ಪತ್ರಿಕಾಗೋಷ್ಠಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರಿಕಾಗೋಷ್ಠಿ (ವಾರ್ತಾಗೊಷ್ಠಿ) ಒಂದು ಮಾಧ್ಯಮ ಕಾರ್ಯಕ್ರಮವಾಗಿದ್ದು, ಇದರಲ್ಲಿ ಸುದ್ದಿಯೋಗ್ಯ ವ್ಯಕ್ತಿಗಳು ತಾವು ಮಾತನಾಡುವುದನ್ನು ಕೇಳಲು ಪತ್ರಕರ್ತರನ್ನು ಆಹ್ವಾನಿಸುತ್ತಾರೆ, ಮತ್ತು ಬಹುತೇಕ ವೇಳೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳುತ್ತಾರೆ.[೧] ಪ್ರತಿಯಾಗಿ ಜಂಟಿ ಪತ್ರಿಕಾಗೋಷ್ಠಿಯನ್ನು ಇಬ್ಬರು ಅಥವಾ ಹೆಚ್ಚು ಮಾತಾಡುವ ಪಕ್ಷಗಳ ನಡುವೆ ನಡೆಸಲಾಗುತ್ತದೆ.

ಅಭ್ಯಾಸ[ಬದಲಾಯಿಸಿ]

ಪತ್ರಿಕಾಗೋಷ್ಠಿಯಲ್ಲಿ, ಒಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಹೇಳಿಕೆಗಳನ್ನು ನೀಡಬಹುದು, ನಂತರ ಪ್ರಶ್ನೆಗಳನ್ನು ಕೇಳಬಹುದು. ಕೆಲವೊಮ್ಮೆ ಕೇವಲ ಪ್ರಶ್ನೆಗಳನ್ನು ಕೇಳಲಾಗಬಹುದು; ಕೆಲವೊಮ್ಮೆ ಹೇಳಿಕೆಯಿದ್ದು ಪ್ರಶ್ನೆಗಳಿಗೆ ಅನುಮತಿ ಇರುವುದಿಲ್ಲ.

ರಾಜಕಾರಣಿಗಳು (ಉದಾಹರಣೆಗೆ ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ), ಕ್ರೀಡಾ ತಂಡಗಳು, ಪ್ರಸಿದ್ಧ ವ್ಯಕ್ತಿಗಳು ಅಥವಾ ಚಲನಚಿತ್ರ ನಿರ್ಮಾಣಶಾಲೆಗಳು, ಉತ್ಪನ್ನಗಳ ಪ್ರಚಾರಮಾಡಲು ವಾಣಿಜ್ಯ ಸಂಸ್ಥೆಗಳು, ಮೊಕದ್ದಮೆಗಳನ್ನು ಪ್ರಚಾರ ಮಾಡಲು ವಕೀಲರು ಹಲವುವೇಳೆ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]