ಅಚ್ಚುಮೊಳೆ ಜೋಡಿಸುವ ಯಂತ್ರಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 1 langlinks, now provided by Wikidata on d:q2578277; 3 langlinks remaining
೫ ನೇ ಸಾಲು: ೫ ನೇ ಸಾಲು:


==ಆರಂಭದ ಕಾಲದ ಯಂತ್ರಗಳು==
==ಆರಂಭದ ಕಾಲದ ಯಂತ್ರಗಳು==
ಡಾ. ವಿಲಿಯಂ ಚರ್ಚ್[[en:William_Church_(inventor)]] ಅಚ್ಚುಮೊಳೆ ಜೋಡಿಸುವ ಪೂರ್ಣ ಯಂತ್ರವನ್ನು ಮೊಟ್ಟಮೊದಲು ಕಂಡುಹಿಡಿದು (1822) ಕೀಲಿಮಣೆಯನ್ನು ಅಳವಡಿಸಿ ಯಂತ್ರವನ್ನು ನಡೆಸುವ ವಿಧಾನವನ್ನು ಪ್ರಾರಂಭಿಸಿದ. ಇವನ ಯಂತ್ರದಲ್ಲಿ ಅಕ್ಷರಗಳು ಎರಕವಾಗಿ ಅಕ್ಷರಪಥಕ್ಕೆ ಬಂದು ಬೀಳುತ್ತಿದ್ದುವು. ಆ ಅಕ್ಷರಗಳನ್ನು ಬೇಕಾದ ಪಂಕ್ತಿಯ ಅಳತೆಗೆ ಕೈಯಿಂದ ಅನುಗೊಳಿಸಬೇಕಾಗಿತ್ತು. ಮುದ್ರಣವಾದ ಮೇಲೆ ಅಚ್ಚಿನ ಮೊಳೆಗಳನ್ನು ಕರಗಿಸುವ ಪಾತ್ರೆಗೆ ಸುರಿದು ಬೇರೆ ಅಚ್ಚಿನ ಮೊಳೆಗಳನ್ನು ಎರಕ ಹೊಯ್ದು ಮುದ್ರಿಸುವ ವಿಧಾನ ಇವನಿಂದ ಪ್ರಾರಂಭವಾಯಿತು. ಆದರೆ ಇವನ ಯಂತ್ರ ಬಳಕೆಗೆ ಬರಲಿಲ್ಲ.
ಡಾ. ವಿಲಿಯಂ ಚರ್ಚ್ ಅಚ್ಚುಮೊಳೆ ಜೋಡಿಸುವ ಪೂರ್ಣ ಯಂತ್ರವನ್ನು ಮೊಟ್ಟಮೊದಲು ಕಂಡುಹಿಡಿದು (1822) ಕೀಲಿಮಣೆಯನ್ನು ಅಳವಡಿಸಿ ಯಂತ್ರವನ್ನು ನಡೆಸುವ ವಿಧಾನವನ್ನು ಪ್ರಾರಂಭಿಸಿದ. ಇವನ ಯಂತ್ರದಲ್ಲಿ ಅಕ್ಷರಗಳು ಎರಕವಾಗಿ ಅಕ್ಷರಪಥಕ್ಕೆ ಬಂದು ಬೀಳುತ್ತಿದ್ದುವು. ಆ ಅಕ್ಷರಗಳನ್ನು ಬೇಕಾದ ಪಂಕ್ತಿಯ ಅಳತೆಗೆ ಕೈಯಿಂದ ಅನುಗೊಳಿಸಬೇಕಾಗಿತ್ತು. ಮುದ್ರಣವಾದ ಮೇಲೆ ಅಚ್ಚಿನ ಮೊಳೆಗಳನ್ನು ಕರಗಿಸುವ ಪಾತ್ರೆಗೆ ಸುರಿದು ಬೇರೆ ಅಚ್ಚಿನ ಮೊಳೆಗಳನ್ನು ಎರಕ ಹೊಯ್ದು ಮುದ್ರಿಸುವ ವಿಧಾನ ಇವನಿಂದ ಪ್ರಾರಂಭವಾಯಿತು. ಆದರೆ ಇವನ ಯಂತ್ರ ಬಳಕೆಗೆ ಬರಲಿಲ್ಲ.


==ಅಚ್ಚಿನ ಮೊಳೆ ಜೋಡಿಸುವ ಯಂತ್ರ==
==ಅಚ್ಚಿನ ಮೊಳೆ ಜೋಡಿಸುವ ಯಂತ್ರ==

೧೬:೧೪, ೨೩ ಜನವರಿ ೨೦೨೦ ನಂತೆ ಪರಿಷ್ಕರಣೆ

ಅಚ್ಚುಮೊಳೆ ಜೋಡಿಸುವ ಯಂತ್ರಗಳು ಪುಸ್ತಕ ಮುದ್ರಣಾಲಯಗಳಲ್ಲಿ ಕೈಯಿಂದ ಅಚ್ಚಿನ ಮೊಳೆ ಜೋಡಿಸುವುದನ್ನು ತಪ್ಪಿಸಿದ ಯಂತ್ರಗಳು.ಸರಿಸುಮಾರು ೧೯೯೦ರವರೆಗೆ ವಿಶ್ವದ ಎಲ್ಲೆಡೆ, ಡಿಜಿಟಲ್ ಮುದ್ರನ ಬರುವವರೆಗೆ ಬಹುವಾಗಿ ಬಾಳಿಕೆಯಲ್ಲಿ ಇದ್ದ ಯಂತ್ರಗಳು.

ಅನಿವಾರ್ಯತೆ

ಮುದ್ರಣ ಕಲೆ ೧೪೦೦ರಲ್ಲಿ ಜರ್ಮನಿಯಲ್ಲಿ ಗುಟೆನ್ ಬರ್ಗ್ ಎಂಬಾತ ಕಂಡು ಹಿಡಿದನು. ಆಗಿನಿಂದಲೂ, ಮುದ್ರಿಸುವುದು, ಕೈಯಿಂದಲೇ ಮಾಡಲಾಗುತ್ತಿತ್ತು. ಇದು ಕಷ್ಟದ ಮತ್ತು ಸಮಯ ಹಿಡಿಯುವ ಕೆಲಸ ಆಗಿತ್ತು. ಈ ವಿಧಾನ ಬಹು ನಿಧಾನ. ಎಂಥ ನಿಪುಣ ಕೆಲಸಗಾರನಿಗಾದರೂ ಕೈಯಿಂದ ಅಚ್ಚುಮೊಳೆ ಜೋಡಿಸುವಾಗ ತಪ್ಪುಗಳಾಗುವುದು ಅನಿವಾರ್ಯ. ಆದುದರಿಂದ ಈ ಕೆಲಸವನ್ನು ಸುಲಭವಾಗಿ, ಸುಗಮವಾಗಿ ಮಾಡುವ ವಿಧಾನಗಳನ್ನು ಕುರಿತ ಪಾಶ್ಚಾತ್ಯ ದೇಶಗಳಲ್ಲಿ ಮುದ್ರಣಕಲೆಯನ್ನು ಅರಿತ ಅನೇಕ ನಿಪುಣರು ಹತ್ತೊಂಬತ್ತನೆಯ ಶತಮಾನದಲ್ಲಿ ಸಂಶೋಧನೆ ನಡೆಸಿದರು. ಇದರ ಪರಿಣಾವಾಗಿ ಅಚ್ಚಿನ ಮೊಳೆ ಜೋಡಿಸುವ ಅನೇಕ ಯಂತ್ರಗಳು ಬಳಕೆಗೆ ಬಂದುವು.

ಆರಂಭದ ಕಾಲದ ಯಂತ್ರಗಳು

ಡಾ. ವಿಲಿಯಂ ಚರ್ಚ್ ಅಚ್ಚುಮೊಳೆ ಜೋಡಿಸುವ ಪೂರ್ಣ ಯಂತ್ರವನ್ನು ಮೊಟ್ಟಮೊದಲು ಕಂಡುಹಿಡಿದು (1822) ಕೀಲಿಮಣೆಯನ್ನು ಅಳವಡಿಸಿ ಯಂತ್ರವನ್ನು ನಡೆಸುವ ವಿಧಾನವನ್ನು ಪ್ರಾರಂಭಿಸಿದ. ಇವನ ಯಂತ್ರದಲ್ಲಿ ಅಕ್ಷರಗಳು ಎರಕವಾಗಿ ಅಕ್ಷರಪಥಕ್ಕೆ ಬಂದು ಬೀಳುತ್ತಿದ್ದುವು. ಆ ಅಕ್ಷರಗಳನ್ನು ಬೇಕಾದ ಪಂಕ್ತಿಯ ಅಳತೆಗೆ ಕೈಯಿಂದ ಅನುಗೊಳಿಸಬೇಕಾಗಿತ್ತು. ಮುದ್ರಣವಾದ ಮೇಲೆ ಅಚ್ಚಿನ ಮೊಳೆಗಳನ್ನು ಕರಗಿಸುವ ಪಾತ್ರೆಗೆ ಸುರಿದು ಬೇರೆ ಅಚ್ಚಿನ ಮೊಳೆಗಳನ್ನು ಎರಕ ಹೊಯ್ದು ಮುದ್ರಿಸುವ ವಿಧಾನ ಇವನಿಂದ ಪ್ರಾರಂಭವಾಯಿತು. ಆದರೆ ಇವನ ಯಂತ್ರ ಬಳಕೆಗೆ ಬರಲಿಲ್ಲ.

ಅಚ್ಚಿನ ಮೊಳೆ ಜೋಡಿಸುವ ಯಂತ್ರ

ಯಂಗ್ ಮತ್ತು ಡೆಲ್‍ಕಾಂಬರ್ ಕಂಡುಹಿಡಿದ (1840) ಅಚ್ಚಿನ ಮೊಳೆ ಜೋಡಿಸುವ ಯಂತ್ರ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಸ್ವಲ್ಪ ಪ್ರಚಾರಕ್ಕೆ ಬಂದಿತು. ಈ ಯಂತ್ರದಲ್ಲಿಯೂ ಬೇಕಾದ ಅಳತೆಗೆ ಪಂಕ್ತಿಗಳನ್ನು ಅಳವಿಡಿಸುವ ಕಾರ್ಯವನ್ನು ಕೈಯಿಂದಲೇ ಮಾಡಬೇಕಾಗಿತ್ತು. ಆರಂಭಕಾಲದ ಎಲ್ಲ ಜೋಡಿಸುವ ಯಂತ್ರಗಳೂ ಮೊಳೆಗಳನ್ನು ಎರಕ ಹೊಯ್ದು ಜೋಡಿಸುವ ಕೆಲಸಕ್ಕೆ ಮಾತ್ರ ಸಂಬಂಧಿಸಿದ್ದುವು. ಪಂಕ್ತಿಗಳನ್ನು ಸರಿಯಾದ ಅಳತೆಗೆ ಹೊಂದಿಸುವ ಮತ್ತು ಮುದ್ರಣವಾದ ಮೇಲೆ ಅಚ್ಚಿನ ಮೊಳೆಗಳನ್ನು ವಿಂಗಡಿಸಿ, ಸಂಬಂಧಿಸಿದ ಖಾನೆಗೆ ಹಂಚುವ ಕೆಲಸವನ್ನು ಯಂತ್ರದಿಂದಲೇ ಸಾಧಿಸುವ ಸಲುವಾಗಿ ಮುದ್ರಣ ಕೆಲಸದಲ್ಲಿ ನುರಿತ ಅನೇಕ ನಿಪುಣರು ಹೊಸ ಬಗೆಯ ಯಂತ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಆದರೆ ಯಾರೂ ಪೂರ್ಣ ಜಯವನ್ನು ಸಾಧಿಸಲಿಲ್ಲ.

ವಾಣಿಜ್ಯ ಉದ್ದೇಶದ ಯಂತ್ರಗಳು

ಇಂಗ್ಲೆಂಡಿನಲ್ಲಿ ಚಾರಲ್ಸ್ ಕಾಸ್ಟೆನ್ ಬೆಯಿನ್ ಒಂದು ಯಂತ್ರವನ್ನು ತಯಾರಿಸಿದ (1869). ಈ ಯಂತ್ರವನ್ನು ಟೈಮ್ಸ್ ಪತ್ರಿಕೆಯ ಮುದ್ರಣಕ್ಕೆ 1904ರಲ್ಲಿ ಬಳಸಲಾಯಿತು. ಅದೇ ವರ್ಷ ರಾಬರ್ಟ್ ಹಾಟಿರ್‍ಸ್ಲಿ ಎಂಬುವ ಕಂಡುಹಿಡಿದ ಮತ್ತೊಂದು ಯಂತ್ರವನ್ನು ವೆಲ್ಸ್ ಡೆಯ್ಲಿ ಎಂಬ ಸಮಾಚಾರ ಪತ್ರಿಕೆಯ ಮುದ್ರಣಕ್ಕೆ ಉಪಯೋಗಿಸಲಾಯಿತು. ನ್ಯೂಯಾರ್ಕಿನಲ್ಲಿ ಜೆ.ಡಬ್ಲ್ಯೂ. ಪಾಯ್‍ಗೆ ಎಂಬುವನು ಅಪಾರ ಹಣ ವೆಚ್ಚ ಮಾಡಿ ತಯಾರಿಸಿದ (1887) ಮೊಳೆಜೋಡಿಸುವ ಯಂತ್ರ ಅನೇಕರ ಗಮನ ಸೆಳೆಯಿತು. ಮತ್ತೊಂದು ಸ್ವಾರಸ್ಯಕರ ಯಂತ್ರವನ್ನು ಕೋರ್ನೆ ಕಂಡುಹಿಡಿದ (1880). ನ್ಯೂಜೆರ್ಸಿಯ ಸಿ.ಎಚ್.ವೆಸ್ಟ್‍ಕಾಟ್ ನವೀನ ಯಂತ್ರವೊಂದನ್ನು ಕಂಡು ಹಿಡಿಯುವುದಕ್ಕೆ (1871) ಮೊದಲು ಮೊಳೆ ಎರಕಹೊಯ್ಯುವ, ಜೋಡಿಸುವ ವಿಭಾಗಗಳು ಒಟ್ಟಿಗಿರಲಿಲ್ಲ. ತರುವಾಯ ಮುದ್ರಣಾಕ್ಷರಗಳನ್ನು ರೂಪಿಸುವ ಮಾತೃಕೆಗಳನ್ನು ನಿರ್ಮಿಸುವ ಕಾರ್ಯದತ್ತ ಅನೇಕರ ಗಮನ ಹರಿಯಿತು. 1979 ಮತ್ತು 1885ರ ಸುಮಾರಿನಲ್ಲಿ ಜೆ.ಡಬ್ಲ್ಯೂ. ಚುಕರ್ಸ್ ಪಂಕ್ತಿಗಳನ್ನು ಬೇಕಾದ ಅಳತೆಗೆ ಅನುಗೊಳಿಸಲು ಯೋಗ್ಯವಾದ ಡಬಲ್ ವೆಡ್ಜ್ ತೆರಪುಗಳನ್ನು ಕಂಡುಹಿಡಿದ. ಇದು ಮೊಳೆ ಜೋಡಿಸುವ ಯಂತ್ರಗಳ ಇತಿಹಾಸದಲ್ಲಿ ಬಹಳ ಮುಖ್ಯವಾದ ಬೆಳೆವಣಿಗೆ.

ಗಡಿಯಾರ ಮಾಡುವ ಕಸುಬಿನ ಅಮೆರಿಕದ ಒಟ್‍ಮರ್ ಮೆರ್‍ಗೆನ್‍ತ್ಲರ್ ಅಚ್ಚಿನ ಮೊಳೆ ಜೋಡಿಸುವ ಯಂತ್ರಗಳ ನಿರ್ಮಾಣಕಾರ್ಯದಲ್ಲಿ ತೊಡಗಿ ಅನೇಕ ವರ್ಷಗಳ ಕಾಲ ಸತತವಾಗಿ ಶ್ರಮಿಸಿ ಅನೇಕ ವಿಧದಲ್ಲಿ ಸಂಶೋಧನೆ ನಡೆಸಿದ. ಕಡೆಗೆ ಪ್ರತಿಯೊಂದು ಅಕ್ಷರಕ್ಕೂ ಪ್ರತ್ಯೇಕವಾದ ಮಾತೃಕೆಗಳನ್ನು ಉಪಯೋಗಿಸಿ ಒಂದು ಪಂಕ್ತಿಯನ್ನು ಏಕಕಾಲದಲ್ಲಿ ಎರಕ ಹೊಯ್ಯುವ ಹೊಸ ಯಂತ್ರವನ್ನು ಕಂಡುಹಿಡಿದ. ಚುಕರ್ಸ್‍ನ ಡಬಲ್ ವೆಡ್ಜ್ ತೆರಪು ಮೊಳೆಗಳನ್ನು ತನ್ನ ಎರಡನೆಯ ಯಂತ್ರಕ್ಕೆ ಅಳವಡಿಸಿಕೊಂಡ (1885), ಮಾತೃಕೆಗಳನ್ನು ಸರಿಯಾದ ಸ್ಥಾನದಲ್ಲಿ ನಿಲ್ಲಿಸಲು ಕೃತಕ ಗಾಳಿಯನ್ನು ಬಳಸಿ ಮೂರನೆಯ ಯಂತ್ರವನ್ನು ಅದೇ ವರ್ಷ ಕಂಡುಹಿಡಿದ. ಬ್ಲೋಯರ್ ಎಂಬ ಹೆಸರಿನ ಈ ಯಂತ್ರ ಹೆಚ್ಚು ಪ್ರಚಾರಕ್ಕೆ ಬಂದಿತು. ಆಮೇಲೆ ಈ ಬಗೆಯ ಸುಮಾರು ಇನ್ನೂರು ಯಂತ್ರಗಳನ್ನು ತಯಾರಿಸಿದರು. ಅನೇಕ ಯಂತ್ರಗಳನ್ನು ಇಂಗ್ಲೆಂಡ್ ದೇಶಕ್ಕೂ ಕಳುಹಿಸಿದರು. ಇವನ್ನು ಸಮಾಚಾರ ಪತ್ರಿಕೆಗಳ ಮುದ್ರಣಕ್ಕೆ ಹೆಚ್ಚಾಗಿ ಬಳಸಿದರು. ಕೃತಕ ಗಾಳಿಯನ್ನು ಒಯ್ಯಲು ಮೆರ್‍ಗನ್‍ತ್ಲರ್ ಯಂತ್ರಕ್ಕೆ ಅಳವಡಿಸಿದ್ದ ಉಪಕರಣವನ್ನು 1890ರಲ್ಲಿ ತಯಾರಿಸಿದ ಅವನ ಮತ್ತೊಂದು ಯಂತ್ರದಲ್ಲಿ ಕೈಬಿಡಲಾಯಿತು. ಇದು ಹೆಚ್ಚು ಕಡಿಮೆ ಈಗಿನ ಲೈನೋ ಯಂತ್ರದ ಗುಣವೈಶಿಷ್ಟ್ಯವನ್ನು ಹೊಂದಿದೆ.

ಅಮೆರಿಕದ ಓಹಿಯೋನಲ್ಲಿ ಜನಿಸಿದ ಟಾಲ್‍ಬರ್ಟ್ ವಾಷಿಂಗ್‍ಟನ್ನಿನಲ್ಲಿ ಹೊಸ ಮಾದರಿಯ ಯಂತ್ರದ ನಿರ್ಮಾಣ ಕಾರ್ಯದಲ್ಲಿ ತೊಡಗಿ ಈಗಿನ ಮಾದರಿಯ ರಂಧ್ರಗಳ ಪಟ್ಟಿಯನ್ನು ಉಪಯೋಗಿಸಿ ಅಚ್ಚಿನ ಮೊಳೆಪಟ್ಟಿಯನ್ನು ತಯಾರಿಸಿದ (1885). ಅನಂತರ ಲಾನ್‍ಸ್ಟನ್ನನು ಟಾಲ್‍ಬರ್ಟ್‍ನ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬದಲಾಯಿಸಿ ಪ್ರತಿ ಅಕ್ಷರಕ್ಕೂ ಪ್ರತ್ಯೇಕ ಅಚ್ಚಿನಮೊಳೆ ತಯಾರಿಸುವ ಯಂತ್ರವನ್ನು ಕಂಡುಹಿಡಿದ (1890). ಅವನು ತಯಾರಿಸಿದ (1897) ಮತ್ತೊಂದು ಯಂತ್ರದಲ್ಲಿ ಈಗಿನ ಮಾನೋಟಯಪ್ ಯಂತ್ರದ ಮುಖ್ಯ ತತ್ತ್ವಗಳನ್ನು ಕಾಣಬಹುದು.[೧]

ಅಮೆರಿಕದ ಡಬ್ಲ್ಯೂ.ಐ.ಲಡ್ಲೊ ಎಂಬುವವ ಮೊಳೆ ಜೋಡಿಸುವ ಯಂತ್ರಗಳ ತಯಾರಿಕೆಯಲ್ಲಿ ಕೆಲವು ಹೊಸ ತತ್ತ್ವಗಳನ್ನು ನಿರೂಪಿಸಿ 1906ರಲ್ಲಿ ಒಂದು ಕಂಪನಿಯನ್ನು ಸ್ಥಾಪಿಸಿದ ಡಬ್ಲ್ಯೂ.ಎ. ರೀಡೆಗೆ ತನ್ನ ತತ್ತ್ವಗಳನ್ನು ಅರಿವು ಮಾಡಿಕೊಟ್ಟ.[೨] ರೀಡೆ ಅನೇಕ ಸಂಶೋಧನೆಗಳನ್ನು ನಡೆಸಿ ಕೈಯಿಂದ ಮಾತೃಕೆಗಳನ್ನು ಜೋಡಿಸಿ ಪ್ರತ್ಯೇಕವಾಗಿ ಅಲಂಕಾರನ ಪಂಕ್ತಿಯನ್ನು ತಯಾರಿಸುವ ಯಂತ್ರವನ್ನು ಕಂಡುಹಿಡಿದ.[೩] ಅನಂತರ ಈಗಿನ ಲಡ್ಲೊ ಯಂತ್ರದಲ್ಲಿನ ಮುಖ್ಯ ತತ್ತ್ವಗಳನ್ನು ಅಳವಡಿಸಿ ಹೊಸ ಯಂತ್ರವನ್ನು ನಿರ್ಮಿಸಲಾಯಿತು (1911).

ನ್ಯೂಯಾರ್ಕಿನ ಅಂತರರಾಷ್ಟ್ರೀಯ ಮೊಳೆ ಜೋಡಿಸುವ ಯಂತ್ರ ಪರಿಷತ್ತಿನವರು ಮೂರು ಬಗೆಯ ಯಂತ್ರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು (1911). 1912ರಲ್ಲಿ ಎಮ್‍ಬ್ರೊ ಇಂಟರ್ ಟೈಪ್ ಯಂತ್ರ ತಯಾರಾಯಿತು. 1914ರಲ್ಲಿ ಮಹಾಯುದ್ಧ ಯೂರೋಪನ್ನು ಸುತ್ತುವರಿಯುವ ಹೊತ್ತಿಗೆ ಮೊಳೆ ಜೋಡಿಸುವ ಯಂತ್ರಗಳು ಹೆಚ್ಚು ಪ್ರಚಾರಕ್ಕೆ ಬಂದಿದ್ದುವು. (ಎಚ್.ಎನ್.)

ಆಧುನಿಕ ಯಂತ್ರಗಳು

ಲೈನೋಟೈಪ್, ಮಾನೋಟೈಪ್, ಎಲ್ರಾಡ್ ಟೈಪೋಗ್ರಾಫ್, ಇಂಟರ್‍ಟೈಪ್ ಇತ್ಯಾದಿಯಾಗಿ ಅನೇಕ ಬಗೆಯವಾಗಿವೆ. ಇವೆಲ್ಲವನ್ನೂ ಎರಡು ನಿರ್ದಿಷ್ಟವಾದ ವರ್ಗಗಳಾಗಿ ವಿಂಗಡಿಸಬಹುದು. ಜೋಡಿಸಿದ ಒಂದು ಪಂಕ್ತಿ ಮೊಳೆ ಸಾಲುಗಳನ್ನು ಒಂದೇ ಅಚ್ಚುಮೊಳೆಯಂತೆ ಎರಕಹೊಯ್ದ ಹೊರಗೆಡಹುವ (ಸ್ಲಗ್ ತಯಾರಿಸುವ) ಯಂತ್ರಗಳು ಮತ್ತು ಒಂದೊಂದು ಅಚ್ಚು ಮೊಳೆಯನ್ನೂ ಪ್ರತ್ಯೇಕವಾಗಿ ಎರಕಹೊಯ್ದ ಹೊರಗೆಡವಿ ಸಾಲಾಗಿ ಜೋಡಿಸುವ ಯಂತ್ರಗಳು. ಈ ಎರಡು ಬಗೆಯ ಯಂತ್ರಗಳಲ್ಲೂ ಮೊದಲು ಬೇಕಾದ ಮಾತೃಕೆಗಳನ್ನು ಆರಿಸಿ ಎರಕಹೊಯ್ದು, ಅವುಗಳನ್ನು ಜೋಡಿಸುವ ತತ್ತ್ವವೇ ಅಡಗಿದೆ.

ಮೊದಲು ಪಂಗಡಕ್ಕೆ ಸೇರಿದ ಯಂತ್ರಗಳೆಂದರೆ, ಲೈನೋಟೈಪ್, ಇಂಟರ್ ಟೈಪ್ ಹಾಗೂ ಟೈಪೋಗ್ರಾಫ್‍ಗಳು. ಎರಡನೆಯ ವರ್ಗಕ್ಕೆ ಸೇರಿದುವುಗಳಲ್ಲಿ ಮಾನೋಟೈಪ್, ಮುಖ್ಯವಾದುದು. ಈ ಎರಡು ಬಗೆಯ ಯಂತ್ರಗಳಲ್ಲೂ ಅತ್ಯಾಧುನಿಕ ಸಾಧನೆಯೆಂದರೆ ಫೋಟೋ ಕಾಂಪೋಸಿಷನ್ ವಿಧಾನವನ್ನು ಬಳಕೆಗೆ ತಂದಿರುವುದು.

ಲೈನೋಟೈಪ್ ಯಂತ್ರ

ಒಂದೊಂದು ಪಂಕ್ತಿಯನ್ನೂ ಪ್ರತ್ಯೇಕವಾಗಿ ಎರಕ ಮಾಡಿ ಒಂದೇ ಮೊಳೆಯೆಂಬಂತೆ ಹೊರದೂಡುವುದು. ಇದರಲ್ಲಿ ಪರಸ್ಪರ ಹೊಂದಿಕೆಯಿಂದ ಕೆಲಸ ಮಾಡುವ ಮೂರು ಭಾಗಗಳಿವೆ; ಕೈಮಣೆ, ಎರಕ ಹೊಯ್ಯುವ ಸಲಕರಣೆ, ಮಾತೃಕೆ. ಜೊತೆಗೆ ತೆರಪುಗಳನ್ನು ವಾಪಸ್ಸು ಮಾಡುವ ಸಲಕರಣೆ ಇದೆ. ಈ ಯಂತ್ರದ ಕೆಲಸವೆಲ್ಲ ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವ ಮಾತೃಕೆಗಳನ್ನು ಬಹುವಾಗಿ ಅವಲಂಬಿಸಿದೆ. ಈ ಯಂತ್ರ ಕೆಲಸ ಮಾಡುವ ಕ್ರಮ ಸರಣಿಯನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ಯಂತ್ರ ಚಾಲಕ ಕೈಮಣೆಯ ಮುಂದೆ ಕುಳಿತು ಬೇಕಾದ ಅಕ್ಷರದ ಗುಂಡಿಯನ್ನು ಬೆರಳಿನಿಂದ ತುಸು ಒತ್ತುತ್ತಾನೆ. ಆಗ ಮಾತೃಕೆಗಳ ಉಗ್ರಾಣದಿಂದ ಆ ಅಕ್ಷರದ ಮಾತೃಕೆ ಕೆಳಗೆ ಜಾರಿ ಸುತ್ತುವ ಪಟ್ಟಿಯ ಸಹಾಯದಿಂದ ಯಂತ್ರದ ಸ್ಟಿಕ್‍ನಂತಿರುವ ಭಾಗದ ಮೇಲೆ ನಿಲ್ಲುವುದು. ಪ್ರತಿಯೊಂದು ಪದವೂ ಮುಗಿದ ನಂತರ ಒಂದು ತೆರಪು ಮಾತೃಕೆಯನ್ನು ಅಥವಾ ತೆರಪನ್ನು ಅದೇ ರೀತಿ ಒತ್ತಿ ಕೆಳಗಿಳಿಸುವನು. ಒಂದು ಪಂಕ್ತಿ ಮುಗಿದ ಅನಂತರ ಒಂದು ಕೈಹಿಡುಪನ್ನು ತಿರುಗಿಸುವನು. ಇದರಿಂದ ಜೋಡಿಸಿದ ಮಾತೃಕೆಗಳು ಫಸ್ಟ್ ಎಲಿವೇಟರ್ ಸ್ಥಾನಕ್ಕೆ ಸಾಗಿ ಬೇಕಾದ ಅಳತೆಗೆ ಮೊದಲೇ ಗೊತ್ತು ಮಾಡಿದ ಮೂಸೆಗೆ ಹೊಂದಿಕೊಂಡು ಕರಗಿಸಿದ ಲೋಹವಿರುವ ಪಾತ್ರೆಯ ಬಾಯ ಮುಂದೆ ನಿಲ್ಲುತ್ತವೆ. ಲೋಹಪಾತ್ರೆ ಮುಂದೆ ಬಾಗಿ ಮಾತೃಕೆಗಳ ಮುಖ ಭಾಗಕ್ಕೆ ಅಡಕವಾಗಿ ಸೇರಿ ನಿಂತಾಗ ಅದರೊಳಗಿನ ಲೋಹವನ್ನು ಮೇಲಕ್ಕೆ ತಳ್ಳುವ ಸಾಧನ ಕೆಲಸವನ್ನು ಆರಂಭಿಸುವುದು. ಕರಗಿದ ಲೋಹ ಮಾತೃಕೆಗಳನ್ನು ತುಂಬಿದ ಮೇಲೆ ಪಾತ್ರೆ ಸ್ವಸ್ಥಾನಕ್ಕೆ ಹೋಗುವುದು. ಆಗ ಮಾತೃಕೆಗಳು ಸೆಕೆಂಡ್ ಎಲಿವೇಟರ್ ಸ್ಥಾನಕ್ಕೆ ಬಂದು ನಿಲ್ಲುವುವು. ತೆರಪು ಸಾಮಗ್ರಿಗಳು ಕೆಳಗುಳಿದು ಸ್ವಸ್ಥಾನಕ್ಕೆ ಹಿಂದಿರುಗುವುವು. ಮಾತೃಕೆಗಳು ಮಾತ್ರ ಮೇಲಿಂದ ಬರುವ ಹಲ್ಲುಗಳುಳ್ಳ ಅಡ್ಡ ಸಲಾಕಿಯ ಭಾಗದಿಂದ ಹಿಡಿಯಲ್ಪಟ್ಟು ತಿರುಗಿ ಉಗ್ರಾಣಕ್ಕೆ ಹೋಗುವುವು. ಈ ಸಮಯದಲ್ಲಿಯೇ ಎರಕವಾದ ಸ್ಲಗ್ಗ್ ಆರಿ ಹೊರದೂಡಲ್ಪಟ್ಟು ಗ್ಯಾಲಿಯಲ್ಲಿ ಬೀಳುವುದು.

ಮಾನೋಟೈಪ್ ಯಂತ್ರ

ಬಿಡಿ ಅಚ್ಚುಮೊಳೆಗಳನ್ನು ಪ್ರತ್ಯೇಕವಾಗಿ ಎರಕ ಮಾಡಿ ಜೋಡಿಸುವುದು. ಇದರಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ಟೈಪ್‍ರೈಟರ್ ಮಾದರಿಯ ಕೈಮಣೆ ಹಾಗೂ ಅಚ್ಚುಮೊಳೆಗಳನ್ನು ಎರಕ ಹೊಯ್ದು ಜೊಡಿಸುವ ಕ್ಯಾಸ್ಟಿಂಗ್ ಭಾಗ. ಇವೆರಡೂ ಪರಸ್ಪರ ಯಾಂತ್ರಿಕ ದೃಷ್ಟಿಯಿಂದ ಬಹಳ ಜಟಿಲವಾಗಿಯೂ ಕೆಲಸದ ದೃಷ್ಟಿಯಿಂದ ದೊಡ್ಡ ಪಟ್ಟಿ ತಯಾರಿಕೆ ಮುಂತಾದವುಗಳಿಗೆ ಅನುಕೂಲವಾಗುವಂತೆಯೂ ಇವೆ.

ಈ ಯಂತ್ರದಲ್ಲಿ ಮುಖ್ಯವಾಗಿರುವ ಎರಡು ಭಾಗಗಳ ಕೆಲಸವನ್ನು ಸ್ಥೂಲವಾಗಿ ಹೀಗೆ ಹೇಳಬಹುದು.

ಕೈಮಣೆ

ಸುರುಳಿ ಕಾಗದದ ಮೇಲೆ ರಂಧ್ರಗಳನ್ನು ಮಾಡುವುದು. ಟೈಪ್ ರೈಟರ್ ಕೈಮಣೆಯಲ್ಲಿರುವಂತೆ ಪ್ರತಿಯೊಂದು ಅಕ್ಷರ ಅಥವಾ ಚಿಹ್ನೆಗೂ ಒಂದೊಂದು ಗುಂಡಿಯಿದೆ. ಸುರುಳಿ ಕಾಗದಲ್ಲಿ ರಂಧ್ರಮಾಡಲು ಚಾಲಕ ಒಂದೊಂದು ಗುಂಡಿಯನ್ನು ಒತ್ತಬೇಕು. ಹೀಗೆ ಒತ್ತುವಾಗ ಚದರದಂಗುಲಕ್ಕೆ 15 ಪೌಂಡು ಒತ್ತಡದಿಂದ ಹಾಯುವ ಕೃತಕಗಾಳಿ ಸಹಾಯ ಮಾಡುತ್ತದೆ. ರಂಧ್ರಗಳು ಎರಕ ಹೊಯ್ದು ಜೋಡಿಸುವ ಯಂತ್ರವನ್ನು ಹತೋಟಿಯಲ್ಲಿಡುವುದಲ್ಲದೆ ಅಕ್ಷರ ಅಥವಾ ಚಿಹ್ನೆಗಳ ಅಗಲವನ್ನು (ಸೆಟ್) ನಿರ್ಧರಿಸುತ್ತವೆ. ಮತ್ತು ಜೋಡಣೆಯಾದ ಮೊಳೆಗಳ ಪಂಕ್ತಿಗಳು ಅಳತೆಗೆ ಸರಿಯಾಗಿ ಸೇರಿ ಬಿಗಿಯಾಗುವಂತೆಯೂ ಮಾಡುತ್ತವೆ.

ಕಾಗದದಲ್ಲಿ ರಂಧ್ರ ಮಾಡುವ ಕ್ರಮ ಈ ರೀತಿಯಲ್ಲಿ ನಡೆಯುತ್ತದೆ. ಚಾಲಕ ಬೇಕಾದ ಗುಂಡಿಯನ್ನು ಕೈಬೆರಳಿನಿಂದ ಸೂಕ್ಷ್ಮವಾಗಿ ಒತ್ತುವನು. ಈ ಒತ್ತಡ ಕೈಗುಂಡಿಯಲ್ಲಿರುವ ಲಿವರ್ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಅದೇ ಒತ್ತಡ ಕೈ ಗುಂಡಿಯ ಸಲಾಕಿಯ ಮೇಲಿನಿ ಲಗ್ ಮೇಲೆ ಬಿದ್ದು ಅದು ಮುಂದಕ್ಕೆ ಬಾಗುವಂತೆ ಮಾಡುತ್ತದೆ. ಆ ಲಗ್ ಟ್ರಾನ್ಸ್‍ವರ್ಸ್ ಬಾರಿನ ಮತ್ತು ವಾಲ್ವ್ ಬಾರಿನ ಲಗ್‍ಗಳ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ವಾಲ್ವ್‍ನ ಬಾರುಗಳು ಮುಂದೆ ಜರುಗಿ ಗಾಳಿಯು ವಾಲ್ವ್‍ಗಳನ್ನು ತೆರೆದು ಅವುಗಳ ಮೂಲಕ ಒತ್ತಡದಿಂದ ಹಾಯ್ದು ಕೊಳವೆಗಳ ಮೂಲಕ ನುಗ್ಗಿ ಪಿಸ್ಟನ್‍ಗಳನ್ನು ಮೇಲಕ್ಕೆ ಎತ್ತುತ್ತವೆ. ಈ ಪಿಸ್ಟನ್‍ಗಳು ಪಂಚುಗಳಿರುವ ಪಂಚುಬಾರುಗಳನ್ನು ಮೇಲಕ್ಕೆತ್ತಿ ಕಾಗದದಲ್ಲಿ ಎರಡು ಅಥವಾ ಮೂರು ರಂಧ್ರಗಳನ್ನು ಮಾಡುತ್ತವೆ.

ಕ್ಯಾಸ್ಟಿಂಗ್

ಈ ಕಾಗದವನ್ನು ಯಂತ್ರದಲ್ಲಿಟ್ಟ ಮೇಲೆ ಕ್ಯಾಸ್ಟಿಂಗ್ ಭಾಗದಲ್ಲಿ ಕೆಲಸ ಮುಂದುವರಿಯುತ್ತದೆ. ಮಾನೋ ಯಂತ್ರದ ಮಾತೃಕೆಗಳು ಘನ ಆಕಾರದಲ್ಲಿ, ಪಾಸ್ಟರ್ ಬ್ರಾಂಜ್ ಲೋಹದಿಂದ ತಯಾರಾದವು. ಈ ಮಾತೃಕೆಗಳ ಕೆಳ ಅಂಚಿನಲ್ಲಿ ಅಕ್ಷರಗಳ ಮುಖ ಅಚ್ಚೂ ಮೇಲಂಚಿನಲ್ಲಿ ಶಂಖಾಕಾರದ ರಂಧ್ರವೂ ಇವೆ. ಈ ರಂಧ್ರದ ಮೂಲಕ ಸೆಂಟರಿಂಗ್ ಪಿನ್ ಮಾತೃಕೆಯನ್ನು ಸೂಸುಕೊಳವೆಯ ಮೇಲೆ ಎರಕವಾಗಲು ಅನುಕೂಲವಾಗುವಂತೆ ನಿಲ್ಲಿಸುತ್ತದೆ.

ಮಾತೃಕೆಗಳೆಲ್ಲವೂ ಚದರಾಕಾರದ ಒಂದು ಸಂಪುಟದಲ್ಲಿ ಇರುತ್ತವೆ. ಇದರಲ್ಲಿ ಒಂದೊಂದು ಸಾಲಿಗೆ ಹದಿನೈದು ಮಾತೃಕೆಗಳಂತೆ ಹದಿನೈದು ಅಥವಾ ಹದಿನೇಳು ಸಾಲುಗಳಿವೆ. ಪ್ರತಿಯೊಂದು ಸಾಲಿನಲ್ಲೂ ಇರುವ ಅಕ್ಷರಗಳು ಅಥವಾ ಚಿಹ್ನೆಗಳು ಒಂದೇ ದಪ್ಪವಾಗಿರುತ್ತವೆ. ಈ ಮಾತೃಕೆಗಳ ಸಂಪುಟ ಎರಕ ಹೊಯ್ಯುವ ಯಂತ್ರದಲ್ಲಿ ಎರಡು ಕಡೆಗಳಿಗೆ ಮಾತ್ರ ಚಲಿಸುತ್ತದೆ. ಬಲದಿಂದ ಎಡಕ್ಕೆ, ಮುಂಭಾಗದಿಂದ ಹಿಂಭಾಗಕ್ಕೆ ಈ ಚಲನೆ ಎಷ್ಟಾಗಬೇಕೆಂಬುದು ಕಾಗದದ ರಂಧ್ರಗಳ ಮೂಲಕ ಹಾಯ್ದು ಗಾಳಿ ಮೇಲಕ್ಕೇರಿಸಿದ ಪಿನ್ನುಗಳನ್ನು ಅವಲಂಬಿಸಿದೆ.

ರಂಧ್ರಗಳನ್ನು ಮಾಡಿರುವ ಸುರುಳಿ ಕಾಗದವನ್ನು ಕ್ಯಾಸ್ಟಿಂಗ್ ಯಂತ್ರದ ಟವರ್ ಮೇಲೂ ಇದರ ಹೊರ ಅಂಚನ್ನು ಕ್ಯಾಸ್ಟಿಂಗ್ ಯಂತ್ರದ ಸುತ್ತು ಉರುಳೆಯ ಮೇಲೂ ಇಡಬೇಕು. ಸುರುಳಿ ಕಾಗದದಲ್ಲಿ ಮಾಡಿರುವ ರಂಧ್ರಗಳು ಯಂತ್ರದ ಪಿನ್ ಚಕ್ರದ ಹಲ್ಲುಗಳಿಗೆ ಸೇರಿಕೊಳ್ಳುತ್ತವೆ. ಯಂತ್ರದಲ್ಲಿ ಏರ್ಪಡಿಸಿರುವ ಕೃತಕ ಗಾಳಿ ಕಾಗದದ ರಂಧ್ರಗಳ ಮೂಲಕ ಹಾಯ್ದು ಪಿನ್ನುಗಳನ್ನು ಮೇಲಕ್ಕೆತ್ತುತ್ತದೆ. ಹೀಗೆ ಎತ್ತಿದ ಪಿನ್ನುಗಳಲ್ಲಿ ಒಂದೊಂದು ಅಕ್ಷರದ ಅಗಲವನ್ನೂ (ಯೂನಿಟ್ ವ್ಯಾಲ್ಯು) ಬೇರೆ ಯಾವ ಸಾಲಿನಲ್ಲಿರುವ ಮಾತೃಕೆಯಿಂದ ಎರಕವಾಗಬೇಕೆಂಬುದನ್ನೂ ಇದು ಗೊತ್ತುಮಾಡುತ್ತದೆ. ಆಗ ಸೆಂಟರಿಂಗ್ ಪಿನ್ನು ಲೋಹದ ಪಾತ್ರೆಯ ಮೇಲೆ ಎರಕವಾಗಬೇಕಾದ ಅಕ್ಷರದ ಮಾತೃಕೆಯನ್ನು ಸೂಸುಕೊಳವೆಯ ಮೇಲೆ ಸರಿಯಾಗಿ ನಿಲ್ಲಿಸುತ್ತದೆ. ಲೋಹದ ಪಾತ್ರೆಯಿಂದ ಲೋಹ ಸೂಸುಕೊಳವೆಯ ಮೂಲಕ ಚಿಮ್ಮಿ ಮಾತೃಕೆಯೊಳಗೆ ನುಗ್ಗಿ ಅಚ್ಚುಮೇಲೆ ಎರಕವಾಗಿ ಪಂಕ್ತಿಗೆ ಸೇರುತ್ತದೆ. ಪ್ರತಿ ಪಂಕ್ತಿಯು ಮುಗಿದ ಅನಂತರ ಹೊರಗಿನ ಗ್ಯಾಲಿಯ ಮೇಲೆ ಬೀಳುತ್ತದೆ. ಹೀಗೆ ಯಂತ್ರದಲ್ಲಿ ಜೋಡಿಸಿದ ಮೊಳೆಗಳ ಸಮೂಹ ಒಮ್ಮಟ್ಟವಾದ ಮೇಲ್ಮೈನಿಂದ ಕೂಡಿ ಹೊಳೆಯುತ್ತ ಅಂದವಾಗಿ ಕಾಣುತ್ತದೆ.

ಫೋಟೋ ಕಂಪೋಸಿಂಗ್ ಯಂತ್ರ

ಒಂದು ಆಧುನಿಕ ಯಂತ್ರ, ಮೊಳೆಗಳನ್ನು ಎರಕ ಹೊಯ್ಯುವುದಕ್ಕೆ ಬದಲಾಗಿ ಮಾತೃಕೆಗಳಲ್ಲಿ ಅಚ್ಚಾಗಬೇಕಾಗಿರುವ ಅಕ್ಷರ, ಅಂಕೆ ಮುಂತಾದುವುಗಳು ಬೆಳಕಿನ ಕಿರಣಗಳಿಂದ ಪ್ರಕಾಶಿತವಾಗಿ ಅವಕ್ಕೆ ಸಮೀಪದಲ್ಲಿ ಅಳವಡಿಸಿರುವ ಛಾಯಾಗ್ರಾಹಕ ಫಿಲ್ಮ್‍ನಲ್ಲಿ ಗೊತ್ತಾದ ಉದ್ದದ ಸಾಲುಗಳಾಗಿ ಮಾರ್ಪಡುತ್ತವೆ. ನೆಗೆಟಿವ್‍ನಿಂದ ಫೋಟೋ ಆಫ್‍ಸೆಟ್ ಮುದ್ರಣಕ್ಕೆ ಅನುಕೂಲವಾಗುವಂತೆ, ಜಿóಂಕ್ ಅಥವಾ ಅಲ್ಯುಮಿನಿಯಂ ತಗಡಿನ ಮೇಲೆ ಮುದ್ರಿಸುತ್ತಾರೆ. ಇದರಿಂದ ಖರ್ಚು, ಕಾಲ ಉಳಿತಾಯವಾಗುತ್ತದೆ. ಈ ವಿಧಾನವನ್ನು ಮಾನೋಟೈಪ್, ಲೈನೋಟೈಪ್ ಮತ್ತು ಇಂಟರ್‍ಟೈಪ್ ಯಂತ್ರಗಳಲ್ಲೂ ಅವಶ್ಯ ಮಾರ್ಪಾಡುಗಳಿಂದ ಅಳವಡಿಸಲು ಏರ್ಪಾಡು ನಡೆಯುತ್ತಿದೆ.

ಮುದ್ರಣ ಫಲಕವನ್ನು ತಯಾರಿಸಿದ ಮೇಲೆ ಅದಕ್ಕೆ ಮಸಿಯನ್ನು ಲೇಪಿಸಿ, ಅದರಡಿ ಕಾಗದದ ಹಾಳೆಯನ್ನಿಟ್ಟು ಒತ್ತಡದಿಂದ ಪ್ರತಿಗಳನ್ನು ತೆಗೆಯಬೇಕು. ಬಿಡಿ ಅಚ್ಚು ಮೊಳೆಗಳಿಂದ ಮುದ್ರಣ ಹದಿನೈದನೆಯ ಶತಮಾನದಲ್ಲಿ ಪ್ರಾರಂಭವಾದಾಗ ಮಸಿ ಲೇಪಿಸುವುದು, ಒತ್ತುವುದು ಮತ್ತು ಪ್ರತಿಗಳನ್ನು ತೆಗೆಯುವುದು-ಈ ಎಲ್ಲ ಕೆಲಸಗಳನ್ನು ಕೈಯಿಂದ ತಿರುಗಿಸುವ, (ದ್ರಾಕ್ಷಾರಸ ತೆಗೆಯುವುದಕ್ಕೆ ಉಪಯೋಗಿಸುತ್ತಿದ್ದ) ಮರದಿಂದ ಮಾಡಿದ ಯಂತ್ರದಿಂದ ನಿರ್ವಹಿಸಿ ದಿನಕ್ಕೆ 500-600 ಪ್ರತಿಗಳನ್ನು ಮಾತ್ರ ತೆಗೆಯಬಹುದಾಗಿತ್ತು. ಕಾಲಕ್ರಮೇಣ ಸುಧಾರಿತ ಮುದ್ರಣ ಯಂತ್ರಗಳು ಬಳಕೆಗೆ ಬಂದುವು.

ಆಫ್ ಸೆಟ್ ಮುದ್ರಣ

೧೯೫೦ರ ಸುಮಾರಿಗೆ ಶಾಯಿಯನ್ನು ಬಿಸಿ ಮಾಡಿ ಕಾಗದಕ್ಕೆ ಹಗುರವಾದ ಎಣ್ಣೆ-ನೀರು ಮಿಶ್ರಣ ಮಾಡಿ ಮಾಡುವ ಆಫ್-ಸೆಟ್ ಮುದ್ರಣ ಯಂತ್ರಗಳು ಅಚ್ಚುಮೊಳೆ ಯಂತ್ರಗಳ ನಂತರ ಬಂದ ಬಹುದೊಡ್ಡ ಆವಿಷ್ಕಾರ.[೪]

ಉಲ್ಲೇಖಗಳು

  1. https://en.wikipedia.org/wiki/Special:BookSources/978-159732-100-6
  2. http://www.apa-letterpress.com/T%20%26%20P%20ARTICLES/Typecasting/Ludlow%20Typograph.html
  3. http://www.woodsidepress.com/LUDLOW.HTML
  4. https://www.britannica.com/EBchecked/topic/425722