ವೈಜನಾಥ್ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು '
ಚು E
೧ ನೇ ಸಾಲು: ೧ ನೇ ಸಾಲು:
{{under construction}}
'''ವೈಜನಾಥ್ ಸಂಗಪ್ಪ ಪಾಟೀಲ್''' (29 ಜುಲೈ 1938 - 2 ನವೆಂಬರ್ 2019) ಕರ್ನಾಟಕದ ರಾಜಕಾರಣಿ ಮತ್ತು ಸಮಾಜ ಸೇವಕ.
'''ವೈಜನಾಥ್ ಸಂಗಪ್ಪ ಪಾಟೀಲ್''' (29 ಜುಲೈ 1938 - 2 ನವೆಂಬರ್ 2019) ಕರ್ನಾಟಕದ ರಾಜಕಾರಣಿ ಮತ್ತು ಸಮಾಜ ಸೇವಕ.



೧೪:೧೪, ೨ ನವೆಂಬರ್ ೨೦೧೯ ನಂತೆ ಪರಿಷ್ಕರಣೆ

ವೈಜನಾಥ್ ಸಂಗಪ್ಪ ಪಾಟೀಲ್ (29 ಜುಲೈ 1938 - 2 ನವೆಂಬರ್ 2019) ಕರ್ನಾಟಕದ ರಾಜಕಾರಣಿ ಮತ್ತು ಸಮಾಜ ಸೇವಕ.

ಹಿನ್ನಲೆ

ಆರಂಭಿಕ ಜೀವನ ಮತ್ತು ಶಿಕ್ಷಣ

ಪಾಟೀಲ್ 29 ಜುಲೈ 1938 ರಂದು ಕೃಷಿ ಕುಟುಂಬದಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಹಕ್ಯಲಾ ಗ್ರಾಮದಲ್ಲಿ ಜನಿಸಿದರು.ಅವರು ಬಿಎ ಪದವಿಯನ್ನು ಬಿವಿಬಿ ಪದವಿ ಕಾಲೇಜು ಬೀದರ್ ಮತ್ತು ಗುಲ್ಬರ್ಗದ ಎಸ್‌ಎಸ್‌ಎಲ್ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಮುಗಿಸಿದರು.ಅವರ ಸಾಮಾಜಿಕ ಸೇವೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯವು ತನ್ನ 31 ನೇ ವಾರ್ಷಿಕ ಸಮಾವೇಶದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೂಲತಃ ಬೀದರ್ ಜಿಲ್ಲೆಯವರಾದ ವೈಜನಾಥರು ಪತ್ನಿಯ ಊರು ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನೆಲೆಸಿದ್ದರು. ಅಲ್ಲಿಂದಲೇ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದರು.

ಈಗ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ರಾಜ್ಯದ ಅತಿ ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ಪಾಟೀಲರು ಶ್ರಮಿಸಿದ್ದರು. ಈ ಭಾಗದ ಜನರಿಗೆ ಹಲವು ಅನುಕೂಲ ಕಲ್ಪಿಸುವ ಮತ್ತು ಅಲ್ಲಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ 371ಜೆ ವಿಧಿ ಜಾರಿಗೆ 20 ವರ್ಷಗಳಷ್ಟು ಹಿಂದೆಯೇ ಒತ್ತಾಯಿಸಿ, ಹೋರಾಟ ರೂಪಿಸಿದ್ದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾದರೆ ಅಥವಾ ಆಗುತ್ತದೆ ಎಂದು ಅರಿವಾದರೆ ತಕ್ಷಣ ಸರ್ಕಾರದ ಗಮನ ಸೆಳೆಯುತ್ತಿದ್ದರು. ತಮ್ಮ ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಲಿಲ್ಲ ಎನಿಸಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶ್ರೇಯ ಅವರದು.

ರಾಜಕೀಯ

ಜನತಾ ಪರಿವಾರದಿಂದ ರಾಜಕೀಯ ಪ್ರವೇಶ ಮಾಡಿದ ಪಾಟೀಲ, ನಂತರದಲ್ಲಿ ಕಾಂಗ್ರೆಸ್, ಕೆ.ಜೆ.ಪಿ.ಗೆ ಪಕ್ಷಾಂತರ ಮಾಡಿ, ಕೆಲ ತಿಂಗಳ ಹಿಂದೆ ನಡೆದಿದ್ದ ಚಿಂಚೋಳಿ ಉಪ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.

  • 1984 - ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ತೋಟಗಾರಿಕೆ ಸಚಿವರಾಗಿ ಹಾಗೂ
  • 1994- ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ನಗರಾಭಿವೃದ್ಧಿ ಸಚಿವಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ 1994 ರಲ್ಲಿ ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ನಿಧನ

ವೈಜನಾಥ ಪಾಟೀಲರು ಬೆಂಗಳೂರಿನ ವೊಕಾರ್ಡ್ ಪೋರ್ಟೀಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೈಜನಾಥ ಪಾಟೀಲರಿಗೆ, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪಾಟೀಲ ನಿಧನರಾಗಿದ್ದಾರೆ.

ಉಲ್ಲೇಖಗಳು