ಮೈಥಿಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚುNo edit summary
೩೦ ನೇ ಸಾಲು: ೩೦ ನೇ ಸಾಲು:
==ಪ್ರಬೇಧಗಳು==
==ಪ್ರಬೇಧಗಳು==
ಈ ಭಾಷೆಯಲ್ಲಿ ಪೂರ್ವ, ಪಶ್ಚಿಮ, ಮಧ್ಯ, ಉತ್ತರ, ದಕ್ಷಿಣ ಮೈಥಿಲೀ ಎಂಬ ಪ್ರಾದೇಶಿಕ ಪ್ರಬೇಧಗಳಿವೆ. ಇವುಗಳ ಜೊತೆಗೆ ಸಾಮಾಜಿಕ ಪ್ರಭೇದಗಳೂ ಉಂಟು. ಉತ್ತರ ದರ್ಭಾಂಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುವ ಮೈಥಿಲೀ ಭಾಷಾರೂಪವನ್ನು ಶಿಷ್ಟರೂಪವೆಂದು ಪರಿಗಣಿಸಲಾಗಿದೆ.

==ಇದನ್ನೂ ನೋಡಿ==
* [[ಮೈಥಿಲಿ ಸಾಹಿತ್ಯ]]

{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೈಥಿಲೀ|ಮೈಥಿಲೀ}}
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೈಥಿಲೀ|ಮೈಥಿಲೀ}}

೧೧:೧೮, ೨೯ ಸೆಪ್ಟೆಂಬರ್ ೨೦೧೭ ನಂತೆ ಪರಿಷ್ಕರಣೆ

Maithili (मैथिली maithilī)
ಬಳಕೆ: India, Nepal
ಪ್ರದೇಶ: Bihar in India
ಬಳಸುವ ಜನಸ೦ಖ್ಯೆ: 24 million
Genetic classification: {{{family}}}
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: Bihar state in India
ಮೇಲ್ವಿಚಾರ ನಡೆಸುವ ಸಂಸ್ಥೆ: {{{agency}}}
ಭಾಷಾ ಕೋಡ್
ISO 639-1 bh (Bihari)
ISO 639-2 mai
SIL {{{sil}}}
ಇವನ್ನೂ ನೋಡಿ: ಭಾಷೆಗಳು

ಮೈಥಿಲಿ ಇಂಡೋ-ಆರ್ಯನ್ ಭಾಷಾ ಕುಟುಂಬದ ಒಂದು ಭಾಷೆ. ಭಾರತದ ಬಿಹಾರ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ನೇಪಾಳದ ತೆರಾಯ್ ಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ. 6,121,922 (1991) ಜನರ ತಾಯ್ನುಡಿ. ದೇಸಿಲ್ ಬಅನ, ತಿರುಹುತಿಯ ಪರ್ಯಾಯ ಪದಗಳು. ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

ಮೂಲ ಮತ್ತು ವಿಕಾಸ

ಮಾಗಧಿ ಅಪಭ್ರಂಶದಿಂದ ವಿಕಾಸಗೊಂಡಿದೆ. ಮೈಥಿಲೀ ಎಂಬುದು ಮಂಥ್ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಪ್ರಾಚೀನ ಸಂಸ್ಕøತ ಮಹಾಕಾವ್ಯಗಳಲ್ಲಿ ಮಿಥಿಲ ಎಂಬ ಪ್ರಯೋಗವಾಗಿರುವುದರಿಂದ ನಿಥಿಲಿ ಎಂಬುದೇ ಮೈಥಿಲೀಯ ಮೂಲರೂಪವೆಂದು ಹೇಳುವವರೂ ಉಂಟು.

ವ್ಯಾಕರಣ ಮತ್ತು ಲಿಪಿ

ಈ ಭಾಷೆಯ ದ್ವನಿಗಳು ಹಿಂದೀ ಭಾಷೆಯನ್ನೇ ಹೋಲುತ್ತವೆ. ಎರಡು ಬಗೆಯ ಲಿಂಗವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆ ಇದೆ. ನಾಮಪದ, ಕ್ರಿಯಾಪದಗಳನ್ನು ಸೂಚಿಸುವ ವಿಭಕ್ತಿ-ಪ್ರತ್ಯಯಗಳು ಮತ್ತು ಕಾಲಸೂಚಕ ಪ್ರತ್ಯಯಗಳಿವೆ. ಪದರಚನೆ ವಾಕ್ಯರಚನೆ ಹಿಂದಿ ಭಾಷೆಯಲ್ಲಿರುವಂತೆಯೇ ಇದೆ. ಸಂಸ್ಕøತ, ಪ್ರಾಕೃತ, ಅಫಭ್ರಂಶ, ಮಘಹಿ, ಭೋಜಪುರಿ ಮುಂತಾದ ಭಾಷೆಗಳ ಅನೇಕ ಶಬ್ದಗಳಿವೆ. ಮೈಥಿಲೀಯ ಮೇಲೆ ಹಿಂದೀ ಮತ್ತು ಬಂಗಾಲೀ ಭಾಷೆಗಳ ಪ್ರಭಾವ ಹೆಚ್ಚು.

ಮೈಥಿಲೀಯನ್ನು ಬರೆಯಲು ನಾಗರಿ, ಕೈಥಿ, ಮೈಥಿಲೀ ಲಿಪಿಗಳುಂಟು. ಈ ಪೈಕಿ ನಾಗರಿ ಲಿಪಿಯೇ ಹೆಚ್ಚು ಬಳಕೆಯಲ್ಲಿದೆ. ಈ ಭಾಷೆಯ ಸಾಹಿತ್ಯ ಖಡಿಬೋಲಿ-ಹಿಂದೀ ಭಾಷಾ ರೂಪದಲ್ಲೂ ಮೈಥಿಲೀ ಭಾಷಾರೂಪದಲ್ಲೂ ಇದೆ.

ಪ್ರಬೇಧಗಳು

ಈ ಭಾಷೆಯಲ್ಲಿ ಪೂರ್ವ, ಪಶ್ಚಿಮ, ಮಧ್ಯ, ಉತ್ತರ, ದಕ್ಷಿಣ ಮೈಥಿಲೀ ಎಂಬ ಪ್ರಾದೇಶಿಕ ಪ್ರಬೇಧಗಳಿವೆ. ಇವುಗಳ ಜೊತೆಗೆ ಸಾಮಾಜಿಕ ಪ್ರಭೇದಗಳೂ ಉಂಟು. ಉತ್ತರ ದರ್ಭಾಂಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುವ ಮೈಥಿಲೀ ಭಾಷಾರೂಪವನ್ನು ಶಿಷ್ಟರೂಪವೆಂದು ಪರಿಗಣಿಸಲಾಗಿದೆ.

ಇದನ್ನೂ ನೋಡಿ

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮೈಥಿಲಿ&oldid=799448" ಇಂದ ಪಡೆಯಲ್ಪಟ್ಟಿದೆ