ಕೈಫಿ ಅಜ್ಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
No edit summary
ಚು Sangappadyamani ಕೈಫ಼ಿ ಆಜ಼್ಮಿ ಪುಟವನ್ನು ಕೈಫಿ ಅಜ್ಮಿ ಕ್ಕೆ ಸರಿಸಿದ್ದಾರೆ: ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೨೨:೪೪, ೧೪ ಜನವರಿ ೨೦೨೦ ನಂತೆ ಪರಿಷ್ಕರಣೆ

ಕೈಫ಼ಿ ಆಜ಼್ಮಿ(೧೪ ಜನವರಿ ೧೯೧೯ - ೧೦ ಮೇ ೨೦೦೨), ಎಂಬ ಕಾವ್ಯನಾಮದಿಂದ ಖ್ಯಾತರಾದ ಅತ್ತಾರ್ ಹುಸೇನ್ ರಿಜ಼್ವಿ, ಭಾರತದ ಉತ್ಕೃಷ್ಟ ಉರ್ದು ಕವಿಗಳಲ್ಲಿ ಒಬ್ಬರು. ಭಾರತದ ಚಿತ್ರರಂಗದಲ್ಲಿ ಉರ್ದು ಸಾಹಿತ್ಯವನ್ನು ಮೊತ್ತಮೊದಲ ಬಾರಿಗೆ ಪರಿ‍ಚಯಿಸಿದ ಹೆಗ್ಗಳಿಕೆ ಕೈಫ಼ಿಯವರಿಗೆ ಸಲ್ಲುತದೆ. ಪೀರ್ಜ಼ಾದ ಕಾಸಿಮ್, ಜಾಉನ್ ಇಲಿಯ ಹಾಗು ಇತರರೊಂದಿಗೆ ಸೇರಿ ೨೦ನೇ ಶತಮಾನದ ಅತ್ಯಂತ ಸ್ಮರಣೀಯ ಉರ್ದು ಕವಿಗೋಷ್ಠಿಗಳನ್ನು ನೆಡೆಸಿದ್ದಾರೆ.

ಆರಂಭಿಕ ಜೀವನ ಹಾಗು ಕುಟುಂಬ

ಉತ್ತರ ಪ್ರದೇಶದ ಆಜ಼ಮ್ಗಡ ಜಿಲ್ಲೆಯ ಮಿಜ಼್ವಾನ್ ಗ್ರಾಮದಲ್ಲಿ ಓರ್ವ ಶಿಯಾ ಮುಸ್ಲಿಮ್ ಕುಟುಂಬದಲ್ಲಿ ಆಜ಼್ಮಿಯವರು ಜನಿಸಿದರು.

ಆಜ಼್ಮಿಯವರು ರಂಗಭೂಮಿ ಹಾಗು ಚಲನಚಿತ್ರ ಕಲಾವಿದೆಯಯಾದ ಶೌಕತ್ ಆಜ಼್ಮಿಯವರನ್ನು ವಿವಾಹವಾದರು.

ಇವರ ಪುತ್ರಿ ಶಬಾನ ಆಜ಼್ಮಿ, ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ ಹಾಗು ಇವರ ಪುತ್ರ ಬಾಬಾ ಆಜ಼್ಮಿ, ಚಲನಚಿತ್ರ ಛಾಯಾಗ್ರಾಹಕರಾಗಿದ್ದಾರೆ.

ಆಜ಼್ಮಿಯವರ ಸೊಸೆ, ತಾನ್ವಿ ಆಜ಼್ಮಿ ಕಿರುತೆರೆ ನಟಿ.

ಪ್ರಶಸ್ತಿ-ಪುರಸ್ಕಾರಗಳು

ಕಫ಼ಿಯವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ.

ಇದಲ್ಲದೇ, ತಮ್ಮ ಆವಾರ ಸಜ್ದೆ ಸಂಕಲನಕ್ಕೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಉತ್ತರಪ್ರದೇಶ

ರ್ದು ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಉರ್ದು ಅಕಾಡೆಮಿಯ ವಿಶೇಷ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರು ಪುರಸ್ಕಾರ, ಆಫ಼್ರೋ-ಏಷಿಯನ್ ಬರಹಗಾರರ ಸಂಘದ ವತಿಯಿಂದ ಲೋಟಸ್ ಪುರಸ್ಕಾರ ಹಾಗು ರಾಷ್ಟ್ರೀಯ ಏಕೀಕರಣಕ್ಕಾಗಿ ರಾಷ್ಟ್ರಪತಿ ಪುರಸ್ಕಾರವನ್ನು ಪಡೆದಿರುತ್ತಾರೆ.ಉ

೧೯೯೮ರಲ್ಲಿ ಮಹಾರಾಷ್ಟ್ರ ಸರ್ಕಾರವು ಕೈಫ಼ಿಯವರಿಗೆ ಜ್ಞಾನೇಶ್ವರ ಪುರಸ್ಕಾರವನ್ನು ನೀಡಿದೆ.

ಜೀವಮಾನದ ಸಾಧನೆಗಾಗಿ, ಕೈಫ಼ಿಯವರಿಗೆ ಪ್ರತಿಷ್ಟಿತ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ನೀಡಿ ಗೌರವಿಸಲಾಗಿದೆ.

೨೦೦೦ರಲ್ಲಿ, ದೆಹಲಿ ಸರ್ಕಾರ ಹಾಗು ದೆಹಲಿ ಉರ್ದು ಅಕಾಡೆಮಿಯು ಪ್ರಪ್ರಥಮ ಶತಮಾನದ ಪುರಸ್ಕಾರವನ್ನು ನೀಡಿ ಗೌರವಿಸಿತು.

ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯವು ಕೈಫ಼ಿಯವರಿಗೆ ಗೌರವ ಡಾಕ್ಟ್ರೇಟ್ ನೀಡಿ ಪುರಸ್ಕರಿಸಿದೆ.