ಪ್ರಕಾಶ್ ಕಡಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: '''ಪ್ರಕಾಶ ಕಡಮೆ''' ಕವಿ, ಬರಹಗಾರ. ವರ್ತಮಾನದ ತಲ್ಲಣಗಳಿಗೆ ಸದಾ ಮುಖಾಮುಖಿಯಾಗಿರ...
 
No edit summary
೧ ನೇ ಸಾಲು: ೧ ನೇ ಸಾಲು:
'''ಪ್ರಕಾಶ ಕಡಮೆ''' ಕವಿ, ಬರಹಗಾರ. ವರ್ತಮಾನದ ತಲ್ಲಣಗಳಿಗೆ ಸದಾ ಮುಖಾಮುಖಿಯಾಗಿರುವರು. ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಶನೀಡುವುದೇ ಇವರ ಕವನದ ಮೂಲ ಮಂತ್ರ. ಇವರ ಕೃತಿ ಜನಪರ ಕಾಳಜಿಯದ್ದಾಗಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಕಡಮೆಯವರು ಹುಬ್ಬಳ್ಳಿಯಲ್ಲಿ ಬದುಕು ಕಟ್ಟಿಕೊಂಡವರು. ಸಾಹಿತ್ಯ ಕೃಷಿ ನಡೆಸಿದವರು.
'''ಪ್ರಕಾಶ ಕಡಮೆ''' <ref>https://www.youtube.com/watch?v=27bRYuaOTWE</ref><ref>https://vijaykarnataka.com/news/dharawada/stoma-storytelling/ articleshow/72318944.cms</ref>ಕವಿ, ಬರಹಗಾರ. ವರ್ತಮಾನದ ತಲ್ಲಣಗಳಿಗೆ ಸದಾ ಮುಖಾಮುಖಿಯಾಗಿರುವರು. ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಶನೀಡುವುದೇ ಇವರ ಕವನದ ಮೂಲ ಮಂತ್ರ. ಇವರ ಕೃತಿ ಜನಪರ ಕಾಳಜಿಯದ್ದಾಗಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಕಡಮೆಯವರು ಹುಬ್ಬಳ್ಳಿಯಲ್ಲಿ ಬದುಕು ಕಟ್ಟಿಕೊಂಡವರು. ಸಾಹಿತ್ಯ ಕೃಷಿ ನಡೆಸಿದವರು.


==ಪರಿಚಯ==
==ಪರಿಚಯ==

೧೨:೧೪, ೨೯ ಮಾರ್ಚ್ ೨೦೨೦ ನಂತೆ ಪರಿಷ್ಕರಣೆ

ಪ್ರಕಾಶ ಕಡಮೆ [೧][೨]ಕವಿ, ಬರಹಗಾರ. ವರ್ತಮಾನದ ತಲ್ಲಣಗಳಿಗೆ ಸದಾ ಮುಖಾಮುಖಿಯಾಗಿರುವರು. ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಶನೀಡುವುದೇ ಇವರ ಕವನದ ಮೂಲ ಮಂತ್ರ. ಇವರ ಕೃತಿ ಜನಪರ ಕಾಳಜಿಯದ್ದಾಗಿದೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಕಡಮೆಯವರು ಹುಬ್ಬಳ್ಳಿಯಲ್ಲಿ ಬದುಕು ಕಟ್ಟಿಕೊಂಡವರು. ಸಾಹಿತ್ಯ ಕೃಷಿ ನಡೆಸಿದವರು.

ಪರಿಚಯ

  • ಪ್ರಕಾಶ್ ಕಡಮೆಯವರು ಕವಿಗಳಾಗಿ ಆಪ್ತವಲಯದಲ್ಲಿ ಜನಜನಿತರು. ಹೊಸ ಪ್ರತಿಭೆಗಳನ್ನು ಸದಾ ಬೆನ್ನು ತಟ್ಟುವ ತಮ್ಮ ಪರಿಯಿಂದಾಗಿ ಎಲ್ಲರಿಗೂ ಪರಿಚಿತರು. ಸಾಹಿತ್ಯದ ಓದುಗರೂ, ಪ್ರೋತ್ಸಾಹಕರೂ ಆಗಿರುವ ಕವಿಹೃದಯದ ಪ್ರಕಾಶ್ ಕಡಮೆಯವರು ತಮ್ಮ ಸುತ್ತಲಿನ ಜೀವನವನ್ನು ಸದಾ ಬೆರಗಿನಿಂದ ಅವಲೋಕಿಸಿದವರು.
  • ಹುಟ್ಟೂರಿನ ಬಗ್ಗೆ ಒಂದು ಹಿಡಿ ಹೆಚ್ಚೇ ಪ್ರೀತಿ ಇಟ್ಟುಕೊಂಡವರು. ಹಲವು ಬಗೆಯ ಸಾಹಿತ್ಯಗೋಷ್ಠಿಗಳನ್ನು ತಮ್ಮ ಮನೆಯಂಗಳದಲ್ಲಿ ನಡೆಸಿಕೊಂಡು ಬರುತ್ತಾ "ನಾಗಸುಧೆ ಜಗಲಿ"ಯನ್ನು ಸಾಹಿತ್ಯದ ಅಂಗಳವನ್ನಾಗಿಸಿರುವ ಕಡಮೆ ದಂಪತಿಗಳು ಈ ಬಾರಿ ನಮ್ಮೊಡನೆ ಇರುವುದು ಇಲ್ಲಿನ ಸಾಹಿತ್ಯಾಸಕ್ತರಿಗೂ ಹೆಮ್ಮೆ ತಂದಿದೆ.
  • 1958 ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದಲ್ಲಿ ಜನನ. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು.
  • ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ.

ವಿವಾಹ ಜೀವನ

  • ಪ್ರಕಾಶ್‌, ಸುನಂದ[೩] ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದು. ಪ್ರಕಾಶ್‌ ಸುನಂದರ ಅಣ್ಣನ ಸ್ನೇಹಿತ. ಆಗಾಗ ಮನೆಗೆ ಬರುತ್ತಿದ್ದರು. ಪತ್ನಿ ಸುನಂದ ಅವರು ಬಿ.ಕಾಂ. ಓದುವಾಗ ಪ್ರಕಾಶ್‌‍ರ ಮೊದಲ ಕವನ ಸಂಕಲನ “ಗಾಣದೆತ್ತು ಮತ್ತು ತೆಂಗಿನಮರ’ ಬಿಡುಗಡೆಯಾಗಿತ್ತು. ಅದಕ್ಕೆ ಸುನಂದ ಅವರು ಪ್ರತಿಕ್ರಿಯೆ ಬರೆದು ಕಳಿಸಿದ್ದರು.
  • ಆಗಲೇ ಪ್ರಕಾಶ್‌ ಅವರು ಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದರು. ಆದರೆ ಅವರಿಗೆ ಗಟ್ಟಿ ಸರ್ಕಾರಿ ಕೆಲಸ ಇರಲಿಲ್ಲ. ಒಂದು ಅರೆಕಾಲಿಕ ವೃತ್ತಿಯಲ್ಲಿದ್ದರು. ಸುನಂದ ಅವರನ್ನೇ ಮದುವೆಯಾಗೋದು ಅಂತ ಹೇಳಿದಾಗ, ಅವರಿಗೆ ಸರಿಯಾದ ಉದ್ಯೋಗ ಇಲ್ಲವೆಂದು, ಮನೆಯಲ್ಲಿ ಬೇಡ ಎಂದಿದ್ದರು.
  • ಆಗ ಸುನಂದ ಅವರು, ಪ್ರಕಾಶ್‌ ಅವರು ತುಂಬಾ ಚೆನ್ನಾಗಿ ಕವಿತೆ ಬರೆಯುತ್ತಾರೆ ಎಂದಿದ್ದರು. ಅದಕ್ಕೆ, ಕವಿತೆಯೇನು ಹೊಟ್ಟೆ ತುಂಬಿಸುತ್ತಾ? ಎಂದು ಕೇಳಿ ಮನೆಯಲ್ಲಿ ಅಸಮಾಧಾನಗೊಂಡು ಸುನಂದೆ ಬಾಯಿ ಮುಚ್ಚಿಸಿದ್ದರು. ಕಡೆಗೂ ಮನೆಯಲ್ಲಿ ಒಪ್ಪಿಸಿ ಸುನಂದ ಅವರು ಪ್ರಕಾಶ್‌ರನ್ನು ಮದುವೆ ಆಗುತ್ತಾರೆ. 1988ರಲ್ಲಿ ಸುನಂದ ಅವರು ಬಿ.ಕಾಂ.ನ ಕೊನೆಯ ವರ್ಷದಲ್ಲಿದ್ದಾಗ ಅವರಿಗೆ ಮದುವೆಯಾಗುತ್ತದೆ. ನಂತರ 3 ತಿಂಗಳಿಗೇ ಪ್ರಕಾಶ್‌ ಅವರಿಗೆ ಸರ್ಕಾರಿ ನೌಕರಿಯೂ ಸಿಗುತ್ತದೆ.

ಕೃತಿಗಳು

  1. ಗಾಣದೆತ್ತು ಮತ್ತು ತೆಂಗಿನಮರ

ಉಲ್ಲೇಖ

  1. https://www.youtube.com/watch?v=27bRYuaOTWE
  2. https://vijaykarnataka.com/news/dharawada/stoma-storytelling/ articleshow/72318944.cms
  3. https://www.udayavani.com/supplements/women/writer-sundha-prakash-kadame