ಶಿಂಜೋ ಅಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೪೩ ನೇ ಸಾಲು: ೪೩ ನೇ ಸಾಲು:
೨೦೦೯ರಲ್ಲಿ ಸಂಸತ್ ಗೆ ಆಯ್ಕೆಯಾದ ಅಬೆ, ೩ ವರ್ಷ ವಿರೋಧ ಪಕ್ಷದ ನಾಯಕರಾಗಿದ್ದರು.
೨೦೦೯ರಲ್ಲಿ ಸಂಸತ್ ಗೆ ಆಯ್ಕೆಯಾದ ಅಬೆ, ೩ ವರ್ಷ ವಿರೋಧ ಪಕ್ಷದ ನಾಯಕರಾಗಿದ್ದರು.
==ಮರಳಿ ಪ್ರಧಾನಿ==
==ಮರಳಿ ಪ್ರಧಾನಿ==
೨೦೧೨ರ ನವೆಂಬರ್ ೧೬ರಂದು ಪ್ರಧಾನಿ ಯೊಶಿಹಿಕೋ ನೋಡಾ ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆದೇಶವಿತ್ತರು. ೨೬ ಡಿಸೆಂಬರ್ ೨೦೧೨ರಂದು ಶಿಂಜೋ ಅಬೆ, ನ್ಯೂ ಕೊಮಿಟೋ ಪಕ್ಷದ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದರು.
೨೦೧೨ರ ನವೆಂಬರ್ ೧೬ರಂದು ಪ್ರಧಾನಿ ಯೊಶಿಹಿಕೋ ನೋಡಾ ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆದೇಶವಿತ್ತರು. ೨೬ ಡಿಸೆಂಬರ್ ೨೦೧೨ರಂದು ಶಿಂಜೋ ಅಬೆ, ನ್ಯೂ ಕೊಮಿಟೋ ಪಕ್ಷದ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದರು. <ref name="Lucy Alexander">
{{cite web
|url=http://www.thetimes.co.uk/tto/news/world/asia/article3633051.ece
|title=Landslide victory for Shinzo Abe in Japan election|publisher=''The Times''
|author=Lucy Alexander
|date=17 December 2012
}}</ref>
ಟಾರೀ ಅಸೋ ರನ್ನು ಉಪಪ್ರಧಾನಿ ಮತ್ತು ಯೋಷಿಹಿಡೆ ಸುಗಾರನ್ನು ಮುಖ್ಹ್ಯ ಕ್ಯಾಬಿನೇಟ್ ಕಾರ್ಯದರ್ಶಿಯನ್ನಾಗಿಸಿದ ಅಬೆ, ಅಬೆನಾಮಿಕ್ಸ್ ಎಂಬ ಹೊಸ ಹಣಕಾಸು ನೀತಿಯನ್ನು ಮೊದಲು ಮಾಡಿದರು.
ಟಾರೀ ಅಸೋ ರನ್ನು ಉಪಪ್ರಧಾನಿ ಮತ್ತು ಯೋಷಿಹಿಡೆ ಸುಗಾರನ್ನು ಮುಖ್ಹ್ಯ ಕ್ಯಾಬಿನೇಟ್ ಕಾರ್ಯದರ್ಶಿಯನ್ನಾಗಿಸಿದ ಅಬೆ, ಅಬೆನಾಮಿಕ್ಸ್ ಎಂಬ ಹೊಸ ಹಣಕಾಸು ನೀತಿಯನ್ನು ಮೊದಲು ಮಾಡಿದರು.
೧೯೯೦ರಿಂದ ವಹಿವಾಟು ಹಿಂಜರಿತ (ಡೀಫ್ಲೇಷನ್) ಅನುಭವಿಸುತ್ತಿದ್ದ ಜಪಾನ್, ೨೦೦೮ರ ಜಾಗತಿಕ ಹಣಕಾಸು ಮುಗ್ಗಟ್ಟನ್ನು ಮತ್ತು ತೈಲ ಬೆಲೆ ಸಮಸ್ಯೆಗಳಿಂದ ಜರ್ಝರಿತವಾಗಿತ್ತು.
೧೯೯೦ರಿಂದ ವಹಿವಾಟು ಹಿಂಜರಿತ (ಡೀಫ್ಲೇಷನ್) ಅನುಭವಿಸುತ್ತಿದ್ದ ಜಪಾನ್, ೨೦೦೮ರ ಜಾಗತಿಕ ಹಣಕಾಸು ಮುಗ್ಗಟ್ಟನ್ನು ಮತ್ತು ತೈಲ ಬೆಲೆ ಸಮಸ್ಯೆಗಳಿಂದ ಜರ್ಝರಿತವಾಗಿತ್ತು.
೫೩ ನೇ ಸಾಲು: ೫೯ ನೇ ಸಾಲು:
ಬ್ಯಾಂಕ್ ಆಫ್ ಜಪಾನ್, ಅಮೇರಿಕೆಯ ಫೆಡರಲ್ ರಿಸರ್ವ್ ನಂತೆಯೇ ಸಡಿಲವಾದ ಬಡ್ಡಿದರ, ೩ ಟ್ರಿಲಿಯನ್ ಯೆನ್ ಗಳಷ್ಟು ಬಾಂಡ್ ಖರೀದಿ ಮತ್ತು ಬಜೆಟ್ ಯೋಜನಾಗಾತ್ರ ಕಡಿತ ಇವೇ‌ನೀತಿಗಳಿಂದ ಅಬೆ ಹಣಕಾಸು ಗುರಿಗಳನ್ನು ಮೊದಲು ಮಾಡಿದರು.
ಬ್ಯಾಂಕ್ ಆಫ್ ಜಪಾನ್, ಅಮೇರಿಕೆಯ ಫೆಡರಲ್ ರಿಸರ್ವ್ ನಂತೆಯೇ ಸಡಿಲವಾದ ಬಡ್ಡಿದರ, ೩ ಟ್ರಿಲಿಯನ್ ಯೆನ್ ಗಳಷ್ಟು ಬಾಂಡ್ ಖರೀದಿ ಮತ್ತು ಬಜೆಟ್ ಯೋಜನಾಗಾತ್ರ ಕಡಿತ ಇವೇ‌ನೀತಿಗಳಿಂದ ಅಬೆ ಹಣಕಾಸು ಗುರಿಗಳನ್ನು ಮೊದಲು ಮಾಡಿದರು.


ಇವೆಲ್ಲಾ ಬಲು ಸುಲಭವಾದುವು ಎಂದೂ, ನಿಜವಾದ ಸುಧಾರಣೆಗಳು ಅಲ್ಲವೆಂದೂ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ ಟೀಕೆ ಮಾಡಿದೆ.<cite class="citation web"><a rel="nofollow" class="external text" href="http://asia.nikkei.com/Politics-Economy/Policy-Politics/Abe-shows-staying-power-as-Japan-s-third-longest-serving-leader">"asia.nikkei.com1"</a>Nov 18, 2018.</cite>
ಇವೆಲ್ಲಾ ಬಲು ಸುಲಭವಾದುವು ಎಂದೂ, ನಿಜವಾದ ಸುಧಾರಣೆಗಳು ಅಲ್ಲವೆಂದೂ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ ಟೀಕೆ ಮಾಡಿದೆ.


==ವಿದೇಶಾಂಗ ನೀತಿ==
==ವಿದೇಶಾಂಗ ನೀತಿ==

೧೮:೦೬, ೨೦ ನವೆಂಬರ್ ೨೦೧೮ ನಂತೆ ಪರಿಷ್ಕರಣೆ

ಶಿಂಜೋ ಅಬೆ (ಜನನ: ೨೧ ಸೆಪ್ಟೆಂಬರ್ ೧೯೫೪) ಜಪಾನ್ ದೇಶದ ಪ್ರಸಕ್ತ ಪ್ರಧಾನಮಂತ್ರಿ. ಲಿಬರಲ್ ಡೆಮೋಕ್ರಟಿಕ್ ಪಕ್ಷದ ನೇತಾರರಾಗಿರುವ ಅಬೆ, ಬಲಪಂಥೀಯ ವಿಚಾರಗಳ ನಿಪ್ಪೋನ್ ಕೈಗಿ ಚಳುವಳಿಯ ಮೂಲಕ ಹೆಸರಾದವರು.

ಜನನ

ಟೊಕಿಯೋದಲ್ಲಿನ ಪ್ರಮುಖ ರಾಜಕೀಯ ಕುಟುಂಬದಲ್ಲಿ ಜನಿಸಿದ ಶಿಂಜೋ ಅಬೆ, ೨೧ ಸೆಪ್ಟೆಂಬರ್ ೧೯೫೪ರಂದು ಜನಿಸಿದರು. ಶಿಂಟಾರೋ ಅಬೆ ಮತ್ತು ಯೋಕೊ ಅಬೆರ ಮಗನಾಗಿ ಜನಿಸಿದ ಅಬೆ, ಬಾಲ್ಯದಿಂದಲೇ ಜಾಣ ವಿದ್ಯಾರ್ಥಿ ಎಂದು ಹೆಸರು ಗಳಿಸಿದರು.

ಕೌಟುಂಬಿಕ ಹಿನ್ನೆಲೆ

ಶಿಂಜೋ ಅಬೆರ ತಾಯಿಯ ತಂದೆ ೧೯೫೭-೬೦ರ ಅವಧಿಗೆ ಜಪಾನ್ ಪ್ರಧಾನಿಯಾಗಿದ್ದ ನೊಬುಸುಕೆ ಕಿಷಿ. ಶಿಂಜೋ ಅಬೆರ ತಂದೆಯ ತಾತ ದ್ವಿತೀಯ ವಿಶ್ವಯುದ್ಧದಲಿ ಜಪಾನಿನ ಸೇನಾಧಿಪತಿಯಾಗಿದ್ದ ಯೋಷಿಮಾಸ ಒಷಿಮಾ. ಜಪಾನ್ ಯುದ್ಧ ಸೋತ ನಂತರ ಕಿಷ್ಸಿರನ್ನು ಸುಗಮೋ ಸೆರೆಮನೆಯಲ್ಲಿ ಬಂಧನದಲ್ಲಿ ಇಡಲಾಗಿತ್ತು.

ಓದು

ಟೋಕಿಯೋದಲ್ಲಿ ಶಾಲೆ ಓದಿದ ಶಿಂಜೋ, ಸೈಕಿಯೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದರು. ೧೯೭೭ರಲ್ಲಿ ಪದವಿ ಪಡೆದು, ಅಮೇರಿಕೆಗೆ ತೆರಳಿದ ಶಿಂಜೋ, ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಲಿ ಸಾರ್ವಜನಿಕ ಆಡಳಿತದ ಅಧ್ಯಯನ ನಡೆಸಿದರು.

ವೃತ್ತಿ

೧೯೭೯ರ ಏಪ್ರಿಲ್ ನಲ್ಲಿ ಕೊಬೆ ಸ್ಟೀಲ್ ಕಂಪನಿ ಸೇರಿದ ಶಿಂಜೋ, ೧೯೮೨ರವರೆಗೆ ಅಲ್ಲಿ ಕಾರ್ಯನಿರ್ವಹಿಸಿದರು.

ರಾಜಕೀಯ

ರಾಜಕೀಯ ಕುಟುಂಬದಲ್ಲಿ ಜನಿಸಿದ ಅಬೆರಿಗೆ, ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಆಸಕ್ತಿಗಿಂತಲೂ ರಾಜಕೀಯದತ್ತ ಹೆಚ್ಚು ಒಲವು ಇತ್ತು. ವಿದೇಶಾಂಗ ಸಚಿವರಿಗೆ ಆಪ್ತ ಸಹಾಯಕನಾಗುವ ಅವಕಾಶ ೧೯೮೨ರಲ್ಲಿ ಒದಗಿಬಂತು. ಅಬೆ, ಕೆಲಸಕ್ಕೆ ರಾಜೀನಾಮೆಯಿತ್ತು ಪೂರ್ಣಪ್ರಮಾಣದ ರಾಜಕೀಯ ಬದುಕಿಗೆ ಹೊರಳಿದರು.

ರಾಜಕೀಯ ಬದುಕು

೧೯೮೨ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದ ಅಬೆ, ಮೊದಲಿಗೆ ವಿದೇಶಾಂಗ ಇಲಾಖೆ, ನಂತರ ಪಕ್ಷದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ೯ ವರ್ಷ ದುಡಿದರು. ಸಂಘಟನೆ ಮತ್ತು ಸರ್ಕಾರದ ಹಲವು ಬಗೆಗಳನ್ನು ಅರಿತ ಅಬೆ, ಈ ಕಾಲದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತರು. ಯೋಷಿರೋ ಮೋರಿ ಮತ್ತು ಜುನಿಚಿರೋ ಕೊಯಿಜುಮಿ ರೊಂದಿಗೆ ಮೋರಿ ಪಂಗಡದಲ್ಲಿ ಗುರುತಿಸಿಕೊಂಡ ಅಬೆ,

೧೯೯೩ರಲ್ಲಿ ತಮ್ಮ ತಂದೆಯ ನಿಧನದ ಕಾರಣ, ಯಮಗುಚಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದರು. ೧೯೯ರ ಹೊತ್ತಿಗೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅಬೆ, ೨೦೦೦ರ ಉತ್ತರ ಕೊರಿಯಾ ಅಪಹರಣದಲ್ಲಿ ಹೆಸರು ಮಾಡಿದರು. ಉತ್ತರ ಕೊರಿಯಾದಲ್ಲಿ ಜಪಾನ್ ನಾಗರೀಕರ ಅಪಹರಣವಾದಾಗ, ಅಬೆ, ಕೊಯಿಜುಮಿರೊಂದಿಗೆ ಉತ್ತರ ಕೊರಿಯಾಕ್ಕೆ ಸಂಧಾನಕ್ಕೆ ತೆರಳಿದರು. ಒತ್ತೆಯಾಳುಗಳನ್ನು ವಾರದ ಮಟ್ಟಿಗೆ ಜಪಾನಿಗೆ ಕರೆತರುವಲ್ಲಿ ಯಶಸ್ವಿಯಾದ ಅಬೆ, ಒತ್ತೆಯಾಳುಗಳನ್ನು ಮತ್ತೆ ಕಳಿಸಲು ನಿರಾಕರಿಸಿದರು. ೨೦೦೩ರಲ್ಲಿ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿಯಾದರು.

ಏಪ್ರಿಲ್ ೨೦೦೬ರಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಅಬೆ, ತಮ್ಮ ಗುರುಗಳಾದ ಯೋಷಿರೋ ಮೋರಿ ಮತ್ತು ಕೊಯಿಜುಮಿರ ಬೆಂಬಲ ಗಳಿಸಿದರು.

ಜುಲೈ ೨೦೦೬ರಲ್ಲಿ, ೫೨ ವರ್ಷದ ಅಬೆ, ದ್ವಿತೀಯ ಯುದ್ಧಾನಂತರದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮೊದಲ ಪ್ರಧಾನಿ ಅವಧಿ ೨೦೦೬-೦೭

ತಮ್ಮ ಮುಂಚಿನ ಪ್ರಧಾನಿ ಕೊಯಿಜುಮಿರ ಆರ್ಥಿಕ ನೀತಿಗಳನ್ನು ಮುಂದುವರಿಸಿಕೊಂಡು ನಡೆದ ಅಬೆ, ತೆರಿಗೆ ಸುಧಾರಣೆಗೆ ಒತ್ತು ನೀಡಿದರು. ತೆರಿಗೆಗಳನ್ನು ಹೆಚ್ಚಿಸದೆಯೇ, ಪೋಲುವೆಚ್ಚ್ಚಗಳನ್ನು ನಿಲ್ಲಿಸಿದ ಜಾಣತನದಿಂದ ಅಬೆ, ಜನಪ್ರಿಯರಾದರು.

ಬಜೆಟ್ ಅನ್ನು ಖೋತಾದಿಂದ ಉಳಿತಾಯದತ್ತ ತರಲು, ಯೋಜನಾ ಗಾತ್ರವನ್ನು ಕಡಿತ ಮಾಡಿದ್ದು ಕೂಡಾ ಅಬೆಯವರ ಹಿರಿಮೆ. ಪಠ್ಯಪುಸ್ತಕಗಳ ನವೀಕರಣದಲ್ಲಿ ಆಸಕ್ತಿ ತೋರಿದ ಅಬೆ, ರಾಜಮನೆತನದ ಜೊತೆ ಉತ್ತಮ ಸಂಬಂಧವನ್ನು ಗಳಿಸಿದರು. ಚೈನಾ, ಭಾರತದ ಜೊತೆಗೆ ಸಂಬಂಧ ಸುಧಾರಿಸಲು ಒತ್ತು ಕೊಟ್ಟ ಅಬೆ, ಉತ್ತರ ಕೊರಿಯಾದ ಜೊತೆ ಕಟುವಾದ ನಿರ್ಧಾರಗಳನ್ನು ತಳೆದರು. ತೈವಾನ್ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಲೂ ಕೂಡ, ಚೈನಾವನ್ನು ತಮ್ಮೆಡೆಗೆ ಸೆಳೆದದ್ದು ಅಬೆರ ದೀರ್ಘಕಾಲದ ವಿದೇಶಾಂಗ ಖಾತೆಯಲ್ಲಿದ್ದ ಅನುಭವದಿಂದ ಸಾಧ್ಯವಾಯಿತು. ಸೆಂಕಾಕು ದ್ವೀಪಗಳು, ಯಾಸುಕುನಿ ತೀರ್ಥಕ್ಷೇತ್ರಕ್ಕೆ ಭೇಟಿ ಹೀಗೆ ಸಂಪ್ರದಾಯಸ್ಥ ಮತ್ತು ವಿವಾದಾಸ್ಪದ ಘಟನೆಗಳು ಅಬೆರನ್ನು ಮೂಲಭೂತವಾದಿ ಎಂಬ ಹಣೆಪಟ್ಟಿಗೆ ಈಡು ಮಾಡಿದವು.

೨೦೦೭ರ ಚುನಾವಣೆಯಲ್ಲಿ ೫೨ ವರ್ಷದಲ್ಲಿ ಮೊದಲ ಬಾರಿಗೆ ಲಿಬರಲ್ ಡೆಮಾಕ್ರಟಿಕ್ ಪಕ್ಷ ಜಪಾನ್ ಸಂಸತ್ತಿನ ಹಿರಿಮನೆಯಲ್ಲಿ ಬಮತ ಕಳೆದುಕೊಂಡಿತು. ಹಲಮಂದಿ ಸಚಿವ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿದ್ದು ಅಬೆರನ್ನು ನಿರಾಶರನ್ನಾಗಿಸಿತು. ಇದೇ ಸಮಯಕ್ಕೆ ತೀಕ್ಷ್ಣ ಅಲ್ಸರ್ ರೋಗಕ್ಕೆ ಗುರಿಯಾದ ಅಬೆ, ೨೬ ಸೆಪ್ಟೆಂಬರ್ ೨೦೦೭ರಂದು ಪ್ರಧಾನಿ ಪದವಿಗೆ ರಾಜೀನಾಮೆ ಇತ್ತರು. ಯಾಸುವೋ ಫುಕುಡ ಪ್ರಧಾನಿಯಾದರು.

೨೦೦೭-೧೨

ಅಸಾಕೊಲ್ ಎಂಬ ಔಷಧದಿಂದ ಅಬೆ, ತಮ್ಮ ಅಲ್ಸರ್ ರೋಗದಿಂದ ಪಾರಾದರು. ವಿ~ಗ್ಞಾನ ಮತ್ತು ಔಷಧ ಸಂಶೋಧನೆಗೆ ಒತ್ತು ನೀಡುವುದರ ಮಹತ್ವ ಅಬೆರಿಗೆ ಆಯಿತು. ೨೦೦೯ರಲ್ಲಿ ಸಂಸತ್ ಗೆ ಆಯ್ಕೆಯಾದ ಅಬೆ, ೩ ವರ್ಷ ವಿರೋಧ ಪಕ್ಷದ ನಾಯಕರಾಗಿದ್ದರು.

ಮರಳಿ ಪ್ರಧಾನಿ

೨೦೧೨ರ ನವೆಂಬರ್ ೧೬ರಂದು ಪ್ರಧಾನಿ ಯೊಶಿಹಿಕೋ ನೋಡಾ ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆದೇಶವಿತ್ತರು. ೨೬ ಡಿಸೆಂಬರ್ ೨೦೧೨ರಂದು ಶಿಂಜೋ ಅಬೆ, ನ್ಯೂ ಕೊಮಿಟೋ ಪಕ್ಷದ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದರು. [೧] ಟಾರೀ ಅಸೋ ರನ್ನು ಉಪಪ್ರಧಾನಿ ಮತ್ತು ಯೋಷಿಹಿಡೆ ಸುಗಾರನ್ನು ಮುಖ್ಹ್ಯ ಕ್ಯಾಬಿನೇಟ್ ಕಾರ್ಯದರ್ಶಿಯನ್ನಾಗಿಸಿದ ಅಬೆ, ಅಬೆನಾಮಿಕ್ಸ್ ಎಂಬ ಹೊಸ ಹಣಕಾಸು ನೀತಿಯನ್ನು ಮೊದಲು ಮಾಡಿದರು. ೧೯೯೦ರಿಂದ ವಹಿವಾಟು ಹಿಂಜರಿತ (ಡೀಫ್ಲೇಷನ್) ಅನುಭವಿಸುತ್ತಿದ್ದ ಜಪಾನ್, ೨೦೦೮ರ ಜಾಗತಿಕ ಹಣಕಾಸು ಮುಗ್ಗಟ್ಟನ್ನು ಮತ್ತು ತೈಲ ಬೆಲೆ ಸಮಸ್ಯೆಗಳಿಂದ ಜರ್ಝರಿತವಾಗಿತ್ತು.

  • ೨% ಹಣದುಬ್ಬರ
  • ಸಡಿಲ ಮತ್ತು ಉದಾರವಾದ ಅರ್ಥಿಕ ನೆರವನ್ನು ಕೈಗಾರಿಕೆಗಳಿಗೆ ನೀಡುವುದು
  • ವಿತ್ತೀಯ ಕೊರತೆ ಕಡಿಮೆ ಮಾಡಲು ಖಾಸಗಿ ಸಹಭಾಗಿತ್ವಕ್ಕೆ ಒತ್ತು

ಇವು ಅಬೆರ ಗುರಿಗಳಾದವು.

ಬ್ಯಾಂಕ್ ಆಫ್ ಜಪಾನ್, ಅಮೇರಿಕೆಯ ಫೆಡರಲ್ ರಿಸರ್ವ್ ನಂತೆಯೇ ಸಡಿಲವಾದ ಬಡ್ಡಿದರ, ೩ ಟ್ರಿಲಿಯನ್ ಯೆನ್ ಗಳಷ್ಟು ಬಾಂಡ್ ಖರೀದಿ ಮತ್ತು ಬಜೆಟ್ ಯೋಜನಾಗಾತ್ರ ಕಡಿತ ಇವೇ‌ನೀತಿಗಳಿಂದ ಅಬೆ ಹಣಕಾಸು ಗುರಿಗಳನ್ನು ಮೊದಲು ಮಾಡಿದರು.

ಇವೆಲ್ಲಾ ಬಲು ಸುಲಭವಾದುವು ಎಂದೂ, ನಿಜವಾದ ಸುಧಾರಣೆಗಳು ಅಲ್ಲವೆಂದೂ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ ಟೀಕೆ ಮಾಡಿದೆ.

ವಿದೇಶಾಂಗ ನೀತಿ

ತಮ್ಮ ಮೊದಲ ಅವಧಿಯಲ್ಲಿ ಮಾಡಿದಂತೆಯೇ, ಅಬೆ ಭಾರತ-ಆಸ್ಟ್ರೇಲಿಯಾ-ಅಮೇರಿಕೆ-ಗಳೊಂದಿಗೆ ರಕ್ಷಣಾ ವಜ್ರಕವಚ ಏರ್ಪಡಿಸಲು ಶ್ರಮಿಸಿದರು. ೨೦೧೪ರಲ್ಲಿ ಭಾರತದ ಪ್ರಧಾನಿಯಾದ ನರೇಂದ್ರ_ಮೋದಿಯವರೊಂದಿಗೆ ಸ್ನೇಹಬೆಳೆಸಿಕೊಂಡ ಅಬೆ, ಭಾರತಕ್ಕೆ ಬುಲೆಟ್ ರೈಲು, ಜಪಾನ್ ಏಡಿಬಿಯಿಂದ ಹಲವು ಮೆಟ್ರೋ ರೈಲುಗಳಿಗೆ ಸುಲಭ ಸಾಲ, ಹೀಗೆ ಹಲವು ಬಗೆಯಿಂದ ಮೈತ್ರಿ ಬಳೆಸಿದರು. ೨೦೧೪ ಮತ್ತು ೨೦೧೭ರ ಚುನಾವಣೆಗಳನ್ನು ಗೆದ್ದ ಅಬೆ, ೨೦೧೪-೨೦೧೭ರ ಅವಧಿಯಲ್ಲಿ ಹಣಕಾಸು, ಕೃಷಿ, ಆರೋಗ್ಯ, ರಕ್ಷಣೆ ಮತ್ತು ವಿದೇಶಾಂಗ ನೀತಿಗಳಲ್ಲಿ ಸುಧಾರಣೆಗಳನ್ನು ತಂದರು. ೨೦೧೭ರ ಚುನಾವಣೆಯ ಗೆಲುವಿನಿಂದ ಅಬೆನಾಕ್ಸ್ ೨.೦ ಎಂಬ ನೀತಿಯನ್ನು ನಿರೂಪಿಸಿದರು. ೨೦೧೭ರಿಂದ ನಾಲ್ಕನೆಯ ಅವಧಿಗೆ ಪ್ರಧಾನಿಯಾಗಿರುವ ಅಬೆ, ಬಲಪಂಥೀಯ ಮನುಷ್ಯ ಎಂದೇ ಖ್ಯಾತಿ ಗಳಿಸಿದ್ದಾರೆ.

ಖಾಸಗಿ ಬದುಕು

ಅಕಿ ಮಜಾಕಿ ರನ್ನು ೧೯೮೭ರಲ್ಲಿ ವರಿಸಿದ ಅಬೆರಿಗೆ ಮಕ್ಕಳಿಲ್ಲ. ಬಲು ವಾಚಾಳಿಯಾದ ಅಕಿ, ಶಿಂಜೋ ಅಬೆರ ನೀತಿಗಳನ್ನು ಎಗ್ಗಿಲ್ಲದೆ ಟೀಕಿಸುತ್ತಾರೆ, ಹೀಗಾಗಿ ಅವರನ್ನು ಗೃಹ-ವಿರೋಧ ಮಂತ್ರಿ ಎಂದೇ ವಿಡಂಬನೆ ಮಾಡಲಾಗುತ್ತದೆ.

ಮನ್ನಣೆ

  • ಥಾಯ್ ಲ್ಯಾಂಡ್ ರಂಗ್ಸಿತ್ ವಿವಿಯ ಗೌರವ ಡಾಕ್ಟರೇಟ್ - ೨೦೧೩
  • ದಿಲ್ಲಿಯ ಜೆ.ಎನ್.ಯು ವಿವಿಯ ಗೌರವ ಡಾಕ್ಟರೇಟ್ -೨೦೧೫
  • ಲಕ್ಸೆಂಬರ್ಗ್, ನೆದರ್ ಲ್ಯಾಂಡ್, ಫಿಲಿಪ್ಪೈನ್ಸ್ ದೇಶಗಳ ಅತ್ಯುಚ್ಛ ನಾಗರೀಕ ಸನ್ಮಾನ
  1. Lucy Alexander (17 December 2012). "Landslide victory for Shinzo Abe in Japan election". The Times. {{cite web}}: Italic or bold markup not allowed in: |publisher= (help)