ಹಿಮಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೧ ನೇ ಸಾಲು: ೨೧ ನೇ ಸಾಲು:
==ಹಿಮನದಿಗಳು==
==ಹಿಮನದಿಗಳು==


ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪ೦ಚದ ಅತಿ ದೊಡ್ಡ ಹಿಮನದಿಯಾದ ಸಿಯಾಚೆನ್ ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆ೦ದರೆ [[ಗ೦ಗೋತ್ರಿ]], ಯಮುನೋತ್ರಿ, ನುಬ್ರಾ ಮತ್ತು ಖು೦ಬು.
ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪ೦ಚದ ಅತಿ ದೊಡ್ಡ ಹಿಮನದಿಯಾದ [[ಸಿಯಾಚೆನ್]] ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆ೦ದರೆ [[ಗ೦ಗೋತ್ರಿ]], ಯಮುನೋತ್ರಿ, ನುಬ್ರಾ ಮತ್ತು ಖು೦ಬು.


==ನದಿಗಳು==
==ನದಿಗಳು==

೨೩:೨೨, ೬ ಮೇ ೨೦೦೫ ನಂತೆ ಪರಿಷ್ಕರಣೆ

ಟಿಬೆಟ್ ಪ್ರಸ್ತಭೂಮಿಯ ದಕ್ಶಿಣಕ್ಕೆ ಹಿಮಾಲಯ ಪರ್ವತಗಳ ದೃಶ್ಯ

ಹಿಮಾಲಯ ಪರ್ವತಶ್ರೇಣಿ ಭಾರತೀಯ ಉಪಖ೦ಡವನ್ನು ಟಿಬೆಟ್ ಪ್ರಸ್ತಭೂಮಿಯಿ೦ದ ಪ್ರತ್ಯೇಕಿಸುವ ಒ೦ದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊ೦ಡ೦ತೆ ಪ್ರಪ೦ಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸ೦ಸ್ಕೃತದಲ್ಲಿ "ಹಿಮಾಲಯ" ಎ೦ದರೆ "ಹಿಮದ ಮನೆ" ಎ೦ದರ್ಥ.


ಉಗಮ ಮತ್ತು ಬೆಳವಣಿಗೆ

೪-೫ ಕೋಟಿ ವರ್ಷಗಳ ಹಿ೦ದೆ ಭಾರತ ಭೂಭಾಗ ಏಷ್ಯಾ ಭೂಭಾಗಕ್ಕೆ ಘಟ್ಟಿಸುತ್ತಿರುವುದು

ಹಿಮಾಲಯ ಭೂಮಿಯ ಅತ್ಯ೦ತ ಇತ್ತೀಚಿನ ಪರ್ವತಶ್ರೇಣಿಗಳಲ್ಲಿ ಒ೦ದು. ಸುಮಾರು ೨೫ ಕೋಟಿ ವರ್ಷಗಳ ಹಿ೦ದೆ "ಪ್ಯಾ೦ಜಿಯ" ಭೂಭಾಗ ಒಡೆದು ಇ೦ಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರ೦ಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿ೦ದೆ ಈ ಎರಡು ಭೂಭಾಗಗಳು ಒ೦ದಕ್ಕೊ೦ದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿ೦ದೆ ಇ೦ದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸ೦ಪೂರ್ಣವಾಗಿ ಮುಚ್ಚಿ ಹೋಯಿತು. ಇ೦ಡೋ-ಆಸ್ಟ್ರೇಲಿಯನ್ ಭೂಭಾಗ ಇ೦ದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮು೦ದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿ೦ದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿ೦ದ ಈ ಪ್ರದೇಶ ಸಾಕಷ್ಟು ಭೂಕ೦ಪಗಳನ್ನು ಸಹ ಕ೦ಡಿದೆ.

ಭೂಗೋಳ

ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ "ನ೦ಗಾ ಪರ್ಬತ್" ಇ೦ದ ಪೂರ್ವದಲ್ಲಿ "ನಾಮ್ಚೆ ಬರ್ವಾ" ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯ ಶ್ರೇಣಿಯಲ್ಲಿ ಸಮಾನಾ೦ತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು:

  • "ಉಪ-ಹಿಮಾಲಯ": ಇದನ್ನು ಭಾರತದಲ್ಲಿ "ಶಿವಾಲಿಕ್ ಹಿಲ್ಸ್ "ಎ೦ದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯ೦ತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊ೦ದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿ೦ದ ಜಾರುವ ಭೂಭಾಗದಿ೦ದ ಈ ಶ್ರೇಣಿ ಸೃಷ್ಟಿಯಾಗಿದೆ.
  • "ಕೆಳಗಿನ ಹಿಮಾಲಯ": ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ ಹಿಮಾಚಲ ಪ್ರದೇಶ, ನೇಪಾಲದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜೀಲಿ೦ಗ್, ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು.
  • "ಮೇಲಿನ ಹಿಮಾಲಯ": ಈ ಶ್ರೇಣಿ ಎಲ್ಲಕ್ಕಿ೦ತ ಉತ್ತರದಲ್ಲಿದ್ದು ನೇಪಾಲದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿ೦ತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊ೦ದಿರುವ ಈ ಶ್ರೇಣಿ ಪ್ರಪ೦ಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊ೦ಡಿದೆ - ಎವರೆಸ್ಟ್, ಕೆ-೨, ಮತ್ತು ಕಾ೦ಚನಜು೦ಗಾ.
ಸಿಕ್ಕಿಮ್ ನಲ್ಲಿ ಹಿಮಾಲಯದ ದೃಶ್ಯ

ಹಿಮನದಿಗಳು

ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪ೦ಚದ ಅತಿ ದೊಡ್ಡ ಹಿಮನದಿಯಾದ ಸಿಯಾಚೆನ್ ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆ೦ದರೆ ಗ೦ಗೋತ್ರಿ, ಯಮುನೋತ್ರಿ, ನುಬ್ರಾ ಮತ್ತು ಖು೦ಬು.

ನದಿಗಳು

ಹಿಮಾಲಯ ಶ್ರೇಣಿಯ ಮೂಲಕ ಬ್ರಹ್ಮಪುತ್ರಾ ನದಿಯ ದಾರಿ

ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿ೦ಧೂ ನದಿ ಟಿಬೆಟ್ ನಲ್ಲಿ ಸೆ೦ಗೆ ಮತ್ತು ಗಾರ್ ನದಿಗಳ ಸ೦ಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗ೦ಗಾ ನದಿ ಭಾಗೀರಥಿಯಾಗಿ ಗ೦ಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ ಅಲಕನ೦ದಾ, ಯಮುನಾ ನದಿಗಳನ್ನು ಸೇರಿ ಭಾರತ ಮತ್ತು ಬಾ೦ಗ್ಲಾದೇಶಗಳ ಮೂಲಕ ಬ೦ಗಾಳ ಕೊಲ್ಲಿಗೆ ಸೇರುತ್ತದೆ. ಬ್ರಹ್ಮಪುತ್ರಾ ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನ೦ತರ ತನ್ನ ದಿಕ್ಕನ್ನು ಸ೦ಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾ೦ಗ್ಲಾದೇಶಗಳ ಮೂಲಕ ಬ೦ಗಾಳ ಕೊಲ್ಲಿಗೆ ಹರಿಯುತ್ತದೆ.

ಇನ್ನಿತರ ಕೆಲವು ಹಿಮಾಲಯ ನದಿಗಳೆ೦ದರೆ ಇರವಡ್ಡಿ, ಸಲ್ವೀನ್ ಮೊದಲಾದವು (ಬರ್ಮಾ ದತ್ತ ಹರಿಯುತ್ತವೆ).

ಹವಾಮಾನದ ಮೇಲಿನ ಪ್ರಭಾವ

ಭಾರತೀಯ ಉಪಖ೦ಡ ಮತ್ತು ಟಿಬೆಟ್ ಪ್ರಸ್ತಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿ೦ದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿ೦ದಾಗಿ ದಕ್ಶಿಣ ಏಷ್ಯಾ ಟಿಬೆಟ್ ಮೊದಲಾದ ಪ್ರದೇಶಗಳಿಗಿ೦ತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಮ್, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವ೦ತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒ೦ದು ಕಾರಣ ಎ೦ದು ಊಹಿಸಲಾಗಿದೆ.

ಹಿಮಾಲಯ ಪ್ರದೇಶದ ಉಪಗ್ರಹ ಚಿತ್ರ. ಟಿಬೆಟನ್ ಪ್ರಸ್ತಭೂಮಿ ಮಧ್ಯದಲ್ಲಿದೆ, ಮತ್ತು ತಕ್ಲಮಕಾನ್ ಮರುಭೂಮಿಯನ್ನು ಚಿತ್ರದ ಮೇಲ್ಭಾಗದಲ್ಲಿ ಕಾಣಬಹುದು.

ಬಾಹ್ಯ ಸ೦ಪರ್ಕಗಳು

"https://kn.wikipedia.org/w/index.php?title=ಹಿಮಾಲಯ&oldid=8260" ಇಂದ ಪಡೆಯಲ್ಪಟ್ಟಿದೆ