ಭಾರತ ಚೀನಾ ಗಡಿ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೮೮ ನೇ ಸಾಲು: ೮೮ ನೇ ಸಾಲು:
*ಭಾರತ–ಚೀನಾ–ಭೂತಾನ್‌ ಗಡಿಯಲ್ಲಿ ಜೂನ್ 2017 ರಿಂದ (72 ದಿನಗಳಿಂದ) ಉಂಟಾಗಿದ್ದ ಬಿಕ್ಕಟ್ಟು, ೨೮-ಆಗಸ್ಟ್ ೨೦೧೭ ಸೋಮವಾರ ಶಮನವಾಗಿದೆ. ಸಂಘರ್ಷದ ಕೇಂದ್ರ ಬಿಂದುವಾಗಿದ್ದ ದೋಕಲಾದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ.(ಭಾರತದ ವಿದೇಶಾಂಗ ಸಚಿವಾಲಯ)<ref> http://www.prajavani.net/news/article/2017/08/29/516428.html ;ಪಿಟಿಐ;29 Aug,2017</ref>
*ಭಾರತ–ಚೀನಾ–ಭೂತಾನ್‌ ಗಡಿಯಲ್ಲಿ ಜೂನ್ 2017 ರಿಂದ (72 ದಿನಗಳಿಂದ) ಉಂಟಾಗಿದ್ದ ಬಿಕ್ಕಟ್ಟು, ೨೮-ಆಗಸ್ಟ್ ೨೦೧೭ ಸೋಮವಾರ ಶಮನವಾಗಿದೆ. ಸಂಘರ್ಷದ ಕೇಂದ್ರ ಬಿಂದುವಾಗಿದ್ದ ದೋಕಲಾದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ.(ಭಾರತದ ವಿದೇಶಾಂಗ ಸಚಿವಾಲಯ)<ref> http://www.prajavani.net/news/article/2017/08/29/516428.html ;ಪಿಟಿಐ;29 Aug,2017</ref>
==ಜೂನ್ 15, 2020 ರ ದೋಕಲಾ ಸಂಘರ್ಷ==
==ಜೂನ್ 15, 2020 ರ ದೋಕಲಾ ಸಂಘರ್ಷ==
*ಗಾಲ್ವನ್‌ ಕಣಿವೆ ಮತ್ತು ಪೂರ್ವ ಲಡಾಖ್‌ ಪ್ರದೇಶದಲ್ಲಿ ಜೂನ್ 15, ೨೦೨೦ ಸೋಮವಾರ ರಾತ್ರಿ ಚೀನಾದ ಸೈನಿಕರ ಜತೆ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ 16 ಬಿಹಾರ ರೆಜಿಮೆಂಟ್‌ನ ಕರ್ನಲ್‌ ಬಿ. ಸಂತೋಷ್‌ ಬಾಬು, ಯೋಧರಾದ ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಸೇರಿದಂತೆ ಇಪ್ಪತ್ತು ಮಂದಿ ಯೋಧರು ಮೃತಪಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ಚೀನಾದ 43 ಸೈನಿಕರು ಸಾವಿಗೀಡಾಗಿದ್ದಾರೆ ಎಂಬ ವರದಿ ಇದೆ.<ref>[https://www.prajavani.net/stories/national/four-indian-soldiers-are-in-critical-condition-after-the-violent-face-off-with-chinese-troops-on-737255.html
*ಗಾಲ್ವನ್‌ ಕಣಿವೆ ಮತ್ತು ಪೂರ್ವ ಲಡಾಖ್‌ ಪ್ರದೇಶದಲ್ಲಿ ಜೂನ್ 15, ೨೦೨೦ ಸೋಮವಾರ ರಾತ್ರಿ ಚೀನಾದ ಸೈನಿಕರ ಜತೆ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ 16 ಬಿಹಾರ ರೆಜಿಮೆಂಟ್‌ನ [[ಕರ್ನಲ್_ಸಂತೋಷ್_ಬಾಬು|ಕರ್ನಲ್‌ ಬಿ. ಸಂತೋಷ್‌ ಬಾಬು]], ಯೋಧರಾದ ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಸೇರಿದಂತೆ ಇಪ್ಪತ್ತು ಮಂದಿ ಯೋಧರು ಮೃತಪಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ಚೀನಾದ 43 ಸೈನಿಕರು ಸಾವಿಗೀಡಾಗಿದ್ದಾರೆ ಎಂಬ ವರದಿ ಇದೆ.<ref>[https://www.prajavani.net/stories/national/four-indian-soldiers-are-in-critical-condition-after-the-violent-face-off-with-chinese-troops-on-737255.html
ಗಡಿ ಸಂಘರ್ಷ | 20 ಯೋಧರ ಸಾವು, ನಾಲ್ವರ ಸ್ಥಿತಿ ಗಂಭೀರ;d: 17 ಜೂನ್ 2020,]</ref>
ಗಡಿ ಸಂಘರ್ಷ | 20 ಯೋಧರ ಸಾವು, ನಾಲ್ವರ ಸ್ಥಿತಿ ಗಂಭೀರ;d: 17 ಜೂನ್ 2020,]</ref>
===ಮಾನವ ವಾಸಕ್ಕೆ ಅಯೊಗ್ಯವಾದ ಕಠಿಣ ಪ್ರದೇಶ===
===ಮಾನವ ವಾಸಕ್ಕೆ ಅಯೊಗ್ಯವಾದ ಕಠಿಣ ಪ್ರದೇಶ===

೨೧:೨೮, ೨೫ ಜೂನ್ ೨೦೨೦ ನಂತೆ ಪರಿಷ್ಕರಣೆ

ಬ್ರಿಟಿಷ್ ಇಂಡಿಯನ್ ಎಂಪೈರ್ 1909 ಇಂಪೀರಿಯಲ್ ಗೆಝೆಟಿಯರ್ ಆಫ್ ಇಂಡಿಯಾ- ಉತ್ತರದಲ್ಲಿ ಮೆಕ್ ಮೋಹನ್ ಭಾರತ -ಚೀನಾ ಗಡಿರೇಖೆ

ಸಿನೊ-ಇಂಡಿಯನ್ ಗಡಿ ವಿವಾದ

ಚೀನಾ ಮತ್ತು ಭಾರತದ ನಡುವಿನ ಎರಡು ದೊಡ್ಡ ಮತ್ತು ವಿವಿಧ ಸಣ್ಣ ವಿಭಜಿತ ಪ್ರದೇಶಗಳ ಮೇಲಿನ ಸಾರ್ವಭೌಮತ್ವವು ವಿವಾದಕ್ಕೆ ಸಿಲುಕಿದೆ. ಪಶ್ಚಿಮದ, ಅಕ್ಸಾಯ್ ಚಿನ್ ಪ್ರದೇಶವನ್ನು,, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಪ್ರದೇಶದ ಭಾಗವಾಗಿ ಭಾರತ ತನಗೆ ಸೇರಿದ್ದೆಂದು ಹೇಳುತ್ತದೆ. ಆದರೆ ಕ್ಸಿನ್ಜಿಯಾಂಗ್ನ ಚೀನೀಯ ಸ್ವಾಯತ್ತ ಪ್ರದೇಶದ ಭಾಗವಾಗಿ ಅಕ್ಸಾಯ್ ಚಿನ್ ಪ್ರದೇಶ ಚೀನಾದ ನಿಯಂತ್ರಣದಲ್ಲಿದೆ ಮತ್ತು ಅದರ ಆಡಳಿತಕ್ಕೆ ಒಳಪಟ್ಟಿದೆ. ಇದು ಕ್ಸಿನ್ಜಿಯಾಂಗ್-ಟಿಬೆಟ್‍ನಲ್ಲಿ ಹಾದುಹೋಗುವ ಒಂದು ಹೆದ್ದಾರಿಯ ಹತ್ತಿರ ಇದೆ. ಅದು ವಾಸ್ತವಿಕವಾಗಿ ಜನರಹಿತ ಎತ್ತರದ ಏನೂ ಬೆಳೆಯದ ಹಿಮಾಚ್ಛಾದಿತ ಪ್ರದೇಶವಾಗಿದೆ. ವಿವಾದಕ್ಕೊಳಗಾದ ಇತರ ದೊಡ್ಡ ವಿವಾದಿತ ಭೂಪ್ರದೇಶ, ಪೂರ್ವದ, ಮೆಕ್ ಮಹೊನ್ ರೇಖೆಯ ದಕ್ಷಿಣ ಭಾಗದಲ್ಲಿದೆ. ಇದನ್ನು ಹಿಂದೆ ಈಶಾನ್ಯ ಫ್ರಾಂಟಿಯರ್ ಏಜೆನ್ಸಿ ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ಈಗ ಅರುಣಾಚಲ ಪ್ರದೇಶ ಎಂದು ಕರೆಯಲಾಗುತ್ತದೆ. ಮೆಕ್ ಮಹೊನ್ ಲೈನ್ ಬ್ರಿಟಿಷ್ ಭಾರತ ಮತ್ತು ಟಿಬೆಟ್ ನಡುವಿನ 1914 ಸಿಮ್ಲಾ ಸಮಾವೇಶದಲ್ಲಿ ಆದ ಒಪ್ಪಂದದ ಭಾಗವಾಗಿತ್ತು, ಇದು ಚೀನಾ ನಿರಾಕರಿಸಿದ ಒಪ್ಪಂದವಾಗಿದೆ. [೧]

ಭಾರತದ ವಿವಾದಿತ ಪ್ರದೇಶಗಳನ್ನು ತೋರಿಸುತ್ತಿರುವ ನಕ್ಷೆ
India map disputed legend

ಭಾರತ – ಚೀನಾ ಯುದ್ಧ

1962 ರಲ್ಲಿ ಸಿನೋ-ಇಂಡಿಯನ್ (ಭಾರತ – ಚೀನಾ ಯುದ್ಧ) ಯುದ್ಧವು ಈ ಎರಡೂ ಪ್ರದೇಶಗಳಲ್ಲಿಯೂ ಹೋರಾಡಲ್ಪಟ್ಟಿತು. "ಪರಸ್ಪರ ವಿಶ್ವಾಸ-ನಿರ್ಮಾಣ ಕ್ರಮಗಳು" ಮತ್ತು ಪರಸ್ಪರ ಒಪ್ಪಿಗೆಯಾದ ವಾಸ್ತವಿಕ ನಿಯಂತ್ರಣ ರೇಖೆ ಸೇರಿದಂತೆ 1996 ರಲ್ಲಿ ವಿವಾದವನ್ನು ಬಗೆಹರಿಸಲು ಒಂದು ಒಪ್ಪಂದವಾಯಿತು. 2006 ರಲ್ಲಿ, ಭಾರತಕ್ಕೆ ಚೀನಾದ ರಾಯಭಾರಿ ಅರುಣಾಚಲಪ್ರದೇಶವು ಚೀನಿಯರ ಭೂಪ್ರದೇಶವೆಂದು ಹೇಳಿದ. ಆ ಸಮಯದಲ್ಲಿ, ಎರಡೂ ದೇಶಗಳು ಸಿಕ್ಕಿಂನ ಉತ್ತರ ತುದಿಯಲ್ಲಿ ಒಂದು ಕಿಲೋಮೀಟರುಗಳವರೆಗೆ ಆಕ್ರಮಣ ಮಾಡಿದೆ ಎಂದು ದೂರಿದವು. 2009 ರಲ್ಲಿ, ಗಡಿಯುದ್ದಕ್ಕೂ ಹೆಚ್ಚುವರಿ ಮಿಲಿಟರಿ ಪಡೆಗಳನ್ನು ನಿಯೋಜಿಸುವುದಾಗಿ ಭಾರತ ಘೋಷಿಸಿತು. [5] ಗಡಿ ವಿವಾದವನ್ನು ಬಗೆಹರಿಸಲು ಚೀನಾವನ್ನು "ಒನ್ ಇಂಡಿಯಾ" ನೀತಿಯನ್ನು ಅಂಗೀಕರಿಸಬೇಕೆಂದು ಭಾರತವು 2014 ರಲ್ಲಿ ಸೂಚಿಸಿದೆ[೨][೩]

ಚೀನಾದ ಎಚ್ಚರಿಕೆ

  • ಇತಿಹಾಸದ ಪಾಠಗಳಿಂದ ಭಾರತೀಯ ಸೈನಿಕರು ಪಾಠ ಕಲಿಯಬೇಕು ಎಂದು ಚೀನಾ ಭಾರತೀಯ ಸೈನಿಕರಿಗೆ ಎಚ್ಚರಿಕೆ ನೀಡುವ ಮೂಲಕ 1962ರ ಯುದ್ಧವನ್ನು ನೆನಪಿಸಿದೆ. ಈ ಮೂಲಕ ಭಾರತ ಮತ್ತು ಚೀನಾ ಸೈನಿಕರು ಸಿಕ್ಕಿಂ ಗಡಿಯಲ್ಲಿ ಉದ್ಚಿಗ್ನ ವಾತಾವರಣ ಹೆಚ್ಚಿಸುವಂತೆ ಮಾಡಿದೆ. ಗಡಿಯಲ್ಲಿನ ಉದ್ವಿಗ್ನ ವಾತಾವರಣ ಕಡಿಮೆ ಆಗಬೇಕಾದರೆ ಅರ್ಥಪೂರ್ಣ ಚರ್ಚೆ ಆಗಬೇಕಿದೆ. ಅದಕ್ಕೂ ಮುನ್ನ ಡೊಂಗ್ಲೊಂಗ್‍ನಲ್ಲಿ ನಿಯೋಜಿಸಿರುವ ಸೇನೆಯನ್ನು ಹಿಂಪಡೆಯಬೇಕು ಎಂದು ಚೀನಾ ಸಲಹೆ ನೀಡಿದೆ. ಡೊಂಗ್ಲಾಂಗ್‍ ಪ್ರದೇಶದಲ್ಲಿ ಭಾರತೀಯ ಸೈನಿಕರು ಒಳ ನುಸುಳಿರುವ ಚಿತ್ರಗಳನ್ನು ಸೆರೆ ಹಿಡಿಯಲಾಗಿದ್ದು, ಸಾಕಷ್ಟು ಸಾಕ್ಷ್ಯಗಳು ನಮ್ಮ ಬಳಿ ಇವೆ. ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಬೇಕಾದರೆ ಮೊದಲು ಸೈನಿಕರನ್ನು ವಾಪಸ್ ‍ಪಡೆಯಬೇಕು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‍ ಹೇಳಿದ್ದಾರೆ. ಡೊಂಗ್ಲೊಂಗ್‍ ಕಡೆಯಿಂದ ಭೂತಾನ್ ಸೇನಾ ನೆಲೆಯೆಡೆಗೆ ಚೀನಾ ನಿರ್ಮಿಸುತ್ತಿರುವ ರಸ್ತೆಗೆ ಭೂತಾನ್ ವಿರೋಧಿಸುತ್ತಿದೆ ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಈ ರಸ್ತೆ ಸಹಕಾರಿಯಾಗಲಿದೆ ಎಂದಿದೆ. ಹೇಳಿದೆ[೪]

ಡೋಕ್ಲಾಮ್ ಗಾಗಿ ಇಂಡೋ-ಚೀನಾ ವಾಕ್ ಸಮರ

  • ಭಾರತದಲ್ಲಿರುವ ಗಡಿ ಪ್ರದೇಶ ಡೋಕ್ಲಾಮ್ ಅನ್ನು ತನ್ನದೆಂದು ವಾದಿಸುವ ಮೂಲಕ ಚೀನಾ ಮತ್ತೆ ತನ್ನ ಕಾಲುಕೆರೆದಿದ್ದು, ಚೀನಾಕ್ಕೆ ಅದರದೇ ರೀತಿಯಲ್ಲಿ ಉತ್ತರಿಸಲು ಮುಂದಾಗಿರುವ ಭಾರತ ವಿವಾದಿತ ಡೋಕ್ಲಾಮ್‍ ಗೆ 2017 ಜುಲೈ ಆರಂಭದಲ್ಲಿ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸಿದೆ.
  • ಕಳೆದು ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಂಘರ್ಷ ಇದೀಗ ತಾರಕಕ್ಕೇರಿದ್ದು, ವಿವಾದಿತ ಪ್ರದೇಶದಲ್ಲಿ ಚೀನಾ ದೇಶ ತನ್ನ ಹೆಚ್ಚುವರಿ ಪಡೆಗಳನ್ನು ರವಾನಿಸುವುದರೊಂದಿಗೆ ಇಂಡೋ-ಚೀನಾ ಗಡಿಯಲ್ಲಿ ಇದೀಗ ಪ್ರಕ್ಷುಬದ್ಧ ವಾತಾವರಣ ನಿರ್ಮಾಣವಾಗಿದೆ. ಇನ್ನು ಚೀನಾಕ್ಕೆ ಅದರದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಭಾರತ ಕೂಡ ಡೋಕ್ಲಾಮ್ ಪ್ರದೇಶಕ್ಕೆ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸಿದೆ.
  • ಇತ್ತ ತನ್ನ ಭೂ ಪ್ರದೇಶವಾಗಿರುವ ಡೋಕ್ಲಾಮ್ ಗೆ ಭಾರತೀಯ ಸೈನಿಕರೇ ಅತಿಕ್ರಮಣ ಮಾಡಿದ್ದಾರೆ ಎಂದು ಚೀನಾ ಆರೋಪಿಸಿದ್ದು, ಇದಕ್ಕೆ ಉತ್ತರಿಸುವ ಭಾರತ ಕೂಡ ಡೋಕ್ಲಾಮ್ ಪ್ರದೇಶ ತನ್ನ ಗಡಿ ಪ್ರದೇಶವಾಗಿದೆ. ತನ್ನ ಗಡಿಯಲ್ಲಿ ಯಾರೇ ಅತಿಕ್ರಮಣ ಮಾಡಿದರೂ ನಾವು ಸುಮ್ಮನಿರುವುದಿಲ್ಲ. ಇದೇ ಕಾರಣಕ್ಕೆ ವಿವಾದಿತ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಿದ್ದೇವೆಯೇ ಹೊರತು ಯುದ್ಧ ಮಾಡುವ ಉದ್ದೇಶದಿಂದಲ್ಲ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
  • ಕಳೆದ ಒಂದು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು. ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿದ್ದು, ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದ್ದು, ಭಾರತೀಯ ಬಂಕರ್ ಗಳನ್ನು ನಾಶ ಮಾಡುವ ಮೂಲಕ ಚೀನಾ ಮತ್ತೆ ತನ್ನ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದೆ.[೫]
  • ದಿ.04 ಜುಲೈ 2017ಭಾರತ-ಚೀನಾ ಗಡಿ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್ ಶುವಾಂಗ್ ಅವರು, ಸಿಕ್ಕಿಂ ವಲಯದಲ್ಲಿ ರಸ್ತೆ ನಿರ್ಮಿಸುವ ತನ್ನ ಸೇನೆಯ ಪ್ರಯತ್ನಕ್ಕೆ ಭಾರತೀಯ ಸೇನೆ ತಡೆಯೊಡ್ಡಿರುವುದು ವಿಶ್ವಾಸದ್ರೋಹ ಎಂದು ಹೇಳಿದ್ದಾರೆ. ಸಿಕ್ಕಿಂ ಗಡಿಯನ್ನು 1890 ಸಿನೋ-ಬ್ರಿಟಿಷ್ ಒಪ್ಪಂದದಲ್ಲಿ ಸ್ಪಷ್ಟವಾಗಿ ಗುರಿತಿಸಲಾಗಿದೆ. 1959ರಲ್ಲಿ ಭಾರತದ ಪ್ರಧಾನಿ ನೆಹರು ಒಪ್ಪಂದ ದೃಢೀಕರಿಸಿ ಪತ್ರ ಬರೆದಿದ್ದಾರೆ. ಆ ನಿಲುವಿಗೆ ಭಾರತ ಸರ್ಕಾರ ವಂಚನೆ ಮಾಡಿದೆ. ಕೂಡಲೇ ತನ್ನ ಸೇನಾ ಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಅವರು ನಮಗೆ 1962 ಭಾರತ ಬೇರೆ 2017ರ ಭಾರತ ಬೇರೆ ಎಂದು ನೆನಪು ಮಾಡಿಕೊಡುವುದಾದರೆ, 1962ರ ಚೀನಾವೇ ಬೇರೆ ಈಗಿನ ಚೀನಾ ದೇಶವೇ ಬೇರೆ ಎಂಬುದನ್ನೂ ಮರೆಯಬಾರದು ಎಂದು ತಿಳಿಸಿದ್ದಾರೆ. ಬಿಕ್ಕಟ್ಟು ಬಗೆಹರಿಯದಿದ್ದರೆ ಯುದ್ಧ ಖಚಿತ ಎಂದು ಚೀನಾ ತಜ್ಞರ ಎಚ್ಚರಿಕೆ ನೀಡಿದೆ.1962ರ ಯುದ್ಧದಲ್ಲಿ ಭಾರತದ 4383 ಯೋಧರು ಹಾಗೂ ಚೀನಾದ 722 ಯೋಧರು ಮೃತಪಟ್ಟಿದ್ದರು. ಎರಡೂ ದೇಶಗಳು ಪರಸ್ಪರ ಮಾತುಕತೆಗೆ ಮುಂದಾಗಬೇಕು ಎಂದು ತಜ್ಞರು ತಿಳಿಸಿದ್ದಾರೆ. [೬]

ವಿವಾದದ ವಿವರ

  • ಭಾರತ–ಚೀನಾ ಗಡಿ ವಿವಾದಕ್ಕೆ ಎರಡು ಮುಖ್ಯ ಕಾರಣಗಳು: ಭಾರತ ಮತ್ತು ಚೀನಾ ನಡುವೆ 3,488 ಕಿ.ಮೀ ಉದ್ದ ಗಡಿ ಇದೆ. ಎಲ್ಲ ಭಾಗಗಳಲ್ಲಿ ಗಡಿ ಗುರುತಿಸುವಿಕೆ ಆಗಿಲ್ಲ. ಈ ಗಡಿಯನ್ನು 14 ವಿಭಾಗಗಳಾಗಿ ವಿಂಗಡಿಸಲಾಗಿದೆ. ಲಡಾಖ್‌ನ ಅಕ್ಸೈ ಚಿನ್‌ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ವಾಸ್ತವ ನಿಯಂತ್ರಣ ರೇಖೆ ಇದೆ. ಇದು ಚೀನಾವು 1962ರಲ್ಲಿ ನಿಯಂತ್ರಣಕ್ಕೆ ಪಡೆದ ಪ್ರದೇಶವಾದ ಅರುಣಾಚಲ ಪ್ರದೇಶದ 90,000 ಚದರ ಕಿ.ಮೀ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಹಕ್ಕು ಸಾಧಿಸುತ್ತಿದೆ. ಈ ಪ್ರದೇಶವನ್ನು ದಕ್ಷಿಣ ಟಿಬೆಟ್‌ ಎಂದೇ ಗುರುತಿಸುತ್ತಿದೆ.
  • ಪೂರ್ವ ಮತ್ತು ಪಶ್ಚಿಮ ವಿಭಾಗಗಳಲ್ಲದೆ ಉತ್ತರಾಖಂಡದ ಮಧ್ಯ ವಿಭಾಗದಲ್ಲಿಯೂ ಗಡಿ ವಿವಾದ ಇದೆ. ಇಲ್ಲಿ 10,000 ಚದರ ಕಿ.ಮೀ ಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. 1986ರ ನಂತರ ಗಡಿ ವಿವಾದ ಪರಿಹಾರಕ್ಕೆ ಹಲವು ಸುತ್ತು ಮಾತುಕತೆಗಳು ನಡೆದಿವೆ. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಸರ್ ಮೆಕ್‌ ಮಹೋನ್‌ ಗಡಿರೇಖೆ ಮತ್ತು ಚೀನಾದ ವಾದ

  • 1. ಬ್ರಿಟಿಷ್‌ ವಸಾಹತುಶಾಹಿ ಬಿಟ್ಟು ಹೋದ ಬಳುವಳಿ: ಸಮಾನ ಸಂಸ್ಕೃತಿ ಮತ್ತು ಪರಂಪರೆ ಇಲ್ಲದ ಹಲವು ಪ್ರದೇಶಗಳನ್ನು ಸೇರಿಸಿಕೊಂಡು ಬ್ರಿಟಿಷರು ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು. ಬ್ರಿಟಿಷ್‌ ಆಡಳಿತದ ಕಾಲದಲ್ಲಿ ಚೀನಾದ ಜತೆಗೆ ಬಲವಂತದಿಂದ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು.
  • 2. ಗಡಿ ನಕ್ಷೆ ಬಗ್ಗೆ ಭಿನ್ನ ಗ್ರಹಿಕೆ: ಬ್ರಿಟಿಷ್‌ ಭಾರತ, ಚೀನಾ ಮತ್ತು ಟಿಬೆಟ್‌ ನಡುವಣ ಶಿಮ್ಲಾ ಸಮಾವೇಶದಲ್ಲಿ ಬ್ರಿಟಿಷ್‌ ಭಾರತದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ಸರ್ ಮೆಕ್‌ ಮಹೋನ್‌ ಅವರು ಪ್ರಧಾನ ಸಂಧಾನಕಾರರಾಗಿದ್ದರು. ಚೀನಾ ಪ್ರತಿನಿಧಿಯಾಗಿದ್ದ ಇವಾನ್‌ ಚೆನ್‌ ಅವರು ಟಿಬೆಟ್‌ ಪರವಾಗಿ ಸಂಧಾನದಲ್ಲಿ ಭಾಗಿಯಾಗಲು ನಿರಾಕರಿಸಿದರು. ಹಾಗಾಗಿ ಟಿಬೆಟ್‌ ಪ್ರತಿನಿಧಿಗಳ ಜತೆ ಮಹೋನ್‌ ಮಾತುಕತೆ ನಡೆಸಿ ಗಡಿ ಗುರುತಿಸಲಾಯಿತು. ಇದನ್ನು ಮೆಕ್‌ಮಹೋನ್‌ ರೇಖೆ ಎಂದೇ ಕರೆಯಲಾಗುತ್ತದೆ.
  • ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಹಾಗಾಗಿ ಇದನ್ನು ಟಿಬೆಟ್‌ ಮತ್ತು ಬ್ರಿಟಿಷ್‌ ಭಾರತದ ನಡುವಣ ದ್ವಿಪಕ್ಷೀಯ ಒಪ್ಪಂದ ಎಂದು ಪರಿಗಣಿಸಲಾಯಿತು. ಪರಿಣಾಮವಾಗಿ ದಕ್ಷಿಣ ಟಿಬೆಟ್‌ ಎಂದು ಕರೆಯಲಾಗುತ್ತಿದ್ದ ತವಾಂಗ್‌ (ಅರುಣಾಚಲ ಪ್ರದೇಶದ ಒಂದು ಭಾಗ) ಬ್ರಿಟಿಷ್‌ ಭಾರತದ ಭಾಗವಾಯಿತು.
  • ಸ್ವತಂತ್ರ ರಾಷ್ಟ್ರ ಸ್ಥಾನವನ್ನು 1950ರಲ್ಲಿ ಟಿಬೆಟ್‌ ಕಳೆದುಕೊಂಡಿತು. ತವಾಂಗ್‌ ಪ್ರದೇಶದ ನಿಯಂತ್ರಣವನ್ನು ಭಾರತ ಪಡೆದುಕೊಂಡಿತು. ಮೆಕ್‌ಮಹೋನ್‌ ರೇಖೆ ನಿಗದಿಯಾದಾಗ ಚೀನಾದ ಭಾಗವಾಗಿ ಟಿಬೆಟ್‌ ಇರಲಿಲ್ಲ. ಹಾಗಾಗಿ ಹಳೆಯ ಒಪ್ಪಂದ ಮೌಲಿಕ ಎಂದು ಭಾರತ ವಾದಿಸುತ್ತಿದೆ. ತವಾಂಗ್‌ ಪ್ರದೇಶವನ್ನು ಮರಳಿ ಕೊಡಬೇಕು ಎಂಬುದು ಚೀನಾದ ಆಗ್ರಹ.

೧೯೬೨ ರಭಾರತ ಚೀನಾ ಗಡಿಯುದ್ಧ

೧೯೬೨ರಲ್ಲಿ ಕಾಶ್ಮೀರದ ಉತ್ತರದ ಅಕ್ಸಾಯ್ ಚಿನ್ ಪ್ರದೇಶ, ಮಕಾರ್ಟ್ನಿ-ಮ್ಯಾಕ್ಡೊನಾಲ್ಡ್ ಲೈನ್, ಫಾರಿನ್ ಆಫೀಸ್ ಲೈನ್, ಮತ್ತು ಸೈನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಚೀನಾದ ಸೈನ್ಯದ ಒತ್ತುವರಿ, ಅವರು ಆಕ್ರಮಿಸಿಕೊಂಡ ಪ್ರದೇಶ,ಭಾರತೀಯ ಮತ್ತು ಚೀನೀಯರ ಗಡಿಯನ್ನು ತೋರಿಸುತ್ತದೆ.ಕೆಂಪು ಗೆರೆ ಚೀನಾ ಮುನ್ನುಗಿಬಂದ ಪ್ರದೇಶವನ್ನೂ; ಕೆಂಪು ಚುಕ್ಕಿಗಳು ಭಾರತದ ಕಾವಲು ಠಾಣೆಗಳನ್ನೂ ತೋರಿಸುವುದು.
  • ಎರಡು ದೇಶಗಳಾದ ಪ್ರಜಾಸತ್ತಾತ್ಮಕ ಭಾರತ ಮತ್ತು ಕಮ್ಯುನಿಸ್ಟ್‌ ಚೀನಾ ನಡುವೆ ಸುಮಧುರ ಸಂಬಂಧ ಎಂದೂ ಇರಲಿಲ್ಲ. 1962ರ ಯುದ್ಧ ಮತ್ತು 1967ರ ಸಂಘರ್ಷ ಬಿಟ್ಟರೆ ಎರಡೂ ದೇಶಗಳ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯೂ ಇರಲಿಲ್ಲ. ಆದರೆ ಪಾಕಿಸ್ತಾನ, ಭಯೋತ್ಪಾದನೆ, ಎನ್‌ಎಸ್‌ಜಿ ಸದಸ್ಯತ್ವ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವದಂತಹ ಹಲವು ವಿಚಾರಗಳಿಂದಾಗಿ ಸಂಬಂಧ ಇತ್ತೀಚೆಗೆ ಹದಗೆಟ್ಟಿದೆ. ಸಿಕ್ಕಿಂ ಗಡಿಯಲ್ಲಿ ಚೀನಾದ ರಸ್ತೆ ನಿರ್ಮಾಣಕ್ಕೆ ಭಾರತ ತಡೆ ಒಡ್ಡಿದೆ ಎಂದು ಚೀನಾ ಆರೋಪಿಸಿದೆ. ತನ್ನ ಭೂ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದೆ, ಎರಡು ಬಂಕರ್‌ ನಾಶ ಮಾಡಿದೆ ಎಂದು ಭಾರತ ಹೇಳಿದೆ. ಪರಿಣಾಮವಾಗಿ ಕಳೆದ ತಿಂಗಳಿನಿಂದ ಸಿಕ್ಕಿಂ ವಲಯದ ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಎರಡೂ ಕಡೆಯಲ್ಲಿ ತಲಾ 3,000ಕ್ಕೂ ಹೆಚ್ಚು ಯೋಧರನ್ನು ಜಮಾವಣೆ ಮಾಡಲಾಗಿದೆ ಎಂಬ ವರದಿಗಳಿವೆ. ದಿನಕಳೆದಂತೆ ಸಂಘರ್ಷ ಹೆಚ್ಚುತ್ತಿದೆಯೇ ಹೊರತು ಶಾಂತಿಯ ಪ್ರಯತ್ನ ಕಾಣಿಸುತ್ತಿಲ್ಲ. 1962ರಲ್ಲಿ ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧವೇ ನಡೆಯಿತು. ವಾಯುಪಡೆಯನ್ನು ಬಳಸದಿರುವ ಸರ್ಕಾರದ ನಿರ್ಧಾರದಿಂದ ಭಾರತಕ್ಕೆ ಈ  ಯುದ್ಧದಲ್ಲಿ ಹಿನ್ನಡೆಯಾಯಿತು. 1967ರಲ್ಲಿಯೂ  ಎರಡೂ ದೇಶಗಳ ನಡುವೆ ದೊಡ್ಡ ಮಟ್ಟದ ಸಂಘರ್ಷವೇ ನಡೆಯಿತು. ಸಿಕ್ಕಿಂ ವಲಯದಿಂದ ಚೀನಾ ಹಿಂದಕ್ಕೆ ಸರಿಯಿತು. ಈ ಸಂಘರ್ಷದಲ್ಲಿ ಚೀನಾಕ್ಕೆ ಹೆಚ್ಚಿನ ಹಿನ್ನಡೆ ಉಂಟಾಯಿತು.[೭]

ಚೀನಾ ಭಾರತ ವಾಣಿಜ್ಯಸಂಭಂಧ

  • ಏಷ್ಯಾದ ದೊಡ್ಡ ಆರ್ಥಿಕ ಶಕ್ತಿಗಳಾದ ಚೀನಾ ಮತ್ತು ಭಾರತಗಳು 1984ರಲ್ಲಿ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ, ಅತ್ಯಂತ ನೆಚ್ಚಿನ ರಾಷ್ಟ್ರಗಳು ಎಂದು ಪರಸ್ಪರ ಗುರುತಿಸಿಕೊಂಡವು.
  • 1994ರಲ್ಲಿ ಎರಡು ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸುವ ಒಪ್ಪಂದ ಮಾಡಿಕೊಂಡವು.
  • 2006ರ ನಂತರ ಎರಡೂ ರಾಷ್ಟ್ರಗಳ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಯಿತು. ಚೀನಾದ ಸ್ವಾಯತ್ತ ಪ್ರದೇಶವಾದ ಟಿಬೆಟ್‌ ಮತ್ತು ಭಾರತದ ನಡುವೆ ಗಡಿ ವ್ಯಾಪಾರ ಆರಂಭಿಸಲು 40 ವರ್ಷಗಳ ಬಳಿಕ ನಾಥೂ –ಲಾ ಮಾರ್ಗವನ್ನು ತೆರೆಯಲಾಯಿತು.
  • ಗಡಿ ಗುರುತಿಸುವಿಕೆ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಿದ್ದರೂ, ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ–ವಹಿವಾಟಿಗೆ ಧಕ್ಕೆಯಾಗಿಲ್ಲ.
ಭಾರತ ರಫ್ತು ಮಾಡುವ ಪ್ರಮುಖ ವಸ್ತುಗಳು
  • ಅದಿರುಗಳು, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‌, ಕಾರ್ಬನ್‌ಯುಕ್ತ ರಾಸಾಯನಿಕಗಳು, ಹತ್ತಿ
ಚೀನಾದಿಂದ ಆಮದಾಗುವ ವಸ್ತುಗಳು
  • ಯಂತ್ರೋಪಕರಣಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳು, ಸಿಮೆಂಟ್‌, ಕಾರ್ಬನ್‌ಯುಕ್ತ ರಾಸಾಯನಿಕಗಳು, ರೇಷ್ಮೆ, ಖನಿಜಯುಕ್ತ ಇಂಧನಗಳು, ತೈಲ
ವ್ಯಾಪಾರದಲ್ಲಿ ಭಾರಿ ಅಸಮತೋಲನ
  • ಚೀನಾವು ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ. ಆದರೆ, ಎರಡೂ ರಾಷ್ಟ್ರಗಳ ವ್ಯಾಪಾರ ಸಂಬಂಧದಲ್ಲಿ ಭಾರಿ ಅಸಮತೋಲನ ಇದೆ.
  • 2007ರ ನಂತರ ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ವಾರ್ಷಿಕವಾಗಿ ಶೇ 15ರಷ್ಟು ಹೆಚ್ಚಾಗುತ್ತಿದ್ದರೂ,  ಭಾರತವು ಚೀನಾದೊಂದಿಗೆ ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ.
  • 2016ರ ಆರ್ಥಿಕ ವರ್ಷದಲ್ಲಿ ಭಾರತವು 900 ಕೋಟಿ ಡಾಲರ್‌ (ಅಂದಾಜು ರೂ.58,500 ಕೋಟಿ) ಮೌಲ್ಯದ ವಸ್ತುಗಳನ್ನು ಚೀನಾಕ್ಕೆ ರಫ್ತು ಮಾಡಿದೆ.
  • ಆದರೆ, ಇದೇ ಅವಧಿಯಲ್ಲಿ ದೇಶವು ಚೀನಾದಿಂದ 6,170 ಕೋಟಿ ಡಾಲರ್‌ (ರೂ.4 ಲಕ್ಷ ಕೋಟಿ) ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ.

ಭಾರತ ವಿರೋಧಿ ನಿಲುವು

  • ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಭಾರತ ಸತತವಾಗಿ ಪ್ರಯತ್ನಿಸುತ್ತಿದೆ. ಆದರೆ 48 ದೇಶಗಳ ಗುಂಪಿನಲ್ಲಿ ಸದಸ್ಯತ್ವ ಹೊಂದಿರುವ ಚೀನಾ, ಭಾರತದ ಪ್ರವೇಶಕ್ಕೆ ಒಂದಲ್ಲ ಒಂದು ಕಾರಣ ಮುಂದೊಡ್ಡಿ ಅಡ್ಡಿಪಡಿಸುತ್ತಲೇ ಇದೆ. ಭಾರತದ ಸದಸ್ಯತ್ವಕ್ಕೆ ಅಡ್ಡಿಪಡಿಸುವ ಮೂಲಕ ಪಾಕಿಸ್ತಾನಕ್ಕೂ ಸದಸ್ಯತ್ವ ದೊರಕಿಸಿಕೊಡುವುದು ಚೀನಾದ ಉದ್ದೇಶ ಎಂದು ವಿಶ್ಲೇಷಕರು ಹೇಳುತ್ತಾರೆ.[೮]

ಚೀನಾ ಗಡಿನೀತಿ

  • ಚೀನಾವು 14 ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಗಡಿ ಗುರುತಿಸುವಿಕೆ ವಿಚಾರದಲ್ಲಿ ಬಹುತೇಕ ಎಲ್ಲ ನೆರೆ ರಾಷ್ಟ್ರಗಳ ಜತೆ ಅದು ಸಂಘರ್ಷಕ್ಕೆ ಇಳಿದಿದೆ. ಅಫ್ಗಾನಿಸ್ತಾನ, ಕಜಾಕಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್‌, ರಷ್ಯಾ ಮತ್ತು ತಾಜಿಕಿಸ್ತಾನಗಳೊಂದಿಗಿನ ಗಡಿ ವಿವಾದಗಳನ್ನು ಅದು ಬಗೆಹರಿಸಿಕೊಂಡಿದೆ. ಜಲ ಗಡಿ ವಿಚಾರವಾಗಿಯೂ ಚೀನಾ ನೆರೆ ರಾಷ್ಟ್ರಗಳೊಂದಿಗೆ ವೈಮನಸ್ಸು ಕಟ್ಟಿಕೊಂಡಿದೆ. ಅದು ಜಪಾನ್‌, ದಕ್ಷಿಣ ಕೊರಿಯ, ವಿಯೆಟ್ನಾಂ, ತೈವಾನ್‌ ಮತ್ತು ಫಿಲಿಪ್ಪೀನ್ಸ್‌ಗಳೊಂದಿಗೆ ಜಲ ಗಡಿ ಹಂಚಿ ಕೊಂಡಿದ್ದು, ಎಲ್ಲ ಗಡಿಗಳೂ ವಿವಾದದಲ್ಲಿವೆ.

ಚೀನಾದ ಉದ್ದೇಶ

  • ಭಾರತ ಚೀನಾ ಸಂಬಂಧಗಳು
  • ಭಾರತದ ಜಲಗಡಿಗಳ ಸುತ್ತಲೂ ತನ್ನ ನೆಲೆ ಸ್ಥಾಪಿಸುವುದು ಚೀನಾದ ಅಘೋಷಿತ ನೀತಿ. ಹಿಂದೂ ಮಹಾಸಾಗರದಲ್ಲಿ ಬಹಳ ಹಿಂದಿನಿಂದಲೂ ಚೀನಾದ ಉಪಸ್ಥಿತಿ ಇದೆ. ಈಗ ಮ್ಯಾನ್ಮಾರ್‌ನ ಕೊಕೋಸ್‌ ದ್ವೀಪ, ಬಾಂಗ್ಲಾದೇಶದ ಚಿತ್ತಗಾಂಗ್‌, ಶ್ರೀಲಂಕಾದ ಹಂಬಂತೋಟ, ಮಾಲ್ಡೀವ್ಸ್‌ನ ಮರಾವೊ ಅಟಾಲ್‌, ಪಾಕಿಸ್ತಾನದ ಗ್ವಾದರ್‌ಗಳಲ್ಲಿ ಚೀನಾ ನೌಕಾ ನೆಲೆಗಳನ್ನು ಹೊಂದಿದೆ. ಮಾಲೆಯಲ್ಲಿ ಸಂಪೂರ್ಣ ಸಕ್ರಿಯವಾಗಿರುವ ರಾಯಭಾರ ಕಚೇರಿಗಳನ್ನು ಹೊಂದಿರುವ ದೇಶಗಳು ಭಾರತ ಮತ್ತು ಚೀನಾ ಮಾತ್ರ. ಆದರೆ,ಚೀನಾದ ಸುತ್ತಲಿನ ದೇಶಗಳ ಜತೆ ಉತ್ತಮ ಸಂಬಂಧ ಹೊಂದುವ ನೀತಿಯನ್ನು ಭಾರತ ಅನುಸರಿಸುತ್ತಿದೆ. ಜಪಾನ್‌, ದಕ್ಷಿಣ ಕೊರಿಯ ಮತ್ತು ವಿಯೆಟ್ನಾಂ ಜತೆಗೆ ಭಾರತ ಒಳ್ಳೆಯ ಬಾಂಧವ್ಯ ಹೊಂದಿದೆ. ಅದಲ್ಲದೆ, ಚೀನಾದ ಮಧ್ಯ ಏಷ್ಯಾದ ನೆರೆ ದೇಶಗಳ (ಅಫ್ಗಾನಿಸ್ತಾನ, ಕಜಾಕಿಸ್ತಾನ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ, ತಾಜಿಕಿಸ್ತಾನ, ತುರ್ಕಮೆನಿಸ್ತಾನ) ಜತೆಗೂ ಉತ್ತಮ ಸಂಬಂಧ ಹೊಂದಿದೆ.[೯]

೨೦೧೭ ರ ಗಡಿ ವಿವಾದ ಬೆಳವಣಿಗೆ

ಉತ್ತರದಲ್ಲಿ ಗೆರೆ ಹಾಕಿದ ಸ್ಥಳ-ವಿವಾದಿತ;ಭೂತಾನ್ ನಕ್ಷೆ. ಮೇಲೆ ತೋರಿಸಿದ ಚಂಬಿ ಕಣಿವೆಯ ದಕ್ಷಿಣ ಭಾಗದಲ್ಲಿ ದೊಕ್ಲಾಮ್ ಪ್ರದೇಶವಿದೆ. ಇದನ್ನು ಮೇಲೆ ಲೇಬಲ್ ಮಾಡಲಾಗಿಲ್ಲ, ಆದರೆ ಈ ನಕ್ಷೆಯಲ್ಲಿ ಗುರುತಿಸಲಾಗಿದೆ
  • ಚೀನಾ–ಭಾರತ– ಭೂತಾನ್ ಗಡಿ ಸೇರುವ ಭಾಗದಲ್ಲಿ ರಸ್ತೆ ನಿರ್ಮಿಸುವ ಚೀನಾ ಉದ್ದೇಶದಿಂದಾಗಿ ಗಡಿಯಲ್ಲಿಯ ಯಥಾಸ್ಥಿತಿಗೆ ಧಕ್ಕೆ ತರುತ್ತಿದೆ. ಆದರೆ ಜಗತ್ತಿನ ಎಲ್ಲ ದೇಶಗಳು ಭಾರತದ ನಿಲುವನ್ನು ಬೆಂಬಲಿಸುತ್ತಿವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ೨೦-೭-೨೦೧೭ ಗುರುವಾರ ರಾಜ್ಯಸಭೆಗೆ ತಿಳಿಸಿದರು.
  • ದೋಕಲಾ ಪ್ರಸ್ಥಭೂಮಿಯಲ್ಲಿ ಭಾರತ ಮತ್ತು ಚೀನಾ ಸೇನೆ ಎದುರುಬದುರಾಗಿ ನಿಂತು 33 ದಿನ ಕಳೆದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಈ ಬಗ್ಗೆ ಅವರು ಹೇಳಿಕೆ ನೀಡಿದರು.
  • ‘ಸಣ್ಣ ದೇಶವಾದ ಭೂತಾನ್ ವಿರುದ್ಧ ಚೀನಾ ತಳೆದಿರುವ ಆಕ್ರಮಣಕಾರಿ ನಡೆಯನ್ನು ಇಡೀ ಅಂತರರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ’ ಎಂದರು. ದೋಕಲಾದಲ್ಲಿ ಚೀನಾದ ಸೇನೆ ರಸ್ತೆ ನಿರ್ಮಿಸುತ್ತಿರುವ ಬಗ್ಗೆ ಭಾರತದಲ್ಲಿಯ ಭೂತಾನ್ ರಾಯಭಾರಿ ಲಿಖಿತ ಪ್ರತಿಭಟನೆ ದಾಖಲಿಸಿದ್ದಾರೆ ಎಂದೂ ಸುಷ್ಮಾ ಅವರು ತಿಳಿಸಿದರು.
  • ದೋಕಲಾದಲ್ಲಿ ಚೀನಾ ಸೇನೆಯು ರಸ್ತೆ ನಿರ್ಮಿಸುವುದನ್ನು ತಡೆಯಲು ಭಾರತದ ಸೇನೆ ಜೂನ್ 18ರಂದು ಅಲ್ಲಿಗೆ ತೆರಳಿದ ನಂತರ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಗಡಿ ವಿವಾದದ ಬಗ್ಗೆ ಚೀನಾ ಮತ್ತು ಭೂತಾನ್ ಮಾತುಕತೆ ನಡೆಸುತ್ತಿವೆ. ಅದೇ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಸಹ ಮಾತುಕತೆ ನಡೆಸುತ್ತಿದ್ದಾರೆ. ಮೂರು ದೇಶಗಳ ಗಡಿ ಕೂಡುವ ಭಾಗದಲ್ಲಿಯ ವಿವಾದವನ್ನು ಭೂತಾನ್ ಸಲಹೆ ಪಡೆದು ಭಾರತದ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ಚೀನಾ 2012ರಲ್ಲಿ ಒಪ್ಪಿಕೊಂಡಿದೆ. ಆದರೂ ಚೀನಾ ಸೇನೆ ಈಗ ಅಲ್ಲಿ ಭರದಿಂದ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ.
ಚೀನಾದ ಈ ಆಕ್ರಮಣಕಾರಿ ಕ್ರಮವು ಭೂತಾನ್ ಮತ್ತು ಭಾರತದ ಭದ್ರತೆಗೆ ಆತಂಕ ಒಡ್ಡಿದೆ. ಎರಡೂ ಕಡೆಯ ಸೈನಿಕರು ವಾಪಸಾಗಬೇಕು ಎಂದು ಭಾರತ ಸಲಹೆ ಮಾಡಿದೆ. ಭಾರತ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.[೧೦]

ಚೀನಾದ ಬೆದರಿಕೆ

  • ಚೀನಾದ ದಿನ ಪತ್ರಿಕೆ ‘ದಿ ಗ್ಲೋಬಲ್‌ ಟೈಮ್ಸ್‌’,ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ವಿಶ್ವದ ಹಲವು ದೇಶಗಳು ತಮಗೆ ಬೆಂಬಲ ನೀಡುತ್ತವೆ ಎಂದು ಸಂಸತ್ತಿನಲ್ಲಿ ಮಾತನಾಡುತ್ತಿದ್ದಾರೆ. ಭಾರತದ ಉದ್ದೇಶ ಚೀನಾ ಭೂಪ್ರದೇಶವನ್ನು ಆತಿಕ್ರಮಿಸುವುದೇ ಆಗಿದೆ. ಅದು ನೀಡುತ್ತಿರುವ ಪ್ರಚೋದನೆ ಅಂತರರಾಷ್ಟ್ರೀಯ ಸಮುದಾಯದ ಗಮನಕ್ಕೂ ಬಂದಿದ್ದು, ಯಾವ ದೇಶವೂ ಭಾರತಕ್ಕೆ ಬೆಂಬಲ ನೀಡುವುದಿಲ್ಲ’ ಎಂದು ತನ್ನ ವರದಿಯಲ್ಲಿ ಅದು ಉಲ್ಲೇಖಿಸಿದೆ. ‘ಭಾರತ ಚೀನಾದ ತಾಳ್ಮೆ ಪರೀಕ್ಷಿಸುತ್ತಿದೆ. ಒಂದು ವೇಳೆ ದೋಕಲಾನಿಂದ ತನ್ನ ಸೇನೆಯನ್ನು ವಾಪಸ್ಸು ಕರೆಯಿಸಿಕೊಳ್ಳದಿದ್ದರೆ ಯುದ್ಧಕ್ಕೆ ಸಿದ್ಧವಾಗಬೇಕಾಗುತ್ತದೆ’ ಎಂದು ಈ ರೀತಿ ಬರೆದುಕೊಂಡಿದೆ.
  • ಟಿಬೆಟ್‌ನಲ್ಲಿ ನಾವು ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ಹಾಗೂ ಸೇನಾ ಕವಾಯತು ನಡೆಸುತ್ತಿರುವುದು ಕೇವಲ ತೋರಿಸಿಕೊಳ್ಳುವುದಕ್ಕಲ್ಲ’ ಎಂದೂ ಹೇಳಿರುವ ‘ಟೈಮ್ಸ್‌’, ‘ಭಾರತ ಇದೇ ನಡೆಯನ್ನು ಮುಂದುವರಿಸಿದರೆ ಯುದ್ಧ ಸಂಭವಿಸಲಿದೆ. ಯುದ್ಧದಲ್ಲಿ ಸೋತು ತನ್ನ ಸ್ವಂತ ಭೂಪ್ರದೇಶವನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದೆ.[೧೧]

ಹಿಂದೂ ರಾಷ್ಟ್ರೀಯವಾದವು ಭಾರತ–ಚೀನಾ ಯುದ್ಧ ಬಯಸುತ್ತಿದೆ ಎಂದು ಚೀನಾ ಹೇಳಿಕೆ

  • ಉಭಯ ದೇಶಗಳ ನಡುವಣ ಗಡಿ ಸಮಸ್ಯೆ ಆರಂಭವಾದಾಗಿನಿಂದ ಭಾರತದ ರಾಷ್ಟ್ರೀಯವಾದಿ ಮನಸ್ಥಿತಿಯು ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇದಕ್ಕೆ ಪ್ರಧಾನ ಮಂತ್ರಿ ಚುನಾವಣೆ ಬಳಿಕ ಪ್ರೋತ್ಸಾಹ ಸಿಕ್ಕಂತಾಗಿದೆ’ ಎಂದು ಹೇಳಿಕೊಂಡಿದೆ. ಭಾರತ ರಾಜತಾಂತ್ರಿಕವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಚೀನಾ ಹಾಗೂ ಪಾಕಿಸ್ತಾನಗಳ ವಿಚಾರದಲ್ಲಿ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮಂದಾಗಿದೆ ಎಂದು ಸಹ ಅಭಿಪ್ರಾಯಪಟ್ಟಿದೆ. ‘ದೋಕಲಾ ಪ್ರದೇಶದಲ್ಲಿ ಉಂಟಾಗಿರುವ ಗಡಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹಿಂದೂ ರಾಷ್ಟ್ರೀಯ ವಾದಿಗಳು ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಡುತ್ತಿದ್ದಾರೆ. ಧಾರ್ಮಿಕ ರಾಷ್ಟ್ರೀಯವಾದಿಗಳ ಹೋರಾಟ ತೀವ್ರವಾದರೆ ಮೋದಿ ಸರ್ಕಾರದಿಂದ ಅವರನ್ನು ತಡೆಯಲು ಸಾಧ್ಯವಿಲ್ಲ.

ಚೀನಾ ಹೇಳಿಕೆಗಳು

  • ರಾಜಕೀಯಕ್ಕಾಗಿ ಅತಿಕ್ರಮಣ ಬೇಡ
  • ‘ಭಾರತೀಯ ಸೇನೆಯ ಸಾಮರ್ಥ್ಯ ಚೀನಾ ಸೇನೆಗಿಂತ ಬಹಳಷ್ಟು ಹಿಂದುಳಿದಿದ್ದು, ಯುದ್ಧವನ್ನು ಬಯಸುವುದಾದರೆ ಭಾರತಕ್ಕೆ ಸೋಲು ಖಂಡಿತ’ ಎಂದು ಬರೆದುಕೊಂಡಿದೆ.[೧೨]
  • (ಚೀನಾ ಸೇನಾಪಡೆಯಿಂದ ಟಿಬೆಟ್‌ಗೆ ಯುದ್ಧ ಸಾಮಗ್ರಿ ಸಾಗಣೆ.)

ಪುನಃ ತಕರಾರು

  • ತನ್ನ ಭೂಪ್ರದೇಶವನ್ನು ರಕ್ಷಿಸಿಕೊಳ್ಳುವಲ್ಲಿ ಚೀನಾದ ಸೇನೆಗಿರುವ ಸಾಮರ್ಥ್ಯದ ಬಗ್ಗೆ ಭ್ರಮೆಗಳನ್ನು ಬಿತ್ತುವುದು ಬೇಡ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ದಿ.24 Jul, 2017 ಸೋಮವಾರ ಭಾರತಕ್ಕೆ ಎಚ್ಚರಿಕೆ ನೀಡಿದೆ. ಸಿಕ್ಕಿಂ ಗಡಿ ವಿವಾದಕ್ಕೆ ಸಂಬಂಧಿಸಿ ಚೀನಾ ಈ ಎಚ್ಚರಿಕೆ ನೀಡಿದೆ.
  • ಡಾಂಗ್ಲಾಂಗ್ ಪ್ರದೇಶದಲ್ಲಿ ಜೂನ್‌ನಲ್ಲಿ ಭಾರತೀಯ ಸೈನಿಕರು ಗಡಿ ಅತಿಕ್ರಮಣ ಮಾಡಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ ಎಂದು ಚೀನಾ ಆರೋಪಿಸಿದೆ. ಭಾರತ ಮತ್ತು ಭೂತಾನ್ ಆ ಪ್ರದೇಶವನ್ನು ಡೊಕ್ಲಾಂ ಎಂದು ಕರೆಯುತ್ತಿದ್ದು, ಭೂತಾನ್‌ಗೆ ಸೇರಿದ್ದೆಂದು ಪ್ರತಿಪಾದಿಸಿವೆ. ‘ಉಭಯ ದೇಶಗಳು ವಿವಾದಿತ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ಮಾತುಕತೆ ನಡೆಸಬೇಕು’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಳೆದ ವಾರ ಹೇಳಿದ್ದಾರೆ.[೧೩]

ಸಮಸ್ಯೆಯ ಮೂಲ

  • ದೋಕಲಾ ಪ್ರದೇಶದಲ್ಲಿ ಚೀನಾದ ಸೇನೆ ರಸ್ತೆ ನಿರ್ಮಿಸುವ ಪ್ರಯತ್ನ ಮಾಡಿದಾಗ ಭಾರತದ ಸೇನೆ ಆ ಪ್ರಯತ್ನವನ್ನು ತಡೆದಿದೆ. ‘ದೋಕಲಾ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಚೀನಾ ತನ್ನ ನೆಲದಲ್ಲಿ ನಡೆಸುತ್ತಿದೆ. ಇದು ಚೀನಾ- ಭೂತಾನ್ ನಡುವಿನ ವ್ಯವಹಾರವೇ ಹೊರತು ಭಾರತಕ್ಕೆ ಸಂಬಂಧಿಸಿದ್ದಲ್ಲ’ ಎನ್ನುವುದು ಚೀನಾದ ವಾದ. ಮುಂದುವರಿದು, ಭಾರತದ ಸೇನೆ ಗಡಿ ದಾಟಿ ಬಂದು ತನ್ನ ರಸ್ತೆ ಕಾಮಗಾರಿಯನ್ನು ತಡೆಯುವ ಪ್ರಯತ್ನ ಮಾಡಿದೆ ಎಂದು ಆರೋಪಿಸುತ್ತಿದೆ. ಆದರೆ ಅಸಲಿಯತ್ತು ಬೇರೆಯಿದೆ. ತನ್ನ ಗಡಿಯಲ್ಲಿ ಚೀನಾದ ಚಟುವಟಿಕೆ ತೀವ್ರಗೊಂಡಂತೆ, ಭೂತಾನ್ ಸೇನೆ (ರಾಯಲ್ ಭೂತಾನ್ ಆರ್ಮಿ) ಚೀನಾವನ್ನು ಮೊದಲು ತಡೆಯುವ ಪ್ರಯತ್ನ ಮಾಡಿದೆ. ಜೊತೆಗೆ ಭಾರತದ ಸೇನೆಯ ಸಹಕಾರವನ್ನು ಕೋರಿದೆ. ಬಹುಶಃ ಭಾರತ ಮಧ್ಯಪ್ರವೇಶಿಸುವುದನ್ನು ಚೀನಾ ಊಹಿಸಿರಲಿಲ್ಲ. ಎಚ್ಚರಿಕೆಯ ನಂತರವೂ ರಸ್ತೆ ಕಾಮಗಾರಿಯನ್ನು ಚೀನಾ ಮುಂದುವರೆಸಿದಾಗ ಭಾರತದ ಸೈನಿಕರು ಮಾನವ ಗೋಡೆ ನಿರ್ಮಿಸಿ ಜಗ್ಗದೆ ನಿಂತಿದ್ದಾರೆ. ನೀವು ಹಿಂದೆ ಹೋಗುವವರೆಗೆ ನಾವೂ ಹೋಗೆವು ಎಂದು ಡೇರೆ ಜಡಿದು ಮೊಕ್ಕಾಂ ಹೂಡಿದ್ದಾರೆ.
  • ಇಲ್ಲಿ ಭೂತಾನ್ ಸ್ವಾಯತ್ತತೆ ಕಾಪಾಡುವ ನಿಟ್ಟಿನಲ್ಲಷ್ಟೇ ಭಾರತದ ಸೇನೆ ಈ ನಿರ್ಧಾರ ತಳೆದಿಲ್ಲ. ಸೇನೆಯ ಈ ನಿಲುವಿಗೆ ಮತ್ತೊಂದು ಆಯಾಮ ಇದೆ. ಚಂಬಿ ಕಣಿವೆ ಟಿಬೆಟ್ ಸ್ವಾಯತ್ತ ಪ್ರದೇಶ, ನಾಥೂಲಾ ಮತ್ತು ಜೆಲೆಪ್ ಲಾ ಮಾರ್ಗಗಳು ಈ ಕಣಿವೆಯ ಮೂಲಕ ಹಾದು ಹೋಗುತ್ತವೆ. ಚಂಬಿ ಕಣಿವೆಯನ್ನು ಚೀನಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇದು ಭಾರತ, ಭೂತಾನ್, ಮತ್ತು ಚೀನಾ ನಡುವಿನ ತ್ರಿಸಂಧಿಗೆ ತಗುಲಿಕೊಂಡಿದೆ. ಅಪಾಯವಿರುವುದು ಇಲ್ಲೇ, ಒಂದೊಮ್ಮೆ ಚಂಬಿ ಕಣಿವೆ ರಸ್ತೆ ಕಾಮಗಾರಿ (ಕ್ಲಾಸ್ 40) ಪೂರ್ಣಗೊಂಡು, ವಾಹನ ಸಂಚಾರ ಸರಾಗವಾದರೆ, ಚೀನಾ ತನ್ನ ಶಸ್ತ್ರಸಜ್ಜಿತ ಸೇನೆಯನ್ನು ಸಿಲಿಗುರಿ ಮಾರ್ಗಕ್ಕೆ ತಂದು ನಿಲ್ಲಿಸುವುದು ಸುಲಭವಾಗುತ್ತದೆ. ‘ಚಿಕನ್ ನೆಕ್’ ಎಂದು ಕರೆಯಲಾಗುವ 27 ಕಿ.ಮೀ. ವಿಸ್ತಾರದ ಸಿಲಿಗುರಿ ಮಾರ್ಗ ಭಾರತದ ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಬೆಸೆದಿದೆ.
  • ಒಂದೊಮ್ಮೆ ಚೀನಾ ಸೇನೆ ‘ಚಿಕನ್ ನೆಕ್’ ತಲುಪುವುದು ಸಾಧ್ಯವಾದರೆ, ಮೇಘಾಲಯ, ನಾಗಾಲ್ಯಾಂಡ್, ಅಸ್ಸಾಂ, ತ್ರಿಪುರ, ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶದ ಸಂಪರ್ಕ ಕಡಿತಗೊಳ್ಳುತ್ತದೆ. ಭಾರತವನ್ನು ಮಂಡಿಯೂರುವಂತೆ ಮಾಡಲು, ತುಂಡು ಮಾಡಲು ಇರುವ ಏಕೈಕ ಮಾರ್ಗ ಇದು ಎಂಬುದು ಚೀನಾಕ್ಕೆ ತಿಳಿದಿದೆ.

ಮಾತುಕತೆಯೇ ಪರಿಹಾರ; ಯುದ್ಧ ಚೀನಾಕ್ಕೂ ಬೇಕಿಲ್ಲ

  • ಹಾಗಾದರೆ ಗಡಿಯ ಉದ್ವಿಗ್ನ ಪರಿಸ್ಥಿತಿ ಉಭಯ ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಗುವುದೇ? ಆ ಸಾಧ್ಯತೆ ತೀರಾ ಕಮ್ಮಿ. 1962ರ ಪರಿಸ್ಥಿತಿ ಈಗಿಲ್ಲ ಎಂಬುದು ಚೀನಾಕ್ಕೆ ತಿಳಿದಿದೆ. ಭಾರತ ರಾಜತಾಂತ್ರಿಕವಾಗಿ ಜಗತ್ತಿನ ಇತರ ಶಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಚೀನಾ ಎದುರು ನಿಲ್ಲಲು ಜಪಾನ್, ಅಮೆರಿಕ ಹವಣಿಸುತ್ತಿವೆ. ಇನ್ನು, ಉಭಯ ದೇಶಗಳೂ ವಾಣಿಜ್ಯಿಕ ಕಾರಣಗಳಿಂದ ಒಂದರ ಮೇಲೆ ಮತ್ತೊಂದು ಅವಲಂಬಿತವಾಗಿವೆ. ಹಾಗಾಗಿ ದೀರ್ಘ ಕಾಲದ ಮುನಿಸಿಗೆ ಆಸ್ಪದವಿಲ್ಲ.[೧೪]

ದೋಕಲಾ ಬಿಕ್ಕಟ್ಟು ಪರಿಹಾರ

  • ಭಾರತ–ಚೀನಾ–ಭೂತಾನ್‌ ಗಡಿಯಲ್ಲಿ ಜೂನ್ 2017 ರಿಂದ (72 ದಿನಗಳಿಂದ) ಉಂಟಾಗಿದ್ದ ಬಿಕ್ಕಟ್ಟು, ೨೮-ಆಗಸ್ಟ್ ೨೦೧೭ ಸೋಮವಾರ ಶಮನವಾಗಿದೆ. ಸಂಘರ್ಷದ ಕೇಂದ್ರ ಬಿಂದುವಾಗಿದ್ದ ದೋಕಲಾದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ.(ಭಾರತದ ವಿದೇಶಾಂಗ ಸಚಿವಾಲಯ)[೧೫]

ಜೂನ್ 15, 2020 ರ ದೋಕಲಾ ಸಂಘರ್ಷ

  • ಗಾಲ್ವನ್‌ ಕಣಿವೆ ಮತ್ತು ಪೂರ್ವ ಲಡಾಖ್‌ ಪ್ರದೇಶದಲ್ಲಿ ಜೂನ್ 15, ೨೦೨೦ ಸೋಮವಾರ ರಾತ್ರಿ ಚೀನಾದ ಸೈನಿಕರ ಜತೆ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ 16 ಬಿಹಾರ ರೆಜಿಮೆಂಟ್‌ನ ಕರ್ನಲ್‌ ಬಿ. ಸಂತೋಷ್‌ ಬಾಬು, ಯೋಧರಾದ ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಸೇರಿದಂತೆ ಇಪ್ಪತ್ತು ಮಂದಿ ಯೋಧರು ಮೃತಪಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ಚೀನಾದ 43 ಸೈನಿಕರು ಸಾವಿಗೀಡಾಗಿದ್ದಾರೆ ಎಂಬ ವರದಿ ಇದೆ.[೧೬]

ಮಾನವ ವಾಸಕ್ಕೆ ಅಯೊಗ್ಯವಾದ ಕಠಿಣ ಪ್ರದೇಶ

  • ವಿವಾದದಲ್ಲಿರುವ ಪ್ರದೇಶವಾದ ಅಕ್ಸಾಯ್ ಚಿನ್ ಅನ್ನು ಚೀನಾ ಕ್ಸಿನ್‌ಜಿಯಾಂಗ್ ಎಂದೂ, ಮತ್ತು ಭಾರತವು ಲಡಾಖ್ ಎಂದು ಹೇಳುವುವು. ಇದು ಅತಿ ಶೀತ ಪ್ರದೇಶ ಮತ್ತು ನಿರಾಶ್ರಯವಾಗಿದೆ- ವಾಸಕ್ಕೆ ಅಯೋಗ್ಯವಾಗಿದೆ. ಬೇಸಿಗೆಯಲ್ಲಿ ಸಹ ಘನೀಕರಿಸುವ ಸುತ್ತಲಿನ ತಾಪಮಾನದೊಂದಿಗೆ ಹಿಮದಿಂದ ಆವೃತವಾಗಿರುತ್ತದೆ. ಹಿಮಾಲಯದಲ್ಲಿ ಎತ್ತರದಲ್ಲಿದೆ; ತಾಪಮಾನ '೦' ಡಿಗ್ರಿಗಿಂತ ಕಡಿಮೆ ಇರುತ್ತದೆ. ಸರಾಸರಿ ಎತ್ತರವು 14,000 ಅಡಿಗಳು (4,200 ಮೀಟರ್), ಇದು ಎತ್ತರ ಹವಾಗುಣದ ಕಾಯಿಲೆ ಪ್ರಾರಂಭವಾಗುವ ಎತ್ತರಕ್ಕಿಂತ ದುಪ್ಪಟ್ಟು ಎತ್ತರದ್ದು., ಅಂದರೆ ಈ ಪ್ರದೇಶದ ಯಾವುದೇ ಮಾನವರು "ಬೇಸರದ ಮಾನಸಿಕ ಬಳಲಿಕೆ, ಕ್ರಮೇಣ ಎತ್ತರದ-ಸಹನಾತೀತ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ; ಅದರ ನಂತರ ತಲೆನೋವು, ವಾಕರಿಕೆ ಮತ್ತು ಆಯಾಸದಿಂದ ಬಳಲುತ್ತಾರೆ. ಎತ್ತರ ಮತ್ತು ಘನೀಕರಿಸುವ ತಾಪಮಾನವು ಸೋಮವಾರದ ಸಾವಿನ ಹೆಚ್ಚಿನ ಸಂಖ್ಯೆಗೆ ಕಾರಣವಾಇರಬಹುದು.
  • ಮಿಲಿಫ್, ಎಂಐಟಿ ತಜ್ಞರು ಹೇಳುವುದು,' "ತ್ವರಿತವಾಗಿ ಆ ಎತ್ತರಕ್ಕೆ ಧಾವಿಸಿದ ಘಟಕಗಳಲ್ಲಿನ ಸುಮಾರು 15% ಸೈನಿಕರು ಎತ್ತರದ-ಎತ್ತರದ 'ಪಲ್ಮನರಿ ಎಡಿಮಾ'ವನ್ನು (ಎತ್ತರದಲ್ಲಿ ರಕ್ತ ಚಲನೆ ಹೊಂದಾಣಿಕೆಯಾಗದ ಸ್ಥಿತಿ; ಎತ್ತರಕ್ಕೆ ಹೋದಮತೆ ಆಮ್ಲಜನಕದ ಕೊರತೆಯ ತೊಂದರೆಯೂ ಇರುತ್ತದೆ) ಹೊಂದುವರು, ಇದು ಎತ್ತರಕ್ಕೆ ಸಂಬಂಧಿಸಿದ ಸಾವು ನೋವುಗಳಿಗೆ ಪ್ರಮುಖ ಕಾರಣವಾಗಿದೆ, ಇದು ಆರಂಭಿಕ ವ್ಯಕ್ತಿಗಳಿಂದ ಹಿಡಿದು, ಸಾವಿಗೆ 12 ಗಂಟೆಗಳ ಅವಧಿಯಲ್ಲಿ ಅನುಭವಿ ಆರೋಗ್ಯವಂತ ವ್ಯಕ್ತಿಗಳಿಗೆ ಸಹ ಉಂಟಾಗಬಹುದು."[೧೭]

ಚೀನಾದ ಸಂಘರ್ಷದ ಹಿಂದೆ ರಾಜಕೀಯ ತಂತ್ರ

  • ಕಾರಣಗಳು:
  1. ಚೀನಾವು ಕೋವಿಡ್‌–19ರ ಬಗೆಗೆ ಇತರ ರಾಷ್ಟ್ರಗಳಿಗೆ ಆರಂಭದಲ್ಲೇ ಎಚ್ಚರಿಸದೆ, ಹರಡುವಿಕೆಗೆ ಕಾರಣವಾಗಿದ್ದು ಜಾಗತಿಕ ಮಟ್ಟದಲ್ಲಿ ಚೀನಾ ಏಕಾಂಗಿಯಾಗುತ್ತಿದೆ. ಈ ಭಾರತದೊಡನೆಯ ಘರ್ಷನೆಯ ಘಟನೆಯು ಕೋವಿಡ್‌–19 ಹರಡುವುದರಲ್ಲಿ ತನ್ನ ಪಾತ್ರದ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು ಸಹಾಯಕವಾಗಬಹುದು.
  2. ಭಾರತದ ಜತೆಗಿನ ಸಂಘರ್ಷವನ್ನು ಜೀವಂತವಾಗಿಡುವುದು. ಅದರಿಂದ ಭಾರತವು ಜಾಗತಿಕವಾಗಿ ವಿರೋಧಿಸದಂತೆ ತಡೆಯುವುದು. ಈ ನೀತಿ ಚೀನಾದ ಭೌಗೋಳಿಕ ರಾಜಕೀಯದ ಭಾಗ
  3. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಈಚೆಗೆ ಭಾರತ ನೀಡಿರುವ ಕರೆಯು ಚೀನಾದ ಈ ಸಾಹಸಕ್ಕೆ ಕಾರಣವಾಗಿರಬಹುದು
  4. ಚೀನಾದ ವಿಸ್ತರಣಾ ನೀತಿ: ಅಕ್ಷಾಯ್‌ ಚಿನ್‌ನಲ್ಲಿ, ಭಾರತದ 38 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಚೀನಾ ವಶದಲ್ಲಿ ಇರಿಸಿಕೊಂಡಿದೆ ಎಂಬುದು ಭಾರತದ ಪ್ರತಿಪಾದನೆ. ಅಕ್ಷಾಯ್‌ ಚಿನ್‌ ಭಾರತ ಪೂರ್ವ ಲಡಾಖ್‌ ಪ್ರದೇಶದ ಗಡಿಯಲ್ಲಿ ಭಾರತಕ್ಕೆ ಸೇರಿದ 5,180 ಚದರ ಕಿ.ಮೀ. ಪ್ರದೇಶವನ್ನು ಪಾಕಿಸ್ತಾನವು 1963ರಲ್ಲಿ ಚೀನಾಕ್ಕೆ ನೀಡಿತ್ತು. ಅರುಣಾಚಲ ಪ್ರದೇಶದ ಸುಮಾರು 90 ಸಾವಿರ ಚದರ ಕಿ.ಮೀ. ಪ್ರದೇಶ ಮತ್ತು ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಭಾಗವಾಗಿರುವ ಸುಮಾರು ಎರಡು ಸಾವಿರ ಚದರ. ಕಿ.ಮೀ. ಪ್ರದೇಶ ತನ್ನದು ಎಂದು ಚೀನಾ ವಾದಿಸುತ್ತಿದೆ.
  5. ಗಾಲ್ವನ್‌ ನದಿಯು ಅಕ್ಷಾಯ್‌ ಚಿನ್‌ನಿಂದ ಲಡಾಖ್‌ಗೆ ಹರಿಯುತ್ತದೆ. ನದಿಯ ಪಶ್ಚಿಮ ಭಾಗವು ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಆದರೆ, ಇಡೀ ಅಕ್ಷಾಯ್‌ ಚಿನ್‌ ತನ್ನದು ಎಂಬುದು ಭಾರತದ ಪ್ರತಿಪಾದನೆ.
  6. ಭಾರತ ನಿರ್ಮಿಸುತ್ತಿರುವ ಒಂದು ರಸ್ತೆ ಮತ್ತು ಒಂದು ಸೇತುವೆ ಚೀನಾದ ಅಸಮಾಧಾನಕ್ಕೆ ಕಾರಣ. ಒಂದು ರಸ್ತೆಯು ಪಾಂಗಾಂಗ್‌ ಸರೋವರದ ಮುಂಚೂಣಿ ನೆಲೆಯನ್ನು ಸಂಪರ್ಕಿಸುತ್ತದೆ; ಇನ್ನೊಂದು ರಸ್ತೆಯು ದರ್ಬುಕ್‌–ಶಯೋಕ್‌ ಮೂಲಕ ದೌಲತ್‌ ಬೇಗ್‌ ಓಲ್ಡಿ ನೆಲೆಯನ್ನು ಸಂಪರ್ಕಿಸುತ್ತದೆ. ಈ ರಸ್ತೆಯ ಉದ್ದ 255 ಕಿ.ಮೀ. ಎಲ್‌.ಎ.ಸಿ.ಯ(ಹಾಲಿ- ವಾಸ್ತವ ನಿಯಂತ್ರಣ ರೇಖೆ) ಈ ಭಾಗದಲ್ಲಿ ಭಾರತವು ಕೈಗೆತ್ತಿಕೊಂಡಿರುವ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳು ಚೀನಾಕ್ಕೆ ಇಷ್ಟವಾಗಿಲ್ಲ. ಅಕ್ಷಾಯ್‌ ಚಿನ್‌ಗೆ ಸೇನೆಯನ್ನು ರವಾನಿಸುವ ಹವಣಿಕೆ ಇದು ಎಂದು ಚೀನಾ ಹೇಳುತ್ತಿದೆ. 2019ರ ಆಗಸ್ಟ್‌ 6ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ ಅವರು, ಅಕ್ಷಾಯ್‌ ಚಿನ್‌ ಮೇಲೆ ಹಕ್ಕು ಪ್ರತಿಪಾದನೆ ಮಾಡಿದ್ದರು.ಭಾರತದ್ದೇ ಆದರೂ ಈ ಹಕ್ಕು ಪ್ರತಿಪಾದನೆಯು ಭಾರತದ ಉದ್ದೇಶದ ಬಗ್ಗೆ ಚೀನಾದಲ್ಲಿ ಅನುಮಾನ ಮೂಡಿಸಿದೆ.
  7. ಚೀನಾದ ಆಕ್ರಮಣಶೀಲತೆಯ ನೀತಿ. ಆ ದೇಶವು 1962 ರಿಂದಲೂ ಭಾರತದ ಕುರಿತು ಆ ನೀತಿಯನ್ನು ಅನುಸರಿಸುತ್ತಿದೆ.
  8. ಭಾರತವು ಹೊಸ ಶಕ್ತಿಯಾಗಿ ಉದಯಿಸುವುದನ್ನು ತಡೆಯಲು ತನ್ನ ದೀರ್ಘಕಾಲೀನ ಹೋರಾಟವನ್ನು ಮುಂದುವರಿಸುವ ಉದ್ದೇಶವನ್ನು ಚೀನಾ ಹೊಂದಿದೆ. ನೇಪಾಳದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವುದನ್ನು ಗಮನಿಸಿದರೆ, ಆ ದೇಶವು ಈಚೆಗೆ ತೆಗೆದುಕೊಂಡಿರುವ ಭಾರತ ವಿರೋಧಿ ನಿಲುವಿಗೆ ಚೀನಾದ ಬೆಂಬಲ ಇರಬಹುದು.[೧೮][೧೯]

ಪರಿಹಾರ ಹೇಗೆ

  • ಗಡಿಯ ಉದ್ವಿಗ್ನ ಪರಿಸ್ಥಿತಿ ಉಭಯ ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಗಲಾರದು ಎಂಬುದು ರಾಜತಾಂತ್ರಿಕರ ಅಭಿಪ್ರಾಯ. ಆ ಸಾಧ್ಯತೆ ತೀರಾ ಕಮ್ಮಿ. ಕಾರಣ 1962ರ ಪರಿಸ್ಥಿತಿ ಈಗಿಲ್ಲ ಎಂಬುದು ಚೀನಾಕ್ಕೆ ತಿಳಿದಿದೆ. ಭಾರತವು ರಾಜತಾಂತ್ರಿಕವಾಗಿ ಜಗತ್ತಿನ ಇತರ ಶಕ್ತಿ-ರಾಷ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಚೀನಾ ಎದುರು ನಿಲ್ಲಲು ಜಪಾನ್, ಅಮೆರಿಕ ಹವಣಿಸುತ್ತಿವೆ. ಇನ್ನು, ಚೀನಾ ಭಾರತ ಉಭಯ ದೇಶಗಳೂ ವಾಣಿಜ್ಯಿ- ವ್ಯಾಪಾರ ಕಾರಣಗಳಿಂದ ಒಂದರ ಮೇಲೆ ಮತ್ತೊಂದು ಅವಲಂಬಿತವಾಗಿವೆ. ಅಲ್ಲದೆ ಚೀನಾ ಭಾರತದೊಡನೆ ವಾಣಿಜ್ಯದ ಅಮದು ರಫ್ತಿನಲ್ಲಿ 'ರೂ.70 ಸಾವಿರ ಕೋಟಿಯಿಂದ ರೂ.1 ಲಕ್ಷ ಕೋಟಿ ರೂ.ನ ಹೆಚ್ಚುವರಿ ವಾಣಿಜ್ಯ ಲಾಭ' ಹೊಂದಿದೆ.(ಭಾರತ ಚೀನಾದ ವಸ್ತುಗಳಿಗೆ ಬಹಳದೊಡ್ಡ ಗಿರಾಕಿ.:- 2017 ರಲ್ಲಿ ಭಾರತವು ಚೀನಾದಿಂದ ಆಮದು ಮಾಡಿದ್ದು 68.6 ಶತಕೋಟಿ ಡಾಲರ್ ವಸ್ತುಗಳು; ಅದೇ ವರ್ಷ ಭಾರತವು ಚೀನಾಕ್ಕೆ ರಫ್ತು ಮಾಡಿದ್ದು ಕೇವಲ 16.34 ಶತಕೋಟಿ ಡಾಲರ್ ವಸ್ತುಗಳನ್ನು.[೨೦] ) ಅದು ಹೋರಾಟಕ್ಕಿಳಿದರೆ ಆ ವಾಣಿಜ್ಯ ಲಾಭವನ್ನು ಕಳೆದು ಕೊಳ್ಳಬಾಕಾಗುವುದು; ಈಗಾಗಲೇ ಅದು ಅಮೇರಿಕದ ವಾಣಿಜ್ಯ ಲಾಭವನ್ನು ಕಳೆದುಕೊಳ್ಳುವ ಸ್ಥಿತಿ ಇದೆ. ಹಾಗಾಗಿ ದೀರ್ಘ ಕಾಲದ ಮುನಿಸಿಗೆ ಆಸ್ಪದವಿಲ್ಲ ಎಂದು ಭಾವಿಸಲಾಗಿದೆ. ಸಾಮಾನ್ಯವಾಗಿ ಇಂತಹ ಉದ್ವಿಗ್ನ ಸಂದರ್ಭದಲ್ಲಿ ಮುಖ ಉಳಿಸಿಕೊಳ್ಳುವ ಮಾರ್ಗ ಎರಡೂ ದೇಶಗಳಿಗೆ ಗೋಚರಿಸಿದರೆ ವಾತಾವರಣ ತಿಳಿಯಾಗುತ್ತದೆ. ಆ ಮಾರ್ಗ ಹುಡುಕುವ ಕೆಲಸ ರಾಜತಾಂತ್ರಿಕ ಮಾತುಕತೆಯಿಂದ ಆಗಬೇಕು.[೨೧]

ಸರ್ವಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿಯವರ ಭರವಸೆ

  • ಪ್ರಧಾನಿ ಮೋದಿಯವರು, ಚೀನಾ ನಮ್ಮ(ಭಾರತದ) ಗಡಿಯೊಳಕ್ಕೆ ನುಸುಳಿ ಯಾವುದೇ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ. ಭಾರತದ ಭೂಮಿಯ ಒಂದಿಂಚಿನ ಮೇಲೂ ಕಣ್ಣಿಡಲು ಯಾರಿಗೂ ಸಾಧ್ಯವಿಲ್ಲ. ಹಾಗೆ ಮಾಡುವ ಸಾಮರ್ಥ್ಯ ಇಂದು ನಮ್ಮಲ್ಲಿದೆ’ ಎಂದು, 19 ಜೂನ್ 2020 ಶುಕ್ರವಾರ ಸರ್ವಪಕ್ಷದ ಸಭೆಯಲ್ಲಿ ಹೇಳಿದರು. ‘ಏಕ ಕಾಲದಲ್ಲಿ ಹಲವು ಕಡೆ ಸಂಚರಿಸಿ ದಾಳಿ ನಡೆಸಬಲ್ಲ ಸಾಮರ್ಥ್ಯ ಭಾರತದ ಸಶ್ತ್ರ ಪಡೆಗಳಿಗೆ ಇದೆ’ ಎಂದು ಹೇಳಿದರು.[೨೨] (ಉದ್ವಿಗ್ನತೆಯನ್ನು ಶಮನಗೊಳಿಸುವ ಉದ್ದೇಶವಿರುವಂತೆ ತೋರುವುದು.)

ಭಾರತಾದ್ಯಂತ- ಚೀನಾ ವಿರುದ್ಧ ಪ್ರತಿಭಟನೆ

  • ಗಡಿಯೊಳಕ್ಕೆ ನುಸುಳಿ ಯಾವುದೇ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ ಎಂಬ ಪ್ರಧಾನಿಯವರ ಹೇಳಿಕೆಗೆ ವಿರೋಧವ್ಯಕ್ತವಾಗಿದೆ. ಪರಿಣಾಮ ಚೀನಾದ ಮೂರು ಕಂಪನಿಗಳೊಂದಿಗೆ ಮಾಡಿಕೊಂಡಿದ್ದ ರೂ.5020 ಕೋಟಿ ಮೊತ್ತದ ಒಪ್ಪಂದಗಳನ್ನು ಮಹಾರಾಷ್ಟ್ರ ಸರ್ಕಾರ ಸೋಮವಾರ ತಡೆಹಿಡಿಯಿತು. ಚೀನಾದ ಹೆಂಗ್ಲಿ ಎಂಜಿನಿಯರಿಂಗ್, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ಸ್ ಫೋಟಾನ್ ಮತ್ತು ಗ್ರೇಟ್ ವಾಲ್ ಮೋಟಾರ್ಸ್‌ ಕಂಪನಿ ಜಂಟಿ ಸಹಯೋಗದಲ್ಲಿ ಪುಣೆಯ ತಲೇಗಾಂವ್‌ನಲ್ಲಿ ಹೂಡಿಕೆ ಮಾಡಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು. ಈ ಮೂರು ಕಂಪನಿಗಳ ಒಪ್ಪಂದದ ಮೊತ್ತ ರೂ.5020 ಕೋಟಿಯಾಗಿದ್ದು, ಸದ್ಯ ಅದನ್ನು ತಡೆಹಿಡಿದಿರುವುದಾಗಿ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಅವರು ಸೋಮವಾರ ಪ್ರಕಟಿಸಿದರು. ದೇಶದಲ್ಲಿ ಚೀನಾ ಕಂಪನಿಗಳಿಗೆ ಅಂಕುಶ ಹಾಕುವ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ಎದ್ದಿದೆ. ಚೀನಾ ವಿರುದ್ಧ ಪ್ರತಿಭಟನೆಗಳು ನೆಡೆದವು.[೨೩]

ನೋಡಿ

ಪೂರಕ ಮಾಹಿತಿ

ಉಲ್ಲೇಖ

  1. [http://www.globalsecurity.org/military/library/report/1984/CJB.htm The China-India Border War}
  2. http://www.rediff.com/news/2006/nov/14china.htm
  3. https://www.wsj.com/articles/SB124578881101543463
  4. ಇತಿಹಾಸದ ಪಾಠಗಳಿಂದ ಭಾರತೀಯ ಸೈನಿಕರು ಪಾಠ ಕಲಿಯಬೇಕು
  5. ಡೋಕ್ಲಾಮ್ ಗಾಗಿ ಇಂಡೋ-ಚೀನಾ ಜಟಾಪಟಿ; ಗಡಿ ಪ್ರಕ್ಷುಬ್ಧ!03 Jul 2017
  6. ಕೂಡಲೇ ಸೇನೆಯನ್ನು ವಾಪಸ್ ಕರೆಸಿ: ಭಾರತಕ್ಕೆ ಚೀನಾ; ಬಿಕ್ಕಟ್ಟು ಬಗೆಹರಿಯದಿದ್ದರೆ ಉಭಯ ದೇಶಗಳ ನಡುವಣ ಯುದ್ಧ ಖಚಿತ: ಚೀನಾ ತಜ್ಞರ ಎಚ್ಚರಿಕೆ:04 Jul 2017
  7. ಭಾರತ–ಚೀನಾ ಬಾಂಧವ್ಯ: ವೃದ್ಧಿಯಾಗದ ವಿಶ್ವಾಸ;ಪ್ರಜಾವಾಣಿ ವಾರ್ತೆ ;4 Jul, 2017
  8. ಮೇಲಿನ ತಾಣ
  9. ಮೇಲಿನ ತಾಣ.
  10. ಸುಷ್ಮಾ ಹೇಳಿಕೆ ;ಸಿಕ್ಕಿಂ ಬಿಕ್ಕಟ್ಟು ಭಾರತಕ್ಕೆ ಬೆಂಬಲ;ಪಿಟಿಐ;21 Jul, 2017
  11. ಭಾರತ–ಚೀನಾ ಸೇನೆಗಳ ಹೋಲಿಕೆ ಹಾಸ್ಯಾಸ್ಪದ: ಟಿಬೆಟ್‌ನಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ತೋರಿಕೆಗಲ್ಲ;21 Jul, 2017
  12. ಹಿಂದೂ ರಾಷ್ಟ್ರೀಯವಾದವು ಭಾರತ–ಚೀನಾ ಯುದ್ಧ ಬಯಸುತ್ತಿದೆ: ಚೀನಾ ಪತ್ರಿಕೆ ವರದಿ;ಏಜೆನ್ಸಿಸ್‌;20 Jul, 2017
  13. http://www.prajavani.net/news/article/2017/07/24/508540.html
  14. [ http://www.prajavani.net/news/article/2017/07/28/509381.html ಸುಧೀಂದ್ರ ಬುಧ್ಯ;ಚೀನಾ ಬೊಬ್ಬಿರಿದರೆ ಭಾರತ ಬೆದರಬೇಕೇ?;28 Jul, 2017]
  15. http://www.prajavani.net/news/article/2017/08/29/516428.html ;ಪಿಟಿಐ;29 Aug,2017
  16. [https://www.prajavani.net/stories/national/four-indian-soldiers-are-in-critical-condition-after-the-violent-face-off-with-chinese-troops-on-737255.html ಗಡಿ ಸಂಘರ್ಷ | 20 ಯೋಧರ ಸಾವು, ನಾಲ್ವರ ಸ್ಥಿತಿ ಗಂಭೀರ;d: 17 ಜೂನ್ 2020,]
  17. Why are China and India fighting over an inhospitable strip of the Himalayas?;Analysis by James Griffiths, CNN;June 17, 2020
  18. Explainer | ಭಾರತ–ಚೀನಾ ಗಡಿ ಸಮಸ್ಯೆಯತ್ತ ಒಂದು ನೋಟ;ಪ್ರಜಾವಾಣಿ ವಾರ್ತೆ Updated: 17 ಜೂನ್ 2020,
  19. ಗಾಲ್ವನ್‌‌ ಕಣಿವೆ | ಸಂಘರ್ಷದ ಹಿಂದೆ ಚೀನಾದ ಯೋಜನೆ, ತಂತ್ರ; ಸಂದೀಪ್‌ ಶಾಸ್ತ್ರಿ Updated: 17 ಜೂನ್ 2020,
  20. China–India relations
  21. [೧೪.ಸುಧೀಂದ್ರ ಬುಧ್ಯ;ಚೀನಾ ಬೊಬ್ಬಿರಿದರೆ ಭಾರತ ಬೆದರಬೇಕೇ?;28 Jul, 2017]
  22. [ https://www.prajavani.net/stories/national/pm-narendra-modi-indirectly-warns-china-tells-those-who-dared-bharat-mata-taught-a-lesson-in-all-738009.html ಭಾರತದ ಒಂದಿಂಚು ಭೂಮಿ ಮೇಲೆ ಕಣ್ಣಿಡಲೂ ಯಾರಿಂದಲೂ ಆಗದು: ಪ್ರಧಾನಿ ಮೋದಿ d: 19 ಜೂನ್ 2020]
  23. ಚೀನಾ ವಸ್ತುಗಳ ಆಮದು ಕಡಿತಕ್ಕೆ ಯೋಜನೆ ರೂಪಿಸಲು ಮುಂದಾದ ಕೇಂದ್ರ;ಪಿಟಿಐ Updated: 22 ಜೂನ್ 2020,