ಸದಸ್ಯ:Lokesha Kunchadka/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೩೬ ನೇ ಸಾಲು: ೧೩೬ ನೇ ಸಾಲು:
* ಮುಳ್ಯ ಈಶ್ವರ ಸೋಮಾಯಾಜಿ
* ಮುಳ್ಯ ಈಶ್ವರ ಸೋಮಾಯಾಜಿ
* ಚೆಟ್ಟಿ-ಕುರ್ತು ಕುಡಿಯ
* ಚೆಟ್ಟಿ-ಕುರ್ತು ಕುಡಿಯ
* ಕುಕ್ಕನೂರು ಚೆನ್ನಯ್ಯ


==ಪರಿಣಾಮ==
==ಪರಿಣಾಮ==

೧೨:೩೯, ೮ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

ಪೀಟರ್‌ ಜೆ. ಕ್ಲಾಸ್‌

ಕರ್ನಾಟಕ ಜಾನಪದ ಅಧ್ಯಯನಕ್ಕೆ[೧] , ಅದರಲ್ಲೂ ವಿಶೇಷವಾಗಿ ತುಳು ಭಾಷೆಯ ಅಧ್ಯಯನಕ್ಕೆ ಹೊಸ ಮುಖ ತೋರಿದವರು ಪೀಟರ್‌ ಜೆ. ಕ್ಲಾಸ್‌[೨]. ಅಮೆರಿಕಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿ ಕಿ-ಹೇವರ್ಡ್‌ನಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಮಾನವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಪೀಟರ್‌ ಜೆ. ಕ್ಲಾಸ್‌ ವಿಧಿವಶರಾಗಿದ್ದಾರೆ[೩].


1967ರಿಂದ ತೊಡಗಿ ಸುಮಾರು ಮೂವತ್ತು ವರ್ಷಗಳ ಕಾಲ ತುಳುನಾಡಿನಲ್ಲಿ, ಮತ್ತೆ ಸ್ವಲ್ಪ ಕಾಲ ಕುವೆಂಪು ವಿಶ್ವವಿದ್ಯಾನಿಲಯ, ಅನಂತಪುರ ವಿಶ್ವವಿದ್ಯಾನಿಲಯದಲ್ಲಿ ಕೂಡ ನೆಲೆಸಿ, ಜಾನಪದ ಅಧ್ಯಯನಕ್ಕೆ ಹೊಸ ವಿನ್ಯಾಸ ರೂಪಿಸಿದರು, ಹೊಸಬಗೆಯ ಫ‌ಲಿತವನ್ನು ಪಡೆಯುವಲ್ಲಿ ಯಶಸ್ವಿಯಾದರು. ಕ್ಲಾಸ್‌ ಭಾರತಕ್ಕೆ ಬಂದು ತುಳುವರ ವಿವಿಧ ಗುತ್ತಿನ ಮನೆಗಳಲ್ಲಿ ನೆಲೆಸಿ ಬಂಟ, ನಾಡವ ಜಾತಿ ಸಂಕೀರ್ಣದ ಬಂಧುತ್ವ ವ್ಯವಸ್ಥೆಯನ್ನು ವ್ಯಾಪಕ ಅಧ್ಯಯನ ನಡೆಸಿ,

ಶಿಕ್ಷಣ

1970ರಲ್ಲಿ ಅಮೆರಿಕದ ಡ್ನೂಕ್‌ ವಿಶ್ವವಿದ್ಯಾನಿಲಯದಿಂದ ಪಿ.ಎಚ್‌ಡಿ ಪದವಿ ಪಡೆದರು.


ಅವರು ಅಮೆರಿಕದಿಂದ ಬರುವಾಗಲೇ ಎಂ. ಜಿ. ಕೃಷ್ಣಮೂರ್ತಿ, ಎ. ಕೆ. ರಾಮಾನುಜನ್‌ ಅವರಿಂದ ಕನ್ನಡ ಕಲಿತುಕೊಂಡು ಬಂದಿದ್ದರು. ಇಲ್ಲಿಗೆ ಬಂದ ಬಳಿಕ ತುಳುಭಾಷೆಯಲ್ಲಿ ಸಹಜವಾಗಿ ಮಾತನಾಡುವಷ್ಟು ಪರಿಣತರಾದರು.


1978-79ರ‌ ಕಾಲಾವಧಿಯಲ್ಲಿ ಮೈಸೂರಿಭಾರತೀಯ ಭಾಷಾ ಸಂಸ್ಥಾನದಲ್ಲಿ ಜವಾಹರಲಾಲ್‌ ಹಂಡೂ ಅವರೊಂದಿಗೆ Folklore Fellows of India ಎಂಬ ಸಂಘಟನೆಯನ್ನು, ಹಾ ಮಾ ನಾ ಹಾಗೂ ಜಿ. ಶಂ. ಪರಮಶಿವಯ್ಯ ಅವರೊಂದಿಗೆ ಕಟ್ಟಿ ಜರ್ನಲ್‌ ಆಫ್ ಫೋಕ್‌ಲೋರಿಸ್ಟಿಕ್ಸ್‌ ಎನ್ನುವ ವಿದ್ವತ್‌ ಪತ್ರಿಕೆಯನ್ನು ಹೊರತಂದರು. ಕು. ಶಿ. ಹರಿದಾಸ ಭಟ್ಟರು ನಿರ್ದೇಶಕರಾಗಿದ್ದ ಉಡುಪಿಯ ರೀಜನಲ್‌ ರಿಸೋರ್ಸಸ್‌ ಸೆಂಟರ್‌ ಫಾರ್‌ ಪರ್‌ಫಾರ್ಮಿಂಗ್‌ ಆರ್ಟ್ಸ್  - ಆರ್‌ಆರ್‌ಸಿ ಗೆ ಅನೇಕ ಬಗೆಯ ದಾಖಲಾತಿ ಯೋಜನೆಗಳನ್ನು ರೂಪಿಸಿಕೊಟ್ಟರು.

ಆ ಸಂಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಕಲ್ಪಿಸಿಕೊಟ್ಟರು. 1988-89ರ ಕಾಲಾವಧಿಯಲ್ಲಿ ಕು.ಶಿ. ಹರಿದಾಸ ಭಟ್ಟರ ನೇತೃತ್ವದಲ್ಲಿ ಕರ್ನಾಟಕದ ತರುಣ ಜಾನಪದ ವಿದ್ವಾಂಸರಿಗೆ ನಾಲ್ಕು ಹಂತಗಳಲ್ಲಿ 100 ದಿನಗಳ ಅಂತಾರಾಷ್ಟ್ರೀಯ ಜಾನಪದ ಕಮ್ಮಟವನ್ನು ಸಂಘಟಿಸಿದರು. ಪುರುಷೋತ್ತಮ ಬಿಳಿಮಲೆ, ಹಿ. ಶಿ. ರಾಮಚಂದ್ರೇ ಗೌಡ. ತೀ. ನಂ. ಶಂಕರನಾರಾಯಣ, ಎ. ವಿ. ನಾವಡ, ವಾಮನ ನಂದಾವರ, ವೀರಣ್ಣ ದಂಡೆ, ಬಿ. ಶಿವರಾಮ ಶೆಟ್ಟಿ ಈ ಕಮ್ಮಟದಲ್ಲಿ ಪಾಲ್ಗೊಂಡವರಲ್ಲಿ ಕೆಲವರು. ಈ ಕಮ್ಮಟ ಮುಂದೆ ಕರ್ನಾಟಕದಲ್ಲಿ ಜಾನಪದ ಅಧ್ಯಯನವನ್ನು ಮುನ್ನಡೆಸಲು ಒಂದು ಕಾರ್ಯಪಡೆಯಾಗಿ ರೂಪುಗೊಂಡಿತು. ಈ ಕಮ್ಮಟದಲ್ಲಿ ಉಪನ್ಯಾಸಕರಾಗಿ ಅಲೆನ್‌ ಡಂಡೆಸ್‌, ಪೀಟರ್‌ ಕ್ಲಾಸ್‌, ಎ.ಕೆ. ರಾಮಾನುಜನ್‌, ನಾರಾಯಣ ರಾವ್‌, ಸ್ಟುವರ್ಟ್‌ ಬ್ಯಾಕ್‌ಬರ್ನ್, ಫ್ರಾಂಕ್‌ ಕೋರಂ, ಬ್ರೆಂಡಾ ಬೆಕ್‌, ಚಂದ್ರಶೇಖರ ಕಂಬಾರ, ಕೆ. ವಿ. ಸುಬ್ಬಣ್ಣ ಬಂದಿದ್ದರು. ಅನೇಕರು ನೀಡಿದ ಹೊಸ ಬಗೆಯ ಆಲೋಚನೆಗಳಿಂದಾಗಿ ಜಾನಪದವನ್ನು ಕುರಿತ ನೆಲೆಸಿದ ತಿಳುವಳಿಕೆಗಳು ಬುಡಮೇಲಾದವು. ಹೊಸ ಸಂಕಥನಗಳು ಹುಟ್ಟಿಕೊಂಡವು. ಸಂದರ್ಭ, ಬಹುಪಠ್ಯ, ಮಾನಸಿಕ ಪಠ್ಯ, ಪ್ರದರ್ಶನ, ಸೂತ್ರಾತ್ಮಕ ಅಭಿವೃದ್ಧಿ, ಮೌಖೀಕ ಕಾವ್ಯಸಂಯೋಜನೆ ಪ್ರಕ್ರಿಯೆ, ಅಧಿಜಾನಪದ, ಜನಪದ ವ್ಯಾಖ್ಯಾನ, ಮೌಖೀಕ ಕವಿ, ಬಹುತ್ವ ಮುಂತಾದ ಪರಿಭಾಷೆಗಳನ್ನು ಕನ್ನಡ ಮತ್ತು ತುಳು ಜಾನಪದ ಅಧ್ಯಯನದ ಸಂದರ್ಭದಲ್ಲಿ ಅನುಸಂಧಾನಗೊಳಿಸುವ ಪ್ರಯತ್ನವನ್ನು ಪೀಟರ್‌ ಮಾಡಿದರು.

ಅಧ್ಯಯನದ ಅಗಾಧತೆ

ಅವರ ಅಧ್ಯಯನ ತುಳುವಿಗಷ್ಟೇ ಸೀಮಿತವಾಗಿರಲಿಲ್ಲ. ನಾನಿದ್ದ ಕುಂದಾಪುರದ ಮನೆಗೆ ಆಗಾಗ್ಗೆ ಬರುತ್ತಿದ್ದರು. ನಾನು ಅವರನ್ನು ಉಡುಪಿ ಜಿಲ್ಲೆಯ ಕುಂದಾಪುರ ಪರಿಸರದ ಪಾಣರಾಟ, ಢಕ್ಕೆಬಲಿ, ನಾಗಮಂಡಲಗಳಿಗೆ ಕರೆದೊಯ್ದಿದ್ದೆ. ಅಲ್ಲಿನ ಹಾಡ್ಗತೆಗಳನ್ನು ತುಳುವಿನ ಪಾಡ್ದನಗಳೊಂದಿಗೆ ತೌಲನಿಕವಾಗಿ ಪರಿಶೀಲಿಸುವ ಪ್ರಯತ್ನ ನಡೆಸಿದರು. ಸಂಶೋಧಕನು ತನ್ನದಲ್ಲದ ಅನ್ಯಸಂಸ್ಕೃತಿಯ ಅಧ್ಯಯನಕ್ಕೆ ತೊಡಗುವುದು ಹೆಚ್ಚು ಸೂಕ್ತ ಎನ್ನುವ ಮಾನವಶಾಸ್ತ್ರೀಯ ತಿಳಿವಳಿಕೆಯಂತೆ ಅವರು ತುಳುನಾಡಿನ ಮಾತೃಮೂಲೀಯ ಕುಟುಂಬ ವ್ಯವಸ್ಥೆ, ತುಳು ಮೌಖೀಕ ಕಾವ್ಯರಚನೆಗಳನ್ನು ಸಂಸ್ಕೃತಿನಿಷ್ಠ ಮನಸ್ಸಿನಿಂದ ಅಧ್ಯಯನ ಮಾಡಿದರು. ಅವರದು ಮಾಹಿತಿ ಸಂಗ್ರಹಾಧಾರಿತ ಅಧ್ಯಯನ ವಿಶ್ಲೇಷಣೆ ಅಲ್ಲ. ತಾನು ಯಾರನ್ನು ಕುರಿತು ಅಧ್ಯಯನ ಮಾಡುತ್ತಿದ್ದೇನೋ ಅವರ ನಡುವೆಯೇ ವಾಸಿಸುತ್ತ ಒಂದಾಗಿ ಬಾಳಿದರು. ಉಡುಪಿ ಜಿಲ್ಲೆಯ ಹಿರಿಯಡ್ಕದ ಅಂಜಾರು ಗ್ರಾಮದಲ್ಲಿ ಮುಂಡಾಲ ಸಮುದಾಯದವರ ಕೇರಿಯ ಸಣ್ಣ ಮುಳಿಹುಲ್ಲಿನ ಮನೆಯಲ್ಲಿ ಹಲವಾರು ವರ್ಷ ಕಳೆದಿದ್ದರು. ಅಧ್ಯಯನದ ಬಳಿಕವೂ ಆ ಕುಟುಂಬದ ಜತೆ ಸಂಬಂಧ ಇರಿಸಿಕೊಂಡು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದರೆಂದು ನನ್ನಲ್ಲಿ ಕರ್ಗಿ ಮುಂಡಾಲ್ತಿ ಹೇಳಿದ್ದುಂಟು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾಗ ವಿಶ್ವವಿದ್ಯಾನಿಲಯದ ಅತಿಥಿಗೃಹದಲ್ಲಿ ಉಳಿಯದೆ ದೂರದ ಹಳ್ಳಿ ಜೋಪಡಿ ಮನೆಯಲ್ಲೇ ಉಳಿದಿದ್ದರು. ಇದು ಅವರ ವ್ಯಕ್ತಿವಿಶಿಷ್ಟ ಗುಣವಷ್ಟೇ ಅಲ್ಲ; ಅಧ್ಯಯನದ ಖಚಿತತೆಗೆ ಅನ್ಯಸಂಸ್ಕೃತಿಯ ಪರಕಾಯ ಪ್ರವೇಶ ಅಗತ್ಯವೆಂದು ಭಾವಿಸಿದ್ದರು.


ತುಳುವ ಜಾನಪದವನ್ನು ಕುರಿತು ಅವರು ಪಾಶ್ಚಾತ್ಯ, ಪೌರಾತ್ಯ ದೇಶಗಳ ವಿದ್ವತ್‌ ಪತ್ರಿಕೆಗಳಲ್ಲಿ ಬರೆದ ವಿಚಾರಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳ ಸಂಖ್ಯೆ ಐವತ್ತಕ್ಕೂ ಹೆಚ್ಚು. ಅವುಗಳಲ್ಲಿ ಆಯ್ದ ಎಂಟು ಲೇಖನಗಳನ್ನು ಉಡುಪಿಯ ಪ್ರೊ. ಸುಭಾಶ್ಚಂದ್ರ ಅವರೊಂದಿಗೆ ಅನುವಾದಿಸಿ ತುಳುವ ದರ್ಶನ ಎಂಬ ಹೆಸರಲ್ಲಿ 1987ರಲ್ಲಿ ಪ್ರಕಟಿಸಿದೆ. ಕರ್ನಾಟಕ ಜಾನಪದ ಅಧ್ಯಯನದಲ್ಲಿ ಈ ಗ್ರಂಥ ಒಂದು ಮಹತ್ವದ ಮೈಲಿಗಲ್ಲು ಎಂದು ಅದಕ್ಕೆ ಮುನ್ನುಡಿ ಬರೆದ ಜಿ. ಶಂ. ಪರಮಶಿವಯ್ಯ ಹೇಳಿದ್ದಾರೆ. .

ಕೇರಳದ ನಾಯರ್‌ ಸಮಾಜದ ಕುಟುಂಬ ರಚನೆಯನ್ನು ದೇಶ-ವಿದೇಶಗಳ ಮಾನವಶಾಸ್ತ್ರಜ್ಞರು ಅಧ್ಯಯನ ನಡೆಸಿದ್ದರೂ ತುಳುವರ ಮಾತೃಮೂಲೀಯ ಕುಟುಂಬ ವ್ಯವಸ್ಥೆಯು ಅದಕ್ಕಿಂತ ಹೇಗೆ ಭಿನ್ನ ಎನ್ನುವುದರ ಅಧ್ಯಯನ ನಡೆದುದು ಪೀಟರ್‌ ಅವರಿಂದ. ದ್ರಾವಿಡ ಬಂಧುತ್ವ ವ್ಯವಸ್ಥೆಯ ಬಗ್ಗೆ ಡ್ಯುಮಾಂಟ್‌, ರಾಡ್‌ಕ್ಲಿಫ್ ಬ್ರೌನ್‌, ಯಾಲ್ಮನ್‌, ಕಾರ್ಟರ್‌, ಕಾಸ್ಟೇìರ್ ಮಾಡಿರುವ ಅಧ್ಯಯನಗಳನ್ನು ಗಮನದಲ್ಲಿರಿಸಿಕೊಂಡು ತುಳುವ ಬಂಧುತ್ವ ವ್ಯವಸ್ಥೆಯ ಅನನ್ಯತೆಯನ್ನು ಅವರು ತಮ್ಮ ಲೇಖನಗಳಲ್ಲಿ ಹೇಳುತ್ತಾರೆ. ಕ್ಲಾಸ್‌ ಅವರ ತುಳುವ ಸಂಸ್ಕೃತಿಯನ್ನು ಕುರಿತ ಬರಹಗಳನ್ನು ಕಂಡಾಗ ಅವರು ಎಲ್ಲೂ ಅದರ ಚಾರಿತ್ರಿಕ ಪ್ರಾಚೀನತೆಯನ್ನು ನಿರ್ಧರಿಸುವ ಹಳಹಳಿಕೆಯ ದೃಷ್ಟಿಕೋನವನ್ನು ಕಾಣೆವು. ಅದನ್ನು ವೈಭವೀಕರಿಸುವಲ್ಲೂ ಅವರಿಗೆ ಆಸಕ್ತಿಯಿಲ್ಲ. ಅಂತರ್‌ಶಿಸ್ತೀಯ ಹಾಗೂ ಬಹುಶಿಸ್ತೀಯ ಬೆಳಕಿನಲ್ಲಿ ಮೌಖೀಕ ರಚನೆಗಳಾದ ಪಾಡªನಗಳಲ್ಲಿ ನಿರೂಪಿತವಾಗಿರುವ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆ, ಆರಾಧನಾ ಪ್ರಪಂಚಗಳ ಮಾನಸಿಕ ಹಿನ್ನೆಲೆ ಒಟ್ಟಿನಲ್ಲಿ ತುಳುವ ಸಂಸ್ಕೃತಿಯ ಪರಿಕಲ್ಪನಾತ್ಮಕ ಚೌಕಟ್ಟನ್ನು ಅವರ ಬರವಣಿಗೆಗಳಿಂದ ಪುನಾರಚಿಸಬಹುದಾಗಿದೆ.


ಸಂಪಾದಿತ ಕೃತಿಗಳು

  • Folkloristics and Indian Folklore(ಆರ್‌ಆರ್‌ಸಿ ಪ್ರಕಟಣೆ).
  • Indian Folklore Vol. I and II,
  • Folktales of India [೪], Oral Epics in India

ಪ್ರಶಸ್ತಿ

  • 2004ರಲ್ಲಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು[೫] ಅವರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.

ಉಲ್ಲೇಖ


ಡಾ||ಕೆ.ರಾಜೇಶ್ವರಿ ಗೌಡ

1954ರ ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ಎಂ.ಎ., ಪಿ.ಹೆಚ್.ಡಿ. ಪದವೀಧರರು. ಪ್ರಸ್ತುತ ಬಸವನಗುಡಿಯ ಬಿ.ಎಂ.ಎಸ್. ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದಾರೆ[೬]. ಪ್ರವೃತ್ತಿಯಿಂದ ಲೇಖಕಿಯಾಗಿರುವ ಇವರ ಪ್ರಕಟಿತ ಕೃತಿಗಳು

1. ನಿರ್ಣಯ (ಕಥಾ ಸಂಕಲನ)

2. ಅಭಿನೇತ್ರಿ (ಕಾದಂಬರಿ)

3. ಅಭಿನವ ವಿವೇಕಾನಂದ (ಜೀವನ ಚರಿತ್ರೆ)

4. ಜ್ಞಾನ ಬಾಗಿನ (ಮಹಿಳಾ ಅಧ್ಯಯನದ ಸಂಪಾದಿತ ಕೃತಿ)

5. ಧ್ಯಾನ ಮಾರ್ಗ (ಇಂಗ್ಲಿಷಿನಿಂದ ಅನುವಾದಿತ)

6. ಶ್ರೀ ಚೌಡೇಶ್ವರಿ ಚರಿತ್ರೆ (ತೆಲುಗಿನಿಂದ ಅನುವಾದಿತ)

7. ವಚನಾಂಜಲಿ (ಆದುನಿಕ ವಚನಗಳು)

8. ಭಕ್ತಿಕುಸುಮಾಂಜಲಿ (ಆಧ್ಯಾತ್ಮಿಕ ವಚನಗಳು)

9. ಅದ್ಭುತ ಅಮೇರಿಕಾ ಮತ್ತು ಅನ್ಯ ರಾಷ್ಟ್ರಗಳಲ್ಲಿ (ಪ್ರವಾಸ ಕಥನ)

10.ಆದಿಚುಂಚನಗಿರಿ - ಒಂದು ಸಾಂಸ್ಕೃತಿಕ ಅಧ್ಯಯನ (ಪಿಹೆಚ್.ಡಿ. ಮಹಾ ಪ್ರಬಂಧ)

11. ಮಕ್ಕಳು ಮತ್ತು ಶಿಕ್ಷಣ (ಇಂಗ್ಲಿಷಿನಿಂದ ಅನುವಾದಿತ)

12. ಭಾವಬುತ್ತಿ (ಕವನ ಸಂಕಲನ)

ಪ್ರಶಸ್ತಿಗಳು

1. 'ನಿರ್ಣಯ' ಕಥಾ ಸಂಕಲನಕ್ಕೆ ಬೆಳಗಾವಿಯ ಪಾಚ್ಛಾಪುರ ಸಾಹಿತ್ಯ ವೇದಿಕೆ ಪುರಸ್ಕಾರ

2. 'ವಿದ್ಯಾರಣ್ಯ ಕನ್ನಡ ಕೂಟ' ಇಲಿನಾಯ್, ಶಿಕಾಗೊ, ಅಮೆರಿಕಾ ಮತ್ತು 'ಪಶ್ಚಿಮ ಕಾಶಿ ವಿಶ್ವನಾಥ ದೇವಾಲಯ', ಪ್ಲಿಂಟ್, ಮಿಷಿಗನ್, ಡೆಟ್ರಾಯಿಟ್, ಅಮೆರಿಕ ಇವರಿಂದ 'ರೆಕಗ್ನಿಷನ್ ಅವಾರ್ಡ್'

3. 'ವಚನಾಂಜಲಿ' ಗೆ ಆರ್ಯಭಟ ಸಾಹಿತ್ಯ ಪ್ರಶಸ್ತಿ

4. ಸಾಹಿತ್ಯ ಸೇವೆಗಾಗಿ 'ಚುಂಚಶ್ರೀ ಪ್ರಶಸ್ತಿ

5. ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದವರಿಂದ ಭಾವಬುತ್ತಿ ಕವನ ಸಂಕಲನಕ್ಕೆ 'ವಿಶೇಷ ಕಾವ್ಯ' ಪ್ರಶಸ್ತಿ

ಇತರೆ

1. ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಈಜಿಪ್ಟ್, ಮುಂತಾದ ದೇಶಗಳಲ್ಲಿ ಪತಿ ಡಾ|| ದೊಡ್ಡರಂಗೇಗೌಡ ಅವರೊಂದಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಧರ್ಮಗಳ ಕುರಿತು ಉಪನ್ಯಾಸ ನೀಡಿಕೆ.

2. ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ

3. ಅನೇಕ ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ

4. ಕೆಲವಾರು ಆಕಾಶ ವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿ ನೇರ ಪಾಲ್ಗೊಳ್ಳುವಿಕೆ.

ಡಾ|| ಕೆ.ರಾಜೇಶ್ವರಿ

ಹಿರಿಯ ಶ್ರೇಣಿ ಕನ್ನಡ ಪ್ರಾಧ್ಯಾಪಕಿ,

ಬಿ.ಎಂ.ಎಸ್. ಮಹಿಳಾ ಮಹಾ ವಿದ್ಯಾಲಯ,

ಬಸವನಗುಡಿ, ಬೆಂಗಳೂರು- 560 004.


ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟ

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಅನೇಕರಿಗೆ ಮಾಹಿತಿ ಇರಬಹುದು.

1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ನಡೆಯಿತೆಂಬುದು .

ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರವನ್ನು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲಿ.

ಕೊಡಗಿನ ಅರಸರ ಕಾಲದಲ್ಲಿ ಭತ್ತ, ತೆಂಗಿನಕಾಯಿ ಮೊದಲಾದ ವಸ್ತುಗಳ ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದಿನ ರೂಪದಲ್ಲಿ ಕೊಡಬೇಕೆಂದು ನಿಯಮ ತಂದರು. ಇದರಿಂದಾಗಿ ಸುಳ್ಯದ ರೈತಾಪಿ ಜನರು ತೀವ್ರವಾಗಿ ಅಸಮಾಧಾನಗೊಂಡರು. ಸುಳ್ಯದ ಜನರು ಬ್ರಿಟಿಷರನ್ನು ತೊಲಗಿಸಿ ಕೊಡಗನ್ನು ವಶಪಡಿಸಿಕೊಂಡು ಕೊಡಗಿನ ಆಡಳಿತವನ್ನು ಪುನರಾರಂಭಿಸಬೇಕೆಂದು ಒಮ್ಮತದಿಂದ ನಿರ್ಧರಿಸಿದರು. ಇದರ ಫಲವಾಗಿ ಸುಳ್ಯ ಬೆಳ್ಳಾರೆ ಪರಿಸರದಲ್ಲಿ ಒಂದು ಸ್ವಾತಂತ್ರ್ಯ ಸಮರ ಆರಂಭವಾಗಿ 1837 ಎಪ್ರಿಲ್ 5ರಂದು ಮಂಗಳೂರಿನ ಕಲೆಕ್ಟರನ ಆಫೀಸಿನ ಎದುರು ಸ್ವತಂತ್ರ ಧ್ವಜವನ್ನು ಊರಿ, ಹದಿಮೂರು ದಿನಗಳ ಕಾಲ ಕೊಡಗು, ಕಾಸರಗೋಡು, ದ.ಕ.ಜಿಲ್ಲೆಯನ್ನೊಳಗೊಂಡ ಪ್ರದೇಶವು ಸ್ವಾತಂತ್ಯದ ಸಿಹಿಯನ್ನು ಅನುಭವಿಸಿತು. ಇದರ ಫಲವಾಗಿ ಸ್ವತಂತ್ರ ನೆಲಕ್ಕಾಗಿ, ತಾಯ್ನಾಡಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟ ನಡೆಯಿತು. ಆದರೆ ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು.

1833ರಲ್ಲಿ ಅಪರಂಪರನೆಂಬ ಜಂಗಮನೊಬ್ಬ ತಾನು ಕೊಡಗಿನ ಲಿಂಗರಾಜೇಂದ್ರ ಒಡೆಯರ ಅಣ್ಣ ಅಪ್ಪಾಜಿಯ ಮಗ ವೀರಪ್ಪ ಒಡೆಯ ಎಂದು ಹೇಳಿಕೊಂಡಾಗ ಕೊಡಗಿನ ಜನರು ಅದನ್ನು ನಂಬುತ್ತಾರೆ. ಆದರೆ ಬ್ರಿಟಿಷರು ಆತನು ರಾಜವಂಶದವನಲ್ಲವೆಂದು ತಿಳಿದು 1835ರಲ್ಲಿ ಆತನನ್ನು ಬಂಧಿಸುತ್ತಾರೆ.

ಅಪರಂಪರನನ್ನು ಬಂಧಿಸಿದಾಗ ಕಲ್ಯಾಣಸ್ವಾಮಿ ಎಂಬಾತನು ತಾನು ಅಪ್ಪಾಜಿಯ ಎರಡನೇ ಮಗ ನಂಜುಂಡಪ್ಪ ಎಂದು ಹೇಳಿಕೊಂಡು ಸುಳ್ಯದಲ್ಲಿ ಜನರು ದಂಗೆ ಏಳುವ ಲಕ್ಷಣ ಕಾಣಿಸಿಕೊಂಡಾಗ ಅವನು ಕೊಡಗಿನವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದನು.ಬ್ರಿಟಿಷರಿಗೆ ಇದು ತಿಳಿದು ಆತನನ್ನು 1837ರಲ್ಲಿ ಬಂಧಿಸಿದರು.

ಸುಳ್ಯದ ರೈತಾಪಿ ಜನರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಹೇಳಿ ನಂಬಿಸಿ ಕೆದಂಬಾಡಿ ರಾಮಗೌಡರ ಮನೆಗೆ ಕರೆತಂದು ಆತನನ್ನು ಕಲ್ಯಾಣಸ್ವಾಮಿ ಎಂದು ಬಿಂಬಿಸಿದರು. ರಾಮಗೌಡರಿಗೆ ಓರ್ವ ಬ್ರಿಟಿಷ್ ಅಮಲ್ದಾರನೊಡನೆ ದ್ವೇಷವಿದ್ದು ಆತನನ್ನು ರಾಮಗೌಡರು ಕೊಲ್ಲುತ್ತಾರೆ. ಇದನ್ನೇ ಮಹತ್ಕಾರ್ಯವೆಂದು ಭಾವಿಸಿದ ಸುಳ್ಯದ ಜನರು ದಂಗೆಯೇಳುವುದಕ್ಕೆ ಬೆಂಬಲಿಸಿದರು 1837 ಮಾರ್ಚ್ 30ರಂದು ಹೋರಾಟ ಆರಂಭವಾಯಿತು. ರಾಮಗೌಡರಿಗೆ ಕೂಜಗೋಡು ಮಲ್ಲಪ್ಪಗೌಡರ ಬೆಂಬಲ ದೊರೆಯಿತು. ಇಡೀ ಗೌಡ ಸಮುದಾಯ ಹೋರಾಟಕ್ಕೆ ಬೆಂಬಲ ನೀಡಿತು.

1837ರ ಮಾರ್ಚ್ 30ರಂದು ರಾಮಗೌಡರು ಬೆಳ್ಳಾರೆಗೆ ಕಲ್ಯಾಣಸ್ವಾಮಿಯನ್ನು (ಪುಟ್ಟ ಬಸಪ್ಪ) ಕರೆ ತರುತ್ತಾರೆ.

ಕೊಡಗಿನಲ್ಲಿ ಗುಡ್ಡೆಮನೆ ಅಪ್ಪಯ್ಯ ಹೋರಾಟಕ್ಕೆ ಬೆಂಬಲ ನೀಡಿದರಾದರೂ ಬ್ರಿಟಿಷರ ಕುಮ್ಮಕ್ಕಿನಿಂದಾಗಿ ಇತರರಿಂದ ಬೆಂಬಲ ಸಿಗಲಿಲ್ಲ ಜೊತೆಗೆ ತಲಚೇರಿ-ಕಣ್ಣನ್ನೂರುಗಳಿಂದ ಬ್ರಿಟಿಷ್ ಸೈನ್ಯ ಮಂಗಳೂರು ತಲುಪಿತು. ಇವರಲ್ಲಿ ಸಾವಿರಾರು ಜನರು ಇದ್ದರೂ ಕೂಡ ಕೋವಿಯಂಥ ಮಾರಕಾಯುಧಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಆದ್ದರಿಂದ ಕಲ್ಯಾಣಸ್ವಾಮಿ ತಪ್ಪಿಸಿಕೊಂಡು ಕಡಬದತ್ತ ಸಾಗಿದನು. ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಬ್ರಿಟಿಷ್ ಪರವಾದ ಹಿಂದುಗಳೇ ಇದ್ದ ಸೈನ್ಯವನ್ನು ಎದುರಿಸಲು ಆಗದೆ ಸೋಲಬೇಕಾಯಿತು. ನಾಲ್ಕು ನಾಡಿನ ಉತ್ತು, ಶಾಂತಳ್ಳಿ ಮಲ್ಲಯ್ಯ ಗುಡ್ಡೆಮನೆ ಅಪ್ಪಯ್ಯ, ಚೆಟ್ಟಿಕುಡಿಯ-ಕುರ್ತುಕುಡಿಯ, ಲಕ್ಷ್ಮಣ ಬಂಗರಸ ಮೊದಲಾದವರು ಸೆರೆ ಸಿಕ್ಕಿದರು. 1837 ಮೇ ತಿಂಗಳ ಎರಡನೇ ವಾರದಲ್ಲಿ ಕಲ್ಯಾಣಸ್ವಾಮಿಯನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದು ಆತನನ್ನು ಮಡಿಕೇರಿಗೆ ಕರೆತರುತ್ತಾರೆ ಬ್ರಿಟಿಷರು ಕಲ್ಯಾಣಸ್ವಾಮಿ(ಪುಟ್ಟ ಬಸಪ್ಪ) ಮತ್ತು ಲಕ್ಷ್ಮಪ್ಪ ಬಂಗರಸ ಇವರನ್ನು ಮಂಗಳೂರು ಬೀಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದರು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸುತ್ತಾರೆ. ಚೆಟ್ಟಿಕುಡಿಯ, ಕುರ್ತುಕುಡಿಯ ಮತ್ತು ಕೃಷ್ಣಯ್ಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಶಾಂತಯ್ಯ ಮಲ್ಲಳ್ಳಿ ಮೊದಲಾದವರಿಗೆ 7-14 ವರ್ಷಗಳ ತನಕ ಸೆರೆಮನೆವಾಸದ ಶಿಕ್ಷೆಯಾಯಿತು. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡದ್ದು ಬಿಟ್ಟರೆ ಈ ಹೋರಾಟಗಾರರ ಗುಂಪು ಯಾವುದೆ ಸಂಪತ್ತನ್ನು ದೋಚಲಿಲ್ಲ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಳ್ಳುವ ತನಕ ಬ್ರಿಟಿಷರಿಗೆ ಹೋರಾಟಕ್ಕಾಗಿ ಜನರ ಗುಂಪೊಂದು ಸಂಘಟಿತವಾದದ್ದು ತಿಳಿಯಲಿಲ್ಲ. ಖಜಾನೆಯನ್ನು ವಶಪಡಿಸಿಕೊಂಡಾಗ ಕೂಡ ದರೋಡೆ ಎಂದು ತಿಳಿದರೇ ಹೊರತು, ಅಲ್ಲೊಂದು ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ಧವಾದುದ್ದು ಬ್ರಿಟಿಷರ ಗಮನಕ್ಕೆ ಬರಲಿಲ್ಲ. ಅಷ್ಟರ ಮಟ್ಟಿಗಿನ ಮುಂಜಾಗರೂಕತೆಯನ್ನು ವಹಿಸಲಾಗಿತ್ತು. ಬೆಳ್ಳಾರೆಯ ಹಿರಿಯರ ಪ್ರಕಾರ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಇತರೆಡೆಗೆ ದಂಡು ಸಾಗುವಾಗ ಮದುವೆ ದಿಬ್ಬಣದ ರೂಪದಲ್ಲಿ ಸಾಗುತ್ತಿತ್ತು. ಹೀಗೆ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣನ್ನು ತಿನ್ನಿಸಿದ್ದರು. ಈ ಹೋರಾಟಗಾರರು ತೆಂಗಿನ ಮಡಲಿನ ಕೊತ್ತಲಿಂಗೆಯ ಮಂಡೆಯನ್ನು ಆಯುಧವಾಗಿ ಉಪಯೋಗಿಸಿಕೊಂಡಿದ್ದರು. ಈ ಹೋರಾಟಗಾರರ ಕೆಚ್ಚೆದೆಗೆ ಸಾಹಸಕ್ಕೆ ಸಾಕ್ಷಿಯಾದ ಬೆಳ್ಳಾರೆಯ ಕೋಟೆ ಈಗ ಕೂಡ ಇದೆ. ಇವರು ವಶಪಡಿಸಿಕೊಂಡ ಬ್ರಿಟಿಷರ ಖಜಾನೆ ಕೂಡ ಇದೆ. ಬೆಳ್ಳಾರೆಯ ಕೋಟೆಯಲ್ಲಿ ಸೇರಿಕೊಂಡು. ಈ ಪ್ರದೇಶವನ್ನು ಬ್ರಿಟಿಷರ ಖಜಾನೆ ಇದ್ದ ಬಂಗಲೆಯ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂಬ ಹೆಸರು ಬಂದಿದೆ. ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಬೇಕಾಗಿದೆ .

ಹೋರಾಟದಲ್ಲಿ ಭಾಗವಹಿಸಿದವರು

  • ಕೆದಂಬಾಡಿ ರಾಮ ಗೌಡ.
  • ಗುಡ್ಡೆಮನೆ ಅಪ್ಪಯ್ಯ ಗೌಡ.
  • ಕುಡಕಲ್ಲು ಪುಟ್ಟ ಗೌಡ
  • ಕುಂಚಡ್ಕ ತಿಮ್ಮ ಗೌಡ
  • ಕೋಲ್ಚಾರು ಕೂಸಪ್ಪ ಗೌಡ
  • ಗುಂಡ್ಲ
  • ದೇರಾಜೆ
  • ಕಲ್ಯಾಣಸ್ವಾಮಿ
  • ಕರಡಿಮಲೆ ಅಣ್ಣಿಗೌಡ
  • ಪೆರಾಜೆ ಊಕಣ್ಣ ಬಂಟ
  • ಕರಣಿಕ ಕೃಷ್ಣಯ್ಯ
  • ಕೂಜುಗೋಡು ಸಹೋದರರು
  • ಉಳುವಾರು ರಾಮಯ್ಯ ಗೌಡ
  • ತಿಮ್ಮಯ್ಯ,ಸುಳ್ಯಕೋಡಿ
  • ಕಳಗಿ ಅಣ್ಣು
  • ಕುಕ್ಕೆಟ್ಟಿ ಚೆನ್ನ
  • ಪೆರಾಜೆಯ ಬೀರಣ್ಣ ರೈ
  • ಮುಳ್ಯ ಈಶ್ವರ ಸೋಮಾಯಾಜಿ
  • ಚೆಟ್ಟಿ-ಕುರ್ತು ಕುಡಿಯ
  • ಕುಕ್ಕನೂರು ಚೆನ್ನಯ್ಯ

ಪರಿಣಾಮ

ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣ ಸ್ವಾಮಿಗೆ ಪಟ್ಟಕಟ್ಟುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡರು. ಕೊಡಗಿನ ಬೇರೆ ಬೇರೆ ಭಾಗಗಳಿಗೆ ನಿರೂಪ ಕಳಿಸಿ ಬೆಂಬಲ ಕೇಳಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ಗುಂಪು ಸುಬ್ರಹ್ಮಣ್ಯ ಕಡೆಗೆ ಹೋಯಿತು. ‘ಕಂಚುಡ್ಕ ತಿಮ್ಮಗೌಡ ಹಾಗೂ ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಸೈನ್ಯವನ್ನು ಕುಂಬಳೆ ಕಾಸರಗೋಡಿಗೆ ಕಳುಹಿಸಲಾಯಿತು. ಇನ್ನೊಂದು ತಂಡ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮತ್ತೊಂದು ತಂಡ ಉಪ್ಪಿನಂಗಡಿ ಬಿಸಲೆಗೆ ಹೋಯಿತೆಂದು’ . ಪುತ್ತೂರು, ಪಾಣೆ ಮಂಗಳೂರು ಮತ್ತು ಮಂಗಳೂರಿಗೆ ರಾಮಗೌಡ ಹಾಗೂ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ದಂಡು ಹೊರಟಿತು. ಪುತ್ತೂರನ್ನು ವಶಪಡಿಸಿಕೊಂಡು ಪಾಣೆಮಂಗಳೂರಿಗೆ ಬಂದಾಗ ನಂದಾವರದ ಲಕ್ಷ್ಮಪ್ಪ ಬಂಗರಸನು ಕೂಡಿಕೊಂಡನು. 1837 ಎಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿಕೊಂಡು ಬಾವುಟಗುಡ್ಡದಲ್ಲಿ ಧ್ವಜ ಹಾರಿಸಿದರು ಇಲ್ಲಿ 13 ದಿನ ಆಡಳಿತ ನಡೆಸಿದರು.

ಉಲ್ಲೇಖ

  1. https://www.udayavani.com/homepage-karavali-edition/karavali/karavali-mangalore/peter-j-claus-expired
  2. http://m.varthabharati.in/article/2019_01_02/170950
  3. https://www.prajavani.net/stories/stateregional/petre-j-class-researcher-dead-598461.html
  4. https://www.press.uchicago.edu/ucp/books/author/C/P/au5375417.html
  5. http://tuluacademy.org/en/dr-peter-j-claus-santhapa-sabhe/
  6. . http://www.akkaonline.org/2010/documents/RajeswariGowda.html