ಮೆಹ್ಮೂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಹ್ಮೂದ್

'ಮೆಹ್ಮೂದ್ ಆಲಿ',(Hindi: महमूद अली Urdu: محمود علی)

(ಸೆಪ್ಟೆಂಬರ್ ೨೯, ೧೯೩೨ ಜುಲೈ, ೨೩, ೨೦೦೪),

'ಮೆಹ್ಮೂದ್,' ಬೊಂಬಾಯಿನ ಚಲನಚಿತ್ರರಂಗದ ನಟ, ಹಾಗೂ ನೃತ್ಯಪಟು, 'ಮಮ್ತಾಝ್ ಆಲಿ' ಯವರ ೮ ಮಕ್ಕಳಲ್ಲಿ ಒಬ್ಬರು, ಒಬ್ಬ ಅಕ್ಕನನ್ನು ಬಿಟ್ಟರೆ ಎಲ್ಲರಿಗಿಂತ ಅವರೇ ಹಿರಿಯವರು. ನಟ,ನಿರ್ದೇಶಕ, ನಿರ್ಮಾಪಕ, ಮೆಹ್ಮೂದ್ ಆಲಿ, (ಕೇವಲ ಮೆಹ್ಮೂದ್ ಎಂದು ಅವರು ಪ್ರಸಿದ್ಧರು) ಕೇವಲ ಹಾಸ್ಯನಟನೆಯಿಂದಲೇ ೩೦ ವರ್ಷ ಹಿಂದಿ ಚಲನ-ಚಿತ್ರರಂಗದಲ್ಲಿ ತಮ್ಮ ಉತ್ತಮ ಅಭಿನಯದಿಂದ ಹೆಸರುಮಾಡಿದ್ದರು. ಒಟ್ಟಾರೆ ಅವರು ನಟಿಸಿದ ಹಿಂದಿ ಚಿತ್ರಗಳು ಸುಮಾರು ೩೦೦.

ಬಾಲ್ಯದಿಂದ ಸಿನೆಮಾ-ರಂಗದಲ್ಲಿ ಒಲವು[ಬದಲಾಯಿಸಿ]

'ಬಾಂಬೆ ಟಾಕಿ'ಯ ಸಮಯದಲ್ಲಿ ಬಾಲನಟನಾಗಿ ’ಕಿಸ್ಮತ್’ ಚಿತ್ರದಲ್ಲಿ, ಅಭಿನಯಿಸಿದ್ದರು. ನಟನೆಯನ್ನು ತೀವ್ರವಾಗಿ ತೆಗೆದುಕೊಳ್ಳುವ ಮೊದಲು, ಅವರು ಮಾಡದಿದ್ದ ಕೆಲಸವಿಲ್ಲ ; ಕಾರ್-ಡ್ರೈವಿಂಗ್, ಕೋಳಿಮೊಟ್ಟೆ ಮಾರಾಟ, ಇತ್ಯಾದಿ. ಮೆಹ್ಮೂದ್, ನಿರ್ದೇಶಕ 'ಪಿ.ಎಲ್.ಸಂತೋಷಿ'ಯವರ, ಡ್ರೈವರ್ ಆಗಿದ್ದರು. ಮುಂದೆ ಅವರ ಮಗ, 'ರಾಜ್ ಕುಮಾರ್ ಸಂತೋಷಿ'ಯವರ ಕಾರನ್ನೂ ನಡೆಸುತ್ತಿದ್ದರು. ಸಂತೋಷಿ, ಮೆಹ್ಮೂದ್ ರಿಗೆ, ಅಂದಾಜ್ ಅಪ್ನಾ ಅಪ್ನಾ, ಚಿತ್ರದಲ್ಲಿ ಒಂದು ಅವಕಾಶಕೊಟ್ಟರು. ನಟಿ, 'ಮೀನಾಕುಮಾರಿ'ಯವರಿಗೆ 'ಟೇಬಲ್-ಟೆನ್ನಿಸ್' ಹೇಳಿಕೊಡಲು ಅವರನ್ನು ನೇಮಿಸಲಾಯಿತು.

'ಮಧು' ರವರ ಜೊತೆಯಲ್ಲಿ ಅವರು ವಿವಾಹವಾದರು[ಬದಲಾಯಿಸಿ]

'ಮೆಹ್ಮೂದ್,' 'ಮೀನಾಕುಮಾರಿ'ಯವರಿಗೆ ಟೇಬಲ್ ಟೆನ್ನಿಸ್ ಹೇಳಿಕೊಡುತ್ತಿರುವಾಗ, ಮೀನಾಕುಮಾರಿಯವರ ಸೋದರಿ,'ಮಧು'ರವರ ಜೊತೆ ಪರಿಚಯವಾಯಿತು. ಹಾಗೆಯೇ ಆದ ಪರಿಚಯದಿಂದ ಅವರಿಬ್ಬರಲ್ಲಿ ಸಲಿಗೆ ಬೆಳೆದು, ಕೊನೆಗೆ ಅದು ಮದುವೆಯಲ್ಲಿ ಕೊನೆಗೊಂಡಿತು. ಯಾವಾಗಲೂ ಹೆಚ್ಚಿನ ಜವಾಬ್ದಾರಿಯಿಲ್ಲದೆ ಅರಾಮಾಗಿ ಓಡಾಡಿ ಕೊಂಡಿದ್ದ ಮಹ್ಮೂದರಿಗೆ, ಒಂದು ಮಗುವೂ ಆದಮೇಲೆ, ಅವರಿಗೆ ಮನೆಯನ್ನು ನಡೆಸಲು ಹಾಗೂ ಉತ್ತಮವಾದ ಜೀವನನಡೆಸಲು ಹಣದ ಆವಶ್ಯಕತೆ, ಮನಗಂಡಿತು.

ಹಲವಾರು ಚಿತ್ರಗಳಲ್ಲಿ ನಟಿಸಿದರೂ, ಅವರ ಕೇವಲ ಹಾಸ್ಯ-ಪಾತ್ರಾಭಿನಯ, ಜನರಿಗೆ ಪ್ರಿಯವಾಯಿತು[ಬದಲಾಯಿಸಿ]

'ಮೆಹ್ಮೂದ್,' ಹೇಗೋ 'ಸಿ.ಐ.ಡಿ' ಚಿತ್ರದಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಗಿಟ್ಟಿಸಿಕೊಂಡರು. ಹಾಗೆಯೇ 'ದೊ ಬಿಘ ಜಮೀನ್' ಮತ್ತು ಪ್ಯಾಸ ಚಿತ್ರಗಳಲ್ಲಿ ಪಾತ್ರಮಾಡಿದ್ದರು. ಆದರೆ ಅದು ಯಾರ ಗಮನಕ್ಕೂ ಬರಲಿಲ್ಲ. ಹಾಸ್ಯ ಸ್ವಭಾವದ ಮೆಹ್ಮೂದ್ ರಿಗೆ ಮುಂದೆ, ಹಾಸ್ಯವೇ ಅವರ ಜೀವನ ನಿರ್ವಹಣೆಗೆ, ನೆರವಾಯಿತು.

'ಮೆಹ್ಮೂದ್,'ರವರ, ಮೊಟ್ಟಮೊದಲ ಚಿತ್ರ,'ಭೂತ್ ಬಂಗ್ಲಾ'[ಬದಲಾಯಿಸಿ]

'ಮೆಹ್ಮೂದ್,'ರವರ, ಮೊಟ್ಟಮೊದಲ ಚಿತ್ರ, 'ತನುಜ' ರವರ ಜೊತೆ, 'ಭೂತ್ ಬಂಗ್ಲಾ' ದಲ್ಲಿ ಅವರು ನಟಿಸುವ ಜೊತೆಗೆ, ನಿರ್ದೇಶನವನ್ನೂ ಮಾಡಿದ್ದರು. ಆ ಸಮಯದಲ್ಲಿ 'ಜಾನಿವಾಕರ್', ಹಿಂದಿ ಚಿತ್ರರಂಗದಲ್ಲಿ ಹಾಸ್ಯನಟರೆಂದು, ಒಳ್ಳೆಯ ಹೆಸರುಮಾಡಿದ್ದರು. ಈಗ 'ಮೆಹ್ಮೂದ್' ಅವರ ಜಾಗದಲ್ಲಿ, ಬಂದು ಒಂದು ವಿಕ್ರಮವನ್ನೇ ಸೃಷ್ಟಿಸಿದರು. 'ಪಡೋಸನ್' ಚಿತ್ರ, ಅವರ ಕಾಮೆಡಿಯ ಪಾತ್ರಕ್ಕೆ ಹೆಸರಾಯಿತು. ಅದು 'ಬಾಕ್ಸ್ ಆಫೀಸ್' ನಲ್ಲಿ ಚೆನ್ನಾಗಿ ಓಡಿ, ಮೆಹ್ಮೂದ್ ಒಳ್ಳೆಯ ಹಾಸ್ಯ-ನಟರೆಂದು ಸಾಬೀತಾದರು. ಅವರು ನಟಿಸಿದಕೆಲವು ಚಿತ್ರಗಳು :

ನಿರ್ದೇಶನದಲ್ಲೂ ಅವರಿಗೆ ಪರಿಶ್ರಮವಿತ್ತು, 'ಕುಂವಾರಬಾಪ್' ಚಿತ್ರದಲ್ಲಿ ಅವರು ಅಭಿನಯಿಸಿದ್ದಲ್ಲದೆ,ನಿರ್ದೆಶನವನ್ನೂ ಮಾಡಿದ್ದರು.

೧೯೬೫ ರಿಂದ ೧೯೮೫ ರವರೆಗೆ, 'ಬಾಲಿವುಡ್' ನಲ್ಲಿ ಅವರೇ ಹಾಸ್ಯ-ನಟನೆಗೆ ಆದಿ-ಅಂತ್ಯವೆಂಬಂತಿದ್ದರು[ಬದಲಾಯಿಸಿ]

'ಅಮಿತಾಬ್ ಬಚ್ಚನ್' ರವರು, ೧೧ ತಿಂಗಳ ಕಾಲ ಅವರ ಮನೆಯ 'ಔಟ್ ಹೌಸ್' ನಲ್ಲಿ ಬಾಡಿಗೆಗೆ ಇದ್ದರು. ೧೯೬೭-೬೮, ಮುಂದೆ, ೧೯೭೨-೧೯೭೩ (೪ ತಿಂಗಳು) ಅಮಿತಾಬ್ ಜೊತೆಗೆ 'ಬಾಂಬೆ ಟು ಗೋವ' ಚಿತ್ರದಲ್ಲಿ 'ಬಸ್ ಕಂಡಕ್ಟರ್' ಆಗಿ, ನಟಿಸಿದರು. ೧೯೮೫ ರ ವರೆಗೆ 'ಮೆಹ್ಮೂದ್ ಕಾಮೆಡಿ' ಯಶಸ್ಸಿನ ತುಟ್ಟತುದಿಗೆ ತಲುಪಿತ್ತು. ಅದು ಹಾಗೆಯೇ ಕೆಳಗಿಳಿದದ್ದು, ಬೇರೆ ಹಾಸ್ಯನಟರು, ಸಿನೆಮಾ ರಂಗದಲ್ಲಿ ಪಾದಾರ್ಪಣೆಮಾಡಿದಾಗ. ಹಾಸ್ಯನಟರಾದ, 'ಅನುಪಮ್ ಖೇರ್', 'ಜಗ್ತಾಪ್', 'ಜಾನಿ ಲಿವರ್', ಮುಂತಾದವರ ಹಾಸ್ಯಾಭಿನಯದಲ್ಲಿ ಹೊಸತನ ಇದ್ದು,ಎಲ್ಲರೂ ಅವರ ಹಾಸ್ಯವನ್ನು ಇಷ್ಟಪಡುತ್ತಿದ್ದರು. ಗಳಿಸಿದ ಹಣವೇನೋ ಅಪಾರವಾಗಿದ್ದರೂ, ಅದನ್ನು ಸರಿಯಾಗಿ ಉದ್ಯಮಗಳಲ್ಲಿ ತೊಡಗಿಸದೆ, ಪೋಲ್ ಮಾಡಿದ್ದರಿಂದ ಗಳಿಸಿಟ್ಟಿದ್ದ ಹಣವೆಲ್ಲಾ ಖರ್ಚಾಯಿತು. ೧೯೮೯-೧೯೯೯ ರಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದರು. ಅದೇ ಹಾಸ್ಯ ಪ್ರಸಂಗಗಳು, ಮಾತಿನ ಧಾಟಿ, ಜನರಿಗೆ ಹಿಡಿಸಲಿಲ್ಲ. ರಾಜ್ ಕುಮಾರ್ ಸಂತೋಷಿ ಯವರು ನಿರ್ಮಿಸಿದ, 'ಅಂದಾಜ್ ಅಪ್ನ ಅಪ್ನ', ದಲ್ಲಿ 'ಜಾನಿ' ಯ ಪಾತ್ರ ಮಾತ್ರ, ಜನರು ಇಷ್ಟಪಟ್ಟರು.

ಹೃದಯರೋಗ ಚಿಕಿತ್ಸೆಗೆ ಅಮರಿಕಕ್ಕೆ ಹೋದರು[ಬದಲಾಯಿಸಿ]

ಅಮೆರಿಕದಲ್ಲಿದ್ದಾಗ ರವರು, 'ಪೆನ್ಸಿಲ್ ವೇನಿಯ' ನಗರದಲ್ಲಿ ನಿಧನರಾದರು. ಹಲವಾರು ವರ್ಷಗಳಿದ ಆರೋಗ್ಯ ಸರಿಯಿರದೆ ನರಳಿದ ಅವರು, ಹೃದಯ ಚಿಕಿತ್ಸೆಗೆ,ಪೆನ್ಸಿಲ್ ವೇನಿಯ ಕ್ಕೆ ಹೋದರು. ೨೩, ಜುಲೈ, ೨೦೦೪ ರಂದು ಮಲಗಿದವರು, ಮತ್ತೆ ಏಳಲೇ ಇಲ್ಲ. ಬೊಂಬಾಯಿನ 'ಮೆಹೋದ್ ಸ್ಟುಡಿಯೊ' ನಲ್ಲಿ ಆಪ್ತರು, ಗೆಳೆಯರು, ಅಭಿಲಾಷಿಗಳು, ಅವರ 'ಆತ್ಮಕ್ಕೆ, ಶ್ರದ್ಧಾಂಜಲಿ'ಯನ್ನು ಅರ್ಪಿಸಿದರು.

'ಮೆಹ್ಮೂದ್' ರವರ ಮಗ, 'ಲಕಿ ಆಲಿ' ಒಳ್ಳೆಯ ಕಲಾವಿದರು[ಬದಲಾಯಿಸಿ]

'ಮೆಹ್ಮೂದ್,' ರವರ ಮತ್ತೊಬ್ಬ ಮಗ, 'ಲಕಿ ಆಲಿ', ಒಬ್ಬ ಹಾಡುಗಾರ, ಮತ್ತು ಸಂಗೀತವನ್ನು ಸೃಷ್ಟಿಸುತ್ತಾರೆ. ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರ‍ೆ ಸಹಿತ.