ಹೆಲಿಯೋಡೋರಸ್ ಗರುಡಗಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಲಿಯೋಡೋರಸ್ ಗರುಡಗಂಬವನ್ನು   ಇಂಡೋ-ಗ್ರೀಕ್  ದೊರೆಯಾದ  [[ಅಂತಲಿಕಿತ |ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್]] ಯ ರಾಯಭಾರಿ  ಹೆಲಿಯೋಡೋರಸ್ ನು ಸ್ಥಾಪಿಸಿದನು.  ಈ ನಾಣ್ಯಗಳಲ್ಲಿ  ಆ ದೊರೆಯ  ಚಿತ್ರ  ಇದೆ.

ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ ಭಾರತ [೧]  ದ ವಿದಿಶಾದ   ಇಂದಿನ   ಬೆಸ್ನಗರದ  ಹತ್ತಿರ ,  ಶುಂಗ ದೊರೆ  ಭಾಗಭದ್ರನ ಆಸ್ಥಾನದಲ್ಲಿನ    ಇಂಡೋ-ಗ್ರೀಕ್   ದೊರೆಯಾದ  ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ ನ  ರಾಯಭಾರಿ    ಹೆಲಿಯೋಡೋರಸ್  ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು ಸಾಂಚಿಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.

ಕಂಬದ ಮೇಲುಗಡೆ ಗರುಡನ ಕೆತ್ತನೆ ಇದ್ದು , ಇದನ್ನು  ಹೆಲಿಯೋಡೋರಸ್ ನು   ದೇವನಾದ ವಾಸುದೇವ ನಿಗೆ  ಅರ್ಪಿಸಿದ್ದಾನೆ . ಇದು  ವಾಸುದೇವ ಮಂದಿರದ ಮುಂದುಗಡೆ ಇದೆ.

ಹೆಲಿಯೋಡೋರಸ್ ಗರುಡಗಂಬ

ಶಾಸನಗಳು[ಬದಲಾಯಿಸಿ]

ಕಂಬದ ಮೇಲೆ ಎರಡು ಶಾಸನಗಳಿವೆ .

ಕಂಬದ ಕೆಳಭಾಗದಲ್ಲಿ  ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ  ಫಲಕದ ಬರಹ

ಮೊದಲ ಬರಹವು  ಬ್ರಾಹ್ಮಿ ಲಿಪಿಯಲ್ಲಿದ್ದು  ಹೆಲಿಯೋಡೋರಸ್ , ಇಂಡೋ-ಗ್ರೀಕ್ ರಾಜ್ಯ , ಮತ್ತು ಶುಂಗ ಸಾಮ್ರಾಜ್ಯದೊಂದಿಗಿನ ಅವನ ಸಂಬಂಧದ  ಕುರಿತಾಗಿದೆ.

" ದೇವದೇವಸ ವಾಸುದೇವಸ ಗರುಡಧ್ವಜೋ ಅಯಂ

ಕರಿತೊ ಹೋಲಿಯೋದರೇಣ ಭಾಗ-
ವತೇನ ದಿಯಸ್ಯ ಪುತ್ರೇಣ ತಾಖಶಿಲಕೇನ
ಯೋನದತೇನ ಆಗತೇನ ಮಹಾರಾಜಸ
ಅಂತಲಿಕಸ ಉಪತಾ ಸಂಕಾಸಂ-ರಣೋ
ಕಾಶೀಪುತ್ರಸ ಭಾಗಭದ್ರಸ ತ್ರಾತಾರಸ
ವಸೇನ ಚತುರ್ದಶೇನ ರಾಜೇನ ವಧಮಾನಸ ''

— ಮೂಲಬರಹ

ತನ್ನ ಆಳಿಕೆಯ ಹದಿನಾಲ್ಕನೇ ವರ್ಷದಲ್ಲಿ ವರ್ಧಮಾನನಾಗಿರುವ ತ್ರಾತಾರನಾದ ಕಾಶೀಪುತ್ರ ಭಾಗಭದ್ರ ರಾಜನೆಡೆಗೆ ಅಂಟಾಲಿಕಿಡಾಸ್ ಮಹಾರಾಜನಿಂದ ಪ್ರೇಷಿತನಾಗಿ ಯವನದೂತನಾಗಿ ಬಂದ, ಡಿಯಾನ್ ಎಂಬವನ ಪುತ್ರನಾದ, ತಕ್ಷಶಿಲೆಯ ನಿವಾಸಿಯಾದ, ಭಾಗವತನಾದ ಹೆಲಿಯೋಡೋರ್ ನಿಂದ ದೇವದೇವನಾದ ವಾಸುದೇವನಿಗೆ ಈ ಗರುಡಧ್ವಜವು ಸ್ಥಾಪಿಸಲ್ಪಟ್ಟಿತು.

ಇಲ್ಲಿ ಸ್ಪಷ್ಟವಾಗಿರದಿದ್ದರೂ ಕೂಡ ಈ ಶಾಸನವು , ಹೆಲಿಯೋಡೋರಸ್ ನು ಒಬ್ಬ ಭಾಗವತ ಅಂದರೆ 'ಭಗವಂತನ ಭಕ್ತ'ನು ಎಂದು ಸೂಚಿಸುತ್ತದೆ.

ಕಂಬದ ಮೇಲಿನ ಎರಡನೇ ಶಾಸನವು ಹೆಲಿಯೋಡೋರಸ್ ನ ನಂಬುಗೆಯ ಧರ್ಮದ ಆಧ್ಯಾತ್ಮಿಕ ತಿರುಳನ್ನು ವಿಸ್ತಾರವಾಗಿ ವಿವರಿಸುತ್ತದೆ.

" ತ್ರೀಣಿ ಅಮೃತಪದಾನಿ (ಸು)ಅನುಸ್ಥಿತಾನಿ

ನಯಂತಿ ಸ್ವಗೋ ಧಮೋ ಅಪ್ರಮದೋ

— ಮೂಲಬರಹ

ದಮ, ತ್ಯಾಗ, ಅಪ್ರಮಾದ - ಈ ಮೂರು ಅಮೃತಪದಗಳು ಅನುಷ್ಠಿತವಾದರೆ - ಅವು (ಅನುಷ್ಠಾನ ಮಾಡಿದವನನ್ನು ) ಸ್ವರ್ಗಕ್ಕೆ ಒಯ್ಯುತ್ತವೆ

ಬ್ರಾಹ್ಮೀ ಲಿಪಿಯ  ಮೊದಲ ಬರಹ. ( ಕ್ರಿ.ಪೂ. ೧೧೦)

ಮಹತ್ವ[ಬದಲಾಯಿಸಿ]

ಹೆಲಿಯೋಡೋರಸ್  ಮತ್ತು  ಸಮಕಾಲೀನ  ಅಗತೋಕ್ಲಸ್  ಇವರುಗಳು ಹಿಂದೂಧರ್ಮ ದ  ವೈಷ್ಣವ ಪಂಥಕ್ಕೆ    ದಾಖಲಾದ ಅತಿಮೊದಲಿನ ಮತಾಂತರಿಗಳು ಎನ್ನಬಹುದು.  ಕೆಲ  ವಿದ್ವಾಂಸರ ಅಬಿಪ್ರಾಯದಂತೆ ಅವನನ್ನು  ಇವತ್ತಿಗೂ ಇರುವ ಶಿಲಾಸ್ತಂಭವೊಂದ ಸ್ಥಾಪಕನಾಗಿರುವನಾದರೂ    ಭಾಗವತ-ಕೃಷ್ಣ ಪಂಥಕ್ಕೆ ಮೊದಲ ಮತಾಂತರಿ ಎನ್ನಲಾಗದು.  ಅವನನ್ನು ರಾಯಭಾರಿಯನ್ನಾಗಿ  ಕಳಿಸಿದ ರಾಜನೂ ಸೇರಿ ಅನೇಕ ಜನರು  ಕೂಡ   ಭಾಗವತ ಸಂಪ್ರದಾಯದ ಅನುಯಾಯಿಗಳೇ.

ಇವನ್ನೂ ನೋಡಿ[ಬದಲಾಯಿಸಿ]

References[ಬದಲಾಯಿಸಿ]