ವೈಜನಾಥ್ ಪಾಟೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈಜನಾಥ್ ಪಾಟೀಲ್
Vaijanath Patil

ಗುಲ್ಬರ್ಗಾದಿಂದ ವಿಧಾನ ಪರಿಷತ್ ಸದಸ್ಯ[೧]
ಅಧಿಕಾರ ಅವಧಿ
1984 – 1990

ಚಿಂಚೋಳಿ ಕ್ಷೇತ್ರದ ಶಾಸಕ [೨]
ಅಧಿಕಾರ ಅವಧಿ
1994 – 1999

ಚಿಂಚೋಳಿ ಕ್ಷೇತ್ರದ ಶಾಸಕ
ಅಧಿಕಾರ ಅವಧಿ
2004 – 2008
ವೈಯಕ್ತಿಕ ಮಾಹಿತಿ
ಜನನ (೧೯೩೮-೦೭-೨೯)೨೯ ಜುಲೈ ೧೯೩೮
ಹಕ್ಯಾಲಾ, ರಾದ್, ಬೀದರ್ ಜಿಲ್ಲೆ, ಕರ್ನಾಟಕ, ಭಾರತ
ಮರಣ 2 November 2019(2019-11-02) (aged 81)
ರಾಷ್ಟ್ರೀಯತೆ Indian
ರಾಜಕೀಯ ಪಕ್ಷ ಜನತಾದಳ ,ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಭಾರತೀಯ ಜನತಾ ಪಕ್ಷ (2018 - 2019) [೩]

ವಾಸಸ್ಥಾನ ಚಿಂಚೋಲಿ, ಕರ್ನಾಟಕ, ಭಾರತ
ಅಭ್ಯಸಿಸಿದ ವಿದ್ಯಾಪೀಠ ಬಿವಿಬಿ ಪದವಿ ಕಾಲೇಜು ಬೀದರ್ (1964),
ಎಸ್‌ಎಸ್‌ಎಲ್ ಕಾನೂನು ಕಾಲೇಜು ಗುಲ್ಬರ್ಗಾ (1968)

ವೈಜನಾಥ್ ಸಂಗಪ್ಪ ಪಾಟೀಲ್ (29 ಜುಲೈ 1938 - 2 ನವೆಂಬರ್ 2019) ಕರ್ನಾಟಕದ ರಾಜಕಾರಣಿ ಮತ್ತು ಸಮಾಜ ಸೇವಕ[೪]

ಹಿನ್ನಲೆ[ಬದಲಾಯಿಸಿ]

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಪಾಟೀಲ್ 29 ಜುಲೈ 1938 ರಂದು ಕೃಷಿ ಕುಟುಂಬದಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಹಕ್ಯಲಾ ಗ್ರಾಮದಲ್ಲಿ ಜನಿಸಿದರು.ಅವರು ಬಿಎ ಪದವಿಯನ್ನು ಬಿವಿಬಿ ಪದವಿ ಕಾಲೇಜು ಬೀದರ್ ಮತ್ತು ಗುಲ್ಬರ್ಗದ ಎಸ್‌ಎಸ್‌ಎಲ್ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಮುಗಿಸಿದರು.ಅವರ ಸಾಮಾಜಿಕ ಸೇವೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯವು ತನ್ನ 31 ನೇ ವಾರ್ಷಿಕ ಸಮಾವೇಶದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೂಲತಃ ಬೀದರ್ ಜಿಲ್ಲೆಯವರಾದ ವೈಜನಾಥರು ಪತ್ನಿಯ ಊರು ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನೆಲೆಸಿದ್ದರು. ಅಲ್ಲಿಂದಲೇ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದರು.

ಈಗ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ರಾಜ್ಯದ ಅತಿ ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ಪಾಟೀಲರು ಶ್ರಮಿಸಿದ್ದರು. ಈ ಭಾಗದ ಜನರಿಗೆ ಹಲವು ಅನುಕೂಲ ಕಲ್ಪಿಸುವ ಮತ್ತು ಅಲ್ಲಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ 371ಜೆ ವಿಧಿ ಜಾರಿಗೆ 20 ವರ್ಷಗಳಷ್ಟು ಹಿಂದೆಯೇ ಒತ್ತಾಯಿಸಿ, ಹೋರಾಟ ರೂಪಿಸಿದ್ದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾದರೆ ಅಥವಾ ಆಗುತ್ತದೆ ಎಂದು ಅರಿವಾದರೆ ತಕ್ಷಣ ಸರ್ಕಾರದ ಗಮನ ಸೆಳೆಯುತ್ತಿದ್ದರು. ತಮ್ಮ ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಲಿಲ್ಲ ಎನಿಸಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶ್ರೇಯ ಅವರದು.

ರಾಜಕೀಯ[ಬದಲಾಯಿಸಿ]

ಜನತಾ ಪರಿವಾರದಿಂದ ರಾಜಕೀಯ ಪ್ರವೇಶ ಮಾಡಿದ ಪಾಟೀಲ, ನಂತರದಲ್ಲಿ ಕಾಂಗ್ರೆಸ್, ಕೆ.ಜೆ.ಪಿ.ಗೆ ಪಕ್ಷಾಂತರ ಮಾಡಿ, ಕೆಲ ತಿಂಗಳ ಹಿಂದೆ ನಡೆದಿದ್ದ ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.

  • 1984 - ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ತೋಟಗಾರಿಕೆ ಸಚಿವರಾಗಿ ಹಾಗೂ
  • 1994- ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ನಗರಾಭಿವೃದ್ಧಿ ಸಚಿವ
  • 1994 ರಲ್ಲಿ ಜನತಾದಳದಿಂದ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ.
  • 2004 ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಜನತಾದಳದಿಂದ ಶಾಸಕರಾಗಿ ಆಯ್ಕೆ

ನಿಧನ[ಬದಲಾಯಿಸಿ]

ವೈಜನಾಥ ಪಾಟೀಲರು ಬೆಂಗಳೂರಿನ ವೊಕಾರ್ಡ್ ಪೋರ್ಟೀಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೈಜನಾಥ ಪಾಟೀಲರಿಗೆ, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪಾಟೀಲ ನಿಧನರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "About Vaijnath Patil". www. hyderabadkarnataka.org. Archived from the original on 15 ಜನವರಿ 2016. Retrieved 14 May 2016.
  2. "MLA's from chincholi constituency Karnataka". www.elections.in. Archived from the original on 30 ಜೂನ್ 2017. Retrieved 14 May 2016.
  3. "Vaijnath Patil Joins Congress". www.thehindu.com. Retrieved 17 May 2016.
  4. https://www.prajavani.net/stories/stateregional/death-of-vaijnath-patil-chief-minister-and-political-leaders-condolences-678661.html ಮಾಜಿ ಸಚಿವ ವೈಜನಾಥ ಪಾಟೀಲ​​​ ನಿಧನ ; ಹೈ.ಕ. ಜನತೆ ಕಂಬನಿ