ಪಸೇನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಸೇನದಿ
ರಾಜ

ಪಸೇನದಿ
ಕೋಸಲದ ಪ್ರಸೇನಜಿತ್ ಬುದ್ಧನನ್ನು ಭೇಟಿಯಾಗಲು ಹೋಗುತ್ತಿದ್ದಾನೆ
ಆಳ್ವಿಕೆ ಕೋಸಲ
ರಾಣಿ ಮಲ್ಲಿಕಾ, ಮಗಧ ರಾಜಕುಮಾರಿ, ವಾಸವಖಟ್ಟೀಯಾ
ಸಂತಾನ
ವಿರೂಢಕ, ರಾಜಕುಮಾರಿ ವಜಿರಾ
ತಂದೆ ಸಂಜಯ ಮಹಾಕೋಸಲ
ಬುದ್ಧನನ್ನು ಭೇಟಿಯಾಗಲು ಶ್ರಾವಸ್ತಿಯನ್ನು ಬಿಡುತ್ತಿರುವ ಕೋಸಲದ ಪ್ರಸೇನಜಿತ್‍ನ ಮೆರವಣಿಗೆ. ಸಾಂಚಿ[೧]

ಪಸೇನದಿ (ಸಂಸ್ಕೃತ:ಪ್ರಸೇನಜಿತ್) (ಸು. ಕ್ರಿ.ಪೂ. 6ನೇ ಶತಮಾನ) ಕೋಸಲದ ಇಕ್ಷ್ವಾಕು ರಾಜವಂಶದ ಒಬ್ಬ ರಾಜನಾಗಿದ್ದನು. ಶ್ರಾವಸ್ತಿ ಇವನ ರಾಜಧಾನಿಯಾಗಿತ್ತು. ಇವನು ಇವನ ತಂದೆ ಸಂಜಯ ಮಹಾಕೋಸಲನ ನಂತರ ಸಿಂಹಾಸನವೇರಿದನು.[೨] ಇವನು ಗೌತಮ ಬುದ್ಧನ ಒಬ್ಬ ಪ್ರಮುಖ ಉಪಾಸಕನಾಗಿದ್ದನು ಮತ್ತು ಅನೇಕ ಬೌದ್ಧ ವಿಹಾರಗಳನ್ನು ಕಟ್ಟಿಸಿದನು.

ಜೀವನ[ಬದಲಾಯಿಸಿ]

ತನ್ನ ಮುಂಚಿನ ಜೀವನದಲ್ಲಿ ಪಸೇನದಿಯು ತಕ್ಷಶಿಲೆಯಲ್ಲಿ ಅಧ್ಯಯನ ಮಾಡಿದನು. ಇವನು ಕೋಸಲದ ರಾಜನಾಗಿದ್ದನು.[೩] ಇವನ ಮೊದಲ ರಾಣಿ ಒಬ್ಬ ಮಗಧ ರಾಜಕುಮಾರಿಯಾಗಿದ್ದಳು. ನಾಗಮುಂಡ ಎಂಬ ಸೇವಕಿಯಿಂದ ಹುಟ್ಟಿದ ಮಹಾನಾಮನ ಮಗಳು ಸಾಕ್ಯಳಾಗಿದ್ದ ವಾಸವಖಟ್ಟೀಯಾ ಇವನ ಎರಡನೇ ರಾಣಿಯಾಗಿದ್ದಳು. ಇವಳು ಸೇವಕಿಯಾಗಿದ್ದಳು ಮತ್ತು ಮಹಾನಾಮನ ಮೂಲ ಮಗಳಲ್ಲ. ಈ ವಿವಾಹದಿಂದ, ಇವನಿಗೆ ಒಬ್ಬ ಮಗ ವಿಡೂಡಭ ಮತ್ತು ಒಬ್ಬ ಮಗಳು ರಾಜಕುಮಾರು ವಜಿರಾ ಹುಟ್ಟಿದರು. ವಜಿರಾ ಅಜಾತಶತ್ರುವನ್ನು ವಿವಾಹವಾದಳು.[೩] ಮಲ್ಲಿಕಾ ಇವನ ಮೂರನೇ ಹಾಗೂ ಮುಖ್ಯ ರಾಣಿಯಾಗಿದ್ದಳು. ಇವಳು ಮಾಲೆ ತಯಾರಕರ ಮುಖಂಡನ ಮಗಳು. ಒಮ್ಮೆ, ಇವನು ತನ್ನ ರಾಜಧಾನಿ ಶ್ರಾವಸ್ತಿಯಿಂದ ಹೊರಗೆ ಹೋದಾಗ, ಇವನ ಮಂತ್ರಿ ದೀಘ ಚಾರಾಯನನು ತನ್ನ ಮಗ ವಿಡೂಡಭನನ್ನು ಸಿಂಹಾಸನದ ಮೇಲೆ ಕೂರಿಸಿದನು. ತನ್ನ ಸಿಂಹಾಸನವನ್ನು ಮರಳಿ ಪಡೆಯುವ ಸಲುವಾಗಿ ಅಜಾತಶತ್ರುವಿನ ನೆರವು ಕೋರಲು ಮಗಧಕ್ಕೆ ಹೋದನು. ಆದರೆ ಅವನನ್ನು ಭೇಟಿಯಾಗುವುದಕ್ಕೆ ಮುಂಚೆ, ಪಸೇನದಿಯು ಒಡ್ಡಿಕೆಯಿಂದ ರಾಜಗೃಹದ ದ್ವಾರಗಳ ಹೊರಗೆ ಮರಣ ಹೊಂದಿದನು.[೪] ಪುರಾಣಗಳು ವಿಡೂಡಭನ ಬದಲಾಗಿ ಕ್ಷೂದ್ರಕನು ಇವನ ಉತ್ತರಾಧಿಕಾರಿಯಾದನು ಎಂದು ಉಲ್ಲೇಖಿಸುತ್ತವೆ.[೫]

ಉಲ್ಲೇಖಗಳು[ಬದಲಾಯಿಸಿ]

  1. Marshall p.59
  2. Raychaudhuri H. (1972). Political History of Ancient India, Calcutta: University of Calcutta, pp.90,176
  3. ೩.೦ ೩.೧ Sastri 1988, p. 17.
  4. Raychaudhuri H. (1972). Political History of Ancient India, Calcutta: University of Calcutta, pp.176-8,186
  5. Misra, V. S. (2007). Ancient Indian Dynasties, Mumbai: Bharatiya Vidya Bhavan, ISBN 81-7276-413-8, pp.287-8

ಮೂಲಗಳು[ಬದಲಾಯಿಸಿ]

"https://kn.wikipedia.org/w/index.php?title=ಪಸೇನದಿ&oldid=804536" ಇಂದ ಪಡೆಯಲ್ಪಟ್ಟಿದೆ