ಅಂಕೋಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
No edit summary
೧ ನೇ ಸಾಲು: ೧ ನೇ ಸಾಲು:
{{Infobox Indian Jurisdiction
{{Infobox Indian Jurisdiction
|native_name = ಅಂಕೋಲಾ
|native_name = ಅಂಕೋಲಾ
|type = town
|type = ನಗರ
|latd = 14.667 | longd = 74.3
|latd = 14.667 | longd = 74.3
|locator_position = right
|locator_position = right
೧೪ ನೇ ಸಾಲು: ೧೪ ನೇ ಸಾಲು:
|postal_code = ೫೮೧ ೩೧೪
|postal_code = ೫೮೧ ೩೧೪
|vehicle_code_range = ಕೆಎ-೩೦
|vehicle_code_range = ಕೆಎ-೩೦
|sex_ratio =
|sex_ratio =1013
|unlocode =
|unlocode =
|website =
|website =www.ankolatown.gov.in
|footnotes =
|footnotes =
}}
}}

೨೨:೩೬, ೨೦ ನವೆಂಬರ್ ೨೦೧೮ ನಂತೆ ಪರಿಷ್ಕರಣೆ

ಅಂಕೋಲಾ
ಅಂಕೋಲಾ
ನಗರ
Population
 (೨೦೦೧)
 • Total೧೪೩೦೯
Websitewww.ankolatown.gov.in

ಅಂಕೋಲಾ ಕರ್ನಾಟಕ ರಾಜ್ಯದಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಅಕೊಲಾ ಎನ್ನುವ ಮರದಿಂದ ಈ ಹೆಸರು ಬಂದಿದೆ. ಇದು ಸತ್ಯಾಗ್ರಹಿಗಳ ತವರೂರು. ಕರ್ನಾಟಕದ ಬಾರ್ಡೊಲಿ ಎಂದು ಸಹ ಕರೆಯುವರು. ಅಂಕೋಲಾ "ಕರಿ ಈಸಾಡ"(ಮಾವಿನ ಹಣ್ಣುಗಳ ರಾಜ)ಅತ್ಯಂತ ಪ್ರಸಿದ್ದಿ ಪಡೆದಿದೆ. "ಚುಟುಕಿನ ಬ್ರಹ್ಮ" ಎಂದು ಖ್ಯಾತಿ ಆದ ದಿನಕರ ದೇಸಾಯಿಯವರ ತವರೂರು. "ಅಂಕೋಲಾ ಬಂಡಿಹಬ್ಬ" ನಾಡಿನಾದ್ಯಂತ ಖ್ಯಾತಿ ಪಡೆದಿದೆ.

ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಶಿರಸಿ, ದಕ್ಷಿಣದಲ್ಲಿ ಕುಮಟ, ಉತ್ತರದಲ್ಲಿ ಕಾರವಾರ ಮತ್ತು ಯಲ್ಲಾಪುರ ತಾಲ್ಲೂಕುಗಳು ಈ ತಾಲ್ಲೂಕನ್ನು ಸುತ್ತುವರೆದಿವೆ. ಬೇಲೆಕೇರಿ, ಬಾಳಲೆ ಮತ್ತು ಭಾಸಗೋಡ ಇದರ ಹೋಬಳಿಗಳು. ತಾಲ್ಲೂಕಿನಲ್ಲಿ 86 ಗ್ರಾಮಗಳಿವೆ. ವಿಸ್ತೀರ್ಣ 971 ಚ.ಕಿಮೀ. ಜನಸಂಖ್ಯೆ 1,01,540. ತಾಲ್ಲೂಕಿನ ತೀರಪ್ರದೇಶ ಮರಳು ಭೂಮಿ. ಉಳಿದ ಭೂಭಾಗ ಕೆಂಪು ಜಂಬುಮಣ್ಣಿನಿಂದ ಕೂಡಿದೆ. ಮಳೆ ಹೆಚ್ಚು. ವಾರ್ಷಿಕ ಸರಾಸರಿ 3,405ಮಿಮೀ. ಬೇಡ್ತಿ ಅಥವಾ ಗಂಗಾವಳಿ ನದಿ ಈ ತಾಲ್ಲೂಕಿನ ಮಧ್ಯದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ ಹರಿದು ಅಂಕೋಲದ ದಕ್ಷಿಣದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವುದು. ಅಂಕೋಲದ ಬಳಿ ಅಂಕೋಲ ನದಿ ಇದೆ.ಇದರ ಪೂರ್ವ ಭಾಗವನ್ನು ಶಂಕದ ಹೊಳೆ ಎಂದು ಕರೆಯುತ್ತಾರೆ. ಇದರ ಉತ್ತರದಲ್ಲಿ ಬೇಲೆಕೇರಿ ನದಿ ಹರಿಯುವುದು. ಈ ನದಿಗಳು ತಾಲ್ಲೂಕಿನ ಬಹುತೇಕ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಹರಿಯುವುದರಿಂದ ನೀರಾವರಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಮಳೆನೀರಿನಿಂದ ಆಬಾದಾಗುವ ಅನೇಕ ತೋಟ ಗದ್ದೆಗಳಿವೆ. ಇಲ್ಲಿರುವ ಕೆಲವು ಬಾವಿಗಳಿಂದಲೂ ವ್ಯವಸಾಯಕ್ಕೆ ನೀರು ಒದಗುತ್ತದೆ. ಬತ್ತ, ಅಡಕೆ ಇಲ್ಲಿಯ ಮುಖ್ಯ ಬೆಳೆಗಳು. ತಾಲ್ಲೂಕಿನ ತೀರ ಪ್ರದೇಶ ಬಿಟ್ಟು ಅದರ ಪಕ್ಕದಲ್ಲೆ ಸಾಗುವ ಸುಮಾರು 5ರಿಂದ 8ಕಿಮೀ ಅಗಲದ ಒಳನಾಡ ಪ್ರದೇಶ ಬತ್ತದ ಗದ್ದೆಗಳಿಂದ, ಮಾವಿನ ತೋಪುಗಳಿಂದ ಗೇರು ಹಲಸು ಮತ್ತು ಇತರ ಫಲವೃಕಗಳಿಂದ ಕೂಡಿದೆ. ಇದರ ಪಕ್ಕದ ಸಣ್ಣ ಗುಡ್ಡಪ್ರದೇಶದಲ್ಲಿ ಹುಲ್ಲು ಬೆಳೆಯುತ್ತದೆ. ಇವುಗಳ ಪೂರ್ವಕ್ಕೆ ಎತ್ತರವಾದ ದಟ್ಟ ಕಾಡುಗಳಿಂದ ಕೂಡಿದ ಬೆಟ್ಟ ಪ್ರದೇಶವಿದೆ. ಒಟ್ಟು 75,374 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಮತ್ತಿ, ಹೊನ್ನೆ, ನಂದಿ ಮುಂತಾದ ಮರಗಳು ಬೆಳೆಯುತ್ತವೆ. ತೀರಪ್ರದೇಶದಲ್ಲಿ ತೆಂಗಿನ ಮರಗಳಿವೆ. ಇಲ್ಲಿನ ಕೆಲವು ಗ್ರಾಮಗಳು ಆರೋಗ್ಯದಾಯಕವೆಂದು ಪರಿಗಣಿತವಾಗಿವೆ.ಗಂಗಾವಳಿ ನದಿಯಲ್ಲಿ ಕೆಲವು ಕಿಮೀ ದೂರ ಸಣ್ಣ ದೋಣಿಗಳ ಸಂಚಾರ ಉಂಟು. ಕಾರವಾರ, ಹೊನ್ನಾವರ, ಮಂಗಳೂರುಗಳೊಡನೆ ಈ ತಾಲ್ಲೂಕು ಸಂಪರ್ಕ ಹೊಂದಿದೆ. ಅಂಕೋಲ ಪಟ್ಟಣದ ಉತ್ತರಕ್ಕೆ 8ಕಿಮೀ ದೂರದಲ್ಲಿರುವ ಅವರ್ಸೆ ಗ್ರಾಮದಲ್ಲಿ ಕಾತ್ಯಾಯಿನಿ ದೇವಾಲಯವಿದೆ. ಇಲ್ಲಿಯ ವಿಗ್ರಹ ಸಮುದ್ರದಲ್ಲಿ ದೊರೆತದ್ದೆಂದು ಪ್ರತೀತಿಯುಂಟು. ನವರಾತ್ರಿಯ ಒಂಬತ್ತು ದಿನಗಳೂ ಇಲ್ಲಿ ಜಾತ್ರೆ ನಡೆಯುವುದು. ಅಂಕೋಲದ ಉತರಕ್ಕೆ ಸುಮಾರು 6ಕಿಮೀ ದೂರದೆಲ್ಲಿ ಬೇಲೆಕೇರಿ ನದಿಯ ದಡದಲ್ಲಿರುವ ಬಂದರು, ಬೇಲೆಕೇರಿ ಗ್ರಾಮ. ಇದೊಂದು ಆರೋಗ್ಯಧಾಮವೆಂದು ಪ್ರಸಿದ್ಧವಾಗಿದೆ. ಅಂಕೋಲದ ದಕಿಣಕ್ಕೆ 8ಕಿಮೀ ದೂರದಲ್ಲಿರುವ ಗಂಗಾವಳಿ ಗ್ರಾಮ ಗಂಗಾವಳಿ ನದಿಯ ದಡದಲ್ಲಿದೆ. ಇಲ್ಲಿರುವ ಗಂಗೆ ದೇವಾಲಯ ಪ್ರಸಿದ್ಧ. ಗಂಗಾಷ್ಟಮಿಯಂದು ಇಲ್ಲಿ ಜಾತ್ರೆ ನಡೆಯುವುದು. ಗಂಗಾವಳಿ ಗ್ರಾಮಕ್ಕೆದುರಾಗಿ ನದಿಯ ಉತ್ತರ ದಂಡೆಯ ಮೇಲೆ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಂಜಗುಣಿ ಗ್ರಾಮವಿದೆ. ಈ ತಾಲ್ಲೂಕಿನ ಆಡಳಿತ ಕೇಂದ್ರ ಅಂಕೋಲ. ಜನಸಂಖ್ಯೆ 14,306. ಕಾರವಾರಕ್ಕೆ ಆಗ್ನೇಯದಲ್ಲಿ 24ಕಿಮೀ ದೂರದಲ್ಲಿ ಸಮುದ್ರತೀರದಿಂದ ಸುಮಾರು 3ಕಿಮೀ ಅಂತರದಲ್ಲಿದೆ ಇಲ್ಲಿಯ ಜನರ ಮುಖ್ಯ ಉದ್ಯೋಗ ವ್ಯವಸಾಯ, ವ್ಯಾಪಾರ ಮತ್ತು ಕೂಲಿಯ ದುಡಿಮೆ. ಅಂಕೋಲಪಟ್ಟಣ ಮುಂಬಯಿ ಮತ್ತು ಹುಬ್ಬಳಿಯಿಂದ ಬರುವ ವಸ್ತುಗಳ ಮಾರುಕಟ್ಟೆ. ಅಕ್ಕಿ, ತೆಂಗು, ಅಡಕೆ ಹೊಗೆಸೊಪ್ಪು ಮುಂತಾದವು ಗಳ ವ್ಯಾಪಾರವೂ ನಡೆಯುವುದು.

ಅಂಕೋಲ ಒಂದು ಐತಿಹಾಸಿಕ ಸ್ಥಳ. ಪಟ್ಟಣದ ಪೂರ್ವಕ್ಕೆ ಸ್ವಲ್ಪ ಎತ್ತರದಲ್ಲಿ ವೃತ್ತಾಕಾರವಾದ ಶಿಥಿಲ ಕೋಟೆಯಿದೆ. ಸುಮಾರು 548ಮೀ ಸುತ್ತಳತೆಯುಳ್ಳ ಈ ಕೋಟೆಯ ಸುತ್ತ 4ಮೀ ಅಗಲ 4ಮೀ ಆಳದ ಕಂದಕವಿದೆ. ಇದನ್ನು ಬಳಸಿ ಮಾವು, ಗೋಡಂಬಿ, ಹಲಸು ಮುಂತಾದ ಫಲವೃಕ್ಷಗಳನ್ನು ಬೆಳೆಸಲಾಗಿದೆ. ಈ ಕೋಟೆಯನ್ನು ಸೋದೆಯ ದೊರೆ ಅಂಕೋಲದಲ್ಲಿ ವಾಸವಾಗಿದ್ದ ತನ್ನ ಪ್ರೇಯಸಿಗಾಗಿ ಕಟ್ಟಿಸಿದನೆಂದು ಪ್ರತೀತಿ. ಇಲ್ಲಿ ಮಹಾಮಾಯ, ಆರ್ಯದುರ್ಗಾ, ಕುಂಡೋದರಿ, ಶಾಂತಾದುರ್ಗಾ, ಕಾಳಮ್ಮ, ದತ್ತಾತ್ರೇಯ ಮೊದಲಾದ ದೇವಾಲಯಗಳಿವೆ. ಮಹಾಮಾಯ ಮತ್ತು ಕುಂಡೋದರಿ ದೇವಾಲಯಗಳು 16ನೆಯ ಶತಮಾನದೆಲ್ಲಿ ನಿರ್ಮಾಣಗೊಂಡವು . ಇಲ್ಲಿಯ ಕೋಟೇಶ್ವರ ಅಥವಾ ರುದ್ರೇಶ್ವರ ದೇವಾಲಯದ ಹತ್ತಿರ ಒಂದು ಕೊಳವೂ ಒಂದು ರೋಮನ್ ಕೆಥೊಲಿಕ್ ಇಗರ್ಜಿಯೂ ಇವೆ. 1540ರ ಸುಮಾರಿನಲ್ಲಿ ಈ ಊರು ಪೋರ್ಚುಗೀಸರ ವಶದಲ್ಲಿತ್ತು. ಆ ಕಾಲದಲ್ಲಿ ಅಂಕೋಲದ ಮೂಲಕ ಖನಿಜ ಮತ್ತು ಬಟೆಗಳ ವ್ಯಾಪಾರ ನಡೆಯುತ್ತಿತ್ತು. 1567ರಲ್ಲಿ ವೆನಿಸ್ಸಿನ ಪಸಿದ್ಧ ವ್ಯಾಪಾರಿಯಾದ ಸೀಸರ್ ಫ್ರೆಡರಿಕ್ ಅಂಕೋಲಕ್ಕೆ ಭೇಟಿಕೊಟ್ಟಿದ್ದ .ಬಿಜಾಪುರದ ರಾಜಪ್ರತಿನಿಧಿಯಾಗಿದ್ದ ಷರೀಫ್- ಉಚಲ್-ಮುಲ್ಕ್ 16ನೆಯ ಶತಮಾನದ ಕೊನೆಯಲ್ಲಿ ಅಂಕೋಲವನ್ನು ಆಡಳಿತ ಕೇಂದ್ರವನ್ನಾಗಿಮಾಡಿಕೊಂಡಿದ್ದ. 1676ರಲ್ಲಿ ಶಿವಾಜಿಯ ಸೇನೆ ಅಂಕೋಲದ ಅರ್ಧಭಾಗ ವನ್ನು ನಾಶಗೊಳಿಸಿತು. 1730ರಲ್ಲಿ ಅಂಕೋಲ ಸೋದೆ ರಾಜ್ಯದ ಬಂದರಾಗಿತ್ತೆಂದು ಹ್ಯಾಮಿಲ್ಟನ್ನನ ಬರವಣಿಗೆಯಲ್ಲಿ ಉಲ್ಲೇಖವಿದೆ. ಅಂಕೋಲ ಮೊದಲು ಕುಮಟ ತಾಲ್ಲೂಕಿನ ಭಾಗವಾಗಿತ್ತು. 1880ರಲ್ಲಿ ಇದನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಮಾಡಲಾಯಿತು.

ಪ್ರಮುಖ ದೇವಾಲಯಗಳು

  • ಶಾಂತಾದುರ್ಗಾ ದೇವಾಲಯ,
  • ಆರ್ಯದುರ್ಗಾ ದೇವಾಲಯ,
  • ಕೋಗ್ರೆ ದೇವಾಲಯ,
  • ವೆಂಕಟ್ರಮಣ ದೇವಾಲಯ,
  • ಕಾನಬೀರ(ಭಾವಿಕೇರಿ),
  • ಬೊಮ್ಮಯ್ಯ ದೇವರು,
  • ಕಾತ್ಯಾಯಿಣಿ
  • ಕುಸಲ ದೇವರು

ಭಾವಿಕೇರಿಯಲ್ಲಿ ಕಾನಬೀರ,ಮಹಾಸತಿ ದೇವಸ್ಥಾನವಿದ್ದು ಇವು ತಮ್ಮದೆ ಆದ ಐತಿಹಾಸಿಕ ಹಿನ್ನಲೆಯನ್ನ ಹೊಂದಿದೆ. ಕಾನಬೀರ ದೇವನ ಅಣ್ಣ ಪಕ್ಕದೂರಿನಲ್ಲಿರುವ ಜೈನಬೀರ(ಬೇಲೇಕೇರಿ)ಈ ದೇವನ ಒಂದು ಪಾರ್ಶ್ವದಿ೦ದ ನೋಡಿದರೆ ಅಣ್ಣನ ಕಡೆ ನೋಡುತಲಿದ್ದಾನೆ ಎನಿಸುತ್ತದೆ. ಹಾಗೂ ಇಲ್ಲಿ ಮಹಾಸತಿ ದೇವಸ್ಥಾನವಿದ್ದು ದೇವಸ್ಥಾನದ ಎಡಭಗದಲ್ಲಿ "ಹಿರಿನಾಯಕ ಹಾಗೂ ಕಿರಿನಾಯಕರ ಸಮಾದಿಗಳಿವೆ", ಬಲಭಾಗಕ್ಕೆ ಕೆಲವು ಶಾಸನಗಳಿವೆ. ಈ ಹಿಂದೆ "ನಾಯಕ "ಮನೆತನದವರು ಈ ಊರನ್ನು ಆಳುತ್ತಿದ್ದರ೦ತೆ. ಅಂಕೋಲೆಯಲ್ಲಿ ಮಲ್ಲಿಕಾರ್ಜುನನ ಕೋಟೆಯಿದ್ದು, ಕೋಟೆಯ ಮದ್ಯದಲ್ಲಿ ಎದುರು ಬದುರಾಗಿ ಹನುಮದೇವನ ದೇವಾಲಯವಿದೆ. ದೇವಾಲಯದ ಪಕ್ಕದಲ್ಲಿಯೇ "ಕುದುರೆಬಾವಿ" ಇದೆ. ಈ ಬಾವಿಯ ಒಳಗಡೆ ಸುರಂಗ ಮಾರ್ಗವಿದ್ದು ಈ ಮಾರ್ಗದ ಮೂಲಕ ಗೋಕರ್ಣ, ಕಾಶಿ, ರಾಮೇಶ್ವರ ಮೊದಲಾದ ಪುಣ್ಯ ಸ್ಥಳಗಳಿಗೆ ಹೋಗುತ್ತಿದ್ದರು ಎಂಬ ಪ್ರತೀತಿ ಇದೆ. ಬೌದ್ದ ಪೂರ್ಣಿಮೆಯಂದು ಶಾಂತಾದುರ್ಗಾ ದೇವಾಲಯದಲ್ಲಿ ಒಂಬತ್ತು ದಿನಗಳ ಹಬ್ಬ ನಡೆಯುತ್ತದೆ. ಈ ತಾಲ್ಲೂಕಿನ ನೂರಾರು ಎಕರೆಗಳಷ್ಟು ಪ್ರದೇಶ ಸೀಬರ್ಡ ನೌಖಾನೆಲೆ ವ್ಯಾಪ್ತಿಗೆ ಒಳಪಟ್ಟಿದೆ. ಬೇಲೇಕೇರಿ ಸಮುದ್ರ ತೀರ ಹಲವಾರು ಪ್ರವಾಸಿಗರನ್ನು ಕರೆಯುತಿತ್ತು ಆದರೆ ಈಗ ಮ್ಯಾಂಗನೀಸ್ ಉದ್ಯಮದಲ್ಲಿ ಉನ್ನತ ಹಂತವನ್ನು ತಲುಪುತಿದ್ದು ಉದ್ಯಮಿಗಳ ತವರೂರಾಗಿದೆ. ಈ ಉದ್ಯಮವು ಪರಿಸರದ ಮೇಲೆ ಮಾರಕ ಪರಿಣಾಮವನ್ನುಂಟು ಮಾಡುತಿದೆ.ಇದಲ್ಲ ದೆ ವ್ಯೈದ್ಯ ದಿ. ಬೊಮ್ಮು ಶಿವು ಗೌಡ ಎಂಬುವವರು ಪಾರ್ಶವಾಯು ವ್ಯಾಧಿಗೆ ಉತ್ತಮ ಔಷಧಿಯನ್ನು ಕೊಡುತ್ತ್ತ್ತಾರೆ. ಮೂಳೆ ಮುರಿತಕ್ಕೆ ತೋಡೊರು ಗೌಡರ ಮನೆಯ ಗಿಡಮೂಲಿಕೆ ಔಷಧಿ ರಾಮಬಾಣ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಂಕೋಲಾ&oldid=880562" ಇಂದ ಪಡೆಯಲ್ಪಟ್ಟಿದೆ