ಹುಣಸೂರು ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
{{Infobox person
{{Infobox person
| name = ಹುಣಸೂರು ಕೃಷ್ಣಮೂರ್ತಿ
| name = ಹುಣಸೂರು ಕೃಷ್ಣಮೂರ್ತಿ
| image = [[File:Hunsur-Krishnamurthy11-pic.jpg|thumb|'''ಹುಣಸೂರು ಕೃಷ್ಣಮೂರ್ತಿ''']]
| image = [[File:Hunsur-Krishnamurthy11-pic.jpg||'''ಹುಣಸೂರು ಕೃಷ್ಣಮೂರ್ತಿ''']]
| caption =
| caption =
| birth_name =
| birth_name =

೨೦:೧೩, ೧೧ ಜನವರಿ ೨೦೨೦ ನಂತೆ ಪರಿಷ್ಕರಣೆ

ಹುಣಸೂರು ಕೃಷ್ಣಮೂರ್ತಿ
ಹುಣಸೂರು ಕೃಷ್ಣಮೂರ್ತಿ
ಜನನ(೧೯೧೪-೦೨-೦೯)೯ ಫೆಬ್ರವರಿ ೧೯೧೪
ಮರಣ13 February 1989(1989-02-13) (aged 75)
ರಾಷ್ಟ್ರೀಯತೆಭಾರತ
ಉದ್ಯೋಗ
  • ನಾಟಕಕಾರ
  • ಚಲನಚಿತ್ರ ನಿರ್ದೇಶಕ
  • ನಿರ್ಮಾಪಕ
  • ನಟ
  • ಚಿತ್ರಕಥೆಗಾರ
  • ಸಾಹಿತಿ
ನೆಂಟರುದ್ವಾರಕೀಶ್ (ಸೋದರಳಿಯ)

ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ಸಾಹಿತಿಗಳಲ್ಲಿ ಒಬ್ಬರು. ಹುಣಸೂರು ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ ಅಪ್ಪಾಜಿ ಎಂದೇ ಪ್ರಸಿದ್ಧ.

ಆರಂಭಿಕ ಜೀವನ

ತಂದೆ ಎಂ.ರಾಜಾರಾವ್ ಲೋಕೋಪಯೋಗಿ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದರು.ತಾಯಿ ಪದ್ಮಾವತಮ್ಮ,ಮನೆಯಲ್ಲಿ ಪುರಾಣ ಪುಣ್ಯ ಕತೆಗಳ ವಾತಾವರಣ ,ಅಜ್ಜ ಮದ್ವಾಚಾರ್ ಶ್ರೇಷ್ಠ ಸಂಸ್ಕೃತ ವಿದ್ವಾಂಸರು. ಬಾಲ್ಯದಲ್ಲಿಯೇ ಶ್ಲೋಕ,ಕಥೆ,ಜಾನಪದ ಸಾಹಿತ್ಯ,ಇವರ ನಿತ್ಯ ಮಂತ್ರವಾಗಿತ್ತು.ಅದೇ ಮುಂದೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಲು ಪರೋಕ್ಷ ಕಾರಣವೂ ಆಯಿತು.ಹುಣಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮೈಸೂರಿನ ಶಾರದಾ ವಿಲಾಸ್ ಶಾಲೆ ಸೇರಿದರು.ಒಮ್ಮೆ ಷೇಕ್ಸ್ಪಿಯರ್ ನ "ಒಥೆಲೋ"ನಾಟಕದಲ್ಲಿ "ಇಯಾಗೋ ಪಾತ್ರ ನಿರ್ವಹಿಸುತ್ತಿದ್ದಾಗ ನೋಡಲು ಮುಂಬೈನ ಖ್ಯಾತ ತಂತ್ರಜ್ಞ ಕಪಾಡಿಯ ಆಗಮಿಸಿದ್ದರು,ಅವರು ಹುಣಸೂರರ ಅಭಿನಯ ಮೆಚ್ಚಿ ತಮ್ಮ ಜೊತೆ ಮುಂಬೈಗೆ ಕರೆದೊಯ್ದು " ಸಿಂಹಳ ಸುಂದರಿ"ಎಂಬ ಮೂಕಿ ಚತ್ರದಲ್ಲಿ ಅವಕಾಶ ನೀಡಿದರು. ಆಗ ಹುಣಸೂರರಿಗೆ ಕೇವಲ ಹತ್ತು ವರ್ಷ.

ವೃತ್ತಿ ಜೀವನ

ಮುಂದೆ ಮೈಸೂರಿಗೆ ಹಿಂತಿರುಗಿ ಬಸವಯ್ಯ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರೂ ಅವರಿಗೆ ಚಿತ್ರರಂಗದ ಆಕರ್ಷಣೆ ತಪ್ಪಿಸಿಕೊಳ್ಳಲಾಗಲಿಲ್ಲ. ಹದಿನಾಲ್ಕನೇ ವರ್ಷಕ್ಕೆ ಮತ್ತೆ ಮುಂಬೈಗೆ ತೆರಳಿ ಅಲ್ಲಿನ "ಮುಂಬಯಿ ಟಾಕೀಸ್ "ಸೇರಿ ಚಿತ್ರ ರಂಗದ ಎಲ್ಲಾ ಅನುಭವ ಪಡೆದರು. ಮತ್ತೆ ಕನ್ನಡ ನಾಡಿಗೆ ಹಿಂತಿರುಗಿ "ಚಂದ್ರಕಲಾ ನಾಟಕ ಮಂಡಳಿ"ಸೇರಿದರು. ಪೀರ್ ಸಾಹೇಬರ ಆಕಸ್ಮಿಕ ನಿದನದಿಂದ "ಗುಬ್ಬಿ"ಕಂಪನಿಗೆ ಬಂದ ಹುಣಸೂರರು ಹಲವಾರು ನಾಟಕಗಳನ್ನು ರಚಿಸಿದರು. ಅದರಲ್ಲಿ"ರಾಜಾ ಗೋಪಿಚಂದ್"ಅಪಾರ ಜನಮನ್ನಣೆ ಪಡೆಯಿತು."ಸಂಸಾರ ನೌಕೆ"ಚಿತ್ರದ ಸಹ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಹುಣಸೂರರು ೧೯೪೫ರಲ್ಲಿ ಗುಬ್ಬಿ ವೀರಣ್ಣನವರ "ಹೇಮರೆಡ್ಡಿ ಮಲ್ಲಮ್ಮ"ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಚಿತ್ರ ಸಾಹಿತಿಯಾದರು.ಇಲ್ಲಿಂದ ಮುಂದೆ " ಹುಣಸೂರರ ಯುಗ"ವೇ ಆರಂಭವಾಯಿತು ೫೦ರ ದಶಕದ ಬಹುತೇಕ ಚಿತ್ರಗಳು ಇವರ ಲೇಖನಿಯಿಂದಲೀ ಮೂಡಿಬಂದವು,"ಜಗನ್ಮೋಹಿನಿ"ಯಂತೂ ದಿಗ್ವಿಜಯ ಸಾಧಿಸಿತು,ನಾಗ ಕನ್ನಿಕಾ,ಶ್ರೀ ಶ್ರೀನಿವಾಸ ಕಲ್ಯಾಣ,ಚಂಚಲ ಕುಮಾರಿ,ದಲ್ಲಾಳಿ,ಗಂದರ್ವ ಕನ್ಯೆ,ಕನ್ಯಾದಾನ,ರಾಜ ವಿಕ್ರಮ,ನಳದಮಯಂತಿ,ಮಹಾನಂದ ಮುಂತಾದ ಚಿತಗಳು ಇವರ ಸಾಹಿತ್ಯದಿಂದ ಸಂಪನ್ನಗೊಂಡವು.೧೯೫೮ರಲ್ಲಿ "ನಂದಿ ಪಿಕ್ಚರ್ಸ್"ಲಾಂಛನದಲ್ಲಿ ಕೆ,ಎಂನಾಗಣ್ಣನವರು ನಿರ್ಮಿಸಿದ "ಶ್ರೀ ಕೃಷ್ಣ ಗಾರುಡಿ"ಚಿತ್ರದ ಮೂಲಕ ಹುಣಸೂರರು ನಿರ್ದೇಶಕರಾದರು. ಬೆಳ್ಳಾವೆ ನರಹರಿ ಶಾಸ್ತ್ರಿಗಳ ನಾಟಕವನ್ನು ಅದಾರಿಸಿದ ಚಿತ್ರ ಕೇವಲ ಪೌರಾಣಿಕ ಕತೆಯಷ್ಟೇ ಆಗದೆ ಸ್ವಾತಂತ್ರೋತ್ತರ ಭಾರತದ ಆಶಯದ ಅಭಿವ್ಯಕ್ತಿಯನ್ನಾಗಿಯೇ ಮಾಡುವಲ್ಲಿ ಹುಣಸೂರರು ಹೊಸ ಹಾದಿ ಹಿಡಿದರು."ಆಶಾ ಸುಂದರಿ"ಹುಣಸೂರರು ನಿರ್ದೇಶಿಸಿದ ಎರಡನೆಯ ಚಿತ್ರ.ಸಲಿಂಗ ಕಾಮದಂತಹ ಸೂಕ್ಹ್ಮವಸ್ತುವನ್ನು ಭಾರತೀಯ ಚಿತ್ರರಂಗಕ್ಕೆ ಆ ಕಾಲದಲ್ಲಿಯೇ ತಂದವರು ಹುಣಸೂರರು.ಹುಣಸೂರರ ಪ್ರತಿಭೆಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮೊದಲ ಚಿತ್ರ "ವೀರ ಸಂಕಲ್ಪ"ಅದುವರೆಗಿನ ಕನ್ನಡ ಚಿತ್ರರಂಗದ ಸ್ವರೂಪಕ್ಕಿಂತ ತೀರಾ ವಿಭಿನ್ನವಾಗಿ ಮೂಡಿಬಂದ ಈ ಚಿತ್ರ ಅವರೇ ಕರೆದುಕೊಂಡಂತೆ "ವಿಶ್ವಾಮಿತ್ರ ಸೃಷ್ಟಿ"ಯಾಗಿತ್ತು.ವಿಜಯನಗರದ ಪತನ ಸಂದರ್ಭದಲ್ಲಿ ಬಂದ "ಎಚ್ಹಮನಾಯಕ " ಎಂಬ ಸ್ವಾಮಿ ಭಕ್ತನ ಕತೆ ಆಧರಿಸಿದ ಚಿತ್ರದ ನಾಯಕನ ಪಾತ್ರವನ್ನು ಸ್ವತಃ ಹುಣಸೂರರೆ ನಿರ್ವಹಿಸಿದ್ದರು.ಉಜ್ವಲ ಸಂಭಾಷಣೆ,ಸಶಕ್ತ ಗೀತೆಗಳಿಂದ ಶ್ರೀಮಂತವಾದ ಹಲವಾರು ಪ್ರತಿಭಾವಂತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು.

ಸಾಹಿತ್ಯ

ಗೌತಮ ಬುದ್ಧ ಧರ್ಮರತ್ನಾಕರ, ರಾಜಾಗೋಪಿಚಂದ್ ಮುಂತಾದ ನಾಟಕಗಳನ್ನು ಬರೆದರು. ಅವರ ಸಂಭಾಷಣೆ ಶೈಲಿ ಜನಮೆಚ್ಚುಗೆ ಪಡೆಯಿತು. ಪ್ರೇಕ್ಷಕರನ್ನು ನೇರವಾಗಿ ಮುಟ್ಟುವಂತಹ ಆಡು ಭಾಷೆಯ ಮಾತುಗಳು ಜನಪ್ರಿಯವಾಗುತ್ತಿದ್ದಂತೆಯೇ ಹುಣಸೂರು ಕೃಷ್ಣಮೂರ್ತಿಯವರು ಬರವಣಿಗೆಯತ್ತಲೇ ತಮ್ಮ ಗಮನ ಕೇಂದ್ರೀಕರಿಸಿದರು. ನಿರ್ಮಾಪಕ-ನಿರ್ದೇಶಕರುಗಳಾದ ಡಿ.ಶಂಕರ್‍ಸಿಂಗ್ ಮತ್ತು ಬಿ.ವಿಠಲಾಚಾರ್ಯ ಇವರ ಬರವಣಿಗೆಯಲ್ಲಿನ ಸತ್ವವನ್ನು ಅರಿತರು. ಹುಣಸೂರು ಕೃಷ್ಣಮೂರ್ತಿ ಅವರ ಎಲ್ಲ ಚಿತ್ರಗಳಿಗೂ ಸಂಭಾಷಣೆ ಹಾಗೂ ಹಾಡುಗಳನ್ನು ಬರೆಯತೊಡಗಿದರು. ಸರಳ-ಸುಂದರ-ಆಡುಭಾಷೆಯ ಮಾತು-ಹಾಡುಗಳು ಪ್ರೇಕ್ಷಕರಿಗೆ ಮೋಡಿಮಾಡಿತು. ಭಕ್ತಿಪ್ರಧಾನ, ಜಾನಪದ, ಐತಿಹಾಸಿಕ, ಸಾಮಾಜಿಕ ಯಾವುದೇ ಆಗಿರಲಿ, ಆ ಪ್ರಕಾರಕ್ಕೆ ಒಪ್ಪುವಂಥ-ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂಥ ಸಾಹಿತ್ಯ ಇವರ ಲೇಖನಿಯಿಂದ ಮೂಡಿಬಂದಿತು. ಜಗನ್ಮೋಹಿನಿ, ರತ್ನಮಂಜರಿ, ಕನ್ಯಾದಾನ, ವೀರಸಂಕಲ್ಪ, ಬೂತಯ್ಯನ ಮಗ ಅಯ್ಯು, ಭಕ್ತಸಿರಿಯಾಳ, ಭಕ್ತಜ್ಞಾನದೇವ ಮತ್ತು ಭಕ್ತ ಕುಂಬಾರ, ಬಬ್ರುವಾಹನ, ಸತ್ಯಹರಿಶ್ಚಂದ್ರ ಎರಡು ವರ್ಷ ಸತತವಾಗಿ ಪ್ರದರ್ಶಿತವಾದ `ಬಂಗಾರದ ಮನುಷ್ಯ, ಹೀಗೆ ಅನೇಕ ಚಿತ್ರಗಳಿಗೆ ಹಾಡು-ಮಾತು ಬರೆದರು. ಕೆ.ಎಂ,ಹುಣಸೂರು ,ಗೌತಮ ಹೀಗೆ ವಿಭಿನ್ನ ಹೆಸರುಗಳಲ್ಲಿಯೂ ಇವರು ಗೀತರಚನೆ ಮಾಡಿರುವ ಇವರು ಬೊಂಬೆಯಾಟವಯ್ಯ.......ಮಾನವ ಮೂಳೆ ಮಾಂಸದ ತಡಿಕೆ.......ಶಿವ ಶಿವ ಎಂದರೆ ಭಯವಿಲ್ಲ...ಮುಂತಾದ ಭಕ್ತಿ ಪ್ರದಾನ, ಗಿಲ್ ಗಿಲ್ ಗಿಲಕ್ಕ.....ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ.......ಮಾದರಿಯ ಜಾನಪದ ಛಾಯೆಯ ಗೀತೆ, ಬಾಳ ಬಂಗಾರ ನೀನು......ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವರ್ಯಾರೋ.....ಮುಂತಾದ ಭಾವಗೀತಾತ್ಮಕ ರಚನೆಗಳನ್ನು ರಚಿದ್ದಾರೆ. ಕುಲದಲ್ಲಿ ಕೀಳ್ಯಾವುದೋ........ನಗು ನಗುತಾ ನಲೀ ನಲೀ ....ಮುಂತಾದ ಸಾರ್ವತ್ರಿಕ ಮೌಲ್ಯ ಸಾರುವ ಗೀತೆಗಳನ್ನೂ ರಚಿಸಿದ್ದಾರೆ. ಸರಳ ಆಡು ಮಾತಿನ ಸಂಭಾಷಣೆಗಳನ್ನು ಬೆಳ್ಳಿ ತೆರೆಗೆ ತಂದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.ಎಲ್ಲ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಅವರು ಅಡಿಪಾಯ ಹಾಕಿ ಕೊಟ್ಟರು.

ಪ್ರಶಸ್ತಿಗಳು

೧೯೬೫ರಲ್ಲಿ ಹುಣಸೂರರು ನಿರ್ದೇಶಿಸಿದ ಸತ್ಯ ಹರಿಶ್ಚಂದ್ರ ಮತ್ತು "ಮದುವೆ ಮಾಡಿನೋಡು" ಚಲನಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಗೆ ದೊರೆತಿದೆ. ರಾಜ್ಯಸರ್ಕಾರವು ಚಲನಚಿತ್ರ ನಿರ್ದೇಶಕರ ಸೇವೆಯನ್ನು ಗುರುತಿಸಿ, ಪುರಸ್ಕರಿಸಲು ``ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಯನ್ನು ಅಮಲುಗೊಳಿಸಿದಾಗ ಆ ಪ್ರಶಸ್ತಿಯನ್ನು ಮೊದಲು ಪಡೆದವರು ಹುಣಸೂರು ಕೃಷ್ಣಮೂರ್ತಿ.

ಮರಣ

1989ರ ಜನವರಿ 13ರಂದು ಹುಣಸೂರು ಕೃಷ್ಣಮೂರ್ತಿ ತಮ್ಮ 75ನೇ ವಯಸ್ಸಿನಲ್ಲಿ ವಿಧಿವಶರಾದರು.

ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಚಿತ್ರಗಳು

  1. ಶಿವ ಕೊಟ್ಟ ಸೌಭಾಗ್ಯ-೧೯೮೫-ನಿದೇ೯ಶಕ
  2. ಶಿವಕನ್ಯ-೧೯೮೪-ನಿದೇ೯ಶಕ
  3. ಭಕ್ತಜ್ಞಾನದೇವ-೧೯೮೧-ನಿದೇ೯ಶಕ
  4. ಎಡೆಯೂರು ಸಿದ್ದಲಿ೦ಗೇಶ್ವರ-೧೯೮೧-ನಿದೇ೯ಶಕ
  5. ಕುರುಬರ ಲಕ್ಕ-೧೯೮೧-ನಿದೇ೯ಶಕ
  6. ಶಿವಮಹಿಮಾ-೧೯೮೧-ನಿದೇ೯ಶಕ
  7. ಸಿದ್ದಲಿ೦ಗೇಶ್ವರಮಹಿಮಾ-೧೯೮೧-ನಿದೇ೯ಶಕ
  8. ಭಕ್ತಸಿರಿಯಾಳ-೧೯೮೦-ನಿದೇ೯ಶಕ
  9. ಗುರುಸಾವ೯ಭೌಮ ಶ್ರೀ ರಾಘವೇ೦ದ್ರ ಕರುಣೆ-೧೯೮೦-ನಿದೇ೯ಶಕ
  10. ಬಬ್ರುವಾಹನ -೧೯೭೭-ನಿದೇ೯ಶಕ
  11. ವೀರ ಸಿ೦ಧೂರ ಲಕ್ಷ್ಮ ಣ-೧೯೭೭-ನಿದೇ೯ಶಕ
  12. ಮ೦ತ್ರಶಕ್ತಿ-೧೯೭೫-ನಿದೇ೯ಶಕ
  13. ಭಕ್ತಕು೦ಬಾರ-೧೯೭೪-ನಿದೇ೯ಶಕ
  14. ಜಗ ಮೆಚ್ಚಿದ ಮಗ-೧೯೭೨-ನಿದೇ೯ಶಕ
  15. ವಿಷಕನ್ಯ-೧೯೭೧-ನಿದೇ೯ಶಕ
  16. ಅಡ್ಡದಾರಿ-೧೯೬೮-ನಿದೇ೯ಶಕ
  17. ದೇವರಗೆದ್ದ ಮಾನವ-೧೯೬೭-ನಿದೇ೯ಶಕ
  18. ಶ್ರೀ ಕನ್ನಿಕಾ ಪರಮೇಶ್ವರಿ ಕಥೆ-೧೯೬೬-ನಿದೇ೯ಶಕ
  19. ಮದುವೆ ಮಾಡಿನೋಡು-೧೯೬೫-ನಿದೇ೯ಶಕ
  20. ಸತ್ಯ ಹರಿಶ್ಚಂದ್ರ-೧೯೬೫-ನಿದೇ೯ಶಕ
  21. ವೀರಸ೦ಕಲ್ಪ-೧೯೬೪-ನಿದೇ೯ಶಕ
  22. ರತ್ನಮಂಜರಿ -೧೯೬೨-ನಿದೇ೯ಶಕ
  23. ಮೇರಾ ಸುಹಾಗ್-೧೯೬೧-ನಿದೇ೯ಶಕ(ಹಿ೦ದಿ)
  24. ಆಶಾಸು೦ದರಿ-೧೯೬೦-ನಿದೇ೯ಶಕ
  25. ರಾಮಸು೦ದರಿ-೧೯೬೦-ನಿದೇ೯ಶಕ
  26. ಶ್ರೀ ಕೃಷ್ಣಗಾರುಡಿ-೧೯೫೮-ನಿದೇ೯ಶಕ

ಉಲ್ಲೇಖಗಳು