ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೩೪೪ ನೇ ಸಾಲು: ೩೪೪ ನೇ ಸಾಲು:
[[User:Johan (WMF)|Johan (WMF)]]</div></div></div> ೧೪:೧೮, ೨೧ ಆಗಸ್ಟ್ ೨೦೧೯ (UTC)
[[User:Johan (WMF)|Johan (WMF)]]</div></div></div> ೧೪:೧೮, ೨೧ ಆಗಸ್ಟ್ ೨೦೧೯ (UTC)
<!-- Message sent by User:Johan (WMF)@metawiki using the list at https://meta.wikimedia.org/w/index.php?title=User:Johan_(WMF)/Tools_and_IP_message/Distribution&oldid=19315232 -->
<!-- Message sent by User:Johan (WMF)@metawiki using the list at https://meta.wikimedia.org/w/index.php?title=User:Johan_(WMF)/Tools_and_IP_message/Distribution&oldid=19315232 -->

== ಪ್ರೊಜೆಕ್ಟ ಟೈಗರ್ ೨.೦ ಗೆ ಬೆಂಬಲ ==

೫ ವರ್ಷಗಳಿಂದ ವಿಕಿಮೀಡಿಯನ್ ಆಗಿರುವ ನಾನು, ಈ ವರ್ಷದ ಪ್ರೊಜೆಕ್ಟ ಟೈಗರ್ ೨.೦ ಗೆ ಯಂತ್ರಾಂಶ ಬೆಂಬಲಕ್ಕೆ ಅರ್ಜಿ ಸಲ್ಲಿಸಿದ್ದೇನೆ. ದಯವಿಟ್ಟು ಬೆಂಬಲಿಸಬೇಕಾಗಿ ವಿನಂತಿ.
ಕೊಂಡಿ: https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/akasmita
--[[ಸದಸ್ಯ:Akasmita|Akasmita]] ([[ಸದಸ್ಯರ ಚರ್ಚೆಪುಟ:Akasmita|ಚರ್ಚೆ]]) ೦೮:೦೯, ೨೭ ಆಗಸ್ಟ್ ೨೦೧೯ (UTC)

೧೩:೩೯, ೨೭ ಆಗಸ್ಟ್ ೨೦೧೯ ನಂತೆ ಪರಿಷ್ಕರಣೆ

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |



IPWT ಕಾರ್ಯಾಗಾರ ನಡೆಸುವ ಬಗ್ಗೆ

ಈ ಹಿಂದೆ ಕನ್ನಡ ಸಮುದಾಯದ ಭೇಟಿಯ ಸಂದರ್ಭದಲ್ಲಿ ವಿಕಿಪೀಡಿಯದಲ್ಲಿ ತಮಗೆ ಸಂಪಾದನೆಗೆ ಸಹಾಯಕವಾಗುವ ಹೆಚ್ಚಿನ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯನ್ನು ತೋರಿಸಿದ್ದರು. ಇದರ ಪ್ರಯುಕ್ತ ವೈಯಕ್ತಿಕವಾಗಿ ಅಥವಾ ಸಣ್ಣ ಗುಂಪಿಗೆ ವಿಕಿಪೀಡಿಯ ಮತ್ತು ವಿಕಿಮೀಡಿಯ ಪ್ರಾಜೆಕ್ಟುಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ಹೇಳಿಕೊಡುವ ಕಾರ್ಯಕ್ರಮವನ್ನು (Intensive personalised Wiki Training) ನಡೆಸಬೇಕೆಂದು ಆಶಿಸುತ್ತೇವೆ. ಈ ಕಾರ್ಯಕ್ರಮವನ್ನು ೨೦೧೯ರ ಮೇ ತಿಂಗಳಿನ ೧೮ ಮತ್ತು ೧೯ರಂದು ನಡೆಸಬಹುದೆಂದು ನಮ್ಮ ಅಭಿಪ್ರಾಯ. ಈ ಬಗ್ಗೆ ಸ್ಥಳ, ದಿನಾಂಕ, ಸದಸ್ಯರ ಆಯ್ಕೆ ಮತ್ತು ಇತರ ವಿಷಯಗಳ ಬಗ್ಗೆ ಸಮುದಾಯ ಸದಸ್ಯರು ಹೆಚ್ಚಿನ ಸಲಹೆಗಳನ್ನು ನೀಡಬೇಕಾಗಿ ವಿನಂತಿ. --Gopala (CIS-A2K) (ಚರ್ಚೆ) ೦೮:೨೨, ೨೪ ಏಪ್ರಿಲ್ ೨೦೧೯ (UTC)

ನಿಯಮಗಳು

  • ಈ ಕಾರ್ಯಕ್ರಮಕ್ಕೆ ಬರುವವರಿಗೆ ವಿಕಿಪೀಡಿಯದ ಮೂಲ ಸಂಪಾದನೆ ಗೊತ್ತಿರಬೇಕು.
  • ಕಲಿಯಬಯಸುವ ವಿಷಯಗಳನ್ನು ಆಸಕ್ತ ಭಾಗವಹಿಸುವ ಅಭ್ಯರ್ಥಿಗಳೇ ಪ್ರಸ್ತಾಪಿಸಿದರೆ ಉತ್ತಮ. --Gopala (CIS-A2K) (ಚರ್ಚೆ)

ಅನಿಸಿಕೆ/ಚರ್ಚೆ

ಮಾಡಬಹುದು. ಮೊದಲಿಗೆ ಒಂದು ಮೂಲಭೂತ ರೂಪುರೇಷೆಯನ್ನು ಆಯೋಜಕರು ಪ್ರಸ್ತಾಪಿಸಬಹುದು.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೪:೨೩, ೨೪ ಏಪ್ರಿಲ್ ೨೦೧೯ (UTC)
@Vikashegde: ಧನ್ಯವಾದಗಳು. ಕಾರ್ಯಕ್ರಮವು ವಿಕಿಪೀಡಿಯವನ್ನು ತಕ್ಕ ಮಟ್ಟಿಗೆ ತಿಳಿದಿರುವ ಸಂಪಾದಕರಿಗೆ ಆಗಿರುತ್ತದೆ. ಉದಾಹರಣೆಗೆ ನನಗೆ ವಿಕಿಪೀಡಿಯ ಸಂಪಾದಿಸುವುದು ಗೊತ್ತಿದೆ. ವಿಕಿಪೀಡಿಯದಲ್ಲಿ ಟೆಂಪ್ಲೇಟುಗಳನ್ನು ಸೇರಿಸುವುದು ಗೊತ್ತು. ಆದರೆ ಸೇರಿಸಿದ ಟೆಂಪ್ಲೇಟುಗಳು ಇಂಗ್ಲಿಷ್‌ನಲ್ಲಿ ಬರುತ್ತಿವೆ. ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ತಿಳಿದಿಲ್ಲ. ಅದನ್ನು ಹೇಳಿಕೊಡುವುದು. ಮತ್ತೊಬ್ಬರಿಗೆ ವಿಕಿಪೀಡಿಯದಲ್ಲಿ ವಿಕಿಡೇಟಾ ಸಂಪಾದನೆಯ ಬಗ್ಗೆ ತಿಳಿಯಬೇಕೆಂದಿರಬಹುದು. ಹೀಗೆ ಪ್ರತಿ ಒಬ್ಬರಿಗೂ ಬೇರೆ ಬೇರೆ ವಿಷಯಗಳನ್ನು ಉತ್ತಮ ಮಟ್ಟದಲ್ಲಿ ಮನದಟ್ಟು ಮಾಡುವುದು ಈ ಕಾರ್ಯಕ್ರಮದ ಉದ್ದೇಶ. --Gopala (CIS-A2K) (ಚರ್ಚೆ) ೦೮:೪೦, ೮ ಮೇ ೨೦೧೯ (UTC)
ಇಲ್ಲಿವರೆಗೆ ಯಾರೂ ಭಾಗವಹಿಸಲು ಆಸಕ್ತಿ ತೋರದ ಕಾರಣ ಕಾರ್ಯಕ್ರಮವನ್ನು ಮುಂದೂಡುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ. --Gopala (CIS-A2K) (ಚರ್ಚೆ) ೦೭:೧೦, ೧೬ ಮೇ ೨೦೧೯ (UTC)

Train-the-Trainer 2019 ಗೆ ನನ್ನ ಅರ್ಜಿ ಸಲ್ಲಿಕೆ

Train-the-Trainer 2019 ಕಾರ್ಯಕ್ರಮವು ಮೇ/ಜೂನ್ ತಿಂಗಳಲ್ಲಿ ನಡೆಯಲಿದ್ದು ಕನ್ನಡ ಸಮುದಾಯದಿಂದ ಭಾಗವಹಿಸಲು ನಾನು ಅರ್ಜಿ ಸಲ್ಲಿಸುತ್ತಿದ್ದೇನೆ. ಇದರಿಂದ ವಿದ್ಯುಕ್ತವಾಗಿ ತರಬೇತಿ ಪಡೆದು ಕನ್ನಡ ವಿಕಿಪೀಡಿಯ ಸಮುದಾಯವನ್ನು ಬೆಳೆಸಲು, ತರಬೇತಿ ನೀಡಲು ಕಾರ್ಯಾಗಾರಗಳನ್ನು, ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಸಹಾಯವಾಗುತ್ತದೆ ಎಂದು ನಂಬಿದ್ದೇನೆ. ಹಾಗಾಗಿ ಇದನ್ನು ಕನ್ನಡ ವಿಕಿಸಮುದಾಯದ ಗಮನಕ್ಕೆ ತರುತ್ತಿದ್ದು ಸಹಕಾರವನ್ನು ಕೋರುತ್ತೇನೆ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೪:೫೬, ೨೭ ಏಪ್ರಿಲ್ ೨೦೧೯ (UTC)

ನನ್ನ ಬೆಂಬಲ ಇದೆ ಸರ್--Lokesha kunchadka (ಚರ್ಚೆ) ೧೭:೨೭, ೨೭ ಏಪ್ರಿಲ್ ೨೦೧೯ (UTC)
ನನ್ನ ಬೆಂಬಲ ಸಹ ಇದೆ ಸರ್--ಭರತ್ ಕುಮರ್ ಹೆಚ್ ಎಂ (ಚರ್ಚೆ) ೧೧:೦೨, ೩ ಮೇ ೨೦೧೯ (UTC)
ಸಂತೋಷ - Bharathesha Alasandemajalu (ಚರ್ಚೆ) ೧೬:೨೯, ೩ ಮೇ ೨೦೧೯ (UTC)
ನನ್ನ ಬೆಂಬಲ ಇದೆ --ವಿಶ್ವನಾಥ/Vishwanatha (ಚರ್ಚೆ) ೧೬:೪೬, ೩ ಮೇ ೨೦೧೯ (UTC)
ವಿಕಾಸ್ ಹೆಗಡೆ/ Vikas Hegde ಯಾವತ್ತೋ ಈ ತರಬೇತಿಯಲ್ಲಿ ಭಾಗವಹಿಸಬೇಕಿತ್ತು. ನನ್ನ ಸಂಪೂರ್ಣ ಬೆಂಬಲ ಇದೆ.--ಪವನಜ (ಚರ್ಚೆ) ೧೦:೫೦, ೪ ಮೇ ೨೦೧೯ (UTC)
ನನ್ನ ಬೆಂಬಲ ಇದೆ. ಶ್ರೀ ವಿಕಾಸ್ ಹೆಗಡೆಯವರು ಭಾಗವಹಿಸುವುದು ತುಂಬಾ ಸಂತೋಷದ ಸಂಗತಿ.--ವಿದ್ಯಾಧರ ಚಿಪ್ಳಿ (ಚರ್ಚೆ) ೦೫:೧೧, ೫ ಮೇ ೨೦೧೯ (UTC)
ನನ್ನ ಬೆಂಬಲ ಇದೆ Shivakumar Nayak (ಚರ್ಚೆ) ೦೭:೩೮, ೬ ಮೇ ೨೦೧೯ (UTC)
ನನ್ನ Support ಬೆಂಬಲ ಇದೆ. --ಗೋಪಾಲಕೃಷ್ಣ (ಚರ್ಚೆ) ೦೫:೨೧, ೭ ಮೇ ೨೦೧೯ (UTC)
ಮೇ ೩೧, ಜೂನ್ ೦೧, ೦೨ - ಈ ಮೂರುದಿನಗಳ ಕಾಲ ನಡೆಯುವ TTT2019 ಕಾರ್ಯಾಗಾರದಲ್ಲಿ ಭಾಗವಹಿಸಲು ನನಗೆ ಅವಕಾಶ ದೊರೆತಿದೆ. ಅದರಲ್ಲಿ ಭಾಗವಹಿಸಿ ಬಂದ ನಂತರ ಕನ್ನಡ ವಿಕಿಸಮುದಾಯದ ಸಮ್ಮಿಲನ ಆಯೋಜಿಸೋಣ. ಎಲ್ಲರಿಗೂ ಧನ್ಯವಾದಗಳು --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೩:೪೯, ೧೬ ಮೇ ೨೦೧೯ (UTC)

ವಿಕಿಪೀಡಿಯ ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನಲ್ಲಿ ನಡೆಸುವ ಸಂಬಂಧ ಅರ್ಜಿ ಸಲ್ಲಿಸಲಾಗಿದೆ

ಕನ್ನಡ ಮತ್ತು ತುಳು ವಿಕಿಪೀಡಿಯ ಕುರಿತ ಸಂಪಾದನೋತ್ಸವ ಮತ್ತು ಇತರ ಕಾರ್ಯಕ್ರಮವನ್ನು ನಡೆಸಲು ಹಣಕಾಸಿನ ನೆರವಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಕಾರ್ಯಕ್ರಮವು ಸಂಪೂರ್ಣ ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮ ಜೂನ್ ನಿಂದ ಡಿಸೆಂಬರ್ ವರೆಗೆ ನಡೆಯುತ್ತದೆ(೮ ಸರಣಿ ಕಾರ್ಯಕ್ರಮ ಒಳಗೊಂಡಿರುತ್ತದೆ.) ತಾವು ಬೇಂಬಲಿಸಬೇಕಾಗಿ ಕೋರಿಕೆ.ಲಿಂಕ್ ಇಲ್ಲಿದೆ --Lokesha kunchadka (ಚರ್ಚೆ) ೦೩:೦೫, ೨ ಜೂನ್ ೨೦೧೯ (UTC)

ಆಳ್ವಾಸ್ ಕಾಲೇಜಿನಲ್ಲಿ ಕೆಲವು ವರ್ಷಗಳಿಂದ ವಿಕಿಪೀಡಿಯ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿದೆ. ಅದಕ್ಕೆ ಯಾವುದೇ ಧನಸಹಾಯ ಇದು ತನಕ ಅಗತ್ಯವಿರಲಿಲ್ಲ. ಈಗ ಯಾಕೆ? ಆಳ್ವಾಸ್ ಕಾಲೇಜಿನಲ್ಲಿ ವರ್ಷಂಪ್ರತಿ ನಡೆಯುವ ವಿಕಿಪೀಡಿಯ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದ ಲೋಕೇಶ ಕುಂಚಡ್ಕ ಧನಸಹಾಯಕ್ಕೆ ಅರ್ಜಿ ಹಾಕಿದ್ದು ಯಾಕೆ? --ಪವನಜ (ಚರ್ಚೆ) ೧೦:೩೬, ೧೨ ಜೂನ್ ೨೦೧೯ (UTC)
ಮಾನ್ಯ, ಪವನಜರೆ ವಿಕಿಪೀಡಿಯ ಸಮುದಾಯವನ್ನು ಕಟ್ಟಲು, ವಿಕಿಪೀಡಿಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು, ಅಳ್ವಾಸ್ ಕಾಲೇಜುವಿನ ಸುತ್ತಮುತ್ತಲಿನ ಕಾಲೇಜುಗಳಲ್ಲಿ ವಿಕಿಪೀಡಿಯ ಸಂಬಂಧಿಸಿದ ಕಾರ್ಯಕ್ರಮಕ್ಕೆ ಹಣಕಾಸಿನ ನೆರವು ಅಗತ್ಯವಿದೆ. ಹಣಕಾಸಿನ ನೆರವನ್ನು ತಮ್ಮ ಕಡೆಯಿಂದ ನೀಡುವುದಾದರೆ ತಿಳಿಸಿ. --Lokesha kunchadka (ಚರ್ಚೆ) ೧೮:೦೭, ೧೨ ಜೂನ್ ೨೦೧೯ (UTC)
@Lokesha kunchadka: - ನಿಮ್ಮ ಪೋಸ್ಟ್‍ನ ಶೀರ್ಷಿಕೆಯನ್ನು ಇನ್ನೊಮ್ಮೆ ಓದಿ. ಅದರಲ್ಲಿ ನೀವೇ ಬರೆದುದು -"ವಿಕಿಪೀಡಿಯ ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನಲ್ಲಿ ನಡೆಸುವ ಸಂಬಂಧ ಅರ್ಜಿ ಸಲ್ಲಿಸಲಾಗಿದೆ". ಆದುದರಿಂದಲೇ ನಾನು ಪ್ರಶ್ನೆ ಮಾಡಿದ್ದು - "ಆಳ್ವಾಸ್ ಕಾಲೇಜಿನಲ್ಲಿ ಕೆಲವು ವರ್ಷಗಳಿಂದ ವಿಕಿಪೀಡಿಯ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿದೆ. ಅದಕ್ಕೆ ಯಾವುದೇ ಧನಸಹಾಯ ಇದು ತನಕ ಅಗತ್ಯವಿರಲಿಲ್ಲ. ಈಗ ಯಾಕೆ? ಆಳ್ವಾಸ್ ಕಾಲೇಜಿನಲ್ಲಿ ವರ್ಷಂಪ್ರತಿ ನಡೆಯುವ ವಿಕಿಪೀಡಿಯ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದ ಲೋಕೇಶ ಕುಂಚಡ್ಕ ಧನಸಹಾಯಕ್ಕೆ ಅರ್ಜಿ ಹಾಕಿದ್ದು ಯಾಕೆ?". ದಯವಿಟ್ಟು ಪ್ರಶ್ನೆಗೆ ಉತ್ತರಿಸಿ.--ಪವನಜ (ಚರ್ಚೆ) ೦೫:೫೫, ೧೩ ಜೂನ್ ೨೦೧೯ (UTC)
@Ashoka KG: ಮಾನ್ಯ ಅಶೋಕ್ ಅವರಲ್ಲಿ ಇದೇ ಪ್ರಶ್ನೆ - ಆಳ್ವಾಸ್ ಕಾಲೇಜಿನಲ್ಲಿ ವರ್ಷಂಪ್ರತಿ ನಡೆಯುವ ವಿಕಿಪೀಡಿಯ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದ ಲೋಕೇಶ ಕುಂಚಡ್ಕ ಧನಸಹಾಯಕ್ಕೆ ಅರ್ಜಿ ಹಾಕಿದ್ದು ಯಾಕೆ? ನಿಮ್ಮ ಸದಸ್ಯ ಪುಟದ ಪ್ರಕಾರ ನೀವು ಆಳ್ವಾಸ್ ಕಾಲೇಜಿನ ವಿಕಿಪೀಡಿಯ ಅಸೋಸಿಯೇಶನ್‍ನ ಸಂಯೋಜಕರು. ಈ ಗ್ರಾಂಟ್ ಅರ್ಜಿಯನ್ನು ಲೋಕೇಶ ಕುಂಚಡ್ಕ ಅವರು ಯಾವ ಅಧಿಕಾರದಿಂದ ಸಲ್ಲಿಸಿದ್ದು? ಇದಕ್ಕೆ ನಿಮ್ಮ ಅನುಮತಿಯಿದೆಯೇ? ಗ್ರಾಂಟ್ ಅರ್ಜಿಯನ್ನು ನೀವು ಇದು ತನಕ ಬೆಂಬಲಿಸಿಲ್ಲ ಎಂಬುದರಿಂದ ಈ ಅರ್ಜಿಯನ್ನು ನಿಮ್ಮ ಅನುಮತಿಯಿಲ್ಲದೆ ನಿಮ್ಮ ಆಳ್ವಾಸ್ ಕಾಲೇಜಿನ ಹೆಸರನ್ನು ದುರುಪಯೋಗಪಡಿಸಿಕೊಂಡು ಲೋಕೇಶ ಕುಂಚಡ್ಕ ಅವರು ಸಲ್ಲಿಸಿದ್ದು ಎಂದು ತೀರ್ಮಾನಿಸಬಹುದಲ್ಲವೇ?--ಪವನಜ (ಚರ್ಚೆ) ೧೪:೨೧, ೧೬ ಜೂನ್ ೨೦೧೯ (UTC)
ಅರ್ಜಿ ತಿರಸ್ಕೃತವಾಗಿದೆ.--ಪವನಜ (ಚರ್ಚೆ) ೦೫:೩೦, ೨೨ ಜೂನ್ ೨೦೧೯ (UTC)

ತತ್ಸಮ ತದ್ಭವ ಅಳಿಸುವ ಬಗೆಗೆ

  • ನೋಡಿ:ಚರ್ಚೆಪುಟ:ತತ್ಸಮ ತದ್ಭವ
  • ತತ್ಸಮ ತದ್ಭವ ಕನ್ನಡ ವ್ಯಾಕರಣದ ಉಪಪುಟ ಅದರಲ್ಲಿರುವ ತತ್ಸಮ ತದ್ಭವ ಗಳಿಗೆ ಉದಾಹರಣೆ ಮತ್ತು ವಿವರಣೆ ಅಗತ್ಯವಾಗಿದೆ ಎಂದ ಮಾತ್ರಕ್ಕೆ. ಅಲ್ಲಿರುವ ಆ ಪುಟದ ಕೊಂಡಿಯನ್ನು ತೆಗೆದು ಹಾಕುವುದು ಸರಿಯಲ್ಲ. ಯಾವುದೇ ಸಂಪಾದಕರು ವಿವರಣೆ ಕೊಡಬಹುದು- ಕೊಡಲು ಅವಕಾಶವಿದೆ. ಕಲವು ವಿಷಯಗಳಿಗೆ ಪಟ್ಟಿ ಮಾತ್ರಾ ಇರುವುದು. ಅದು ತಪ್ಪಲ್ಲ. ಪ್ರತಿಷ್ಠೆಯ ವಿಷಯವಾಗಿ ದುರುದ್ದೇಶದಿಂದ ತೆಗೆದರೆ ಅದು ವಿಧ್ವಂಸಕ ಕೃತ್ಯ- ಅಭಿವೃದ್ಧಿಪಡಿಸಿ ಎಂದರೆ ತೆಗೆದು ಹಾಕುತ್ತೇನೆ ಎನ್ನುವುದು ನನ್ನ ಮೇಲಿನ ದ್ವೇಷಕ್ಕೇ ಎಂದು ಭಾವಿಸಬೇಕಾಗುವುದು. ನನಗೆ ನಷ್ಟವಿಲ್ಲ, ನಿಮಗೂ ಅದು ನಷ್ಟವಿಲ್ಲ, ಕನ್ನಡ ವಿಕಿಗೇ ನಷ್ಟ- ನಿಮಗೆ ಕನ್ನಡ ವಿಕಿಗೆ ಲೇಖನಗಳು ಬರದಿದ್ದರೆ ನಷ್ಟವೇ ಇಲ್ಲ - ವಾಸ್ತವವಾಗಿ ಕನ್ನಡ ವ್ಯಾಕರಣ ಪುಸ್ತಕಗಳಲ್ಲಿ ಕೇವಲ "ತತ್ಸಮ ತದ್ಭವ" ಪಟ್ಟಿಯೇ ಇದೆ. ಅದನ್ನು ನೋಡಿಯೇ ನಾನು ಉಲ್ಲೇಖ ಹಾಕಿದ್ದೇನೆ - ಪುಟವನ್ನೂ ಹಾಕಿದ್ದೇನೆ -ದಯವಿಟ್ಟು ನೋಡಿ. ಏನೇ ಆದರೂ ಅದು ಕನ್ನಡ ವ್ಯಾಕರಣದ ಕೊಂಡಿಯ ಪುಟವಾದ್ದರಿಂದ ತೆಗೆಯಲು ನನ್ನ ವಿರೋಧವಿದೆ. ತಾವು ಈ ಕನ್ನಡ ವಿಕಿಯ ಸರ್ವಾಧಿಕಾರಿಯೇ ಎಂದು ಕೇಳಬೇಕಾಗುವುದು. ಬೇರೆಯವರ ಅಭಿಪ್ರಾಯಕ್ಕೆ ಬೆಲೆ ಇಲ್ಲವೇ? ವಂದನೆಗಳು:Bschandrasgr (ಚರ್ಚೆ) ೧೪:೩೨, ೧೭ ಮೇ ೨೦೧೯ (UTC)
  • ತತ್ಸಮ ತದ್ಭವ ಎಂದರೇನು ಎನ್ನುವ ವಿವರಣೆಯನ್ನು ಕೊಟ್ಟಿದೆ. ಅದನ್ನು ಬಿಟ್ಟರೆ ಉದಾಹರಣೆ ವಿನಹ ಬೇರೆ ವಿವರಣಿ ಯಾವ ಕನ್ನಡ ವ್ಯಾಕರಣದಲ್ಲೂ ಇಲ್ಲ. ಮತ್ತು ಅಗತ್ಯವೂ ಇಲ್ಲ. ದಯಮಾಡಿ ಒಂದೆರಡು ತತ್ಸಮ ತದ್ಭವ ಕ್ಕೆ- ಕೇಳುವವರೇ ವಿವರಣೆ ಬರೆದು ತೋರಿಸಲಿ. ನಂತರ ಉಳಿದವರು ವಿಸ್ತರಿಸುತ್ತಾರೆ. -Bschandrasgr (ಚರ್ಚೆ) ೦೮:೨೯, ೧೮ ಮೇ ೨೦೧೯ (UTC)
  • ತತ್ಸಮ ತದ್ಭವ ಪುಟಕ್ಕೆ ಈಗ ಕೊಟ್ಟಿರುವ ವಿವರಣೆಗಿಂತಲೂ ಹೆಚ್ಚನ ವಿವರಣೆ ನನಗೆ ಲಭ್ಯವಿರುವ ಯಾವ ವ್ಯಾಕರಣ ಗ್ರಂಥಗಳಲ್ಲಿಯೂ ಸಿಗುವುದಿಲ್ಲ. ಮತ್ತು ಅಗತ್ಯವೂ ಇಲ್ಲ. ಆದ್ದರಿಂದ ತಪ್ಪು ತಿಳುವಳಿಕೆಯೆಯಿಂದ ಹಾಕಿದ ರದ್ದು ಸೂಚನೆಯನ್ನು ತೆಗೆಯತ್ತಿದ್ದೇನೆ. ತಮ್ಮವ:Bschandrasgr (ಚರ್ಚೆ) ೧೬:೧೩, ೧೯ ಮೇ ೨೦೧೯ (UTC)

ಅನಗತ್ಯ ರದ್ದಿಗೆ ಹಾಕಿರುವುದು - ಮತ್ತೊಂದು ಕೀಟಲೆ- ಕಿರುಕುಳ

  • ಉದಾಹರಣೆಗಳ ಪಟ್ಟಿಗೆ ಅವಕಾಶವಿದೆ -ತತ್ಸಮ ತದ್ಭವಕ್ಕೆ ಪ್ರತಿ ಪದಕ್ಕೆ ವಿವರಣೆ ಅನಗತ್ಯ; - ಅನಗತ್ಯವಾಗಿ ರದ್ದಿಗೆ ಹಾಕಿರುವುದನ್ನು ವಜಾಮಾಡಿದೆ- ಅನೇಕ ವಿವರಣೆಗಳಿಲ್ಲದ ಪಟ್ಟಿಗಳಿವೆ-(ನಿಜವಾಗಿ ವಿವರಣೆ ಬೇಕಾದ ಬೇರೆ ಪಟ್ಟಿಗಲಿವೆ-ಉದಾ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು) ಈ ತತ್ಸಮ ತದ್ಬವ ಪುಟಕ್ಕೆ ವಿವರಣೆ ಅನಗತ್ಯ. "(ಶ್ರೇಷ್ಠ ವಿದ್ವಾಂಸರಾದ ತೀ. ನಂ. ಶ್ರೀಯವರೇ ವಿವರಣೆ ಹಾಕಿಲ್ಲ)" ವಿಕಾಸ ಹೆಗಡೆಯವರು ಪೂರ್ವಾಗ್ರಹವನ್ನು ಬಿಡಬೇಕು- ಸಂಪಾದನೆಗೆ ಸಹಕರಿಸಲಿ. ಇದರಲ್ಲಿ ತಮ್ಮ ಮಾತೇ ನೆಡಯಬೇಕೆಂಬ ದುರುದ್ದೇಸ ಕಾಣತ್ತದೆ. ಈ ಬಗೆಯ ಕಿರುಕುಳವನ್ನು ನಿಲ್ಲಿಸ ಬೇಕು. ಇವರ ಕಿರುಕುಳದಿಂದ ಜಗತ್ತಿನಲ್ಲೇ ಪ್ರಸಿದ್ಧವಾದ ೨೦೧೯ರ ಬಾರತದ ಸಾರ್ವರ್ತ್ರಿಕ ಚುನಾವಣೆಯ ಪುಟವನ್ನು ಯಾರೂ ಹಾಕಿಲ್ಲ. ಬೇರೆಯವರು ಹಾಕುವ ಪ್ರಸ್ತುತ ಪುಟಕ್ಕೆ ತಕರಾರು ಮಾಡುವ- ಕಿರುಕುಳಕೊಡುವ ನೀವು ತಯಾರಿಸಿ ಹಾಕಿ ಎಂದರೆ, ಹಾಕಿಲ್ಲ. ಆ ಪುಟ ತಯಾರಿಸುವ ಯೋಗ್ಯತೆಯೇ ಇಲ್ಲವೇ ಎಂಬ ಅನುಮಾನ ಬರುತ್ತದೆ. ಈಗ ಪ್ರಸ್ತುತತೆ ಕಳೆದರೂ ಆ ಪುಟವನ್ನು ತಯಾರಿಸಿಲ್ಲ. ಭಾರತದ ಇತರೆ ಭಾಷೆಗಳಲ್ಲಿ (ಹೆಗಡೆಯವರ ನೀತಿಗೆ ವಿರುದ್ಧವಾಗಿ ವರ್ತಮಾನಕಾಲದಲ್ಲಿಯೇ) ಮೊದಲೇ ತಯಾರಿಸಿದ್ದಾರೆ. ಪ್ರಶಸ್ತಿ ಪಡೆದವರ ಪಟ್ಟಿ, ಶಾಸನ ಸಭೆ ಸದಸ್ಯರ ಪಟ್ಟಿ, ಹೀಗೆ ಅನೇಕ ಪಟ್ಟಿಗಳಿಗೆ ವಿವರಣೆ ಇಲ್ಲ. ತತ್ಸಮ ತದ್ಭವ ಪಟ್ಟಿಗೆ ಅದರಲ್ಲಿ ಮೇಲೆ ಕೊಟ್ಟ ವಿವರಣೆಗಿಂತ ಹೆಚ್ಚಿನ ವಿವರಣೆ ಅನಗತ್ಯ- ದಯವಿಟ್ಟು ವಿಕಾಸ ಹೆಗಡೆಯವರು ತಮ್ಮ ತಿಳುವಳಿಕೆಗೆ ಮೀರಿದ ವಿಷಯದಲ್ಲಿ ತಲೆ ಹಾಕಿ ತಕರಾರು ಕಿರುಕುಳ ನೀಡಬಾರದೆಂದು ಕೋರುತ್ತೇನೆ. ತಕರಾರು ಮಾಡತ್ತಿರುವ ಅವರು, ಮೊದಲು ೨೦೧೯ರ ಬಾರತದ ಸಾರ್ವರ್ತ್ರಿಕ ಚುನಾವಣೆಯ ಪುಟವನ್ನು ತಯಾರಿಸಲಿ. ಕನ್ನಡ ವಿಕಿಪೀಡಿಯ ಅಭಿವೃದ್ಧಿಯ ದೃಷ್ಟಿಯಿಮದ ಹೇಳುತ್ತಿದ್ದೇನೆ ನನಗೆ ಯಾವ ಲಾಭವೂ ಇಲ್ಲ. Bschandrasgr (ಚರ್ಚೆ) ೧೭:೨೮, ೪ ಜೂನ್ ೨೦೧೯ (UTC)

ವಿಕಿಪೀಡಿಯದಲ್ಲಿ ಸಿದ್ಧ ಮಾದರಿಯ ಲೇಖನಗಳನ್ನು ತಯಾರಿಸುವ ಯೋಜನೆಯ ಬಗ್ಗೆ

ಮಾನ್ಯರೇ,
ಕನ್ನಡ ವಿಕಿಪೀಡಿಯದಲ್ಲಿ ಹೆಚ್ಚಿನ ಲೇಖನಗಳನ್ನು ನೋಡುವುದು ನಮ್ಮೆಲ್ಲರ ಆಶಯವೂ ಹೌದು. ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಪ್ರಯೋಗವೊಂದನ್ನು ಕೈಗೊಳ್ಳಲು ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಉದ್ದೇಶಿಸಿದ್ದು, ಇದಕ್ಕಾಗಿ ನಿಮ್ಮ ನೆರವನ್ನು ಅಪೇಕ್ಷಿಸುತ್ತಿದೆ. ದಯಮಾಡಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿ ತಮ್ಮ ಬೆಂಬಲ ನೀಡಬೇಕಾಗಿ ಕೋರುತ್ತೇನೆ.

ಪ್ರಯೋಗದ ಸಾರಾಂಶ

ಸ್ಥೂಲವಾದ ಒಂದು ವಿಷಯಕ್ಕೆ ಸಂಬಂಧಪಟ್ಟ, ಸಿದ್ಧ ಮಾದರಿಯ ಸುಮಾರು ೧೦೦ ಬರಹಗಳನ್ನು ತಂತ್ರಾಂಶದ ಸಹಾಯದಿಂದ ರೂಪಿಸಿ, ಸಂಪಾದಕರ ಪರಿಶೀಲನೆಯ ನಂತರ ಕನ್ನಡ ವಿಕಿಪೀಡಿಯದಲ್ಲಿ ಪ್ರಕಟಿಸುವುದು.

ವಿವರ

ವಿಶ್ವಸಂಸ್ಥೆ ನೂರಕ್ಕೂ ಹೆಚ್ಚು ವಿಶೇಷ ವಾರ್ಷಿಕ ದಿನಗಳನ್ನು ಗುರುತಿಸಿದೆ (un.org/en/sections/observances/international-days). ಈ ದಿನಗಳ ಪಟ್ಟಿಯಲ್ಲಿ ಪರಿಸರ ದಿನ, ಜನಸಂಖ್ಯಾ ದಿನ ಮುಂತಾದ ಪರಿಚಿತ ಆಚರಣೆಗಳಷ್ಟೇ ಅಲ್ಲದೆ ಬೆಳಕಿನ ದಿನ, ಶೌಚಾಲಯ ದಿನ, ಸೈಕಲ್ ದಿನಗಳಂತಹ ವಿಶಿಷ್ಟ ಆಚರಣೆಗಳೂ ಇವೆ. ಇಂತಹ ದಿನಾಚರಣೆಗಳ ಬಗೆಗಿನ ಮಾಹಿತಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕನ್ನಡ ವಿಕಿಪೀಡಿಯದಲ್ಲಿ ಬಹಳ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಇದೆ (https://kn.wikipedia.org/wiki/ವರ್ಗ:ಪ್ರಮುಖ_ದಿನಗಳು). ಇಂತಹ ದಿನಾಚರಣೆಗಳನ್ನು ಕುರಿತ ಬರಹಗಳನ್ನು ಒಂದು ಸಿದ್ಧ ಮಾದರಿಗೆ (ಟೆಂಪ್ಲೇಟ್) ಹೊಂದಿಸಬಹುದಾಗಿದ್ದು, ಅಗತ್ಯ ಮಾಹಿತಿಯನ್ನೆಲ್ಲ ಒಂದುಕಡೆ (ಉದಾ: ಡೇಟಾಬೇಸ್) ಸಂಗ್ರಹಿಸಿಟ್ಟರೆ ಅಷ್ಟೂ ಲೇಖನಗಳನ್ನು ತಂತ್ರಾಂಶದ ಸಹಾಯದಿಂದ ಸಿದ್ಧಪಡಿಸಬಹುದು. ಈ ಲೇಖನಗಳು ವಿಕಿಪೀಡಿಯದಲ್ಲಿ ಪ್ರಕಟಣೆಗೆ ಬೇಕಾದ ರೂಪದಲ್ಲೇ (ವಿಕಿಟೆಕ್ಸ್ಟ್) ಇರುವಂತೆಯೂ ನೋಡಿಕೊಳ್ಳಬಹುದು. ಈ ಚಟುವಟಿಕೆ ಕೈಗೊಳ್ಳಲು ಇಜ್ಞಾನ ಟ್ರಸ್ಟ್ ಉದ್ದೇಶಿಸಿದ್ದು ಅದಕ್ಕೆ ಬೇಕಾಗುವ ನೆರವನ್ನು ಅಪೇಕ್ಷಿಸುತ್ತಿದೆ.

ಈ ಪ್ರಯೋಗದ ವಿವಿಧ ಹಂತಗಳು ಹೀಗಿರಲಿವೆ

  • ವಿಶ್ವಸಂಸ್ಥೆ ಪ್ರಕಟಿಸಿರುವ ಪಟ್ಟಿಯಿಂದ ೧೦೦ ಪ್ರಾತಿನಿಧಿಕ ದಿನಗಳ ಆಯ್ಕೆ
  • ಈ ದಿನಗಳ ಕುರಿತು ಲೇಖನ ಸಿದ್ಧಪಡಿಸಲು ಬೇಕಾದ ಮಾಹಿತಿಯ ಸಂಗ್ರಹಣೆ
  • ಲೇಖನದ ಸಿದ್ಧ ಮಾದರಿ (ಟೆಂಪ್ಲೇಟ್) ತಯಾರಿ
  • ಮಾಹಿತಿ ಹಾಗೂ ಮಾದರಿ ಬಳಸಿಕೊಂಡು ಲೇಖನ ತಯಾರಿಸುವ ತಂತ್ರಾಂಶದ ತಯಾರಿ ಮತ್ತು ಪರೀಕ್ಷೆ
  • ಲೇಖನಗಳ ಪರಿಶೀಲನೆ ಹಾಗೂ ಪ್ರಕಟಣೆಗಾಗಿ ಎಡಿಟಥಾನ್ ಮಾದರಿಯ ಕಾರ್ಯಕ್ರಮ ಆಯೋಜನೆ
  • ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಪ್ರಕಟಣೆ.

ಈ ಪ್ರಯೋಗಕ್ಕೆ ತಗುಲಬಹುದಾದ ಖರ್ಚಿನ ಅಂದಾಜು ವಿವರ

  • ಸಿದ್ಧ ಮಾದರಿ ಹಾಗೂ ತಂತ್ರಾಂಶದ ತಯಾರಿ ಮತ್ತು ಪರೀಕ್ಷೆ ಮಾಡುವ ತಂತ್ರಜ್ಞರ ಗೌರವಧನ, ಸು. ೮೦ ಗಂಟೆಗಳ ಕೆಲಸಕ್ಕೆ ತಲಾ ರೂ. ೫೦೦ರಂತೆ: ರೂ. ೪೦,೦೦೦
  • ಎಡಿಟಥಾನ್ ಆಯೋಜನೆಗೆ ತಗುಲಬಹುದಾದ ವೆಚ್ಚ, ಸುಮಾರು ೧೦ ಪ್ರತಿನಿಧಿಗಳ ಊಟ-ತಿಂಡಿ, ಸ್ಥಳೀಯ ಪ್ರಯಾಣ ಇತ್ಯಾದಿಗಳಿಗೆ: ರೂ. ೭,೫೦೦
  • ಇತರೆ ಸಂಭಾವ್ಯ ವೆಚ್ಚಗಳು: ರೂ. ೨,೫೦೦
  • ಎಡಿಟಥಾನ್‌ನಲ್ಲಿ ಭಾಗವಹಿಸುವವರಿಗೆ ವಿಕಿಪೀಡಿಯ ಲೋಗೋ ಇರುವ ಟೀಶರ್ಟ್, ಪೆನ್ ಮುಂತಾದ ಕೊಡುಗೆ (ಒಟ್ಟು ವೆಚ್ಚದಲ್ಲಿ ಸೇರಿಲ್ಲ)
  • ಒಟ್ಟು ಅಂದಾಜು ವೆಚ್ಚ: ರೂ. ೫೦,೦೦೦.

ಎಡಿಟಥಾನ್ ಕಾರ್ಯಕ್ರಮವನ್ನು ನೀವೇ ಆಯೋಜಿಸುವುದಾದರೆ ಆ ವೆಚ್ಚವನ್ನು ಇದರಿಂದ ಹೊರಗಿಡಬಹುದು.
ಈ ಪ್ರಯೋಗಕ್ಕೆ ಒಟ್ಟಾರೆಯಾಗಿ ಸುಮಾರು ಒಂದು ತಿಂಗಳ ಅವಧಿ ಬೇಕಾಗಬಹುದು ಎನ್ನುವುದು ನಮ್ಮ ನಿರೀಕ್ಷೆ.

ಪ್ರಯೋಗದಿಂದ ದೊರಕುವ ಫಲಿತಾಂಶ

  • ಕನ್ನಡ ವಿಕಿಪೀಡಿಯಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ೧೦೦ ಮಹತ್ವದ ದಿನಗಳನ್ನು ಕುರಿತ ಲೇಖನಗಳ ಸೇರ್ಪಡೆ
  • ಇನ್ನೂ ಹೆಚ್ಚಿನ ದಿನಗಳ ಬಗ್ಗೆ ಮಾಹಿತಿ ಸೇರಿಸಲು ಆಸಕ್ತಿಯಿರುವವರು ಬಳಸಬಹುದಾದ ಸರಳ ತಂತ್ರಾಂಶ
  • ಇಂಥದ್ದೇ ಇನ್ನೂ ಕೆಲ ಪ್ರಯೋಗಗಳನ್ನು (ಉದಾ: ಮಹತ್ವದ ವ್ಯಕ್ತಿಗಳು, ಪುಸ್ತಕಗಳು ಇತ್ಯಾದಿ) ಆಯೋಜಿಸಬಹುದಾದ ಸಾಧ್ಯತೆ.

ಈ ಪ್ರಸ್ತಾವನೆಯನ್ನು ನಾವು CIS-A2Kಗೆ ನಾವು ಸಲ್ಲಿಸಲು ಇಚ್ಚಿಸುತ್ತೇವೆ. ಈ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ, ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ದಯಮಾಡಿ ತಿಳಿಸಿ.

ಧನ್ಯವಾದಗಳು.
ವಿಶ್ವಾಸದಿಂದ,
ಟಿ. ಜಿ. ಶ್ರೀನಿಧಿ
ಕಾರ್ಯದರ್ಶಿ
ಇಜ್ಞಾನ ಟ್ರಸ್ಟ್, ಬೆಂಗಳೂರು
--ಟಿ. ಜಿ. ಶ್ರೀನಿಧಿ (ಚರ್ಚೆ) ೧೪:೦೯, ೧೧ ಜೂನ್ ೨೦೧೯ (UTC)

ಅಭಿಪ್ರಾಯಗಳು

ಧನ್ಯವಾದಗಳು ವಿಕಾಸ್. ಟೆಂಪ್ಲೇಟ್ ಹಾಗೂ ತಂತ್ರಾಂಶ ತಯಾರಿಸಿ ಪರೀಕ್ಷಿಸಲು ಒಂದು ತಿಂಗಳ ಸಮಯ ಬೇಕಾಗಬಹುದು ಎನ್ನುವುದು ನಮ್ಮ ಅಂದಾಜು. ತಂತ್ರಾಂಶ ಬಳಸಿ ಲೇಖನಗಳನ್ನು ತಯಾರಿಸುವುದು ಹಾಗೂ ಅವನ್ನು ವಿಕಿಪೀಡಿಯದಲ್ಲಿ ಪ್ರಕಟಿಸುವುದನ್ನು ಆನಂತರ ಮಾಡಬೇಕಾಗುತ್ತದೆ. --ಟಿ. ಜಿ. ಶ್ರೀನಿಧಿ (ಚರ್ಚೆ) ೧೬:೨೯, ೧೧ ಜೂನ್ ೨೦೧೯ (UTC)
  • ಸಲಹೆಗಳು-
  1. ಕನ್ನಡ ವಿಕಿಪೀಡಿಯದಲ್ಲಿ ಹಲವು ಯೋಜನೆಗಳು ಚಾಲನೆಯಲ್ಲಿವೆ. ಇದನ್ನೂ ಅಲ್ಲಿಯೇ ಸೇರಿಸುವುದು ಉತ್ತಮ.
  2. ತಂತ್ರಾಂಶ ತಯಾರಕರ ಕೆಲಸ ಏನು ಮತ್ತು ಅದು ಯಾವ ರೀತಿ ಎಂದು ಸರಿಯಾಗಿ ವಿಶದವಾಗಿಸಿ.
  3. ಇಜ್ಞಾನ ಪ್ರಮುಖವಾಗಿ ವಿಜ್ಞಾನ-ತಂತ್ರಜ್ಞಾನವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಹೊಂದಿರುವುದರಿಂದ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ ವಿಜ್ಞಾನ ಪಠ್ಯ ಲೇಖನಗಳು ಮತ್ತು ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಒಂದು ತಾರ್ಕಿಕ ಹಂತ ಅಥವಾ ಗುರಿ ತಲುಪಿಸಬಹುದು.--ಪವನಜ (ಚರ್ಚೆ) ೧೭:೧೯, ೧೧ ಜೂನ್ ೨೦೧೯ (UTC)
ಧನ್ಯವಾದಗಳು. ಟೆಂಪ್ಲೇಟ್ ಬಳಸಿಕೊಂಡು ಒಂದೇ ರೀತಿಯ ಹಲವು ಲೇಖನಗಳನ್ನು ಸಿದ್ಧಪಡಿಸಲು ಸಾಧ್ಯವೇ ಎಂದು ಪ್ರಾಯೋಗಿಕವಾಗಿ ಪರೀಕ್ಷಿಸಿ ನೋಡುವುದು ನಮ್ಮ ಉದ್ದೇಶ. ತಂತ್ರಾಂಶ ತಯಾರಿಸುವವರ ಕೆಲಸವೂ ಅದೇ ಆಗಿರಲಿದೆ. ನಿರ್ದಿಷ್ಟ ಸ್ವರೂಪದ ಲೇಖನವನ್ನು ಆದಷ್ಟೂ ಸರಳವಾಗಿ ರೂಪಿಸಲು ನೆರವಾಗುವ - ಈ ಉದ್ದೇಶಕ್ಕೆ ಮಾತ್ರ ಸೀಮಿತವಾದ - ತಂತ್ರಾಂಶವೊಂದನ್ನು ಅವರು ರೂಪಿಸುತ್ತಾರೆ. ಇದರಲ್ಲಿ ಟ್ರಯಲ್ ಆಂಡ್ ಎರರ್ ಗೂ ಸಾಕಷ್ಟು ಸಮಯ ಬೇಕಾಗಬಹುದು ಎನ್ನುವುದು ನಮ್ಮ ಊಹೆ. ಲೇಖನದ ವಿಷಯಕ್ಕಿಂತ ಲೇಖನ ತಯಾರಿಸುವ ವಿಧಾನಕ್ಕೆ, ಮತ್ತು ಅದರಲ್ಲಿ ತಂತ್ರಜ್ಞಾನದ ಬಳಕೆಗೆ ನಾವಿಲ್ಲಿ ಪ್ರಾಮುಖ್ಯ ನೀಡುತ್ತಿದ್ದೇವೆ. ತಮ್ಮ ಸಲಹೆಯಂತೆ ವಿಜ್ಞಾನ ಲೇಖನಗಳ ತಯಾರಿಯನ್ನೂ ಮುಂದೊಮ್ಮೆ ಕೈಗೆತ್ತಿಕೊಳ್ಳುವುದು ಸಾಧ್ಯವಾಗಬಹುದೆಂದು ಆಶಿಸುತ್ತೇನೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ. ಧನ್ಯವಾದಗಳು. --ಟಿ. ಜಿ. ಶ್ರೀನಿಧಿ (ಚರ್ಚೆ) ೦೨:೩೬, ೧೨ ಜೂನ್ ೨೦೧೯ (UTC)
ತಮಿಳು ಮತ್ತು ತೆಲುಗಿನಲ್ಲಿ ಪ್ರೋಗ್ರಾಮ್ ಮೂಲಕ ವಿಕಿಗೆ (ವಿಕಿಪೀಡಿಯ, ವಿಕಿಸೋರ್ಸ್, ವಿಕ್ಷನರಿ) ಮಾಹಿತಿ ಸೇರಿಸಿದ್ದಾರೆ ಎಂದು ನನ್ನ ನೆನಪು. ತಂತ್ರಾಂಶ ಲಭ್ಯವಿರಬೇಕು. ಸ್ವಲ್ಪ ವಿಚಾರಿಸಿ.--ಪವನಜ (ಚರ್ಚೆ) ೦೫:೪೩, ೧೩ ಜೂನ್ ೨೦೧೯ (UTC)
ಪ್ರತಿಕ್ರಿಯೆಗಾಗಿ ಧನ್ಯವಾದ. ದಯಮಾಡಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು (ಅಲ್ಲಿ ಬಳಸಿದ ತಂತ್ರಾಂಶದ ಸ್ವರೂಪ ಮತ್ತು ಉದ್ದೇಶ, ಅದರ ಬಗ್ಗೆ ಮಾಹಿತಿ ಸಿಗಬಹುದಾದ ಮೂಲಗಳು ಇತ್ಯಾದಿ) ಹಂಚಿಕೊಳ್ಳಿ. --ಟಿ. ಜಿ. ಶ್ರೀನಿಧಿ (ಚರ್ಚೆ) ೧೭:೨೦, ೧೩ ಜೂನ್ ೨೦೧೯ (UTC)
ಇದನ್ನು ನೋಡಿ -pywikibot --ಪವನಜ (ಚರ್ಚೆ) ೧೭:೨೯, ೧೩ ಜೂನ್ ೨೦೧೯ (UTC)
ಧನ್ಯವಾದಗಳು ಟಿ. ಜಿ. ಶ್ರೀನಿಧಿ (ಚರ್ಚೆ) ೦೬:೦೫, ೧೨ ಜೂನ್ ೨೦೧೯ (UTC)
@ಟಿ. ಜಿ. ಶ್ರೀನಿಧಿ , ಪುಟಗಳನ್ನು ರಚಿಸಲು ನಿಮಗೆ ತಂತ್ರಜ್ಞರು ಏಕೆ ಬೇಕು? ಸಮುದಾಯದೊಂದಿಗೆ ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ನೀವು ವಿವರಿಸಿದರೆ ಸಹಾಯ ಮಾಡಬಹುದು ಮತ್ತು ಪವನಜ ಹೇಳಿದಂತೆ ನಡೆಯುತ್ತಿರುವ ಯೋಜನೆಗಳಲ್ಲಿ ಕೆಲಸ ಮಾಡುವುದು ಉತ್ತಮ.★ Anoop✉ ೦೩:೧೧, ೧೪ ಜೂನ್ ೨೦೧೯ (UTC)
ನಮಸ್ಕಾರ. ತಂತ್ರಜ್ಞರ ಕೆಲಸವನ್ನು ಮೇಲೆ ವಿವರಿಸಿದ್ದೇನೆ ಎಂದುಕೊಂಡಿದ್ದೆ. ೧೦೦ ಲೇಖನಗಳಿಗೆ ಬೇಕಾದ ಡೇಟಾ ಪಾಯಿಂಟ್‌ಗಳನ್ನು ಒಂದುಕಡೆ (ಉದಾ: ಡೇಟಾಬೇಸ್) ಕಲೆಹಾಕಿ, ಲೇಖನದ ಟೆಂಪ್ಲೇಟ್ ಮಾಡಿದ ಮೇಲೆ ಆ ಡೇಟಾ ಪಾಯಿಂಟ್‌ಗಳನ್ನು ಲೇಖನಗಳಾಗಿ ಪರಿವರ್ತಿಸುವ ತಂತ್ರಾಂಶವನ್ನು ತಂತ್ರಜ್ಞರು ಸಿದ್ಧಪಡಿಸುತ್ತಾರೆ. ಡೇಟಾ ಪಾಯಿಂಟ್‌ಗಳನ್ನೂ ಲೇಖನದ ಟೆಂಪ್ಲೇಟ್ ಅನ್ನೂ ಹೊಂದಿಸಿಕೊಡುವುದು ತಂತ್ರಾಂಶದ ಕೆಲಸ. ಇಲ್ಲಿ ಹೇಳಿರುವ ೧೦೦ ಲೇಖನಗಳನ್ನು ಯಾರೊಬ್ಬರೂ ಕುಳಿತು ಟೈಪ್ ಮಾಡುವುದಿಲ್ಲ - ಅವನ್ನೆಲ್ಲ ಆ ತಂತ್ರಾಂಶವೇ ಸಿದ್ಧಪಡಿಸುತ್ತದೆ. ಎಡಿಟಥಾನ್ ಕೇಳಿರುವುದು ಆ ಲೇಖನಗಳನ್ನು ಪರಿಶೀಲಿಸಿ, ತಪ್ಪುಗಳೇನಾದರೂ ಇದ್ದರೆ ತಿದ್ದಿ, ಪ್ರಕಟಿಸುವುದಕ್ಕೆ ಮಾತ್ರ. ಮುಂದಿನ ಹಂತದಲ್ಲಿ - ನಮ್ಮ ಪ್ರಯೋಗ ಯಶಸ್ವಿಯಾಗಿದೆ ಅನ್ನಿಸಿದ ಮೇಲೆ - ಈ ಕೆಲಸವನ್ನೂ ಆಟೋಮೇಟ್ ಮಾಡಬಹುದು. ಬೇರೆ ಯೋಜನೆಗಳಲ್ಲಿ ಕೈಜೋಡಿಸುವ ಸಲಹೆಗೆ ಧನ್ಯವಾದಗಳು. ಮುಂದೆ ಯಾವಾಗಲಾದರೂ ಸಾಧ್ಯವಾದಾಗ ಅದನ್ನೂ ಮಾಡಬಹುದು. --ಟಿ. ಜಿ. ಶ್ರೀನಿಧಿ (ಚರ್ಚೆ) ೦೫:೨೭, ೧೪ ಜೂನ್ ೨೦೧೯ (UTC)
@ಟಿ. ಜಿ. ಶ್ರೀನಿಧಿ,ಮೇಲೆ ತಿಳಿಸಲಾದ ವಿಷಯಕ್ಕೆ ಹೆಚ್ಚಿನ ವಿವರಗಳನ್ನು ನನಗೆ ಬೇಕಿದೆ, ಉದಾಹರಣೆ: ನಾವು ವಿಕಿಡಾಟಾವನ್ನು ಹೊಂದಿದ್ದೇವೆ, ಲೇಖನಗಳಲ್ಲಿ ವಿಕಿಡಾಟವನ್ನು ಉಪಯೋಗಿಸಲು ನಾವು ಇನ್ನೂ ಪ್ರಯತ್ನಿಸಲಿಲ್ಲ. ಹಾಗಾಗಿ ನನ್ನ ಅಭಿಪ್ರಾಯದಲ್ಲಿ ನೀವು ಡೇಟಾಕ್ಕಾಗಿ ಮತ್ತೊಂದು ಮೂಲಗಳನ್ನು ಹುಡುಕುತ್ತಿದ್ದರೆ ಅದು ಸಮಯ ವ್ಯರ್ಥ. ಅಥವಾ ಡೇಟಾ ಸಂಗ್ರಹಣೆಗೆ ನೀವು ಯಾವುದೇ ಉತ್ತಮ ಸಂಪನ್ಮೂಲವನ್ನು ಹೊಂದಿದ್ದರೆ ದಯವಿಟ್ಟು ನನಗೆ ತಿಳಿಸಿ.★ Anoop✉ ೦೭:೦೪, ೧೪ ಜೂನ್ ೨೦೧೯ (UTC)
@ಟಿ. ಜಿ. ಶ್ರೀನಿಧಿ, ಆ ತಂತ್ರಾಂಶಕ್ಕೆ 'ಕನ್ನಡ' ಕಂಟೆಂಟ್ ಊಡಿಸುವುದಕ್ಕಾದರೂ ಯಾರಾದರೂ ಟೈಪ್ ಮಾಡಿ ಹಾಕಲೇಬೇಕಲ್ಲ? ---ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೭:೦೮, ೧೪ ಜೂನ್ ೨೦೧೯ (UTC)
ಸದಸ್ಯ:Gopala Krishna A ಮಂಗಳೂರಿನ ವಿಕಿಡಾಟ ಕಾರ್ಯಾಗಾರಕ್ಕೆ ಹಾಜರಿದ್ದರು , ಬಹುಶಃ ಅವರು ಅದನ್ನು ವಿವರಿಸಬಹುದು.★ Anoop✉ ೦೭:೩೩, ೧೪ ಜೂನ್ ೨೦೧೯ (UTC)
ಪ್ರಮುಖ ದಿನಗಳ ಉದಾಹರಣೆಯ ಜೊತೆ ಇದನ್ನು ಇನ್ನಷ್ಟು ವಿವರಿಸಲು ಪ್ರಯತ್ನಿಸುತ್ತೇನೆ. ವಿಶ್ವಸಂಸ್ಥೆಯ ಪಟ್ಟಿಯನ್ನು (ಕೊಂಡಿ ಮೇಲಿನ ಪ್ರಸ್ತಾವನೆಯಲ್ಲಿದೆ) ಆಧಾರವಾಗಿಟ್ಟುಕೊಂಡು ನೂರು ದಿನಗಳನ್ನು ಆರಿಸಿಕೊಳ್ಳುವುದು ಮೊದಲ ಹೆಜ್ಜೆ. ಹೀಗೆ ಆರಿಸಿದ ನೂರು ದಿನಗಳ ಬಗ್ಗೆ ಒಂದಷ್ಟು ಡೇಟಾ ಪಾಯಿಂಟ್‌ಗಳನ್ನು (ಆಚರಣೆಯ ಹೆಸರು, ದಿನಾಂಕ, ಉದ್ದೇಶ, ಇತಿಹಾಸ, ಅಧಿಕೃತ ಜಾಲತಾಣದ ಕೊಂಡಿ - ಹೀಗೆ) ಸಂಗ್ರಹಿಸಿ ಒಂದು ಟೇಬಲ್‌ನಲ್ಲಿ ಶೇಖರಿಸಿಡುವುದು ಎರಡನೇ ಹೆಜ್ಜೆ (manual task). ಇದರ ಆಧಾರದ ಮೇಲೆ ಲೇಖನ ಬರೆಯಬೇಕಲ್ಲ, ಅದಕ್ಕೊಂದು ಟೆಂಪ್ಲೇಟ್ ತಯಾರಿಸುವುದು ಮೂರನೇ ಹೆಜ್ಜೆ. ಈ ಟೆಂಪ್ಲೇಟ್‌ನೊಳಕ್ಕೆ ಡೇಟಾ ಪಾಯಿಂಟ್‌ಗಳನ್ನು ಸೇರಿಸಿ ೧೦೦ ಲೇಖನ ಸಿದ್ಧಪಡಿಸುವುದು ನಾವು ಉದ್ದೇಶಿಸಿರುವ ತಂತ್ರಾಂಶದ ಕೆಲಸ. ಎಡಿಟಥಾನ್‌ ಸಂದರ್ಭದಲ್ಲಿ ಈ ಲೇಖನಗಳನ್ನು ಪರಿಶೀಲಿಸಿ, ತಪ್ಪುಗಳಿದ್ದರೆ ತಿದ್ದಿ, ವಿಕಿಪೀಡಿಯದಲ್ಲಿ ಲೇಖನ ಈಗಾಗಲೇ ಇದ್ದರೆ ಏನು ಮಾಡಬೇಕೆಂದು ತೀರ್ಮಾನಿಸಿ ಮುಂದುವರೆಯುವುದು ಕೊನೆಯ ಹೆಜ್ಜೆ. -- ಟಿ. ಜಿ. ಶ್ರೀನಿಧಿ (ಚರ್ಚೆ) ೦೯:೧೧, ೧೪ ಜೂನ್ ೨೦೧೯ (UTC)
ಅಂದಹಾಗೆ ಅಂತಾರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ವಿಕಿಡೇಟಾದಲ್ಲೂ ಮಾಹಿತಿ ಇದೆ. ಕನ್ನಡದ ಮಾಹಿತಿ ಇದ್ದರೆ ಅದನ್ನು ಉಪಯೋಗಿಸಿಕೊಳ್ಳುವ ಬಗೆಗೂ ಯೋಚಿಸಬಹುದು. ಇಲ್ಲದಿದ್ದರೆ ನಾವು ಸಂಗ್ರಹಿಸಿದ ಡೇಟಾ ಪಾಯಿಂಟ್‌ಗಳನ್ನು ನಿಮ್ಮೆಲ್ಲರ ನೆರವಿನಿಂದ ವಿಕಿಡೇಟಾಗೆ ಸೇರಿಸುವುದೂ ಸಾಧ್ಯ. -- ಟಿ. ಜಿ. ಶ್ರೀನಿಧಿ (ಚರ್ಚೆ) ೦೯:೧೧, ೧೪ ಜೂನ್ ೨೦೧೯ (UTC)

ಈಗಾಗಲೇ ಬೇರೆ ಭಾಷೆಯ ವಿಕಿಗಳಲ್ಲಿ ಈ ಪ್ರಯತ್ನ ನಡೆದಿದೆ ಎಂದು ಕೇಳ್ಪಟ್ಟಿದ್ದೇನೆ. ನನಗೆ ತಿಳಿದ ಮಟ್ಟಿಗೆ ವಿಕಿ ಕೆಲಸಗಳನ್ನು ವೈಯಕ್ತಿಕ ಮತ್ತು ಸಮುದಾಯ ಮಟ್ಟದ ಆಸಕ್ತಿಯಿಂದ ಮಾಡಬಹುದಾಗಿದ್ದು ಸಾಮುದಾಯಿಕ ಕೆಲಸಗಳಿಗೆ ಫಂಡಿಂಗ್ ಬೇಡಿಕೆ ಇಡಬಹುದು. ಆದರೆ ವೃತ್ತಿಪರ ಅಥವಾ ಪಾವತಿ ಆಧಾರದಲ್ಲಿ ಮಾಡಲು ಹಣಕಾಸಿನ ನೆರವಿನ ಕೋರಿಕೆಯು ಸಾಧುವಲ್ಲ. ತಂತ್ರಜ್ನರೂ ಸಹ ವಿಕಿಪೀಡಿಯನ್ನರಾಗಿದ್ದು ಸ್ವಯಂ ಆಸಕ್ತಿಯಿಂದ ವಿಕಿಗೆ ಸಹಾಯವಾಗುವಂತಹ ಏನಾದರೂ ಮಾಡಬಹುದಾದ ಯೋಜನೆ ಹಾಕಿದರೆ ಅದಕ್ಕೆ ಬೇಕಾದ ಸಲಕರಣೆ ಸಾಮಗ್ರಿ ಆಕರಗಳ ಅಗತ್ಯವಿದ್ದಲ್ಲಿ ಅದರ ಆಧಾರದಲ್ಲಿ ನೆರವು ಪಡೆಯಬಹುದೇ ಹೊರತು ಹೀಗೆ ಮಾಡುವ ಕೆಲಸಕ್ಕೆ ಗಂಟೆ ಲೆಕ್ಕದ ಅಥವಾ ಮತ್ಯಾವುದೇ ರೀತಿಯ ಪಾವತಿ ಮಾಡುವಂತಿಲ್ಲ. ಇದು paid work ರೀತಿ ಆಗುತ್ತದೆ ಮತ್ತು ವಿಕಿಪೀಡಿಯಾದ ಸಮುದಾಯ ಭಾಗವಹಿಸುವಿಕೆ ಉದ್ದೇಶಕ್ಕೆ ವಿರುದ್ಧವಾಗುತ್ತದೆ. ಹಾಗಾಗಿ ಈ ಯೋಜನೆ ಬಗ್ಗೆ ಪುನರಾಲೋಚಿಸುವುದು ಒಳ್ಳೆಯದು ಎಂದು ಸಲಹೆ ಮಾಡುತ್ತೇನೆ. Shivakumar Nayak (ಚರ್ಚೆ) ೧೩:೫೪, ೧೭ ಜುಲೈ ೨೦೧೯ (UTC)

ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಒಂದೊಂದೇ ಲೇಖನಗಳನ್ನು ಸೇರಿಸುವ ಜೊತೆಗೆ ಇಂತಹ ಪ್ರಯತ್ನವನ್ನೂ ಮಾಡಿದರೆ ಒಂದು ಮಾದರಿಗೆ ಸೇರುವ ಹೆಚ್ಚು ಲೇಖನಗಳನ್ನು ಒಂದೇ ಬಾರಿಗೆ ಸೇರಿಸಬಹುದು ಎನ್ನುವುದಷ್ಟೇ ನಮ್ಮ ಉದ್ದೇಶ. ಒಮ್ಮೆ ಇಂಥದ್ದೊಂದು ವ್ಯವಸ್ಥೆ ರೂಪಿಸಿಕೊಂಡರೆ ಅದನ್ನೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ಬೇರೆಯ ಲೇಖನಗಳನ್ನು ಸೇರಿಸಲೂ ಬಳಸಬಹುದು. ಇದನ್ನು ಬಾಹ್ಯ ಬೆಂಬಲವಿಲ್ಲದೆ ಮಾಡುವ ಅನುಕೂಲ ನಮ್ಮಲ್ಲಿಲ್ಲ. ಕಾಲಮಿತಿಯ ಯೋಜನೆಯಲ್ಲಿ ಕೆಲಸಮಾಡಲು ಕೈಜೋಡಿಸುವ ಸ್ವಯಂಸೇವಕರು ಮುಂದೆಬಂದರೆ ಅವರ ಸಹಾಯ ಪಡೆದುಕೊಳ್ಳುವ ಬಗ್ಗೆ ಖಂಡಿತಾ ಯೋಚಿಸಬಹುದು. - ಟಿ. ಜಿ. ಶ್ರೀನಿಧಿ (ಚರ್ಚೆ) ೧೬:೧೯, ೧೮ ಜುಲೈ ೨೦೧೯ (UTC)

ಸಾರ್ಕ್ ಸಮ್ಮೇಳನದ ಸಮಯದಲ್ಲಿ ಕನ್ನಡ ಸಮುದಾಯ ಭೇಟಿ

ಎಲ್ಲರಿಗೂ ನಮಸ್ಕಾರಗಳು. ಸಾರ್ಕ್ ಸಮ್ಮೇಳನಕ್ಕೆ ಕರಾವಳಿಯಿಂದ ಜನ ಬರುತ್ತಿರುವುದರಿಂದ, ಕರಾವಳಿ ವಿಕಿಮೀಡಿಯನ್ಸ್‌ ಹಾಗೂ ವಿಕಿಪೀಡಿಯ ಸಮುದಾಯದ ಬೆಂಗಳೂರಿನಲ್ಲಿ ನೆಲೆಸಿರುವ ಸದಸ್ಯರ ಜೊತೆ ಸಣ್ಣ ಮಾತುಕತೆ ಕಾರ್ಯಕ್ರಮ ಏರ್ಪಡಿಸೋಣ ಎಂದು ಸದಸ್ಯ:Vikashegde ಅವರು ಹೇಳಿದರು. ಇದರ ಪ್ರಯುಕ್ತ ೨೧ ಜೂನ್ ೨೦೧೯ರ ಶುಕ್ರವಾರ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸಣ್ಣ ಭೇಟಿ ಏರ್ಪಡಿಸಿದ್ದೇವೆ. ಆಸಕ್ತ ಬೆಂಗಳೂರಿನ ಕನ್ನಡ ವಿಕಿಪೀಡಿಯನ್ನರು ಭಾಗವಹಿಸಬೇಕಾಗಿ ವಿನಂತಿ.
ಸಮಯ : ಸಂಜೆ ೭:೩೦
ಸ್ಥಳ : ಕ್ರೈಸ್ಟ್ ವಿಶ್ವವಿದ್ಯಾಲಯ
--ಗೋಪಾಲಕೃಷ್ಣ (ಚರ್ಚೆ) ೧೫:೪೦, ೧೯ ಜೂನ್ ೨೦೧೯ (UTC)

ಇಂತಹ ಸೂಚನೆಗಳನ್ನು ಸಾಕಷ್ಟು ಸಮಯ ಮೊದಲೇ ನೀಡಿದರೆ ಉತ್ತಮ.--ಪವನಜ (ಚರ್ಚೆ) ೦೪:೨೨, ೨೦ ಜೂನ್ ೨೦೧೯ (UTC)
ಆಗಬಹುದು, ಭೇಟಿಯಾಗೋಣ --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೬:೩೧, ೨೦ ಜೂನ್ ೨೦೧೯ (UTC)
ಕೆಲಸದ ದಿನವಾದ್ದರಿಂದ ಕಷ್ಟವಾಗಬಹುದು. ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇನೆ. --ಟಿ. ಜಿ. ಶ್ರೀನಿಧಿ (ಚರ್ಚೆ) ೧೦:೧೭, ೨೦ ಜೂನ್ ೨೦೧೯ (UTC)

ಕೆಲವು ಮುಖ್ಯವಾಗಿ ಚರ್ಚಿಸಿದ ವಿಷಯಗಳು

  • ತಮಿಳು ವಿಕಿಪೀಡಿಯದ ಪಾರ್ವತಿ ಶ್ರೀ ಅವರು ತಮಿಳು ವಿಕಿಪೀಡಿಯದಲ್ಲಿ ಯಾವ ರೀತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿದರು.
  • ಕನ್ನಡ ವಿಕಿಪೀಡಿಯ ಮತ್ತು ತುಳು ವಿಕಿಪೀಡಿಯದಲ್ಲಿರುವ ಸಂಪಾದಕರುಗಳ ನಡುವೆ ಇರುವ ಸಣ್ಣ ಪುಟ್ಟ ಮನಸ್ತಾಪಗಳನ್ನು ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು.
  • ಒಂದು ದೊಡ್ಡಮಟ್ಟದಲ್ಲಿ ಕನ್ನಡ ಸಮುದಾಯದ ಭೇಟಿಯ ಜೊತೆಗೆ ಎರಡು ದಿನಗಳ ಒಂದು ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
  • ಬೇರೆ ಸಮುದಾಯದ ತರಬೇತುದಾರರನ್ನು ಕರೆಸಿ ಕಾರ್ಯಾಗಾರ ಮತ್ತು ಅದರ ಜೊತೆಗೆ ಭೇಟಿ ನಡೆಸಿದರೆ ಹೇಗೆ ಎಂಬುದನ್ನು ಚರ್ಚಿಸಲಾಯಿತು.

ಇದು ಈ ಭೇಟಿಯಲ್ಲಿ ಚರ್ಚಿಸಿದ ಮುಖ್ಯ ವಿಷಯಗಳು. --ಗೋಪಾಲಕೃಷ್ಣ (ಚರ್ಚೆ) ೧೩:೨೧, ೨೨ ಜೂನ್ ೨೦೧೯ (UTC)

ಸಂಪಾದಕರುಗಳ ನಡುವೆ ಇರುವ ಸಣ್ಣ ಪುಟ್ಟ ಮನಸ್ತಾಪ

  • ಗೋಪಾಲ್ ಅವರು ಮನಸ್ತಾಪಗಳ ಬಗೆಗೆ ಮಾತನಾಡಬೇಕೆಂದಾಗ ನಾವೆಲ್ಲ ಕೆಲವರು ಸೇರಿದ್ದು ನಿಜ. ಆದರೆ, ಬಹಳ ಮುಖ್ಯವಾಗಿ ತುಳು ಸಮುದಾಯದೊಳಗೆ ಮನಸ್ತಾಪವೇ ಇಲ್ಲ. ತುಳು ಚಾವಡಿಯಲ್ಲಿ ಈ ಬಗೆಗೆ ಯಾರೂ ಮಾತನಾಡಿಲ್ಲ. ಕನ್ನಡ ಸಮುದಾಯದಲ್ಲೂ ಹೇಳುವಂತಹ ಮನಸ್ತಾಪಗಳಿಲ್ಲ. ಅನಗತ್ಯ ಸಮಸ್ಯೆಯೆಂದು ಹೇಳಿಕೊಳ್ಳುವವರೇ ಈ ಸಭೆಯಲ್ಲಿ ಸಕ್ರೀಯವಾಗಿ ಭಾಗವಹಿಸಲಿಲ್ಲ.
  • ಕರಾವಳಿ ವಿಕಿಮೀಡಿಯನ್ಸ್ ಕಡೆಯಿಂದ ಒಂದಷ್ಟು ಕೆಲಸಗಳನ್ನು ನಾವು ಮಾಡಿಕೊಂಡು ಹೋಗುತ್ತಿದ್ದೇವೆ. ಕನ್ನಡ ಸಮುದಾಯದ ಹಾಗೆ ನಮ್ಮ ತುಳು ಸಮುದಾಯಕ್ಕೂ CIS ನವರು ಸ್ವಲ್ಪ ಸಹಾಯ ಮಾಡಿದರೆ ಚೆನ್ನಾಗಿತ್ತು.
  • ತುಳು ಸಮುದಾಯಕ್ಕೆ ತಾಂತ್ರಿಕವಾಗಿ ಕೆಲಸ ಮಾಡುವವರು ಇಲ್ಲ. ಈ ಬಗ್ಗೆ ಗೋಪಾಲ ಸ್ವಲ್ಪ ಗಮನಹರಿಸಲಿ. ಮನಸ್ತಾಪಗಳನ್ನು ಸರಿಪಡಿಸುವುದು ಬೇಡ. ಅದು ಹಾಗೇ ಇರಲಿ.--Vishwanatha Badikana (ಚರ್ಚೆ) ೦೮:೩೯, ೨೫ ಜೂನ್ ೨೦೧೯ (UTC)

@Vishwanatha Badikana: ಧನ್ಯವಾದಗಳು. ನೀವು ಹೇಳಿದ ಹಾಗೆಯೇ ಆಗಲಿ. ಜೊತೆಗೆ ನಾನು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ CIS ಪ್ರತಿನಿಧಿಯಾಗಿ ಭಾಗವಹಿಸುವುದರಿಂದ ಹೆಚ್ಚಾಗಿ ಸಮುದಾಯ ಪ್ರತಿನಿಧಿಯಾಗಿ ಭಾಗವಹಿಸಿದ್ದೇನೆ. ಹಿಗಾಗಿ ಇಲ್ಲಿ ನಡೆದ ಚರ್ಚೆಗಳನ್ನು CIS ನ ಮುಂದಿಡುವುದು ನನ್ನ ಜವಾಬ್ದಾರಿ. ಆ ಕೆಲಸ ಮಾಡುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೬:೦೬, ೨೬ ಜೂನ್ ೨೦೧೯ (UTC)

Wikidata Bridge: edit Wikidata’s data from Wikipedia infoboxes

Indic Wikimedia Campaigns/Contests Survey

Hello fellow Wikimedians,

Apologies for writing in English. Please help me in translating this message to your language.

I am delighted to share a survey that will help us in the building a comprehensive list of campaigns and contests organized by the Indic communities on various Wikimedia projects like Wikimedia Commons, Wikisource, Wikipedia, Wikidata etc. We also want to learn what's working in them and what are the areas that needs more support.

If you have organized or participated in any campaign or contest (such as Wiki Loves Monuments type Commons contest, Wikisource Proofreading Contest, Wikidata labelathons, 1lib1ref campaigns etc.), we would like to hear from you.

You can read the Privacy Policy for the Survey here

Please find the link to the Survey at: https://forms.gle/eDWQN5UxTBC9TYB1A

P.S. If you have been involved in multiple campaigns/contests, feel free to submit the form multiple times.

Looking forward to hearing and learning from you.

-- SGill (WMF) sent using MediaWiki message delivery (ಚರ್ಚೆ) ೦೬:೦೯, ೨೫ ಜೂನ್ ೨೦೧೯ (UTC)

ಕ್ರೈಸ್ಟ್ ವಿ.ವಿ. ವಿದ್ಯಾರ್ಥಿಗಳ ಲೇಖನಗಳು

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳು ಅವಸರ ಅವಸರವಾಗಿ ಯಂತ್ರಾನುವಾದದ ಮೂಲಕ ಕಡಿಮೆ ಗುಣಮಟ್ಟದ. ಕೆಲವೊಮ್ಮೆ ಅರ್ಧಂಬರ್ಧ ಕನ್ನಡದ, ಲೇಖನಗಳನ್ನು ಸೇರಿಸುತ್ತಿದ್ದಾರೆ. ಉದಾ -ಸುವರ್ಣ ಅನುಪಾತ (ಚಿನ್ನದ ಅನುಪಾತ), ಮ್ಯಾಕ್ಸ್‌ವೆಲ್‌ನ ಸಮೀಕರಣಗಳು. ನಾನು ಅವುಗಳಿಗೆ {{ಯಂತ್ರಾನುವಾದ}} ಎಂಬ ಟೆಂಪ್ಲೇಟು ಸೇರಿಸಿದ್ದೆ. ವಿದ್ಯಾರ್ಥಿಗಳು ಲೇಖನವನ್ನು ಸುಧಾರಿಸದೆ ಆ ಟೆಂಪ್ಲೇಟನ್ನು ತೆಗೆದು ಹಾಕುತ್ತಿದ್ದಾರೆ. ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯ ಉಸ್ತುವಾರಿ ಮಾಡುತ್ತಿರುವವರು ಯಾರು? ವಿದ್ಯಾರ್ಥಿಗಳು ಲೇಖನಗಳನ್ನು ತಮ್ಮ ತಮ್ಮ ಪ್ರಯೋಗಪುಟದಲ್ಲಿ ತಯಾರಿಸಿ ಅವುಗಳನ್ನು ಅವರ ಪ್ರಾಧ್ಯಾಪಕರು ಒಪ್ಪಿದ ನಂತರ ಮಾತ್ರವೇ ಮುಖ್ಯ ಪುಟಕ್ಕೆ ಸೇರಿಸಬೇಕು ಎಂಬುದನ್ನು ಅವರುಗಳಿಗೆ ಹೇಳಿಕೊಟ್ಟಿಲ್ಲವೇ?--ಪವನಜ (ಚರ್ಚೆ) ೧೧:೨೮, ೮ ಜುಲೈ ೨೦೧೯ (UTC)

ಹೌದು, ಯಂತ್ರಾನುವಾದದಿಂದ ತಯಾರಾದ ಲೇಖನಗಳು ಲೈವ್ ಆಗದಂತೆ ಜಾಗ್ರತೆ ವಹಿಸಬೇಕಿದೆ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೨:೨೨, ೧೦ ಜುಲೈ ೨೦೧೯ (UTC)
ಯಂತ್ರಾನುವಾದ ಮಾತ್ರವಲ್ಲ, ವಿದ್ವಂಸಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇವತ್ತಿನ ಉದಾಹರಣೆ ಮುಖ್ಯ ಪುಟ1. ಅದನ್ನು ಅಳಿಸಿದ್ದೇನೆ. ಅನಂತ ಸುಬ್ರಾಯ ನೋಡಿಕೊಳ್ಳುತ್ತಿಲ್ಲವೇ?--ಪವನಜ (ಚರ್ಚೆ) ೧೦:೪೧, ೧೧ ಜುಲೈ ೨೦೧೯ (UTC)
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯ ಉಸ್ತುವಾರಿ ನಾನೆ (ಅನಂತ ಸುಬ್ರಾಯ), ವಿದ್ಯಾರ್ಥಿಗಳು ಲೇಖನಗಳನ್ನು ಪ್ರಯೋಗಪುಟದಲ್ಲಿ ತಯಾರಿಸಿ ಅವುಗಳನ್ನು ಪ್ರಾಧ್ಯಾಪಕರು ಒಪ್ಪಿದ ನಂತರ ಇಂಟರ್ನಿಗಳು ಲೇಖನವನ್ನು ಮುಖ್ಯ ಪುಟಕೆ ತರುತಾರೆ. ಕ್ರೈಸ್ಟ್ ವಿ.ವಿ.ಯ ಸುಡೆಂಟ್‌ಗಳು ರಚಿಸಿದ ಲೇಖನದ ಪಟ್ಟಿ:

ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ಎರಡು ದಿನಗಳ ಕನ್ನಡ ವಿಕಿಪೀಡಿಯ ಕಾರ್ಯಾಗಾರ

ದಿನಾಂಕ 27 ಮತ್ತು 28, ಜುಲೈ 2019ರಂದು ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ಎರಡು ದಿನಗಳ ಕನ್ನಡ ವಿಕಿಪೀಡಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ 50 ಮಂದಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ. ಕಾರ್ಯಾಗಾರದಲ್ಲಿ 35ಕ್ಕಿಂತ ಹೆಚ್ಚು ಮಂದಿ ಹೊಸ ಸಂಪಾದಕರಿಗೆ ವಿಕಿಪೀಡಿಯ ಸಂಪಾದಿಸಲು ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.

--Babitha managalore (ಚರ್ಚೆ) ೧೬:೪೪, ೧೦ ಜುಲೈ ೨೦೧೯ (UTC)

ಒಳ್ಳೆಯ ಕಾರ್ಯಕ್ರಮ --Lokesha kunchadka (ಚರ್ಚೆ) ೦೪:೪೧, ೧೧ ಜುಲೈ ೨೦೧೯ (UTC)
ಈ ಕಾರ್ಯಕ್ರಮದ ಪುಟ ಇಲ್ಲಿದೆ. --ಗೋಪಾಲಕೃಷ್ಣ (ಚರ್ಚೆ) ೦೭:೨೫, ೨೬ ಜುಲೈ ೨೦೧೯ (UTC)

ಭಾರತದಲ್ಲಿನ ನಮ್ಮ ಸಮುದಾಯಗಳಿಗೆ ಬೆಂಬಲ

ಎಲ್ಲರಿಗೂ ನಮಸ್ಕಾರ,

ವಿಕಿಮೀಡಿಯಾ ಯೋಜನೆಗಳು ನಡೆಯುವುದು ನಿಮ್ಮಿಂದ—ಜಗತ್ತಿನಾದ್ಯಂತ ಇರುವ ಸ್ವಯಂಸೇವಕರು, ಗುಂಪುಗಳು ಮತ್ತು ಸಂಸ್ಥೆಗಳ ಒಂದು ಜಾಲದಿಂದ. ನೀವೆಲ್ಲರೂ ಸೇರಿ ವಿಕಿಮೀಡಿಯಾ ಯೋಜನೆಗಳನ್ನು ಹಾಗೂ ಮುಕ್ತಜ್ಞಾನದ ಧ್ಯೇಯೋದ್ದೇಶವನ್ನು ಬೆಳೆಸುತ್ತೀರಿ, ಶ್ರೀಮಂತಗೊಳಿಸುತ್ತೀರಿ ಮತ್ತು ಮುನ್ನಡೆಸುತ್ತೀರಿ.

ವಿಕಿಮೀಡಿಯಾ-ಇಂಡಿಯಾದ ಅಂಗೀಕರಣವನ್ನು ರದ್ದು ಮಾಡುವ ಅಂಗಸಂಸ್ಥೆ ಸಮಿತಿಯ (Affiliations Committee / AffCom) ನಿರ್ಧಾರದ ಬಗ್ಗೆ ನೀವು ಕೇಳಿರಬಹುದು. ಭಾರತದ ವಿಕಿಮೀಡಿಯಾ ಸಮುದಾಯಗಳ ಮೇಲೆ ಇದರ ಪರಿಣಾಮದ ಬಗ್ಗೆ ಕೆಲವು ಸಮುದಾಯದ ಸದಸ್ಯರು ಕೇಳಿದ್ದಾರೆ. AffCom ನಿರ್ಧಾರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ ಮತ್ತು ಭಾರತದಾದ್ಯಂತದ ನಮ್ಮ ಅನೇಕ ಸಮುದಾಯಗಳಿಗೆ ನಮ್ಮ ಬದ್ಧತೆ ಮತ್ತು ಬೆಂಬಲವನ್ನು ಪುನರುಚ್ಚರಿಸುತ್ತೇವೆ.

ಅಫಿಲಿಯೇಷನ್ಸ್ ಕಮಿಟಿ (AffCom) ವಿಕಿಮೀಡಿಯಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸುವ ಮತ್ತು ಬೆಂಬಲಿಸುವ ಸ್ವಯಂಸೇವಕರ ಸಮುದಾಯ-ನಡೆಸುವ ಸಂಸ್ಥೆ. ಅಧ್ಯಾಯದ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನ ಚಟುವಟಿಕೆಗಳನ್ನು ತರಲು ವಿಕಿಮೀಡಿಯಾ-ಇಂಡಿಯಾದೊಂದಿಗೆ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ನಂತರ (m:Wikimedia_chapters/Requirements), ವಿಕಿಮೀಡಿಯಾ ಫೌಂಡೇಶನ್ ಅಧ್ಯಾಯ ಒಪ್ಪಂದವನ್ನು ನವೀಕರಿಸಬಾರದೆಂದು ಜೂನ್ 2019 ರಲ್ಲಿ (AffCom) ಶಿಫಾರಸು ಮಾಡಿತು.

ವಿಕಿಮೀಡಿಯಾ-ಇಂಡಿಯಾ ಮೊದಲ ಬಾರಿಗೆ 2011 ರಲ್ಲಿ ಒಂದು ಅಧ್ಯಾಯವಾಗಿ ಗುರುತಿಸಲಾಯಿತು. 2015 ರಲ್ಲಿ, ಇದು ಅಧ್ಯಾಯ ಒಪ್ಪಂದದ ಕಟ್ಟುಪಾಡುಗಳನ್ನು ಪೂರೈಸುವಲ್ಲಿ ತೊಂದರೆಗಳನ್ನು ಅನುಭವಿಸಿತು. ಅಫಿಲಿಯೇಷನ್ಸ್ ಕಮಿಟಿ ಮತ್ತು ಫೌಂಡೇಶನ್‌ನೊಂದಿಗೆ ಕೆಲಸ ಮಾಡುವ ಅಧ್ಯಾಯವು ಕ್ರಿಯಾಶೀಲ ಯೋಜನೆಯನ್ನು ಅಭಿವೃದ್ಧಿಪಡಿಸಿತು ಮತ್ತು 2017 ರ ಹೊತ್ತಿಗೆ ಉತ್ತಮ ಸ್ಥಿತಿಯಲಿೢತ್ತು. ಆದಾಗ್ಯೂ, 2017 ಮತ್ತು 2019 ರ ನಡುವೆ ಅಧ್ಯಾಯವು ವಿಶ್ವಾಸಾರ್ಹ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪರವಾನಗಿ ಪಡೆಯಲು ಸಾಧ್ಯವಾಗಲಿಲ್ಲ, ಮತ್ತು ಪ್ರಸ್ತುತ ಕಾನೂನುಬದ್ಧವಾಗಿಲ್ಲ ಪ್ರತಿಷ್ಠಾನದಿಂದ ಹಣವನ್ನು ಸ್ವೀಕರಿಸಲು ಭಾರತದಲ್ಲಿ ಚಾರಿಟಿಯಾಗಿ ನೋಂದಾಯಿಸಲಾಗಲಿಲೢ. ಫೌಂಡೇಶನ್ ಮತ್ತು ಅಫಿಲಿಯೇಷನ್ಸ್ ಕಮಿಟಿ (AffCom) ಎರಡೂ ಈ ಪರವಾನಗಿ ಮತ್ತು ನೋಂದಣಿಯನ್ನು ಭವಿಷ್ಯದಲ್ಲಿ ಸುರಕ್ಷಿತಗೊಳಿಸಬಹುದು ಮತ್ತು ಅಧ್ಯಾಯವು ಮಾನ್ಯತೆಗೆ ಅರ್ಹರಾಗಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಆಶಿಸುತ್ತದೆ.

ಉತ್ತಮ ನಾಯಕತ್ವವನ್ನು ತೋರಿಸಿದ ಮತ್ತು ನಮ್ಮ ಜಾಗತಿಕ ಚಳವಳಿಯೊಳಗೆ ಗಮನಾರ್ಹ ಪರಿಣಾಮವನ್ನು ಬೀರಿದ ಭಾರತದಲ್ಲಿ ಅತ್ಯಾಸಕ್ತಿಯಿಂದ ಬೆಳೆಯುತ್ತಿರುವ ಸಮುದಾಯಕ್ಕೆ ನಾವು ಆಭಾರಿಯಾಗಿದ್ದೇವೆ. ಫೌಂಡೇಶನ್ ಪ್ರಸ್ತುತ ಎಂಟು ಭಾರತೀಯ ಭಾಷಾ ಸಮುದಾಯ ಬಳಕೆದಾರರ ಗುಂಪುಗಳನ್ನು ಬೆಂಬಲಿಸುತ್ತದೆ, ಮತ್ತು ಮುಂಬರುವ ವಾರಗಳಲ್ಲಿ ಇನ್ನೂ ಎರಡು AffCom ಘೋಷಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಭಾರತದಲ್ಲಿನ ಓದುಗರಿಂದ ನಾವು ಪ್ರತಿ ತಿಂಗಳು 700 ದಶಲಕ್ಷಕ್ಕೂ ಹೆಚ್ಚು ಪುಟವೀಕ್ಷಣೆಗಳನ್ನು ವಿಕಿಪೀಡಿಯಾಗೆ ಸ್ವೀಕರಿಸುತ್ತೇವೆ, ಮತ್ತು ವಿಕಿಪೀಡಿಯಾ ಮತ್ತು ವಿಕಿಮೀಡಿಯಾ ಯೋಜನೆಗಳ ಭವಿಷ್ಯಕ್ಕಾಗಿ ಭಾರತೀಯ ಸಮುದಾಯದ ಬೆಳವಣಿಗೆಯು ಮೊದಲ ಆದ್ಯತೆಯಾಗಿದೆ.

ವಿಕಿಮೀಡಿಯಾ ಆಂದೋಲನಕ್ಕೆ ಭಾರತದ ಗಣರಾಜ್ಯ ಬಹಳ ಮಹತ್ವದ್ದಾಗಿದೆ. ವಿಕಿಮೀಡಿಯಾ ಫೌಂಡೇಶನ್ ಭಾರತದಾದ್ಯಂತ ಸ್ವಯಂಸೇವಕ ಸಂಪಾದಕರು, ಕೊಡುಗೆದಾರರು, ಓದುಗರು ಮತ್ತು ದಾನಿಗಳನ್ನು ಬೆಂಬಲಿಸಲು ಬದ್ಧವಾಗಿದೆ. ವಿಕಿಮೀಡಿಯಾ ಯೋಜನೆಗಳು ಮತ್ತು ನಮ್ಮ ಮುಕ್ತ ಜ್ಞಾನ ಮಿಷನ್ ಅನ್ನು ಬೆಂಬಲಿಸುವ ನಿಮ್ಮ ಮುಂದುವರಿದ ಮತ್ತು ಬೆಳೆಯುತ್ತಿರುವ ಪ್ರಯತ್ನಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನಿಮ್ಮೊಂದಿಗೆ ನಮ್ಮ ಕೆಲಸವನ್ನು ಮುಂದುವರಿಸಲು ನಾವು ಎದುರು ನೋಡುತ್ತೇವೆ.

ವಿಕಿಮೀಡಿಯ ಫೌಂಡೇಶನ್ ಪರವಾಗಿ,

ವಲೆರಿ ಡಿ ಕೋಸ್ಟಾ
ಕಮ್ಯುನಿಟಿ ಎಂಗೇಜ್ಮೆಂಟ್ ಮುಖ್ಯಸ್ಥ
ವಿಕಿಮೀಡಿಯ ಫ಼ೌಂಡೇಶನ್

ಟೆಂಪ್ಲೇಟ್ ಅಮದಿಗೆ ಕೋರಿಕೆ

Infobox Spacecraft ಈ ಟೆಂಪ್ಲೇಟ್ ಅವಶ್ಯಕತೆ ಇದೆ. ಆದಷ್ಟು ಬೇಗ ಅಮದು ಮಾಡಿ ಕೋಡಿ.--Lokesha kunchadka (ಚರ್ಚೆ) ೦೪:೦೯, ೨೫ ಜುಲೈ ೨೦೧೯ (UTC)

ಆ ಹೆಸರಿನ ಟೆಂಪ್ಲೇಟು ಇಂಗ್ಲಿಷ್ ವಿಕಿಪೀಡಿಯದಲ್ಲಿ ಇಲ್ಲ. ಟೆಂಪ್ಲೇಟಿನ ಕೊಂಡಿ ನೀಡಿದರೆ ಉತ್ತಮವಿತ್ತು.--ಪವನಜ (ಚರ್ಚೆ) ೦೧:೪೨, ೨೬ ಜುಲೈ ೨೦೧೯ (UTC)
ಕನ್ನಡ ವಿಕಿಪೀಡಿಯದಲ್ಲಿ ಟೆಂಪ್ಲೇಟು:Infobox spacecraft ಇದೆ ಪರೀಕ್ಷಿಸಿ Sangappadyamani (ಚರ್ಚೆ) ೦೧:೫೩, ೨೬ ಜುಲೈ ೨೦೧೯ (UTC)

Update on the consultation about office actions

Hello all,

Last month, the Wikimedia Foundation's Trust & Safety team announced a future consultation about partial and/or temporary office actions. We want to let you know that the draft version of this consultation has now been posted on Meta.

This is a draft. It is not intended to be the consultation itself, which will be posted on Meta likely in early September. Please do not treat this draft as a consultation. Instead, we ask your assistance in forming the final language for the consultation.

For that end, we would like your input over the next couple of weeks about what questions the consultation should ask about partial and temporary Foundation office action bans and how it should be formatted. Please post it on the draft talk page. Our goal is to provide space for the community to discuss all the aspects of these office actions that need to be discussed, and we want to ensure with your feedback that the consultation is presented in the best way to encourage frank and constructive conversation.

Please visit the consultation draft on Meta-wiki and leave your comments on the draft’s talk page about what the consultation should look like and what questions it should ask.

Thank you for your input! -- The Trust & Safety team ೦೮:೦೩, ೧೬ ಆಗಸ್ಟ್ ೨೦೧೯ (UTC)

ಸಿ.ಐ.ಎಸ್.-ಎ೨ಕೆ ಯಿಂದ ಕನ್ನಡದ ಕಮ್ಯುನಿಟಿ ಅಡ್ವೊಕೇಟ್

ಸಿ.ಐ.ಎಸ್.-ಎ೨ಕೆ ಯಿಂದ ಕನ್ನಡದ ಕಮ್ಯುನಿಟಿ ಅಡ್ವೊಕೇಟ್ ಸ್ಥಾನಕ್ಕೆ ಸಮುದಾಯದವರು ಒಪ್ಪಿ ಗೋಪಾಲಕೃಷ್ಣ ಅವರನ್ನು ನೇಮಿಸಲಾಗಿತ್ತು. ಅವರು ಇತ್ತೀಚೆಗೆ ನಾನು ಕೋರ ಕಂಪೆನಿಗೆ ಸೇರಿದ್ದೇನೆ ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ ಅವರನ್ನು ಸಿ.ಎ. ಆಗಿ ನೇಮಿಸಿದ ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಇದುತನಕ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅವರು ಎರಡು ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದಾರೆಯೇ? ಈ ಬಗ್ಗೆ ಕೂಡ ಯಾವುದೇ ಮಾಹಿತಿ ಇಲ್ಲ. ಗೋಪಾಲಕೃಷ್ಣ ಮತ್ತು ಸಿ.ಐ.ಎಸ್.ನವರು ಈ ಬಗ್ಗೆ ಸ್ಪಷ್ಟೀಕರಣ ನೀಡಬಹುದೇ?--Pavanaja (ಚರ್ಚೆ) ೦೯:೫೫, ೧೬ ಆಗಸ್ಟ್ ೨೦೧೯ (UTC)

@Pavanaja: ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು. ನಾನು ಸಿ. ಐ. ಎಸ್‌ನ ಖಾತೆಯ ಮೂಲಕವೇ ಈ ಸ್ಪಷ್ಟನೆಯನ್ನು ನೀಡಲು ಇಚ್ಚಿಸುತ್ತೇನೆ. ಮೊದಲನೇಯದಾಗಿ ಜುಲೈ ೧ ೨೦೧೯ ರಿಂದ ನಾನು ಸಂಪೂರ್ಣವಾಗಿ ಪ್ರಾಜೆಕ್ಟು ಟೈಗರ್‌ನಲ್ಲಿ ತೊಡಗಿಸಿಕೊಂಡಿದ್ದೆ. ನಿಮಗೆಲ್ಲರಿಗೂ ಈ ಬಗ್ಗೆ ಮೊದಲೇ ತಿಳಿದಂತೆ CIS-A2Kಯು FLA (Focused Language Area)ಯಿಂದ FPA (Focused Project Area) ಗೆ ಪರಿವರ್ತನೆ ಹೊಂದಿರುವುದರಿಂದ ಕನ್ನಡದ ಕಮ್ಯೂನಿಟಿ ಅಡ್ವೊಕೇಟ್ ಆಗಿ ಸಣ್ಣ ಪಾತ್ರವನ್ನು ವಹಿಸಿದ್ದೆ. (ಸಿಐಎಸ್‌ನ ಕಾರ್ಯ ಯೋಜನೆಯನ್ನು ಇಲ್ಲಿ ನೋಡಬಹುದು) ಈ ಬಗ್ಗೆ ನಾವು ಇಲ್ಲಿ ಪ್ರಸ್ತಾಪಿಸಿರಲಿಲ್ಲ. ಅದಕ್ಕಾಗಿ ಕ್ಷಮಿಸಿ. CISನಲ್ಲಿ ನಾನು ನಿಭಾಯಿಸುತ್ತಿದ್ದ ಹುದ್ದೆಯ ವಿಚಾರವಾಗಿ ಸದ್ಯದಲ್ಲೇ ಭಾರತೀಯ ಸಮುದಾಯದ ಮೈಲಿಂಗ್ ಲಿಸ್ಟಿನಲ್ಲಿ ಬರೆಯಲಿದ್ದೇನೆ. ಸಿಐಎಸ್‌ನಲ್ಲಿ ನನ್ನ ಕೊನೆಯ ಕೆಲಸದ ದಿನ ಜುಲೈ ೩೧ ೨೦೧೯ ಆಗಿತ್ತು ಮತ್ತು ನಿಯಮದ ಪ್ರಕಾರ ನಾನು ನನ್ನ ಕೆಲಸಗಳನ್ನು ಇತರರಿಗೆ ವರ್ಗಾಯಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಕಮ್ಯೂನಿಟಿ ಅಡ್ವೊಕೇಟ್ ಸ್ಥಾನದಿಂದ ನಿರ್ಗಮಿಸುವುದು ನನ್ನ ವೈಯಕ್ತಿಕ ನಿರ್ಧಾರ ಹಾಗೂ ಸಂಸ್ಥೆ ಎಂದಿಗೂ ಕನ್ನಡ ವಿಕಿಮೀಡಿಯ ಪ್ರಾಜೆಕ್ಟುಗಳ ಬೆಳವಣಿಗೆಗಾಗಿ ಶ್ರಮಿಸುತ್ತದೆ ಎಂಬ ಭರವಸೆ ನನ್ನಲ್ಲಿದೆ. ನಾನು ಮೊದಲಿನಂತೆಯೇ ಕನ್ನಡ ಸಮುದಾಯದ ಸ್ವಯಂಸೇವಕನಾಗಿರುತ್ತೇನೆ. ನೀಡಿದ ಎಲ್ಲಾ ಅವಕಾಶಗಳಿಗೆ ಧನ್ಯವಾದಗಳು. ಯಾವುದೇ ವಿಷಯಗಳಿಗೆ ನನ್ನ ಸ್ವಯಂಸೇವಕ ಖಾತೆ ಸದಸ್ಯ:Gopala Krishna A ಖಾತೆಯ ಚರ್ಚೆ ಪುಟದಲ್ಲಿ ಬರೆಯಬೇಕಾಗಿ ವಿನಂತಿ. -- (CIS-A2K) (ಚರ್ಚೆ) ೧೧:೨೬, ೧೬ ಆಗಸ್ಟ್ ೨೦೧೯ (UTC)

ಹೀಗೊಂದು ಯೋಜನೆ ಪುಟ

ಇದನೊಮ್ಮೆ ಗಮನಿಸಿ.ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೧೯-೨೦.

@Lokesha kunchadka: - ನಿಮ್ಮ ಸಮಸ್ಯೆ ಏನು ಎಂಬುದೇ ಅರ್ಥವಾಗುತ್ತಿಲ್ಲ. ನಿಮ್ಮ ಅನುಮಾನಗಳನ್ನು ಯೋಜನೆಯ ಚರ್ಚಾಪುಟದಲ್ಲಿ ಮೊದಲು ಬರೆದಿದ್ದಿರಿ. ಅವುಗಳಿಗೆ ಅಲ್ಲೇ ಉತ್ತರಿಸಲಾಗಿದೆ. ಅವುಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಾಗಿ ವಿನಂತಿ.--Pavanaja (ಚರ್ಚೆ) ೦೨:೧೯, ೧೭ ಆಗಸ್ಟ್ ೨೦೧೯ (UTC)

ಸ್ವತಂತ್ರ ದಿನ ವೈಕಿಡಾಟಾ ಮೇಳ ೨೦೧೯

ಸ್ವತಂತ್ರ ದಿನ ವೈಕಿಡಾಟಾ ಮೇಳ ದಲ್ಲಿ ಐಟಂ ಜೋಡಿಸಲು Category:ASI Monument Karnataka ಈ ಕ್ಯಾಟಗರಿಯನ್ನ ವೈಕಿ ಕಾಮನ್ಸ್ ನಲ್ಲಿ ಶುರು ಮಾಡಿದ್ದೇನೆ. https://www.wikidata.org/wiki/Wikidata:WikiProject_India/Events/Indian_Independence_Day_2019 https://commons.wikimedia.org/wiki/Category:ASI_Monument_Karnataka

ವಿಜಯಪುರ ಜಿಲ್ಲೆಯಲ್ಲಿನ ಸ್ಮಾರಕಗಳನ್ನ ಸೇರಿಸಲು ಯತ್ನ ಮಾಡ್ತಾ ಇದ್ದೇನೆ.

  1. d:Q66598383
  2. d:Q66597967
  3. d:Q66541984
  4. d:Q66457024


ಈ ಸಮಸ್ಯೆಗಳು ಇವೆ.

  1. ವೈಕಿ ಕಾಮನ್ಸ್ ಫೋಟೋ ಗಳು ಕಡ್ಡಾಯ. ಬಹುತೇಕ ಸ್ಮಾರಕಗಳ ಫೋಟೋ ಇಲ್ಲ. ಅವನ್ನ ಈ ಮೇಳದಲ್ಲಿ ಕೂಡಿಸಲು ಆಗದು.
  2. ವೈಕಿ ಕಾಮನ್ಸ್ ಫೋಟೋಗಳಿಗೆ ಕ್ಯಾಟಗರಿ ಕಡ್ಡಾಯ.ಯಾವುದಕ್ಕೂ ಒಂದೇ ಬಗೆಯ ಕ್ಯಾಟಗರಿ ಇರಲಿಲ್ಲ. Category:ASI Monument Karnataka ಅಂತ ಹೊಸ ಕ್ಯಾಟಗರಿ ಶುರು ಮಾಡಿದೆ.
  3. ಜಿಪಿಎಸ್ ಅಕ್ಷಾಂಶ ಕಡ್ಡಾಯ. ಗೂಗಲ್ ಮ್ಯಾಪ್ ನ ಸ್ಯಾಟಲೈಟ್ ವ್ಯೂ ==> ವಾಟ್ಸ್ ಹಿಯರ್ ==> ಇಲ್ಲಿಂದ ತೆಗೆಯಬೇಕು.

ಸ್ವಲ್ಪ ಗೊಂದಲಮಯವಾಗಿದೆ.


Mallikarjunasj (talk) ೧೫:೩೯, ೧೯ ಆಗಸ್ಟ್ ೨೦೧೯ (UTC)

@Mallikarjunasj ತಡವಾದ ಉತ್ತರಕ್ಕಾಗಿ ಕ್ಷಮಿಸಿ,ಗೊಂದಲಮಯವಾದದ್ದನ್ನು ದಯವಿಟ್ಟ ನಮಗೆ ತಿಳಿಸಿ, ಯಾವುದೇ ಚಿತ್ರಗಳಿಲ್ಲದಿದ್ದರೆ ನೀವು ಆ ಹಂತವನ್ನು ಬಿಟ್ಟು ಮುಂದುವರಿಯಬಹುದು.★ Anoop✉ ೦೧:೨೩, ೨೪ ಆಗಸ್ಟ್ ೨೦೧೯ (UTC)      

Project Tiger 2.0

Sorry for writing this message in English - feel free to help us translating it

New tools and IP masking

೧೪:೧೮, ೨೧ ಆಗಸ್ಟ್ ೨೦೧೯ (UTC)

ಪ್ರೊಜೆಕ್ಟ ಟೈಗರ್ ೨.೦ ಗೆ ಬೆಂಬಲ

೫ ವರ್ಷಗಳಿಂದ ವಿಕಿಮೀಡಿಯನ್ ಆಗಿರುವ ನಾನು, ಈ ವರ್ಷದ ಪ್ರೊಜೆಕ್ಟ ಟೈಗರ್ ೨.೦ ಗೆ ಯಂತ್ರಾಂಶ ಬೆಂಬಲಕ್ಕೆ ಅರ್ಜಿ ಸಲ್ಲಿಸಿದ್ದೇನೆ. ದಯವಿಟ್ಟು ಬೆಂಬಲಿಸಬೇಕಾಗಿ ವಿನಂತಿ. ಕೊಂಡಿ: https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/akasmita --Akasmita (ಚರ್ಚೆ) ೦೮:೦೯, ೨೭ ಆಗಸ್ಟ್ ೨೦೧೯ (UTC)