ವೇದಾವತಿ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನದಿಗೆ ಅಡ್ಡಲಾಗಿ ಕಟ್ಟಿರುವ ವಾಣಿವಿಲಾಸಸಾಗರ ಜಲಾಶಯ

ವೇದಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಉಗಮಿಸಿ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿದು ತುಂಗಭದ್ರಾ ನದಿಯೊಂದಿಗೆ ಸೇರುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟುವ 'ವೇದಾ' ನದಿಗೆ ಕಡೂರು ಬಳಿಯ ಮದಗದಕೆರೆಯಿಂದ ಹರಿದು ಬರುವ 'ಆವತಿ ಹಳ್ಳ'ವು ಸಂಗಮಿಸುವುದರೊಂದಿಗೆ 'ವೇದಾವತಿ ನದಿ'ಯಾಗಿ ಹರಿದು ಮುಂದೆ ಸಾಗುತ್ತದೆ. ಹಿರಿಯೂರು ಬಳಿಯ ಮಾರಿಕಣಿವೆ ಎಂಬಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಕಟ್ಟಿದ ಮೊದಲ ಅಣೆಕಟ್ಟೆಯಾದ 'ವಾಣಿವಿಲಾಸಸಾಗರ'ವನ್ನು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅಲ್ಲಿಂದ ಮುಂದೆ ಹರಿದು ಆಂದ್ರಪ್ರದೇಶದ ಬಳಿಯಲ್ಲಿ 'ಹಗರಿ ನದಿ'ಯಾಗಿ ಹರಿದು ಮುಂದೆ ತುಂಗಭದ್ರಾ ನದಿಯಲ್ಲಿ ವಿಲೀನವಾಗುತ್ತದೆ. ಅದಕ್ಕೂ ಮೊದಲು 'ಸುವರ್ಣಮುಖಿ' ಎಂಬ ನದಿಯೊಂದು ಈ ನದಿಯೊಂದಿಗೆ ಸಂಗಮಿಸುತ್ತದೆ.

  • ಸುವರ್ಣಮುಖಿ ನದಿ
  • ವೇದಾ ನದಿ
  • ಆವತಿ ನದಿ