ಬಿ. ಸಂತೋಷ್ ಬಾಬು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: '''ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು''' (೧೯೮೨-೧೫ ಜೂನ್ ೨೦೨೦) ಭಾರತೀಯ ಸೇನೆಯ...
( ಯಾವುದೇ ವ್ಯತ್ಯಾಸವಿಲ್ಲ )

೨೧:೨೯, ೨೫ ಜೂನ್ ೨೦೨೦ ನಂತೆ ಪರಿಷ್ಕರಣೆ

ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು (೧೯೮೨-೧೫ ಜೂನ್ ೨೦೨೦) ಭಾರತೀಯ ಸೇನೆಯ ಹುತಾತ್ಮ ಯೋಧ. ೧೬ ಬಿಹಾರ್ ರೆಜಿಮೆಂಟಿನ ಕಮಾಂಡರ್ ಆಗಿ,೨೦೨೦ರ ಭಾರತ-ಚೀನಾ ಕಲಹದಲ್ಲಿ ವೀರಮರಣ ಪಡೆದ ಸೇನಾನಿ. [೧]

ಬಾಲ್ಯ

ತೆಲಂಗಾಣದ ಸೂರ್ಯಾಪೇಟದಲ್ಲಿ ಜನಿಸಿದ ಸಂತೋಷ್, ಬ್ಯಾಂಕರ್ ತಂದೆ ಬಿಕ್ಕುಮಲ್ಲ ಉಪೇಂದ್ರ ಮತ್ತು ಮಂಜುಳಾ ದಂಪತಿಯ ಮಗನಾಗಿ ೧೯೮೨ರಲ್ಲಿ ಜನಿಸಿದರು. ೬ನೆಯ ತರಗತಿಯಲ್ಲಿ ಕೊರುಕೊಂಡದ ಸೈನಿಕ ಶಾಲೆ ಸೇರಿದ ಸಂತೋಷ್, ೧೨ನೆಯ ತರಗತಿಯನ್ನು ಸೈನಿಕ ಶಾಲೆಯಲ್ಲಿ ಮುಗಿಸಿದರು.[೨]

ಕುಟುಂಬ

ಕರ್ನಲ್ ಸಂತೋಷ್ ,ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಬ್ಯಾಂಕರ್ ಬಿಕ್ಕುಮಲ್ಲ ಉಪೇಂದ್ರ ಮತ್ತು ಮಂಜುಳಾರ ಮಗ. ಇವರ ಪತ್ನಿ ಸಂತೋಷಿ. ೨೦೧೧ರಲ್ಲಿ ಮಗಳಿ ಅಭಿಜ್ಞಾ ಮತ್ತು ೨೦೧೫ರಲ್ಲಿ ಮಗ ಅನಿರುದ್ಧ ಜನನ. ದಿಲ್ಲಿಯಲ್ಲಿ ಸೇನಾ ಕಂಟೋಣ್ಮೆಂಟಿನಲ್ಲಿ ವಾಸ

ಸೈನಿಕ ವೃತ್ತಿ

ಡಾರ್ಜಿಲಿಂಗಿನ ಭಾರತೀಯ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾದ ಸಂತೋಷ್, ೨೦೦೪ರಲ್ಲಿ ಪುಣೆಯ ರಾಷ್ಟ್ರೀಯ ಸೇನಾ ಅಕಾಡೆಮಿಯಿಂದ ಸೇನಾ ಅಧಿಕಾರಿಯಾಗಿ ತೇರ್ಗಡೆಯಾದರು. ೨೦೦೪ರ ಡಿಸೆಂಬರ್ ೧೦ರಂದು ೧೬ ಬಿಹಾರ್ ರೆಜಿಮೆಂಟ್ ಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡರು. ತರಬೇತಿಯ ನಂತರ ಸಂತೋಷ್ ಜಮ್ಮು ಕಾಶ್ಮೀರ ರಾಜ್ಯದ ಸೇನಾ ಬ್ಯಾರಕ್ ಸೇರಿದರು.

ಸೇವಾ ಹಿರಿಮೆ

೨೦೦೬ರಲ್ಲಿ ಕ್ಯಾಪ್ಟನ್ ಆಗಿ ಪದೋನ್ನತಿ ಪಡೆದ ಸಂತೋಷ್, ೨೦೦೧ರಲ್ಲಿ ಮೇಜರ್ ಪದವಿ ಪಡೆದರು. ಕಾಂಗೋ ನಲ್ಲಿ ಸಂಯುಕ್ತ ರಾಷ್ಟ್ರ ಶಾಂತಿ ದಲದಲ್ಲಿ ಸೇವೆ ಸಲ್ಲಿಸಿದ ಸಂತೋಷ್, ಅಲ್ಲಿನ ಜನ-ಸೇನೆ ಮತ್ತು ಸರ್ಕಾರದ ಮೆಚ್ಚುಗೆ ಪಡೆದರು. ೨೦೧೭ರಲ್ಲಿ ಲೆಫ್ಟಿನೆಂಟ್ ಕರ್ನಲ್ ಆದ ಸಂತೋಷ್, ಮತ್ತೆ ಜಮ್ಮು ಕಾಶ್ಮೀರದಲ್ಲಿ ತಮ್ಮ ಮಾತೃ ರೆಜಿಮೆಂಟ್ ೧೬ ಬಿಹಾರ್ ಗೆ ಮರಳಿದರು. ೨೦೧೯ ಡಿಸೆಂಬರ್ ನಲ್ಲಿ ತಮ್ಮ ರೆಜಿಮೆಂಟ್ ನ ಕಮಾಂಡರ್ ಆಗಿ ನಿಯುಕ್ತಿಗೊಂಡರು.[೩]

ಸಾವು

ಗಲ್ವಾನ್ ನದಿ ಕಣಿವೆಯಲ್ಲಿ ಚೀನಾದ ಸೇನೆ ಅಕ್ರಮವಾಗಿ ಭಾರತದ ಗಡಿ ದಾಟಿ, ಡೇರೆ ಕಟ್ಟಿತು. ೧೪ ಜೂನ್ ರಂದು ಕರ್ನಲ್ ಸಂತೋಷ್ ಚೀನಿ ಸೇನೆಯ ಅಧಿಕಾರೈಗಳನ್ನು ಭೇಟಿ ಮಾಡಿ, ಸೌಜನ್ಯಪೂರ್ವಕವಾಗಿ ಹಿಂತೆಗೆಯಲು ಮನವಿ ಮಾಡಿದರು. ಆದರೆ, ಅದಕ್ಕೆ ಕಿವಿಗೊಡದ ಚೀನೀ ಯೋಧರು, ಆಕ್ರಮಣಗೈಯ್ದರು. ೧೫ ಜೂನ್ ರಾತ್ರಿ ಮತ್ತೊಮ್ಮೆ, ಕರ್ನಲ್ ಸಂತೋಷ್ ಚೀನೀಯರ ಬಳಿ ತೆರಳಿದಾಗ, ಚೀನೀ ಸೇನೆ, ಕೋಲು, ಕಬ್ಬಿಣ ಸರಳು ಮತ್ತು ಬೇಟನ್ ಗಳಿಂದ ಕರ್ನಲ್ ಸಂತೋಷ್ ಮೇಲೆ ದಾಳಿ ಮಾಡಿದರು. ಹವಾಲ್ ದಾರ್ ಪಳನಿ, ಸಿಪಾಯಿ ಕುಂದನ್ ಓಝಾ ಮತ್ತು ಕರ್ನಲ್ ಸಂತೋಷ್ ತೀವ್ರವಾಗಿ ಗಾಯಗೊಂಡರು. ಸ್ಥಳದಲ್ಲಿಯೇ ಈ ಮೂವರೂ ಅಸು ನೀಗಿದರು. ಒಟ್ಟು ೧೭ ಭಾರತೀಯ ಯೋಧರು ಅಲ್ಲಿ ಸಾವನ್ನು ಅಪ್ಪಿದರು.[೪]

ಕೊನೆ ವಿಧಿ

೧೭ ಜೂನ್ ರಂದು ತೆಲಂಗಾಣದ ಹಕೀಂಪೇಟೆಗೆ ಕರ್ನಲ್ ಸಂತೋಷ್ ಕಳೇಬರವನ್ನು ತಂದು, ೧೮ ಜೂನ್ ರಂದು ಅವರ ಮನೆ ಬಳಿ, ಎಲ್ಲಾ ಗೌರವಗಳೊಂದಿಗೆ ಅಂತಿಮ ವಿಧಿಗಳನ್ನು ಪೂರೈಸಲಾಯಿತು.

  1. http://egazette.nic.in/WriteReadData/2005/W_31_2011_111.pdf
  2. https://www.hindustantimes.com/india-news/brilliant-guy-both-in-studies-and-duties-col-b-santosh-babu-lived-his-dream-in-the-india-army/story-ftMlISJZcfMK5KflXwcUAN.html
  3. https://economictimes.indiatimes.com/news/defence/col-santosh-babu-had-taken-charge-of-armys-16-bihar-unit-in-december/articleshow/76416099.cms
  4. http://pibarchive.nic.in/archive/ArchiveSecondPhase/EXTERNAL%20AFFAIRS/1975-SEPT-DEC-EXTERNAL-AFFAIRS-VOL-III/EXT-1975-11-01_145.pdf