಗ ಸ್ಥಳೀಯ ತಂಡ ಮ್ಯಾಟ್ ಬುಸ್ಬಿ ವಿರುದ್ಧ ಫುಟ್ಬಾಲ್ ಆಟ ಆಡಿದ್ದರು. ವರದಿಗಳ ಪ್ರಕಾರ, ಬುಸ್ಬಿಯು ಪಂದ್ಯದ ಒಂದು ವಾರದ ನಂತರ £25ಗಳ ಮೊತ್ತಕ್ಕೆ ಒಪ್ಪಂದಕ್ಕೆ ಆಹ್ವಾನಿಸಿತು. ಕಾನರಿಯವರೇ ಒಪ್ಪಿಕೊಂಡಂತೆ ಆ ಆಹ್ವಾನದಿಂದ ಮೋಹಕ್ಕೊಳಗಾಗಿದ್ದರು, ಆದರೆ ನಂತರ ಯೋಚಿಸಿದಾಗ, " ನಾನು ಅರ್ಥಮಾಡಿಕೊಂಡಿದ್ದು ಒಬ್ಬ ಮೇಲ್ವರ್ಗದ ಫುಟ್ಬಾಲ್ ಆಟಗಾರನು 30ವರ್ಷ ವಯಸ್ಸಾಗುವುದರಲ್ಲಿ ಆಟದ ಉತ್ತುಂಗಕ್ಕೇರಬೇಕು, ಹಾಗೂ ನನಗಾಗಲೇ 23ವಯಸ್ಸಾಗಿದೆ. ನಾನು ನಟನಾಗಬೇಕೆಂದು ನಿರ್ಧರಿಸಿದೆ ಮತ್ತು ಇದು ನನ್ನ ಜಾಣತನವನ್ನು ಉಪಯೋಗಿಸಿಕೊಳ್ಳುವುದಕ್ಕೆ ಇದು ಉತ್ತಮವಾದದ್ದು ಎನಿಸಿತು."[೧೧]

ಅನದರ್ ಟೈಮ್, ಅನದರ್ ಪ್ಲೇಸ್ (1958) ಚಿತ್ರದ ಪಾತ್ರವು ಅವರ ಪ್ರಮುಖ ಪಾತ್ರಗಳಲ್ಲೊಂದು. ಚಿತ್ರೀಕರಣದ ಸಂದರ್ಭದಲ್ಲಿ, ಲಾಸ್ ಏಂಜಲೀಸ್‌ನಿಂದ ಭೇಟಿ ನೀಡುತ್ತಿದ್ದ ನಟಿ ಲಾನಾ ಟರ್ನರ್‌ಳ ಗ್ಯಾಂಗ್‌ಸ್ಟರ್ ಗೆಳೆಯ ಜಾನಿ ಜಾನಿ ಸ್ಟಂಪನಾಟೊ ಅವಳು ಕೆಲಸದ ಸ್ಥಳದಲ್ಲಿ ಕಾನರಿಯೊಂದಿಗೆ ಸಂಬಂಧ ಹೊಂದಿದ್ದಾಳೆಂದು ನಂಬಿದ. ಅವನು ಚಿತ್ರೀಕರಣದ ಸ್ಥಳಕ್ಕೆ ಧಾವಿಸಿ ಗನ್ ಅನ್ನು ಕಾನರಿಯವರೆಡೆ ತೋರಿಸುತ್ತಾ ಅವರನ್ನು ನಿಶಸ್ತ್ರರನ್ನಾಗಿ ಮಾಡಲು ಬೆನ್ನಿಗೆ ಗುದ್ದಿದ, ಇದರಿಂದಾಗಿ ಸ್ಟಂಪನಾಟೊವನ್ನು ಚಿತ್ರೀಕರಣದಿಂದ ಬಹಿಷ್ಕರಿಸಲಾಯಿತು.[೧೨]. ಸ್ಟಂಪನಾಟೊ‌ನ ಯಜಮಾನ ಮಿಕ್ಕಿ ಕೊಹೆನ್‌ನ ಕೆಳಗೆ ಕೆಲಸ ಮಾಡುವ ಒಬ್ಬನಿಂದ ಬೆದರಿಕೆಗಳನ್ನು ಕೇಳಿದ ನಂತರ ಕಾನರಿ ಸುಳ್ಳು ಹೇಳಲೇಬೇಕಾಯಿತೆಂದು ವಿವರಿಸಿದ್ದಾರೆ.

ಡರ್ಬಿ ಒ’ಗಿಲ್ ಅಂಡ್ ದ ಲಿಟಲ್ ಪೀಪಲ್ (1959) ಎಂಬ ಪ್ರಸಿದ್ಧ ಡಿಸ್ನಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಕಾನರಿಯವರು ಪಡೆದುಕೊಂಡರು. BBC ದೂರದರ್ಶನದ 1961ರ ರುಡೋಲ್ಫ್ ಕಾರ್ಟಿಯೆರ್ ನಿರ್ಮಾಣದ ಅನ್ನಾ ಕರೆನಿನಾ ದಲ್ಲಿ ಪ್ರಮುಖ ಪಾತ್ರವನ್ನು ಪಡೆದುಕೊಂಡರು, ಇದರಲ್ಲಿ ಕ್ಲೆಯಿರ್ ಬ್ಲೂಮ್ ಅವರು ಸಹನಟರಾಗಿ ಅಭಿನಯಿಸಿದ್ದರು.[೧೩]

ಜೇಮ್ಸ್ ಬಾಂಡ್ (1962-1967;1971;1983)[ಬದಲಾಯಿಸಿ]

ಗೂಢಚಾರ ಜೇಮ್ಸ್ ಬಾಂಡ್ ಪಾತ್ರದಿಂದ ಕಾನರಿಯವರ ವೃತ್ತಿಯಲ್ಲಿ ಪ್ರಮುಖ ತಿರುವು ಸಿಕ್ಕಿತು. ಅವರು ಏಳು ಬಾಂಡ್ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದರು: Dr. ನೊ (1962), ಫ್ರಮ್ ರಷಿಯಾ ವಿತ್ ಲವ್ (1963), ಗೋಲ್ಡ್ ಫಿಂಗರ್ (1964), ಥಂಡರ್‌ಬಾಲ್ (1965), ಯು ಓನ್ಲಿ ಲೀವ್ ಟ್ವೈಸ್ (1967), ಡೈಮಂಡ್ಸ್ ಆರ್ ಫಾರೆವರ್ (1971), ಮತ್ತು ನೆವರ್ ಸೇ ನೆವರ್ ಅಗೈನ್ (1983). ಎಲ್ಲಾ ಏಳು ಚಿತ್ರಗಳೂ ಆರ್ಥಿಕವಾಗಿ ಯಶಸ್ಸುಗಳಿಸಿವೆ.

ಜೇಮ್ಸ್ ಬಾಂಡ್ ನಿರ್ಮಾಪಕ,ಐಯಾನ್ ಫ್ಲೆಮಿಂಗ್ ಅವರು ಮೊದಲಿಗೆ ಇವರನ್ನು ಪಾತ್ರಕ್ಕೆ ಆಯ್ಕೆಮಾಡಿಕೊಳ್ಳುವಾಗ ಅನುಮಾನ ವ್ಯಕ್ತಪಡಿಸಿ, "ಅವನು ನನ್ನ ಕಲ್ಪನೆಯ ಜೇಮ್ಸ್ ಬಾಂಡ್ ತರಹ ಕಾಣಿಸುವುದಿಲ್ಲ" ಮತ್ತು "ನಾನು ಒಬ್ಬ ಬಾಂಡ್ ಮುಖಂಡನನ್ನು ಹುಡುಕುತ್ತಿದ್ದೇನೆ ಮತ್ತು ಹೆಚ್ಚು ಬೆಳೆದ ಸಾಹಸ ಪ್ರದರ್ಶಕನನ್ನಲ್ಲ," ಕಾನರಿಯು (ಮಸ್ಕ್ಯುಲರ್, 6' 2", ಮತ್ತು ಒಬ್ಬ ಸ್ಕಾಟ್) ಇದರಲ್ಲಿ ಇನ್ನೂ ಅನುಭವ ಹೊಂದಿಲ್ಲ ಎಂದು ಕೂಡಾ ಸೇರಿಸಿದರು.

ಆದಾಗ್ಯೂ ಫ್ಲೆಮಿಂಗ್‌ನ ಗೆಳತಿಯು ಕಾನರಿಗೆ ಅವಶ್ಯಕವಾಗಿ ಬೇಕಾದ ಲೈಂಗಿಕ ಆಕರ್ಷಣಾ ಶಕ್ತಿ ಇದೆ ಎಂದು ಹೇಳಿದಳು. ನಂತರ Dr. ನೊ   ಚಿತ್ರದ ಪ್ರೀಮಿಯರ್‌ನ ಯಶಸ್ಸಿನ ನಂತರ ತನ್ನ ಮನಸ್ಸು ಬದಲಿಸಿದನು; ಅದರಿಂದ ಅವನು ಬಹಳ ಆಕರ್ಶಿತನಾದನು, ನಂತರದ ಕಾದಂಬರಿಗಳಲ್ಲಿ ಜೇಮ್ಸ್ ಬಾಂಡ್‌ನನ್ನು ಅರ್ಧ-ಸ್ಕಾಟಿಷ್, ಅರ್ಧ-ಸ್ವಿಸ್ ನವನಾಗಿ ರೂಪಿಸಿದನು.

ನಟನ ದೈಹಿಕ ಸೌಷ್ಠವವನ್ನು ಬಳಸಿಕೊಳ್ಳುವಾಗ ಮತ್ತು ಹೊಡೆದಾಟದ ದೃಶ್ಯಗಳಲ್ಲಿ ನಿರ್ದೇಶಕ ಟೆರೆನ್ಸ್ ಯಂಗ್ ಅವರು ನಟನೆಗೆ ಇನ್ನೂ ಹೆಚ್ಚಿನ ಮೆರುಗನ್ನು ನೀಡುವಲ್ಲಿ ಸಲಹೆಗಳನ್ನು ಪಡೆದು ಜೇಮ್ಸ್ ಬಾಂಡ್ ಪಾತ್ರಧಾರಿ ಕಾನರಿಯವರು ಉತ್ತಮ ಶೈಲಿಗಳನ್ನು ತಮ್ಮದಾಗಿಸಿಕೊಂಡರು. ರಾಬರ್ಟ್ ಕಾಟನ್ ಅವರು ಬರೆದ ಕಾನರಿ ಜೀವನಚರಿತ್ರೆಯಲ್ಲಿಲೂಯಿಸ್ ಮ್ಯಾಕ್ಸ್‌ವೆಲ್ (ಮೊದಲ ಮಿಸ್ ಮನಿಪೆನ್ನಿ) ಗಮನಿಸಿದಂತೆ, "ಟೆರೆನ್ಸ್ ಅವರು ಸೀನ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ಊಟಕ್ಕೆ ಕರೆದುಕೊಂಡು ಹೋಗಿ, ಹೇಗೆ ನಡೆಯಬೇಕು ಹೇಗೆ ಮಾತಾಡಬೇಕು, ಹೇಗೆ ತಿನ್ನಬೇಕೆಂದು ಕೂಡಾ ತೋರಿಸಿದ್ದಾರೆ." ಕಾಟನ್ ಅವರು ಹೀಗೆ ಬರೆಯುತ್ತಾರೆ, "ಚಿತ್ರತಂಡದ ಕೆಲವು ಸದಸ್ಯರು ಹೇಳುವಂತೆ ಕಾನರಿಯವರು ಸುಮ್ಮನೆ ಟೆರೆನ್ಸ್ ಯಂಗ್ ಹೇಳಿದಂತೆಯೇ ಮಾಡುತ್ತಾ ಹೋಗುತ್ತಾರೆ, ಆದರೆ ಯಂಗ್ ಮತ್ತು ಕಾನರಿಯವರಿಬ್ಬರಿಗೂ ತಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆಂಬ ಅರಿವಿತ್ತು."[೧೪]

2005ರಲ್ಲಿ, ಫ್ರಮ್ ರಷಿಯಾ ವಿತ್ ಲವ್ ಚಿತ್ರವು ಎಲೆಕ್ಟ್ರಾನಿಕ್ಸ್ ಆರ್ಟ್ಸ್‌ನಿಂದ ವೀಡಿಯೋ ಗೇಮ್‌ಗೆ ಅಳವಡಿಸಲ್ಪಟ್ಟಿತು,James Bond 007: From Russia with Love ಆ ಚಿತ್ರದ ಪೋಷಕ ಪಾತ್ರ ಅವರಿಗೆ ಇಷ್ಟವಾದುದಾಗಿತ್ತು ಹಾಗೂ ಗೇಮ್ ಆವೃತ್ತಿಗೆ ಹೊಸದಾಗಿ ಧ್ವನಿಮುದ್ರಣದ ಕೆಲಸವನ್ನು ಕಾನರಿಯವರು ಮಾಡಿಕೊಟ್ಟರು.

ಬಾಂಡ್‌‍ಗಿಂತಲೂ ಮುಂದಕ್ಕೆ(1983-ಈಗಿನವರೆಗೂ)[ಬದಲಾಯಿಸಿ]

1988ರಲ್ಲಿ ಕಾನರಿ

ಬಾಂಡ್ ಚಿತ್ರಗಳಲ್ಲಿ ಅಭಿನಯಿಸುವಾಗಲೇ, ಕಾನರಿಯವರು ಇತರೆ ಚಿತ್ರಗಳಾದ ಅಲ್ಫ್ರೆಡ್ ಹಿಚ್ಕಾಕ್ ಅವರ ಮಾರ್ನೀ (1964) ಮತ್ತು ಮರ್ಡರ್ ಆನ್ ದ ಓರಿಯಂಟ್ ಎಕ್ಸ್ಪ್ರೆಸ್ (1974) ಚಿತ್ರಗಳಲ್ಲಿಯೂ ಅಭಿನಯಿಸಿದರು. 1975ರಲ್ಲಿ ಬಿಡುಗಡೆಯಾದ ದ ಮ್ಯಾನ್ ಹು ವುಡ್ ಬಿ ಕಿಂಗ್ ಮತ್ತು ದ ವಿಂಡ್ ಅಂಡ್ ದ ಲಯನ್ ಚಿತ್ರಗಳಲ್ಲದೆ ನಂತರದ ದಶಕದಲ್ಲಿ ಕಾನರಿಯವರಿಗೆ ಅತ್ಯಂತ ಯಶಸ್ಸು ತಂದು ಕೊಟ್ಟ ಪಾತ್ರವಹಿಸಿದ ಚಿತ್ರಗಳೆಂದರೆ ಮರ್ಡರ್ ಒನ್ ಥೆ ಓರಿಯೆಂಟ್ ಎಕ್ಸ್ಪ್ರೆಸ್ (1974) ಮತ್ತು ಎ ಬ್ರಿಡ್ಜ್ ಟೂ ಫಾರ್ (1977).

1981ರಲ್ಲಿ, ಸೀನ್ ಕಾನರಿಯವರು ಅಗೇಮೆಮ್ನನ್ ಪಾತ್ರದಲ್ಲಿ ಟೈಮ್ ಬ್ಯಾಂಡಿಟ್ಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರದ ಆಯ್ಕೆ ಒಂದು ಜೋಕ್‌ನಿಂದಾಗಿದೆ ಅದನ್ನು ಮೈಕೇಲ್ ಪಲಿನ್ ಅವರು ಸೇರಿಸಿದ್ದಾರೆ, ಇದರಲ್ಲಿ ಪಾತ್ರವನ್ನು ಹೀಗೆ ವರ್ಣಿಸಿದ್ದಾರೆ "ಸೀನ್ ಕಾನರಿ — ಅಥವಾ ಸಮನಾದ ಆದರೆ ಕಡಿಮೆ ಶ್ರೇಷ್ಟತೆಯನ್ನು ಹೊಂದಿದ ಒಬ್ಬ ವ್ಯಕ್ತಿ".[೧೫] ಸ್ಕ್ರಿಪ್ಟ್ ನೋಡಿ ಕಾನರಿಯವರು ಸಹನಟನಾಗಿ ಅಭಿನಯಿಸಲು ಸಂತೋಷ ಪಟ್ಟರು.

1983ರಲ್ಲಿ ನೆವರ್ ಸೇ ನೆವರ್ ಅಗೈನ್ ಅನುಭವದ ಮತ್ತು ಕೋರ್ಟ್ ಪ್ರಕರಣದ ನಂತರದಲ್ಲಿ, ಎರಡು ಪ್ರಮುಖ ಸ್ಟೂಡಿಯೋಗಳ ಮೇಲೆ ಅಸಂತೋಷವುಂಟಾಗಿ ಎರಡು ವರ್ಷಗಳ ಕಾಲ ಯಾವುದೇ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ನಂತರ ಯೂರೋಪಿಯನ್ ನಿರ್ಮಾಣದ ಯಶಸ್ವೀ ಚಲನಚಿತ್ರ ದ ನೇಮ್ ಆಫ್ ದ ರೋಸ್‌ (1986), ಚಿತ್ರದ ಅಭಿನಯಕ್ಕಾಗಿ BAFTA ಅವಾರ್ಡ್ ಗಳಿಸಿದರು, ಕಾನರಿಯವರ ವಾಣಿಜ್ಯ ಚಿತ್ರಗಳತ್ತ ಇರುವ ಆಸಕ್ತಿಯು ಪುನಃಜೀವಂತವಾಯಿತು. ಅದೇ ವರ್ಷ, ಹೈಲ್ಯಾಂಡರ್ ಚಿತ್ರದ ಪೋಷಕ ಪಾತ್ರದಲ್ಲಿ ಅಭಿನಯಿಸುವುದರೊಂದಿಗೆ ತಮಗಿಂತ ಹಿರಿಯ ಉಪದೇಶಕರಿಂದ ಕಿರಿಯ ಮಾರ್ಗದರ್ಶಕರವರೆಗೆ ಎಲ್ಲರಿಗೂ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿಕೊಟ್ಟರು, ಇದು ಅವರ ಹಲವಾರು ಚಿತ್ರಗಳಲ್ಲಿ ಪುನರಾವರ್ತಕ ಪಾತ್ರವಾಯಿತು.

ನಂತರದ ವರ್ಷದಲ್ಲಿ, ಮೊಂಡುತನದ ಪೋಲೀಸ್ ಆಗಿ ದ ಅನ್‌ಟಚಬಲ್ಸ್‌ (1987) ನಲ್ಲಿ ನೀಡಿದ ಮನೋಜ್ಞ  ಅಭಿನಯಕ್ಕೆ ಅವರು ಉತ್ತಮ ಪೋಷಕ ನಟ ಅಕಾಡೆಮಿ ಅವಾರ್ಡ್ ಗಳಿಸಿದರು, ಅವರ ವೃತ್ತಿಜೀವನದುದ್ದಕ್ಕೂ ಗಳಿಸಿದ ಒಂದೇ ನಾಮನಿರ್ದೇಶನ ಇದಾಗಿತ್ತು.

ಆನಂತರ ಬಾಕ್ಸ್-ಆಫೀಸ್‌ನಲ್ಲಿ ಯಶಸ್ಸು ಗಳಿಸಿದ ಚಿತ್ರಗಳೆಂದರೆ ಮುಖ್ಯಪಾತ್ರದ ತಂದೆಯ ಪಾತ್ರದಲ್ಲಿ ಅಭಿನಯಿಸಿದ ಇಂಡಿಯಾನಾ ಜೋನ್ಸ್ ಅಂಡ್ ದ ಲಾಸ್ಟ್ ಕ್ರುಸೇಡ್ ,ದ ಹಂಟ್ ಫಾರ್ ರೆಡ್ ಅಕ್ಟೋಬರ್ (1990) (ಇದರಲ್ಲಿ ವರದಿಯಾಗಿರುವಂತೆ ಇವರನ್ನು ಎರಡು ವಾರಗಳಿಗಾಗಿ ಕರೆಯಲಾಗಿತ್ತು'), ದ ರಷಿಯಾ ಹೌಸ್ (1990), ದ ರಾಕ್ (1996), ಮತ್ತು ಎಂಟ್ರಾಪ್‌ಮೆಂಟ್ (1999). ಲಾಸ್ಟ್ ಕ್ರುಸೇಡ್ ಮತ್ತು ದ ರಾಕ್ ಎರಡೂ ಚಿತ್ರಗಳು ಪರೋಕ್ಷವಾಗಿ ಜೇಮ್ಸ್ ಬಾಂಡ್‌ನ ದಿನಗಳನ್ನು ನೆನಪಿಸಿದವು. ಸ್ಟೀವನ್ ಸ್ಪಿಯೆಲ್‌ಬರ್ಗ್ ಮತ್ತು ಜಾರ್ಜ್ ಲುಕಾಸ್ "ಇಂಡಿಯಾನಾ ಜೋನ್ಸ್ನ ತಂದೆ" ಕಾನರಿಯೇ ಆಗಬೇಕೆಂದು ಕೊಂಡರು ಏಕೆಂದರೆ ಇಂಡಿಯಾನಾ ಜೋನ್ಸ್ ಸರಣಿಯು ನೇರವಾಗಿ ಬಾಂಡ್ ಚಿತ್ರದ ಸ್ಪೂರ್ತಿಯಾಗಿದೆ, ದ ರಾಕ್‌ ನಲ್ಲಿನ ಅವರ ಜಾನ್ ಪ್ಯಾಟ್ರಿಕ್ ಮೇಸನ್‌ನ ಪಾತ್ರವು 1960ದಶಕದಿಂದ ಖೈದಿಯಾಗಿದ್ದ ಒಬ್ಬ ಬ್ರಿಟಿಷ್ ಗುಪ್ತಚರನದಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ, ಚಿತ್ರಗಳಾದ ಫರ್ಸ್ಟ್ ನೈಟ್ (1995),ದ ಅವೆಂಜರ್ಸ್ (1998) ಮತ್ತು ದ ಲೀಗ್ ಆಫ್ ಎಕ್ಸ್ಟಾರ್ಡಿನರಿ ಜಂಟಲ್‌ಮೆನ್ (2003) ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿವೆ ಹಾಗೂ ವಿಮರ್ಶಾತ್ಮಕವಾಗಿ ನಿರಾಶೆಗೊಳಿಸಿವೆ, ಆದರೆ ಫೈಂಡಿಂಗ್ ಫಾರೆಸ್ಟರ್ (2000) ಗಳಂತಹ ಚಿತ್ರಕ್ಕಾಗಿ ಸಕಾರಾತ್ಮಕ ಅಭಿಪ್ರಾಯಗಳನ್ನು ಗಳಿಸಿದ್ದಾರೆ. ಸಿನೆಮಾ ಪ್ರಪಂಚಕ್ಕೆ ನೀಡಿದ ಮಹೋನ್ನತ ಅಭಿನಯದ ಸಾಧನೆಗಾಗಿ ಅವರುಕ್ರಿಸ್ಟಲ್ ಗ್ಲೋಬ್ ಅನ್ನೂ ಗಳಿಸಿದರು.

ನಿವೃತ್ತಿ[ಬದಲಾಯಿಸಿ]

ಕಾನರಿಯವರು ಚಿತ್ರದ ಸಂದರ್ಶನದಲ್ಲಿ ಹೇಳಿರುವಂತೆ (DVD ಬಿಡುಗಡೆಯೂ ಸಹ) ಅವರಿಗೆ ದ ಲಾರ್ಡ್ ಆಫ್ ದ ರಿಂಗ್ಸ್‌ ಸರಣಿಯಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು "ಸ್ಕ್ರಿಪ್ಟ್ ಅರ್ಥವಾಗದ ಕಾರಣ" ನಿರಾಕರಿಸಿದರಂತೆ. CNN ವರದಿಮಾಡಿರುವಂತೆ ಅವರಿಗೆ ಗಂಡಾಲ್ಫ್‌ನಲ್ಲಿ ಅಭಿನಯಿಸುವುದಕ್ಕಾಗಿ ಪ್ರಪಂಚದಾದ್ಯಂತ ಬಾಕ್ಸ್-ಆಫೀಸ್‌ನಲ್ಲಿ ಗಳಿಸುವ ಆದಾಯದಲ್ಲಿ 15% ಹಣವನ್ನು ನೀಡುವುದಾಗಿ ಕೇಳಿಕೊಂಡಿದ್ದರು, ಅದರಲ್ಲಿ ಸ್ವೀಕರಿಸಿದ್ದರೆ, ಸುಮಾರು $400 ಮಿಲಿಯನ್‌ಗಳಷ್ಟು ಗಳಿಸಿಬಹುದಾಗಿತ್ತು.[೧೬] ಆ ಸರಣಿಯ ಬೃಹತ್ ಪ್ರಮಾಣದ ಯಶಸ್ಸಿನ ನಂತರ, ಕಾನರಿಯವರು ಲೀಗ್ ಆಫ್ ಎಕ್ಸ್ಟ್ರಾರ್ಡಿನರಿ ಜಂಟಲ್‌ಮೆನ್ , ಚಿತ್ರವನ್ನು ಅರ್ಥಮಾಡಿಕೊಳ್ಳದೇ ಇದ್ದರೂ ಅದರಲ್ಲಿ ಅಭಿನಯಿಸಲು ಒಪ್ಪಿಕೊಂಡರು. 2005ರ ಜುಲೈನಲ್ಲಿ, ಚಿತ್ರ-ನಿರ್ಮಾಣದಿಂದ ಅವರು ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆಂಬ ವರದಿ ಪ್ರಕಟವಾಯಿತು, ನಂತರ "ಈಡಿಯಟ್ಸ್ ನೌ ಇನ್ ಹಾಲಿವುಡ್"ನ ಭ್ರಮನಿರಸನದಿಂದಾಗಿ ಹಾಗೂ 2003ರ ಚಿತ್ರ ನಿರ್ಮಾಣದಲ್ಲಿ ಆದ ಗಲಭೆಯಿಂದಾಗಿ ಈ ನಿರ್ಧಾರ ತೆಗೆದುಕೊಂಡರು.[೧೭]

2005ರಲ್ಲಿ ಬಿಡುಗಡೆಯಾಗಬೇಕಿದ್ದ ಜೋಸಿಯಾಹ್ಸ್ ಕೆನನ್ ಚಿತ್ರವನ್ನು 2004ರ ಸೆಪ್ಟೆಂಬರ್‌ನಲ್ಲಿ ಹಿಂತೆಗೆದುಕೊಂಡುದಕ್ಕಾಗಿ ಕಾನರಿ ಈ ನಿರ್ಧಾರ ತೆಗೆದುಕೊಂಡಿರುವರೆಂದು ಮಾಧ್ಯಮವು ವರದಿ ಮಾಡಿತು. ಹೇಗಾದರೂ, 2004 ಡಿಸೆಂಬರ್‌ನಲ್ಲ್ಲಿ ನಡೆದ ದ ಸ್ಕಾಟ್ಸ್‌ಮನ್ ವಾರ್ತಾಪತ್ರಿಕೆ ಜೊತೆಯಲ್ಲಿ ತಮ್ಮ ಮನೆ ಬಹಮನ್ಸ್‌ನಿಂದ ನಡೆದ ಸಂದರ್ಶನದಲ್ಲಿ, ಕಾನರಿಯವರು ತಮ್ಮ ಜೀವನಚರಿತ್ರೆಯನ್ನು ಬರೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅಭಿನಯದಿಂದ ಕೆಲಕಾಲ ದೂರ ಉಳಿಯುವುದಾಗಿ ಹೇಳಿದರು. 2006ರ ಮಾರ್ಚ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಟಾರ್ಟನ್ ಡೇ ಆಚರಿಸುವಾಗ, ಕಾನರಿಯವರು ಮತ್ತೊಮ್ಮೆ ತಾವು ಇತಿಹಾಸ ಪುಸ್ತಕವೊಂದನ್ನು ಬರೆಯುತ್ತಿರುವುದಾಗಿ ಅದಕ್ಕಾಗಿ ಅಭಿನಯದಿಂದ ನಿವೃತ್ತಿ ಹೊಂದುತ್ತಿರುವುದಾಗಿ ತಿಳಿಸಿದರು. 25 ಆಗಸ್ಟ್ 2008ರಂದು, ಅವರ 78ನೆಯ ಜನ್ಮದಿನದಂದು, ಸಹ-ಲೇಖಕ ಮುರ್ರೇ ಗ್ರಿಗರ್ ಜೊತೆಗೂಡಿ ಬರೆದ ತಮ್ಮ ಜೀವನಚರಿಗ್ರೆ ಬೀಯಿಂಗ್ ಎ ಸ್ಕಾಟ್ ಅನ್ನು ಹೊರತಂದರು.

ಸಲಾಡಿನ್ ಮತ್ತು ಕ್ರುಸೇಡ್ಸ್ ಬಗೆಗಿನ $80 ಮಿಲಿಯನ್ ಚಿತ್ರದಲ್ಲಿ ಅಭಿನಯಿಸಬೇಕೆಂದು ಕೊಂಡಿದ್ದರು ಅದು ಜೋರ್ಡನ್‌ನಲ್ಲಿ ಚಿತ್ರೀಕರಣವಾಗಬೇಕಿತ್ತು ಅದಕ್ಕಿಂತ ಮೊದಲೇ 2005 ಅಮ್ಮನ್ ಸ್ಪೋಟದಲ್ಲಿ ನಿರ್ಮಾಪಕ ಮುಸ್ತಾಫ ಅಕ್ಕಡ್ ಅವರು ಕೊಲೆಯಾದರು. 8 ಜೂನ್ 2006ರಂದು ಕಾನರಿಯವರು ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್‌ನಿಂದ ತಮ್ಮ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ಗಳಿಸಿದಾಗ ಅವರು ಮತ್ತೊಮ್ಮೆ ತಾವು ಅಭಿನಯದಿಂದ ನಿವೃತ್ತರಾಗುವುಧಾಗಿ ದೃಢೀಕರಿಸಿದರು. 7 ಜೂನ್ 2007ರಂದು, ನಾಲ್ಕನೆಯ ಇಂಡಿಯಾನಾ ಜೋನ್ಸ್ ಅವರು ಅಭಿನಯಿಸುತ್ತಾರೆಂಬುದನ್ನು ಅಲ್ಲಗಳೆದರು, "ನಿವೃತ್ತಿ ಜೀವನವೂ ಹಾಳು ಹಾಸ್ಯವಾಗಿದೆ" ಎಂದು ಹೇಳಿದರು.[೧೮]

ಕಾನರಿಯವರು ಧ್ವನಿ ನಟನೆಗೆ ಹಿಂತಿರುಗಿದರು, ಅನಿಮೇಟೆಡ್ ಸಣ್ಣ ಚಿತ್ರ ಸರ್ ಬಿಲ್ಲಿ ದ ವೆಟ್‌ ನ ಮುಖ್ಯ ಪಾತ್ರವೊಂದಕ್ಕೆ ತಮ್ಮ ಧ್ವನಿಯನ್ನು ನೀಡಿದರು ,[೧೯] ಹಾಗೂ 2005ರಲ್ಲಿ ತಮ್ಮ ಬಾಂಡ್ ಚಿತ್ರ ಫ್ರಮ್ ರಷಿಯಾ ವಿತ್ ಲವ್‌ ನ ವೀಡಿಯೋ ಗೇಮ್ ಆವೃತ್ತಿಗೆ ಧ್ವನಿಮುದ್ರಣ ಮಾಡಿದರು. ಗೇಮ್ ಡಿಸ್ಕ್‌ನ ಬಗೆಗಿನ ಒಂದು ಸಂದರ್ಶನದಲ್ಲಿ, ಕಾನರಿಯವರು ಗೇಮ್ ನಿರ್ಮಾಪಕರು (EA ಗೇಮ್ಸ್) ತಮ್ಮನ್ನು ಬಾಂಡ್ ಧ್ವನಿಗಾಗಿ ಕೇಳಿದ್ದು ಹಾಗೂ ಅವರೊಡನೆ ಕೆಲಸ ಮಾಡಿದ್ದು ಅವರಿಗೆ ಬಹಳ ಸಂತೋಷ ತಂದಿದೆಯೆಂದು ಹೇಳಿದ್ದಾರೆ ಹಾಗೂ ಮುಂದೆ ಇಂತಹ ಅವಕಾಶಗಳು ಸಿಕ್ಕಲ್ಲಿ ಮತ್ತೆ ಕೆಲಸ ಮಾಡುವ ಆಶಯ ವ್ಯಕ್ತ ಪಡಿಸಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

1962 ರಿಂದ 1973ರ ಸಮಯದಲ್ಲಿ ಕಾನರಿಯವರು ನಟಿ ಡಿಯಾನೆ ಸಿಲೆಂಟೊ ಅವರನ್ನು ವಿವಾಹವಾಗಿದ್ದರು. ಅವರಿಗೊಬ್ಬ ಮಗ ಇದ್ದಾನೆ, ನಟ ಜೇಸನ್ ಕಾನರಿ. ಕಾನರಿ ಒಬ್ಬ ಫ್ರೆಂಚ್ ವರ್ಣ ಚಿತ್ರಗಾರ್ತಿ ಮೈಕೆಲಿನ್ ರೋಖ್‌ಬ್ರೂನ್ (ಹುಟ್ಟಿದ್ದು 1929) ಅವರನ್ನು 1975ರಿಂದ ವಿವಾಹವಾಗಿದ್ದಾರೆ.

ಕಾನರಿ, ಒಬ್ಬ ತೀಕ್ಷ್ಣ ಗಾಲ್ಫರ್, ಫ್ರಾನ್ಸ್‌ನ ದಕ್ಷಿಣದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ (1979 ರಿಂದ) ಡೊಮೈನೆ ಡೆ ಟೆರ್ರೆ ಬ್ಲಾಂಚೆ[೨೦] ಯನ್ನು ಹೊಂದಿದ್ದಾರೆ ಅಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ಒಂದು ಗಲ್ಫ್ ಕೋರ್ಸ್ ನಿರ್ಮಾಣ ಮಾಡಬೇಕೆಂಬ ಕನಸು ಅವರದ್ದಾಗಿದತ್ತು ಆದರೆ ಅವರ ಕನಸು ನನಸಾಗದೆ [೨೧] ಅದನ್ನು ಜರ್ಮನ್ ಬಿಲಿಯನೇರ್ ಡಯಟ್ಮರ್ ಹಾಪ್ಪ್ ಎಂಬುವವರಿಗೆ 1999ರಲ್ಲಿ ಮಾರಾಟ ಮಾಡಿದರು.

ಕಾನರಿಯವರು 2000 ಜುಲೈನಲ್ಲಿ ನೈಟ್‌ಹುಡ್ ಗೌರವಕ್ಕೆ ಪಾತ್ರರಾದರು.[೨೨]

ಸ್ಕಾಟಿಷ್‌ ನ್ಯಾಷನಲ್‌ ಪಾರ್ಟಿ[ಬದಲಾಯಿಸಿ]

ಕಾನರಿಯವರು ಸ್ಕಾಟಿಶ್ ನ್ಯಾಷನಲ್ ಪಾರ್ಟಿಯ ಸದಸ್ಯರಾಗಿದ್ದಾರೆ,[೨೩][೨೪] ಇದು ಒಂದು ಸೆಂಟರ್-ಲೆಫ್ಟ್ ರಾಜಕೀಯ ಪಕ್ಷ ಸ್ಕಾಟಿಶ್ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದೆ, ಮತ್ತು ಅವರು ಪಕ್ಷಕ್ಕೆ ಆರ್ಥಿಕವಾಗಿ ಸಹಾಯ ನೀಡಿದ್ದಾರೆ. 2008ರಲ್ಲಿ, ಕಾನರಿಯವರು ಸ್ಕಾಟಿಶ್ ಸಂಡೇ ಎಕ್ಸ್‌ಪ್ರೆಸ್‌ ನಲ್ಲಿ ಹೀಗೆ ಹೇಳಿದ್ದಾರೆ ಅವರು ಅವರ ಜೀವಮಾನದಲ್ಲಿ ಸ್ಕಾಟ್‌ಲ್ಯಾಂಡ್ ಸ್ವಾತಂತ್ರ್ಯ ಗಳಿಸುತ್ತದೆ ಮತ್ತು ಈ ನಿಟ್ಟಿನಲ್ಲಿ 2007ರ ಸ್ಕಾಟಿಶ್ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಜಯಗಳಿಸಿದ ಮೈನಾರಿಟಿ ಸರ್ಕಾರದಲ್ಲಿ SNP ಯ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ . ಗಡಿ ದಾಟಿ ಬಹಮಸ್‌ನಲ್ಲಿ ವಾಸಿಸುತ್ತಿದ್ದ ಕಾನರಿಯವರು UK ರಾಜಕೀಯದ[ಸೂಕ್ತ ಉಲ್ಲೇಖನ ಬೇಕು] ಬಗ್ಗೆ ಆಗಾಗ್ಗೆ ಮುಚ್ಚುಮರೆಯಿಲ್ಲದೆ ಟೀಕಿಸುತ್ತಲೇ ಬಂದಿದ್ದಾರೆ. SNP ಗಾಗಿ ಸಾವಿರಾರು ಪೌಂಡ್‌ಗಳಷ್ಟು ಹಣವನ್ನು ದಾನ ಮಾಡಿದ್ದರು ಮತ್ತು ಸ್ಕಾಟ್‍ಲ್ಯಾಂಡ್‌ಗೆ ಸ್ವಾತಂತ್ರ್ಯ ಸಿಗುವವರೆಗೂ ತಾವು ಹಿಂದಿರುಗುವುದಿಲ್ಲವೆಂದು ಪ್ರಮಾಣ ಮಾಡಿದ್ದರು.[೨೫] ನೈಟ್‌ಹುಡ್ ಅನ್ನು ಒಪ್ಪಿಕೊಂಡಿದಕ್ಕಾಗಿ 1999ರಲ್ಲಿ ಕಾರ್ಮಿಕ ಸರ್ಕಾರದಿಂದ ಕಪಟನೆಂಬ ಆರೋಪಕ್ಕೆ ಒಳಗಾದರು.[ಸೂಕ್ತ ಉಲ್ಲೇಖನ ಬೇಕು]

ಅವರು SNPಗೆ ನೀಡಿದ ಉತ್ತೇಜನವನ್ನು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಹೀಗೆ ಸ್ಪಷ್ಟಪಡಿಸಿದ್ದಾರೆ:

ಸ್ಕಾಟ್‌ಲ್ಯಾಂಡ್‌ನ ಸ್ವಾತಂತ್ರ್ಯಕ್ಕಾಗಿ ಹಾಗೂ ಸ್ಕಾಟಿಶ್ ನ್ಯಾಷನಲ್ ಪಾರ್ಟಿಗೆ ನೀಡಿದ ಸಹಕಾರದಿಂದಾಗಿ ಅವರಿಗೆ ಸಿಗಬೇಕಾಗಿದ್ದ ನೈಟ್‌ಹುಡ್ ಪ್ರಶಸ್ತಿ ಸಿಗಲು ವರ್ಷಗಳಷ್ಟು ನಿಧಾನವಾಯಿತೆಂಬುದು ಸಾಮಾನ್ಯವಾಗಿ ಎಲ್ಲರೂ ಒಪ್ಪುವಂತಹದ್ದು, ಸ್ಕಾಟ್‌ಲ್ಯಾಂಡ್‌ಗಾಗಿ ಅವರ ಜವಾಬ್ಧಾರಿ ಎಂದಿಗೂ ಅಲ್ಲಾಡಲಿಲ್ಲ. ಯುನೈಟೆಡ್ ಕಿಂಗ್‌ಡಮ್‌ನ ರಾಜಕೀಯವು ಜೇಮ್ಸ್ ಬಾಂಡ್ ಸಂಚುಗಳಿಗಿಂತ ಹೆಚ್ಚಿನ ಕುತೂಹಲಕಾರಿ ಸಂಚುಗಳಿರುವಂತಹದಾಗಿದೆ. ಸ್ಕಾಟ್‍ಲ್ಯಾಂಡ್‌ಗೆ ಇನ್ನೂ ಸ್ವಾತಂತ್ರ್ಯ ಸಿಗದೇ ಇರಬಹುದು, ಆದರೆ ಆಕೆ ಹೊಸ ಪಾರ್ಲಿಮೆಂಟ್ ಅನ್ನು ಹೊಂದುತ್ತಾಳೆ. ಹೊಸ ಸ್ಕಾಟಿಶ್ ಪಾರ್ಲಿಮೆಂಟ್ ರಚಿಸಲು ಹೌದು ಎಂಬ ಮತ ಪಡೆಯಲು ಸ್ಕಾಟಿಶ್ ರೆಫೆರೆಂಡಮ್‌ಗಾಗಿ ಸರ್ ಸೀನ್ ಅವರು ಅಭಿಯಾನ ನಡೆಸಿದರು. ಸ್ಕಾಟಿಶ್ ಪಾರ್ಲಿಮೆಂಟ್ ಬಲಶಾಲಿಯಾಗಿ ಬೆಳೆಯುತ್ತದೆ ಮತ್ತು ಸ್ಕಾಟ್‌ಲ್ಯಾಂಡ್ ಅವರ ಜೀವಮಾನದಲ್ಲಿ ಸ್ವಾತಂತ್ರ್ಯ ಪಡೆದೇ ಪಡೆಯುತ್ತದೆ ಎಂಬ ಬಲವಾದ ನಂಬಿಕೆ ಹೊಂದಿದ್ದಾರೆ.[೨೬]

ಅಪಮಾನಕ್ಕಾಗಿ ದೂಷಣೆಗಳು[ಬದಲಾಯಿಸಿ]

ಡಿಯಾನೆ ಸಿಲೆಂಟೊ 2006ರಲ್ಲಿ ತನ್ನ ಜೀವನಚರಿತ್ರೆ ಮೈ ನೈನ್ ಲೀವ್ಸ್‌ ನಲ್ಲಿ, ಜೊತೆಗೆ ರೇಡಿಯೋ ಸಂದರ್ಶನಗಳಲ್ಲಿ, ಮುದ್ರಣ ಮಾಧ್ಯಮದಲ್ಲಿ ಕಾನರಿಯವರು ಆಕೆಗೆ ಹಲವಾರು ಬಾರಿ ಹೊಡೆದಿರುವುದಾಗಿ ಹೇಳಿಕೊಂಡಿದ್ದಾಳೆ. ಕಾನರಿ ಭಾವೋದ್ವೇಗದಿಂದ ದೂಷಣೆಗಳನ್ನು ತಳ್ಳಿ ಹಾಕಿದ್ದಾರೆ.[೨೭] ಡಿಸೆಂಬರ್ 1987ರ ಬಾರ್ಬರಾ ವಾಲ್ಟರ್ಸ್‌ನೊಂದಿಗಿನ್ ಸಂದರ್ಶನದಲ್ಲಿ, ಒಬ್ಬ ಮಹಿಳೆ ಆಕೆಯ ವಾದವನ್ನು ಒಪ್ಪಿಕೊಂಡಾಗ್ಯೂ ಪುರುಷನನ್ನು ಕೆರಳಿಸುವುದು, ರೇಗಿಸುವುದನ್ನು ಮುಂದುವರೆಸಿದಾಗ, ಒಬ್ಬ ಪುರುಷ ತನ್ನ ಕೈಯಿಂದ ಮಹಿಳೆಗೆ ಹೊಡೆಯುವುದು ಒಪ್ಪಬಹುದಾದದ್ದು ಎಂದು ಹೇಳಿದ್ದಾರೆ.[೨೮] 1965ರಲ್ಲಿ ಥಂಡರ್‌ಬಾಲ್ ಚಿತ್ರೀಕರಣದ ಸಮಯದಲ್ಲಿ ಪ್ಲೇಬಾಯ್ ಮ್ಯಾಗಜೀನ್‍ನೊಂದಿಗಿನ ಸಂದರ್ಶನದಲ್ಲಿ ಮತ್ತೋಮ್ಮೆ ಅದೇ ರೀತಿ ಹೇಳಿದ್ದಾರೆ: " ಒಬ್ಬ ಮಹಿಳೆಯನ್ನು ಹೊಡೆಯುವುದು ತಪ್ಪು ಎಂದು ನಾನೆಂದೂ ಯೋಚಿಸುವುದಿಲ್ಲ ... ಒಬ್ಬ ಮಹಿಳೆ ಕೆಟ್ಟವಳಾಗಿದ್ದಾಗ, ಅಥವಾ ಚಿತ್ತೋನ್ಮಮಾದದ ಲಕ್ಷಣ ಹೊಂದಿದ್ದಾಗ, ಅಥವಾ ಕ್ರೂರ-ಮನಸ್ಸಿನವಳಾಗಿದ್ದಾಗ, ನಾನು ಮಾಡಬಹುದು." 1993ರಲ್ಲಿ, ವ್ಯಾನಿಟಿ ಫೇರ್ ಉಲೇಖಿಸಿದಂತೆ "ಹೊಡೆತ ಬೇಕಾಗಿರುವ" ದಿಟ್ಟವಾಗಿ ಸವಾಲೆಸೆಯುವ ಹೆಂಗಸರಿದ್ದಾರೆ.[೨೯]

ಆರೋಗ್ಯ[ಬದಲಾಯಿಸಿ]

1993ರಲ್ಲಿ, ಕಾನರಿಯವರು ಒಂದು ಗಂಟಲು ಖಾಯಿಲೆಗಾಗಿ ರೇಡಿಯೇಷನ್ ಚಿಕಿತ್ಸೆಗೆ ಒಳಪಡುವುದನ್ನು ಬಯಲುಮಾಡಿರಲಿಲ್ಲ ಮಾಧ್ಯಮಗಳು ನಟರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಧೂಮಪಾನ ಮಾಡುತ್ತಿರುವುದರಿಂದ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ವರದಿ ಮಾಡಿದವು, ಹಾಗೂ ಜಪಾನೀಸ್ ಮತ್ತು ದಕ್ಷಿಣ ಆಫ್ರಿಕಾದ ಕೆಲ ವಾರ್ತಾ ಏಜೆನ್ಸಿಗಳು ಕಾನರಿಯವರು ನಿಧನಹೊಂದಿದರೆಂದು ಘೋಷಿಸಿದವು. ತಕ್ಷಣವೇ ಕಾನರಿಯವರು ಲೇಟ್ ಶೋ ವಿತ್ ಡೇವಿಡ್ ಲೆಟರ್‌ಮನ್‌ ನಲ್ಲಿ ಇದೆಲ್ಲವನ್ನೂ ಅಲ್ಲಗಳೆಯಲು ಕಾಣಿಸಿಕೊಂಡರು. 1995 ಫೆಬ್ರವರಿಯಲ್ಲಿ ಎಂಟರ್ಟೈನ್ಮೆಂಟ್ ವೀಕ್ಲಿ ಜೊತೆ ಸಂದರ್ಶನದಲ್ಲಿ, ಅವರ ಧ್ವನಿತಂತುಗಳಲ್ಲಿರುವ ಗಂಟುಗಳನ್ನು ತೆಗೆಯಲು ರೇಡಿಯೇಷನ್ ಚಿಕಿತ್ಸೆ ಪಡೆದರೆಂದು ಹೇಳಿದರು. ಅವರ ತಂದೆಯವರು ಅತಿಯಾದ ಧೂಮಪಾನ ಮಾಡುತ್ತಿದ್ದು ಅವರು 1972ರಲ್ಲಿ ಗಂಟಲು ಕ್ಯಾನ್ಸರ್‌ನಿಂದ ನಿಧನಹೊಂದಿದರು. 2003ರಲ್ಲಿ, ಅವರು ತಮ್ಮ ಎರಡೂ ಕಣ್ಣುಗಳ ಕ್ಯಾಟರಾಕ್ಟ್‌ಗಳ ಶಸ್ತ್ರಚಿಕಿತ್ಸೆಗೆ ಒಳಗಾದರು. 12 ಮಾರ್ಚ್ 2006ರಂದು, ಅವರು ಜನವರಿಯಲ್ಲಿ ಕಿಡ್ನಿ ಗಡ್ಡೆಯನ್ನು ತೆಗೆಸಿಕೊಳ್ಳಲು ಒಳಗಾದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆಂದು ಪ್ರಕಟಿಸಿದರು. 2008ರಲ್ಲಿ ಗಾಲ್ಫ್ ಆಟವಾಡುತ್ತಿರುವಾಗ ಬಿದ್ದು ಅವರ ಬುಜದ ಮೂಳೆಗೆ ಪೆಟ್ಟಾಗಿತ್ತು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಫೈವ್ ಡೇಸ್ ಒನ್ ಸಮ್ಮರ್ ಡಗ್ಲಸ್ ಮೆರಿಡಿತ್
ರಾಂಗ್ ಈಸ್ ರೈಟ್ ಪ್ಯಾಟ್ರಿಕ್ ಹೇಲ್
1983 ಸೀನ್ ಕಾನರೀಸ್ ಎಡಿನ್‌ಬರ್ಗ್ ತನ್ನದೇ ಪಾತ್ರ (ಸಣ್ಣ ವಿಷಯ)
ನೆವರ್ ಸೇ ನೆವರ್ ಅಗೈನ್ ಜೇಮ್ಸ್ ಬಾಂಡ್
1984 ಸ್ವೋರ್ಡ್ ಆಫ್ ವೇಲಿಯಂಟ್ ದ ಗ್ರೀನ್ ನೈಟ್
1986 ಹೈಲ್ಯಾಂಡರ್ ಜುವಾನ್ ಸಾಂಚೆಝ್ ವಿಲ್ಲಾ-ಲೋಬೋಸ್ ರಮಿರೆಝ್
ದ ನೇಮ್ ಆಫ್ ದ ರೋಸ್ ವಿಲಿಯಮ್ ಆಫ್ ಬಾಸ್ಕೆರ್‌ವಿಲ್ಲೆ ಪ್ರಮುಖ ಪಾತ್ರದ ಉತ್ತಮ ನಟನೆಗಾಗಿ BAFTA ಅವಾರ್ಡ್
1987 ದ ಅನ್‌ಟಚಬಲ್ಸ್ ಜಿಮ್ ಮಾಲೋನ್ ಉತ್ತಮ ಪೋಷಕ ನಟ ಅಕಾಡೆಮಿ ಅವಾರ್ಡ್
ಚಲನಚಿತ್ರ- ಅತ್ಯುತ್ತಮ ಪೋಷಕ ನಟ ಗೋಲ್ಡನ್ ಗ್ಲೋಬ್ ಪ್ರಶಸ್ತಿ‌
ಉತ್ತಮ ಪೋಷಕ ನಟ NBR ಅವಾರ್ಡ್
ಉತ್ತಮ ಪೋಷಕ ನಟ KCFCC ಅವಾರ್ಡ್
| ನಾಮನಿರ್ದೇಶಿತ – BAFTA ಪ್ರಶಸ್ತಿ‌ (ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ)
1988 ದ ಪ್ರಿಸಿಡಿಯೋ Lt. Col. ಅಲನ್ ಕಾಲ್ಡ್‌ವೆಲ್
1989 ಇಂಡಿಯಾನಾ ಜೋನ್ಸ್ ಅಂಡ್ ದ ಲಾಸ್ಟ್ ಕ್ರುಸೇಡ್ ಪ್ರೊಫೆಸರ್ ಹೆನ್ರಿ ಜೋನ್ಸ್ ಸೀನಿಯರ್ ನಾಮನಿರ್ದೇಶಿತ - ಉತ್ತಮ ಪೋಷಕ ನಟ ಗೋಲ್ಡನ್ ಗ್ಲೋಬ್ ಅವಾರ್ಡ್ - ಮೋಶನ್ ಚಿತ್ರ
| ನಾಮನಿರ್ದೇಶಿತ – BAFTA ಪ್ರಶಸ್ತಿ‌ (ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ)
ಫ್ಯಾಮಿಲಿ ಬಿಸಿನೆಸ್ ಜೆಸ್ಸೀ ಮೆಕ್‌ಮುಲ್ಲೆನ್
1990 ದ ಹಂಟ್ ಫಾರ್ ರೆಡ್ ಅಕ್ಟೋಬರ್ ಕ್ಯಾಪ್ಟನ್ ಮಾರ್ಕೊ ರೇಮಿಯಸ್ ನಾಮನಿರ್ದೇಶಿತ - ಪ್ರಮುಖ ಪಾತ್ರದ ಉತ್ತಮ ನಟನೆಗೆ BAFTA ಅವಾರ್ಡ್
ದ ರಷಿಯಾ ಹೌಸ್ ಬಾರ್ಥೊಲೊಮೆವ್ 'ಬಾರ್ಲೆ' ಸ್ಕಾಟ್ ಬ್ಲೇರ್
1991 Highlander II: The Quickening ಜುವಾನ್ ಸ್ಯಾಂಚೆಝ್ ವಿಲ್ಲಾ-ಲೋಬೋಸ್ ರಾಮಿರೆಝ್
Robin Hood: Prince of Thieves ಕಿಂಗ್ ರಿಚರ್ಡ್ I (uncredited cameo)
1992 ಮೆಡಿಸಿನ್ ಮ್ಯಾನ್ Dr. ರಾಬರ್ಟ್ ಕ್ಯಾಂಪ್‌ಬೆಲ್
1993 ರೈಸಿಂಗ್ ಸನ್ Capt. ಜಾನ್ ಕಾನರ್ (ನಿರ್ವಾಹಕ ನಿರ್ಮಾಪಕರು ಕೂಡಾ )
1994 ಎ ಗುಡ್ ಮ್ಯಾನ್ ಇನ್ ಆಫ್ರಿಕಾ Dr. ಅಲೆಕ್ಸ್ ಮುರ್ರೇ
1995 ದ ಥೀಫ್ ಅಂಡ್ ದ ಕಾಬ್ಲರ್ ಟ್ಯಾಕ್ ದ ಕಾಬ್ಲರ್ (ಧ್ವನಿ; ಒರಿಜಿನಲ್ ಆವೃತ್ತಿ; ದೃಢಪಟ್ಟಿಲ್ಲ)
ಜಸ್ಟ್ ಕಾಸ್ ಪಾಲ್ ಆರ್ಮ್‌ಸ್ಟ್ರಾಂಗ್ (ನಿರ್ವಾಹಕ ನಿರ್ಮಾಪಕರು ಕೂಡಾ)
ಫರ್ಸ್ಟ್ ನೈಟ್ ಕಿಂಗ್ ಆರ್ಥರ್
1996 ಡ್ರ್ಯಾಗನ್‌ಹಾರ್ಟ್ ಡ್ರ್ಯಾಕೊ (ಧ್ವನಿ)
ದ ರಾಕ್ Capt. ಜಾನ್ ಪ್ಯಾಟ್ರಿಕ್ ಮೇಸನ್ (Ret.) (ನಿರ್ವಾಹಕ ನಿರ್ಮಾಪಕರು ಕೂಡಾ)
1998 ದ ಅವೆಂಜರ್ಸ್ ಸರ್ ಆಗಸ್ಟ್ ಡೆ ವೈಂಟರ್
ಪ್ಲೇಯಿಂಗ್ ಬೈ ಹಾರ್ಟ್ ಪಾಲ್
1999 ಎಂಟ್ರಾಪ್‌ಮೆಂಟ್ ರಾಬರ್ಟ್ ಮ್ಯಾಕ್ ಡಾಫಲ್ (ನಿರ್ಮಾಪಕರು ಕೂಡಾ)
2000 ಫೈಂಡಿಗ್ ಫಾರೆಸ್ಟರ್ ವಿಲಿಯಮ್ ಫಾರೆಸ್ಟರ್
2003 ದ ಲೀಗ್ ಆಫ್ ಎಕ್ಸ್ಟಾರ್ಡಿನರಿ ಜಂಟಲ್‍ಮ್ಯಾನ್ ಅಲನ್ ಕ್ವಾಟರ್ಮೈನ್ (ಸಹ-ನಿರ್ಮಾಪಕರು ಕೂಡಾ)
2006 ಸರ್ ಬಿಲ್ಲಿ ದ ವೆಟ್ ಸರ್ ಬಿಲ್ಲಿ (ಧ್ವನಿ) ಅನಿಮೇಟೆಡ್ 2008ರ ಬಿಡುಗಡೆ

ವಿಡಿಯೋ ಆಟಗಳು[ಬದಲಾಯಿಸಿ]

ಸೀನ್ ಕಾನರಿಯವರು ತಮ್ಮನ್ನು ಹೋಲುವ ವೀಡಿಯೋ ಗೇಮ್ ಫ್ರಮ್ ರಷಿಯಾ ವಿತ್ ಲವ್‌ ಗಾಗಿ ತಮ್ಮ ದ್ವನಿಯನ್ನು ನೀಡುವ ಕೆಲಸ ಮಾಡಿದ್ದಾರೆ. ಅವರ ಹೋಲಿಕೆಯನ್ನು ಅವರ ಬಿಗ್ ಬಾಸ್‌ನ ಪಾತ್ರದ ರೀತಿಯಲ್ಲಿ ರೂಪಿಸಿದ್ದಾರೆ Metal Gear 2: Solid Snake .

ಆಕರಗಳು[ಬದಲಾಯಿಸಿ]

  1. "Profile: Sean Connery". BBC News Online. 2006-03-12. Retrieved 2007-03-19.
  2. "popculture.com's Oscar Winners Archive". www.popculturemadness.com. Retrieved 2008-05-13.
  3. FindArticles.com
  4. "Official website's entry on 2000 knighthood". www.seanconnery.com. Retrieved 2007-09-29.
  5. "Sean Connery Biography". www.filmreference.com. Retrieved 2007-09-29.
  6. "From the Co-op with love.. the days Sir Sean earned £1 a week". The Scotsman. 2005-11-21. Retrieved 2007-09-29.
  7. http://seanconnery.com/biography/
  8. "Even as an unknown, Sean was still a draw". The Scotsman. 2003-08-22. Retrieved 2007-09-29.
  9. ೯.೦ ೯.೧ ೯.೨ Wills, Dominic. "Sean Connery - Biography". Tiscali. Retrieved September 20, 2009.[ಶಾಶ್ವತವಾಗಿ ಮಡಿದ ಕೊಂಡಿ]
  10. "1953 Mr. Universe - NABBA". Retrieved September 20, 2009.
  11. "NoNo7". Mud & Glory. 2005. Archived from the original on 2007-10-11. Retrieved 2008-05-19. {{cite web}}: Unknown parameter |month= ignored (help)
  12. "That's Hollywood!". Archived from the original on 2007-09-27. Retrieved 2010-03-29.
  13. Wake, Oliver. "Cartier, Rudolph (1904–1994)". Screenonline. Retrieved 2007-02-25.
  14. "Terence Young: James Bond's Creator?". www.hmss.com. Archived from the original on 2010-02-23. Retrieved 2007-09-29.
  15. "Time Bandits Extras". Channel 4. Retrieved February 15, 2009.
  16. http://www.cnn.com/2008/LIVING/worklife/10/20/mf.rejected.movies/index.html
  17. "Never say never, but Connery ends career". The Scotsman. 2005-07-31. Archived from the original on 2007-05-16. Retrieved 2007-09-29.
  18. "Connery bows out of Indiana film". BBC News. 2007-06-08. Retrieved 2007-09-29.
  19. Sir Billi the Vet @ ಐ ಎಮ್ ಡಿ ಬಿ
  20. ಫಿಯರಿಸ್, ಬಿವರ್ಲೆ. "'We half expected someone to tuck us in with a goodnight kiss'". ದ ಅಬ್ಸರ್ವರ್ , 1 ಆಗಸ್ಟ್ 2004. 3 ಸೆಪ್ಟೆಂಬರ್ 2009ರಲ್ಲಿ ಪ್ರವೇಶ ಪಡೆದಿದ್ದು.
  21. "No doubting Thomas" Archived 2011-01-05 ವೇಬ್ಯಾಕ್ ಮೆಷಿನ್ ನಲ್ಲಿ.. ಎಕ್ಸಿಕ್ಯುಟಿವ್ ಗಲ್ಫ್ ಮ್ಯಾಗಜೀನ್ , ಜೂನ್ 26, 2009. 3 ಸೆಪ್ಟೆಂಬರ್ 2009ರಲ್ಲಿ ಪ್ರವೇಶ ಪಡೆದಿದ್ದು.
  22. "Sir Sean's pride at knighthood". BBC News. 5 July 2000.
  23. Seenan, Gerard (1999-04-27). "Connery goes on the SNP offensive". The Guardian. Retrieved 2009-05-22.
  24. Pender, Paul (1999-05-02). "patriotgames". Sunday Herald. Retrieved 2009-05-22.[ಶಾಶ್ವತವಾಗಿ ಮಡಿದ ಕೊಂಡಿ]
  25. ಕಾನರಿ: Scots independence close (24 ಫೆಬ್ರವರಿ 2008)
  26. The Official Website of Sir Sean Connery - Knighthood
  27. MacDonald, Stuart (2005-09-25). "Jealous Connery beat me, says ex-wife". The Scotsman. Retrieved 2007-09-29.
  28. "Barbra Walters interviews Sean Connery on smackin' bitches". YouTube. Retrieved 2007-09-29.
  29. http://www.dailymail.co.uk/news/article-1043053/Sean-Connery-The-story-brilliant-deeply-flawed-man.html

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಶಾನ್ ಕಾನರಿ]]