ಪರಿಭ್ರಮಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತನ್ನ ಅಕ್ಷದ ಸುತ್ತ ಪರಿಭ್ರಮಿಸುತ್ತಿರುವ ಗೋಳ

ಪರಿಭ್ರಮಣವು ವೃತ್ತಾಕಾರ ಗತಿಯಲ್ಲಿ ಒಂದು ವಸ್ತುವಿನ ಚಲನೆ. ಒಂದು ಎರಡು-ಆಯಾಮದ ವಸ್ತುವು ಒಂದು "ಪರಿಭ್ರಮಣ ಕೇಂದ್ರದ" (ಅಥವಾ " ಪರಿಭ್ರಮಣ[ಬಿಂದು (ರೇಖಾಗಣಿತ)|ಬಿಂದುವಿನ]]") ಸುತ್ತ ಪರಿಭ್ರಮಿಸುತ್ತದೆ. ಒಂದು ಮೂರು-ಆಯಾಮದ ವಸ್ತುವು "ಅಕ್ಷ" ಎಂದು ಕರೆಯಲಾಗುವ ಒಂದು ರೇಖೆಯ ಸುತ್ತ ಪರಿಭ್ರಮಿಸುತ್ತದೆ.

ಅಕ್ಷ[ಬದಲಾಯಿಸಿ]

ಭೂಮಿ ತನ್ನ ಅಕ್ಷದ ಮೇಲೆ ಬುಗುರಿಯಂತೆ ಆವರ್ತಿಸುತ್ತಿದೆ. ಅಕ್ಷ ಎಂದರೆ ಒಂದು ಸರಳರೇಖೆ; ಇದು ಆವರ್ತಿಸುತ್ತಿರುವ ವಸ್ತುವಿನ ದೃಷ್ಟಿಯಿಂದ ಇರುವಲ್ಲಿಯೇ ಆವರ್ತಿಸುವುದರಿಂದ ಅಕ್ಷದ ಸ್ಥಾನ ಸ್ಥಿರ; ವಸ್ತುವಿನ ಇತರ ಬಿಂದುಗಳೂ ಅಕ್ಷದ ಸುತ್ತಲೂ ಸ್ಥಿರದೂರಗಳಲ್ಲಿ ವೃತ್ತಪಥ ಗಳಲ್ಲಿ ಚಲಿಸುತ್ತವೆ.


ಇನ್ನು ಬೀಜರೇಖಾಗಣಿತದಲ್ಲಿ ಅಕ್ಷ ಪದದ ಅರ್ಥ ಬೇರೆ. ದತ್ತವಸ್ತು ವಿನ (ಅಥವಾ ಘನದ ಅಥವಾ ವಕ್ರರೇಖೆಯ) ಮೇಲಿರುವ ಬಿಂದು ಗಳನ್ನು ಗುರುತಿಸಲು ಸಹಾಯಕ ವಾಗುವಂತೆ ಅನುಕೂಲವಾದ ಒಂದು ಮೂಲರೇಖೆಯನ್ನು ಆರಿಸುತ್ತೇವೆ. ಇದು ಒಂದು ಅಕ್ಷ. ಇದರ ಮೇಲೆ ಒಂದು ಸ್ಥಿರಬಿಂದುವನ್ನು ಗುರುತಿಸು ತ್ತೇವೆ. ಇದು ಮೂಲಬಿಂದು. ಇಲ್ಲಿಂದ ಮುಂದೆ ಆಯಾ ನಿರ್ದೇಶಕ ವ್ಯವಸ್ಥೆಯ ಕ್ರಮವನ್ನನುಸರಿಸಿ ಮೂಲಬಿಂದುವಿನ ಮೂಲಕ ಸಾಗುವ ಇತರ ಎಲ್ಲ ಅಕ್ಷಗಳನ್ನು ಆರಿಸಬಹುದು.

ಉದಾಹರಣೆಗಾಗಿ ಸಮತಳ ಕಾರ್ಟೇಸಿಯನ್ ನಿರ್ದೇಶಕ ವ್ಯವಸ್ಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲಿ x'oxನ್ನು x -ಅಕ್ಷವೆಂದೂ y'oy ಯನ್ನು y-ಅಕ್ಷವೆಂದೂ ಕರೆಯುತ್ತೇವೆ. ಆಗ P ಬಿಂದುವಿನ ನಿರ್ದೇಶಕಗಳು ಕ್ರಮವಾಗಿ OL ಮತ್ತು OP. ಎರಡನೆಯ ಮಹಾಯುದ್ಧದ ಮೊದಲು ಇಟಲಿಮುಸೊಲೋನಿ ಜರ್ಮನಿಯ ಹಿಟ್ಲರನೊಡನೆ ಇದ್ದ ತನ್ನ ಅವಿಭಾಜ್ಯ ಮೈತ್ರಿಯನ್ನು ಕುರಿತು “......ಈಗ ನಾವು ಪರಿಶೀಲಿಸಬೇಕಾದ ಇನ್ನೊಂದು ವಾಸ್ತವಿಕಾಂಶ ರೋಮ್-ಬರ್ಲಿನ್ ಅಕ್ಷ ಎಂದು ಸಾಮಾನ್ಯವಾಗಿ ಪ್ರಚಲಿತವಾಗಿರುವ ಭಾವನೆ.... ಎಂದ (1937). ಹಿಟ್ಲರ್ ಮತ್ತು ಆತನ ಅನುಯಾಯಿಗಳನ್ನು ಕುರಿತು ಅಂದಿನಿಂದ ಅಕ್ಷರಾಷ್ಟ್ರಗಳು ಎಂಬ ಪದ ರೂಢಿಗೆ ಬಂದಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]