ತಾಪ್ಸಿ ಪನ್ನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಪ್ಸಿ ಪನ್ನು
ತಾಪ್ಸಿನ್ ಪನ್ನು
ಜನನ (1985-08-01) ೧ ಆಗಸ್ಟ್ ೧೯೮೫ (ವಯಸ್ಸು ೩೮)
ಉದ್ಯೋಗನಟಿ.
ಸಕ್ರಿಯ ವರ್ಷಗಳು2010–ರಿಂದ
ಜಾಲತಾಣತಾಪ್ಸಿ ಪನ್ನು

ತಾಪ್ಸಿ ಪನ್ನು ಒಬ್ಬ ಭಾರತೀಯ ನಟಿ. [೨] ಅವರು ೧ ಆಗಸ್ಟ್ ೧೯೮೫ರಲ್ಲಿ ಜನಿಸಿದರು.[೩] ಅವರು ಅನೇಕ ಬಾಲಿವುಡ್ ಹಾಗು ದಕ್ಷಿಣ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಯಾಗುವ ಮುಂಚೆ ಸಾಫ್ಟ್ವೇರ್ ಎಂಜಿನಿಯರಾಗಿ ಹಾಗೂ ಮಾಡೆಲಿಂಗ್ ಕ್ಷೇತ್ರದಿಂದ ವೃತ್ತಿಜೀವನವನ್ನು ಪ್ರಾರಂಬಿಸಿದರು.[೪] ಅವರ ಮಾಡೆಲಿಂಗ್ ವೃತ್ತಿಜೀವನದ ಅವಧಿಯಲ್ಲಿ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.

ತಾಪ್ಸಿಯವರು ತಮ್ಮ ನಟನಾ ಪಾದಾರ್ಪಣೆಯನ್ನು ೨೦೧೦ರಲ್ಲಿ ರಾಘವೆಂದ್ರ ರಾವ್ ರವರು ನಿರ್ದೇಶಿಸಿದ ಜುಮಾನ್ದಿ ನಾದಮ್ ಎಂಬ ತೆಲುಗು ಚಲನಚಿತ್ರದಿಂದ ಆರಂಭಿಸಿದರು.[೫] ಅಂದಿನಿಂದ ಆದುಕಲಂ,[೬] ವಸ್ತಾಡು ನಾ ರಾಜು ಮತ್ತು ಮಿಸ್ಟರ್ ಪರ್ಫೆಕ್ಟ್ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ತಮಿಳು ಚಿತ್ರ ಆದುಕಲಂ 58 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅವರು ಮಲಯಾಳಂ ಚಲನಚಿತ್ರದಲ್ಲಿಯೂ ಕೆಲಸ ಮಾಡಿದ್ದಾರೆ ಹಾಗೂ ಮೂರು ತೆಲುಗು ಚಿತ್ರಗಳಿಗೆ ಮತ್ತು ಹಲವಾರು ಹಿಂದಿ ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ತಮಿಳು ಚಲನಚಿತ್ರ ಅರಾಂಬಮ್ (2013) ಚಿತ್ರದಲ್ಲಿನ ಅಭಿನಯಕ್ಕಾಗಿ 2014 ರ ಎಡಿಸನ್ ಪ್ರಶಸ್ತಿಯಲ್ಲಿ ಅವರಿಗೆ ಹೆಚ್ಚಿನ ಉತ್ಸಾಹಭರಿತ ಅಭಿನಯ-ಮಹಿಳಾ ಪ್ರಶಸ್ತಿಯನ್ನು ನೀಡಲಾಯಿತು. 2015 ರಲ್ಲಿ ಅವರು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾದ ಬೇಬಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು ಪಿಂಕ್ (2016), ದಿ ಗಾಜಿ ಅಟ್ಯಾಕ್ (2017), ಮತ್ತು ಜುಡ್ವಾ 2 (2017) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ತಾಪ್ಸಿಯವರು ೧ ಆಗಸ್ಟ್ ೧೯೮೫ರಲ್ಲಿ ನವ ದೆಹಲಿಯಲ್ಲಿ ಜನಿಸಿದರು.[೭] ಅವರ ತಂಗಿ ಶಗುನ್ ಪನ್ನು. ಇವರನ್ನು ಸಹ ಚಲನಚಿತ್ರೋದ್ಯಮಕ್ಕೆ ತರಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ದೆಹಲಿಯ ಅಶೋಕ್ ವಿಹಾರ್ನಲ್ಲಿರುವ ಮಾತಾ ಜೈ ಕೌರ್ ಪಬ್ಲಿಕ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದರು. [೮] ನವ ದೆಹಲಿಯ ಗುರು ತೇಜ್ ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ನಂತರ ಅವರು ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು. ಚಾನೆಲ್ V ಯ ಪ್ರತಿಭಾ ಪ್ರದರ್ಶನ ಗೆಟ್ ಗಾರ್ಜಿಯಸ್ಗೆ ಆಯ್ಕೆಯಾಗಿ ತಮ್ಮ ಮಾಡೆಲಿಂಗ್ ಜೀವನವನ್ನು ಆರಂಬಿಸಿದರು. ಇದು ಅವರನ್ನು ನಟನೆಗೆ ಆಕರ್ಶಿಸಿತು. ತಾಪ್ಸಿ ಹಲವಾರು ಮುದ್ರಿತ ಹಾಗೂ ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 2008 ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಂಟಲೂನ್ಸ್ ಫೆಮಿನಾ ಮಿಸ್ ಫ್ರೆಶ್ ಫೇಸ್ ಮತ್ತು ಸಫಿ ಫೆಮಿನಾ ಮಿಸ್ ಬ್ಯೂಟಿಫುಲ್ ಸ್ಕಿನ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೯] ಅವರು ರಿಲಯನ್ಸ್ ಟ್ರೆಂಡ್ಸ್, ರೆಡ್ ಎಫ್ಎಂ 93.5, ಯುನಿಸ್ಟೈಲ್ ಇಮೇಜ್, ಕೋಕಾ-ಕೋಲಾ, ಮೊಟೊರೊಲಾ, ಪಾಂಟಲೂನ್, ಪಿವಿಆರ್ ಸಿನಿಮಾಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಡಬೂರ್, ಏರ್ಟೆಲ್, ಟಾಟಾ ಡೊಕೊಮೊ, ವರ್ಲ್ಡ್ ಗೋಲ್ಡ್ ಕೌನ್ಸಿಲ್, ಹ್ಯಾವೆಲ್ಸ್ ಮತ್ತು ವಾರ್ಧಾನ್ ಮುಂತಾದ ಬ್ರಾಂಡ್ ಅಂಬಾಸಿಡರ್ ಆದರು. ಜಸ್ಟ್ ಫಾರ್ ವುಮೆನ್ ಮತ್ತು ಮಾಸ್ಟಾರ್ಸ್ ನಿಯತಕಾಲಿಕೆಗಳ ಮುಖಪುಟದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕೆಲವು ವರ್ಷಗಳ ನಂತರ, ಅವರಿಗೆ ಮಾಡೆಲಿಂಗ್ ಮೂಲಕ ಸರಿಯಾದ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದರಿಂದ ಮಾಡೆಲಿಂಗ್ನಲ್ಲಿ ಆಸಕ್ತಿ ಕಳೆದುಕೊಂಡರು.

೨೦೧೬ ರಿಂದ[ಬದಲಾಯಿಸಿ]

ಬೇಬಿ ಚಲನಚಿತ್ರದ ನಂತರ, ತಾಪ್ಸಿ ಶುಕ್ಜಿತ್ ಸಿರ್ಕಾರ್ ಅವರ ಚಲನಚಿತ್ರವಾದ ಪಿಂಕ್[೧೦] ಮತ್ತು ದ್ವಿಭಾಷಾ ಜಲಾಂತರ್ಗಾಮಿ ಚಿತ್ರ ಘಾಝಿ ಚಿತದಲ್ಲಿ ನಟಿಸಿದರು. ಪ್ರಕಾಶ್ ರಾಜ್ ಅವರ ಹಿಂದಿ ನಿರ್ದೇಶನದ ಮೊದಲ ಚಿತ್ರವಾದ ತಡ್ಕದಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬೇಬಿ ಚಿತ್ರದ ಪೂರ್ವಭಾವಿಯಾಗಿ ನಾಮ್ ಶಬಾನಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ತಾಪ್ಸಿ, ಡೇವಿಡ್ ಧವನ್ ರವರು ನಿರ್ದೇಶಿಸಿದ ಜುಡ್ವಾ 2 ಚಿತ್ರದಲ್ಲಿ ನಟಿಸಿದರು.

ಉಲ್ಲೇಖ[ಬದಲಾಯಿಸಿ]

  1. "Taapsee Pannu buys a new home in Mumbai". 28 ಜನವರಿ 2017. Archived from the original on 20 ಆಗಸ್ಟ್ 2017. Retrieved 7 ಸೆಪ್ಟೆಂಬರ್ 2017. {{cite news}}: Unknown parameter |deadurl= ignored (help)
  2. https://famousbiography.in/taapsee-pannu-biography/
  3. http://www.bollywoodlife.com/south-gossip/taapsee-pannu-happy-birthday/
  4. http://movies.rediff.com/slide-show/2010/jun/29/slide-show-1-south-interview-with-taapsee.htm
  5. https://www.filmibeat.com/telugu/reviews/2010/jhummandi-naadam-review-010710.html
  6. http://www.sify.com/movies/Aadukalam-heroine-Tapasee-unveiled-imagegallery-kollywood-kf3oXHcjdch.html?html=5
  7. http://www.bollywoodlife.com/south-gossip/taapsee-pannu-happy-birthday/
  8. "Taapsee Pannu". {{cite web}}: Cite has empty unknown parameters: |1= and |dead-url= (help)
  9. https://web.archive.org/web/20110827051219/http://shoot.indiatimes.com/tapasee.html
  10. http://www.dnaindia.com/entertainment/report-director-shoojit-sircar-opens-up-about-amitabh-bachchan-taapsee-pannu-s-pink-2195802