ಭಾರತದಲ್ಲಿ ಕೃಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೆಡಿಸಿದ್ದನ್ನು - ಹಿಮ್ಮುಖಕ್ಕೆ+
೨೨೫ ನೇ ಸಾಲು: ೨೨೫ ನೇ ಸಾಲು:
===2017ರ ನಂತರ ಬೆಳಯಲ್ಲಿ ಪ್ರಮುಖ ಆದ್ಯತೆ===
===2017ರ ನಂತರ ಬೆಳಯಲ್ಲಿ ಪ್ರಮುಖ ಆದ್ಯತೆ===
*ನಾವು ಆಹಾರ ಭದ್ರತೆ ಜೊತೆ ಪೌಷ್ಟಿಕ ಸುರಕ್ಷೆ ಸಾಧಿಸಬೇಕಾಗಿದೆ. ಕೃಷಿ ಕ್ರಾಂತಿ ನಡೆದಾಗ ಕಾರ್ಬೊಹೈಡ್ರೇಟ್‌ಗೆ ಆದ್ಯತೆ ನೀಡಿದ್ದೆವು. ಈಗ ಪ್ರೊಟೀನ್‌ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಮಕ್ಕಳಿಗೆ ಕಬ್ಬಿಣಾಂಶ, ವಿಟಮಿನ್‌ ಎ ಅನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಹೆಚ್ಚು ಪ್ರೊಟೀನ್‌ ಒದಗಿಸಲು ದ್ವಿದಳ ಧಾನ್ಯ, ಮಾಂಸ, ಹಾಲು, ಮೊಟ್ಟೆ ಉತ್ಪಾದನೆ ಹೆಚ್ಚಬೇಕು. ಪೌಷ್ಟಿಕಾಂಶ ಕೊರತೆ ನೀಗಿಸುವಲ್ಲಿ ತೃಣಧಾನ್ಯಗಳೂ (ಮಿಲೆಟ್ಸ್‌ ) ಸಹಕಾರಿ. ಇವು ಕಡಿಮೆ ನೀರಿದ್ದರೂ ಚೆನ್ನಾಗಿ ಬೆಳೆಯುತ್ತವೆ. ಹವಾಮಾನ ವೈಪರೀತ್ಯಕ್ಕೆ ಒಗ್ಗಿಕೊಳ್ಳುವ ಸಾಮರ್ಥ್ಯ ಇವುಗಳಿಗಿದೆ. ನನ್ನ ಪ್ರಕಾರ ತೃಣಧಾನ್ಯಗಳೇ ಭವಿಷ್ಯದ ಆಹಾರ.<ref>[http://www.prajavani.net/news/article/2017/02/26/474303.html ಚತುರ ಕೃಷಿಯಿಂದ ರೈತರ ಬವಣೆಗೆ ಪರಿಹಾರ: ಕೃಷಿ ವಿಜ್ಞಾನಿ ಡಾ. ಎಸ್‌.ಅಯ್ಯಪ್ಪನ್‌;ಪ್ರವೀಣ್‌ ಕುಮಾರ್‌ ಪಿ.ವಿ.;26 Feb, 2017]</ref>
*ನಾವು ಆಹಾರ ಭದ್ರತೆ ಜೊತೆ ಪೌಷ್ಟಿಕ ಸುರಕ್ಷೆ ಸಾಧಿಸಬೇಕಾಗಿದೆ. ಕೃಷಿ ಕ್ರಾಂತಿ ನಡೆದಾಗ ಕಾರ್ಬೊಹೈಡ್ರೇಟ್‌ಗೆ ಆದ್ಯತೆ ನೀಡಿದ್ದೆವು. ಈಗ ಪ್ರೊಟೀನ್‌ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಮಕ್ಕಳಿಗೆ ಕಬ್ಬಿಣಾಂಶ, ವಿಟಮಿನ್‌ ಎ ಅನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಹೆಚ್ಚು ಪ್ರೊಟೀನ್‌ ಒದಗಿಸಲು ದ್ವಿದಳ ಧಾನ್ಯ, ಮಾಂಸ, ಹಾಲು, ಮೊಟ್ಟೆ ಉತ್ಪಾದನೆ ಹೆಚ್ಚಬೇಕು. ಪೌಷ್ಟಿಕಾಂಶ ಕೊರತೆ ನೀಗಿಸುವಲ್ಲಿ ತೃಣಧಾನ್ಯಗಳೂ (ಮಿಲೆಟ್ಸ್‌ ) ಸಹಕಾರಿ. ಇವು ಕಡಿಮೆ ನೀರಿದ್ದರೂ ಚೆನ್ನಾಗಿ ಬೆಳೆಯುತ್ತವೆ. ಹವಾಮಾನ ವೈಪರೀತ್ಯಕ್ಕೆ ಒಗ್ಗಿಕೊಳ್ಳುವ ಸಾಮರ್ಥ್ಯ ಇವುಗಳಿಗಿದೆ. ನನ್ನ ಪ್ರಕಾರ ತೃಣಧಾನ್ಯಗಳೇ ಭವಿಷ್ಯದ ಆಹಾರ.<ref>[http://www.prajavani.net/news/article/2017/02/26/474303.html ಚತುರ ಕೃಷಿಯಿಂದ ರೈತರ ಬವಣೆಗೆ ಪರಿಹಾರ: ಕೃಷಿ ವಿಜ್ಞಾನಿ ಡಾ. ಎಸ್‌.ಅಯ್ಯಪ್ಪನ್‌;ಪ್ರವೀಣ್‌ ಕುಮಾರ್‌ ಪಿ.ವಿ.;26 Feb, 2017]</ref>
==ಕೊರೊನಾ ಸೋಂಕು ಮತ್ತು ಕೃಷಿ ಸಮಸ್ಯೆ==
*ಭಾರತದಲ್ಲಿ ಡಿಸೆಂಬರ್ ೨೦೧೯ ರಿಂದ ಹರಡಿದ[[ಕೊರೊನಾ ವೈರಸ್‌]]ಸೋಂಕು ಕೃಷಿಯಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಸೋಖು ಹರಡದಂತೆ ತಡೆಯಲು ಲಾಕ್‌ಡೌನ್‌ ಎಂಬ ಸಂಚಅರ ನಿಯಮತ್ರನ ಹೇರಲಾಯಿತು. ಇದರಿಂದ ಭಾರತದ ಆತ್ಮವೆನಿಸಿದ ಗ್ರಾಮೀಣ ಪ್ರದೇಶಗಳು ಅಕ್ಷರಶಃ ನಲುಗಿವೆ. *ಬಾರತದ ಗ್ರಾಮೀಣ ಪ್ರದೇಶಗಳಲ್ಲಿ ೨೦೧೯ -೨೦೨೦ ರಲ್ಲಿ [[ಕೊರೊನಾ ವೈರಸ್]] ಸೋಂಕು ಹೆಚ್ಆಗಿಗಿ ಹರಡಿಲ್ಲ. ಆದರೆ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕೂಲಿಗಳಿಗೆ ಇದ್ದಕ್ಕಿದ್ದಂತೆ ಸಂಪಾದನೆ ನಿಂತು ಹೋಯಿತು. ಅವರ ಬದುಕು ದುಸ್ತರವಾಯಿತು.
*ಹಳ್ಳಿಗಳಲ್ಲೇ ಉಳಿದು ಬೇಸಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು ೨೦೨೦ ರ [[ಕೊರೊನಾ ವೈರಸ್‌]]ಸೋಂಕು ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಬೆಳೆದ ಹಣ್ಣು, ತರಕಾರಿಗಳನ್ನು ಸಕಾಲಕ್ಕೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಿಲ್ಲ. ತಮ್ಮ ಕೃಷಿ ಉತ್ಪನ್ನಗಳನ್ನು ಅನಿವಾರ್ಯವಾಗಿ ಹಸುಗಳಿಗೆ ತಿನ್ನಿಸುತ್ತಿದ್ದಾರೆಅದಕ್ಕೂ ಹೆಚ್ಚಾದುದನ್ನು ಚೆಲ್ಲುತ್ತಿದ್ದಾರೆ.
*ಉದಾಹರಣೆಗೆ [[ಕರ್ನಾಟಕದ]]ಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಟನ್‌ಗಟ್ಟಲೆ ದ್ರಾಕ್ಷಿಯನ್ನು ಗೊಬ್ಬರದ ಗುಂಡಿಗೆ ಸುರಿಯಲಾಯಿತು. ಆದರೆ ಮನೆಯಲ್ಲೇ ಉಳಿಯಿರಿ ಎಂಬ ಲಾಕ್‌ಡೌನ್ ಮಾದರಿಯ ಆದೇಶ ಮುಂದುವರಿದರೆ, ಲಾಕ್‌ಡೌನ್‌ ಆದೇಶ ಬೇಗ ತೆರವಾಗದಿದ್ದರೆ ಹಳ್ಳಿಗಳಲ್ಲಿರುವ ರೈತರು ದೊಡ್ಡಮಟ್ಟದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಈವರೆಗೆ ಸರ್ಕಾರಗಳ ಪಾಲಿಗೆ ಕೃಷಿ ಕ್ಷೇತ್ರದ ಸಂಕಷ್ಟ ಎಂದರೆ ಅದು ಕೇವಲ ಮಾರುಕಟ್ಟೆಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಸಮಸ್ಯೆಯಾಗಿತ್ತು. ಆದರೆ ಈಗ ಅದರ ಸ್ವರೂಪ ಬದಲಾಗಿದೆ. ಸರ್ಕಾರಗಳ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಉತ್ಪಾದನೆಯ ದೊಡ್ಡಕುಸಿತ ಇಡೀ ದೇಶದಲ್ಲಿ ದೊಡ್ಡಸಮಕಟವನ್ನೇ ತರಬಹುದು ಎಂಬುದು ತಜ್ಞರ ಅಭಿಪ್ರಾಯ.<ref>[https://www.prajavani.net/op-ed/market-analysis/rural-india-stares-at-a-larger-crisis-717911.html
ಲಾಕ್‌ಡೌನ್‌ಗೆ ನಲುಗಿದ ಗ್ರಾಮೀಣ ಭಾರತ: ದುರಿತ ಕಾಲದ ದುಸ್ತರ ಬದುಕು;ಅನ್ನಪೂರ್ಣ ಸಿಂಗ್‌ Updated: 06 ಏಪ್ರಿಲ್ 2020,]</ref>


==ನೋಡಿ==
==ನೋಡಿ==

೧೮:೨೨, ೬ ಏಪ್ರಿಲ್ ೨೦೨೦ ನಂತೆ ಪರಿಷ್ಕರಣೆ

Benefits of online agreeculture for formers in karnataka

ಆಧುನಿಕ ಭಾರತದಲ್ಲಿ ಕೃಷಿ

ಭಾರತದಲ್ಲಿ ಬೆಳೆಯುವ ಮುಖ್ಯ ಬೆಳೆಗಳ ಪ್ರದೇಶ:A map on the major crop regions of India (1973 data).
  ಜೋಳ (Sorghum)
  ಕಿರುಧಾನ್ಯ-ನವಣೆಇತ್ಯಾದಿ (Millet)
  ಎರಡು ಬಗೆಯ ಪ್ರಧಾನ ಬೆಳೆ.
  • ಭಾರತದಲ್ಲಿ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಇಂದು, ಭಾರತ ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಅರಣ್ಯ ಅಭಿವೃದ್ಧಿ, ಕೃಷಿ ಮತ್ತು ಅದಕ್ಕೆ ಸಂಬಂಧಿತ ಕ್ಷೇತ್ರಗಳಾದ ಮತ್ತು ಮೀನುಗಾರಿಕೆ ಇವು 2013 ರಲ್ಲಿ ಜಿಡಿಪಿಯ (ಒಟ್ಟು ದೇಶೀಯ ಉತ್ಪನ್ನ) 13.7% ರಷ್ಟು ಇತ್ತು. ದುಡಿಮೆಯ ಕಾರ್ಯಪಡೆಯ ಪೈಕಿ ಸುಮಾರು 50% ರಷ್ಟು ಕೃಷಿಯಲ್ಲಿ ತೊಡಗಿದೆ. ಭಾರತ ದೇಶದ ವಿಶಾಲವಾದ ಆರ್ಥಿಕ ಬೆಳವಣಿಗೆಯ ಹೋಲಿಕೆಯಲ್ಲಿ ಜಿಡಿಪಿಗೆ ಕೃಷಿಯ ಆರ್ಥಿಕ ಕೊಡುಗೆ ಸ್ಥಿರವಾಗಿ ಇಳಿಯುತ್ತಿದೆ. ಆದರೆ ಇನ್ನೂ, ಕೃಷಿಯು ಜನಸಂಖ್ಯೆಯ ವಿಶಾಲವಾದ ಆರ್ಥಿಕ ವಲಯವಾಗಿದೆ ಮತ್ತು ಭಾರತದ ಒಟ್ಟಾರೆ ಸಾಮಾಜಿಕ-ಆರ್ಥಿಕ ವಲಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.[೧]
  • ಭಾರತ 2013 ರಲ್ಲಿ 39 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿರುವ ಏಳನೇ ದೊಡ್ಡ ರಫ್ತುದಾರ; ವಿಶ್ವಾದ್ಯಂತ ಕೃಷಿಯ ಆರನೇ ಅತಿ ದೊಡ್ಡ ನಿವ್ವಳ ರಫ್ತು ದಾರ. ಅದರ ಕೃಷಿಯ ರಫ್ತು, ಅಭಿವೃದ್ಧಿ ಹೊಂದುತ್ತಿರುವ ಮತ್ತು ಕನಿಷ್ಠ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಗುತ್ತದೆ. ಭಾರತೀಯ ಕೃಷಿ / ತೋಟಗಾರಿಕೆಯ ಆಹಾರ ವಸ್ತು ಮತ್ತು ಸಂಸ್ಕರಿಸಿದ ಖಾದ್ಯಗಳು ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ, ದೇಶಗಳು (ಸಾರ್ಕ್ ದೇಶಗಳು) ಮತ್ತು ಯುನೈಟೆಡ್ ಸ್ಟೇಟ್ಸ್, ಮೊದಲಾದ 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತದೆ.[೨]

ಅವಲೋಕನ

  • 2010 (ಎಫ್‍ಎಒ-FAO)ವಿಶ್ವ ಕೃಷಿ ಅಂಕಿಅಂಶಗಳ ಪ್ರಕಾರ ಭಾರತವು ಅನೇಕ ತಾಜಾ ಹಣ್ಣುಗಳು ಮತ್ತು ತರಕಾರಿಗಳು,ಹಾಲು,ಪ್ರಮುಖ ಮಸಾಲೆಗಳ ವಿಶ್ವದ ದೊಡ್ಡ ನಿರ್ಮಾಪಕ; ಅಲ್ಲದೆ ಇಂತಹ ಧಾನ್ಯಗಳ ಜೊತೆಗೆ ಸೆಣಬು ಮೊದಲಾದ ನಾರು ಬೆಳೆಗಳನ್ನು, ಮತ್ತು ಹರಳೆಣ್ಣೆ ಬೀಜ, ಅಕ್ಕಿ ಮತ್ತು ಗೋಧಿ, ಆಹಾರ ಪದಾರ್ಥಗಳನ್ನು ರಫ್ತು ಮಾರುವ ವಿಶ್ವದ ಪ್ರಮುಖ ಎರಡನೇ ದೊಡ್ಡ ಉತ್ಪಾದಕ.
  • ಭಾರತ ಹಲವಾರು ಒಣ ಹಣ್ಣುಗಳು, ಕೃಷಿ ಆಧಾರಿತ ಜವಳಿ ಕಚ್ಚಾ ವಸ್ತುಗಳ, ಬೇರುಗಳು ಮತ್ತು ಟ್ಯೂಬರ್ ಬೆಳೆಗಳು, ದ್ವಿದಳಧಾನ್ಯ, ಮೀನು, ಮೊಟ್ಟೆ, ತೆಂಗಿನಕಾಯಿ, ಕಬ್ಬು ಮತ್ತು ಹಲವಾರು ತರಕಾರಿಗಳು, ಇವುಗಳನ್ನು ರಫ್ತು ಮಾಡುವುದು. ಇದು ವಿಶ್ವದ ಎರಡನೇ ಅಥವಾ ಮೂರನೇ ದೊಡ್ಡ ನಿರ್ಮಾಪಕ. 2010 ರಲ್ಲಿ ಭಾರತ 80% ರಷ್ಟು, ಕೃಷಿ ಉತ್ಪನ್ನಗಳ ವಸ್ತುಗಳನ್ನು ಉತ್ಪಾದಿಸುವ ವಿಶ್ವದ ಐದು ನಿರ್ಮಾಪಕರುಗಳಲ್ಲಿ ಒಂದು ಸ್ಥಾನ ಪಡೆದಿದೆ. ಅದರಲ್ಲಿ ಹಣದ ಬೆಳೆ ಕಾಫಿ ಮತ್ತು ಹತ್ತಿ ಮತ್ತು ಅನೇಕ ಬೆಳೆಗಳು ಸೇರಿವೆ. ಭಾರತವು ಜಾನುವಾರು ಮತ್ತು ಕೋಳಿ ಮಾಂಸ ಉತ್ಪಾದನೆಯಲ್ಲಿ, ವಿಶ್ವದ ಐದು ನಿರ್ಮಾಪಕರಲ್ಲಿ ಒಂದಾಗಿದೆ. 2011 ರಲ್ಲಿ ಅತಿವೇಗದ ಬೆಳವಣಿಗೆ ದರ ಹೊಂದಿದೆ.
  • 2008ರ ಒಂದು ವರದಿ:ಭಾರತದ ಜನಸಂಖ್ಯೆಯ ಬೆಳವಣಿಗೆಗಿಂತ ವೇಗವಾಗಿ ಅಕ್ಕಿ ಮತ್ತು ಗೋಧಿ ಉತ್ಪಾದಿಸುವ ಅದರ ಸಾಮರ್ಥ್ಯ ಹೆಚ್ಚುತ್ತಿದೆ. ಇತರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಭಾರತ, ಸುಲಭವಾಗಿ ಅದು ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಜೊತೆಗೆ, ಅದು ಅಕ್ಕಿ ಮತ್ತು ಗೋಧಿ ಉತ್ಪತ್ತಿಯಲ್ಲಿ ಜಾಗತಿಕ ಆಹಾರ ರಫ್ತು ದಾರನಾಗಬಹುದು. ಆದರೆ ಅದು ಆಹಾರ ಧಾನ್ಯಗಳು ಹಾಳಾಗುವುದನ್ನು ಕಡಿಮೆ ಮಾಡಬೇಕಾಗುತ್ತದೆ. ಹೀಗೆ ಅದರ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರಿಂದ, ಬ್ರೆಜಿಲ್ ಮತ್ತು ಚೀನಾ ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಸಾಧಿಸಲ್ಪಟ್ಟ ತನ್ನ ತೋಟಗಾರಿಕಾ ಉತ್ಪಾದಕತೆಯ ಮಟ್ಟಕ್ಕೆ ಏರಬಹುದು[೩][೪][೫][೬]

60 ವರ್ಷದ ಕೃಷಿ ಬೆಳವಣಿಗೆ

ತಮಿಳುನಾಡು ಕಾಂಚಿಪುರದಲ್ಲಿ ಭತ್ತದ ನಾಟಿ ದೃಶ್ಯ
  • ಯಥಾರೀತಿ ಅಥವಾ ವಾಡಿಕೆಯಂತೆ ಮಳೆಗಾಲವಾಗಿದ್ದ , ಜೂನ್ 2011 ರ ಹಣಕಾಸಿನ ವರ್ಷದಲ್ಲಿ, ದಾಖಲೆ ಉತ್ಪಾದನೆ ಸಾಧಿಸಲಾಗಿದೆ. ಭಾರತವು ಕೃಷಿಯಲ್ಲಿ 85.9 ದಶಲಕ್ಷ ಟನ್‍ಗಳಷ್ಟು, ಗೋಧಿ ಉತ್ಪಾದನೆ ಮಾಡಿ ಹಿಂದಿನ ವರ್ಷಕ್ಕಿಂತ 6.4% ಹೆಚ್ಚಳ ಸಾಧಿಸಿದೆ. ಇದು ಒಂದು ಸಾರ್ವಕಾಲಿಕ ದಾಖಲೆ. ಭಾರತದಲ್ಲಿ ಅಕ್ಕಿಯ ಉತ್ಪಾದನೆ ಹಿಂದಿನ ವರ್ಷಕ್ಕಿಂತ 7% ಹೆಚ್ಚಳವಾಗಿದ್ದು, 95.3 ಮಿಲಿಯನ್ ಟನ್ ಬೆಳೆ ಹೊಸ ದಾಖಲೆಯಾಗಿದೆ. ಮಸೂರ ಮತ್ತು ಇತರೆ ಧಾನ್ಯಗಳ ಉತ್ಪಾದನೆ ವರ್ಷ ವರ್ಷಗಳಲ್ಲಿ ಹೆಚ್ಚಾಗಿದೆ. 2011 ರಲ್ಲಿ ಹೀಗೆ ಭಾರತೀಯ ರೈತರು, ಭಾರತೀಯ ಜನಸಂಖ್ಯೆಯ ಪ್ರತಿ ಸದಸ್ಯರಿಗೆ ತಲಾ 71 ಕಿಲೋಗ್ರಾಂಗಳಷ್ಟು ಗೋಧಿ ಮತ್ತು 80 ಕಿಲೋಗ್ರಾಂಗಳಷ್ಟು ಭತ್ತವನ್ನು ಬೆಳೆದಿದ್ದಾರೆ. ಪೂರೈಕೆ ಅಕ್ಕಿ ವರ್ಷ ಜಪಾನ್‍ನಲ್ಲಿ ಪ್ರತಿ ವರ್ಷ ತಲಾವಾರು ಅಕ್ಕಿ ಉಪಯೋಗಕ್ಕಿಂತ ಈಗ ಭಾರತದಲ್ಲಿ ತಲಾ ಅಕ್ಕಿ ಉಪಯೋಗದ ಪ್ರಮಾಣ ಹೆಚ್ಚಾಗಿದೆ .
  • ಭಾರತ 2013 ರಲ್ಲಿ 39 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳ ರಫ್ತು ಮಾಡಿ ವಿಶ್ವದಲ್ಲಿ ಏಳನೇ ದೊಡ್ಡ ಕೃಷಿ ರಫ್ತು ದಾರನಾಗಿದೆ. ಮತ್ತು ಆರನೇ ಅತಿ ದೊಡ್ಡ ನಿವ್ವಳ ರಫ್ತು ಮಾಡುವ ದೇಶ, ಈ 2003 ರ ನಿವ್ವಳ ರಫ್ತು ಮಾಹಿತಿಯಂತೆ ಸುಮಾರು 5 ಬಿಲಿಯನ್ ಡಾಲರ್, ಸ್ಫೋಟಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. [5] ಭಾರತದ 10 ವರ್ಷಗಳ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು ವೇಗವಾಗಿ ಬೆಳೆಯುತ್ತಿದೆ , ಅದರ 39 ಬಿಲಿಯನ್ ಡಾಲರ್ ರಫ್ತು ಐರೋಪ್ಯ ಒಕ್ಕೂಟದ ನಿವ್ವಳ ರಫ್ತಿನ (ಇU-28) ಎರಡರಷ್ಟಕ್ಕೂ ಹೆಚ್ಚು. ಇದು ಅಕ್ಕಿ, ಹತ್ತಿ, ಸಕ್ಕರೆ ಮತ್ತು ಗೋಧಿ, ಇವುಗಳ ವಿಶ್ವದ ಅತಿದೊಡ್ಡ ಪೂರೈಕೆದಾರರಲ್ಲಿ ಒಂದಾಗಿದೆ. ಭಾರತವು ಆಫ್ರಿಕಾ, ನೇಪಾಳ, ಬಾಂಗ್ಲಾದೇಶ ಮತ್ತು ಜಗತ್ತಿನ ಇತರ ಪ್ರದೇಶಗಳಿಗೆ 2011 ರಲ್ಲಿ ಸುಮಾರು 2 ಮಿಲಿಯನ್ ಮೆಟ್ರಿಕ್ ಟನ್ ಗೋಧಿ, ಮತ್ತು 2.1 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿ ರಫ್ತುಮಾಡಿದೆ[[೫]]

ವಿಶ್ವದಲ್ಲಿ ಎರಡನೇ ದೊಡ್ಡ ಮತ್ಸ್ಯಾಭಿವೃದ್ಧಿ ರಾಷ್ಟ್ರ

  • ಮೀನುಸಾಕಣೆ (ಆಕ್ವಾಕಲ್ಚರ್) ಮತ್ತು ಮೀನುಗಾರಿಕೆಗಳು ಭಾರತದ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳ ಜಾಲವಾಗಿದೆ. 1990 ಮತ್ತು 2010 ರ ನಡುವೆ,ಭಾರತದ ಕೃಷಿಉತ್ಪನ್ನ ಮೂರು ಪಟ್ಟುಹೆಚ್ಚಿದ್ದು ಭಾರತೀಯ ಮೀನು ಅಭಿವೃದ್ಧಿ ದುಪ್ಪಟ್ಟು ಹೆಚ್ಚಿದೆ. 2008 ರಲ್ಲಿ ಭಾರತ ಮತ್ತು ಕಡಲಿನ ಮತ್ತು ಸಿಹಿನೀರಿನ ಮೀನುಗಾರಿಕೆಯಲ್ಲಿ ವಿಶ್ವದ ಆರನೇ ಅತಿದೊಡ್ಡ ಉತ್ಪಾದಕ. ಸಿಹಿನೀರು ಮೀನು ಅಭಿವೃದ್ಧಿ ಮತ್ತು ಮೀನುಗಾರಿಕೆಯಲ್ಲಿ ವಿಶ್ವದಲ್ಲಿ ಎರಡನೇ ದೊಡ್ಡ (ಆಕ್ವಾಕಲ್ಚರ್) ಮತ್ಸ್ಯಾಭಿವೃದ್ಧಿ ರಾಷ್ಟ್ರ. ಭಾರತ ಜಗತ್ತಿನ ಎಲ್ಲಾ ದೇಶಗಳ ಮೀನು ಉತ್ಪನ್ನಗಳ ಸುಮಾರು ಅರ್ಧದಷ್ಟು ಎಂದರೆ 600,000 ಮೆಟ್ರಿಕ್ ಟನ್ ಮೀನು ಉತ್ಪನ್ನವನ್ನು ಭಾರತ ರಫ್ತು ಮಾಡುತ್ತದೆ.[೭][೮]
  • ಭಾರತ ಕಳೆದ 60 ವರ್ಷಗಳಲ್ಲಿ, ಕೆಲವು ಕೃಷಿ ಬೆಳೆಗಳಲ್ಲಿ ರಾಷ್ಟ್ರವ್ಯಾಪಿ ಹೆಕ್ಟೇರಿಗೆ ಕೆಲವು ಕಿಲೋಗ್ರಾಂಗಳಷ್ಟು ವಾರ್ಷಿಕ ಉತ್ಪಾದನೆಯಲ್ಲಿ ಸ್ಥಿರ ಏರಿಕೆ ತೋರಿಸಿದೆ. ಮುಖ್ಯವಾಗಿ ಈ ಅಭಿವೃದ್ಧಿಯು ಭಾರತದ ಹಸಿರು ಕ್ರಾಂತಿಯ ಲಾಭ ಮತ್ತು ರಸ್ತೆ ಮತ್ತು ವಿದ್ಯುತ್ ಉತ್ಪಾದನೆ ಮೂಲಸೌಕರ್ಯ, ಜ್ಞಾನ ಇವುಗಳ ಸುಧಾರಣೆಯಿಂದ ಬರುತ್ತವೆ. ಇತ್ತೀಚಿನ ಸಾಧನೆಗಳು ಹೊರತಾಗಿಯೂ, ಕೃಷಿಯು ಭಾರತದ ಪ್ರಮುಖ ಉತ್ಪಾದಕತೆ ಮತ್ತು ಒಟ್ಟು ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೂ ಭಾರತದಲ್ಲಿನ ಬೆಳೆಯ ಇಳುವರಿ, ಇನ್ನೂ ಅಭಿವೃದ್ಧಿ ಹೊಂದಿದ ಮತ್ತು ಇತರ ಅಭಿವೃದ್ಧಿಶೀಲ ದೇಶಗಳ ಇಳುವರಿಯ ಕೇವಲ 30% ರಿಂದ 60% ಮಾತ್ರಾ ಇದೆ. ಇದಲ್ಲದೆ ಕಳಪೆ ಮೂಲಸೌಕರ್ಯ ಮತ್ತು ಅಸಂಘಟಿತ ಚಿಲ್ಲರೆ ವಹಿವಾಟಿನ ಕಾರಣ ಭಾರತದಲ್ಲಿ ಸುಗ್ಗಿಯ ನಂತರ ಅತಿ ಹೆಚ್ಚಿನ ಆಹಾರ ಧಾನ್ಯ ನಷ್ಟವಾಗುತ್ತದೆ. ಭಾರತ ವಿಶ್ವದಲ್ಲಿಯೇ ಹೆಚ್ಚಿನ ಬೆಳೆ ನಷ್ಟ ಅನುಭವಿಸುವ ದೇಶ.[೯]

ಸ್ವಾತಂತ್ರ್ಯಾ ನಂತರ ಭಾರತದ ಕೃಷಿ

  • ಭಾರತದಲ್ಲಿ ಹತ್ತಿ (ಹೂವು) ಮಧ್ಯ ಭಾರತದಲ್ಲಿ ಒಂದು ನಗದು ಬೆಳೆ. ತನ್ನ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ, ಭಾರತವು ಆಹಾರ ಭದ್ರತಾ ವಿಷಯದಲ್ಲಿ ಅಪಾರ ಪ್ರಗತಿ ಸಾಧಿಸಿತು. ಭಾರತೀಯ ಜನಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದೆ, ಮತ್ತು ಆಹಾರ ಧಾನ್ಯ ಉತ್ಪಾದನೆ ನಾಲ್ಕುಪಟ್‍ಟಿಗೂ ಹೆಚ್ಚು ಆಗಿದೆ. ತಲಾ ಲಭ್ಯವಿರುವ ಆಹಾರ ಧಾನ್ಯ ಸಾಕಷ್ಟು ಹೆಚ್ಚಳ ಕಂಡಿದೆ.
ಪಂಜಾಬ ಮತ್ತು ಹಿಮಾಚಲ ಪ್ರದೇಶ ರಾಜ್ಯದ ಗಡಿಯ ಭಾಕ್ರಾದಲ್ಲಿ ಸಟ್ಲೇಜ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಅಣೆಕಟ್ಟಿನ ಏಷ್ಯಾದ ಎರಡನೇ ಅತಿ ಎತ್ತರ 225.55 ಮೀ (740 ಅಡಿ) 261m ಮತ್ತು ಉದ್ದ 518.25 ಮೀ ಇದ್ದು "ಗೋವಿಂದ ಸಾಗರ್" ಎಂದು ಕರೆಯಲ್ಪಡುವ ಜಲಾಶಯ,9.34 ಶತಕೋಟಿ ಘನ ಮೀಟರ್ ವರೆಗೆ ನೀರನ್ನು ಸಂಗ್ರಹಿಸುತ್ತದೆ.(Bhakra Dam Aug 15 2008)

.

  • 1960 ರ ದಶಕದ ಮೊದಲು ಭಾರತ ದೇಶೀಯ ಅಗತ್ಯಗಳನ್ನು ಪೂರೈಸಲು ಆಮದು ಮತ್ತು ಆಹಾರ ನೆರವನ್ನು ಅವಲಂಬಿಸಿತ್ತು. 1965 ಮತ್ತು 1966 ರಲ್ಲಿ ಕಂಡ ಎರಡು ವರ್ಷಗಳ ತೀವ್ರ ಬರ ಅದರ ಕೃಷಿ ನೀತಿ ಸುಧಾರಣೆಮಾಡಲು ಭಾರತಕ್ಕೆ ಮನವರಿಕೆ ಮಾಡಿತು. ಮತ್ತು ಭಾರತ ವಿದೇಶಿ ನೆರವು ಮತ್ತು ಆಹಾರ ಭದ್ರತೆಗಾಗಿ ಆಮದು ನೀತಿಯನ್ನು ಅವಲಂಬಿಸದಿರವ ನಿರ್ಧಾರ ಮಾಡಿತು. ಭಾರತ ಆಹಾರ ಧಾನ್ಯಗಳ ಸ್ವಯಂಪೂರ್ಣತೆಯ ಗುರಿಗೆ ಗಮನ ಕೊಟ್ಟಿತು. ಗಮನಾರ್ಹ ನಿಯಮಗಳ ಸುಧಾರಣೆಗಳನ್ನು ಅಳವಡಿಸಿಕೊಂಡಿತು. ಇದು ಭಾರತದ ಹಸಿರು ಕ್ರಾಂತಿಗೆ ದಾರಿಮಾಡಿ ಕೊಟ್ಟಿತು. ಇದು ಉತ್ತಮ ಕೃಷಿ ಜ್ಞಾನ, ಉನ್ನತ ಇಳುವರಿ, ರೋಗ ನಿರೋಧಕ ಗೋಧಿ ತಳಿ ಸಂಯೋಜನೆ, ಈ ವೈವಿಧ್ಯತೆಗಳನ್ನು ಅಳವಡಿಸಿಕೊಂಡು ಉತ್ಪಾದಕತೆಯನ್ನು ಸುಧಾರಿಸಲು ಆರಂಭವಾಯಿತು. ಪಂಜಾಬ್ ರಾಜ್ಯದ ಕೃಷಿ ಮತ್ತು ಬೆಳೆ ಭಾರತದ ಹಸಿರು ಕ್ರಾಂತಿಗೆ ನಾಂದಿಯಾಯಿತು. ಮತ್ತು ಅದು ದೇಶದ ಆಹಾರ ಕಣಜ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ.
  • ಭಾರತವು ಕೃಷಿ ಅರ್ಥವ್ಯವಸ್ಥೆಯು ರಚನಾತ್ಮಕ ಬದಲಾವಣೆಗೆ ಸಜ್ಜಾಗಿದೆ. 1970 ರಿಂದ 2011 ರ ಅವಧಿಯಲ್ಲಿ ಕೃಷಿಯ ಜಿಡಿಪಿ ಪಾಲು 43% ರಿಂದ 16% ಕ್ಕೆ ಕುಸಿದಿದೆ. ಈ ಬೆಳವಣಿಗೆ ಕೃಷಿಗೆ ಕಡಿಮೆ ಪ್ರಾಮುಖ್ಯತೆ ಅಥವಾ ಕೃಷಿ ನೀತಿಯ ಪರಿಣಾಮವಾಗಿ ಅಲ್ಲ. ಈ ಪರಿಸ್ಥಿತಿಯುಂಟಾಗಲು 2000 ಮತ್ತು 2010 ನಡುವೆ ಕ್ಷಿಪ್ರ ಆರ್ಥಿಕ ಸೇವೆಗಳು, ಕೈಗಾರಿಕಾ ಉತ್ಪಾದನೆ, ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಭಾರತ ಬೆಳವಣಿಗೆ ಹೊಂದಿರುವುದೇ ಕಾರಣ.
  • ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಹಸಿರು ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2013 ರಲ್ಲಿ ಎನ್ಡಿಟಿವಿ (NDTV) ಕೃಷಿಗೆ ಅವರ ಮಹೋನ್ನತ ಕೊಡುಗೆಗಾಗಿ “ಭಾರತ ದೇಶದ 25 ಜೀವಂತ ದಂತಕಥೆ” ಎಂಬ ಪ್ರಶಸ್ತಿ ದಯಪಾಲಿಸಿತು; ಇದು ಭಾರತವನ್ನು ಆಹಾರ ಸಾರ್ವಭೌಮ ದೇಶವನ್ನಾಗಿ ಮಾಡಿದ ಸಾಧನೆಗಾಗಿ ನೀಡಿದ ಕೊಡಿಗೆ.
  • ಗುಜರಾತ್ ನೀರಾವರಿ ಕಾಲುವೆ. ನೀರಾವರಿ ಭಾರತದಲ್ಲಿ ಕೃಷಿ ಮಹತ್ತರ ಕೊಡುಗೆ ನೀಡುತ್ತದೆ. ಎರಡು ರಾಜ್ಯಗಳಾದ ಸಿಕ್ಕಿಂ ಮತ್ತು ಕೇರಳ ಕ್ರಮವಾಗಿ 2015 ಮತ್ತು 2016 ರಲ್ಲಿ ಒಂದು ಸಂಪೂರ್ಣವಾಗಿ ಸಾವಯವ ಕೃಷಿವಿಧಾನಕ್ಕೆ ಬದಲಾಯಿಸುವ ಯೋಜನೆ ಹಾಕಿಕೊಂಡಿವೆ.[೧೦][೧೧].[೧೨]

ಸ್ವಾತಂತ್ರ್ಯಾ ನಂತರ ನೀರಾವರಿ ಮೂಲಸೌಕರ್ಯ

  • ಲೇಖನ:ಭಾರತದಲ್ಲಿ ನೀರಾವರಿ
  • ಭಾರತದ ಕೃಷಿ ಚಟುವಟಿಕೆಗಳಿಗೆ ನೀರಾವರಿಯ ಮೂಲಸೌಕರ್ಯ, ಅಂತರ್ಜಲ ಆಧರಿತವಾದ ವ್ಯವಸ್ಥೆಗಳು, ಕೆರೆ ಮತ್ತು ಇತರ ಮಳೆನೀರು ಕೊಯ್ಲು ಯೋಜನೆಗಳು, ನದಿಗಳ ಪ್ರಮುಖ ಮತ್ತು ಸಣ್ಣ ಕಾಲುವೆಗಳ ಜಾಲಗಳನ್ನು ಒಳಗೊಂಡಿದೆ. ಇವುಗಳಲ್ಲಿ, ಅಂತರ್ಜಲ ವ್ಯವಸ್ಥೆ ದೊಡ್ಡದಾಗಿದೆ.ಭಾರತದಲ್ಲಿ ಸಾಗುವಳಿಗೊಳಗಾದ ಜಮೀನಿನ 160 ಮಿಲಿಯನ್ ಹೆಕ್ಟೇರ್ ನಲ್ಲಿ, ಸುಮಾರು 39 ದಶಲಕ್ಷ ಹೆಕ್ಟೇರ್ ಅಂತರ್ಜಲ ಬಾವಿಗಳ ಮೂಲಕವೂ , 22 ಮಿಲಿಯನ್ ಹೆಕ್ಟೇರ್ ನೀರಾವರಿ ಕಾಲುವೆಗಳ ಮತ್ತು ಮೂಲಕವೂ ಕೃಷಿಗೆ ಒಳಪಟ್ಟಿತ್ತು. 2010 ರಲ್ಲಿ ಭಾರತದ ಕೃಷಿ ಭೂಮಿಯ ಕೇವಲ 35% ವಿಶ್ವಾಸಾರ್ಹವಾಗಿ ನೀರಾವರಿಗೆ ಒಳಪಟ್ಟಿತ್ತು. ಭಾರತದಲ್ಲಿ ಕೃಷಿ ಭೂಮಿಯ ಸುಮಾರು 2/3 ಭಾಗ ಮಳೆಯನ್ನು ಅವಲಂಬಿಸಿದೆ. ಆದರೂ ಕಳೆದ 50 ವರ್ಷಗಳಲ್ಲಿ ನೀರಾವರಿ ಮೂಲಸೌಕರ್ಯ ಸುಧಾರಣೆಗಳು ಭಾರತದ ಆಹಾರ ಭದ್ರತೆಯನ್ನು ಸುಧಾರಿಸಲು ಸಹಾಯಕವಾಗಿದೆ, ಮಳೆಯ ಮೇಲೆ ಅವಲಂಬನೆಯನ್ನು ಕಡಿಮೆಮಾಡಿ, ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಗ್ರಾಮೀಣ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ನೀರಾವರಿ ಯೋಜನೆಯ ಅಣೆಕಟ್ಟುಗಳು ಸಹಾಕವಾಗಿವೆ. ಜೊತೆಜೆ ಬೆಳೆಯುತ್ತಿರುವ ಗ್ರಾಮೀಣ ಜನಸಂಖ್ಯೆಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಅಲ್ಲದೆ ಅವು ಪ್ರವಾಹ ನಿಯಂತ್ರಣ ಮತ್ತು ಕೃಷಿಗೆ ಬರ ಸಂಬಂಧಿಸಿದ ಹಾನಿ ತಡೆಯಲು ಸಹಾಯಕವಾಗಿವೆ.[೧೩][೧೪]
ಚಿತ್ರ:Tea plantations in Munnar.jpg
ಭಾರತವು ತನ್ನ ಕೆಲವು ಚಹಾ ತೋಟಗಳಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಕೃಷಿ ಇಳುವರಿ ಹೊಂದಿದೆ.: ಕೇರಳ ರಾಜ್ಯದಲ್ಲಿ ಚಹಾ ಎಸ್ಟೇಟ್

.

ಉತ್ಪಾದನೆ ಮತ್ತು ತಂತ್ರಜ್ಞಾನಗಳು

  • ಭಾರತವು ತನ್ನ ಕೆಲವು ಚಹಾ ತೋಟಗಳಲ್ಲಿ ವಿಶ್ವದ ಅತ್ಯುತ್ತಮ ಕೃಷಿ ಇಳುವರಿ ಹೊಂದಿದೆ. 2011 ರಲ್ಲಿ ಭಾರತ ಹೆಚ್ಚಿನ ಮತ್ತು ವಿಭಿನ್ನ ಕೃಷಿ ಕ್ಷೇತ್ರಗಳನ್ನು ಹೊಂದಿತ್ತು. ಅದರ ಜಿಡಿಪಿಯ ಸುಮಾರು 16% ಕೃಷಿಯ ಕೊಡಿಗೆ. ಸರಾಸರಿ ಆದಾಯ ಅದರ ರಫ್ತುಗಳ 10%,ನಷ್ಟು ಇದೆ. ಭಾರತದ ಕೃಷಿಯೋಗ್ಯ 159.7 ಮಿಲಿಯನ್ ಹೆಕ್ಟೇರ್ (394.6 ದಶಲಕ್ಷ ಎಕರೆ) ಭೂಮಿ ವಿಸ್ತಾರದಲ್ಲಿ ಅಮೇರಿಕಾದ ನಂತರದ ವಿಶ್ವದ ಎರಡನೇ ದೊಡ್ಡ ಪ್ರದೇಶ. ಇದರ ಒಟ್ಟು ನೀರಾವರಿ ಬೆಳೆ ಪ್ರದೇಶ 82.6 ಮಿಲಿಯನ್ ಹೆಕ್ಟೇರ್ (21.56 ಕೋಟಿ ಎಕರೆ).
  • ಭಾರತವು ಜಗತ್ತಿನಲ್ಲಿ ಅತೀ ದೊಡ್ಡ ನೀರಾವರಿ ಪ್ರದೇಶವನ್ನು ಹೊಂದಿದೆ. ಹಾಗಾಗಿ ಭಾರತವು ಅನೇಕ ಬೆಳೆಗಳಲ್ಲಿ ಜಾಗತಿಕ ಉತ್ಪಾದಕರ ಮೇಲಿನ ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆದಿದೆ. ಅದರಲ್ಲಿ ಗೋಧಿ, ಅಕ್ಕಿ, ದ್ವಿದಳ ಧಾನ್ಯಗಳು, ಹತ್ತಿ, ನೆಲಗಡಲೆ, ಹಣ್ಣುಗಳು ಮತ್ತು ತರಕಾರಿಗಳು ಸೇರಿವೆ, ವಿಶ್ವದಲ್ಲಿ 2011 ರ ಗಣತಿಯಂತೆ ಭಾರತ ಎಮ್ಮೆ ಮತ್ತು ದನಗಳ ಅತಿ ದೊಡ್ಡ ಹಿಂಡುಗಳನ್ನು ಹೊಂದಿತ್ತು, ಭಾರತ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ದೇಶ; ಮತ್ತು ಮತ್ತು ವೇಗವಾಗಿ ಬೆಳೆಯುತ್ತಿರುವ ಕೋಳಿ ಸಾಕಣೆ ಕೈಗಾರಿಕೆಗಳನ್ನು ಹೊಂದಿದೆ.[೧೫]

ಪ್ರಮುಖ ಬೆಳೆಗಳು ಮತ್ತು ಇಳುವರಿ

  • ಕೆಳಗಿನ ಕೋಷ್ಟಕವು ಭಾರತದ 20 ಪ್ರಮುಖ ಕೃಷಿ ಉತ್ಪನ್ನಗಳ ವಿವರ ಒದಗಿಸುತ್ತದೆ. 2009 ರ ಆರ್ಥಿಕ ಮೌಲ್ಯವುಳ್ಳ ಅಂಕಣ ಕೊಟ್ಟಿದೆ. ಭಾರತದ ಪ್ರತಿಯೊಂದರ ಸರಾಸರಿ ಉತ್ಪಾದನೆ, ಸಂದರ್ಭ ಮತ್ತು ಹೋಲಿಕೆಗಳನ್ನು ಒಳಗೊಂಡಿದೆ. 2010 ರಲ್ಲಿ ಅಸ್ತಿತ್ವದಲ್ಲಿದ್ದ ಅತ್ಯಂತ ಹೆಚ್ಚಿನ ಕೃಷಿ ಇಳುವರಿ, ಉತ್ಪಾದನೆ, ವಿಶ್ವದಲ್ಲಿ ಮತ್ತು ದೇಶದಲ್ಲಿ ಅತ್ಯಂತ ಹೆಚ್ಚಿನ ಸರಾಸರಿ ಉತ್ಪಾದನೆ. ಈ ಅಂಕೆ ಅಂಶಗಳು ಭಾರತವು ಕೃಷಿಯಲ್ಲಿ ಮತ್ತಷ್ಟು ಸಾಧನೆಗಳಿಂದ ಹೆಚ್ಚಿನ ಉತ್ಪಾದನೆ ಮಾಡುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ. ಆದಾಯ.[೧೬][೧೭]
  • ಭಾರತದ ಅತಿದೊಡ್ಡ ಕೃಷಿ ಉತ್ಪನ್ನಗಳು:[೧೮]
ಶ್ರೇಣಿ ಸರಕು ಮೌಲ್ಯ ಘಟಕ ಬೆಲೆ ಸರಾಸರಿ ಇಳುವರಿ ಅತಿಹೆಚ್ಚು ಉತ್ಪಾದಕ ದೇಶದಲ್ಲಿ ಇಳುವರಿ ಅತಿಹೆಚ್ಚು ಉತ್ಪಾದಕ ದೇಶ
ಅಮೇರಿಕಾದ $2013 (ಅಮೇರಿಕಾದ $/ಕಿಲೋಗ್ರಾಂ, 2009 (ಪ್ರತಿ ಹೆಕ್ಟೇರಿಗೆ ಟನ್, 2010) ಪ್ರತಿ ಹೆಕ್ಟೇರಿಗೆ ಟನ್, 2010
1 ಅಕ್ಕಿ $ 42,57 ಶತಕೋಟಿ 0.27 3.99 12.03 ಆಸ್ಟ್ರೇಲಿಯಾ
2 ಎಮ್ಮೆ ಹಾಲು $ 27,92 ಶತಕೋಟಿ 0.4 0.63
3 ಹಸು ಹಾಲು $18.91 ಶತಕೋಟಿ 0.31 1.2 10.3 ಇಸ್ರೇಲ್
4 ಗೋಧಿ $13.98 ಶತಕೋಟಿ 0.15 2.8 8.9 ನೆದರ್ಲ್ಯಾಂಡ್ಸ್
5 ಮಾವಿನಹಣ್ಣು, guavas $10.79 ಶತಕೋಟಿ 0.6 6.3 40.6 ಕೇಪ್ ವರ್ಡೆ
6 ಕಬ್ಬು $10.42 ಶತಕೋಟಿ 0.03 66 125 ಪೆರು
7 ಹತ್ತಿ $8.65 ಶತಕೋಟಿ 1.43 1.6 4.6 ಇಸ್ರೇಲ್
8 ಬನಾನಾಸ್ $7.77 ಶತಕೋಟಿ 0.28 37.8 59.3 ಇಂಡೋನೇಷ್ಯಾ
9 ಆಲೂಗಡ್ಡೆ $7.11 ಶತಕೋಟಿ 0.15 19.9 44.3 ಯುನೈಟೆಡ್ ಸ್ಟೇಟ್ಸ್
10 ಟೊಮ್ಯಾಟೋಸ್ $6.74 ಶತಕೋಟಿ 0.37 19.3 524.9 ಬೆಲ್ಜಿಯಂ
11 ತಾಜಾ ತರಕಾರಿಗಳು $6.27 ಶತಕೋಟಿ 0.19 13.4 76.8 ಯುನೈಟೆಡ್ ಸ್ಟೇಟ್ಸ್
12 ಕೋಣದ ಮಾಂಸ $4.33 ಶತಕೋಟಿ 2.69 0.138 0.424 ಥೈಲ್ಯಾಂಡ್
13 ಕಡಲೆಕಾಯಿ $4.11 ಶತಕೋಟಿ
14 ಬೆಂಡೆಕಾಯಿ $4.06 ಶತಕೋಟಿ 0.35 7.6 23.9 ಇಸ್ರೇಲ್
15 ಈರುಳ್ಳಿ $4.05 ಶತಕೋಟಿ 0.21 16.6 67.3 ಐರ್ಲೆಂಡ್
16 ಗಜ್ಜರಿ $3.43 ಶತಕೋಟಿ 0.4 0.9 2.8 ಚೀನಾ
17 ಕೋಳಿ ಮಾಂಸ $3.32 ಶತಕೋಟಿ 0.64 10.6 20.2 ಸೈಪ್ರಸ್
18 ತಾಜಾ ಹಣ್ಣುಗಳು $3.25 ಶತಕೋಟಿ 0.42 1.1 5.5 ನಿಕರಾಗುವಾ
19 ಕೋಳಿ ಮೊಟ್ಟೆಗಳು $3.18 ಶತಕೋಟಿ 2.7 0.1] 0.42 ಜಪಾನ್
20 ಸೋಯಾಬೀನ್ $3.09 ಶತಕೋಟಿ 0.26 1.1 3.7 ಟರ್ಕಿ

ಹೆಕ್ಟೇರಿಗೆ ಸರಾಸರಿ ಕೃಷಿ ಉತ್ಪಾದನೆ

ಭಾರತ ಟ್ರಾಕ್ಟರ್ ಕೃಷಿ: ಗೋಧಿ ಬೆಳೆಗೆ ಪಂಜಾಬ್ ತಯಾರಿ;ಹಿಂದಿನ ಬೆಳೆ ಕಾಂಡವನ್ನು ದಹಿಸದೆ ಕ್ಷೇತ್ರದಲ್ಲಿ ಕೃಷಿ ತಯಾರಿ ನಡೆದಿದೆ. (ಮೇಲೆ ಉತ್ತರ ಭಾರತದಲ್ಲಿ ಬಳಕೆಯಲ್ಲಿ ಒಂದು ಟ್ರಾಕ್ಟರ್)
  • 2009 ರಲ್ಲಿ, ಭಾರತ ಮೊಟ್ಟೆಗಳು, ಕಿತ್ತಳೆ, ತೆಂಗಿನಕಾಯಿ, ಟೊಮ್ಯಾಟೊ, ಬಟಾಣಿ ಮತ್ತು ಬೀನ್ಸ್ ವಿಶ್ವದ ಮೂರನೇ ದೊಡ್ಡ ತಯಾರಕನಾಗಿತ್ತು. ಒಟ್ಟು ಉತ್ಪಾದನೆ ಬೆಳವಣಿಗೆ ಜೊತೆಗೆ, ಭಾರತದಲ್ಲಿ ಕೃಷಿ ಕಳೆದ 60 ವರ್ಷಗಳಲ್ಲಿ ಹೆಕ್ಟೇರಿಗೆ ಸರಾಸರಿ ಕೃಷಿ ಉತ್ಪಾದನೆ ಏರಿಕೆ ತೋರಿಸಿದೆ. ಟೇಬಲ್ ಕೆಳಗೆ ಕೆಲವು ಬೆಳೆಗಳಿಗೆ ಮೂರು ಕೃಷಿ ವರ್ಷಗಳಲ್ಲಿ ಭಾರತದ ಸರಾಸರಿ ತೋಟಗಾರಿಕಾ ಉತ್ಪಾದಕತೆಯನ್ನು ಒದಗಿಸುತ್ತದೆ. ರಸ್ತೆ ಮತ್ತು ವಿದ್ಯುತ್ ಉತ್ಪಾದನೆ ಮೂಲಸೌಕರ್ಯ, ಜ್ಞಾನ ಲಾಭದ ಮತ್ತು ಸುಧಾರಣೆಗಳು ಸುಧಾರಣೆ ಭಾರತ 40 ವರ್ಷಗಳಲ್ಲಿ 500% 40% ನಡುವೆ ತೋಟಗಾರಿಕಾ ಉತ್ಪಾದಕತೆಯನ್ನು ಹೆಚ್ಚಿಸಲು ಅವಕಾಶ ಕಲ್ಪಿಸಿತು.
  • ಇಳುವರಿಯು ಭಾರತೀಯ ರಾಜ್ಯಗಳಲ್ಲಿ ಭಿನ್ನವಾಗಿರುತ್ತವೆ. ಕೆಲವು ರಾಜ್ಯಗಳು ಇತರರಿಗಿಂತ ಎಕರೆಗೆ ಎರಡು ಮೂರು ಬಾರಿ ಹೆಚ್ಚು ಧಾನ್ಯ ಉತ್ಪತ್ತಿ ಮಾಡುತ್ತವೆ. ಟೇಬಲ್ 2001-2002, ಭಾರತ ಕೆಲವು ಪ್ರಮುಖ ವ್ಯಾವಸಾಯಿಕ ಬೆಳೆಗಳಿಗೆ ರಾಜ್ಯಾದ್ಯಂತ ಸರಾಸರಿ ಇಳುವರಿ ಹೋಲಿಕೆಯನ್ನು ತೋರಿಸುತ್ತದೆ.[೧೯]
  • 2002 ರಿಂದ, ಭಾರತ ಟ್ರಾಕ್ಟರುಗಳ ಉತ್ಪಾದನೆಯಲ್ಲಿ ವಿಶ್ವದ ಅತಿದೊಡ್ಡ ತಯಾರಕ; 2013ರಲ್ಲಿ ವಿಶ್ವದ 29%ರಷ್ಟು ಟ್ರಾಕ್ಟರುಗಳನ್ನು ತಯಾರಿಸಿ ಅತಿದೊಡ್ಡ ಉತ್ಪಾದಕನಾಗಿ ಹೊರಹೊಮ್ಮಿದೆ;ಭಾರತ ವಿಶ್ವದ ದೊಡ್ಡ ಟ್ರಾಕ್ಟರ್ ಮಾರುಕಟ್ಟೆ.

ರಾಜ್ಯಾವಾರು ಸರಾಸರಿ ಇಳುವರಿ ಹೋಲಿಕೆ

ಬೆಳೆ ಸರಾಸರಿ ಕೃಷಿ ಇಳುವರಿ ಬಿಹಾರ ಕರ್ನಾಟಕ ಸರಾಸರಿ ಕೃಷಿ ಇಳುವರಿ ಪಂಜಾಬ್ ಸರಾಸರಿ ಕೃಷಿ
ಪ್ರತಿ ಹೆಕ್ಟೇರ್’ ಗೆ ಕಿಲೋಗ್ರಾಂ ಪ್ರತಿ ಹೆಕ್ಟೇರ್’ ಗೆ ಕಿಲೋಗ್ರಾಂ ಪ್ರತಿ ಹೆಕ್ಟೇರ್’ ಗೆ ಕಿಲೋಗ್ರಾಂ
ಗೋಧಿ 2020 unknown 3880
ಅಕ್ಕಿ 1370 2380 3130
ಬೇಳೆಕಾಳುಗಳು 610 470 820
ತೈಲ ಬೀಜಗಳು 620 680 1200
ಕಬ್ಬು 45510 79560 65300

[೨೦]

ಭಾರತದ ನೈಸರ್ಗಿಕ ಸಸ್ಯವರ್ಗ ವಲಯಗಳು

ಭಾರತದ ನೈಸರ್ಗಿಕ ಸಸ್ಯವರ್ಗ

{{Information |ಭಾರತದ ನೈಸರ್ಗಿಕ ಸಸ್ಯವರ್ಗ ವಲಯಗಳು (ಥಾರ್ ಮರುಭೂಮಿಗೆ(Hot Desert)ಹಸಿರು ಬಣ್ಣ ಕೊಟ್ಟಿರುವುದು ತಪ್ಪಾಗಿದೆ)

  ಉಷ್ಣವಲಯದ ಮುಳ್ಳಿನ ಸಸ್ಯವರ್ಗ
  ಆಲ್ಪೈನ್ & ಉಪ ಆಲ್ಪೈನ್ ಸಸ್ಯವರ್ಗ
  ಹಿಮಾಲಯದ ಒಣ ಸಮಶೀತೋಷ್ಣ ಸಸ್ಯವರ್ಗ
  ಹಿಮಾಲಯದ ತೇವ ಸಮಶೀತೋಷ್ಣ ಸಸ್ಯವರ್ಗ
  ಉಪೋಷ್ಣವಲಯದ ಕೋನಿಫೆರಸ್ ಸಸ್ಯವರ್ಗ
   ಉಷ್ಣವಲಯದ ತೇವ ಪತನಶೀಲ ಸಸ್ಯವರ್ಗ
  ಉಷ್ಣವಲಯದ ನಿತ್ಯಹರಿದ್ವರ್ಣ ಸಸ್ಯವರ್ಗ
  ಉಷ್ಣವಲಯದ ಅರೆ ನಿತ್ಯಹರಿದ್ವರ್ಣ ಸಸ್ಯವರ್ಗ
   ಉಷ್ಣವಲಯದ ಶುಷ್ಕ ಪತನಶೀಲ ಸಸ್ಯವರ್ಗ

2016 ರ ಹಂಗಾಮು ಕೃಷಿ ವಿವರ


*ಜುಲೈ 2016
  • ಭಾರತದ ಮುಂಗಾರು ಹಂಗಾಮು ಅವಧಿಯಲ್ಲಿ ಜೂನ್‌ 1ರವರೆಗೆ ಒಟ್ಟು 216 ಲಕ್ಷ ಹೆಕ್ಟೇರ್‌ಗಳಲ್ಲಿ ಆಹಾರ ಧಾನ್ಯಗಳ ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 279 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಇದು 2015 ಕ್ಕೆ ಹೋಲಿಸಿದರೆ ಶೇ 23ರಷ್ಟು ಕಡಿಮೆ..
ವಿವರ
ಧಾನ್ಯ ಬಿತ್ತನೆ ಬಿತ್ತನೆ
2015 2016
ಲಕ್ಷ ಹೆಕ್ಟೇರ್‍ಗಳಲ್ಲಿ
ಒಟ್ಟು ಬಿತ್ತನೆ 279 216
ಭತ್ತ 47.77 47.62
ಏಕದಳ ಧಾನ್ಯ 37 44
ಬೇಳೆಕಾಳು 20 22
ಎಣ್ಣೆಕಾಳು 29 54
ಹತ್ತಿ 31 60
ಸಣಬು 7 8
ಕಬ್ಬು 44.38 43.68
ಕೇಂದ್ರ ಕೃಷಿ ಸಚಿವಾಲಯ ಮಾಹಿತಿ:2-7-2016 ಪ್ರಜಾವಾಣಿ ವರದಿ.

{ಮುಂದುವರೆಯುವುದು}

೨೦೧೬-೧೭ ಕೃಷಿಯ ಸ್ಥಿತಿ

  • 19 Nov, 2016*ಹಿಂಗಾರು ಬಿತ್ತನೆ ಅಲ್ಪ ಇಳಿಕೆ:
  • ಪ್ರಸಕ್ತ ಹಿಂಗಾರು ಹಂಗಾಮು ಅವಧಿಯಲ್ಲಿ ನವೆಂಬರ್‌ 18ರವರೆಗೆ ಒಟ್ಟು 242 ಲಕ್ಷ ಹೆಕ್ಟೇರ್‌ಗಳಲ್ಲಿ ಆಹಾರ ಧಾನ್ಯಗಳ ಬಿತ್ತನೆ ಕಾರ್ಯ ನಡೆದಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 243 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಬಾರಿ ಗೋಧಿ ಬಿತ್ತನೆ 78.83 ಲಕ್ಷ ಹೆಕ್ಟೇರ್‌ಗಳಿಂದ 79.45 ಲಕ್ಷ ಹೆಕ್ಟೇರ್‌ಗಳಿಗೆ ಅಲ್ಪ ಏರಿಕೆ ಕಂಡಿದೆ. ಬೇಳೆಕಾಳುಗಳ ಬಿತ್ತನೆಯು 69.98 ಲಕ್ಷ ಹೆಕ್ಟೇರ್‌ಗಳಿಂದ 74.55 ಲಕ್ಷ ಹೆಕ್ಟೇರ್‌ಗಳಿಗೆ ಏರಿಕೆಯಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ಸುರಿದಿರುವುದು ಮತ್ತು ಗರಿಷ್ಠ ಬೆಂಬಲ ಬೆಲೆ ನಿಗದಿಮಾಡಿರುವುದರಿಂದ ಬೇಳೆಕಾಳು ಬಿತ್ತನೆ ಹೆಚ್ಚಾಗಿದೆ ಎಂದು ಹೇಳಿದೆ.
  • ಏಕದಳ ಧಾನ್ಯಗಳ ಬಿತ್ತನೆ 25.98 ಲಕ್ಷ ಹೆಕ್ಟೇರ್‌ಗಳಲ್ಲಿ, ಎಣ್ಣೆಕಾಳುಗಳು 56.16 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
  • ಅಕ್ಟೋಬರ್‌ ಮೊದಲ ವಾರದಿಂದ ಆರಂಭವಾಗುವ ಹಿಂಗಾರು ಹಂಗಾಮು ಅವಧಿಯಲ್ಲಿ ಆಹಾರ ಧಾನ್ಯಗಳ  ಉತ್ಪಾದನೆ ಕಳೆದ ವರ್ಷಕ್ಕಿಂತ ಹೆಚ್ಚಿರಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. 2015–16ರ ಹಿಂಗಾರು ಬೆಳೆ ಅವಧಿಯಲ್ಲಿ (ಅಕ್ಟೋಬರ್‌–ಮಾರ್ಚ್‌) ಆಹಾರ ಧಾನ್ಯಗಳ ಉತ್ಪಾದನೆ ಶೇ 5 ರಷ್ಟು ಹೆಚ್ಚಾಗಲಿದ್ದು, 1,330 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದೆ. 2014–15ರ ಹಿಂಗಾರು ಬೆಳೆ ಅವಧಿಯಲ್ಲಿ 1,263 ಲಕ್ಷ ಟನ್‌ಗಳಷ್ಟು ಉತ್ಪಾದನೆ ಎಂದು ಸಚಿವಾಲಯ ತಿಳಿಸಿದೆ.[೨೧]

ಭಾರತದಲ್ಲಿ ಕೃಷಿ 1947--2017

  • ಬೆಂಗಳೂರಿನಲ್ಲಿ ಶುಕ್ರವಾರ ಮುಕ್ತಾಯಗೊಂಡ 13ನೇ ಕೃಷಿ ವಿಜ್ಞಾನ ಸಮ್ಮೇಳನದಲ್ಲಿ ‘ಹವಾಮಾನ ಚತುರ ಕೃಷಿ’ಯ ಬಗ್ಗೆ ಸಮಾಲೋಚನೆ ನಡೆಯಿತು. ಈ ಸಮ್ಮೇಳನದ ರೂವಾರಿಗಳಲ್ಲಿ ಒಬ್ಬರಾದ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್‌) ನಿವೃತ್ತ ಮಹಾನಿರ್ದೇಶಕ ಹಾಗೂ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿಯಾಗಿರುವ ಕನ್ನಡಿಗ ಡಾ. ಎಸ್‌.ಅಯ್ಯಪ್ಪನ್‌ ಅವರು ಭಾರತೀಯ ಕೃಷಿ ವ್ಯವಸ್ಥೆಯ ಮುಂದಿರುವ ಸವಾಲುಗಳ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ರಾಷ್ಟ್ರೀಯ ಕೃಷಿ ವಿಜ್ಞಾನಗಳ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಅಯ್ಯಪ್ಪನ್‌, ಪ್ರಸ್ತುತ ನಬಾರ್ಡ್‌ ಪ್ರಾಧ್ಯಾಪಕ ಪೀಠದ ಮುಖ್ಯಸ್ಥರಾಗಿದ್ದಾರೆ.

ಈಗಿನ ನಮ್ಮ ದೇಶದ ಕೃಷಿ ಪರಿಸ್ಥಿತಿ

  • ಪ್ರಪಂಚದ ಒಟ್ಟು ಜನಸಂಖ್ಯೆಯ ಶೇಕಡ 17ರಷ್ಟು ಜನ ನಮ್ಮ ದೇಶದಲ್ಲಿದ್ದಾರೆ. ಆದರೆ, ಜಗತ್ತಿನ ಶೇಕಡ 2.4ರಷ್ಟು ಭೂಮಿ, ಶೇಕಡ 4.2ರಷ್ಟು ನೀರು ಹಾಗೂ ಶೇಕಡ 11ರಷ್ಟು ಜಾನುವಾರುಗಳು ಮಾತ್ರ ನಮ್ಮಲ್ಲಿವೆ. 14.20 ಕೋಟಿ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದೆ. ಕೃಷಿ ಮತ್ತು ಹವಾಮಾನಕ್ಕೆ ಸಂಬಂಧಿಸಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಬೇರೆ ಬೇರೆ ರೀತಿಯ ಭೌಗೋಳಿಕ ಪ್ರದೇಶಗಳು ನಮ್ಮಲ್ಲಿವೆ. ಬೆಳೆಗಳು ಹಾಗೂ ಪಶುಗಳಿಗೆ ಸಂಬಂಧಿಸಿ 10ಕ್ಕೂ ಹೆಚ್ಚು ಜೈವಿಕ ವೈವಿಧ್ಯಗಳಿವೆ.
  • ಸ್ವಾತಂತ್ರ್ಯ ಬಂದಾಗ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಶೇಕಡ 52ರಷ್ಟಿತ್ತು. ಶೇಕಡ 70ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದರು. ಈಗ ಜಿಡಿಪಿಯಲ್ಲಿ ಕೃಷಿಯ ಪಾಲು ಶೇಕಡ 14ಕ್ಕೆ ಇಳಿಕೆ ಆಗಿದೆ. ಶೇಕಡ 52ರಷ್ಟು ಮಂದಿ (125 ಕೋಟಿ ಜನಸಂಖ್ಯೆಯಲ್ಲಿ ಸುಮಾರು 65 ಕೋಟಿ ಜನ) ಜೀವನೋಪಾಯಕ್ಕೆ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿದ್ದಾರೆ.

ಸಮಸ್ಯೆಗಳು

  • ಕೃಷಿ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು:
  • ಸ್ವಾತಂತ್ರ್ಯ ಬಂದಾಗ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಹಸಿರು ಕ್ರಾಂತಿ ಬಳಿಕ ಆಹಾರದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ದೇಶದಲ್ಲಿ ಈಗ ವರ್ಷಕ್ಕೆ 26 ಕೋಟಿ ಟನ್‌ಗಳಷ್ಟು ಆಹಾರ ಉತ್ಪಾದನೆಯಾಗುತ್ತಿದೆ. 3 ಲಕ್ಷ ಕೋಟಿಯಷ್ಟು ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. 25 ಕೋಟಿ ಟನ್‌ ಹಣ್ಣು, ತರಕಾರಿ, 16 ಕೋಟಿ ಟನ್‌ ಹಾಲು, 1 ಕೋಟಿ ಟನ್‌ ಮೀನು, 60 ಲಕ್ಷ ಟನ್‌ ಮಾಂಸ ಉತ್ಪಾದನೆ ಆಗುತ್ತಿದೆ.
  • ಇವೆಲ್ಲ ನೋಡಿದರೆ, ಕೃಷಿ ಪರಿಸ್ಥಿತಿ ಚೆನ್ನಾಗಿರುವಂತೆ ಕಾಣಿಸುತ್ತದೆ. ಆದರೆ, ಭೂಮಿಯ ಆರೋಗ್ಯ ಕ್ಷೀಣಿಸುತ್ತಿರುವುದು, ಪೋಷಕಾಂಶಗಳ ಕೊರತೆ, ಕೃಷಿ ಭೂಮಿ ಕಡಿಮೆಯಾಗುತ್ತಿರುವುದು, ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವುದು, ಕೃಷಿ ಕ್ಷೇತ್ರದಲ್ಲಿ ಕಡಿಮೆಯಾಗುತ್ತಿರುವ ಅವಕಾಶಗಳು ಹೊಸ ಸವಾಲುಗಳನ್ನು ಹುಟ್ಟುಹಾಕಿವೆ. ನೀರಿನ ಸಮಸ್ಯೆಯಂತೂ ಸದಾ ಇದ್ದದ್ದೆ.

ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣಗಳು

  • 300 ವರ್ಷಗಳಲ್ಲಿ ಆದ ಬದಲಾವಣೆ ಕೇವಲ 100 ವರ್ಷಗಳಲ್ಲಿ ಆಯಿತು. 100 ವರ್ಷಗಳಲ್ಲಿ ಆದ ಬದಲಾವಣೆ ಕಳೆದ 20 ವರ್ಷಗಳಲ್ಲಿ ಆಯಿತು. ಇದರಿಂದಾಗಿ ಹಸಿರುಮನೆ ಅನಿಲಗಳು (ಪ್ರಮುಖವಾಗಿ ಮೀಥೇನ್‌ ನೈಟ್ರಸ್‌ ಆಕ್ಸೈಡ್‌ ಹಾಗೂ ಇಂಗಾಲದ ಡೈಆಕ್ಸೈಡ್‌) ವಾತಾವರಣವನ್ನು ಸೇರುವ ಪ್ರಮಾಣ ಹೆಚ್ಚಿದೆ. ಭತ್ತದ ಗದ್ದೆಗಳಿಂದ ಹಾಗೂ ಜಾನುವಾರುಗಳಿಂದಲೂ ಹಸಿರುಮನೆ ಅನಿಲಗಳು ವಾತಾವರಣ ಸೇರುತ್ತಿವೆ. ಇವು ಹವಾಮಾನ ವೈಪರೀತ್ಯಕ್ಕೆ ಕಾರಣ.

ಹವಾಮಾನ ವೈಪರೀತ್ಯದಿಂದ ಎದುರಾಗಿರುವ ಸಮಸ್ಯೆಗಳು

  • ಇದರಿಂದ ಜೈವಿಕ ಹಾಗೂ ಅಜೈವಿಕ ಒತ್ತಡಗಳು ಸೃಷ್ಟಿಯಾಗಿವೆ. ಅಜೈವಿಕ ಅಂದರೆ ತಾಪಮಾನ ಏರಿಕೆ, ಮಳೆ ವಿಧಾನದಲ್ಲಿ ಬದಲಾವಣೆ ಇತ್ಯಾದಿ. 150 ವರ್ಷಗಳ ಅಂಕಿ–ಅಂಶ ಪರಿಗಣಿಸಿದರೆ, ತಾಪಮಾನ ಸರಾಸರಿ ಶೇ 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿ ಆಗಿದೆ. ಇದು ಪಶುಗಳು, ಬೆಳೆಗಳು ಹಾಗೂ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.
  • ಮೂರು ತಿಂಗಳು ಸುರಿಯುತ್ತಿದ್ದ ಮುಂಗಾರು ಮಳೆ ಈಗ 30–40 ದಿನಗಳಿಗೆ ಸೀಮಿತ ಆಗಿದೆ. ಗಿಡಗಳ ಮೇಲೆ ಮಂಜಿನ ತೆರೆ ಬೀಳುತ್ತಿದೆ. ಹಿಂದೆ ದಕ್ಷಿಣ ಭಾರತದಲ್ಲಿ ಆಲಿಕಲ್ಲು ಮಳೆ ಅಪರೂಪವಾಗಿತ್ತು. ಇಂದು ಸಾಮಾನ್ಯವಾಗುತ್ತಿದೆ. ಚಂಡಮಾರುತಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಕ್ರಿಮಿಕೀಟಗಳು, ಸಾಂಕ್ರಾಮಿಕ ರೋಗಕಾರಕಗಳು, ಕಳೆಗಳು ಹೆಚ್ಚುತ್ತಿರುವುದು ಜೈವಿಕ ಒತ್ತಡಗಳಿಗೆ ಉದಾಹರಣೆ. ಉಷ್ಣಾಂಶ ಮತ್ತು ತೇವಾಂಶ ಸೂಚ್ಯಂಕ (ಟಿಎಚ್‌ಐ) ಏರುಪೇರಾಗುತ್ತಿರುವುದು ಬೆಳೆ ಹಾಗೂ ಪಶುಗಳ ಸಂತಾನೋತ್ಪಾದನೆ ಮೇಲೂ ಪ್ರಭಾವ ಬೀರುತ್ತಿದೆ.
  • ಒಂದು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಜಾಸ್ತಿ ಆದರೆ ಶೇಕಡ 20ರಷ್ಟು ಇಳುವರಿ ಕಡಿಮೆ ಆಗುತ್ತದೆ. ಪ್ರಾಣಿಗಳ ಚಯಾಪಚಯ ಕ್ರಿಯೆ, ಸಂತಾನೋತ್ಪತ್ತಿ ಹಾಗೂ ಹಾರ್ಮೋನ್‌ಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಪರಾಗಸ್ಪರ್ಶದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜೇನ್ನೊಣಗಳ ಸಂಖ್ಯೆ ಕಡಿಮೆಯಾದರೆ ಪರಾಗಸ್ಪರ್ಶದ ಪ್ರಮಾಣವೂ ಇಳಿಮುಖವಾಗುತ್ತದೆ. ಇದರಿಂದ ಕೃಷಿ ಉತ್ಪಾದಕತೆ ಕುಂಠಿತವಾಗುತ್ತದೆ.
  • ಮಾವು ಬೇಗ ಹೂ ಬಿಡುತ್ತಿದೆ. ಹೀಗಾದರೆ ಕಾಯಿ ಕಚ್ಚುವ ಪ್ರಮಾಣ ಕಡಿಮೆ ಆಗುತ್ತದೆ. ಸೇಬು ಬೆಳೆಯುವುದಕ್ಕೆ ಬೇಕಾದ ಕನಿಷ್ಠ ಎತ್ತರ ಹೆಚ್ಚುತ್ತಿರುವುದರಿಂದ ಸೇಬಿನ ಇಳುವರಿ ಕಡಿಮೆ ಆಗುತ್ತಿದೆ. ಹವಾಮಾನ ವೈಪರೀತ್ಯ ಎದುರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆಹಾರ ಉತ್ಪಾದನೆ ಇಳಿಕೆಯಾಗುವುದರ ಜೊತೆಗೆ ಗುಣಮಟ್ಟವೂ ಕಡಿಮೆಯಾಗಲಿದೆ. ಮಣ್ಣು– ಸಸ್ಯ, ಪ್ರಾಣಿಗಳ ನಡುವಿನ ಸಂಬಂಧ ಹಾಗೂ ಸಮತೋಲನ ಕಳೆದುಕೊಳ್ಳುತ್ತೇವೆ.

ಹವಾಮಾನ ವೈಪರೀತ್ಯ ಎದುರಿಸಲು ಅನುಸರಿಸಬೇಕಾದ ಕಾರ್ಯಕ್ರಮಗಳು

  • ಸುಸ್ಥಿರ ಕೃಷಿ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಹಾಗೂ ವಾತಾವರಣದಲ್ಲಿ ಹಸಿರು ಮನೆ ಅನಿಲಗಳ ಪ್ರಮಾಣ ಕಡಿಮೆ ಮಾಡುವ ಕುರಿತ ಪ್ಯಾರಿಸ್‌ ಒಪ್ಪಂದಕ್ಕೆ ಭಾರತವೂ ಸಹಿ ಹಾಕಿದೆ. ಮಿಲೇನಿಯಂ ಅಭಿವೃದ್ಧಿ ಗುರಿಯಿಂದ ಸುಸ್ಥಿರ ಅಭಿವೃದ್ಧಿಯತ್ತ ತಲುಪುವ ಗುರಿ ನಿಗದಿಪಡಿಸಿಕೊಂಡಿದ್ದೇವೆ. ನಾವೀಗ ಕೃಷಿಯನ್ನು ಸುಸ್ಥಿರಗೊಳಿಸಬೇಕು. ಬೀಜ ಉತ್ಪಾದನೆಯಿಂದ ಮಾರುಕಟ್ಟೆಯವರೆಗೆ ಕೃಷಿ ಸಂರಕ್ಷಣೆ, ಸಂವರ್ಧನೆ, ಸಂಸ್ಕರಣೆಯ ಮೂರು ಮೌಲ್ಯ ಶೃಂಖಲಗಳನ್ನು ಜೋಡಿಸಬೇಕಾಗಿದೆ. ಇದಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಜೈವಿಕ ವೈವಿಧ್ಯ ಕಾಪಾಡುವ, ಮಾರುಕಟ್ಟೆ ಕಂಡುಕೊಳ್ಳುವ ಹಾಗೂ ರೈತರ ಜೀವನಮಟ್ಟ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ.

ಭಾರತದ ಮುಂದಿರುವ ಸಮಸ್ಯೆ ಪರಿಹಾರ

  • ನಮ್ಮ ದೇಶದಲ್ಲಿ ಈಗಲೂ ಶೇಕಡ 70ರಷ್ಟು ಕೃಷಿ ಮಳೆ ಆಧಾರಿತ. ಇದರಿಂದ ಹವಾಮಾನ ವೈಪರೀತ್ಯದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಜಾಸ್ತಿ. ಹವಾಮಾನ ವೈಪರೀತ್ಯದಿಂದ ಕೃಷಿ ಮೇಲೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಪರಿಣಾಮ ಉಂಟಾಗುತ್ತದೆ. ಕೆಲವೆಡೆ ಮಂಜು ಕರಗಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಕರ್ನಾಟಕ ಸತತ ಬರದ ಸಮಸ್ಯೆ ಎದುರಿಸುತ್ತಿದೆ. ಹವಾಮಾನ ವೈಪರೀತ್ಯ ನಿವಾರಣೆ ಹಾಗೂ ಅದಕ್ಕೆ ಹೊಂದಿಕೊಳ್ಳುವುದು ಎರಡೂ ಸವಾಲಿನದು. ‘ಹವಾಮಾನ ಚತುರ ಕೃಷಿ’ಯಿಂದ ಈ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು. ಇದಕ್ಕಾಗಿ ಬೀಜ ಉತ್ಪಾದನೆಯಿಂದ ಮಾರುಕಟ್ಟೆವರೆಗೆ ಬೇರೆ ಬೇರೆ ತಂತ್ರಜ್ಞಾನಗಳ ಮೊರೆ ಹೋಗಬೇಕಿದೆ.
  • ಪರಿಹಾರ:
  • ನೀರು ಕಡಿಮೆ ಬಳಸುವ, ರೋಗ ನಿರೋಧಕತೆ ಹೊಂದಿರುವ, ಇಳುವರಿ ಜಾಸ್ತಿ ಕೊಡುವ ತಳಿಗಳ ಸುಧಾರಣೆ, ವಂಶಾಭಿವೃದ್ಧಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಬಳಕೆ, ನೀರನ್ನು ಸಮರ್ಥವಾಗಿ ಬಳಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ಕಾರ್ಮಿಕರ ಸಮಸ್ಯೆಗೆ ಸೂಕ್ತ ಯಾಂತ್ರೀಕರಣದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಕಟಾವಿಗೆ ಮುನ್ನ ಮತ್ತು ನಂತರ ಶೇಕಡ 15ರಿಂದ ಶೇ 20ರಷ್ಟು ಬೆಳೆ ನಷ್ಟವಾಗುತ್ತಿದೆ. ಇದರ ಒಟ್ಟು ಮೌಲ್ಯ ₹ 92 ಸಾವಿರ ಕೋಟಿ. ಈ ನಷ್ಟವನ್ನು ತಡೆಯಬೇಕಿದೆ.

ಕರ್ನಾಟಕದ ನೀರಿನ ಬರ

  • ರಾಜ್ಯದಾದ್ಯಂತ ಕೃಷಿ ಹೊಂಡಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಸೂಕ್ಷ್ಮ ನೀರಾವರಿಯನ್ನು ಜೋಡಿಸಬೇಕು. ಹನಿ ನೀರಾವರಿ, ಸ್ಪ್ರಿಂಕ್ಲರ್‌ ಬಳಸುವ ಮೂಲಕ ನೀರು ಪೋಲಾಗುವುದನ್ನು ತಡೆಯಬೇಕು. ನಿಯಂತ್ರಿತ ನೀರಾವರಿ ಪದ್ಧತಿ ಬಳಕೆ ಈ ನಿಟ್ಟಿನಲ್ಲಿ ಹೆಚ್ಚು ಸೂಕ್ತ.
  • ಸೆನ್ಸರ್‌ಗಳನ್ನು ಬಳಸಿ ಸಸಿಗಳಿಗೆ ಎಷ್ಟು ನೀರು ಅಗತ್ಯವಿದೆ ಎಂದು ಕಂಡುಕೊಂಡು ಅಷ್ಟೇ ಪ್ರಮಾಣದ ನೀರುಣಿಸುವ ವ್ಯವಸ್ಥೆ ಇದು. ಭತ್ತ ಹಾಗೂ ಕಬ್ಬಿಗೂ ಚತುರ ನೀರಾವರಿ ಬಳಸಿ ಎರಡರಿಂದ ಮೂರು ಪಟ್ಟು ಹೆಚ್ಚು ಇಳುವರಿ ಪಡೆಯಬಹುದು. ಈಗ ಒಂದು ಕೆ.ಜಿ ಭತ್ತ ಬೆಳೆಯಲು ಕನಿಷ್ಠ 1,600 ಲೀಟರ್‌ ನೀರು ಬೇಕು. ಗದ್ದೆಗೆ ನೀರು ಕಟ್ಟುವ ಬದಲು, ಚತುರ ಕೃಷಿ ಅಳವಡಿಸಿದರೆ ನೀರಿನ ಬಳಕೆ ಕಡಿಮೆ ಆಗುತ್ತದೆ. ಎರಡು ಪಟ್ಟು ಹೆಚ್ಚು ಇಳುವರಿ ಬರುತ್ತದೆ. ಬೇರೆಡೆ ಯಶಸ್ವಿಯಾದ ನೀರಾವರಿ ಮಾದರಿಗಳನ್ನು ಕಬ್ಬಿಗೂ ಬಳಸಬಹುದು.
  • ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವುದು ದೊಡ್ಡ ಸವಾಲು. ದೇಶದಲ್ಲಿ ರೈತರ ಆದಾಯ ದ್ವಿಗುಣವಾಗಲು 14 ವರ್ಷ ಕಾಯಬೇಕಾಯಿತು. ಇಂತಹ ಸ್ಥಿತಿ ಆತ್ಮಹತ್ಯೆಯಂತಹ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.
  • ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ಎದುರಿಸುವುದರ ಜೊತೆಯಲ್ಲೇ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಇತ್ತೀಚೆಗೆ ವ್ಯಾಪಕವಾಗಿ ಮಾತುಕತೆ ನಡೆಯುತ್ತಿದೆ. ಸಮನ್ವಿತ ಕೃಷಿ ಇದಕ್ಕೆ ಸೂಕ್ತ ಪರಿಹಾರ. ಬೆಳೆ ಬೆಳೆಯುವುದರ ಜೊತೆಗೆ ಪಶುಸಂಗೋಪನೆ, ಕೋಳಿ ಸಾಕಣೆ, ಜೇನು ಕೃಷಿ, ಅಣಬೆ ಕೃಷಿ, ಒಂದು ಬೆಳೆಯ ಬದಲು ಎರಡು ಬೆಳೆ ತೆಗೆಯುವುದು, ಎರಡು ಪ್ರಮುಖ ಬೆಳೆಗಳ ನಡುವೆ ದ್ವಿದಳ ಧಾನ್ಯ ಬೆಳೆಯುವುದರಿಂದ ಕೃಷಿ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಬಹುತೇಕ ಕೃಷಿ ಉತ್ಪನ್ನಗಳು ಬೇಗ ಹಾಳಾಗುವಂತಹವು. ಇವುಗಳ ಶೇಖರಣೆಗೆ ಸರಣಿ ಶೀತಲ ಗೃಹಗಳನ್ನು ನಿರ್ಮಿಸುವುದು, ಸಾಗಣೆ ಹಾಗೂ ಮೌಲ್ಯವರ್ಧನೆಗೆ ವ್ಯವಸ್ಥೆ ಕಲ್ಪಿಸುವ ಕೆಲಸಗಳಾಗಬೇಕು.
  • ರೈತರ ಆದಾಯ ಹೆಚ್ಚಾಗಬೇಕಾದರೆ ಕೃಷಿ ವೈವಿಧ್ಯ ಹೆಚ್ಚಬೇಕು. ನಮ್ಮಲ್ಲಿ ಸಣ್ಣ ಹಿಡುವಳಿ ಜಾಸ್ತಿ. ಹಾಗಾಗಿ 50ರಿಂದ 60 ರೈತರು ಸೇರಿಕೊಂಡು ಮಾರುಕಟ್ಟೆ ಕಂಡುಕೊಳ್ಳಬೇಕು. ಇದರಿಂದ ಕೃಷಿಯ ಕಾರ್ಯಕ್ಷಮತೆಯೂ ಹೆಚ್ಚುತ್ತದೆ.

ವಿದೇಶೀ ತಂತ್ರಜ್ಞಾನ ಮತ್ತು ಕೈಗಾರಿಕೆಗೆ ಅಮದು ಉತ್ತೇಜನ

  • ದೇಸಿ ಬಳಕೆಗೆ ಯೋಗ್ಯವಾದ ಯಂತ್ರೋಪಕರಣ ತಯಾರಿಸಲು ಇದು ಸಹಕಾರಿ. ಉದಾಹರಣೆಗೆ ಸಣ್ಣ ಪವರ್‌ ಟಿಲ್ಲರ್‌, ತೆಂಗಿನ ಕಾಯಿ ಕೀಳಲು ರೋಬೊಟಿಕ್ಸ್‌ ಯಂತ್ರ ಉತ್ಪಾದನೆಗೆ ಇದು ಅನುಕೂಲ ಕಲ್ಪಿಸಲಿದೆ. ಆದರೆ, ಕೈಗಾರಿಕೆ ಹೆಚ್ಚಾದಂತೆ ಕೃಷಿ ಭೂಮಿ ಕಡಿಮೆ ಆಗುವುದು ಸಹಜ. ಜಾಗ ಇರುವಷ್ಟೇ ಇರುತ್ತದೆ. ಅದನ್ನು ಕೃಷಿಯ ಜೊತೆಗೆ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳ ಜೊತೆಗೂ ಹಂಚಿಕೊಳ್ಳಬೇಕು. ಇದಕ್ಕೆ ಪ್ರತಿಯಾಗಿ ಕೃಷಿ ಉತ್ಪಾದಕತೆ ಹೆಚ್ಚಿಸುವ ಮಾರ್ಗವನ್ನು ಅನುಸರಿಸಬಹುದು.

2017ರ ನಂತರ ಬೆಳಯಲ್ಲಿ ಪ್ರಮುಖ ಆದ್ಯತೆ

  • ನಾವು ಆಹಾರ ಭದ್ರತೆ ಜೊತೆ ಪೌಷ್ಟಿಕ ಸುರಕ್ಷೆ ಸಾಧಿಸಬೇಕಾಗಿದೆ. ಕೃಷಿ ಕ್ರಾಂತಿ ನಡೆದಾಗ ಕಾರ್ಬೊಹೈಡ್ರೇಟ್‌ಗೆ ಆದ್ಯತೆ ನೀಡಿದ್ದೆವು. ಈಗ ಪ್ರೊಟೀನ್‌ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಮಕ್ಕಳಿಗೆ ಕಬ್ಬಿಣಾಂಶ, ವಿಟಮಿನ್‌ ಎ ಅನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಹೆಚ್ಚು ಪ್ರೊಟೀನ್‌ ಒದಗಿಸಲು ದ್ವಿದಳ ಧಾನ್ಯ, ಮಾಂಸ, ಹಾಲು, ಮೊಟ್ಟೆ ಉತ್ಪಾದನೆ ಹೆಚ್ಚಬೇಕು. ಪೌಷ್ಟಿಕಾಂಶ ಕೊರತೆ ನೀಗಿಸುವಲ್ಲಿ ತೃಣಧಾನ್ಯಗಳೂ (ಮಿಲೆಟ್ಸ್‌ ) ಸಹಕಾರಿ. ಇವು ಕಡಿಮೆ ನೀರಿದ್ದರೂ ಚೆನ್ನಾಗಿ ಬೆಳೆಯುತ್ತವೆ. ಹವಾಮಾನ ವೈಪರೀತ್ಯಕ್ಕೆ ಒಗ್ಗಿಕೊಳ್ಳುವ ಸಾಮರ್ಥ್ಯ ಇವುಗಳಿಗಿದೆ. ನನ್ನ ಪ್ರಕಾರ ತೃಣಧಾನ್ಯಗಳೇ ಭವಿಷ್ಯದ ಆಹಾರ.[೨೨]

ಕೊರೊನಾ ಸೋಂಕು ಮತ್ತು ಕೃಷಿ ಸಮಸ್ಯೆ

  • ಭಾರತದಲ್ಲಿ ಡಿಸೆಂಬರ್ ೨೦೧೯ ರಿಂದ ಹರಡಿದಕೊರೊನಾ ವೈರಸ್‌ಸೋಂಕು ಕೃಷಿಯಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಸೋಖು ಹರಡದಂತೆ ತಡೆಯಲು ಲಾಕ್‌ಡೌನ್‌ ಎಂಬ ಸಂಚಅರ ನಿಯಮತ್ರನ ಹೇರಲಾಯಿತು. ಇದರಿಂದ ಭಾರತದ ಆತ್ಮವೆನಿಸಿದ ಗ್ರಾಮೀಣ ಪ್ರದೇಶಗಳು ಅಕ್ಷರಶಃ ನಲುಗಿವೆ. *ಬಾರತದ ಗ್ರಾಮೀಣ ಪ್ರದೇಶಗಳಲ್ಲಿ ೨೦೧೯ -೨೦೨೦ ರಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಆಗಿಗಿ ಹರಡಿಲ್ಲ. ಆದರೆ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕೂಲಿಗಳಿಗೆ ಇದ್ದಕ್ಕಿದ್ದಂತೆ ಸಂಪಾದನೆ ನಿಂತು ಹೋಯಿತು. ಅವರ ಬದುಕು ದುಸ್ತರವಾಯಿತು.
  • ಹಳ್ಳಿಗಳಲ್ಲೇ ಉಳಿದು ಬೇಸಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು ೨೦೨೦ ರ ಕೊರೊನಾ ವೈರಸ್‌ಸೋಂಕು ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಬೆಳೆದ ಹಣ್ಣು, ತರಕಾರಿಗಳನ್ನು ಸಕಾಲಕ್ಕೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಿಲ್ಲ. ತಮ್ಮ ಕೃಷಿ ಉತ್ಪನ್ನಗಳನ್ನು ಅನಿವಾರ್ಯವಾಗಿ ಹಸುಗಳಿಗೆ ತಿನ್ನಿಸುತ್ತಿದ್ದಾರೆಅದಕ್ಕೂ ಹೆಚ್ಚಾದುದನ್ನು ಚೆಲ್ಲುತ್ತಿದ್ದಾರೆ.
  • ಉದಾಹರಣೆಗೆ ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಟನ್‌ಗಟ್ಟಲೆ ದ್ರಾಕ್ಷಿಯನ್ನು ಗೊಬ್ಬರದ ಗುಂಡಿಗೆ ಸುರಿಯಲಾಯಿತು. ಆದರೆ ಮನೆಯಲ್ಲೇ ಉಳಿಯಿರಿ ಎಂಬ ಲಾಕ್‌ಡೌನ್ ಮಾದರಿಯ ಆದೇಶ ಮುಂದುವರಿದರೆ, ಲಾಕ್‌ಡೌನ್‌ ಆದೇಶ ಬೇಗ ತೆರವಾಗದಿದ್ದರೆ ಹಳ್ಳಿಗಳಲ್ಲಿರುವ ರೈತರು ದೊಡ್ಡಮಟ್ಟದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಈವರೆಗೆ ಸರ್ಕಾರಗಳ ಪಾಲಿಗೆ ಕೃಷಿ ಕ್ಷೇತ್ರದ ಸಂಕಷ್ಟ ಎಂದರೆ ಅದು ಕೇವಲ ಮಾರುಕಟ್ಟೆಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಸಮಸ್ಯೆಯಾಗಿತ್ತು. ಆದರೆ ಈಗ ಅದರ ಸ್ವರೂಪ ಬದಲಾಗಿದೆ. ಸರ್ಕಾರಗಳ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಉತ್ಪಾದನೆಯ ದೊಡ್ಡಕುಸಿತ ಇಡೀ ದೇಶದಲ್ಲಿ ದೊಡ್ಡಸಮಕಟವನ್ನೇ ತರಬಹುದು ಎಂಬುದು ತಜ್ಞರ ಅಭಿಪ್ರಾಯ.[೨೩]

ನೋಡಿ

ಉಲ್ಲೇಖ

  1. gdp-foodgrains-allied-sectors[[೧]]
  2. India’s Agricultural Exports Climb to Record High, United States Department of Agriculture (2014)
  3. http://faostat.fao.org/site/567/default.aspx#ancor
  4. http://www.worldbank.org/en/country/india
  5. http://www.bloomberg.com/news/2011-09-08/india-allows-wheat-exports-for-the-first-time-in-four-years-1-.html
  6. "Export of marine products from India (see statistics section)". Central Institute of Fisheries Technology, India. 2008.
  7. "The state of world fisheries and aquaculture, 2010" (PDF). FAO of the United Nations. 2010.
  8. http://www.fao.org/fishery/countryprofiles/search/en
  9. http://www.economist.com/node/21541017
  10. Steven Vertovik (Robin Cohen, ed.) (1995). The Cambridge survey of world migration. pp. 57–68
  11. https://web.archive.org/web/20110602102112/http://planningcommission.nic.in/plans/stateplan/sdr_pdf/shdr_pun04.pdf
  12. http://www.thehindu.com/todays-paper/tp-national/tp-kerala/state-to-switch-fully-to-organic-farming-by-2016-mohanan/article6517859.ece
  13. S. Siebert et al (2010), Groundwater use for irrigation – a global inventory, Hydrol. Earth Syst. Sci., 14, pp. 1863–1880
  14. Agricultural irrigated land (% of total agricultural land) The World Bank (2013[[೨]]
  15. India: Basic Information". United States Department of Agriculture - Economic Research Service. August 2011.[[೩]]
  16. "FAOSTAT: Production-Crops, 2010 data". Food and Agriculture Organisation of the United Nations. 2011.
  17. Adam Cagliarini and Anthony Rush (June Quarter, 2011). "Bulletin: Economic Development and Agriculture in India" (PDF). Reserve Bank of Australia. pp. 15–22.
  18. Production / Crops / India". FAOSTAT. 2014.[[೪]]
  19. Adam Cagliarini and Anthony Rush (June Quarter, 2011). "Bulletin: Economic Development and Agriculture in India
  20. Mahadevan, Renuka (December 2003). "PRODUCTIVITY GROWTH IN INDIAN AGRICULTURE: THE ROLE OF GLOBALISATION AND ECONOMIC REFORM". Asia-Pacific Development Journal 10 (2): 57–72.
  21. ಹಿಂಗಾರು ಬಿತ್ತನೆ ಅಲ್ಪ ಇಳಿಕೆ
  22. ಚತುರ ಕೃಷಿಯಿಂದ ರೈತರ ಬವಣೆಗೆ ಪರಿಹಾರ: ಕೃಷಿ ವಿಜ್ಞಾನಿ ಡಾ. ಎಸ್‌.ಅಯ್ಯಪ್ಪನ್‌;ಪ್ರವೀಣ್‌ ಕುಮಾರ್‌ ಪಿ.ವಿ.;26 Feb, 2017
  23. [https://www.prajavani.net/op-ed/market-analysis/rural-india-stares-at-a-larger-crisis-717911.html ಲಾಕ್‌ಡೌನ್‌ಗೆ ನಲುಗಿದ ಗ್ರಾಮೀಣ ಭಾರತ: ದುರಿತ ಕಾಲದ ದುಸ್ತರ ಬದುಕು;ಅನ್ನಪೂರ್ಣ ಸಿಂಗ್‌ Updated: 06 ಏಪ್ರಿಲ್ 2020,]