ಸಾಲೋಟಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೪ ನೇ ಸಾಲು: ೪ ನೇ ಸಾಲು:
|taluk_names=[[ಇಂಡಿ]]
|taluk_names=[[ಇಂಡಿ]]
|nearest_city=[[ಇಂಡಿ]]
|nearest_city=[[ಇಂಡಿ]]
|parliament_const=[[ಬಿಜಾಪುರ]]
|parliament_const=[[ವಿಜಯಪುರ]]
|assembly_const=
|assembly_const=
|latd = 16.1833
|latd = 16.1833
|longd = 75.7000
|longd = 75.7000
|state_name=ಕರ್ನಾಟಕ
|state_name=[[ಕರ್ನಾಟಕ]]
|district=[[ಬಿಜಾಪುರ]]
|district=[[ವಿಜಯಪುರ]]
|leader_title=
|leader_title=
|leader_name=
|leader_name=
೨೪ ನೇ ಸಾಲು: ೨೪ ನೇ ಸಾಲು:
}}
}}

ಸಾಲೋಟಗಿ ಗ್ರಾಮವು [[ಕರ್ನಾಟಕ]] ರಾಜ್ಯದ [[ಬಿಜಾಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನಲ್ಲಿದೆ.
ಸಾಲೋಟಗಿ ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನಲ್ಲಿದೆ.

==ಇತಿಹಾಸ==
==ಇತಿಹಾಸ==
೩೦ ನೇ ಸಾಲು: ೩೦ ನೇ ಸಾಲು:
[[ಇಂಡಿ]]ಯಿಂದ ಆಗ್ನೇಯಕ್ಕೆ ೮ ಕಿ.ಮೀ ದೂರದಲ್ಲಿರುವ ಸಾಲೋಟಗಿ ರಾಷ್ಟ್ರಕೂಟ ೩ನೆಯ ಕೃಷ್ಣನ ಕಾಲಕ್ಕೆ ಪ್ರಸಿದ್ಧ ಅಗ್ರಹಾರವಾಗಿತ್ತು. ಪ್ರಾಚೀನ ವಿದ್ಯಾಕೇಂದ್ರಗಳಲ್ಲಿ ತುಂಬಾ ಪ್ರಸಿದ್ದವಾದ ಪಾವಿಟ್ಟಿಗೆಯಲ್ಲಿ ೩ನೆಯ ಕೃಷ್ಣನ ಪ್ರಧಾನಿ, ಸಂಧಿವಿಗ್ರಹಿಯಾಗಿದ್ದ ನಾರಾಯಣನು ಒಂದು ಶಾಲೆಯನ್ನು ಕಟ್ಟಿಸಿ ತ್ರೈಪುರುಷದೇವರನ್ನು ಪ್ರತಿಷ್ಠಾಪಿಸಿದ. ಇಲ್ಲಿನ ಶಾಲೆಗೆ ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಊರಿನ ಯಾವದೇ ಸಮಾರಂಭದಲ್ಲಿ ಈ ಶಾಲೆಗೆ ದಾನ ನೀಡುತ್ತಿದ್ದರು. ಇಲ್ಲಿ ವಿದ್ಯಾರ್ಥಿಗಳ ವಸತಿಗಾಗಿ ೨೭ ಕೊಠಡಿಗಳಿದ್ದವು. ದೀಪದ ವ್ಯವಸ್ಥೆಗೆ ೧೨ ನಿವರ್ತನಭೂಮಿ, ವಿದ್ಯಾರ್ಥಿಗಳಿಗಾಗಿ ೫೦೦ ನಿವರ್ತನ ಭೂಮಿ, ಉಪಾಧ್ಯಾಯರುಗಳಿಗೆ ೫೦ ನಿವರ್ತನಭೂಮಿ ಮತ್ತು ಮನೆಯನ್ನು ಕೊಡಲಾಗಿತ್ತು. ಮುಂದಿನ ಶತಮಾನದ ನಂತರದಲ್ಲಿ ಈ ಶಾಲೆ ಕುಸಿದುಬಿದ್ದಾಗ ಶಿಲಾಹಾರ ಕಂಚಿಗನು ಎತ್ತಿ ನಿಲ್ಲಿಸಿದ ಹಾಗೂ ಅನೇಕ ಅರಸರು ವಿವಿಧ ದಾನ-ದತ್ತಿ ನೀಡಿದ ಉಲ್ಲೇಖಗಳು ದೊರೆಯುತ್ತವೆ. ಶಾಲೆಯಿಂದಾಗಿ ‘ಸಾವಿಟ್ಟಿಗೆ’ ಎಂಬ ಗ್ರಾಮ ‘ಶಾಲಾಪಾವಿಟ್ಟಗೆ’ಯಾಗಿ ಅನಂತರದ ದಿನಗಳಲ್ಲಿ ಸಾಲೋಟಗಿ ಎಂದಾಯಿತು ಪೂರ್ಣಪ್ರಮಾಣದಲ್ಲಿ ಈ ಶಾಲೆ ಇಂದು ಕಾಣಬಾರದಿದ್ದರೂ ಕುಲಕರ್ಣಿಯವರ ತೋಟದಲ್ಲಿರುವ ಪುಷ್ಕರಣಿ ಹಾಗೂ ಶಿವಯೋಗೇಶ್ವರ ದೇವಾಲಯದಲ್ಲಿನ ಅವಶೇಷಗಳಿಂದ ಗುರುತಿಸಬಹುದಾಗಿದೆ.

ಹದಿನಾರನೆಯ ಶತಮಾನದಲ್ಲಿ ಜೀವಂತ ವ್ಯಕ್ತಿಯಾಗಿದ್ದು, ಇಂದು ದೈವವಾಗಿ ಪೂಜೆಗೊಳ್ಳುತ್ತಿರುವ ಶ್ರೀಶಿವಯೋಗೇಶ್ವರರು ಗುಲ್ಬರ್ಗಾ ಜಿಲ್ಲೆಯ ‘ಸನ್ನತಿ’ಯ ಚೆನ್ನಸೋಮ ಮತ್ತು ಹೊನ್ನಮ್ಮರ ಮಗನಾಗಿ ಭುವಿಗವತರಿಸಿದರು. ಅಂದು ಹಿಂದು-ಮುಸ್ಲಿಂ ರೆಲ್ಲರಿಗೂ ಬೇಕಾದವರಾಗಿ [[ವಿಜಾಪುರ]]ದ ಬಾದಶಹರಿಂದ ಕಾಣಿಕೆಗಳನ್ನು ಸ್ವೀಕರಿಸಿದ್ದಾರೆ. ಇವರನ್ನು ಕುರಿತು ಜೇರುಟಗಿ ‘ಸಿದ್ಧಲಿಂಗ’ ಕವಿಯು ಶ್ರೀಶಿವಯೋಗಿಶ್ವರ ಪುರಾಣವನ್ನು ಬರೆದಿದ್ದಾರೆ. ಶ್ರೀಶಿವನೇ ಶಿವಯೋಗಿಯಾಗಿ ಬಂದು ಸಾಲೋಟಗಿಯ ದುರುಳ ದೇವತೆಯ ಗರ್ವಭಂಗ ಮಾಡಿ ಹಲವು ಪವಾಡಗೈದು ಕಲ್ಲುನಂದಿಯನ್ನೇರಿ ಕೈಲಾಸಕ್ಕೆ ಹೋದ ಕಥೆಯನ್ನು ಈ ಪುರಾಣ ಒಳಗೊಂಡಿದೆ ಹಾಗೆಯೇ ಗಂಗಾಧರ ವೆಂಬ ಕವಿಯು ಬರೆದಿದ್ದಾನೆಂದು ಹೇಳಲ್ಪಡುವ ‘ಡಂಗುರ’ ಪದಗಳನ್ನು ಸ್ವತಃ ಶ್ರೀಶಿವಯೋಗಿಶ್ವರರೇ ಬರೆದಿದ್ದಾರೆಂದು ಸಂಶೋದಕರು ಅಭಿಪ್ರಾಯ ಪಡುತ್ತಾರೆ. ಇದರಲ್ಲಿ ಕಾಲಜ್ಞಾನ ವಚನಗಳಿವೆ. ಶ್ರೀಶಿವಯೋಗೀಶ್ವರರ ದೇವಸ್ಥಾನ ಹಾಗೂ ಮುಂದಿರುವ ಬಾವಿಗಳ ಕಟ್ಟಡಗಳು ನೋಡುವಂತಿವೆ.
ಹದಿನಾರನೆಯ ಶತಮಾನದಲ್ಲಿ ಜೀವಂತ ವ್ಯಕ್ತಿಯಾಗಿದ್ದು, ಇಂದು ದೈವವಾಗಿ ಪೂಜೆಗೊಳ್ಳುತ್ತಿರುವ ಶ್ರೀಶಿವಯೋಗೇಶ್ವರರು ಗುಲ್ಬರ್ಗಾ ಜಿಲ್ಲೆಯ ‘ಸನ್ನತಿ’ಯ ಚೆನ್ನಸೋಮ ಮತ್ತು ಹೊನ್ನಮ್ಮರ ಮಗನಾಗಿ ಭುವಿಗವತರಿಸಿದರು. ಅಂದು ಹಿಂದು-ಮುಸ್ಲಿಂ ರೆಲ್ಲರಿಗೂ ಬೇಕಾದವರಾಗಿ [[ವಿಜಯಪುರ]]ದ ಬಾದಶಹರಿಂದ ಕಾಣಿಕೆಗಳನ್ನು ಸ್ವೀಕರಿಸಿದ್ದಾರೆ. ಇವರನ್ನು ಕುರಿತು ಜೇರುಟಗಿ ‘ಸಿದ್ಧಲಿಂಗ’ ಕವಿಯು ಶ್ರೀಶಿವಯೋಗಿಶ್ವರ ಪುರಾಣವನ್ನು ಬರೆದಿದ್ದಾರೆ. ಶ್ರೀಶಿವನೇ ಶಿವಯೋಗಿಯಾಗಿ ಬಂದು ಸಾಲೋಟಗಿಯ ದುರುಳ ದೇವತೆಯ ಗರ್ವಭಂಗ ಮಾಡಿ ಹಲವು ಪವಾಡಗೈದು ಕಲ್ಲುನಂದಿಯನ್ನೇರಿ ಕೈಲಾಸಕ್ಕೆ ಹೋದ ಕಥೆಯನ್ನು ಈ ಪುರಾಣ ಒಳಗೊಂಡಿದೆ ಹಾಗೆಯೇ ಗಂಗಾಧರ ವೆಂಬ ಕವಿಯು ಬರೆದಿದ್ದಾನೆಂದು ಹೇಳಲ್ಪಡುವ ‘ಡಂಗುರ’ ಪದಗಳನ್ನು ಸ್ವತಃ ಶ್ರೀಶಿವಯೋಗಿಶ್ವರರೇ ಬರೆದಿದ್ದಾರೆಂದು ಸಂಶೋದಕರು ಅಭಿಪ್ರಾಯ ಪಡುತ್ತಾರೆ. ಇದರಲ್ಲಿ ಕಾಲಜ್ಞಾನ ವಚನಗಳಿವೆ. ಶ್ರೀಶಿವಯೋಗೀಶ್ವರರ ದೇವಸ್ಥಾನ ಹಾಗೂ ಮುಂದಿರುವ ಬಾವಿಗಳ ಕಟ್ಟಡಗಳು ನೋಡುವಂತಿವೆ.

==ಭೌಗೋಳಿಕ==
==ಭೌಗೋಳಿಕ==

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

==ಜನಸಂಖ್ಯೆ==

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 12970 ಇದೆ. ಅದರಲ್ಲಿ 6694 ಪುರುಷರು ಮತ್ತು 6276 ಮಹಿಳೆಯರು ಇದ್ದಾರೆ.

==ಹವಾಮಾನ==
==ಹವಾಮಾನ==
೧೦೦ ನೇ ಸಾಲು: ೧೦೪ ನೇ ಸಾಲು:
==ಹಬ್ಬಗಳು==
==ಹಬ್ಬಗಳು==

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

==ಶಿಕ್ಷಣ==
==ಶಿಕ್ಷಣ==

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.
ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

==ಸಾಕ್ಷರತೆ==
==ಸಾಕ್ಷರತೆ==
೧೧೨ ನೇ ಸಾಲು: ೧೧೬ ನೇ ಸಾಲು:
==ರಾಜಕೀಯ==
==ರಾಜಕೀಯ==

ಗ್ರಾಮವು [[ವಿಜಾಪುರ ಲೋಕಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ ಬರುತ್ತದೆ.
ಗ್ರಾಮವು [[ವಿಜಯಪುರ ಲೋಕಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ ಬರುತ್ತದೆ.

==ಬ್ಯಾಂಕ್==
==ಬ್ಯಾಂಕ್==

೧೬:೨೭, ೬ ಜುಲೈ ೨೦೧೮ ನಂತೆ ಪರಿಷ್ಕರಣೆ

ಸಾಲೋಟಗಿ
ಸಾಲೋಟಗಿ
village
Population
 (೨೦೧೨)
 • Total೧೫೦೦

ಸಾಲೋಟಗಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ.

ಇತಿಹಾಸ

ಇಂಡಿಯಿಂದ ಆಗ್ನೇಯಕ್ಕೆ ೮ ಕಿ.ಮೀ ದೂರದಲ್ಲಿರುವ ಸಾಲೋಟಗಿ ರಾಷ್ಟ್ರಕೂಟ ೩ನೆಯ ಕೃಷ್ಣನ ಕಾಲಕ್ಕೆ ಪ್ರಸಿದ್ಧ ಅಗ್ರಹಾರವಾಗಿತ್ತು. ಪ್ರಾಚೀನ ವಿದ್ಯಾಕೇಂದ್ರಗಳಲ್ಲಿ ತುಂಬಾ ಪ್ರಸಿದ್ದವಾದ ಪಾವಿಟ್ಟಿಗೆಯಲ್ಲಿ ೩ನೆಯ ಕೃಷ್ಣನ ಪ್ರಧಾನಿ, ಸಂಧಿವಿಗ್ರಹಿಯಾಗಿದ್ದ ನಾರಾಯಣನು ಒಂದು ಶಾಲೆಯನ್ನು ಕಟ್ಟಿಸಿ ತ್ರೈಪುರುಷದೇವರನ್ನು ಪ್ರತಿಷ್ಠಾಪಿಸಿದ. ಇಲ್ಲಿನ ಶಾಲೆಗೆ ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಊರಿನ ಯಾವದೇ ಸಮಾರಂಭದಲ್ಲಿ ಈ ಶಾಲೆಗೆ ದಾನ ನೀಡುತ್ತಿದ್ದರು. ಇಲ್ಲಿ ವಿದ್ಯಾರ್ಥಿಗಳ ವಸತಿಗಾಗಿ ೨೭ ಕೊಠಡಿಗಳಿದ್ದವು. ದೀಪದ ವ್ಯವಸ್ಥೆಗೆ ೧೨ ನಿವರ್ತನಭೂಮಿ, ವಿದ್ಯಾರ್ಥಿಗಳಿಗಾಗಿ ೫೦೦ ನಿವರ್ತನ ಭೂಮಿ, ಉಪಾಧ್ಯಾಯರುಗಳಿಗೆ ೫೦ ನಿವರ್ತನಭೂಮಿ ಮತ್ತು ಮನೆಯನ್ನು ಕೊಡಲಾಗಿತ್ತು. ಮುಂದಿನ ಶತಮಾನದ ನಂತರದಲ್ಲಿ ಈ ಶಾಲೆ ಕುಸಿದುಬಿದ್ದಾಗ ಶಿಲಾಹಾರ ಕಂಚಿಗನು ಎತ್ತಿ ನಿಲ್ಲಿಸಿದ ಹಾಗೂ ಅನೇಕ ಅರಸರು ವಿವಿಧ ದಾನ-ದತ್ತಿ ನೀಡಿದ ಉಲ್ಲೇಖಗಳು ದೊರೆಯುತ್ತವೆ. ಶಾಲೆಯಿಂದಾಗಿ ‘ಸಾವಿಟ್ಟಿಗೆ’ ಎಂಬ ಗ್ರಾಮ ‘ಶಾಲಾಪಾವಿಟ್ಟಗೆ’ಯಾಗಿ ಅನಂತರದ ದಿನಗಳಲ್ಲಿ ಸಾಲೋಟಗಿ ಎಂದಾಯಿತು ಪೂರ್ಣಪ್ರಮಾಣದಲ್ಲಿ ಈ ಶಾಲೆ ಇಂದು ಕಾಣಬಾರದಿದ್ದರೂ ಕುಲಕರ್ಣಿಯವರ ತೋಟದಲ್ಲಿರುವ ಪುಷ್ಕರಣಿ ಹಾಗೂ ಶಿವಯೋಗೇಶ್ವರ ದೇವಾಲಯದಲ್ಲಿನ ಅವಶೇಷಗಳಿಂದ ಗುರುತಿಸಬಹುದಾಗಿದೆ.

ಹದಿನಾರನೆಯ ಶತಮಾನದಲ್ಲಿ ಜೀವಂತ ವ್ಯಕ್ತಿಯಾಗಿದ್ದು, ಇಂದು ದೈವವಾಗಿ ಪೂಜೆಗೊಳ್ಳುತ್ತಿರುವ ಶ್ರೀಶಿವಯೋಗೇಶ್ವರರು ಗುಲ್ಬರ್ಗಾ ಜಿಲ್ಲೆಯ ‘ಸನ್ನತಿ’ಯ ಚೆನ್ನಸೋಮ ಮತ್ತು ಹೊನ್ನಮ್ಮರ ಮಗನಾಗಿ ಭುವಿಗವತರಿಸಿದರು. ಅಂದು ಹಿಂದು-ಮುಸ್ಲಿಂ ರೆಲ್ಲರಿಗೂ ಬೇಕಾದವರಾಗಿ ವಿಜಯಪುರದ ಬಾದಶಹರಿಂದ ಕಾಣಿಕೆಗಳನ್ನು ಸ್ವೀಕರಿಸಿದ್ದಾರೆ. ಇವರನ್ನು ಕುರಿತು ಜೇರುಟಗಿ ‘ಸಿದ್ಧಲಿಂಗ’ ಕವಿಯು ಶ್ರೀಶಿವಯೋಗಿಶ್ವರ ಪುರಾಣವನ್ನು ಬರೆದಿದ್ದಾರೆ. ಶ್ರೀಶಿವನೇ ಶಿವಯೋಗಿಯಾಗಿ ಬಂದು ಸಾಲೋಟಗಿಯ ದುರುಳ ದೇವತೆಯ ಗರ್ವಭಂಗ ಮಾಡಿ ಹಲವು ಪವಾಡಗೈದು ಕಲ್ಲುನಂದಿಯನ್ನೇರಿ ಕೈಲಾಸಕ್ಕೆ ಹೋದ ಕಥೆಯನ್ನು ಈ ಪುರಾಣ ಒಳಗೊಂಡಿದೆ ಹಾಗೆಯೇ ಗಂಗಾಧರ ವೆಂಬ ಕವಿಯು ಬರೆದಿದ್ದಾನೆಂದು ಹೇಳಲ್ಪಡುವ ‘ಡಂಗುರ’ ಪದಗಳನ್ನು ಸ್ವತಃ ಶ್ರೀಶಿವಯೋಗಿಶ್ವರರೇ ಬರೆದಿದ್ದಾರೆಂದು ಸಂಶೋದಕರು ಅಭಿಪ್ರಾಯ ಪಡುತ್ತಾರೆ. ಇದರಲ್ಲಿ ಕಾಲಜ್ಞಾನ ವಚನಗಳಿವೆ. ಶ್ರೀಶಿವಯೋಗೀಶ್ವರರ ದೇವಸ್ಥಾನ ಹಾಗೂ ಮುಂದಿರುವ ಬಾವಿಗಳ ಕಟ್ಟಡಗಳು ನೋಡುವಂತಿವೆ.

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 12970 ಇದೆ. ಅದರಲ್ಲಿ 6694 ಪುರುಷರು ಮತ್ತು 6276 ಮಹಿಳೆಯರು ಇದ್ದಾರೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮಗಳು

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆಗಳು

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯಗಳು

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಲಯ, ಶ್ರೀ ಮಲ್ಲಿಕಾರ್ಜುನ ದೇವಾಲಯ, ಶ್ರೀ ಬಸವೇಶ್ವರ ದೇವಾಲಯ, ಶ್ರೀ ವೆಂಕಟೇಶ್ವರ ದೇವಾಲಯ, ಶ್ರೀ ಪಾಂಡುರಂಗ ದೇವಾಲಯ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆಗಳು

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಹಬ್ಬಗಳು

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಬ್ಯಾಂಕ್

  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಾಲೋಟಗಿ

ಗ್ರಾಮ ಪಂಚಾಯತಿ

  • ಗ್ರಾಮ ಪಂಚಾಯತಿ, ಸಾಲೋಟಗಿ

ದೂರವಾಣಿ ವಿನಿಮಯ ಕೇಂದ್ರ

  • ದೂರವಾಣಿ ವಿನಿಮಯ ಕೇಂದ್ರ, ಸಾಲೋಟಗಿ

ಅಂಚೆ ಕಚೇರಿ

  • ಅಂಚೆ ಕಚೇರಿ, ಸಾಲೋಟಗಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಾಲೋಟಗಿ

ಹಾಲು ಉತ್ಪಾದಕ ಸಹಕಾರಿ ಸಂಘ

  • ಹಾಲು ಉತ್ಪಾದಕ ಸಹಕಾರಿ ಸಂಘ, ಸಾಲೋಟಗಿ

ಪ್ರಾಥಮಿಕ ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಲೋಟಗಿ
"https://kn.wikipedia.org/w/index.php?title=ಸಾಲೋಟಗಿ&oldid=853074" ಇಂದ ಪಡೆಯಲ್ಪಟ್ಟಿದೆ