ವಿಷಯಕ್ಕೆ ಹೋಗು

ಮಾನವನಲ್ಲಿ ವಿಸರ್ಜನಾ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಸರ್ಜನೆ ವ್ಯವಸ್ಥೆ ಇಂದ ಪುನರ್ನಿರ್ದೇಶಿತ)
ದೇಹದ ಮಧ್ಯಭಾಗದಲ್ಲಿರುವ (ಮುಂಡದಲ್ಲಿರುವ) ಅಂಗಗಳು. (Surface projections of the organs of the trunk)

ಪೀಠಿಕೆ

[ಬದಲಾಯಿಸಿ]
  • ವಿಸರ್ಜನಾ ವ್ಯವಸ್ಥೆಗೆ ಸೇರಿದ ಅಂಗಗಳನ್ನು "ಶುದ್ಧೀಕರಣಾಂಗಗಳು" ಎಂದೂ ಹೇಳುವರು. ವಿಸರ್ಜನಾ ವ್ಯವಸ್ಥೆ ದೇಹದ ಹಾನಿಯನ್ನು ತಡೆಗಟ್ಟಲು ಆಂತರಿಕ ರಾಸಾಯನಿಕ ಸಂತುಲನವನ್ನು ನಿರ್ವಹಿಸಲು ಮತ್ತು, ಒಂದು ಜೀವಿಯ ದೇಹದ ದ್ರವಗಳಿಗೆ ಅತಿಯಾದ, ಅನಗತ್ಯ ವಸ್ತುಗಳನ್ನು ತೆಗೆದುಹಾಕುವ ಒಂದು ವಿಮುಖ ಅಥವಾ ವಿಲೋಮ ಜೈವಿಕ ವ್ಯವಸ್ಥೆ (ಈ ಕ್ರಿಯೆಗೆ ವ್ಯತ್ಯಸ್ಥ ಮರುಹೀರಿಕೆ ಎನ್ನುವರು). ವಿಸರ್ಜನಾ ವ್ಯವಸ್ಥೆಗಳು ದ್ವಂದ್ವ ಕಾರ್ಯವನ್ನು ನಿರ್ವಹಿಸುವುವು. ಮೊದಲನೆಯದು ಚಯಾಪಚಯ (ಜೀರ್ಣ ಕ್ರಿಯೆ ಇತ್ಯಾದಿ) ಕ್ರಿಯೆಯಲ್ಲಿ ದ್ರವ ಮತ್ತು ದೇಹಕ್ಕೆ ಅಗತ್ಯವಾದ ಅನಿಲಗಳನ್ನು ಬಳಸಿಕೊಂಡು ಉಳಿದ ತ್ಯಾಜ್ಯ ಉತ್ಪನ್ನಗಳನ್ನು ನಿರ್ಮೂಲಗೊಳಿಸಲು ಬರಿದು ಮಾಡುವುದು. ಹಾಗೂ ದೇಹದಲ್ಲಿ ಮುರಿದ ಘಟಕಗಳನ್ನು ಕೊರತೆ ಯಾಗುವುದನ್ನು ಸಮತೋಲನಕ್ಕೆ ತರುವುದು. ಮಾನವರಲ್ಲಿ ಮತ್ತು ಇತರ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳಲ್ಲಿ ಈ ವ್ಯವಸ್ಥೆ ಮೂಲಕ ಅವನ್ನು ಹೊರಹಾಕುವುದು, ಮೂತ್ರ ವಿಸರ್ಜನೆ ಹಾಗೂ ಕೆಲವು ಮಟ್ಟಿಗೆ ನಿಶ್ವಾಸದ ಮೂಲಕ,. ಬೆವರಿನ ಮೂಲಕ,ಸಹ ಈ ವಸ್ತುಗಳನ್ನು ಹೊರಹಾಕುವುದು.
  • ನಿರ್ದಿಷ್ಟವಾಗಿ ವಿಸರ್ಜನೆ ಮಾಡುವ ಅಂಗಗಳಿಗೆ ಈ ಪದವನ್ನು ಬಳಸಲಾಗುತ್ತದೆ. ಕಿರಿದಾದ ಅರ್ಥದಲ್ಲಿ, ಪದವನ್ನು ಮೂತ್ರದ ವಿಸರ್ಜನೆಯ ಅಂಗಕ್ಕೆ ಅಂಗರಚನಾಶಾಸ್ತ್ರದಲ್ಲಿ ಬಳಸುವರು. ಹೆಚ್ಚು ಕ್ರಮಬದ್ಧ ವರ್ಗೀಕರಣಗಳಲ್ಲಿ ಇತರೆ ಅಂಗಗಳನ್ನು ಬಳಸುವುದಿಲ್ಲ. ಆದರೆ ಇತರೆ ಕೆಲವು ಅಂಗಗಳನ್ನು ವಿಸರ್ಜನಾ ವ್ಯವಸ್ಥೆಯ ಭಾಗವಾಗಿ ಪರಿಗಣಿಸಲಾಗುತ್ತದೆ., ಮೇಲ್ನೋಟಕ್ಕೆ ವಿಸರ್ಜನೆಗೆ ಮಾತ್ರ ಸಂಬಂಧಿಸಿದ ಹಲವಾರು ಕಾರ್ಯಗಳಲ್ಲಿ ಸಾಮಾನ್ಯವಾಗಿ ಮೂತ್ರ ಪಿಂಡದ ಜೊತೆಗೆ , ಪಿತ್ತಜನಕಾಂಗ, ಪಿತ್ತಕೋಶ , ದೊಡ್ಡ ಕರುಳು, ಚರ್ಮ ಮತ್ತು ಎಕ್ ಕ್ರೈನ್ / ಎಕ್ಸೊಕ್ರೈನ್ ಈ ಅಂಗಗಳು ಪಾಲ್ಗೊಳ್ಳುವುದರಿಂದ ಇವುಗಳನ್ನು ವಿಸರ್ಜನಾ ವ್ಯವಸ್ಥೆಯಲ್ಲಿ ಪರಿಗಣಿಸಲಾಗುತ್ತದೆ.
  • ಅತ್ಯಂತ ಆರೋಗ್ಯಕರ ಅಂಗಗಳ ಚಯಾಪಚಯ ಕ್ರಿಯೆ ಮತ್ತು ಇತರ ತ್ಯಾಜ್ಯಗಳ ಉತ್ಪತ್ತಿ, ವಿಸರ್ಜನೆ ಇಡೀ ಜೀವಿಯ ಆರೋಗ್ಯಕರ ವ್ಯವಸ್ಥೆಯ ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಮೂತ್ರಪಿಂಡಗಳ ವೈಫಲ್ಯ ಗಂಭೀರ ಆರೋಗ್ಯ ಸ್ಥಿತಿಯನ್ನು ಹೊಂದುವುದು. []

ಒಳ ಒಳಗಿನ ರಚನೆ

[ಬದಲಾಯಿಸಿ]
1.ಮೂತ್ರಪಿಂಡಲ್ಲಿ ಪಿರಮಿಡ್ • 2.Interlobular ಶುದ್ಧರಕ್ತದ ಅಪಧಮನಿ • 3.ಮೂತ್ರಪಿಂಡದ ಶುದ್ಧರಕ್ತದ ಅಪಧಮನಿ • 4. ಮೂತ್ರಪಿಂಡ ಅಶುದ್ಧರಕ್ತದ ಅಭಿಧಮನಿ 5. ಮೂತ್ರಪಿಂಡ ಬೀಜದ ಕಣ್ಣು • 6. ಮೂತ್ರಪಿಂಡದ ಕುಹರ • 7. ಮೂತ್ರನಾಳ • • 8. ಮೈನರ್ ಪುಷ್ಪಪಾತ್ರೆ • 9. ಮೂತ್ರಪಿಂಡ (ಕ್ಯಾಪ್ಸುಲ್) ನಾಳಗೊಂಡೆ• 10. ಕೆಳಮಟ್ಟದ ಮೂತ್ರಪಿಂಡಗಳ ಕ್ಯಾಪ್ಸುಲ್ 11. ಸೊಂಟದ ಸುಪೀರಿಯರ್ ಮೂತ್ರಪಿಂಡಗಳ ಕ್ಯಾಪ್ಸುಲ್ • 12 .ಒಳಸೂಕ್ಷ್ಮ ಅಭಿಧಮನಿ • 13.ಶುದ್ಧೀಕರಣ (ಬೊಮನ್) ಗೊಂಡೆ- ನೆಫ್ರಾನ್ • 14. ಮೂತ್ರಪಿಂಡದ ಸೈನಸ್ (ಟೊಳ್ಳು) • 15. ಮೇಜರ್(ಮುಖ್ಯ) ಪುಷ್ಪಪಾತ್ರೆ • 16. ಮೂತ್ರಪಿಂಡದ ತೊಟ್ಟು • 17. ಮೂತ್ರಪಿಂಡ ಕಾಲಮ್,ನಾಳಗಳ ಸಾಲು (Kidney Structures
ಮೂತ್ರಪಿಂಡ ಪದಾರ್ಥ ಅಥವಾ ಪರೆಂಕಿಮ ವನ್ನು ಎರಡು ಪ್ರಮುಖ ರಚನೆಗಳನ್ನಾಗಿ ವಿಂಗಡಿಸಲಾಗಿದೆ. ಹೊರ ಮೂತ್ರಪಿಂಡದ ಕಾರ್ಟೆಕ್ಸ್ ತೊಗಟೆ-ಕವಚ) ಮತ್ತು ಒಳ ಮೂತ್ರಪಿಂಡಗಳ ಮೆಡುಲಾ (ಮೆದು ತಿರುಳು ಭಾಗ). ಸುಮಾರಾಗಿ ಈ ರಚನೆಗಳು ಎಂಟು 18 ಶಂಖು (ಕೋನ್) ಆಕಾರದ ಮೂತ್ರಪಿಂಡಗಳ ಹಾಲೆಗಳ ಆಕಾರವನ್ನು ಪಡೆದಿವೆ, ಪ್ರತಿಯೊಂದು ಸುತ್ತ ಮೂತ್ರಪಿಂಡದ ಕವಚ (ಕಾರ್ಟೆಕ್ಸ್) ಹೊಂದಿದೆ, ಅದು ಮೂತ್ರಪಿಂಡಗಳ ಪಿರಮಿಡ್ ಎಂಬ ಮೆಡುಲಾ.ವನ್ನು ಆವರಿಸಿಕೊಂಡಿದೆ.((of Malpighi).
  • ಮೂತ್ರಪಿಂಡಗಳ ಪಿರಮಿಡ್ ನಡುವೆ ಕಾರ್ಟೆಕ್ಸ್ ಎಂಬ ಮೂತ್ರಪಿಂಡಗಳ ಸಾಲುಗಳ (ಕಾಲಮ್ಗಳನ್ನು) (ಅಥವಾ ಬರ್ಟಿನ್ ಕಾಲಮ್ಗಳು) ಚಾಚಿಕೊಂಡಿವೆ. ನೆಫ್ರಾನ್ ಗಳು , ಮೂತ್ರಪಿಂಡದ ಮೂತ್ರ ಉತ್ಪಾದಿಸುವ ಕ್ರಿಯಾತ್ಮಕ ರಚನೆಗಳು, ಹಾಗು ಅವು ಮೆಡುಲ್ಲಾ ವನ್ನು ಆವರಿಸಿವೆ. ಒಂದು ನೆಫ್ರಾನ್ ಆರಂಭಿಕ ಸೋಸುವ ಗೊಂಡೆಯು (ಫಿಲ್ಟರಿಂಗ್ ಭಾಗವನ್ನು) ಕಾರ್ಟೆಕ್ಸ್ ನಲ್ಲಿ ಇದೆ. ಮೂತ್ರಪಿಂಡಗಳ ಟ್ಯುಬೂಳ್ಯುಗಳು. (ಮೂತ್ರಪಿಂಡಗಳ ನಾಳಿಕೆಯು) ಆಳವಾದ ಈ ಪಿರಮಿಡ್ ಮಜ್ಜೆಯ ಒಳಗೆ ಕವಚದಿಂದ ನುಸುಳಿ ಹೊರಡುತ್ತದೆ. ಮೂತ್ರಪಿಂಡಗಳ ಕವಚದ ಭಾಗ, ಮಜ್ಜೆಯ ರೇ (ತಂತು) ಒಂದು ಮೂತ್ರ ಸಂಗ್ರಹಣಾ ನಾಳಗಳ ಗುಚ್ಛ ಸಂಗ್ರಹವಾಗಿದೆ, ಅವು ಇಲ್ಲಿ ಮೂತ್ರವನ್ನು ಮುಖ್ಯ ನಾಳದ ಒಳಗೆ ಹರಿಸುವುವು.

[]

Gray1121
  • ದೇಹಕ್ಕೆ ಆಹಾರ ಹೇಗೆ ಮುಖ್ಯವೋ ಅದನ್ನು ಬಳಸಿದ ಮೇಲೆ ಉಳಿದ ಕಶ್ಮಲವನ್ನು ಹೊರಹಾಕುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ದೇಹದಲ್ಲಿ ಆ ಕಶ್ಮಲಗಳು ಉಳಿದು ಅವುಗಳು ವಿಷವಸ್ತುಗಾಳಾಗಿ ದೇಹಾರೋಗ್ಯಕ್ಕೆ ಅಪಾಯ ತರಬಹುದು. ಸಾವಿಗೆ ಕಾರಣವಾಗಲೂಬಹುದು. ಹೀಗೆ ಕಶ್ಮಲಗಳನ್ನು ನಿವಾರಿಸುವ ಅಂಗಗಳು ಅನೇಕವಿವೆ.
  • ಅದಲ್ಲದೆ ದೇಹದಲ್ಲಿರುವ ದ್ರವ್ಯಗಳ ಸಮತೋಲನವನ್ನು ಕಾಪಾಡುವ ವ್ಯವಸ್ಥೆಯೂ ಮುಖ್ಯ. ಉದಾಹರಣೆಗೆ ನಮ್ಮ ಉಸಿರಾಟ, ಬೆವರುವಿಕೆ ಮೊದಲಾದ ಕ್ರಿಯೆಗಳಿಂದ ನಮ್ಮ ಬೇಹದ ನೀರು ನಷ್ಟವಾಗುತ್ತಿರುತ್ತದೆ. ಆ ನೀರಿನ ಪ್ರಮಾಣವನ್ನು ನಿಯಂತ್ರಿಸುವ ವ್ಯವಸ್ಥೆ ಬೇಕಾಗುವುದು. ಅದರಂತೆ ಆರೋಗ್ಯವಾಗಿರಲು ದೇಹದ ನೀರಿನಲ್ಲಿರುವ ಅಥವಾ ರಕ್ತದಲ್ಲಿರುವ ಲವಣಗಳ ಪರಿಮಾಣಗಳನ್ನು ನಿಯಂತ್ರಿಸಬೇಕು. ಜೊತೆಯಲ್ಲಿ ದೇಹದ ಶಾಖವನ್ನೂ ಸಹ ನಿಯಂತ್ರಿಸಬೇಕಯೀ ಎಲ್ಲವೂ ಹೆಚ್ಚಾಗಿಯೂ ಇರಬಾರದು, ಕಡಿಮೆಯೂ ಆಗಬಾರದು. ಇಂಥ ನಿಯಂತ್ರಣದ ಎಲ್ಲಾ ಕೆಲಸವನ್ನು ಮೂತ್ರಪಿಂಡಗಳೆಂಬ (ಕಲಿಜಗಳು ಅಥವಾ ಕಿಡ್ನಿಗಳು) ಎರಡು ಪುಟ್ಟ ಅಂಗಗಳು ಸಾಧಿಸುತ್ತವೆ.

ಮೂತ್ರಪಿಂಡಗಳ ಸ್ಥಾನ, ಗಾತ್ರ

[ಬದಲಾಯಿಸಿ]
  • ನಮ್ಮ ಹೊಟ್ಟೆಯೊಳಕ್ಕೆ ಬೆನ್ನಲುಬಿನ ಅಂದರೆ ಕಶೇರುಕದ ಎರಡೂ ಬದಿಯಲ್ಲಿ ಅವರೆ ಬೀಜದ ಆಕಾರದ ಚಿಕ್ಕ ಎರಡು ಕೋಶಗಳಿವೆ. ಅವು ವಪೆಯ ಕೆಳಗೆ 11- 12 ನೇ ಪಕ್ಕೆಲುಬುಗಳ ಕೆಳಗಿದ್ದು ಅವುಗಳ ರಕ್ಷಣೆ ಪಡೆದಿದೆ. ಬಲದ ಕೋಶ ಪಿತ್ತಜನಕಾಂಗದ ಹಿದೆ ಇದೆ, ಎಡದ ಕೋಶ ಗುಲ್ಮದ ಹಿಂದೆ ಇದೆ. ವಯಸ್ಕ ಗಂಡಸಿನ ಒಂದು ಮೂತ್ರಪಿಂಡದ ತೂಕ ಸುಮಾರು 125ರಿಂದ 170 ಗ್ರಾಂ; ಹೆಂಗಸರದು 115 ರಿಂದ 155 ಗ್ರಾಂ. ಅದರ ಉದ್ದ ಎಡದ ಕೋಶ 11.2 ಸೆ. ಮೀ. (4.4ಅಂ.), ಬಲದ್ದು 10.9 ಸೆ,ಮೀ. (4.3) ಸುಮಾರು ನಾಲ್ಕುವರೆ ಅಂಗುಲದ ಹತ್ತಿರ. ಘನ ಗಾತ್ರದಲ್ಲಿ ಬಲದ್ದು 146 ಘ.ಸ.ಮೀ. ಎಡದ್ದು 134ಘ.ಸೆಂ.ಮೀ. ಇದು ಒಬ್ಬ ಡ್ಯಾನಿಷ್ ಡಾಕ್ಟರ್ ಅಳೆದಿದ್ದು.[]

ಮೂತ್ರಪಿಂಡಗಳ ಕೆಲಸ

[ಬದಲಾಯಿಸಿ]
  • ಹೃದಯ ತಳ್ಳುವ ರಕ್ತದ ಸೇ.20ರಷ್ಟು ಅಂಶ ಈ ಕಲಿಜಗಳ ಮೂಲಕ ಹರಿಯುತ್ತಲೇ ಇರುವುದು. ವಿಶೇಷವೆಂದರೆ ದೇಹದ ಯಾವತ್ತೂ ರಕ್ತ ಈ ಮೂತ್ರಪಿಂಡಗಳ ಮೂಲಕ ಪ್ರತಿ ಮೂರು ನಿಮಿಷಗಳಿಗೊಮ್ಮೆ ಹರಿದು ಹೋಗುವುದು. ಈ ಮೂತ್ರಪಿಂಡಗಳು ದೊಡ್ಡವರಲ್ಲಿ ಎರಡೂ ಸೇರಿ 260 ರಿಂದ 300ಗ್ರಾಂ ನಷ್ಟು ತೂಗಬಹುದು. ಈ ಚಿಕ್ಕ ಅವಯುವಗಳ ಮೂಲಕ ಪ್ರತಿದಿನ 150 ರಿಂದ 180 ಲೀಟರ್ ಪ್ರಮಾಣದಷ್ಟು ರಕ್ತ ಸಂಚರಿಸುತ್ತದೆ.
  • ಈ ಮೂತ್ರಪಿಂಡಗಳ ಕೆಲಸ ಕೇವಲ ರಕ್ತದಲ್ಲಿರುವ ಕೊಳೆಯನ್ನು ಮೂತ್ರ ರೂಪದಲ್ಲಿ ವಿಸರ್ಜಿಸುವ ಕೆಲಸವಷ್ಟೇ ಅಲ್ಲ. ಅವು ರಕ್ತಸಂಶೋಧನೆಯ ರಸಾಯನಿಕ ಕರ್ಮಶಾಲೆಗಳೆಂದು ಇಂದು ಅರಿವಿಗೆ ಬಂದಿದೆ. ಅದು ಕೇವಲ ರಕ್ತ ಸೋಸುವ ಕೆಲಸವಲ್ಲದೆ ಅದ್ಭುತ ರಸಾಯನಿಕ ಕ್ರಿಯೆ ನಡೆಸುವುದು.

ರಕ್ತ ಶುದ್ಧಿ ಕ್ರಿಯೆ

[ಬದಲಾಯಿಸಿ]
ನೆಫ್ರಾನ್ ವಿವರಣೆ :: ಮೂತ್ರಪಿಂಡದ ನೆಫ್ರಾನ್. ಲೇಬಲ್ ಭಾಗಗಳು 1. ಗೊಂಡೆ, 2. ಹೊರಗೆ ಒಯ್ಯುವ ಸೂಕ್ಷ್ಮ ಶುದ್ಧರಕ್ತನಾಳ, 3. ಬೌಮನ್ ರ ಕ್ಯಾಪ್ಸುಲ್, 4. ಸಮೀಪದ ಸುರುಳಿಯಾಕಾರದ ನಾಳಿಕೆ, 5. ಕಾರ್ಟಿಕಲ್ ಸಂಗ್ರಹಣಾ ನಾಳ, 6. ಅಂತ್ಯದ ಸುರುಳಿಯಾಕಾರದ ನಾಳಿಕೆಯು, 7. ಹೆನ್ಲೆಯ ಲೂಪ್, 8. ಪ್ಯಾಪಿಲ್ಲರಿ ನಾಳ, 9. ಸೂಕ್ಷ್ಮ ಲೋಮನಾಳಗಳು, 10. ಅರ್ಕುಯೇಟ್ ಆಶುದ್ಧ ಅಭಿಧಮನಿ, 11. . ಅರ್ಕುಯೇಟ್ ಆರ್ಟರಿ (ಶುದ್ಧರಕ್ತ), ಅಪಧಮನಿ, 12. ಒಳಹೋಗುವ (ಶುದ್ಧರಕ್ತ), ಲೋಮನಾಳ arteriole, 13. Juxtaglomerular apparatus. ನಿಯಂತ್ರಕ ಉಪಕರಣ.
  • ಒಂದೊಂದು ಕಲಿಜದಲ್ಲೂ ರಕ್ತಶುದ್ಧಿಯ ಸಲುವಾಗಿ ಲಕ್ಷಗಟ್ಟಲೆ ಬಿಡು ವ್ಯವಸ್ಥೆಗಳಿವೆ. ಮಾನವರಲ್ಲಿ, ಒಂದು ಸಾಮಾನ್ಯ ಮೂತ್ರಪಿಂಡವು 800,000 ದಿಂದ 1.5 ಮಿಲಿಯನ್ (15 ಲಕ್ಷ)ನೆಫ್ರಾನ್ ಹೊಂದಿದೆ.[] ಈ ಒಂದೊಂದೂ ವ್ಯವಸ್ಥೆಯು ಕಶ್ಮಲವನ್ನು ಸೋಸುವಂತೆ ರಕ್ತದಲ್ಲಿನ ನೀರಿನ ಅಂಶವನ್ನು ನಿಯಂತ್ರಿಸುವುದು; ಮತ್ತೂ ಲವಣಗಳ ಪರಿಣಾಮವನ್ನೂ ನಿಯಂತ್ರಿಸುವುದು. ಇಂಥ ಸೋಸುವ ಒಂದೊಂದು ಅಂಗಭಾಗವನ್ನು ಟ್ಯುಬ್ಯೂಲು ಅಥವಾ ನಾಳಿಕೆ ಎಂದು ಕರೆಯುತ್ತಾರೆ.
  • ರಕ್ತದಲ್ಲಿ ನೀರಿನ ಅಂಶವಾಗಲಿ, ಯಾವುದೇ ಲವಣದ ಅಂಶವಾಗಲೀ ನಿಗದಿತ ಮಟ್ಟಂಕ್ಕಿಂತ ಸ್ವಲ್ಪ ಕಡಿಮೆಯಾದರೂ ಹೆಚ್ಚಾದರೂ, ಕೂಡಲೆ ಮೆದುಳಿಗೆ ಇದು ಸಂದೇಶ ಕಳಿಸುವುದು, ತಕ್ಷಣ ಅಲ್ಲಿಂದ ಪಿಟ್ಯುಟರಿ ಮತ್ತು ಅದಕ್ಕೆ ಸಂಬಂಧಪಟ್ಟ ಗ್ರಂಥಿಗಳಿಗೆ ಅಗತ್ಯ ಸೂಚನೆ ಹೋಗುವುದು. ಆಗ ರಕ್ತವನ್ನು ಸಮತೋಲನದಲ್ಲಿಡಲು ಸೂಚನೆಯೊಂದಿಗೆ, ಎಷ್ಟು ಅಗತ್ಯವೋ ಅಷ್ಟು ಪ್ರಮಾಣಬದ್ಧ ಪ್ರೇರಕದ್ರವ್ಯವನ್ನು ಕಲಿಜಗಳಿಗೆ ಕಳಿಸುವುದು; ಈ ಮೂತ್ರಪಿಂಡಗಳು ಅದರ ಆದೇಶಕ್ಕೆ ತಕ್ಕಂತೆ ಲವಣ, ನೀರಿನ ಸಮತೋಲನ ಸರಿಹೋಗುವಂತೆ ಸೋಸುವಿಕೆಯ ಕಾರ್ಯ ಮಾಡುವುದು. ಇದು ಮಾನವನ ಅರಿವಿಗೆ ಬರದೆ ನೆಡೆಯುವ ಅನೈಶ್ಚಿಕ ಅದ್ಭುತ ಕ್ರಿಯೆ.
  • ಇವು ಅತಿ ಸೂಕ್ಷ್ಮವಾದ ನಾಳಿಕೆಗಳು. ಈ ನಾಳಗಳಲ್ಲಿ ಒಂದೊಂದೇ ರಕ್ತಕಣ ಹರಿಯುವಷ್ಟು ದಾರಿಯಿದೆ. ಈ ನಾಳದ ಮೈ ಒಂದೇ ಕಣಗಳ ಪದರಿನಿಂದಾದ ಕವಚ. ಈ ನಾಳದ ಒಂದು ತುದಿ ಕಲಿಜದ ಒಳಮಗ್ಗುಲಲ್ಲಿರುವ ತಟ್ಟೆಯಲ್ಲಿ ಕೊನೆಗೊಂಡು ಅಲ್ಲಿಗೆ ತಾನು ತರುವ ನೀರನ್ನು ಸುರಿಯುತ್ತದೆ. ಇನ್ನೊಂದು ತುದಿ ಮುಂಡಾಸದಂತೆ ಸುರುಳಿಗೊಂಡು, ಒಂದು ಗೊಂಡೆಯಂತಿರುತ್ತದೆ. ಈ ಗೊಂಡೆಯೊಳಗಿನ ನಾಳಗಳ ಎಡೆಯಲ್ಲಿ ಅಸಂಖ್ಯ ಸೂಕ್ಷ್ಮ ರಕ್ತನಾಳಗಳು ಸಂಪರ್ಕ ಪಡೆಯುತ್ತವೆ. ರಕ್ತದ್ರವವು ಸೂಕ್ಷ್ಮ ರಕ್ತನಾಳದ ಗೋಡೆಗಳ ಮೂಲಕ ಟ್ಯುಬ್ಯೂಲಿನ ಗೋಡೆಯನ್ನು ಪ್ರವೇಶಿಸುತ್ತದೆ. ಟ್ಯುಬ್ಯೂಲಿನ ಗೋಡೆಯ ಕಣಗಳು ಜರಡೆಯಂತೆ ರಕ್ತದ್ರವವನ್ನು ಸೋಸುವುದು; ಅದರ ಜೊತೆಯಲ್ಲಿ ಅವೇ ಕಣಗಳು ಆ ಕೆಲಸದ ಜೊತೆಗೆ ಮತ್ತೇನೋ ದ್ರವವನ್ನು ಒಸರುತ್ತವೆ. ಟ್ಯುಬ್ಯೂಲುಗಳಿಗೆ ಹೊರಗಣಿಂದ ರಕ್ತದ್ರವವು ಬರುವಂತೆಯೇ ಒಳಗಿನ ದ್ರಾವಾಂಶವು ಮರಳಿ ರಕ್ತಕ್ಕೆ ಹೋಗುತ್ತದೆ (ಈ ಕ್ರಿಯೆಗೆ ವ್ಯತ್ಯಸ್ಥ ಮರುಹೀರಿಕೆ ಎನ್ನುವರು). ಈ ರೀತಿ ಆಚೀಚೆ ಸರಿಯುವ ರಕ್ತದ್ರದಲ್ಲಿ ಕರಗಿರುವ ಸಕ್ಕರೆ ಲವಣ ಮೊದಲಾದ ಪದಾರ್ಥಗಳನ್ನು ಅದು ನಿಯಂತ್ರಿಸಬಲ್ಲದು.! ನಷ್ಟರಕ್ತಕಣಗಳ ವಸ್ತುಗಳನ್ನೂ ಪಡೆಯಬಲ್ಲದು, ದೇಹಕ್ಕೆ ಬೇಡವಾದ ಕಶ್ಮಲಗಳನ್ನಷ್ಟೇ ಅದು ಹೊರಕ್ಕೆ ಸಾಗಿಸುತ್ತದೆ.
  • ಕಲಿಜದ ಒಂದೊಂದು ಟ್ಯುಬ್ಯೂಲು 1.5 ಅಂಗುಲದಷ್ಟು ಉದ್ದವಿದೆ. ಆದರೆ ಕಲಿಜದಲ್ಲಿರುವ ಯಾವತ್ತೂ ಟ್ಯುಬ್ಯೂಲುಗಳನ್ನು ಕೂಡಿಸಿದರೆ 50 ಮೈಲಿಗಳಷ್ಟು (80ಕಿ.ಮೀ.) ಉದ್ದವಾದ ಒಂದು ನಾಳಿಕೆಯಾಗಬಹುದು. ಅದು ಶೋಧಿಸುವ ರಕ್ತದಲ್ಲಿ, ಅಂದರೆ ಒಂದು ದಿನ ಹರಿಯುವ ದ್ರವದಲ್ಲಿ ಬರಿಯ ಉಪ್ಪೇ ಒಂದು ಕಿಲೋಗ್ರಾಮ್ ನಷ್ಟಿರಬಹುದು. ಇದು ಅಷ್ಟೂ ಮೂತ್ರದ ಮೂಲಕ ನಷ್ಟವಾಗಬಾರದು – ಅದಕ್ಕಾಗಿ ಈ ಮೂತ್ರಪಿಂಡಗಳಲ್ಲಿ ಒಂದು ದಿನದಲ್ಲಿ ಸುಮಾರು 500 ಗ್ರಾಂ ಸೋಡಿಯಂ ಬೈಕಾರ್ಬೊನೇಟ್ ಮತ್ತು 5 ಔನ್ಸಿನಷ್ಟು ಗ್ಲೂಕೊಸು ಶುದ್ಧಿಗೊಳ್ಳುತ್ತವೆ, ಹಾಗೆಯೇ ಟ್ಯುಬ್ಯೂಲುಗಳಿಗೆ ಬಂದ ಅಧಿಕಾಂಶ ನೀರು ಪುನಃ ರಕ್ತಕ್ಕೆ ಸೇರುತ್ತದೆ. ಇಲ್ಲವಾದರೆ ನಮ್ಮದೇಹದಲ್ಲಿ ಸ್ವಲ್ಪವೂ ನೀರು ಉಳಿಯಲಾರದು. ಪಿಟ್ಯುಟರಿ ಗ್ರಂಥಿಯಿಂದ ಬಂದ ಯಾವುದೋ ದ್ರವ್ಯ ಹೀಗೆ ನೀರನ್ನು ಮರಳಿ ಹೀರಲು ಸಹಾಯ ಮಾಡುವುದೆಂಬ ಅನುಮಾನವಿದೆ. ದೇಹದಲ್ಲಿ ನೀರು ಕಡಿಮೆಯಾಯಿತೆಂದರೆ ಅದೇ ಪಿಟ್ಯುಟರಿ ಗ್ರಂಥಿಯಿಂದ ಪ್ರೇರಕದ್ರವ್ಯ ಬಂದು ನೀರು ನಷ್ಟವಾಗಲು ಬಿಡುವುದಿಲ್ಲ. ಬಾಯಾರಿಕೆಯಾದರೂ ಅದು ದೇಹದಲ್ಲಿರುವ ನೀರು ನಷ್ಟವಾಗದಂತೆ ನೋಡಿಕೊಳ್ಳವುದು. ಆದರೆ ಭಯವುಂಟಾದಾಗ ಕಲಿಜಗಳ ಮೇಲೆ ಪರಿಣಾಮವಾಗಿ ಹೆಚ್ಚು ಮೂತ್ರ ಉತ್ಪತ್ತಿಯಾಗುವುದು. ಶೀತ ವಾತಾವರಣದಲ್ಲೂ ಹೆಚ್ಚು ಮೂತ್ರ ಉತ್ಪತ್ತಿಯಾಗುವುದು. ಈ ಮೂತ್ರಪಿಂಡಗಳು ತಮ್ಮ ಶೇ.5ರಷ್ಟು ಕೆಲಸಮಾಡಿದರೂ ಸಾಕಾಗುತ್ತದೆಯೆಂದು, ಡಾ. ಗೋರ್ಡನ್ ಕುಕ್ ಎಂಬಾತ ತಿಳಿಸುತ್ತಾನೆ.[೪]

ಮಾನವನ ದೇಹದಲ್ಲಿ ಯುರಿಯಾ ಉತ್ಪಾದನೆ

[ಬದಲಾಯಿಸಿ]
  • ಮಾನವನು ಸೇವಿಸಿದ ಪ್ರೋಟಿನ್ಗಳು ಸಂರ್ಪೂಣವಾಗಿ ಜೀರ್ಣವಾದಗ ಸರಳ ಕಣಗಳಾದ ಅಮಿನೋ ಆಮ್ಲಗಳಾಗಿ ಪರಿವರ್ತಿಸಲ್ಪಡುತ್ತದೆ ಮತ್ತು ರಕ್ತದಿಂದ ಹೀರಲ್ಪಟ್ಟು ಜೀವಕೋಶಗಳಿಗೆ ಸಾಗಿಸ್ಪಡುತ್ತವೆ.ಕೋಶಗಳು ಅಮೀನೋ ಆಮ್ಲಗಳನ್ನು ಬಳಸಿಕೊಳ್ಳುತ್ತವೆ.ಹೆಚ್ಚಾದ ಅಮೀನೋ ಆಮ್ಲಗಳು ಕೋಶಗಳಲ್ಲಿ ಶೇಖರವಾದರೆ ವಿಷ ವಸ್ತುಗಳಾಗಿ ಪರಿವರ್ತಿಸುತ್ತವೆ.ಆದ್ದರಿಂದ ಅವು ರಕ್ತದ ಮೂಲಕ ಯಕೃತ್ತಿಗೆ ಸಾಗಿಸ್ಪಡುತ್ತವೆ.ಅಲ್ಲಿಯ ಕೋಶಗಳು ಕಲವು ಕಿಣ್ವಗಳ ಮೂಲಕ ಅಮೈನೋ ಆಮ್ಲಗಳನ್ನು ಅಮೋನಿಯವಾಗಿ ಪರಿವರ್ತಿಸುತ್ತದೆ.ಇವು ತಕ್ಷಣ ಕಾರ್ಬನ್ ಡೈ ಆಕ್ಸೇಡ್ ನೊಂದಿಗೆ ಸೇರಿ ಯೂರಿಯಾ ಮತ್ತು ಸ್ವಲ್ಪ ಪ್ರಮಾಣದ ಯೂರಿಕಾಮ್ಲವಾಗುತ್ತದೆ.ಹೀಗೆ ಉತ್ಪತ್ತಿಯಾದ ಯೂರಿಯಾ ಮತ್ತು ಯೂರಿಕಾಮ್ಲಗಳು ರಕ್ತದಿಂದ ಮೂತ್ರ ಜನಕಾಂಗ ಮತ್ತು ಚರ್ಮಕ್ಕೆ ಸಾಗಿಸಲ್ಪಟ್ಟು ವಿಸರ್ಜಿಸಲ್ಪಡುತ್ತದೆ.[]

ಮೂತ್ರ ಸಂಗ್ರಹ ಮತ್ತು ವಿಸರ್ಜನೆ

[ಬದಲಾಯಿಸಿ]
ಮೂತ್ರ ಸಂಗ್ರಹ ಮತ್ತು ವಿಸರ್ಜನಾ ವಬ್ಯವಸ್ಥೆ (Urinary system)
  • ಟ್ಯೂಬ್ಯೂಲಾಗಳಿಂದ ಒಸರರುವ ಮೂತ್ರ ಕಲಿಜಗಳ ಒಳಪಾತ್ರೆಯಲ್ಲಿ ಕಲೆಯುತ್ತದೆ. ಒಂದೊಂದು ಕಲಿಜಗಳಿಂದಲೂ ಸಪುರವಾದ ಒಂದೊಂದು ಸಪುರವಾದ ನಾಳ ಹೊರಟು, ಮೂತ್ರಕೋಶವೆಂಬ ಚೀಲವನ್ನು ಸೇರುತ್ತದೆ. ಈ ಸೂಕ್ಷ್ಮವಾದ್ ನಾಳದಲ್ಲಿರುವ ಉಂಗುರಾಕೃತಿಯ ಸ್ನಾಯುಗಳು ಕ್ರಮಾಗತ ಸಂಕೋಚನ –ವಿಕೋಚನದಿಂದ ಮೂತ್ರವು ಮುಂದುವರಿದು ಮೂತ್ರಾಶಯಕ್ಕಹೋಗಿ ಸಂಗ್ರಹವಾಗುವುದು. ಈ ನಾಳಗಳಲ್ಲಿ ಮೂತ್ರ ಸದಾ ಹರಿಯುವುದಿಲ್ಲ, ಬಿಟ್ಟು ಬಿಟ್ಟು ಹರಿಯುವುದು.
  • ಮೂತ್ರಾಶಯದಲ್ಲಿ ಕಲೆತ ರಕ್ತವು ಮೂತ್ರದ್ವಾರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಆ ಮೂತ್ರಾಶಯದಲ್ಲಿ ಸಾಕಷ್ಟು ಮೂತ್ರ ಸಂಗ್ರಹವಾದಾಗ ಅದರ ಒತ್ತಡದಿಂದ ಅಲ್ಲಿರುವ ಚಾಲಕ ನರಗಳು ಕೋಶ ಕುಗ್ಗುವಂತೆಯೂ ಮತ್ತು ಮೂತ್ರದ್ವಾರದ ಸ್ನಾಯುಗಳು ಹಿಗ್ಗುವಂತೆಯೂ ಮಾಡುವುವು. ಚಿಕ್ಕ ಮಕ್ಕಳಲ್ಲಿ ಮೂತ್ರ ವಿಸರ್ಜನೆ ಅಪ್ರಯತ್ನವಾಗಿ ಪ್ರತಿಫಲನ ಕ್ರಿಯೆಯಿಂದ ನಡೆಯುವುದು. ಮೆದುಳಿನ ಸಂಪರ್ಕವಿಲ್ಲದೆ ಮೂತ್ರಾಶಯದಲ್ಲಿ ಸಾಕಷ್ಟು ಮೂತ್ರ ಸಂಗ್ರಹವಾದೊಡನೆ ಮೆದುಳಿನ ಸಮಪರ್ಕವಿಲ್ಲದೆ ಮೂತ್ರ ತಾನಾಗಿ ಹರಿಯುವುದು. ಮಗು ದೊಡ್ಡದಾದಂತೆ ಬುದ್ಧಿಶಕ್ತಿಯಿಂದ ಮೂತ್ರದ್ವಾರದ ಸ್ನಾಯುಗಳನ್ನು ನಿಯಂತ್ರಿಸಲು ಕಲಿಯುತ್ತದೆ.
  • ಭಯ, ಆತಂಕ, ಅತಿನಗುವಿನ ಸಂದರ್ಭಗಳಲ್ಲಿ ಮೂತ್ರದ್ವಾರದ ಮೇಲೆ ಹತೋಟಿ ತಪ್ಪಿ ತನ್ನಂತೆಯೇ ಮೂತ್ರ ಹರಿಯಬಹುದು.

ಚಿತ್ರದ ವಿವರ

[ಬದಲಾಯಿಸಿ]
  • 1.ಮೂತ್ರದ ವಿಸರ್ಜನಾ ವ್ಯವಸ್ಥೆ:2.ಮೂತ್ರಪಿಂಡಗಳು ಅಥವಾ ಕಲಿಜಗಳು; 3.ಮೂತ್ರಪಿಂಡದ ಕುಹರ; 4.ಮೂತ್ರನಾಳ; 5.ಮೂತ್ರ ಕೋಶ;6.ಮೂತ್ರ ವಿಸರ್ಜನಾ ನಾಳ; 7. (ಮುಂಭಾಗದ ವಿಭಾಗ ಎಡಭಾಗದಲ್ಲಿ)ಅಡ್ರಿನಲ್ ಗ್ರಂಥಿ; 8.ಮೂತ್ರಪಿಂಡದ ಅಪಧಮನಿ ಮತ್ತು 9.ಇನ್‍ಫೀರಿಯರ್ ವಿನಾಕೇವಾ -ಅಭಿಧಮನಿ; 10. ಕೆಳಗಣ ಅಯೋರ್ಟಾ - ಮಹಾಸಿರೆಯ; 11.ಕಿಬ್ಬೊಟ್ಟೆಯ ಮಹಾಪಧಮನಿಯ; 11.ಸಾಮಾನ್ಯ ಇಲಿಯಾಕ್ (Iಟiಚಿಛಿ) ಅಪಧಮನಿ ಮತ್ತು ಅಭಿಧಮನಿ; 12.ಯಕೃತ್ತು (ಲಿವರ್);13.ದೊಡ್ಡ ಕರುಳು;14.ಪೆಲ್ವಿಸ್ - ಸೊಂಟದ ಕುಹರ.[]

ಮೂತ್ರಪಿಂಡಗಳ ಪರಿಚಲನೆಯ ಸಂಕ್ಷಿಪ್ತ ವಿವರಣೆ

[ಬದಲಾಯಿಸಿ]
  • 1.ಮೂತ್ರಪಿಂಡಗಳಿಗೆ ಶುದ್ಧರಕ್ತನಾಳವಾದ ಅಪಧಮನಿಯು, ಎಡ ಮತ್ತು ಬಲ ಮೂತ್ರಪಿಂಡಗಳಿಗೆ ಕಿಬ್ಬೊಟ್ಟೆಯ ಅಯೋರ್ಟಾವಾದ ಮಹಾಪಧಮನಿಯ ಮೂಲಕ ರಕ್ತ ಒದಗಿಸುವುದು.
  • 2.ಮೂತ್ರಪಿಂಡಗಳ ಪರಿಚಲನೆ: ಮಹಾಪಧಮನಿಯ ನೇರವಾಗಿ ಶಾಖೆಗಳಾಗಿ, ಮೂತ್ರಪಿಂಡಗಳು ತಮ್ಮ ಚಿಕ್ಕ ಗಾತ್ರದ ಹೊರತಾಗಿಯೂ, ಹೃದಯದಿಂದ ಹೊಮ್ಮುವ ಒಟ್ಟು ರಕ್ತದ ಸರಿಸುಮಾರು 20% ನಷ್ಟು ಸ್ವೀಕರಿಸುತ್ತದೆ.
  • 3. ಮೂತ್ರಪಿಂಡಗಳ ಅಭಿಧಮನಿಯ ಮೂಲದಿಂದ ಬಂದ ರಕ್ತವು ಲೋಮನಾಳಗಳ ಒಳಗೆ ಹರಿದು ಶುದ್ಧೀಕರಣಗೊಂಡು ಕೆಳಗಿನ ವಿನಾಕೇವ ಮೂಲಕ ರಕ್ತನಾಳದ ಮೂಲಕ ಹೊರ ಚಲಿಸುತ್ತದೆ.
  • 4 ನರಗಳ ಸಂಬಂಧ :ಮೂತ್ರಪಿಂಡ ಮತ್ತು ನರಮಂಡಲವು ಮೂತ್ರಪಿಂಡಗಳ ಪ್ಲೆಕ್ಸಸ್ ಮೂಲಕ ಸಂವಹನ ಹೊದಿವೆ,
  • 5. ಮಾನವರಲ್ಲಿರುವ ಮೂತ್ರಪಿಂಡವು ಮಧ್ಯಂತರ ಮಿಸೋಡರ್ಮ್ ಸಸ್ತನಿಯಿಂದ ಅಭಿವೃದ್ಧಿ ಹೊಂದಿದೆ ಎನ್ನುವರು.
  • 6. ಮೂತ್ರಪಿಂಡಗಳು ಆಸಿಡ್ ಬೇಸ್ ಸಮತೋಲನವನ್ನು, ಎಲೆಕ್ಟ್ರೋಲೈಟ್ ಸಾಂದ್ರತೆಗಳನ್ನು, ಹೊರಗಿನ ದ್ರವ ಪ್ರಮಾಣವನ್ನು , ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವುದು. ಇಡೀ ದೇಹದ ಸಂತುಲನವನ್ನು (ರಸಾಯನಿಕ ಸಮತೋಲನವನ್ನು) ನಿರ್ವಹಿಸುವ ಕಾರ್ಯದಲ್ಲಿ ಭಾಗವಹಿಸುತ್ತದೆ.
  • 7. ಮೂತ್ರಪಿಂಡ, ಒಂದು ದಿನಕ್ಕೆ 180 ಲೀಟರ್‍ವನ್ನು ದ್ರವವನ್ನು (ರಕ್ತ) ಶೋಧಿಸುತ್ತದೆ. ಎಂದರೆ ಅಷ್ಟು (ದೇಹದಲ್ಲಿರುವ ಸುಮಾರು ೪ ರಿಂದ ೫ ಲೀಟರ್) ರಕ್ತ ಪನರಾವರ್ತನೆಯಾಗಿ ಅದರ ಮೂಲಕ ಹರಿಯುತ್ತದೆ. ಈ ಒಂದು ಬೃಹತ್ ಕಾರ್ಯದಲ್ಲಿ ಮರುಹೀರಿಕೆ (ಪುನಃ ಹೀರುವಿಕೆಯ) ಕ್ರಿಯೆಯ ನಂತರ ಸರಿಸುಮಾರು 2 ಲೀಟರ್ ನಷ್ಟು ಮೂತ್ರ ಉತ್ಪಾದನೆ ಮಾಢುವುದು.[]

[]

ಮೂತ್ರಪಿಂಡಗಳ ಮುಖ್ಯ ಕಾರ್ಯಗಳು

[ಬದಲಾಯಿಸಿ]
  • 1.ಅವು (ಮೂತ್ರಪಿಂಡಗಳು) ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಲು, ಮೂತ್ರ ತಯಾರು ಮಾಡಲು ಮತ್ತು ನೀರನ್ನು ಬಿಡುಗಡೆ ಮಾಡಲು, ಅಗತ್ಯ ನೀರನ್ನು ಉಳಿಸಿಕೊಳ್ಳುವ ಸಲುವಾಗಿ ರಕ್ತವನ್ನು ಸೋಯಿಸುವ ಕಾರ್ಯ ಮಾಡುತ್ತವೆ.
  • 2.ಅವು ರಕ್ತದ ಅಯಾನು ಸಾಂದ್ರತೆಯನ್ನು ಮತ್ತು ಆಮ್ಲ ಸ್ಥಿರಸ್ಥಿತಿಯ (ಆಸಿಡ್ ಬೇಸ್) ನಿಯಂತ್ರಿಸಿ ಸಮತೋಲನವನ್ನು ಕಾಪಾಡುವುದು.
  • 3.ಪ್ರತಿ ಮೂತ್ರಪಿಂಡವೂ ಮೂತ್ರನಾಳ (ಯುರೇಟರ್) ಎಂಬ ಕೊಳವೆಯ ಮೂಲಕ ಮೂತ್ರಕೋಶಕ್ಕೆ ಮೂತ್ರವನ್ನು ಪೂರಣ ಮಾಡುವುದು.
  • 4.ಮೂತ್ರಪಿಂಡಗಳು ಆಮ್ಲ ಬೇಸ್‍ನ ಸಂತುಲನವನ್ನು ನಿರ್ವಹಿಸುವುದರ ಜೊತೆಗೆ, ರಕ್ತದಲ್ಲಿ ಎಲೆಕ್ಟ್ರೋಲೈಟ್ಸ್ ಎಂದು ಕರೆಯಲಾಗುವ ಅಯಾನುಗಳ ಸಮತೋಲನವನ್ನು ನಿಯಂತ್ರಿಸುವುದು.
  • 5.ಅವು ತ್ಯಾಜ್ಯ ಉತ್ಪನ್ನಗಳಾದ ಸಾರಜನಕದ ಯೂರಿಯಾ ಮತ್ತು ಅಮೋನಿಯಂನಂಥ, ತ್ಯಾಜ್ಯಗಳನ್ನು ರಕ್ತದಿಂದ ಸೋಸಿ ಹೊರತೆಗೆಯುವುವು ಮತ್ತು ಅವನ್ನು ಮೂತ್ರದಲ್ಲಿ ಸೇರಿಸುವುವು.
  • 6.ಮೂತ್ರಪಿಂಡಗಳು ದೇಹದ ದ್ರವ ಸಮತೋಲನ ಮತ್ತು ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ.
  • 7.ಅವು ನೀರು, ಗ್ಲುಕೋಸ್, ಮತ್ತು ಅಮೈನೋ ಆಮ್ಲಗಳ ಮರುಹೀರಿಕೆ ಹೊಣೆ ನಿರ್ವಹಿಸುವುದು.
  • 8.ಮೂತ್ರಪಿಂಡಗಳು ಕ್ಯಾಸಿಟ್ರಿಯಾಲ್ ಮತ್ತು ಎರಿತ್ರೊಪೊಯಿಟಿನ್ ಸೇರಿದಂತೆ ಕೆಲವು ಹಾರ್ಮೋನ್ಗಳನ್ನು ಸಹ ಉತ್ಪತ್ತಿಮಾಡುತ್ತದೆ. []
  • ೧೦.ಮೂತ್ರ ಪಿಂಡಗಳು ಎರಿತ್ರೊಪೊಯಿಟಿನ್ ಸೇರಿದಂತೆ ವಿವಿಧ, ಹಾರ್ಮೋನುಗಳು, ಮತ್ತು ಕಿಣ್ವಗಳಾದ ರೆನಿನ್ ಗಳನ್ನು ಸ್ರವಿಸುತ್ತವೆ. ಎರಿಥ್ರೋಪೊಯೆಟಿನ್ ಪ್ರೇರಕದ್ರವ್ಯ, ಮೂತ್ರಪಿಂಡಗಳ ರಕ್ತಪರಿಚಲನೆಯಲ್ಲಿರುವ ಹೈಪೊಕ್ಸಿಯಾ (ಅಂಗಾಂಶ - ಜೀವಕಣಗಳ ಮಟ್ಟದಲ್ಲಿ, ಕಡಿಮೆ ಮಟ್ಟದ ಆಮ್ಲಜನಕ) ಪ್ರತಿಕ್ರಿಯೆಯಾಗಿ ಬಿಡುಗಡೆಯಾಗುತ್ತದೆ. ಇದು ಮೂಳೆಯ ಮಜ್ಜೆಯಲ್ಲಿ ಎರಿಥ್ರೋಪೊಯಿಸಸ್ ನ್ನು (ಕೆಂಪು ರಕ್ತ ಕಣಗಳ ಉತ್ಪಾದನೆ ಯನ್ನು) ಪ್ರಚೋದಿಸುತ್ತದೆ. ಜೀವಸತ್ವದ ಸಕ್ರಿಯ ರೂಪದಲ್ಲಿರುವ ಕ್ಯಾಸಿಟ್ರಿಯಾಲ್ ‘ಡಿ’, ಕ್ಯಾಲ್ಸಿಯಂನ್ನು ಕರುಳಿನಲ್ಲಿ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಮತ್ತು ಮೂತ್ರಪಿಂಡದಿಂದ ಫಾಸ್ಫೇಟ್ ಮರುಹೀರಿಕೆ ಉತ್ತೇಜಿಸುತ್ತದೆ. ರೆನಿನ್-ಆಂಜಿಯೋಟೆನ್ಸಿನ್-ಆಲ್ಡೊಸ್ಟ್ರಿರಾನ್ ವ್ಯವಸ್ಥೆಯ ಭಾಗವಾಗಿ, ರೆನಿನ್ ಕಿಣ್ವ ಆಲ್ಡೊಸ್ಟ್ರಿರಾನ್ ಮಟ್ಟವನ್ನು ನಿಯಂತ್ರಣಮಾಡುವಲ್ಲಿ ಭಾಗವಹಿಸುತ್ತದೆ.
  • ಆಲ್ಡೊಸ್ಟಿರಾನ್, ಮುಖ್ಯ ಖನಿಜಾಂಶದಪ್ರೇಕದ್ರವವಾದ ಹಾರ್ಮೋನ್, ಮೂತ್ರಜನಕಾಂಗದ ಕವಚದಲ್ಲಿರುವ ಅಡ್ರೀನಲ್ ಗ್ರಂಥಿಯಲ್ಲಿ ಜೋನಾ ಗ್ಲೋಮೆರುಲೋಸಾವು ನಿರ್ಮಾಣದ ಸ್ಟೀರಾಯ್ಡ್ ಹಾರ್ಮೋನ್.
  • ೧೧.ದೇಹದ ನೀರು ಮತ್ತು ಉಪ್ಪು ಪ್ರಮಾಣದ ಸಮತೋಲನ ಕಾಪಾಡುವುದು. . ಯಾವುದೇ ಪ್ಲಾಸ್ಮಾ ಹೀರುವಿಕೆಯಲ್ಲಿ ಗಮನಾರ್ಹ ಏರಿಕೆ ಕಂಡಲ್ಲಿ ಮಸ್ತಿಷ್ಕನಿಮ್ನಾಂಗ (ಕೆಳಮಿದುಳು)ದ ,ಹಿಂಬಾಗದ ಪಿಟ್ಯುಟರಿ ಗ್ರಂಥಿಗೆ ನೇರವಾಗಿ ಸಂವಹನ (ಸೂಚನೆ ಕೊಡುವುದು.) ಮಾಡುವುದು. ಉಪ್ಪಿನ ಸಾಂದ್ರತೆ ಹೆಚ್ಚಳ ಪತ್ತೆಯಾದಲ್ಲಿ, ಪರಿಣಾಮವಾಗಿ ಗ್ರಂಥಿ ಮೂತ್ರವರ್ಧಕ . (ಎಡಿಎಚ್) ಹಾರ್ಮೋನ್ ಸ್ರವಿಸುತ್ತದೆ. ಮೂತ್ರಪಿಂಡವು ಮೂತ್ರ ಸಾಂದ್ರತೆಯಲ್ಲಿನ ಹೆಚ್ಚಳವನ್ನು ನೀರಿನ ಮರುಹೀರಿಕೆಯಿಂದ (ನೀರನ್ನು ರಕ್ತಕ್ಕೆ ಬಿಡುವುದು) ಸರಿಮಾಡುವುದು. ಇದರಿಂದ ಮೂತ್ರದ ಸಾಂದ್ರತೆ ಹೆಚ್ಚಲು ಕಾರಣವಾಗುತ್ತದೆ. ಈ ಎರಡು ಪರಸ್ಪರ ಸಂವಹನ ಅಂಶಗಳು ಪ್ಲಾಸ್ಮಾದ (ಸಂಸ್ಲೇಶಣೆಯನ್ನು) ಓಸ್ಮಾಲಾಲಿಟಿಯನ್ನು ಸಾಮಾನ್ಯ ಮಟ್ಟಕ್ಕೆ oಮರಳಲು ಒಟ್ಟಿಗೆ ಕೆಲಸ ಮಾಡುತ್ತವೆ.[೧೦]
ಕಿಡ್ನಿಯ ನೆಫ್ರಾನ್‍ನ ಲೇಬಲ್ಗಳನ್ನುಳ್ಳ ರೇಖಾಚಿತ್ರ: ಬೌಮನ್‍ರ ಕ್ಯಾಪ್ಸುಲ್, ಪ್ರಾಕ್ಸಿಮಲ್ ಸುರುಳಿಯಾಕಾರದ ನಾಳಿಕೆ, ಹೆನ್ಲೆ ಕುಣಿಕೆ, ಹೆನ್ಲೆ ಕುಣಿಕೆ- ಹೆನ್ಲೆ ಕುಣಿಕೆಯ ಅವರೋಹಣ ಅಂಗ, ಅಂತ್ಯದ ಸುರುಳಿಯಾಕಾರದ ನಾಳಿಕೆಯ ಆರೋಹಣ ಅಂಗ, ಅಂತ್ಯದ ಸುರುಳಿಯಾಕಾರದ ನಾಳಿಕೆಯು ಮತ್ತು ಡಕ್ಟ್ ಸಂಗ್ರಹಿಸುವುದು.(Kidney nephron drawing with labels of the following: the Bowman's capsule, proximal convoluted tubule, loop of Henle, descending limb of loop of Henle, ascending limb of loop of Henle, distal convoluted tubule, and collecting duct.)

ಮುಖ್ಯಾಂಶಗಳು

[ಬದಲಾಯಿಸಿ]
  • ಮೂತ್ರಪಿಂಡಗಳು ಕಡು ಕಂದು ಬಣ್ಣದ ಹುರುಳಿಬೀಜದ ಆಕಾರದ ಸುಮಾರು 4.4 ಅಂಗುಲ ಉದ್ದ ; 2.5 ರಿಂದ 3.5 ಅಂ. ಅಗಲ, ಅಂದಾಜು 140ಗ್ರಾಂ ತೂಕದ ಅಂಗಗಳು.
  • ರೀನಲ್ ಅಪಧಮನಿಯು (ಆಶುದ್ಧ ರಕ್ತನಾಳ) ರಕ್ತವನ್ನು ಒದಗಿಸುವುದು, ಅದು ಅಲ್ಲಿ ಶುದ್ಧವಾಗಿ ಅಭಿಧಮನಿಯ ಮಾಲಕ ಹೊರಬರುವುದು.
  • ಮೂತ್ರಜನಕಾಂಗದ ಕಾರ್ಟೆಕ್ಸ್ ಎಂಬ ಗಡ್ಡೆಯನ್ನು ಸೀಳಿದಾಗ ಹೊರಗಿನ ಕಾರ್ಟೆಕ್ಸ್ ಮತ್ತು ಒಳಗಿನ ಮೆಡುಲ್ಲಾ ಎಂಬ ಎರಡು ಭಾಗಗಳಿವೆ. ಇದರಲ್ಲಿರುವ ಪಿರಮಿಡ್ ಆಕಾರದ ಗೂಡುಗಳಲ್ಲಿ ಮೂತ್ರ ತಯಾರಿಸುವ ಪಾಪಿಲ್ಲಗಳಿವೆ; ಅವು ಪೆಲ್ವಿಸ್ ಎಂಬ ಮೂತ್ರಸಂಗ್ರಹ ಕೋಶಗಳಿಗೆ ಚಾಚಿವೆ.
  • ಈ ಗೂಡುಗಳಿಲ್ಲಿರುವ ನೆಪ್ರಾನ್ ಎಂಬ ಬ್ರೌಮನ್ನನ ಗೊಂಡೆಯುಳ್ಳ ನಳಿಕೆಗಳಲ್ಲಿ ಅದರ ಪಕ್ಕಕ್ಕಿರುವ ಅತಿ ಸೂಕ್ಷ್ಮ ರಕ್ತನಾಳದಿಂದ ಬೇಡದ ಲವಣ ಮತ್ತು ನೀರನ್ನು ಹೀರುವ ಮೂಲಕ ಮೂತ್ರ ತಯಾರಾಗಿತ್ತದೆ.
  • ಮೂತ್ರ ಸಣ್ಣ ನಾಳಗಳ ಮೂಲಕ ಒಟ್ಟು ಸೇರಿ ಸಂಗ್ರಹ ನಾಳದ ಮೂಲಕ ಮೂತ್ರ ಕೋಶಕ್ಕೆ ತಡೆದು ತಡೆದು ಹೋಗಿ ಸೇರುತ್ತದೆ.
  • ಮೂತ್ರ ಉತ್ಪಾದನೆಯ ಮೂರು ಹಂತಗಳು: ಗ್ಲಾಮರಸ್‍ನ ಗೊಂಡೆಯ ಬಟ್ಟಲಿನಲ್ಲಿ ಸೋಸುವುಕೆ; ಹೀರಿಕೆ ಮತ್ತು ಮರು ಹೀರಿಕೆ; ನೆಫ್ರಾರ್ನ ನಲ್ಲಿ ಸೋಸಿ ಬಂದ ಮೂತ್ರ ನಳಿಕೆಯಲ್ಲಿ ಸ್ರವಿಸಿ ನಾಳಿಕೆಗೆ ಪೂರಣವಾಗುವುದು.
  • ವಿಶೇಷ: ಗ್ಲಾಮರಸ್ (ಸೋಸುಬಟ್ಟಲು) ನಲ್ಲಿ ಒಂದು ನಿಮಿಷಕ್ಕೆ ಸುಮಾರು 125 ಮಿ.ಲೀ.ಗಳಷ್ಟು ರಕ್ತವು ಸೋಸಲ್ಪಡುತ್ತದೆ; ಹಾಗೆಯೇ ಅಗತ್ಯ ವಿರುವಷ್ಟು ಮರುಹೀರಿಕೆಯೂ ಆಗುತ್ತದೆ. ಹೀಗೆ ಒಂದು ದಿನಕ್ಕೆ 1 ರಿಂದ 2 ಲೀಟರ್ ಗಳಷ್ಟು ಮೂತ್ರ ಉತ್ಪಾದನೆ ಆಗುತ್ತದೆ. ಮರು ಹೀರಿಕೆಆಗದಿದ್ದರೆ ರಕ್ತದ ನೀರಿನ ಪ್ರಮಾಣ ಕಡಿಮೆಯಾಗಿ ನಿರ್ಜಲ ಸ್ಥಿತಿಯಿಂದ ಸಾವು ಬರಬಹುದು.
  • ಹೆನ್ಲೆಯ ಕುಣಿಕೆಯಲ್ಲಿ ಅರ್ಧದಷ್ಟ ಮಾತ್ರಾ ಯೂರಿಯಾ ಹೀರಿಕೆ ಆಗುವುದು; ರಕ್ತದ ಪಿ.ಎಚ್ ಪ್ರಮಾಣ (ಸಮತೋಲ) ಕಾಯ್ದುಕೊಳ್ಳಲು ಹೈದ್ರೊಜನ್ ಮತ್ತು ಅಮೋನೊಯಂ ಆಯಾನುಗಳು ಬಿಡುಗಡೆ ಆಗುವುದು. ಇದರಿಂದ ಮೂತ್ರವು ಆಮ್ಲೀಯ ಗೂಣ ಹೊಂದಿದೆ.
  • ಆಯು ಮುಗಿದ ಕೆಂಪು ರಕ್ತಕಣಗಳು ಪಿತ್ತಜನಕಾಂಗ ಮತ್ತು ಗುಲ್ಮದಲ್ಲಿ ಒಡೆದಾಗ ಹಿಮೊಗ್ಲೊಬಿನ್ನಿಂದ ಉತ್ಪತ್ತಿಯಾದ ಯೋರೋಕ್ರೋಮ್ ಮೂತ್ರಕ್ಕೆ ಕಂದು (ಒಣಹುಲ್ಲಿನ) ಬಣ್ಣ ಕೊಡುವುದು.[೧೧]

ಸೋಂಕು

[ಬದಲಾಯಿಸಿ]
  • ಕಲಿಜಗಳಿಗೆ ಸೋಮಕುತಗಲಿದರೆ ಅಥವಾ ಆಹಾರ ದೋಷದಿಂದ ಕಲಿಜಗಳ ಆರೋಗ್ಯ ಕೆಟ್ಟರೆ ದೆಃದಲ್ಲಿ ವಿಷವಸ್ತುಗಳು ವಿಸರ್ಜನೆಯಾಗದೆ ಅರೋಗ್ಯಕೆಟ್ಟು ಸಾವನ್ನು ತರಬಹುದು. ಸೂಕ್ತಸಮಯದಲ್ಲಿ ತಜ್ಞವೈದರ ಸಲಹೆ ಪಡೆದು ಚಿಕಿತ್ಸೆ ಮಾಡಿಕೊಳ್ಳ ಬೇಕು. [೧೨]
ಚರ್ಮ:ಚಿತ್ರವಿವರ:ಎ ಹೊರಚರ್ಮ;ಬಿ ಒಳಚರ್ಮ;ಸಿ ಸಬ್‍ಕುಟಿಸ್-Subcutis / Hypodermis;ಡಿ ರಕ್ತ ಮತ್ತು ದುಗ್ಧರಸ ನಾಳಗಳು;ಇ ಸ್ಟ್ರಾಟಮ್ Germinativum;;;1.ರೋಮದ ಎಳೆ;Hair Shaft;2.Stratum corneum; 3.Pigment ಲೇಯರ್;4 .Stratum Spinosum; 5.Stratum Basale; 6.Arrector Pili ಸ್ನಾಯು; 7.Sebaceous ಗ್ರಂಥಿ; 8.ಕೇಶ ಕೋಶಕ ಯಾ ರೋಮಕೂಪ; 9.ರೋಮದ ಗಡ್ಡೆ ; ಪಾಪಿಲ್ಲಾ Papilla; 10.ನರತಂತು;ಫೈಬರ್; 11.ಬೆವರು ಗ್ರಂಥಿ; 12.Pacinian ಇಲೆಕ್ಟ್ರಾನು; 13.ಆರ್ಟರಿ -ಶುದ್ಧ ರಕ್ತನಾಳ-Artery; 14.ಮಲಿನ ರಕ್ತನಾಳ-Vein; 15.ಜ್ಞಾನ ನರ ಕುಡಿ(ಸ್ಪರ್ಶ-ಟಚ್); 16.Dermal ಪ್ಯಾಪಿಲ್ಲರಿ; 17.ಬೆವರು ರಂಧ್ರ
  • ಸಸ್ತನಿಗಳ ದೇಹದಲ್ಲಿ ಚರ್ಮವು ಗ್ರಂಥಿಗಳ ಮೂಲಕ ಬೆವರನ್ನು ಹೊರದೂಡುತ್ತದೆ. ಬೆವರು, ಉಪ್ಪಿನ ನೆರವಿನಿಂದ, ಆವಿಯಾಗಿ ಅದು ಬಿಸಿಯಾದ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಉಭಯಚರಗಳ ಶ್ವಾಸಕೋಶಗಳು ತುಂಬಾ ಸರಳ, ಮತ್ತು ಪೊರೆ ಚರ್ಮದವು, ಅದರಿಂದ ಅವುಗಳಲ್ಲಿ ಈ ಅಗತ್ಯ ಕ್ರಮದ ಕೊರತೆ ಇದೆ. ಇತರ ಚತುಷ್ಪಾದಿ ಪ್ರಾಣಿಗಳಲ್ಲಿ. ತೇವ ಆವಿಯಾಗಿ, ಇಂಗಾಲದ ಡೈಆಕ್ಸೈಡ್‍ನ್ನು ರಕ್ತ ದಿಂದ ವಿಮುಕ್ತಿಗೊಳಿಸಲು (ಕಾರ್ಬೋಲಿಕ್ ಆಮ್ಲ ರೂಪದಲ್ಲಿ) ಸಹಾಯ ಮಾಡುವುದು. (ಮುಳುಗಿರುವಾಗ ಯೂರಿಯಾವನ್ನು ಪ್ರಸರಣ ಮೂಲಕ ಹೊರಹಾಕುವುದು.[೧೩]

ಮಾನವನ ಚರ್ಮ

[ಬದಲಾಯಿಸಿ]
  • ಮಾನವನ ಚರ್ಮವು ದೇಹದ ಹೊರ ಆವರಣವನ್ನು ಆವರಿಸಿದೆ. ಮಾನವರಲ್ಲಿ, ಇದು ಜೀವರಕ್ಷಣಾ (ಇಂಟೆಗ್ಯುಮೆಂಟರಿ- integumentary system) ವ್ಯವಸ್ಥೆಯ ದೊಡ್ಡ ಅಂಗವಾಗಿದೆ. ಚರ್ಮವು ಬಾಹ್ಯಕೋಶಸ್ತರೀಯ ಏಳು ಪದರಗಳ ಅಂಗಾಂಶವನ್ನು ಹೊಂದಿದೆ. ಅದು ಮೂಳೆಗಳು, ಅಸ್ಥಿರಜ್ಜುಗಳು ಮತ್ತು ಆಂತರಿಕ ಅಂಗಗಳನ್ನು ಮತ್ತು ಆಧಾರವಾಗಿರುವ ಸ್ನಾಯುಗಳನ್ನು ರಕ್ಷಿಸುವುದು. ಮಾನವನ ಚರ್ಮ ಇತರ ಸಸ್ತನಿಗಳ ಚರ್ಮವನ್ನು ಹೋಲುತ್ತದೆ. ಸುಮಾರಾಗಿ ಎಲ್ಲಾ ಮಾನವರ ಚರ್ಮವೂ ಕೂದಲು ಕಿರುಚೀಲಗಳಿಂದ ತುಂಬಿದ್ದರೂ,, ಬೋಳು ಚರ್ಮವೂ ಕಾಣಿಸಿಕೊಳ್ಳಬಹುದು. ಚರ್ಮದಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಕೂದಲುಳ್ಳ ಚರ್ಮ, ಇನ್ನೊಂದು ರೋಮರಹಿತವ ಚರ್ಮ (ಬೋಳು ಚರ್ಮ). ಪುರುಷರ ಮುಂದೋಳಿನಲ್ಲಿ ಚರ್ಮದ ದಪ್ಪ ಸರಾಸರಿ 1. 3 ಮಿಮೀ ಇದ್ದರೆ ಅದೇ ಸ್ತ್ರೀಯರಲ್ಲಿ 1. 26 ಮಿಮೀ ಇರುವುದು. ಚರ್ಮದ ದಪ್ಪ ದೇಹದ ಬೇರೆ ಬೇರೆ ಭಾಗಗಲ್ಲಿ ಬದಲಾಗುತ್ತದೆ,[೧೪] [೧೫]

ಚರ್ಮದ ಕಾರ್ಯ

[ಬದಲಾಯಿಸಿ]
  • ಚರ್ಮದ ಮುಖ್ಯ ಕಾರ್ಯಗಳು
  • 1) ಶರೀರದ ಒಳಗಿರುವ ಅಂಗಾಂಶಗಳನ್ನು (ಜೀವಕೋಶಗಳನ್ನು) ದೈಹಿಕ ಆಘಾತಗಳಿಂದ ಸೂರ್ಯನಿಂದಬರುವ ನೀಲಾತಿತ/ ಅತಿನೇರಳೆ ಕಿರಣಗಳಿಂದ ರಕ್ಷಿಸುವುದು.
  • 2) ಶಾಖ, ಸ್ಪರ್ಶ, ನೋವುಗಳನ್ನು ಚರ್ಮದ ತಲದಲ್ಲಿರುವ ನರದ ಕುಡಿಗಳ ಮೂಲಕ ಗ್ರಹಿಸುತ್ತದೆ.
  • 3) ಬೆವರು ಗ್ರಂಥಿಗಳ ಸಹಾಯದಿಂದ ಹೆಚ್ಚಾದ ನೀರು, ಯೂರಿಯಾ, ಲವಣಗಳನ್ನು, ಮುಖ್ಯವಾಗಿ ಉಪ್ಪನ್ನು ವಿಸರ್ಜಿಸುತ್ತದೆ. ಹೀಗೆ ವಿಸರ್ಜನಾಂಗದ ಕೆಲಸವನ್ನು ಮಾಡುವುದು.
  • 4) ಬೆವರನ್ನು ಹೊರಹಾಕುವ ಮೂಲಕ ದೇಹದ ಉಷ್ಣಾಂಶವನ್ನು ಒಂದೇ ಸಮನಾಗಿರುವಂತೆ ಮಾಡುತ್ತದೆ,
  • 5)ಚರ್ಮವು ಮನಸ್ಸಿನ ಭಾವನೆಗಳಿಗೆ ಸ್ಪಂದಿಸಬಲ್ಲದು, ಭಯದಿಂದ ಬೆವರುವುದು, ನಾಚಿಕೆಯಿಂದ ಮುಖ ಕೆಂಪಾಗುವುದು. ಅತಿಶೋಕದ ಆಘಾತದಿಂದ ಮುಖ ಕಪ್ಪಾಗಬಹುದು. ಚರ್ಮದಲ್ಲಿ ನಡುಕವುಂಟಾಗಬಹುದು. [೧೬]

ಎಕ್‍ಕ್ರೈನ್ (ಎಕ್ಸೋಕ್ರೈನ್ ಗ್ರಂಥಿ)

[ಬದಲಾಯಿಸಿ]
  • ಎಕ್‍ಕ್ರೈನ್ ಬೆವರಿನ ಗ್ರಂಥಿಗಳು ಒಂದು ಬಗೆಯ ಬಹಿಸ್ಸ್ರಾವ ಗ್ರಂಥಿಗಳು. ಇವು ಒಂದು ವಿಧದ ನಾಳದ ಮೂಲಕ ಒಂದು ಎಪಿತೀಲಿಯಲ್ ಮೇಲ್ಮೈ ಮೇಲೆ ಬೆವರಿನ ಉತ್ಪತ್ತಿ ಮತ್ತು ಆ ಬಗೆಯ ವಸ್ತುಗಳನ್ನು ಸ್ರವಿಸುವ ಗ್ರಂಥಿಗಳು. ಅವರ ರಚನೆ, ಕಾರ್ಯ, ಸ್ರಾವಕ ಉತ್ಪನ್ನ, ವಿಸರ್ಜನೆ, ಅಂಗರಚನಾಶಾಸ್ತ್ರೀಯ ವಿತರಣೆಯ ವಿಧಾನ, ಮತ್ತು ವಿತರಣೆ ವಿವಿಧ ಪ್ರಾಣಿಗಳ ಜಾತಿಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತವೆ. ಬೆವರು ಗ್ರಂಥಿಗಳ ಎರಡು ವಿಧಗಳಿವೆ:
  • ಎಕ್ಕ್ರೈನ್ ಬೆವರು ಗ್ರಂಥಿಗಳು ವಿವಿಧ ಸಾಂದ್ರತೆಯಲ್ಲಿ, ಮಾನವನ ದೇಹದ ಎಲ್ಲಾ ಭಗಗಳಲ್ಲಿ ಹರಡಿಕೊಂಡಿದೆ. ಇದರ ನೀರಿನ ಸಹಿತ ಸ್ರವಿಸುವಿಕೆಯು ದೇಹವನ್ನು ತಂಪಾಗಿಡುವುದು ಒಂದು ಪ್ರಾಥಮಿಕ ಕಾರ್ಯ.
  • ಅಪೊಕ್ರೈನ್ ಬೆವರು ಗ್ರಂಥಿಗಳು ಹೆಚ್ಚಾಗಿ ಬಗಲು ಯಾ ಕಂಕಲು ಮತ್ತು ಗುದದ ಹೊರಭಾಗದ ಪ್ರದೇಶಗಳಲ್ಲಿ ಮಾನವರಲ್ಲಿ ಸೀಮಿತವಾಗಿದೆ. [೧೭]

ಯಕೃತ್ತು ಮತ್ತು ಪಿತ್ತರಸ

[ಬದಲಾಯಿಸಿ]
  • ಪಿತ್ತಜನಕಾಂಗ ಅಥವಾ ಯಕೃತ್ತು ಹೊಟ್ಟೆಯ ಮೇಲಿನ ಬಲಭಾಗದಲ್ಲಿ ವಪೆಯ ಕೆಳಗೆ ಇದೆ. ಪಿತ್ತರಸವನ್ನು ಸ್ರವಿಸುವ ಪಿತ್ತಕೋಶವು (gall bladder) ಯಕೃತ್ತಿನಲ್ಲಿದೆ. ಪಿತ್ತರಸ ಮತ್ತು ಅದನ್ನು ಸುರಿಸುವ ಕೆಲಸಗಳು ಬಹಳ ವಿಶೇಷವಾದವು. ಪಿತ್ತರಸ ಜೀರ್ಣಕ್ಕೆ ಸಹಕಾರಿ ಮಾತ್ರವಲ್ಲ. ಶರೀರದಲ್ಲಿ ನಾಶಗೊಂಡ ಕೆಂಪು ರಕ್ತ ಕಣಗಳು ಅದರ ಮೂಲಕ ನಿವಾರಣೆಗೊಳ್ಳುವುದು. ಪಿತ್ತಕೋಶದಿಂದ ಕರುಳಿಗೆ ಬುರುವ ಪಿತ್ತರಸದಲ್ಲಿ ಈ ಸತ್ತ ರಕ್ತಕಣಗಳು ಇರುವುದರಿಂದ ಅದಕ್ಕೆ ಹಳದಿ ಬಣ್ಣ ಬಂದಿದೆ. ಅದು ಮಲವಿಸರ್ಜನೆಯ ಮೂಲಕ ಹೊರ ಹೋಗುವುದು. ಯಕೃತ್ತಿನಿಂದ ದಿನ ಒಂದಕ್ಕೆ 500 ಘನ ಸೆಂಟಿಮೀಟರಿನಷ್ಟು (ಅರ್ಧ ಲೀಟರ್) ಹಳದಿ ಅಥವಾ ಕಂದುಬಣ್ಣದ ಪಿತ್ತರಸ ಒಸರುತ್ತದೆ. [೧೮]
  • ಯಕೃತ್ತು ನಿರ್ವಿಷೀಕರಣ ಮಾಡುವುದು ಮತ್ತು ಆಹಾರದೊಡನೆ ದೇಹದಲ್ಲಿ ಬಂದು ಸೇರುವ ರಾಸಾಯನಿಕಗಳನ್ನು, ವಿಷವಸ್ತುಗಳನ್ನು ಮತ್ತು ಇತರ ವಿಷಾಣುಗಳನ್ನು ಒಡೆಯುತ್ತವೆ. ಉದಾಹರಣೆಗೆ, ಯಕೃತ್ತು ಅಮೋನಿಯಾವನ್ನು (ಇದು ವಿಷಕಾರಿ) ಯೂರಿಯಾವಾಗಿ ರೂಪಾಂತರ ಮಾಡುವುದು. ಮೂತ್ರಪಿಂಡದಿಂದ ಯೂರಿಯಾವನ್ನು ಮೂತ್ರದ ಮೂಲಕ ಹೊರಹಾಕಲಾಗುತ್ತದೆ. ಯಕೃತ್ತು ಪಿತ್ತರಸ ಉತ್ಪಾದಿಸುತ್ತದೆ. ದೇಹದ ಬಳಕೆಯಾಗದ ಕೊಬ್ಬು ಮತ್ತು ನಿಷ್ಪ್ರಯೋಜಕ ತ್ಯಾಜ್ಯ ಕೊಬ್ಬನ್ನು ಮುರಿಯಲು ಪಿತ್ತರಸವು ಬಳಕೆಯಾಗುತ್ತದೆ.

ಗುಲ್ಮ

[ಬದಲಾಯಿಸಿ]
  • ಗುಲ್ಮವು ಜಠರದ ಎಡಭಾಗದಲ್ಲಿ ಸ್ವಲ್ಪ ಮೇಲೆ ಇದೆ.ಇದು (ಗುಲ್ಮವು) ನಾಶವಾದ ಕೆಂಪು ಮತ್ತು ಬಿಳಿ ಎರಡೂ ರಕ್ತ ಕಣಗಳನ್ನು ಒಡೆಯುತ್ತವೆ. ಇದನ್ನು ಕೆಲವೊಮ್ಮೆ 'ಕೆಂಪು ರಕ್ತ ಕಣಗಳ ಸ್ಮಶಾನ' ಎಂದು ಕರೆಯಲಾಗುತ್ತದೆ. ನಾಶವಾದ ರಕ್ತಕಣಗಳ ಅವಶೇಷ ಜೀರ್ಣಗೊಳಿಸುವಿಕೆಯ ಒಂದು ಉತ್ಪನ್ನ. ಅದನ್ನು ಯಕೃತ್ತಿಗೆ ಕಳುಹಿಸುತ್ತದೆ ಮತ್ತು ಪಿತ್ತರಸದಲ್ಲಿ ಸೇರಿ ಪಿತ್ತಕೋಶದಿಂದ ಸ್ರವಿಸುತ್ತದೆ. ಇದು ಹಳದಿ ಬಣ್ಣದ ಬಿಲಿರುಬಿನ್. ಇದರ ಇನ್ನೊಂದು ಉತ್ಪನ್ನ ಕಬ್ಬಿಣ, ಮೂಳೆಯ ಮಜ್ಜೆಯಲ್ಲಿ ಹೊಸ ರಕ್ತ ಕಣಗಳ ರಚನೆಗೆ ಬಳಸಲಾಗುತ್ತದೆ. ಪಾಶ್ಚಾತ್ಯ ವೈದ್ಯಕೀಯಲ್ಲಿ ಗುಲ್ಮ ಕೇವಲ ದುಗ್ಧನಾಳ ವ್ಯವಸ್ಥೆಗೆ ಸೇರಿದೆ. ಅದರ ಸಂಪೂರ್ಣ ಶ್ರೇಣಿಯ ಪ್ರಮುಖ ಕಾರ್ಯಗಳು ಇನ್ನೂ ತಿಳಿದುಬಂದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.[೧೯]

ದೊಡ್ಡ ಕರಳು

[ಬದಲಾಯಿಸಿ]
  • ಪ್ರಾಯ ಪ್ರಬುದ್ಧರಲ್ಲಿ ದೊಡ್ಡ್ಪಕರುಳು 4-5 ಅಡಿಗಳಷ್ಟು ಉದ್ದವೂ ಎರಡೂವರೆ ಅಂಗುಲ ದಪ್ಪವೂ ಇರುತ್ತದೆ. ಸಣ್ಣಕರುಳಿನಲ್ಲಿರುವಂತೆ ಇದರ ಮೈಯಲ್ಲೂ ಅಲ್ಲಲ್ಲಿ ಮಡಿಕೆಗಳಿವೆ. ಇದರ ಒಳಮೈಯಲ್ಲಿಯೂ ಅಸಂಖ್ಯ ಸೂಕ್ಷ್ಮ ಗ್ರಂಥಿಗಳಿವೆ. ಇಲ್ಲಿಗೆ ಬಂದ ಆಹಾರಕ್ಕೆ ಇವೂ ಕೆಲವು ದ್ರವಗಳನ್ನು ಸೇರಿಸುತ್ತವೆ. ಸಣ್ಣಕರುಳಿನಲ್ಲಿ ನೆಡೆಯುತ್ತಿದ್ದ ಕೆಲಸ ಇಲ್ಲಿಯೂ ಮುಂದುವರಿಯುತ್ತದೆ. ಈ ದೊಡ್ಡಕರುಳು, ಸಣ್ಣಕರುಳು ಅದಕ್ಕೆ ಸೇರುವಲ್ಲಿ ಸ್ವಲ್ಪ ಮೇಲಕ್ಕೆ ಹೋಗಿ, ಆ ಬಳಿಕ ಅಡ್ಡ ಹಾದು, ಅಲ್ಲಿಂದ ಕೆಳಕ್ಕಿಳಿಯುತ್ತದೆ. ಅದರ ತುತ್ತುದಿಯೇ ಕಶ್ಮಲ ವಿಸರ್ಜನೆಯ ಗುದ (ರೆಕ್ಟಮ್-Rectum) ಅಥವಾ ಗುದದ್ವಾರ. ಇಲ್ಲಿಗೆ ಬರುವಾಗಲೇ ಸೇರಿಕೊಂಡಿರುವ ಎಂಜೈಮುಗಳ ದೆಸೆಯಿಂದ ದೊಡ್ಡಕರುಳಿನಲ್ಲಿಯೂ ಪಚನಕ್ರಿಯೆ ಮುಂದುವರಿಯುತ್ತದೆ. ಈ ಪ್ರದೇಶದಲ್ಲಿ ಅಸಂಖ್ಯ ಬೆಕ್ಟೀರಿಯಾಗಳಂತಹ ಅನ್ಯ ಜೀವಿಗಳಿದ್ದು, ಅವೂ ಆಹಾರದಲ್ಲಿನ ಸೆಲ್ಯೂಲೊಸ್ ಪದಾರ್ಥಗಳನ್ನು ಒಡೆದು ಪರಿವರ್ತಿಸುತ್ತವೆ. ಕಟ್ಟ ಕಡೆಗೆ, ಸೇವಿಸಿದ ಆಹಾರದಲ್ಲಿ ಜೀರ್ಣವಾಗದ ಭಾಗ ಗುದದ್ವಾರದ ಮೂಲಕ ಕ್ರಮಾಗತ ಚಲನೆಯ ಮೂಲಕ ವಿಸರ್ಜನೆಗಳ್ಳುವುದು. ವಿಸರ್ಜನೆಗೊಳ್ಳವ ಮಲದಲ್ಲಿ ಬಹಳ ಬೆಕ್ಟೀರಿಯಾಗಳಿರುತ್ತವೆ.

ಶ್ವಾಸಕೋಶ

[ಬದಲಾಯಿಸಿ]
  • ಶ್ವಾಸಕೋಶದ ಮುಖ್ಯಕಾರ್ಯ, ರಕ್ತದಲ್ಲಿರುವ ಇಂಗಾಲಾಮ್ಲವನ್ನು ವಿಸರ್ಜಿಸಿ ಆಮ್ಲಜನಕವನ್ನು ರಕ್ತದಲ್ಲಿ ವಿಲೀನಗೊಳಿಸಿಕೊಳ್ಳುವ ಮೂಲಕ, ಅದನ್ನು ಶುದ್ಧಗೊಳಿಸುವುದು. ಇಲ್ಲಿ ಆಮ್ಲಜನಕ- ಇಂಗಾಲಾಮ್ಲ ವಿನಿಮಯವಾಗುವುದು.
ಸೂಕ್ಷ್ಮ ಉಸಿರು ಕುಳಿಯಲ್ಲಿ (ಅಲ್ವಿಯೊಲಸ್:alveolus), ಅಶುದ್ಧರಕ್ತನಾಳದಲ್ಲಿರುವ ರಕ್ತ ಇಂಗಾಲಾಮ್ಲವನ್ನು ಬಿಡುಗಡೆಮಾಡಿ ಆಮ್ಲಜನಕವನ್ನು ಪಡೆಯುವುದು.
  • ಶ್ವಾಸಕೋಶದ ಎದೆಗೂಡುಗಳು ಪೊರೆ ಚೀಲ ಎಂಬ ಚೀಲದ ಒಳಗಿದೆ. ಉಸಿರಾಟ ಹೆಚ್ಚು ಘರ್ಷಣೆ ಇಲ್ಲದೆ ನಡೆಯುತ್ತದೆ. ಒಳ ಮತ್ತು ಹೊರ ಗೋಡೆಗಳು ಪರಸ್ಪರ ಜಾರಿ ಘರ್ಷಣೆ ಇಲ್ಲದೆ ಉಸಿರಾಟದ ಕ್ರಿಯೆ ನಡೆಯುತ್ತದೆ. ಈ ಚೀಲ ಪ್ರತಿ ಶ್ವಾಸಕೋಶವನ್ನು ಸುತ್ತುವರಿದಿದ್ದು ಶ್ವಾಸಕವಲುಗಳು ಎಂಬ ಭಾಗಗಳಾಗಿ ಪ್ರತಿ ಶ್ವಾಸಕೋಶವನ್ನು ವಿಂಗಡಿಸುತ್ತದೆ. ಬಲ ಶ್ವಾಸಕೋಶ ಮೂರು ಕವಲು ಕೊಳವೆಗಳನ್ನು ಮತ್ತು ಎಡ ಎರಡು ಕವಲುಕೊಳವೆಗಳನ್ನು ಒಳಗೊಂಡಿದೆ. ಮತ್ತಷ್ಟು ಶ್ವಾಸ ಕೊಳವೆಗಳು ಮತ್ತೆ ಕಿರುಕವಲುಗಳಾಗಿ ವಿಂಗಡಿಸುತ್ತವೆ.ಅದರಲ್ಲಿ ಅಶುದ್ಧರಕ್ತನಾಳದಲ್ಲಿರುವ ರಕ್ತವು ಇಂಗಾಲಾಮ್ಲವನ್ನು ಬಿಡುಗಡೆಮಾಡಿ ಆಮ್ಲಜನಕವನ್ನು ಪಡೆಯುವುದು.
ಮಾನವನ ಕೆಂಪು ರಕ್ತಕಣವು ಇಂಗಾಲಾಮ್ಲ ಹೊರಹಾಕಿ ಆಮ್ಲಜನಕ ಪಡೆಯುವ ಬಗೆ: ನಿಜ ಸಮಯ 20 ಸೆಕೆಂಡುಗಳು; ಆಮ್ಲಜನಕ ಪಡೆದಾಗ ರಕ್ತದ ಬಣ್ಣವೂ ಬದಲಾಗಿ ಕೆಂಪು ಬಣ್ಣ ಪರೆಯುವುದು. (20 seconds of cycle).
  • ಈ ಕ್ರಿಯೆ ಕಿರುಉಸಿರುಗುಳಿ (alveolus)ಯಲ್ಲಿ ನಡೆಯುವುದು. ಒಂದು ಕಿರುಉಸಿರುಗುಳಿ (alveolus) ಒಂದು ಟೊಳ್ಳಾದ ಕುಹರದ ರೂಪ ಹೊಂದಿರುವ ಒಂದು ಅಂಗ ರಚನೆ. ಮುಖ್ಯವಾಗಿ ಶ್ವಾಸಕೋಶದಲ್ಲಿ ಕಂಡುಬರುವ, ಶ್ವಾಸಕೋಶದ ಆಲ್ವಿಯೋಲೈ, ಉಸಿರಾಟದ ಶ್ವಾಸನಾಳಗಳ ಸೂಕ್ಷ್ಮ ಕುಳಿಗಳು ಹೊರಚಾಚುವಿಕೆಗಳುಳ್ಳವು; ರಕ್ತ ದಲ್ಲಿರುವ ಅನಿಲ ವಿನಿಮಯದ ಪ್ರಾಥಮಿಕ ತಾಣಗಳು.
  • ಶ್ವಾಸಕೋಶದ ಕವಲುಗಳು ವಿಭಜಿಸುತ್ತಾ ಹೋಗುತ್ತವೆ ಅವು ಸೂಕ್ಷ್ಮ ಆಲ್ವಿಯೋಲೈಗಳಾಗಿ, ಅಲ್ಲಿ ಅನಿಲ ವಿನಿಮಯ ಪ್ರಕ್ರಿಯೆ ನಡೆಯುತ್ತದೆ. ಅಲ್ಲಿ ಗಾಳಿಯು ತಲುಪುವ ತುದಿಯವರೆಗೆ, (ಅತಿ ಸೂಕ್ಷ್ಮ ನಾಳಗಳ ಪ್ರದೇಶ) ಒಟ್ಟಾರೆ, ಶ್ವಾಸಕೋಶದೊಳಗೆ ಗಾಳಿ ಸಂಚಾರ ಮಾರ್ಗ (ಏರ್ವೇಸ್-airways) ಸುಮಾರು 2,400 ಕಿಲೋಮೀಟರ್ ಉದ್ದ (1,500 ಮೈಲಿ ಉದ್ದದ ಗಾಳಿ ದಾರಿ); ಮತ್ತು 300 ರಿಂದ 500 ಮಿಲಿಯನ್ ಕಿರು ಉಸಿರುಕುಳಿಗಳನ್ನು (ಅಲ್ವಿಯೋಲೈಗಳನ್ನು) ಹೊಂದಿದೆ. ಅದರಲ್ಲಿರುವ (ದೇಹದಲ್ಲೆಡೆ ಇರುವ) ರಕ್ತದ ಲೋಮನಾಳಗಳು ಒಂದೊಂದೇ ರಕ್ತಕಣ ಸರಿದು ಹೋಗುವಷ್ಟು ಚಿಕ್ಕ ನಾಳಗಳನ್ನು ಹೊಂದಿರುತ್ತವೆ.
  • ಶ್ವಾಸಕೋಶದ ಒಳಭಾಗದ ಒಟ್ಟು ಮೇಲ್ಮೈ ವಿಸ್ತೀರ್ಣವು ಅಂದಾಜು 50 ರಿಂದ 75 ಚದರ ಮೀಟರ್ (540 - 810 ಚದರ ಅಡಿ) ಒಳಗಿದೆ. ಸರಿಸುಮಾರು ಒಂದು ಟೆನಿಸ್ ಮೈದಾನದ ಪ್ರದೇಶ.[೨೦]
  • ಹೀಗೆ ನಾವು ಸೇವಿಸುವ ವಾಯುವಿನಿಂದ ರಕ್ತವು ಅತಿ ಸೂಕ್ಷ್ಮ ನಾಳಗಳ ಮೂಲಕ ಆಮ್ಲಜನಕವನ್ನು ಹೀರಿ, ಇಂಗಾಲಾಮ್ಲವನ್ನು ಹೊರಗೆಡವುತ್ತದೆ. ನಂತರ ಸೂಕ್ಷ್ಮರಕ್ತನಾಳಗಳು ಉಪನಾಳಗಳಾಗಿ ಕೂಡಿ ಅವು ಮತ್ತೆ ಒಂದುಗೂಡಿ ದೊಡ್ಡ ನಾಳವಾಗಿ ಹೊರಬಿದ್ದು ಹೃದಯದ ಎಡಭಾಗದ ಮೇಲಿನ ಕೋಣೆಯನ್ನು ಎಂದರೆ ಎಡ ಹೃತ್ಕರಣವನ್ನು ಶ್ವಾಸ ಶುದ್ಧರಕ್ತನಾಳಗಳ ಮೂಲಕ ಹೋಗಿ ಸೇರುತ್ತದೆ.[೨೧]

ಉಲ್ಲೇಖ

[ಬದಲಾಯಿಸಿ]
  1. How Your Kidneys Work
  2. "Additional Related Images to:Kidneys Location". Archived from the original on 2013-09-27. Retrieved 2017-03-05.
  3. Kidney dimensions at sonography:
  4. [Guyton, Arthur C.; Hall, John E. (2006). Textbook of Medical Physiology. Philadelphia: Elsevier Saunders. p. 310. ISBN 0-7216-0240-1]
  5. ವಿಜ್ಞಾನ ಭಾಗ ೨;೯ನೇ ತರಗತಿ;೨೦೧೧;ಕರ್ನಾಟಕ ಪುಸ್ತಕ ಸಂಘ,ಬೆಂಗಳೂರು ೮೫;ಪುಟ೬೫
  6. Bladder and Urinary Tract Home
  7. [Walter F. Boron (2004). Medical Physiology: A Cellular And Molecular Approach. Elsevier/Saunders. ISBN 1-4160-2328-3.]
  8. [Emamian SA, Nielsen MB, Pedersen JF, Ytte L (1993). "Kidney dimensions at sonography: correlation with age, sex, and habitus in 665 adult volunteers.". AJR Am J Roentgenol. 160 (1): 83–6. doi:10.2214/ajr.160.1.8416654]
    • 9.ಮೂತ್ರ ಪಿಂಡಗಳು ಋಣಾತ್ಮಕ ಪ್ರತಿಕ್ರಿಯೆ ಮೂಲಕ ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಮಹತ್ವದ ಕಿಣ್ವವಾದ , ರೆನಿನ್‍ನ್ನು ಉತ್ಪತ್ತಿ ಮಾಡುವುದು. How Your Kidneys Work
  9. S.R. Thomas (2005). "Modelling and simulation of the kidney". Journal of Biological Physics and Chemistry. 5: 70–83. doi:10.4024/230503.jbpc.05.02.
  10. ವಿಜ್ಞಾನ ಭಾಗ ΙΙ 2011, 9ನೇ ತರಗತಿ -ಪುಟ 68; ಕರ್ನಾಟಕ ಸರ್ಕಾರ.
  11. [ವಿಜ್ಞಾನ ಪ್ರಪಂಚ ಭಾಗ ೨:ಜೀವ ಜೀವನ: ಡಾ.ಶಿವರಾಮ ಕಾರಂತ;೧೯೬೦: ಹರ್ಷ ಮುದ್ರಣಾಲಯಪುತ್ತೂರು ದ.ಕ.]
  12. [Janis, C.M.; Keller, J.C. (2001). "Modes of ventilation in early tetrapods: Costal aspiration as a key feature of amniotes"(PDF). Acta Palaeontologica Polonica. 46 (2): 137–170. Retrieved 11 May 2012.]
  13. ""Skin care" (analysis), Health-Cares.net, 2007". Archived from the original on 2007-12-12. Retrieved 2017-03-07.
  14. Marks, James G; Miller, Jeffery (2006). Lookingbill and Marks' Principles of Dermatology. (4th ed.)
  15. ವಿಜ್ಞಾನ ಭಾಗ ೨;೯ನೇತರಗತಿ;೨೦೧೧ಕರ್ನಾಟಕ ಪಠ್ಯಪುಸ್ತಕ ಸಂಘ.
  16. Kurosumi, Shibasaki & Ito 1984, p. 255.
  17. ಜೀವ ಜೀವನ ಪುಟ ೧೪೫,೧೪೬,೧೪೭; ಡಾ. ಶಿವರಾಮ ಕಾರಂತ
  18. http://www.anatomyatlases.org/HumanAnatomy/Topography/Spleen.shtml
  19. Robert H. (2000). Lung surfactants: basic science and clinical applications
  20. ವಿಜ್ಞಾನ ಪ್ರಪಂಚ ಭಾಗ ೨;ಜೀವ ಜೀವನ ಲೇಖಕರು:ಡಾ.ಶಿವರಾಮ ಕಾರಂತ.