ಗೊದಮೊಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೨ ನೇ ಸಾಲು: ೧೨ ನೇ ಸಾಲು:
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಪ್ರಾಣಿಗಳು]]
[[ವರ್ಗ:ಪ್ರಾಣಿಗಳು]]
[[ವರ್ಗ:ಉಭಯವಾಸಿಗಳು]]

೧೧:೫೫, ೧ ಆಗಸ್ಟ್ ೨೦೧೮ ನಂತೆ ಪರಿಷ್ಕರಣೆ

ಮೊಟ್ಟೆಯಿಂದ ಹೊರ ಬಂದು, ಕೆಲ ಕಾಲ ನೀರಿನಲ್ಲಿ ವಾಸಿಸುವ ಮರಿ ಕಪ್ಪೆಗಳಿಗೆ ಗೊದ ಮೊಟ್ಟೆ ಎನ್ನುವರು.

Tadpoles

ಗೊದಮೊಟ್ಟೆ ಹಂತ

ಇವು ಬಾಲ ಹೊಂದಿದ್ದು, ಕಿವಿರುಗಳಿಂದ ಉಸಿರಾಡುತ್ತವೆ. ವಾತಾವರಣದಲ್ಲಿನ ಉಷ್ಣಾಂಶ ಕಪ್ಪೆಗಳು ಮೊಟ್ಟೆಯಿಡುವ ಕಾಲವನ್ನು ನಿರ್ಧರಿಸುತ್ತದೆ. ಕಪ್ಪೆಗಳು ನೀರಿನಲ್ಲಿ ಜೊಂಡಿನ ಮಧ್ಯೆ, ಕೊಚ್ಚೆಯ ಕಾಲುವೆಗಳಲ್ಲಿ ಮೊಟ್ಟೆಯಿಡುತ್ತವೆ. ಗಂಡು ಹೆಣ್ಣುಗಳ ಸಂಭೋಗ ನಡೆಸಿ, 3-4 ದಿನಗಳ ಅನಂತರ, ಹೆಣ್ಣು ಕಪ್ಪೆ ಮೊಟ್ಟೆಗಳನ್ನಿಡಲು ಪ್ರಾರಂಭಿಸುತ್ತದೆ. ಗರ್ಭಧರಿಸಿದ 8-10 ದಿನಗಳ ಅನಂತರ, ಮೊಟ್ಟೆಯಿಂದ ಮರಿ ಹೊರಬರುತ್ತದೆ. ಮರಿಗಳು ಪ್ರೌಢ ಕಪ್ಪೆಯಂತೆ ಇರುವುದಿಲ್ಲ. ಇವುಗಳಿಗೆ ಕಣ್ಣು, ಬಾಯಿ, ಕಿವಿರು, ಕಾಲುಗಳು ಇರುವುದಿಲ್ಲ. ತಲೆ ಕಳಗೆ ಅರ್ಧಚಂದ್ರಾಕಾರದ ಹೀರು ಬಟ್ಟಲಿರುತ್ತದೆ. ಇದರಿಂದ ಒಂದು ರೀತಿಯ ಅಂಟು ದ್ರವ ಉತ್ಪತ್ತಿಯಾಗುತ್ತದೆ. ಇದರ ನೆರವಿನಿಂದ ಕಪ್ಪೆ ಮರಿಗಳು ಜೊಂಡಿಗೆ ತಗುಲಿಕೊಂಡು ನೇತಾಡುತ್ತವೆ. ಬೆಳೆವಣಿಗೆಯಾದಂತೆ, ಬಾಯಿ, ಕಣ್ಣುಗಳು ಬೆಳೆಯುತ್ತವೆ. ತಲೆಯ ಎರಡು ಕಡೆ ಕಿವಿರುಗಳು ಬೆಳೆಯುತ್ತವೆ. ಇವೇ ಶ್ವಾಸಾಂಗಗಳು ಬಾಯೊಳಗೆ ಕೊಂಬಿನಿಂದಾದ ಹಲವು ಸಾಲು ಹಲ್ಲುಗಳಿರುತ್ತವೆ. ಈ ಹಲ್ಲುಗಳ ಸಹಾಯದಿಂದ ಮರಿಗಳು ಮೃದುವಾದ ಸಸ್ಯ ಪದಾರ್ಥಗಳನ್ನು ತಿನ್ನುತ್ತವೆ. ದೇಹದೊಳಗೆ ಸುರುಳಿಯಾಕಾರದ ಕರುಳು ಬೆಳೆಯುತ್ತದೆ. ಬಾಲದ ಭಾಗವು ಬೆಳೆದಂತೆಲ್ಲ ಅರ್ಧಚಂದ್ರಾಕಾರದ ಹೀರು ಬಟ್ಟಲು ನಶಿಸಿ ಹೋಗುತ್ತದೆ. ಕ್ರಮೇಣ ಕಿವಿರುಗಳ ಮೇಲೆ ಚರ್ಮದ ಹೊದಿಕೆ ಬೆಳೆಯುತ್ತದೆ. ಬೆಳೆವಣಿಗೆಯು ಮುಂದುವರೆಯುತ್ತಾ, ಹೊರಕಿವಿರುಗಳು ನಶಿಸಿ, ಒಳ ಕಿವಿರುಗಳು ರೂಪುಗೊಳ್ಳುತ್ತವೆ. ಈ ಕಿವಿರುಗಳು ಹೊರ ಚರ್ಮದಿಂದ ರೂಪುಗೊಳ್ಳುತ್ತವೆ.

ಹತ್ತುದಿನಗಳ ಗೊದಮೊಟ್ಟೆ

ಲಾರ್ವ ರೂಪ ಪರಿವರ್ತನೆ ಪ್ರಾರಂಭಿಸಿದಾಗ ಗೊದಮೊಟ್ಟೆ ಹಂತ ಮುಗಿಯುತ್ತದೆ. ರೂಪ ಪರಿವರ್ತನೆಯಾಗುವಾಗ, ಗೊದಮೊಟ್ಟೆ ರಚನೆಯಲ್ಲಿ ಕೆಲವು ಬದಲಾವಣೆಗಳಾ ಗುತ್ತವೆ. ಈ ಎಲ್ಲ ಬದಲಾವಣೆಗಳಿಗೆ ಥೈರಾಯ್ಡ್‌ ಗ್ರಂಥಿ ಸ್ರವಿಸುವ ಚೋದಕದಿಂದಾಗುವ ಕ್ರಿಯೆ ಕಾರಣ. ಗೊದಮೊಟ್ಟೆ ರೂಪ ಪರಿವರ್ತನೆಯ ಕೊನೆಯಲ್ಲಿ ಬಾಲ ನಶಿಸುತ್ತದೆ. ಇದಕ್ಕೆ ಲೈಸೋಮ್ನಲ್ಲಿ ಉತ್ಪತ್ತಿಯಾಗುವ ಹೈಡ್ರೋಲೈಟಿಕ್ ಕಿಣ್ವವೇ ಕಾರಣ.

ಮಾನವ ಉಪಯೋಗ

ಕೆಲವು ಗೊದಮೊಟ್ಟೆಗಳನ್ನು ಆಹಾರಕ್ಕಾಗಿ ಭಾರತ ಮತ್ತು ಚೀನಾ ದೇಶಗಳಲ್ಲೂ , ಆಹಾರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಪೆರು ದೇಶದಲ್ಲೂ ಗೊದಮೊಟ್ಟೆಗಳ ಬಳಕೆ ಇದೆ.