ಮಂಜರಾಬಾದ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧೧ ನೇ ಸಾಲು: ೧೧ ನೇ ಸಾಲು:
ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ.
ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ.
ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.
ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.
{{commons category|Manjarabad Fort}}

<br>
<br>



೧೯:೪೨, ೧೬ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ

ಕೋಟೆಯ ಮುಖ್ಯ ದ್ವಾರ

ಮಂಜರಾಬಾದ್ ಕೋಟೆ ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದು ಶಿರಾಡಿ ಘಾಟಿ ಹಾಗು ಬಿಸಿಲೆ ಘಾಟಿ ರಸ್ತೆಗಳ ಕವಲಿನಲ್ಲಿ ಇದೆ.

ಕೋಟೆಯ ಹಿನ್ನೆಲೆ

ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ ೧೭೮೫-೧೭೯೨ರ ನಡುವೆ ನಿರ್ಮಿಸಿದನು[೧]. ನಾಲ್ಕನೇ ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.

ಕೋಟೆಯ ವಿನ್ಯಾಸ

ಕೋಟೆಯ ಮುಖ್ಯ ದ್ವಾರದಿಂದ ಕೋಟೆಯ ಒಳ ನೋಟ
ಕೋಟೆಯ ಒಳ ನೋಟ-೧

ಸುಮಾರು ೨೫೦ ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬಹುದು. ಸಮುದ್ರ ಮಟ್ಟದಿಂದ ಸುಮಾರು ೩೨೪೦ ಅಡಿ ಎತ್ತರದಲ್ಲಿದ್ದು, ಸುಮಾರು ೫ ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ[೨]. ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ. ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.


ಉಲ್ಲೇಖಗಳು

  1. http://www.holidayiq.com/Manjarabad-Fort-Sakleshpur-Sightseeing-628-732.html
  2. http://www.starforts.com/manjarabad.html