ಸದಸ್ಯ:Guru sam 76: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧೭ ನೇ ಸಾಲು: ೧೭ ನೇ ಸಾಲು:


==ಉಪಪುಟಗಳು==
==ಉಪಪುಟಗಳು==
{{list subpages}}

೨೦:೪೪, ೨ ಜುಲೈ ೨೦೨೦ ನಂತೆ ಪರಿಷ್ಕರಣೆ

ರಕೇಶ್ ಬಿ ಜಿ

ನನ್ನ ಪರಿಚಯ

ನನ್ನ ಹೆಸರು ರಾಕೇಶ್.ನನ್ನ ಹುಟ್ಟೂರು ಬೆಂಗಳೂರು. ಬೆಂಗಳೂರು ನಗರ ಸಿಲಿಕಾನ್ ಸಿಟಿ ಎಂದು ಪ್ರಸಿದವಾಗಿದ್ದೆ. ನಾನು ಏಪ್ರಿಲ್ ೧೬, ೧೯೯೭ರಂದು ಜನ್ನಿಸಿದ್ದೆ. ನನ್ನ ತಂದೆ ಗಂಗಯ್ಯ ಮತ್ತು ತಾಯಿ ನೇತ್ರಾವತಿ. ಅವರಿಬ್ಬರು ಕಿದ್ವಾಯಿ ದವಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಬಬ್ಬಳು ತಂಗಿ ಇದ್ದಾಳೆ ಅವಳ ಹೆಸರು ರುಚಿತಾ. ಅವಳು ಕ್ರೈಸ್ಟ್ ಸ್ಕೂಲಿನಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಳೆ.‌‌‌‌ ಅವಳು ಶಾಲೆಯ ಪ್ರತಿನಿಧಿ ಆಗಿದ್ದಾಳೆ.

ನನ್ನ ಬಾಲ್ಯ ಹಾಗೂ ಶಾಲಾ ದಿನಗಳು

ನನ್ನ ಬಾಲ್ಯದ ದಿನಗಳನ್ನು ನಾನು ನನ್ನ ಸ್ನೇಹಿತರ ಜೋತೆ ಆಡುತ, ಮಜ ಮಾಡುತ ಕಳೆದೆ. ಇದರಿಂದಲೆ ನನಗೆ ಕ್ರೀಡೆಗಳ ಬಗೆಗೆ ಆಸಕ್ತಿ ಮೂಡಿದ್ದು. ನಾನು ನಮ್ಮ ಶಾಲೆಯ ಕ್ರಿಕೆಟ್ ತಂಡದ ಸದಸ್ಯನಾಗಿದ್ದೆ. ನಮ್ಮ ಕ್ರಿಕೆಟ್ ತಂಡವು ರಾಜ್ಯ ಮಟ್ಟದಲ್ಲಿ ಆಡಿ ಹಲವಾರು ಪಂದ್ಯಗಳನ್ನು ಗೆದ್ದಿದೆ. ನಾನು ಒಂದರಿಂದ ಹತ್ತನೆ ತರಗತಿಯವರಗೆ ಕ್ರೈಸ್ಟ್ ಸ್ಕೂಲಿನಲ್ಲಿ ಓದಿದ್ದೇನೆ. ನಾನು ಶಾಂತ ಸ್ವಭಾವದವನಾಗಿದ್ದು ನಾನು ಯಾರೊಂದಿಗು ಸೇರುತ್ತಿರಲಿಲ್ಲ. ನನ್ನ ಶಾಲೆಯ ಸಮಯದಲ್ಲಿ ಎನ್.ಸಿ.ಸಿ ಗೆ ಸೇರಿದ್ದು ಮೈಸೂರು ಹಾಗು ಗ್ವಾಲಿಯರ್ಗೆ ತೆರಳಿ ಪೆರೆಡ್ನಲ್ಲಿ ಬಾಗವಹಿಸಿದ್ದೇನೆ. ನಮ್ಮ ಶಾಲೆಯಲ್ಲಿ ವಿಜ್ಞಾನದ ಅದ್ಯಾಪಕರು ನಮಗೆ ವಿಜ್ಞಾನದ ವಿಷಯದಲ್ಲಿ ತುಂಬಾ ಪ್ರೋತ್ಸಾಹವನ್ನು ನೀಡುತ್ತಿದ್ದರು ಆದ್ದರಿಂದ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮೂಡಿತದತು. ಇದರಿಂದಾಗಿ ನಾನು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಾನು ಹತ್ತನೆ ತರಗತಿಯಲ್ಲಿ ೯೨% ಪಡೆದು ಉತ್ತೀರ್ಣ ನಾಗಿರುತ್ತೇನೆ. ನಾನು ಹತ್ತನೆ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ೯೯ ಅಂಕಗಳನ್ನು ಪಡೆದು ಉತ್ತೀರ್ಣ ನಾಗಿರುತ್ತೇನೆ ನನಗೆ ಕನ್ನಡದಲ್ಲಿ ೯೯ ಅಂಕಗಳು ಬರುತ್ತದೆ ಎಂದು ನಾನು ಭಾವಿಸಿರಲಿಲ್ಲ.

ನನ್ನ ಕಾಲೇಜಿನ ದಿನಗಳು

ವಿಜ್ಞಾನದ ವಿಷಯದಲ್ಲಿ ಆಸಕ್ತಿಯುಳ್ಳ ನಾನು ಹನ್ನೆರಡನೆ ತರಗತಿಗೆ ದೀಕ್ಷ ಎಸ್.ಜಿ.ಪಿ.ಟಿ.ಎ. ತ್ಯಾಗರಾಜನಗರ ಕಾಲೇಜಿಗೆ ಸೇರಿದೆನು.ನ್ನನ ಕಾಲೇಜಿನ ಜೀವನದಲ್ಲಿ ತುಂಬಾ ಒಳ್ಳೆಯ ಸ್ನೇಹಿತರು ಹಾಗು ಒಳ್ಳೆಯ ಶಿಕ್ಷಕರು ಸಿಕ್ಕಿದ್ದರು. ಇವರ ಸ್ನೇಹವನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ. ಕಾಲೇಜಿನ ಶಿಕ್ಷಕರೆಲ್ಲರೂ ಸ್ನೇಹಿತರಂತೆ ನಮ್ಮೊಂದಿಗಿದ್ದರು. ರಸಾಯನಶಾಸ್ತ್ರ ವಿಭಾಗದ ಅದ್ಯಾಪಕರು ನಮಗೆ ತುಂಬಾ ಪ್ರೋತ್ಸಾಹವನ್ನು ನೀಡುತ್ತಿದ್ದರು ಆದ್ದರಿಂದ ರಸಾಯನಶಾಸ್ತ್ರವನ್ನು ಓದುವ ಆಸಕ್ತಿ ಹೆಚ್ಚಾಯಿತು. ನಾನು ಕಾಲೇಜು ಕ್ರೀಡಾ ತಂಡದ ಸದಸ್ಯನಾಗಿದ್ದೆ. ನಾನು ವಿಜ್ಞಾನ ಫೆಸ್ಟ್ ನಲ್ಲಿ ಭಾಗವಹಿಸಿದ್ದು ಪ್ರಶಸ್ತಿಯನ್ನು ಪಡೆದಿದ್ದೇನೆ. ನಮ್ಮ ಕಾಲೇಜಿನ ವತಿಯಿಂದ ಪ್ರವಾಸಕ್ಕೆ ಚಿಕ್ಕಮಗಳೂರು, ಅಮೃತೇಶ್ವರ ದೇವಾಲಯ, ಕೆಮ್ಮಣ್ಣುಗುಂಡಿ, ಮೊದಲಾದ ಸ್ಥಳಗಳಿಗೆ ಬೇಟಿ ನೀಡಿದ್ದೆವು, ಈ ಸಮಯದಲ್ಲಿ ಸ್ನೇಹಿತರೊಂದಿಗೆ ಒಂದು ವಾರದ ಸಮಯವನ್ನು ಕಳೆದೆನು ಈ ಸಮಯವನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ.

ನನ್ನ ವಿಶ್ವವಿದ್ಯಾನಿಲಯ

ನಾನು ಕ್ರೈಸ್ಟ್ ಸ್ಕೂಲಿನಲ್ಲಿ ಓದಿದರಿಂದ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದೆ. ಆದ ಕಾರಣ ನನ್ನ ಮುಂದಿನ ವ್ಯಾಸಂಗಕ್ಕಾಗಿ ಕ್ರೈಸ್ಟ್ ವಿಶ್ವವಿದ್ಯಾನಿಲಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವಿಜ್ಞಾನದಲ್ಲಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ. ಇಲ್ಲಿ ನನಗೆ ವಿಜ್ಞಾನವನ್ನು ಓದಲು ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿರುತ್ತದೆ.ಕ್ರೈಸ್ಟ್ ವಿಶ್ವವಿದ್ಯಾಲಯವು ಎಲ್ಲ ರೀತಿಯ ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ. ಇಲ್ಲಿ ಉನ್ನತ ಮಟ್ಟದ ಗ್ರಂಥಾಲಯ ಸಹ ಇದೆ. ನನ್ನ ವಿದ್ಯಾಭ್ಯಾಸದ ನಂತರ ರಸಾಯನಶಾಸ್ತ್ರದಲ್ಲಿ ಸಂಶೋದನೆ ಮಾಡಲು ಬಯಸುತ್ತೇನೆ.

ನನ್ನ ಹವ್ಯಾಸ ಹಾಗೂ ಆಸಕ್ತಿಗಳು

ನನ್ನ ಹವ್ಯಾಸಗಳೆಂದರೆ ಕಥೆ, ಕವನ, ಕವ್ಯಾ ಓದುವುದು, ಕ್ರಿಕೆಟ್, ಕಬ್ಬಡ್ಡಿ, ವಾಲಿಬಾಲ್ ಆಡುವುದು ಮುಂದಾದವು. ನನಗೆ ಕೊಳಲು, ಪಿಯಾನೋ ನುಡಿಸಲು ಬರುತ್ತದೆ. ನನಗೆ ಕನ್ನಡ ಚಲನಚಿತ್ರ ಹಾಗು ಹಾಡುಗಳನ್ನು ನೋಡುವುದು ಹಾಗು ಕೇಳಲುವುದರಲ್ಲಿ ಆಸಕ್ತಿ ಇದ್ದೆ. ಕನ್ನಡ ನಾಟಕವನ್ನು ನೋಡಲು ನನಗೆ ಇಷ್ಟ.

This user is a member of WikiProject Education in India



ಉಪಪುಟಗಳು