ಹೆಚ್.ಆರ್.ನಾಗೇಶರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Sangappadyamani (ಚರ್ಚೆ) ರ 891889 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೬೯ ನೇ ಸಾಲು: ೬೯ ನೇ ಸಾಲು:
==='''ಸಂಯುಕ್ತ ಕರ್ನಾಟಕ'''===
==='''ಸಂಯುಕ್ತ ಕರ್ನಾಟಕ'''===
[[ಚಿತ್ರ:Single_Photo.jpg|thumb|ಸುದ್ದಿ ಸಂಪಾದಕರ ಕುರ್ಚಿಯಲ್ಲಿ]]
[[ಚಿತ್ರ:Single_Photo.jpg|thumb|ಸುದ್ದಿ ಸಂಪಾದಕರ ಕುರ್ಚಿಯಲ್ಲಿ]]
*ಅದೇ ಸಮಯದಲ್ಲಿ ಹುಬ್ಬಳ್ಳಿಯ [[ಸಂಯುಕ್ತ ಕರ್ನಾಟಕ]] ಪತ್ರಿಕೆಯು [[ಬೆಂಗಳೂರು]] ಮುದ್ರಣವನ್ನು ಆರಂಭಿಸಲು ಇಚ್ಛಿಸಿತ್ತು. ಹುಬ್ಬಳ್ಳಿ ಪತ್ರಿಕೆಯನ್ನು ಬೆಂಗಳೂರು ಓದುಗರಿಗೆ ರುಚಿಸುವಂತೆ ರೂಪಿಸುವ ಹೊಣೆಗಾರಿಕೆ ಕೆ.ಶಾಮರಾವ್, ಸುರೇಂದ್ರ ಬಿ.ದಾನಿ ಹಾಗೂ ಹೆಚ್.ಆರ್. ನಾಗೇಶರಾವ್ ಅವರಿದ್ದ ಈ ಮೊದಲ ತಂಡದ ಮೇಲಿತ್ತು. ಕೆಲದಿನಗಳಲ್ಲಿ `[[ಜನಪ್ರಗತಿ]]' ಸಂಪಾದಕರಾಗಿದ್ದ ಬಿ.ಶ್ರೀನಿವಾಸ ಮೂರ್ತಿ, ಕವಿ [[ಅರ್ಚಕ ವೆಂಕಟೇಶ]], ಯುವ ಬರಹಗಾರ [[ಮತ್ತೂರು ಕೃಷ್ಣಮೂರ್ತಿ]] (ಮುಂದೆ [[ಲಂಡನ್]]ನ [[ಭಾರತೀಯ ವಿದ್ಯಾಭವನ]] ದ ಜವಾಬ್ದಾರಿ ಹೊತ್ತವರು), ಹೊಸತಾಗಿ ವೃತ್ತಿ ಆರಂಭಿಸಿದ [[ಎನ್.ವಿ.ಜೋಶಿ]] [[ಸಂಯುಕ್ತ ಕರ್ನಾಟಕ]]ಕ್ಕೆ ಸೇರ್ಪಡೆಯಾದರು. [[ಪ್ರಜಾವಾಣಿ]]ಯಲ್ಲಿದ್ದ [[ಖಾದ್ರಿ ಶಾಮಣ್ಣ]] [[ಸಂಕ]]ದ ಸುದ್ದಿ ಸಂಪಾದಕರಾಗಿ ನೇಮಕಗೊಂಡರು.
*ಸಹಾಯಕ ಸಂಪಾದಕರಾಗಿ [[`ಗ್ರಾಮಾಯಣ']] ಖ್ಯಾತಿಯ ಸಾಹಿತಿ [[ರಾವಬಹಾದ್ದೂರ]] ([[ಆರ್.ಬಿ.ಕುಲಕರ್ಣಿ]]) ನೇತೃತ್ವ ವಹಿಸಿಕೊಂಡರು. [[ಲೋಕ ಶಿಕ್ಷಣ ಟ್ರಸ್ಟ್]]ನ ಏಕಮೇವ ಟ್ರಸ್ಟಿಯಾಗಿದ್ದ [[ಗಾಂಧೀವಾದಿ]], [[ಸ್ವಾತಂತ್ರ್ಯ ಹೋರಾಟಗಾರ]], [[ಕಾಂಗ್ರೆಸ್ ರಾಜಕಾರಣಿ]] [[ರಂಗನಾಥ ದಿವಾಕರ]] ಪತ್ರಿಕೆಯ [[ಹುಬ್ಬಳ್ಳಿ]] ಹಾಗೂ [[ಬೆಂಗಳೂರು]] ಆವೃತ್ತಿಯ ಸಂಪಾದಕತ್ವ ವಹಿಸಿಕೊಂಡರು.
*[[ಹುಬ್ಬಳ್ಳಿ]] ಮತ್ತು [[ಬೆಂಗಳೂರು]] ಕೇಂದ್ರಗಳಿಂದ ಪ್ರಕಟವಾಗುವ ಏಕಮೇವ ಕನ್ನಡ ದಿನಪತ್ರಿಕೆಯೆಂಬ ಹೆಗ್ಗಳಿಕೆ [[ಸಂಕ]]ದ್ದಾಯಿತು. ಎರಡೂ ಕೇಂದ್ರಗಳ ನಡುವೆ [[ಟೆಲಿಪ್ರಿಂಟರ್]] ಸಂಪರ್ಕ ವ್ಯವಸ್ಥೆ ಜಾರಿಗೆ ಬಂದಿತು. [[ಉತ್ತರ ಕರ್ನಾಟಕ]] ಹಾಗೂ [[ಹಳೇ ಮೈಸೂರು]] ಪ್ರದೇಶಗಳನ್ನು ಬೆಸೆಯುವಲ್ಲಿ [[ಸಂಯುಕ್ತ ಕರ್ನಾಟಕ]] ಮಹತ್ವದ ಪಾತ್ರ ವಹಿಸಿತು. [[ರೋಟರಿ ಯಂತ್ರ]]ವನ್ನು ಮುದ್ರಣಕ್ಕೆ ಅಳವಡಿಸಿಕೊಂಡ ಮೊದಲ ಕನ್ನಡ ಪತ್ರಿಕೆಯೆಂಬ ಹೆಗ್ಗಳಿಕೆಯೂ [[ಸಂಯುಕ್ತ ಕರ್ನಾಟಕ]] ಪತ್ರಿಕೆಯದಾಯಿತು.
*[[ದೆಹಲಿ]]ಯ [[ಪ್ರೆಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯ]]ದಲ್ಲಿ ಮುದ್ರಣ ಮಾಧ್ಯಮದ ಬಗ್ಗೆ ಪ್ರೌಢ ತರಬೇತಿ ಪಡೆದ ನಂತರ ನಾಗೇಶರಾವ್ ಅವರು ಪತ್ರಿಕೆಯ ಮುಖ್ಯ ಉಪಸಂಪಾದಕರಾದರು. ಅವರು ಆಗ ಪತ್ರಿಕೆಗೆ ಬರೆಯುತ್ತಿದ್ದ [[ಚಿಟಿಕೆ ಚಪ್ಪರ]] ನಿತ್ಯ ಟೀಕಾಂಕಣ ಬಹು ಜನಪ್ರಿಯವಾಗಿತ್ತು. ಕೆಲದಿನಗಳಲ್ಲಿ ಉಸ್ತುವಾರಿ ಸುದ್ದಿ ಸಂಪಾದಕರಾಗಿ ಪತ್ರಿಕೆಯ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ನಂತರ ಸುದ್ದಿ ಸಂಪಾದಕ ಹುದ್ದೆ ಅವರದಾಯಿತು.
*ಸಂಪಾದಕೀಯ ಬರಹಗಳ ಜತೆಗೆ ಯುವ ಪತ್ರಕರ್ತರ ತಂಡವನ್ನು ಕಟ್ಟುವ ಹೊಣೆಗಾರಿಕೆ ನಾಗೇಶರಾವ್ ಅವರದಾಗಿತ್ತು. ಹಿಂದಿನ ಅಚ್ಚು-ಮೊಳೆ ಜೋಡಣೆಯ ಪುಟ ಕಟ್ಟುವ ದಿನಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಪುಟ ವಿನ್ಯಾಸ ಮಾಡುವವರೆಂಬ ಹೆಗ್ಗಳಿಕೆ ಅವರದಾಗಿತ್ತು. ಮುಂಗಡ ಪತ್ರ ಮಂಡಣೆಯಾದ ಮರುದಿನದ ಪುಟ ವಿನ್ಯಾಸ ಅವರದೇ ಆಗಿರುತ್ತಿತ್ತು. ಸಾಹಿತ್ಯ, ಕ್ರೀಡೆ, ಸಿನಿಮಾ, ರಾಜಕೀಯ ವಿಷಯಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅವರು ಸಂದರ್ಭಕ್ಕನುಸಾರವಾಗಿ ವಿಶೇಷ ಲೇಖನಗಳನ್ನು ಸಿದ್ಧಪಡಿಸುತ್ತಿದ್ದರು.
*ಕಾಲೇಜು ದಿನಗಳಿಂದಲೂ ವಿಜ್ಞಾನ ವಿದ್ಯಾರ್ಥಿ ಹಾಗೂ ವಿಜ್ಞಾನ ಬರಹಗಾರರಾಗಿದ್ದ ನಾಗೇಶರಾವ್ ಸ್ವತಃ ವಿಜ್ಞಾನ ಲೇಖನಗಳನ್ನು ಬರೆಯುವದರ ಜತೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದರು, ಹಾಗೆಯೇ ವಿಜ್ಞಾನ ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದರು. ಇಂಥದೊಂದು ಪ್ರೇರಣೆಯಿಂದಲೇ ಅವರ ಮಗ [[ಹಾಲ್ದೊಡ್ಡೇರಿ ಸುಧೀಂದ್ರ]] ವಿಜ್ಞಾನ ಬರಹದಲ್ಲಿ ತೊಡಗುವಂತಾಯಿತು.
*ವೈಯಕ್ತಿಕ ಕಾರಣಗಳಿಂದ [[ರಂಗನಾಥ ದಿವಾಕರ]] ಅವರು [[ಸಂಯುಕ್ತ ಕರ್ನಾಟಕ]] ಪತ್ರಿಕೆಯನ್ನು ರಾಜಕಾರಣಿ [[ಎಂ.ವೈ.ಘೋರ್ಪಡೆ]] ಅವರಿಗೆ ಮಾರಾಟ ಮಾಡಿದರು. ಆ ಸಮಯದಲ್ಲಿ [[ಪತ್ರಿಕೆಯ ಸಂಪಾದಕೀಯ ತಂಡದಲ್ಲಿ ಕೆಲವೊಂದು ಬದಲಾವಣೆಗಳಾದವು]]. [[ಪ್ರಜಾವಾಣಿ]]ಯಿಂದ ಬಂದ [[ಖಾದ್ರಿ ಶಾಮಣ್ಣ]] ಪ್ರಧಾನ ಸಂಪಾದಕರಾಗಿ, [[ಎಸ್.ವಿ.ಜಯಶೀಲರಾವ್]] ಜಂಟಿ ಸಂಪಾದಕರಾಗಿ ಹಾಗೂ [[ಕೆ.ಜನಾರ್ದನ]] ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ನೇಮಕಗೊಂಡರು.
*[[ಕೆ.ಶಾಮರಾವ್]] ರಾಜೀನಾಮೆ ನೀಡಿ, [[ಲೋಕ ಶಿಕ್ಷಣ ಟ್ರಸ್ಟ್]]ನ ಆಸ್ತಿಯ ಏಕಪಕ್ಷೀಯ ಪರಭಾರೆಯ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋದರು. ಇತ್ತ ಸುರೇಂದ್ರ ಬಿ.ದಾನಿಯವರನ್ನು ಹುಬ್ಬಳ್ಳಿಗೆ ವರ್ಗಾಯಿಸಿ, ಹುಬ್ಬಳ್ಳಿಯಲ್ಲಿದ್ದ ಮತ್ತೀಹಳ್ಳಿ ನಾಗರಾಜರಾವ್ ಅವರನ್ನು ಬೆಂಗಳೂರಿಗೆ ತರುವ ನಿರ್ಧಾರಗಳಾದವು. ಮುಂದೆ ಪತ್ರಿಕೆಯನ್ನು ನಡೆಸಲಾಗದೆಯೆ ಉದ್ಯಮಿ ಹಾಗೂ ರಾಜಕಾರಣಿ [[ಹೆಚ್.ಆರ್.ಬಸವರಾಜ್]] ಅವರಿಗೆ ಪತ್ರಿಕೆಯನ್ನು ಮಾರಾಟ ಮಾಡಲಾಯಿತು.
*ಲೇಖಕ [[ಪ.ಸು.ಭಟ್ಟ]] ಸಂಪಾದಕತ್ವವನ್ನು ವಹಿಸಿಕೊಂಡರು, [[ಕೆ.ಎಸ್.ರಾಮಕೃಷ್ಣಮೂರ್ತಿ]]ಯವರ ನಿಧನದಿಂದ ತೆರವಾಗಿದ್ದ [[ಕನ್ನಡಪ್ರಭ]] ಸಂಪಾದಕರ ಸ್ಥಾನವನ್ನು [[ಖಾದ್ರಿ ಶಾಮಣ್ಣ]] ತುಂಬಿದರು. ೧೯೮೦ರ ಜನವರಿ ೩೧ರಂದು ಏಕಾಏಕಿ ಬೆಂಗಳೂರು ಮುದ್ರಣವನ್ನು ಮುಚ್ಚುವ ನಿರ್ಧಾರವನ್ನು ಬಸವರಾಜ್ ತೆಗೆದುಕೊಂಡರು. ಅತ್ತ [[ಕೆ.ಶಾಮರಾವ್]] ನ್ಯಾಯಾಲಯದ ಮೂಲಕ ಕಚೇರಿಯ ಪುನಾರಂಭಕ್ಕೆ ಪ್ರಯತ್ನ ಪಡುತ್ತಿದ್ದರು.
* ಇತ್ತ್ತ ಹೆಚ್.ಆರ್.ನಾಗೇಶರಾವ್ [[ಸಂಯುಕ್ತ ಕರ್ನಾಟಕ]] ನೌಕರರ ಸಂಘದ ಮೂಲಕ ಆವೃತ್ತಿಯ ಪುನಾರಂಭಕ್ಕೆ ಸಂಘಟಿತ ಹೋರಾಟ ನಡೆಸಿದರು. [[ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ]]ವೂ ತನ್ನ ಬೆಂಬಲ ಸೂಚಿಸಿತು. ಈ ಎಲ್ಲ ಪ್ರಯತ್ನಗಳೊಂದಿಗೆ ಅಂದು ಮುಖ್ಯಮಂತ್ರಿಯಾಗಿದ್ದ [[ಆರ್.ಗುಂಡೂರಾವ್]] ಅವರ ನೆರವಿನಿಂದ ಹನ್ನೊಂದು ತಿಂಗಳ ನಂತರ ಬೆಂಗಳೂರು ಮುದ್ರಣ ಆರಂಭವಾಯಿತು.
*[[ಕೊಡಗು]] ಜಿಲ್ಲೆಯ [[ಶಕ್ತಿ]] [[ದಿನಪತ್ರಿಕೆ]]ಯ ಸಂಪಾದಕರಾಗಿದ್ದ [[ಬಿ.ಎಸ್.ಗೋಪಾಲಕೃಷ್ಣ]] ಸಂಪಾದಕರಾಗಿ ನೇಮಕಗೊಂಡರು. ಅಂತಿಮ ತೀರ್ಪು ಹೊರಬರುವವರೆಗೆ ನ್ಯಾಯಾಲಯ ತನ್ನ ರಿಸೀವರ್ ಮೂಲಕ [[ಲೋಕ ಶಿಕ್ಷಣ ಟ್ರಸ್ಟ್]]ನ ಆಡಳಿತದ ಹೊಣೆಗಾರಿಕೆ ಹೊತ್ತುಕೊಂಡಿತು. [[ಎಸ್.ವಿ.ಜಯಶೀಲರಾವ್]] ಜಂಟಿ ಸಂಪಾದಕರಾಗಿ, ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರಾಗಿ ಪತ್ರಿಕೆಯ ಪುನರುತ್ಥಾನಕ್ಕೆ ಶ್ರಮಿಸಿದರು.
* [[ಬಿ.ಎಸ್.ಗೋಪಾಲಕೃಷ್ಣ]] ಅವರ ನಿರ್ಗಮನವಾಯಿತು, [[ಎಸ್.ವಿ.ಜಯಶೀಲರಾವ್]] ಅವರು [[ಮುಂಜಾನೆ]] ದಿನಪತ್ರಿಕೆಯ ಸಂಪಾದಕರಾದರು. ೧೯೮೩ರಲ್ಲಿ [[ಎಂ.ಆರ್.ಸಿದ್ಧಾಪುರ]] ಸಂಪಾದಕರಾಗಿ ಹುಬ್ಬಳ್ಳಿಯಲ್ಲಿ ಅಧಿಕಾರವಹಿಸಿಕೊಂಡರು. ಹೆಚ್.ಆರ್.ನಾಗೇಶರಾವ್ ಬೆಂಗಳೂರು ಆವೃತ್ತಿಯ ಸಹಾಯಕ ಸಂಪಾದಕ, ಮುದ್ರಕ ಹಾಗೂ ಪ್ರಕಾಶಕರಾಗಿ ನಿಯೋಜಿತರಾದರು. ೧೯೮೪ರಲ್ಲಿ ನಾಗೇಶರಾವ್ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾದರು. ೩೧ ಅಕ್ಟೋಬರ್ ೧೯೮೫ರಂದು ಸೇವಾನಿವೃತ್ತರಾದರು.


===ದಿನಚರಿ ನಿರ್ವಹಣೆ===
===ದಿನಚರಿ ನಿರ್ವಹಣೆ===

೧೩:೧೯, ೨೦ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

ಹೆಚ್.ಆರ್.ನಾಗೇಶರಾವ್
ಜನನ೨೦ ಅಕ್ಟೋಬರ್ ೧೯೨೭
ಮಧುಗಿರಿ,ತುಮಕೂರು ಜಿಲ್ಲೆ
ಮರಣ೦೩ ಆಗಸ್ಟ್ ೨೦೦೩
ಬೆಂಗಳೂರು
ವೃತ್ತಿಪತ್ರಕರ್ತರು ಹಾಗೂ ಕನ್ನಡ ಸಾಹಿತಿಗಳು
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿನಗೆಲೇಖನ, ನಾಟಕ, ಪತ್ತೇದಾರಿ ಕಾದಂಬರಿ
ಬಿಳಿಕೆರೆ ಶಾನುಭೋಗ್ ಎಸ್.ಶಾಮಣ್ಣನವರ ಮಗಳು ಪದ್ಮಾವತಿ (ಪ್ರೇಮಾ) ಒಂದಿಗೆ ಮದುವೆ. 1958ರ ಚಿತ್ರ
ಅಮ್ಮನ ತೋಳತೆಕ್ಕೆಯಲ್ಲಿ ಚಿಕ್ಕ ಮಗ ಆನಂದ ತೀರ್ಥ, ಮಧ್ಯದಲ್ಲಿರುವ ಹಾಲ್ದೊಡ್ಡೇರಿ ಸುಧೀಂದ್ರನ ಪಕ್ಕದಲ್ಲಿ ನಿಂತಿರುವ ಮಗು ಅವನ ಅಕ್ಕ ವಿಜಯಲಕ್ಷ್ಮಿ. 1965ರ ಚಿತ್ರ

ಹೆಚ್.ಆರ್.ನಾಗೇಶರಾವ್, ನಾಲ್ಕು ದಶಕಗಳ ಕನ್ನಡ ಪತ್ರಿಕಾರಂಗದಲ್ಲಿ ಕೆಲಸ ಮಾಡಿದ್ದಾರೆ.ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಹಾಲ್ದೊಡ್ಡೇರಿ ಗ್ರಾಮದ ಕೃಷಿಕ ರಂಗಣ್ಣ ಹಾಗೂ ಕಿಟ್ಟಮ್ಮ (ಕೃಷ್ಣವೇಣಿ) ದಂಪತಿಗಳ ಎರಡನೆಯ ಮಗ.

ವಿದ್ಯಾರ್ಥಿ ಜೀವನ

15 ವರ್ಷದ ಬಾಲಕ ನಾಗೇಶರಾವ್ ಸಂಪಾದಿಸುತ್ತಿದ್ದ ಕೈಬರಹ ಪತ್ರಿಕೆಯ ಮೊದಲ ಸಂಚಿಕೆ
12 ವರ್ಷದ ಬಾಲಕ
  • ೧೯೪೦ರ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ತುಮಕೂರಿನ ವಿದ್ಯಾರ್ಥಿವೃಂದದಲ್ಲಿ ಹೆಚ್.ಆರ್.ನಾಗೇಶರಾವ್ ಅವರದು ಪ್ರಧಾನ ಪಾತ್ರ. ಇಂಟರ್‌ಮೀಡಿಯಟ್ ಕಲಿಯುತ್ತಿದ್ದಾಗಲೇ ಹೆಚ್.ಆರ್.ನಾಗೇಶರಾವ್ ಕೈಬರಹದ ಪತ್ರಿಕೆಗಳನ್ನು ಹೊರಡಿಸುತ್ತಿದ್ದರು. ಹೋರಾಟದ ರೋಮಾಂಚಕ ವರದಿಗಳನ್ನು ಸಂಕಲಿಸಿ, ನಕಲು ಮಾಡಿ, ಹಸ್ತಪ್ರತಿಗಳನ್ನು ಸುತ್ತ ಮುತ್ತ ಹಂಚುವ ಹವ್ಯಾಸ ಅವರಿಗಿತ್ತು.
  • ತಮ್ಮ ಅಂಗಡಿಯ ಬಾಗಿಲ ಮೇಲೆ ಕರಪತ್ರಗಳನ್ನು ಅಂಟಿಸಲು ಅನುವು ಮಾಡಿಕೊಡುತ್ತಿದ್ದರು. ಹಾಗೆಯೇ ಸ್ವಯಂಪ್ರೇರಿತ ವಿದ್ಯಾರ್ಥಿಗಳು ತಮಗೆ ಸಿಕ್ಕ ಕರಪತ್ರಗಳ ಮತ್ತಷ್ಟು ಪ್ರತಿಗಳನ್ನು ಮಾಡಿ, .
  • ಜತೆಗೆ ಆಗ ತುಮಕೂರಿನ ವಿದ್ಯಾರ್ಥಿಗಳು ನಡೆಸುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳಲ್ಲೂ ಭಾಗವಹಿಸಿದ್ದರು. 1942ನೇ ಇಸವಿಯಲ್ಲಿ ಒಂದು ದಿನ ತುಮಕೂರಿನಲ್ಲಿ ‘ಬಿಟಿಷರೇ ಭಾರತ ಬಿಟ್ಟು ತೊಲಗಿ ಹೊರಾಟದಲ್ಲಿ ಭಾಗವಹಿಸಿದ್ದರು
  • ಮೆಡಿಕಲ್ ಓದುವ ಆಸೆಯಿಟ್ಟುಕೊಂಡಿದ್ದ ಅವರು, ಅದಕ್ಕೂ ಮುನ್ನ ಬಿ.ಎಸ್‍ಸಿ. ಸೇರುವ ಉದ್ದಿಶ್ಯದಿಂದ ಬೆಂಗಳೂರಿಗೆ ಬಂದರು

ಸನ್ಮಿತ್ರ ಸಂಘ

  • ೧೯೪೧ರಲ್ಲಿ ಆರಂಭವಾದ ತುಮಕೂರಿನ ಸನ್ಮಿತ್ರ ಸಂಘವು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿತ್ತು. ಸಂಘದ ಸಕ್ರಿಯ ಸದಸ್ಯರಾಗಿದ್ದ ನಾಗೇಶರಾವ್ ಕೆಲಕಾಲ ಸಂಘದ ಗ್ರಂಥಪಾಲಕರೂ ಆಗಿದ್ದರು. ೧೯೪೨ರ ಆಗಸ್ಟ್‌ನಲ್ಲಿ ದೇಶದ ಎಲ್ಲ ವಿದ್ಯಾರ್ಥಿಗಳಂತೆ ತುಮಕೂರಿನ ವಿದ್ಯಾರ್ಥಿಗಳೂ ಚಳವಳಿ-ಬಹಿಷ್ಕಾರ-ಮುಷ್ಕರಗಳಲ್ಲಿ ಭಾಗಿಯಾಗಿದ್ದರು.
  • ಅವರ ಚೊಚ್ಚಲ ಲೇಖನಗಳು ವಿದ್ಯಾರ್ಥಿ ವಿಚಾರ ವಿಲಾಸ ಪುಸ್ತಕದಲ್ಲಿ ಪ್ರಕಟವಾದವು. ತುಮಕೂರಿನಿಂದ ವಿಜ್ಞಾನ ವಿಷಯದಲ್ಲಿ ಇಂಟರ್‌ಮೀಡಿಯಟ್ ಪರೀಕ್ಷೆ ಮುಗಿಸಿ ಬೆಂಗಳೂರು ನಗರಕ್ಕೆ ೧೯೪೫ರಲ್ಲಿ ಬಂದದ್ದು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್‍ಸಿ. ಪದವಿ ಕೋರ್ಸ್‌ಗೆ ಸೇರ್ಪಡೆಯಾಗಲು.

ಸಾಹಿತ್ಯ ಕೃತಿಗಳು

ಮೊದಲ ಪುಸ್ತಕಕ್ಕೆ ಮುಖಪುಟವನ್ನೂ ನಾಗೇಶರಾವ್ ರೂಪಿಸಿದ್ದರು
  1. ನಗೆನಾಣ್ಯ (ನಗೆ ಹನಿಗಳ ಸಂಗ್ರಹ)- ಮೇ, 1955
  2. ಸೂತ್ರಧಾರಿ (ಪತ್ತೇದಾರಿ ಕಾದಂಬರಿ) - ಅಕ್ಟೋಬರ್, 1955
  3. ಅದೃಷ್ಟ ಚಕ್ರ (ಅದೃಷ್ಟ ಪುಸ್ತಕ) - ಜನವರಿ, 1956
  4. ರಕ್ತದ ಮಡುವಿನಲ್ಲಿ (ಪತ್ತೇದಾರಿ ಕಾದಂಬರಿ) - ಜುಲೈ, 1956
  5. ಭಯಪಿಶಾಚಿ (ಪತ್ತೇದಾರಿ ಕಾದಂಬರಿ) - ಸೆಪ್ಟೆಂಬರ್, 1956
  6. ಹಿತಶತ್ರು (ಪತ್ತೇದಾರಿ ಕಾದಂಬರಿ) - ಡಿಸೆಂಬರ್, 1956
  7. ನಗೆ ಬಾಂಬು (ಹಾಸ್ಯ ಲೇಖನಗಳ ಸಂಗ್ರಹ) - ಡಿಸೆಂಬರ್, 1956
  8. ನಾರೀಲೋಕದಲ್ಲಿ ನಾರದರು (ಹಾಸ್ಯ ಪ್ರಹಸನ) - ಅಕ್ಟೋಬರ್, 1958
  9. ಕಂಕಣದ ಸಂಕಲ್ಪ (ಸಾಮಾಜಿಕ ನಾಟಕ) - ಫೆಬ್ರವರಿ, 1961

ಹಾಸ್ಯ ಸಾಹಿತ್ಯ

`ಎನ್‌ಎ' ಕಾವ್ಯನಾಮದಲ್ಲಿ ವಿನೋದ ಹಾಸ್ಯ ಮಾಸಪತ್ರಿಕೆಗೆ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನಗೆಲೇಖನ/ಅಣಕವಾಡುಗಳ ರಚನೆ. ಆನಂದ ಜ್ಯೋತಿ ಮಾಸಪತ್ರಿಕೆಯಲ್ಲಿ ರಾಜಕೀಯ ಮುಖಂಡರುಗಳ ಕಾಲ್ಪನಿಕ ಭೇಟಿಗಳು, ಚಿತ್ರಗುಪ್ತ ಸಾಪ್ತಾಹಿಕ, ರಾಮರಾಜ್ಯ ಪಾಕ್ಷಿಕ, ವಿಶ್ವಬಂಧು ಸಾಪ್ತಾಹಿಕ, ವಿಜಯಮಾಲಾ ಮಾಸಿಕ ಹಾಗೂ ಕತೆಗಾರ ಮಾಸಿಕಗಳಲ್ಲಿ ಇದೇ ಕಾವ್ಯನಾಮದ ಮೂಲಕ ಲಘು ಹಾಗೂ ವೈಜಾರಿಕ ಬರಹಗಳು ಮತ್ತು ವಾರ್ತಾವಲೋಕನಗಳನ್ನು ಮಾಡಿದ್ದಾರೆ.


ಕೈಬರಹ ಪತ್ರಿಕೆಗಳು

  • `The First Attempt' - ೧೯೪೦: ಕನ್ನಡ ಕವಿಪುಂಗವರನೇಕರ ಕಾವ್ಯ ರಚನಾರಂಭ ಇಂಗ್ಲಿಷಿನಲ್ಲೇ ಆಯಿತಂತೆ. ಆ ಪರಂಪರೆಯನ್ನು ಪಾಲಿಸಲೆಂಬಂತೆ ನಾಗೇಶರಾಯರು ತಮ್ಮ ಹನ್ನೆರಡು-ಹದಿಮೂರರ ಹರಯದಲ್ಲೇ ಪ್ರಥಮವಾಗಿ ಇಂಗ್ಲಿಷ್ ಸ್ವ-ಕವನ ಸಂಚಿಕೆ `The First Attempt' ಅನ್ನು ಕೈಬರಹದಲ್ಲಿ ಪ್ರಕಟಿಸಿದರು.
  • `Some lines like those of poems which sprang from my brains' ಎಂಬ ವಿನೀತ ವರ್ಗೀಕರಣ ಬೇರೆ! ಕವನದ ವಸ್ತು-ವಿಷಯಗಳಲ್ಲೂ ಸಾಕಷ್ಟು ವೈವಿಧ್ಯ. ಪುಸ್ತಕವೊಂದರ ಎಲ್ಲ ಅಂಗ-ಅಂಶಗಳ ಸ್ಪಷ್ಟ ಪರಿಕಲ್ಪನೆ - ಪರಿಚಯ, ಹೈಸ್ಕೂಲ್ ಎರಡನೇ ತರಗತಿಯ ಹಳ್ಳಿ ಹೈದನಿಗೆ ಹೇಗಾಯಿತೆಂಬುದೇ ವಿಸ್ಮಯದ ವಿಷಯ! ಈ ಸಂಚಿಕೆ ನೋಡಲು ಸಿಕ್ಕಿದೆ. ಇಂಗ್ಲಿಷ್ ಬಿಟ್ಟರೂ ಕನ್ನಡದಲ್ಲಿ ‘ಅಣಕವಾಡು’ಗಳನ್ನು ರಚಿಸುವ ಸ್ಫೂರ್ಥಿ ಮುಂದೆ ಬಂತು.
  • ‘ಹಣೆ ಬರಹ’ - ೧೯೪೧: ಸಹಪಾಠಿಗಳ-ಸ್ನೇಹಿತರ ಮನೋವಿಕಾಸ-ರಂಜನೆಗೆಂದು ‘ಹಣೆಬರಹ’ ಹೊರತಂದರು, ಕೈಬರಹದಲ್ಲೇ. ‘ವಿ’ಚಿತ್ರ ಇಂಗ್ಲಿಷ್ ಮಾಸಪತ್ರಿಕೆಯೆಂಬ ಅಭಿದಾನ - ಐದು ಭಾಷೆಗಳಲ್ಲಿ ನಾಮಲಿಖಿತ. ಅದರ ‘ನಾರದ’ ಎನ್ನುವಲ್ಲಿ ಆತ ಜಗದ ಮೊತ್ತಮೊದಲ ಅಧಿಕೃತ ಸುದ್ದಿಗ್ರಾಹಿ - ವಿತರಕನೇನೋ ಎಂಬ ಅದ್ಭುತ ಕಲ್ಪನೆ ಅರ್ಥಾತ್ ಅಪೂರ್ವ ಸಂಶೋಧನೆ!
  • ‘ಹಣೆಬರಹ’ದಲ್ಲಿ, ಪತ್ರಿಕೆಯೊಂದರ ‘ಎ
  • ‘ಸೋಮಾರಿ’ - ೧೯೪೧-೪೨:
  • ಮುಂದೆ ೧೯೫೨ರಲ್ಲಿ ‘ತಾಯಿನಾಡು’ವಿನ ಸೋದರನಂತೆ ಮರುಹುಟ್ಟು ಪಡೆದ ಸಚಿತ್ರ-ಸುಂದರ-ಸಾಪ್ತಾಹಿಕ ‘ಚಿತ್ರಗುಪ್ತ’ದಲ್ಲಿ ‘ವಿನೋದ ವಿಹಾರ’ ಅಂಕಣವನ್ನು ನಡೆಸಿಕೊಂಡು ಬಂದವರು ಇಂದಿನ ಹೆಸರಾಂತ ವ್ಯಂಗ್ಯಚಿತ್ರಕಾರ ಎಸ್.ಕೆ.ನಾಡಿಗ್ ಜತೆಗೆ ‘ಎನ್‍ಎ’ ಕಾವ್ಯನಾಮದ ನಾಗೇಶರಾಯರು. ‘ಚಿತ್ರಗುಪ್ತ’ದ ಸಾಂಗತ್ಯದಲ್ಲಿ ಸಂಪಾದಕ ಎಂ.ಎಸ್.ಭಾರದ್ವಾಜ್, ನಿರಂಜನ, ಶೇಷನಾರಾಯಣ, ಕೋ.ಚೆನ್ನಬಸಪ್ಪ, ಎಂ.ಬಿ.ಸಿಂಗ್, ವೆಂಕಟರಾಜ ಪಾನಸೆ.
  • ಕುಮಾರ ವೆಂಕಣ್ಣ ಮುಂತಾದವರೊಂದಿಗೆ ಒಡನಾಟ, ‘ಪುಸ್ತಕ ಪ್ರಿಯ’ ಹೆಸರಿನಲ್ಲಿ ಗ್ರಂಥ ವಿಮರ್ಶೆ. ‘ಕನ್ನಡ ಕೆಚ್ಚು’ - ೧೯೪೧-೪೨: ಈ ಕೈಬರಹ ಪತ್ರಿಕೆಯ ಸಂಪುಟ - ಸಂಚಿಕೆಗಳು ‘ಉರಿ’ ಹಾಗೂ ‘ಕಿಡಿ!! ಮುಂದೆ ಪಿ.ಶೇಷಪ್ಪನವರ ‘ಕಿಡಿ’ ವಾರಪತ್ರಿಕೆ ಬೆಂಗಳೂರಿನಿಂದ ಹೊರಟು ಸರ್ಕಾರ-ಸಚಿವರು-ಅಧಿಕಾರಿಗಳಿಗೆ ಸಾಕಷ್ಟು ಬಿಸಿ ಮುಟ್ಟಿಸುತ್ತಿತ್ತು. ‘ಕಿಡಿ’ ಸಿಡಿಯಲು, ‘ಉರಿ’ ಕಾರಲು ನಾಗೇಶರಾಯರೂ ಸಾಕಷ್ಟು, ಬೇಕಷ್ಟು ಮದ್ದು-ಗುಂಡು ಸುರಿಸುತ್ತಿದ್ದರು.
  • ಅಷ್ಟೇ ಅಲ್ಲ, ಮುಂದೆ ಹೆಚ್.ರಾಮಸ್ವಾಮಿಯವರ ಸಂಪಾದಕತ್ವದಲ್ಲಿ ಆರಂಭವಾದ ‘ಜ್ವಾಲಾಮುಖಿ’ ಪತ್ರಿಕೆಗೆ ಮೊದಲ ಸಂಪಾದಕೀಯದಿಂದ ಹಿಡಿದು ಲೇಖನಗಳ ಲಾವಾರಸವನ್ನು ಹರಿಸುತ್ತಿದ್ದರು. ‘ಕನ್ನಡ ಕೆಚ್ಚು’ ಸಂಪಾದಕ - ಹಾ.ರಂ. ನಾಗೇಶರಾವ್ - ‘ಕನ್ನಡ ಕಂದ’! ‘ಕನ್ನಡದ ಬಗ್ಗೆ ವಾತ್ಸಲ್ಯಪೂರಿತರಾಗಿ’ ಎಂಬುದೇ ಅವರಿಗಿದ್ದ ಆಶಯ. ‘ಕನ್ನಡಿಗರಲ್ಲಿ’ - ಸಂವಾದರೂಪದ ಸಂಪಾದಕೀಯ; ‘ಕನ್ನಡದ ಚೆಲುವು’ - ಹಳೆಗನ್ನಡ ಪದ್ಯದ ಮೂಲಕ ನಾಡ ಪರಿಚಯ, ‘ನಾವು-ನೀವು’ - ಓದುಗರ ಸಂದೇಹಕ್ಕೆ ಸಂಆಧಾನ;
  • ‘ಕನ್ನಡ ಕಂದರು’ - ಕನ್ನಡ ಸಂಸ್ಥೆಗಳ ಕಲಾಪ ಸುದ್ದಿ - ವರದಿ; ‘ಕನ್ನಡ ಸಾಹಿತ್ಯದ ಮೈಲಿಗಲ್ಲುಗಳು’ ಅಲ್ಲದೆ ನೊಂದ-ನುಡಿ, ಬಿನ್ನಹಗಳಂಥ ಅಂತರಂಗ ಬರಹಗಳು. ಇವೆಲ್ಲವೂ ‘ಕನ್ನಡ ಕೆಚ್ಚು’ವಿನಲ್ಲಿದೆ. ‘ಇನ್ನೇನು?’ - ೧೯೪೨: ಆಗ ಸ್ವಾತಂತ್ರ್ಯ ಚಳುವಳಿಯ ಬಿಸಿ. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಆಂದೋಲನ. ರಾಯರೀಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಕುಡಿಮೀಸೆ ಚಿಗುರೊಡೆಯುತ್ತಿದ್ದ, ಕುದಿ ಹೃದಯದ ಹುಡುಗ. ದೇಶಕ್ಕಾಗಿ ತನ್ನ ಸೇವೆಯೂ ಸಲ್ಲಲಿ ಎಂಬ ತವಕ. ‘ಸ್ಟುಡೆಂಟ್ಸ್ ಫೆಡರೇಶನ್’ ಮೂಲಕ ನಾಲ್ವರು ಗೆಳೆಯರೊಡಗೂಡಿ ‘ಇನ್ನೇನು’ ಹಸ್ತ ಪತ್ರಿಕಾ ಪ್ರಕಟಣೆ. ಪೊಲೀಸ್ ನಿಗಾ, ಗುಮಾನಿ, ತನಿಖೆಗಳಾರಂಭವಾದಾಗ ಇದು ಸ್ಥಗಿತ. ಚದುರಿದ ಕಾರ್ಯಕರ್ತರು.
  • ‘ಕರವಾಳ’ - ೧೯೪೨: ‘

ತಾಯಿನಾಡು

ಚಿತ್ರ:TainaduHRN.jpg
ತಾಯಿನಾಡು ಉಪಸಂಪಾದಕ
  • ಆ ವರ್ಷದ ಅಡ್ಮಿಶನ್ ಮುಗಿದಿದ್ದರಿಂದ ಮುಂದಿನ ಅಕ್ಯಾಡೆಮಿಕ್ ವರ್ಷದ ತನಕ ಸುಮ್ಮನೆ ಇರುವ ಬದಲು ವೈಟ್‌ಫೀಲ್ಡ್ನಲ್ಲಿದ್ದ ಮಿಲಿಟರಿ ಆರ್ಡ್‌ನೆನ್ಸ್ ಡಿಪೋದಲ್ಲಿ ಲೆಕ್ಕಪತ್ರ ನೋಡಿಕೊಳ್ಳುವ ತಿಂಗಳಿಗೆ ೭೦ ರುಪಾಯಿ ಸಂಬಳದ ಕೆಲಸಕ್ಕೆ ಸೇರಿದರು (11-05-1945). ಈ ಬಗ್ಗೆ ತಿಳಿದಿದ್ದ ತುಮಕೂರಿನ ಪ್ರೌಢಶಾಲೆಯ ಉಪಾಧ್ಯಾಯ ಏ.ಟಿ.ಶಾಮಾಚಾರ್ ಹೀಗೊಂದು ದಿನ ಬೆಂಗಳೂರಿನಲ್ಲಿ ನಾಗೇಶರಾವ್ ಅವರನ್ನು ಭೇಟಿ ಮಾಡಿದರು.
  • ಕನ್ನಡ ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದ ಯುವಕ ಗುಮಾಸ್ತಗಿರಿಯಲ್ಲಿ ಕಳೆದುಹೋಗಬಹುದೆಂಬ ಆತಂಕ ಅವರಿಗಿತ್ತು. ತಮಗೆ ಪರಿಚಯವಿದ್ದ ತಾಯಿನಾಡು ಪತ್ರಿಕೆಯ ಸಂಪಾದಕರಾಗಿದ್ದ ಪಿ.ಬಿ.ಶ್ರೀನಿವಾಸನ್ ಅವರಿಗೆ ಪತ್ರವೊಂದನ್ನು ಬರೆದು ನಾಗೇಶರಾವ್ ಅವರ ಕೈಗಿತ್ತರು. ಆರ್ಡ್‌ನೆನ್ಸ್ ಡಿಪೋ ಕೆಲಸಕ್ಕೆ ರಾಜೀನಾಮೆ ನೀಡಿದರು
  • ತಾಯಿನಾಡು ಪತ್ರಿಕೆಯ ಕಚೇರಿಯನ್ನು ಪ್ರವೇಶಿಸಿದ ನಾಗೇಶರಾವ್, ಜನವರಿ ೪, ೧೯೪೬ರಂದು ಸಂಪಾದಕರನ್ನು ಭೇಟಿಯಾಗಿ ಉಪಸಂಪಾದಕರಾಗಿ ನೇಮಕಗೊಂಡರು. ನಾಗೇಶರಾವ್ ಅತಿ ಶೀಘ್ರದಲ್ಲೇ ಸಂಪಾದಕರ ಮೆಚ್ಚುಗೆ ಗಳಿಸಿದರು. *ಸಂಪಾದಕೀಯ ಪುಟದ ಉಸ್ತುವಾರಿಯ ಜತೆಗೆ ನಿತ್ಯವೂ ಸಂಪಾದಕೀಯ ಹಾಗೂ ಟೀಕಾಂಕಣ `ನಾರದ ಉವಾಚ' ಬರೆಯುವ ಹೊಣೆಗಾರಿಕೆ ನಾಗೇಶರಾವ್ ಅವರದಾಯಿತು. ಕಾಲಕ್ರಮೇಣ ಸಂಪಾದಕರ ನಂತರದ ಸ್ಥಾನದಲ್ಲಿ ಇಡೀ ಪತ್ರಿಕೆಯನ್ನು ರೂಪಿಸುವ ಜವಾಬ್ದಾರಿ ನಾಗೇಶರಾವ್ ಹೊತ್ತುಕೊಂಡರು. ನಾರದ ಉವಾಚ ಅಂದಿನ ಮೈಸೂರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನೂ ತಟ್ಟುತ್ತಿತ್ತು.

ಸಂಯುಕ್ತ ಕರ್ನಾಟಕ

ಸುದ್ದಿ ಸಂಪಾದಕರ ಕುರ್ಚಿಯಲ್ಲಿ

ದಿನಚರಿ ನಿರ್ವಹಣೆ

ಚಿತ್ರ:Diary 1965-1 001.jpg
ತಾಯಿನಾಡು ಹಾಗೂ ಸಂಯುಕ್ತ ಕರ್ನಾಟಕ ದಿನಗಳಿಂದಲೂ ಹೆಚ್.ಆರ್.ನಾಗೇಶರಾವ್ ತಮ್ಮ ದಿನಚರಿಯನ್ನು ತಪ್ಪದೇ ಬರೆಯುತ್ತಿದ್ದರು

ಪತ್ರಿಕಾಲಯದಲ್ಲಿ ಕೆಲಸ ಮಾಡುವವರಿಗೆ ನಿತ್ಯವೂ ಸುದ್ದಿಯ ಸುರಿಮಳೆ. ಶಾಲಾ ದಿನಗಳಿಂದಲೂ ದಿನಚರಿ ಬರೆಯುವ ಹವ್ಯಾಸವನ್ನು ತಪ್ಪದೇ ನಡೆಸಿಕೊಂಡು ಬರುತ್ತಿದ್ದ ಹೆಚ್.ಆರ್.ನಾಗೇಶರಾವ್ ಅವೆಲ್ಲವನ್ನೂ ಆರು ದಶಕಗಳ ಕಾಲ ಕಾಪಾಡಿಕೊಂಡು ಬಂದಿದ್ದಾರೆ. ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿ ಬೆಂಗಳೂರಿಗೆ ಬಂದ ಸಂದರ್ಭವನ್ನು ಅವರು ದಿನಚರಿಯ ಪುಟದಲ್ಲಿ ದಾಖಲಿಸಿರುವುದು ಹೀಗೆ.

ಪತ್ರಿಕಾ ಬರಹ

‘ಕೊರವಂಜಿ’ಯ ‘ಕುಹಕಿಡಿ’ಗಳು ಅಂಕಣಕ್ಕೆ 1947ರಲ್ಲೇ ನಾಗೇಶರಾವ್ ಬರೆಯುತ್ತಿದ್ದರು
  • ಕೊರವಂಜಿ ಪತ್ರಿಕೆಯ ‘ಕುಹಕಿಡಿಗಳು’ ಅಂಕಣಕ್ಕೆ ಕೆಲಕಾಲ ನಾಗೇಶರಾವ್ ಬರೆಯುತ್ತಿದ್ದರು. ಆ ಕಾಲದ ನಿರ್ಭೀತ ಪತ್ರಿಕೆ ಪಿ.ಶೇಷಪ್ಪ ನವರ ಕಿಡಿ ಸಾಪ್ತಾಹಿಕ. ಆಳರಸರನ್ನು ಬೆಚ್ಚಿ ಬೀಳಿಸುತ್ತಿದ್ದ ಈ ಪತ್ರಿಕೆಗೆ ನಾಗೇಶರಾವ್ ಗುಟ್ಟಾಗಿ ರಾಜಕೀಯ ವಿಶ್ಲೇಷಣೆಯ ಲೇಖನಗಳನ್ನು ಬರೆದುಕೊಡುತ್ತಿದ್ದರು. ಇದೇ ಮಾದರಿಯಲ್ಲಿ ಜ್ವಾಲಾ ಮುಖಿ ಪತ್ರಿಕೆ ಆರಂಭವಾದಾಗ, ಮೊದಲ ಸಂಚಿಕೆಯ ಸಂಪಾದಕೀಯ ನಾಗೇಶರಾವ್ ಅವರದ್ದು.
  • ಇವೆರಡೂ ವಾರಪತ್ರಿಕೆಗಳಿಗೆ ಅಂದಿನ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಟು ವಿಮರ್ಶಾ ಲೇಖನಗಳನ್ನು ಅವರು ಬರೆಯುತ್ತಿದ್ದರು. ಆನಂದ ಜ್ಯೋತಿ ಮಾಸಪತ್ರಿಕೆಗೆ ರಾಜಕೀಯ ಮುಖಂಡರ ಕಾಲ್ಪನಿಕ ಭೇಟಿಗಳು, ರಾಮರಾಜ್ಯ ಪಾಕ್ಷಿಕ, ವಿಶ್ವಬಂಧು ಸಾಪ್ತಾಹಿಕ, ವಿಜಯಮಾಲಾ ಮಾಸಿಕ, ಕತೆಗಾರ ಮಾಸಿಕಗಳಿಗೆ ಲಘು ಬರಹ, ವೈಚಾರಿಕ ಲೇಖನ, ವಾರ್ತಾವಲೋಕನಗಳನ್ನು ಬರೆಯುತ್ತಿದ್ದರು. ತುಮಕೂರಿನ ವಿಜಯವಾಣಿ ದಿನಪತ್ರಿಕೆಗೆ ವಾರಕ್ಕೊಮ್ಮೆ `ಬಾರುಗೋಲು' ಎಂಬ ಟೀಕಾಂಕಣ ಬರೆದುಕೊಡುತ್ತಿದ್ದರು. *ವಿನೋದ ಪತ್ರಿಕೆಗೆ ತಪ್ಪದೇ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು. ಆ ಕಾಲದಲ್ಲಿ ಪ್ರಕಟವಾಗುತ್ತಿದ್ದ ಅನೇಕ ಪತ್ರಿಕೆಗಳಿಗೆ ಎನ್‍ಎ ಹೆಸರಿನಲ್ಲಿ ರಾಜಕೀಯ ವಿಶ್ಲೇಷಣೆ, ನಗೆಲೇಖನ, ಅಣಕವಾಡು, ‘ಕುಹಕಿಡಿಗಳು’ ಅಂಥ ಟೀಕಾಂಕಣಗಳನ್ನು ಅವರು ಬರೆದುಕೊಡುತ್ತಿದ್ದರು. ವಿಶ್ವಬಂಧು ತಮ್ಮ ಗೆಳೆಯ ಹಾಗೂ ಮಾರ್ಗದರ್ಶಿ ಕೆ.ಅನಂತಸುಬ್ಬರಾವ್ ಅವರ ಜತೆ ಸೇರಿ ನಾಗೇಶರಾವ್ ಆರಂಭಿಸಿದ ವಾರಪತ್ರಿಕೆ. ಈ ಪತ್ರಿಕೆಗೆ ನಾಗೇಶರಾವ್ ವಿಜ್ಞಾನ ಸುದ್ದಿ ತುಣಕುಗಳ ಅಂಕಣ `ವಿಜ್ಞಾನ ವಿಶ್ವ' ನಿರ್ವಹಿಸುತ್ತಿದ್ದರು. ಅವರ ಸಾಮಾಜಿಕ ನಾಟಕ `ಕಂಕಣದ ಸಂಕಲ್ಪ' ಮೊದಲು `ವಿಶ್ವಬಂಧು'ವಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.

ಇತರೆ

  • ವಿಜ್ಞಾನ, ಸಾಹಿತ್ಯ, ಪ್ರಚಲಿತ ರಾಜಕೀಯಗಳಿಗೆ ಸಂಬಂಧಿಸಿದ ಇಂಗ್ಲಿಷ್ ಹಾಗೂ ಕನ್ನಡ ಪುಸ್ತಕಗಳ ಅಪಾರ ಸಂಗ್ರಹ ನಾಗೇಶರಾವ್ ಅವರದು. ನಿವೃತ್ತಿಯ ನಂತರದ ಹದಿನೆಂಟು ವರ್ಷಗಳನ್ನು ಅವರು ಪುಸ್ತಕಗಳನ್ನು ಓದುವುದರಲ್ಲಿ ಕಳೆದರು. ನಡುವೆ ನಿಯಮಿತವಾಗಿ ತಮಗೆ ಪ್ರಿಯವಾದ ಹಾಸ್ಯ ಲೇಖನಗಳ ರಚನೆಯಲ್ಲಿ ತೊಡಗಿಕೊಂಡರು.
  • ಬೆಂಗಳೂರಿನಲ್ಲಿ ಲಭ್ಯವಿದ್ದ ಎಲ್ಲ ಇಂಗ್ಲಿಷ್ ಹಾಗೂ ಕನ್ನಡ ಪತ್ರಿಕೆಗಳನ್ನು ನಿರಂತರವಾಗಿ ಓದುತ್ತಿದ್ದರು. ಆಪ್ತ ಮಿತ್ರರು ಹಾಗೂ ಹಿಂದಿನ ಸಹೋದ್ಯೋಗಿಗಳೊಂದಿಗೆ ಪತ್ರಿಕೋದ್ಯಮದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ೩ನೇ ಆಗಸ್ಟ್ ೨೦೦೩ರಂದು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

‘ಸುದ್ದಿಜೀವಿ’

‘ಸುದ್ದಿಜೀವಿ’ ಪುಸ್ತಕವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು

ಪತ್ರಿಕೋದ್ಯಮ

ತಾನುಂಟೋ, ಪೇಪರುಂಟೋ!

  • ತಮ್ಮನ್ನು ‘ಸುದ್ದಿಜೀವಿ’ ಎಂದು ಕರೆದುಕೊಂಡ ದಿನಪತ್ರಿಕೆಯ ಸುದ್ದಿ ಸಂಪಾದಕರು, ವರದಿಗಾರರು ತಳೆಯುವ ‘ತಾನುಂಟೋ, ಪೇಪರುಂಟೋ’ ಧೋರಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪೇಪರಿನಲ್ಲಿ ಹೆಗ್ಗಳಿಕೆ ವರದಿಗಾರನದೋ, ಇಲ್ಲವೇ ಉಪಸಂಪಾದಕನದೋ ಎಂಬ ಬಗೆಹರಿಸಲಾಗದ ಪ್ರೇಮ-ವಿವಾದವನ್ನು ಅವರು ಸ್ವಾರಸ್ಯಕರವಾಗಿ ಬಿಸಿ ಏರಿಸದೇ ಬಣ್ಣಿಸುತ್ತಾರೆ. ಅನುದಿನ ನಡೆಯುವ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರ ಬರುವವರೆಗೆ ಅಷ್ಟೇ! - ಎಂಬ ವಿವೇಚನೆ ಅವರದು.
  • ತಾನು ಮಾಡುವ ಕೆಲಸ, ಪರಿಸ್ಥಿತಿಗಳನ್ನು ಗಮನಿಸಿದಾಗ ವರದಿಗಾರ ತಳೆಯುವ ಧೋರಣೆಯನ್ನು ಮನ್ನಿಸಬಹುದು - ಸಂ. - ಬೆಂಗಳೂರು ವರದಿಗಾರರ ಕೂಟದ ಸ್ಮರಣ ಸಂಚಿಕೆ (1971) ಪತ್ರಿಕೋದ್ಯಮವಲ್ಲ, ನಮ್ಮದು ‘ಕತ್ರಿಕೋದ್ಯಮ’! ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 1975ರಲ್ಲಿ ನಡೆಸಿದ ರಾಜ್ಯ ಸಮ್ಮೇಳನದ (ಮಂಡ್ಯ) ಸ್ಮರಣ ಸಂಚಿಕೆಗೆ ಅಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸುದ್ದಿ ಸಂಪಾದಕರಾಗಿದ್ದ ಹೆಚ್.ಆರ್.ನಾಗೇಶ ರಾವ್ ಬರೆದ ಲೇಖನ.

ಪುಸ್ತಕ ವಿಮರ್ಶೆ

'ಪುಸ್ತಕ ಪ್ರಿಯ' ಹೆಸರಿನಲ್ಲಿ 'ತಾಯಿನಾಡು', 'ಚಿತ್ರಗುಪ್ತ' ವಾರಪತ್ರಿಕೆ ಹಾಗೂ 'ಸಂಯುಕ್ತ ಕರ್ನಾಟಕ'ದಲ್ಲಿ ಗ್ರಂಥ ವಿಮರ್ಶೆ.

ಪುಸ್ತಕ ಪ್ರಕಾಶನ

ಪಾಕೆಟ್ ಬುಕ್‌ಗಳು ಜನಪ್ರಿಯವಾಗುತ್ತಿದ್ದ ಸಮಯದಲ್ಲಿ ಆರಂಭಿಸಿದ ಚಾತಕ ಪ್ರಕಾಶನದ ಮೂಲಕ ನಾಗೇಶರಾಯರು ಆರು ವರ್ಷಗಳ ಕಾಲ (1955-61) ಒಂಬತ್ತು ಸ್ವರಚಿತ ಕೃತಿಗಳನ್ನು ಪ್ರಕಟಿಸಿದ್ದರು. ಪತ್ತೇದಾರಿ ಕಾದಂಬರಿಗಳನ್ನು `ಮಧುಕರ', ಅದೃಷ್ಟ ಪುಸ್ತಕವನ್ನು `ಲಿಬ್ರಾ' ಮತ್ತು ಸಾಮಾಜಿಕ ನಾಟಕವನ್ನು `ಸೀತಾಪತಿ' ಎಂಬ ಹೆಸರಿನಲ್ಲಿ ಬರೆದಿದ್ದರು. ಮೊದಲ ಪುಸ್ತಕ `ನಗೆ-ನಾಣ್ಯ'ಕ್ಕೆ ರಕ್ಷಾಪುಟ ಮತ್ತು ಒಳಗಿನ ವ್ಯಂಗ್ಯಚಿತ್ರಗಳನ್ನು ಅವರೇ ರಚಿಸಿದ್ದರು. `ಅದೃಷ್ಟ ಚಕ್ರ'ಕ್ಕೆ ಕಲಾವಿದರೊಬ್ಬರು ಬಿಡಿಸಿದ್ದ ರಕ್ಷಾಚಿತ್ರದ ಹಿನ್ನೆಲೆಯಲ್ಲಿ `ಭಯ ಪಿಶಾಚಿ'ಗೂ ತಮ್ಮದೇ ರಕ್ಷಾಪುಟವನ್ನು ರೂಪಿಸಿದ್ದರು. ಕೊನೆಯ ಪುಸ್ತಕ `ಕಂಕಣದ ಸಂಕಲ್ಪ'ದ ರಕ್ಷಾಪುಟವನ್ನು ಅವರು ರಚಿಸಿದ್ದ ಚಿತ್ರ ಅಲಂಕರಿಸಿತ್ತು. ಆರಂಭದ ದಿನಗಳಲ್ಲಿ ತಮ್ಮ ಪ್ರಕಟನೆಗಳ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನೂ ನೀಡಿದ್ದರು. ನಾಗೇಶರಾಯರ ಪುಸ್ತಕಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಆಯ್ದ ವಿಮರ್ಶೆಗಳೊಂದಿಗೆ ಸಾಹಿತಿ `ನಿರಂಜನ'ರ ಪತ್ರವನ್ನು ಇಲ್ಲಿ ನೀಡಲಾಗಿದೆ. ಒಟ್ಟಾರೆಯಾಗಿ ಪ್ರಕಾಶನ ಸಂಸ್ಥೆ `ಕೈ ಸುಟ್ಟುಕೊಳ್ಳುವ ಪ್ರಯತ್ನ'ವಾಗಿದ್ದರೂ ಅಂದಿನ ದಿನಗಳಲ್ಲೇ ಪತ್ತೇದಾರಿ ಕಾದಂಬರಿಗಳ ಸಾವಿರಗಟ್ಟಲೆ ಪ್ರತಿಗಳು ಖರ್ಚಾಗಿದ್ದವು. ಇದೇ ಪ್ರಕಾಶನದಡಿಯಲ್ಲಿ `ತಾಯಿನಾಡು'ವಿನಲ್ಲಿ ಸಹೋದ್ಯೋಗಿ ಮತ್ತು ಆತ್ಮೀಯ ಗೆಳೆಯರಾಗಿದ್ದ ಎಂ.ಎಸ್.ರಾಮಸ್ವಾಮಿ ಅಯ್ಯಂಗಾರ್ ಮತ್ತು ಎಸ್.ಆರ್.ಕೃಷ್ಣಮೂರ್ತಿಯವರೊಂದಿಗೆ ಇಂಗ್ಲಿಷ್-ಹಿಂದಿ-ಕನ್ನಡ `ಅನುವಾದ ಸೇವೆ'ಯನ್ನೂ ಕೆಲ ಕಾಲ ನಾಗೇಶರಾಯರು ನಡೆಸಿದ್ದರು. ಪತ್ತೇದಾರಿ ಕಾದಂಬರಿಯಲ್ಲಿರಬೇಕಾದ ಕುತೂಹಲಕಾರಿ, ರೋಮಾಂಚನಕಾರಿ ಸನ್ನಿವೇಶಗಳು ಇದರಲ್ಲಿ (`ಸೂತ್ರಧಾರಿ') ಸಾಕಷ್ಟು ಇವೆ. ಕಥನ ಶೈಲಿಯೂ ಸ್ರಳವೂ ಮನಸೆಳೆಯುವಂತಹದೂ ಆಗಿದೆ. ಆದರೆ ಕೆಲವು ಸನ್ನಿವೇಶಗಳು ಅಸಂಭವವೆನಿಸುವಂತಿವೆ.

- ಮ.ಗೋಪಾಲಕೃಷ್ಣ (ಎಂ.ಗೋಪಾಲಕೃಷ್ಣರಾವ್, ಸಂಪಾದಕರು) `ಸಾಹಿತ್ಯ ಪರಿಶೀಲನ' ಅಂಕಣ, `ಕಲಿಯುಗ' ಜನವರಿ, 1956

ಜ್ಯೋತಿಷ್ಯದಲ್ಲಿ, ಅದೃಷ್ಟ ಶಕುನಗಳಲ್ಲಿ, ನಂಬಿಕೆಯಿಲ್ಲದವರಿಗೆ ನಂಬಿಕೆ ಹುಟ್ಟಿಸ ಬಯಸುವ, ನಂಬುವವರಿಗೆ ಅನುಸರಿಸಿ ಅದೃಷ್ಟ ಹೆಚ್ಚಿಸಿಕೊಳ್ಳಲೊಂದು ಆಶಿಸುವ, ಲೇಖನಗಳು, ಶಕುನಗಳ ಫಲಾಫಲ, ರಾಶಿ ಭವಿಷ್ಯದ ಅದೃಷ್ಟದ ತಾರೀಖುಗಳು, ಅದೃಷ್ಟ ಸಂಖ್ಯೆಗಳು, ವಿವಾಹ ಡೈರಿ, ಹಲ ಆಕರ್ಷಕ ಅಂಶಗಳುಳ್ಳ ಪುಟ್ಟ ಪ್ರಮಾಣದ ಪುಸ್ತಕವಿದೊಂದು (`ಅದೃಷ್ಟ ಚಕ್ರ'). ಎಲ್ಲರನ್ನೂ ಕೆಲ ನಿಮಿಷಗಳಾದರೂ ಆಕರ್ಷಿಸಬಲ್ಲ ಶಕ್ತಿ ಈ ಹೊತ್ತಿಗೆಯಲ್ಲಿದೆ.

- ಸೂರಿ (ಎಚ್.ಎಸ್.ಸೂರ್ಯನಾರಾಯಣ್) `ಪ್ರಚಲಿತ ಸಾಹಿತ್ಯ' ಅಂಕಣ, `ಪ್ರಜಾವಾಣಿ' 5-2-1956

‘ಮಧುಕರ’ ಹೆಸರಿನಲ್ಲಿ ನಾಗೇಶರಾವ್ ಬರೆದು ಪ್ರಕಟಿಸಿದ ಪಾಕೆಟ್ ಪತ್ತೇದಾರಿ ಕಾದಂಬರಿಗಳು

THIS amateurist attempt at detective fiction presents Shyam, the police detective and Meena Kumari, his wife, who helps him occassionally in his work. An actress is found murdered in her bed and the chief suspect is a handsome young fan of hers. The discovery of the criminal is largely accidental depending on Meena Kumari's mistaking him for the youthful fan who is the thief suspect. There is less interest in the detection than in the description of the fan's infatuation. One is thankful to the writer from keeping the book free from the kind of vulgarity that is so often met with the books of this kind.

-K.N. (K. Narasimha Murthy) 'BOOKS REVIEWED' Column 'DECCAN HERALD' 13-10-1956

ದಾಮೋದರನೆಂಬ ಸ್ವಾರ್ಥಿಯೊಬ್ಬನು ಮಧುಸೂದನನೆಂಬ ಪ್ರಾಮಾಣಿಕ ಉದ್ಯಮಿಯನ್ನು ವಂಚಿಸಲು ಬಹುದೊಡ್ಡ ತಂತ್ರವನ್ನು ಹೂಡಿದರೂ ಪತ್ತೆದಾರ ಶ್ಯಾಮನು ಅದನ್ನು ವಿಫಲಗೊಳಿಸಿಬಿಡುವನು. ಈ ವಸ್ತುವನ್ನು ಆಧರಿಸಿ ಸುಂದರ ಶೈಲಿಯಲ್ಲಿ ಕುತೂಹಲವನ್ನು ಕೆರಳಿಸುತ್ತಾ ಸಾಗುವ ಈ ಕಾದಂಬರಿ (`ಹಿತಶತ್ರು') ವಾಚನೀಯವಾಗಿದೆ.

-

ಪತ್ರಕರ್ತ ವೈಯೆನ್ಕೆ ನಾಗೇಶರಾವ್ ಎಂದೊಡನೆ ನೆನಪಿಸಿಕೊಳ್ಳುತ್ತಿದ್ದದ್ದು ‘ನಗೆ ಬಾಂಬ್’



-

ಪ್ರಶಸ್ತಿ

ಅಕ್ಯಾಡೆಮಿ ವತಿಯಿಂದ ಸನ್ಮಾನ ಮಾಡುತ್ತಿರುವವರು ಪತ್ರಕರ್ತ ಗರುಡನಗಿರಿ ನಾಗರಾಜ ಹಾಗೂ ಸಚಿವ ಬಿ.ಆರ್.ಪಾಟೀಲ್

ಬಾಹ್ಯ ಕೊಂಡಿಗಳು