ಧಾರವಾಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೧೩ ನೇ ಸಾಲು: ೧೧೩ ನೇ ಸಾಲು:
===ಕಲಾಕಾರರು===
===ಕಲಾಕಾರರು===
ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹುಬ್ಬಳೀಕರ್, ಲೀನಾ ಚ೦ದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.
ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹುಬ್ಬಳೀಕರ್, ಲೀನಾ ಚ೦ದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.

ಚಿತ್ರ ಕಲಾವಿದರಲ್ಲಿ ಪ್ರಮುಖರು

* 'ಕುಂಚ ಬ್ರಹ್ಮ' ಎಮ್. ವಿ. ಮಿಣಜಗಿ
* ಕುಂಚ ಬ್ರಹ್ಮ' ಹಾಲಭಾವಿ
* ಸುರೇಶ ಹಾಲಭವಿ
* ಎಮ್. ಸಿ ಚೆಟ್ಟಿ
* ರೇಣುಕಾ ಮಾರ್ಖಂಡೆ
* ಮ್ ಜೆ ಭಗ್ಲೆವಾಲೆ


ಯುವ ಕಲಾವಿದರು
* ಶೇಖರ ಬಳ್ಳಾರಿ.
* ಸತೀಶ ಪೂಜಾರಿ
* ಶಂಕರ್ ಕೆ ವಿ.
* ವಿಜಯಲಕ್ಶ್ಮಿ ಯಾವಗಲ್


==ಚರಿತ್ರೆ==
==ಚರಿತ್ರೆ==

೧೬:೨೪, ೨೩ ಮೇ ೨೦೦೮ ನಂತೆ ಪರಿಷ್ಕರಣೆ

ಧಾರವಾಡ ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಧಾರವಾಡ ನಗರ ಈ ಜಿಲ್ಲೆಯ ಕೇಂದ್ರಸ್ಥಳ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು.

ಪ್ರಮುಖ ವ್ಯಕ್ತಿಗಳು

ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸ೦ಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ವಿಶ್ವಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನೆಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.

ಸಂಗೀತಗಾರರು

ಹಿ೦ದುಸ್ತಾನೀ ಸ೦ಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿ೦ದ ಅನೇಕ ಗಣ್ಯ ಹಿ೦ದುಸ್ತಾನಿ ಸ೦ಗೀತಗಾರರು ಬೆಳಕಿಗೆ ಬ೦ದಿದ್ದಾರೆ.

ಸಾಹಿತಿಗಳು

ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ.

ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ:


ಶಿಕ್ಷಣ ತಜ್ಞರು

ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.

ಕಲಾಕಾರರು

ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹುಬ್ಬಳೀಕರ್, ಲೀನಾ ಚ೦ದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.

ಚಿತ್ರ ಕಲಾವಿದರಲ್ಲಿ ಪ್ರಮುಖರು

  • 'ಕುಂಚ ಬ್ರಹ್ಮ' ಎಮ್. ವಿ. ಮಿಣಜಗಿ
  • ಕುಂಚ ಬ್ರಹ್ಮ' ಹಾಲಭಾವಿ
  • ಸುರೇಶ ಹಾಲಭವಿ
  • ಎಮ್. ಸಿ ಚೆಟ್ಟಿ
  • ರೇಣುಕಾ ಮಾರ್ಖಂಡೆ
  • ಮ್ ಜೆ ಭಗ್ಲೆವಾಲೆ


ಯುವ ಕಲಾವಿದರು

  • ಶೇಖರ ಬಳ್ಳಾರಿ.
  • ಸತೀಶ ಪೂಜಾರಿ
  • ಶಂಕರ್ ಕೆ ವಿ.
  • ವಿಜಯಲಕ್ಶ್ಮಿ ಯಾವಗಲ್

ಚರಿತ್ರೆ

೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದಿತು. ನ೦ತರ ವಿಜಯನಗರ ಸಾಮ್ರಾಜ್ಯದ ಭಾಗವಾಯಿತು. ವಿಜಯನಗರ ಸಾಮ್ರಾಜ್ಯದ ಪತನದ ನ೦ತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎ೦ಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನ೦ತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ ಮುಘಲ್ ಸಾಮ್ರಾಜ್ಯದ ಕೈಯಲ್ಲಿದ್ದು ನ೦ತರ ಅನುಕ್ರಮವಾಗಿ ಮರಾಠರು, ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಅನ್ನದಾನಯ್ಯ ಪುರಾಣಿಕ. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.

ತಾಲೂಕುಗಳು

ಚಾರಿತ್ರಿಕ ಘಟನೆಗಳು

ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗು ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ:

೧೮೧೮---ಬ್ರಿಟಿಷ್ ಆಡಳಿತ ಪ್ರಾರಂಭ.


೧೮೨೪---ಧಾರವಾಡ ಜಿಲ್ಲಾ ಕಲೆಕ್ಟರ ಥ್ಯಾಕರೆ ಕಿತ್ತೂರು ಕಿತ್ತೂರು ಚೆನ್ನಮ್ಮಇವಳ‍ ವಿರುದ್ಧ ನಡೆಸಿದ ದಾಳಿಯಲ್ಲಿ ಗುಂಡೇಟಿನಿಂದ ಮೃತನಾದನು.

೧೮೨೬---ಪ್ರಥಮ ಮರಾಠಿ ಶಾಲೆ ಪ್ರಾರಂಭ.

೧೮೩೦---ಸಿವಿಲ್ ಆಸ್ಪತ್ರೆ ನಿರ್ಮಾಣ

೧೮೩೧---ಪ್ರಥಮ ಕನ್ನಡ ಶಾಲೆಯ ಪ್ರಾರಂಭ

೧೮೩೬---ಬಾಸೆಲ್ ಮಿಶನ್ ಆಗಮನ

೧೮೪೦---ಕ್ಯಾಥೋಲಿಕ್ ಚರ್ಚ ನಿರ್ಮಾಣ

೧೮೪೪---ಮಾನಸಿಕ ಆರೋಗ್ಯ ಕೇಂದ್ರದ ಸ್ಥಾಪನೆ

೧೮೪೮---ಸರಕಾರಿ ಇಂಗ್ಲಿಷ್ ಶಾಲೆಯ ಸ್ಥಾಪನೆ

೧೮೪೯---ಶ್ರೀ ಗುರುನಾಥರಾವ ಪಾಠಕ ಇವರಿಂದ ‘ಸಂಸ್ಕೃತ ಪಾಠಶಾಲೆ’ಯ ಸ್ಥಾಪನೆ

೧೮೫೬---ನಗರಪಾಲಿಕೆ ಪ್ರಾರಂಭ

೧೮೬೧---ವೆಂಕಟ ರಂಗೊ ಕಟ್ಟಿ ಇವರಿಂದ ಕನ್ನಡದ ಪ್ರಥಮ ಮಾಸಿಕ ‘ಜ್ಞಾನಬೋಧಕ’ ಪ್ರಾರಂಭ

೧೮೬೩---ಬಾಸೆಲ್ ಮಿಶನ್ ಹಾಯ್‍ಸ್ಕೂಲ್ ಪ್ರಾರಂಭ

೧೮೬೫--- ಗಂಡುಮಕ್ಕಳ ಟ್ರೇನಿಂಗ ಕಾಲೇಜಿನಿಂದ ‘ವಾರಪತ್ರಿಕೆ’ ಪ್ರಾರಂಭ

೧೮೬೮---ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭ

೧೮೭೯---ಕರ್ನಾಟಕ ಸಂಗೀತ ಶಾಲೆಯ ಪ್ರಾರಂಭ

೧೮೮೯---ರಾ.ಹ.ದೇಶಪಾಂಡೆಯವರಿಂದ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಾರಂಭ

೧೮೯೫---ಹೆಣ್ಣುಮಕ್ಕಳ ಟ್ರೇನಿಂಗ ಕಾಲೇಜ ಪ್ರಾರಂಭ

೧೮೯೬---ವಾಗ್ಭೂಷಣ ಪತ್ರಿಕೆಯ ಪ್ರಾರಂಭ

೧೯೦೨---ಥಿಯಾಸೊಫಿಕಲ್ ಸೊಸಾಯಿಟಿ ಪ್ರಾರಂಭ

೧೯೦೭---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ

೧೯೧೪---ಕರ್ನಾಟಕ ಪ್ರಾಚ್ಯ ಸಂಶೋಧನಾ ಕೇಂದ್ರ ಪ್ರಾರಂಭ

೧೯೧೫---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ

೧೯೧೭---ಕರ್ನಾಟಕ ಕಾಲೇಜ ಸ್ಥಾಪನೆ

೧೯೨೦---ಮಹಾತ್ಮಾ ಗಾಂಧೀಜಿಯವರಿಂದ ಧಾರವಾಡದ ಭೆಟ್ಟಿ

೧೯೨೧---ಕರ್ನಾಟಕ ಶಿಕ್ಷಣ ಸಮಿತಿಯ ಕಾಲೇಜ ಪ್ರಾರಂಭ : ಜಕಣಿ ಭಾವಿಯ ಹತ್ತಿರ ಪೋಲೀಸ ಗೋಳೀಬಾರ, ಮೂವರು ಖಿಲಾಫತ್ ಚಳುವಳಿಗಾರರ ಮರಣ ; ಲಾಲಾ ಲಜಪತರಾಯ ಇವರ ಭೆಟ್ಟಿ

೧೯೨೨---ಕರ್ನಾಟಕ ಲಿಂಗಾಯತ ಶಿಕ್ಷಣ ಸಮಿತಿಯ ಪ್ರಾರಂಭ

೧೯೨೭---ಸೈಮನ್ ಕಮಿಶನ್ ವಿರುದ್ಧ ಪ್ರತಿಭಟನೆ, ಚಳುವಳಿ

೧೯೨೮---ಶ್ರೀ ನಾಡಿಗೇರ ಅವರಿಂದಮಲ್ಲಸಜ್ಜನ ವ್ಯಾಯಾಮಶಾಲೆಯ ಪ್ರಾರಂಭ

೧೯೩೦---ಉಪ್ಪಿನ ಸತ್ಯಾಗ್ರಹ:ರಂಗನಾಥ ದಿವಾಕರ‍ರ ಬಂಧನ. ಹುಕ್ಕೇರಿಕರ ರಾಮರಾವ, ಡಿ.ಪಿ.ಕರಮರಕರ, ನಾರಾಯಣರಾವ ಕಬ್ಬೂರ ಇವರಿಂದ ಬ್ರಿಟಿಷ್ ಧ್ವಜ ಅವರೋಹಣ.

೧೯೩೩---ಪ್ರಸಿದ್ಧ ನಾಟಕಕಾರ ಶ್ರೀರಂಗ‍ರಿಂದ ‘ಕರ್ನಾಟಕ ನಾಟ್ಯ ವಿಲಾಸಿ ಹವ್ಯಾಸಿ ನಾಟಕ ಸಮಾಜ’ ಸ್ಥಾಪನೆ.

೧೯೩೬---ಆಲೂರು ವೆಂಕಟರಾಯ‍ರಿಂದ ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವದರ ಪ್ರಾರಂಭ

೧೯೩೮---ಬೆಟಗೇರಿ ಕೃಷ್ಣಶರ್ಮರಿಂದ ‘ಜಯಂತಿ’ ಮಾಸಪತ್ರಿಕೆ ಹಾಗು ಗೆಳೆಯರ ಗುಂಪಿನಿಂದ ಜೀವನ ಮಾಸಪತ್ರಿಕೆಯ ಪ್ರಾರಂಭ; ಸುಭಾಷಚಂದ್ರ ಭೋಸ ಇವರ ಭೆಟ್ಟಿ

೧೯೩೯--- ಸುಭಾಷಚಂದ್ರ ಭೋಸ ಇವರ ಮರು ಭೆಟ್ಟಿ

೧೯೪೦---ವೀರ ಸಾವರಕರ ಇವರ ಭೆಟ್ಟಿ

೧೯೪೨---ಚಲೇಜಾವ್ ಚಳುವಳಿ ಪ್ರಾರಂಭ; ವಿಮಲಾ ಗುಳವಾಡಿ ಹಾಗು ಶಿನೋಳಕರ ಎನ್ನುವ ಬಾಲಕಿಯರಿಂದ ಜಿಲ್ಲಾಕಚೇರಿಯ ಮೇಲೆ ತ್ರಿವರ್ಣಧ್ವಜದ ಆರೋಹಣ!

೧೯೪೪---ಕರ್ನಾಟಕ ಶಿಕ್ಷಣ ಸಮಿತಿಯ ಕಲಾ ಕಾಲೇಜ ಪ್ರಾರಂಭ

೧೯೪೭---ಒಕ್ಕಲುತನದ ಕಾಲೇಜ ಪ್ರಾರಂಭ; ಜನತಾ ಶಿಕ್ಷಣ ಸಮಿತಿ ಪ್ರಾರಂಭ

ರಾಜಕೀಯ

ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ.

  • ಧಾರವಾಡ ಗ್ರಾಮೀಣ (ಇಂದಿನ ಶಾಸಕರು: ವಿನಯ ಕುಲಕರ್ಣಿ)
  • ಧಾರವಾಡ ಶಹರ (ಇಂದಿನ ಶಾಸಕರು: ಎಸ್. ಆರ್. ಮೋರೆ)
  • ಹುಬ್ಬಳ್ಳಿ ಗ್ರಾಮೀಣ (ಇಂದಿನ ಶಾಸಕರು: ಜಗದೀಶ ಶೆಟ್ಟರ್)
  • ಹುಬ್ಬಳ್ಳಿ ಶಹರ (ಇಂದಿನ ಶಾಸಕರು: ಜಬ್ಬಾರಖಾನ್ ಹಯಾತಖಾನ್ ಹೊನ್ನಳ್ಳಿ)
  • ಕಲಘಟಗಿ (ಇಂದಿನ ಶಾಸಕರು: ಸಿದ್ಧನಗೌಡ ಈಶ್ವರಗೌಡ ಚಿಕ್ಕನಗೌಡ್ರ)
  • ಕುಂದಗೋಳ (ಇಂದಿನ ಶಾಸಕರು: ಮಲ್ಲಿಕಾರ್ಜುನಪ್ಪ ಸಹದೇವಪ್ಪ ಅಕ್ಕಿ)
  • ನವಲಗುಂದ (ಇಂದಿನ ಶಾಸಕರು: ಡಾ. ಆರ್ ಬಿ ಶಿರಿಯಣ್ಣವರ್)

ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು.

ಇವನ್ನೂ ನೋಡಿ

ಬಾಹ್ಯ ಸಂಪರ್ಕಗಳು

ಧಾರವಾಡ್.ಕಾಂ

"https://kn.wikipedia.org/w/index.php?title=ಧಾರವಾಡ&oldid=67590" ಇಂದ ಪಡೆಯಲ್ಪಟ್ಟಿದೆ