ರವೆ ಉಂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರವೆ ಉಂಡೆ
ರವೆ ಉಂಡೆ
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಕರ್ಣಾಟಕ
ವಿವರಗಳು
ಮುಖ್ಯ ಘಟಕಾಂಶ(ಗಳು)ರವೆ , ಸಕ್ಕರೆ , ಹಾಲು, ದ್ರಾಕ್ಷಿ, ಗೋಡಂಬಿ, ಕೊಬ್ಬರಿ, ಏಲಕ್ಕಿ

ರವೆ ಉಂಡೆ ಇದು ಕರ್ನಾಟಕದ ಒಂದು ಬಗೆಯ ಸಿಹಿ ತಿಂಡಿ. ಇದನ್ನು ಪೂಜೆ ಹಾಗು ಹಬ್ಬಗಳ ಸಮಯದಲ್ಲಿ ಮಕ್ಕಳಿಗೆ ಹಂಚುತ್ತಾರೆ ಮತ್ತು ಹೆಂಗಸರು ಪರಸ್ಪರ ಬಾಗಿನ ಕೊಡುವಾಗ ಬಳೆ ,ಎಲೆ ,ಕುಂಕುಮ ,ಅರಿಶಿಣ ಮತ್ತು ಹೂವಿನೊಂದಿಗೆ ರವೆ ಉಂಡೆಯನ್ನೂ ಕೊಡುವ ಪದ್ಧತಿ ಇದೆ. ರವೆ ಉಂಡೆ ಒಂದು ಬಗೆಯ ಒಣ ತಿಂಡಿಯಾಗಿರುವುದರಿಂದ ವಾರಗಳ ಗಟ್ಟಲೆ ಕೆಡುವುದಿಲ್ಲ, ಹಾಗಾಗಿ ಪ್ರವಾಸಕ್ಕೆ ಹೋಗುವಾಗ ರವೆ ಉಂಡೆಯನ್ನು ತಿನ್ನಲು ಮಾಡಿಕೊಂಡು ಹೋಗುತ್ತಾರೆ. ಇದು ಉಂಡೆಯ ಆಕಾರವಾಗಿರುವುದರಿಂದ ಹಂಚುವುದು ಸುಲಭ.

ಹಬ್ಬಗಳಲ್ಲಿ ರವೆ ಉಂಡೆ[ಬದಲಾಯಿಸಿ]

ರವೆ ಉಂಡೆಯನ್ನು ಹಬ್ಬದ ಸಮಯದಲ್ಲಿ ದೇವರ ನೈವೇದ್ಯಕ್ಕೆ ಮಾಡಿ ಹಂಚುವುದು ಸಂಪ್ರದಾಯ. ಕೆಲ ಹಬ್ಬಗಳಲ್ಲಿ, ವಿಶೇಷವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ರವೆ ಉಂಡೆಯನ್ನು ತಪ್ಪದೆ ಮಾಡುತ್ತರೆ. ನವರಾತ್ರಿ, ಗಣೇಶನ ಹಬ್ಬ ಇತ್ಯಾದಿಗಳಲ್ಲಿ ಹೆಂಗಸರು ಬಾಗಿನದ ರೂಪದಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ.

ಮದುವೆಯ ಸಮಯದಲ್ಲಿ ನವದಂಪತಿಗಳಿಗೆ ಮತ್ತು ಬೀಗರು ಬಾಗಿನವಾಗಿ ಶೇಖರಿಸಿ ಇಟ್ಟು ತೀನ್ನಬಹುದಾದ ತಿಂಡಿಗಳಾದ ಚಕ್ಕುಲಿ, ತೇಂಗೋಳು, ಪುರಿ ಉಂಡೆ,ಅರಳುಂಡೆ, ಪುಳ್ಳಂಗಾಯಿ ಉಂಡೆಗಳೊಂದಿಗೆ, ರವೆ ಉಂಡೆಯನ್ನೂ ಕೊಡುವ ಸಂಪ್ರದಾಯ ಇದೆ.

ಮಾಡುವ ವಿದಾನ[ಬದಲಾಯಿಸಿ]

ರವೆ ಉಂಡೆ ಸುಲಬವಾಗಿ ತಯಾರಿಸಬಹುದಾದ ಒಂದು ಸಿಹಿತಿಂಡಿ.

  • ಮೊದಲು ರವೆಯನ್ನು ಬೆರಳಿನಲ್ಲಿ ಮುಟ್ಟಿದರೆ ಸುಡುವಷ್ಟು ಹದಕ್ಕೆ ಸಮವಾಗಿ ಹುರಿದುಕೊಳ್ಳಬೇಕು.
  • ಒಣದ್ರಾಕ್ಷಿ , ಗೋಡಂಬಿ ಮತ್ತು ಏಲಕ್ಕಿಯನ್ನು ತುಪ್ಪದಲ್ಲಿ ಹದವಾಗಿ ಹುರಿದುಕೊಳ್ಳಬೇಕು.
  • ನಂತರ ಈ ಮಿಶ್ರಣವನ್ನು ಸಕ್ಕರೆ ಮತ್ತು ತುರಿದ ಕೊಬ್ಬರಿ ಜೊತೆಗೆ ಮೊದಲೆ ಹುರಿದುಕೊಂಡಿರುವ ರವೆಯಲ್ಲಿ ಚೆನ್ನಾಗಿ ಬೆರಸಬೀಕು
  • ಒಣ ಉಂಡೆ ಕಟ್ಟಲು ಬೇಕಾದ ಹದಕ್ಕೆ ಕಾಯಿಸಿದ ಹಾಲನ್ನು ಸ್ವಲ್ಪ, ಸ್ವಲ್ಪವಾಗಿ ಹಾಕಿಕೊಂಡು ಉಂಡೆಯನ್ನು ಕಟ್ಟಿ ಮತ್ತೊಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಹೊತ್ತು ಆರಿಸಬೇಕು

ಚಿತ್ರ ಪ್ರದರ್ಶನ[ಬದಲಾಯಿಸಿ]