ಅಂಥಿಂಥ ಹೆಣ್ಣು ನೀನಲ್ಲ!!: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೊಂಡಿ ಸೇರಿಸಿದ್ದು
No edit summary
೧ ನೇ ಸಾಲು: ೧ ನೇ ಸಾಲು:
{{Incomplete}}
'''ಅಂಥಿಂಥ ಹೆಣ್ಣು ನೀನಲ್ಲ!! ಕವನ ಸಂಕಲನ-ದೀಪದ ಮಲ್ಲಿ.'''
'''ಅಂಥಿಂಥ ಹೆಣ್ಣು ನೀನಲ್ಲ!! ಕವನ ಸಂಕಲನ-ದೀಪದ ಮಲ್ಲಿ.'''



೨೦:೨೧, ೧೪ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಅಂಥಿಂಥ ಹೆಣ್ಣು ನೀನಲ್ಲ!! ಕವನ ಸಂಕಲನ-ದೀಪದ ಮಲ್ಲಿ.

ಅಂಥಿಂಥ ಹೆಣ್ಣು ನೀನಲ್ಲ; ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ, ಗುಡಿನಿಂದ ಹೂವು ಮೇಲೆಲ್ಲ, ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ, ಹೊಂಬಾಳೆ ಆಸೆ ಒಳಗೆಲ್ಲ. ಒತ್ತಾಯವಿಲ್ಲ: ಒಲವೆಲ್ಲ! ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ; ಎಷ್ಟೊಂದು ಹೂವು ಅದರಲ್ಲಿ! ಉಸಿರುಸಿರು ಮೊಗ್ಗು ಹೂವೆಲ್ಲ; ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು; ಅಲ್ಲಿಹವು ನವಿಲು ಮುನ್ನೂರು. ಮುನ್ನೂರು ನವಿಲು ಬಂದಂತೆ ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು; ಕುಡಿಮಿಂಚಿನೂರು ಹೊನ್ನೂರು ಮುನ್ನೂರು ಮೆಂಚು ಹೊಳೆದಂತೆ ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ, ಹೊಂಗನಸು ನಡುವೆ ದನಿತೂಗಿ, ಕಾದಿರಲು ನಾನು ನಿನಗಾಗಿ ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ. ನೀನಲ್ಲ? ಚೆಲುವೆ ಇನ್ನಿಲ್ಲ! ಹಾಡಲ್ಲ, ನೀನು ಕನಸಲ್ಲ; ನಿನ್ನಿಂದ ಹಾಡು ಕನಸೆಲ್ಲ.

-ಕೆ ಎಸ್ ನರಸಿಂಹಸ್ವಾಮಿಯವರು .........