ಎಲ್. ಎಸ್. ಶೇಷಗಿರಿ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚು Wikipedia python library
೪೯ ನೇ ಸಾಲು: ೪೯ ನೇ ಸಾಲು:
* ಮಾಸ್ತಿ ಪ್ರಶಸ್ತಿ.
* ಮಾಸ್ತಿ ಪ್ರಶಸ್ತಿ.
* ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)
* ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)

==ಉಲ್ಲೇಖಗಳು==
==ಉಲ್ಲೇಖಗಳು==
<References />
<References />

[[Category:ಕನ್ನಡ ಸಾಹಿತಿಗಳು|ಶೇಷಗಿರಿರಾವ]]
[[Category:ಕನ್ನಡ ಸಾಹಿತಿಗಳು|ಶೇಷಗಿರಿರಾವ]]

[[Category:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು|ಶೇಷಗಿರಿ ರಾವ್]]
[[Category:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು|ಶೇಷಗಿರಿ ರಾವ್]]

೧೫:೫೧, ೨೭ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ

ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು. ತನ್ನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು. ೧೯೪೮ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ “ ಇದು ಜೀವನ ” ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ ಎಲ್. ಎಸ್. ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರ ರಾಷ್ಟ್ರೀಯ ಉತ್ಥಾನ ಪರಿಷತ್, ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ, ಪಡಸಾಲೆಯ ಕಪಾಟಿನ ಶೋಭೆ ಯನ್ನು ವಿಜೃಂಭಿಸುವ ಕೃತಿಗಳಿವು. [೧]

ಎಲ್. ಎಸ್. ಶೇಷಗಿರಿರಾಯರ ಪ್ರಮುಖ ಕೃತಿಗಳು :

೧. ಸಣ್ಣಕಥೆಗಳ ಸಂಕಲನಗಳು : ಅ. ಇದು ಜೀವನ. ಆ. ಜಂಗಮಜಾತ್ರೆಯಲ್ಲಿ. ಇ. ಮುಟ್ಟಿದ ಗುರಿ ಮತ್ತು ಇತರ ಕಥೆಗಳು. ಈ. ಮುಯ್ಯಿ. ೨. ಸಾಹಿತ್ಯವಿಮರ್ಶೆ. ಅ. ಕಾದಂಬರಿ-ಸಾಮಾನ್ಯಮನುಷ್ಯ. ಆ. ಆಲಿವರ್ ಗೋಲ್ಡ್ ಸ್ಮಿತ್, ಇ. ಮಾಸ್ತಿ ವೆಂಕಟೇಶ ಐಯ್ಯಂಗಾರ್. ಈ. ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ. ೩. ವಿಮರ್ಶೆ.

  • ಅ) ಪಾಶ್ಚಾತ್ಯಸಾಹಿತ್ಯ ವಿಹಾರ.
  • ಆ) ಸಾಹಿತ್ಯ ವಿಶ್ಲೇಷಣೆ.
  • ಇ) ಹೊಸಗನ್ನಡ ಸಾಹಿತ್ಯ .
  • ಈ) ಫ್ರಾನ್ಸ್ ಕಾಫ್ಕಾ,
  • ಉ) ಗ್ರೀಕ್ ರಂಗಭೂಮಿ ಮತ್ತು ನಾಟಕ.
  • ಊ) ವಿಲಿಯಮ್ ಶೇಕ್ಸ್ ಪಿಯರ್,
  • ಋ) ಸಾಹಿತ್ಯ-ಬದುಕು,
  • ೠ) ಟಿ. ಪಿ. ಕೈಲಾಸಂ,
  • ಏ). ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ,
  • ಏ). ಮಾಸ್ತಿ : ಜೀವನ ಮತ್ತು ಸಾಹಿತ್ಯ,
  • ಐ). ಇಂಗ್ಲೀಷ್ ಸಾಹಿತ್ಯ ಚರಿತ್ರೆ,
  • ಒ). ಸಾಹಿತ್ಯದ ಕನ್ನಡಿಯಲ್ಲಿ,
  • ಓ). ಪಾಶ್ಚಾತ್ಯಸಾಹಿತ್ಯಲೋಕದಲ್ಲಿ,
  • ಔ). ಎಲ್. ಎಸ್. ಎಸ್. ಕಂಡ ತ. ರಾ. ಸು.
  • ಅಂ.) ಮಹಾಭಾರತ( ನಾಲ್ಕು ಸಂಪುಟಗಳು).

೪. ನಾಟಕ. ಅ) ಆಕಾಂಕ್ಷೆ ಮತ್ತು ಆಸ್ತಿ. ಆ) ಜೀವನ ಚರಿತ್ರೆ ಇ) ಸಾರ್ಥಕ ಸುಬೋಧ, ಈ) ಎಂ. ವಿಶ್ವೇಶ್ವರಯ್ಯ, ೫. ನಿಘಂಟುಗಳು.

  • ಅ) ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು,
  • ಆ). ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು,
  • ಇ). ಐ. ಬಿ. ಎಚ್ ಕನ್ನದ -ಕನ್ನಡ ನಿಘಂಟು,
  • ಈ) ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು,
  • ಉ) ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು,
  • ಊ) ಸುಲಭ ಇಂಗ್ಲೀಷ್ ( ಏನ್ಗ್ಲಿಶ್ ಮದೆ ಎಅಸ್ಯ್.)

೬. ಇವಷ್ಟೆ ಅಲ್ಲದೆ :

  • ಅ) ಮಕ್ಕಳ ಸಾಹಿತ್ಯ- ೯ ಕೃತಿಗಳು,
  • ಆ) ಮಕ್ಕಳಿಗಾಗಿ-೪ ಕೃತಿಗಳು.
  • ಇ) ಇತರ-೯
  • ಈ) ಅನುವಾದಿತ-೪,
  • ಉ) ಸಂಪಾದಿತ-೯ ಕೃತಿಗಳು ಹಾಗೂ
  • ಊ) ಇಂಗ್ಲೀಷ್ ನಲ್ಲಿ -ಮೂಲ ಅನುವಾದಿತ-ಸಂಪಾದಿತ- ೩೧ ಕೃತಿಗಳು.[೨]

ಪ್ರಶಸ್ತಿ, ಪುರಸ್ಕಾರಗಳು

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
  • ವರ್ಧಮಾನ ಪ್ರಶಸ್ತಿ.
  • ಡಾ. ಅ.ನ.ಕೃ. ಪ್ರಶಸ್ತಿ.
  • ಬಿ.ಎಮ್.ಶ್ರೀ ಪ್ರಶಸ್ತಿ.
  • ಬಿ.ಎಮ್.ಇನಾಮದಾರ ಪ್ರಶಸ್ತಿ.
  • ಕಾವ್ಯಾನಂದ ಪ್ರಶಸ್ತಿ.
  • ದೇವರಾಜ ಬಹಾದ್ದೂರ ಪ್ರಶಸ್ತಿ.
  • ಮಾಸ್ತಿ ಪ್ರಶಸ್ತಿ.
  • ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)

ಉಲ್ಲೇಖಗಳು

  1. http://www.shopping.totalkannada.com/people/prof-l-s-sheshagiri-rao
  2. http://books.google.co.in/books?id=zB4n3MVozbUC&pg=PR5&lpg=PR5&dq=l.s.sheshagiri+rao&source=bl&ots=OB50--Vq2Z&sig=DI9wDBKov8D9QUe8y56mSpfsWDE&hl=kn&sa=X&ei=F9BpU_myBYutrAeY8oBo&ved=0CJEBEOgBMA8#v=onepage&q=l.s.sheshagiri%20rao&f=false