ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚು ತಿದ್ದುಪಡಿಗಳು
ಚು Pavanaja moved page ಸದಸ್ಯ:ಪ್ರಶಸ್ತಿ/ಸದ್ಭಳಕೆ ಕಾರ್ಯನೀತಿ to ವಿಕಿಪೀಡಿಯ:ಸದ್ಬಳಕೆ without leaving a redirect: ಪುಟ ತಯಾರಾಗುತ್ತಿದೆ
( ಯಾವುದೇ ವ್ಯತ್ಯಾಸವಿಲ್ಲ )

೦೭:೫೨, ೧ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯದ ಉತ್ತಮ ಉದ್ದೇಶಗಳಿಗಾಗಿ ಯಾವ ರೀತಿಯ ಚಿತ್ರಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ.

ಉಚಿತ/ಮುಕ್ತ ಮಾಹಿತಿ

ವಿಕಿಪೀಡಿಯದಲ್ಲಿನ ಮಾಹಿತಿ ಹಕ್ಕುಸ್ವಾಮ್ಯ (ಕಾಪಿರೈಟ್) ನಿಯಮಾವಳಿಗಳ ನಿರ್ಬಂಧನೆಯನ್ನು ಹೊಂದಿರದ ಉಚಿತ ಮಾಹಿತಿಯಾಗಿರಬೇಕು ಎನ್ನುವುದು ವಿಕಿಪೀಡಿಯದ ಉದ್ದೇಶ. ಅಂದರೆ ವಿಕಿಪೀಡಿಯಕ್ಕೆ ಯಾರು, ಯಾವಾಗ ಬೇಕಾದರೂ ಮಾಹಿತಿಯನ್ನು ಸೇರಿಸಬಹುದು, ಬದಲಾಯಿಸಬಹುದು. ವಿಕಿಪೀಡಿಯದಲ್ಲಿನ ಮಾಹಿತಿಯನ್ನು ಯಾರು, ಎಲ್ಲಿ, ಯಾವಾಗ ಬೇಕಾದರೂ, ಯಾವ ಉದ್ದೇಶಕ್ಕಾದರೂ (ಖಾಸಗೀ ಉದ್ದೇಶಗಳಿಗೂ) ಬಳಸಬಹುದು. ಅಂತಹ ಬಳಕೆಗೆ ಅವಕಾಶ ನೀಡದ ಮಾಹಿತಿಯನ್ನು ಮುಕ್ತವಲ್ಲದ ಮಾಹಿತಿ ಎನ್ನಬಹುದು.

ಸದ್ಬಳಕೆ ಕಾರ್ಯನೀತಿ

ವಿಕಿಮೀಡಿಯ ಫೌಂಡೇಶನ್ನಿನ ಪರವಾನಗಿ ನಿಯಮ[೧]ದ ಪ್ರಕಾರ ವಿಕಿಪೀಡಿಯದಲ್ಲಿ ಮುಕ್ತ ಮಾಹಿತಿಯನ್ನು ಮಾತ್ರವೇ ಬಳಸಬಹುದು. ಆದರೆ ವಿಕಿಪೀಡಿಯದ ಬೇರೆ ಬೇರೆ ಸಮುದಾಯಗಳು ಉದಾತ್ತ ಉದ್ದೇಶಗಳಿಗಾಗಿ ಉಚಿತವಲ್ಲದ ಮಾಹಿತಿಯನ್ನೂ ಬಳಸಬಹುದಾದ ಕೆಲವು ಸಂದರ್ಭಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಆ ಸಮುದಾಯಗಳು ಅದಕ್ಕಾಗಿ ವಿನಾಯಿತಿ ನಿಯಮಾವಳಿಗಳನ್ನು (Exemption Doctrine Policy) ಹೊಂದಿರಬೇಕು. ಕನ್ನಡ ವಿಕಿಪೀಡಿಯದ ಒಳ್ಳೆಯ ಉದ್ದೇಶಗಳಿಗೆ ಉಚಿತವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಸ್ಥಳೀಯವಾಗಿ ಅಪ್ಲೋಡ್ ಮಾಡಲು ಅನುವು ಮಾಡಿಕೊಡುವುದೇ ಸದ್ಬಳಕೆ ಕಾರ್ಯನೀತಿಯ ಉದ್ದೇಶವಾಗಿದೆ

ನಿಯಮಗಳು

ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್ಲೋಡ್ ಮಾಡಬಯಸುವ ಕಡತ (ಫೈಲ್) ಕೆಳಗಿನ ನಿಯಮಾವಳಿಗಳನ್ನು ಪಾಲಿಸಬೇಕು.

  1. ಉಚಿತ ಪರ್ಯಾಯ ಕಡತದ ಅಲಭ್ಯತೆ - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಉಚಿತ ಕಡತ ಇಲ್ಲದಿದ್ದ ಸಂದರ್ಭದಲ್ಲಿ
  2. ಖಾಸಗಿ ಉದ್ದೇಶಗಳಿಗೆ ತೊಂದರೆಯೊಡ್ಡದಿರುವುದು - ವಿಕಿಪೀಡಿಯದಲ್ಲಿ ಬಳಸಿದ ಕಡತದಿಂದ ಮೂಲ ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ವ್ಯಕ್ತಿಗೆ ಅಥವಾ ಸಂಸ್ಥೆಗೆ ಮಾರುಕಟ್ಟೆಯಲ್ಲಿನ ಹಣಕಾಸಿನ ವ್ಯವಹಾರಗಳಲ್ಲಿ ನಷ್ಟವುಂಟಾಗಬಾರದು
  3. ಕನಿಷ್ಠತಮ ಬಳಕೆ -
    1. ವಿಷಯವನ್ನು ತಿಳಿಸಲು ಬೇಕಾಗುವ ಕಡತದ ಕೆಲ ಅಂಶಗಳನ್ನು ಮಾತ್ರ ಬಳಸುವುದು
    2. ಇಡೀ ಪಠ್ಯವನ್ನು ಬಳಸುವ ಬದಲು ವಿಷಯಕ್ಕೆ ಪೂರಕವಾಗುವ ಕೆಲ ಅಂಶಗಳನ್ನು ಮಾತ್ರ ಬಳಸುವುದು
    3. ಹೆಚ್ಚಿನ ರೆಸಲೂಶನ್‍ನ ಚಿತ್ರದ ಬದಲು ಕಮ್ಮಿ ರೆಸಲೂಶನ್‍ನ ಚಿತ್ರಗಳ ಬಳಕೆ
  4. ಮುದ್ರಣವಾಗಿರುವ ಮಾಹಿತಿ - ವಿಕಿಪೀಡಿಯದಲ್ಲಿ ಹಾಕುವ ಮೊದಲು ಆ ಮಾಹಿತಿ ಈಗಾಗಲೇ ಬೇರೆ ಅಂತರಜಾಲ ತಾಣವೊಂದರಲ್ಲಿ/ತಾಣಗಳಲ್ಲಿ ಪ್ರಕಟವಾಗಿರಬೇಕು
  5. ವಿಶ್ವಕೋಶರೂಪದ ಮಾಹಿತಿ - ವಿಕಿಯಲ್ಲಿ ಬಳಸುವ ಮಾಹಿತಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು ಈ ಮಾಹಿತಿಗೂ ಅನ್ವಯಿಸುತ್ತವೆ.
  6. ಅಗತ್ಯತೆ - ಈ ರೀತಿ ಅಪ್ಲೋಡ್ ಮಾಡಿದ ಕಡತವನ್ನು ಕನಿಷ್ಠ ಒಂದು ಲೇಖನದಲ್ಲಾದರೂ ಬಳಸಬೇಕು
  7. ಅನಿವಾರ್ಯತೆ - ಲೇಖನದಲ್ಲಿ ಇರುವ ವಿಷಯಕ್ಕೆ ಪೂರಕವಾಗಿ ಕಡತವಿದ್ದರೆ ಓದುಗನಿಗೆ ವಿಷಯದ ಗ್ರಹಿಕೆ ಸುಲಭವಾಗಿ, ಕಡತವಿಲ್ಲದಿರುವಿಕೆ ವಿಷಯದ ಗ್ರಹಿಕೆಗೆ ತೊಂದರೆಯುಂಟುಮಾಡುವಂತಿದ್ದರೆ ಅಂತಹ ಕಡತಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಬಹುದು
  8. ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು
    1. ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು
    2. ಕಾಪಿರೈಟ್ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದ್ದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು
    3. ಯಾವ ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು
  9. ಚಿತ್ರಗಳ ಬಳಕೆಗೆ ನಿರ್ಬಂಧ- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.

ಕಾರ್ಯನೀತಿಯ ಅನುಷ್ಠಾನ

  1. ಹಕ್ಕುಸ್ವಾಮ್ಯವಿಲ್ಲದ ತತ್ಸಂಬಂಧಿ ಕಡತ ಸಿಕ್ಕಿದಾಗ ಹಕ್ಕುಸ್ವಾಮ್ಯ ಇರುವ ಕಡತ ತೆಗೆದು ಆ ಜಾಗದಲ್ಲಿ ಹಕ್ಕುಸ್ವಾಮ್ಯವಿಲ್ಲದ ಕಡತವನ್ನು ಸೇರಿಸಬೇಕು
  2. ನಿಯಮ ೭ರಲ್ಲಿ ಹೇಳಿರುವಂತೆ, ಅಪ್ಲೋಡ್ ಮಾಡಿರುವ ಕಡತವನ್ನು ಯಾವ ಲೇಖನದಲ್ಲೂ ಬಳಸದಿದ್ದರೆ ಅಂತಹ ಕಡತದ ಬಗ್ಗೆ ಅರಳಿಕಟ್ಟೆಯಲ್ಲಿ ಮತ್ತು ಅಪ್ಲೋಡ್ ಮಾಡಿದವರಿಗೆ ಎಚ್ಚರಿಕೆ ಕೊಟ್ಟು ಅಂತಹ ಕಡತವನ್ನು ಒಂದು ತಿಂಗಳ ನಂತರ ಅಳಿಸಬೇಕು

ಉಲ್ಲೇಖಗಳು

  1. https://wikimediafoundation.org/wiki/Resolution:Licensing_policy