ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
'''ದಸರಾ''' [[ಕರ್ನಾಟಕ]] ರಾಜ್ಯದ ನಾಡ ಹಬ್ಬ. [[ಹಿಂದೂ ಧರ್ಮ|ಹಿಂದೂ ಧರ್ಮೀಯರಿಗೆ]] ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದ ಲೇ 'ನವರಾತ್ರಿ' ಅಥವಾ 'ದಸರಾ ಹಬ್ಬ' ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.
[[ಚಿತ್ರ:Dasara.jpg|right|thumb|200px|ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ]]
[[ಚಿತ್ರ:Dasara.jpg|right|thumb|200px|ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ]]
[[File:Navratri Golu.jpg|thumb|Navaratri [[Golu]], dolls and figurine display festival for girls and women in [[South India]]]]
[[File:Jhinjheri (Bauhinia racemosa) leaves & fruit pods in Hyderabad, AP W IMG 7117.jpg|thumb|Leaves of the ''Apta'' tree that are exchanged during Dasara]]
[[File:Urbana Illinois park 20070928 img 2120-crop.jpg|thumbnail|Saffron Marigold (''Tagetes patula'') flowers also known in [[Marathi people|Marathi]] as ''Jhendu'' (झेंडू) assume special significance]]
'''ದಸರಾ''' [[ಕರ್ನಾಟಕ]] ರಾಜ್ಯದ ನಾಡ ಹಬ್ಬ. [[ಹಿಂದೂ ಧರ್ಮ|ಹಿಂದೂ ಧರ್ಮೀಯರಿಗೆ]] ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದ ಲೇ 'ನವರಾತ್ರಿ' ಅಥವಾ 'ದಸರಾ ಹಬ್ಬ' ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.


== ಮೈಸೂರು ದಸರಾ ==
== ಮೈಸೂರು ದಸರಾ ==

೧೭:೪೮, ೧೬ ಜನವರಿ ೨೦೧೬ ನಂತೆ ಪರಿಷ್ಕರಣೆ

ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ
Navaratri Golu, dolls and figurine display festival for girls and women in South India
Leaves of the Apta tree that are exchanged during Dasara
Saffron Marigold (Tagetes patula) flowers also known in Marathi as Jhendu (झेंडू) assume special significance

ದಸರಾ ಕರ್ನಾಟಕ ರಾಜ್ಯದ ನಾಡ ಹಬ್ಬ. ಹಿಂದೂ ಧರ್ಮೀಯರಿಗೆ ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದ ಲೇ 'ನವರಾತ್ರಿ' ಅಥವಾ 'ದಸರಾ ಹಬ್ಬ' ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.

ಮೈಸೂರು ದಸರಾ

ಈ ಹತ್ತು ದಿನಗಳನ್ನು ಮೈಸೂರಿನಲ್ಲಿ ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂ ಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗು ತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಸಿಂಹದ ಮೇಲೆ ಕುಳಿತು ಮಹಿಷಾಸುರ ಎಂಬ ರಕ್ಕಸನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ ಚಾಮುಂಡಿ ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.

ಪುರಾಣಗಳಲ್ಲಿ ದಸರಾ

  • ಪುರಾಣವೊಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆ ದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷ ನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.
  • ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು.
  • ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು.

ಆಚರಣಾ ವಿಧಿ ವಿಧಾನಗಳು

  • ಶುಕ್ಲ ಪಕ್ಷದಲ್ಲಿ ಪ್ರಥಮಾ ತಿಥಿಯಿಂದ ದಶಮಿಯವರೆವಿಗೆ ದಿನ ನಿತ್ಯ ಪೂಜೆ ಪುನಸ್ಕಾರ, ಸಂತರ್ಪಣೆ, ಹಬ್ಬದ ವಾತಾವರಣವನ್ನು ಕಾಣಬಹುದು. ಈ ಕಾಲವು ಎಲ್ಲ ದೇವತೆಗಳ ಉಪಾಸನೆಗಳಿಗೆ ಶ್ರೇಷ್ಠವಾಗಿದ್ದರೂ ಶಕ್ತಿದೇವತೆಯನ್ನು ಪ್ರಸನ್ನಗೊಳಿಸುವ ಕಾಲವಾಗಿದೆ. ಈ ಸಮಯದಲ್ಲಿ ವಿವಾಹ, ಉಪನಯನ ಇತ್ಯಾದಿ ಶುಭಕರ್ಮಗಳಿಗೆ ತಿಥಿ, ವಾರ, ನಕ್ಷತ್ರ ಮುಂತಾದವುಗಳನ್ನು ಗಮನಿಸುವ ಅಗತ್ಯವಿಲ್ಲವೆಂದು ಭಾವಿಸಲಾಗುತ್ತದೆ. ಏಕೆಂದರೆ ಈ ಹತ್ತು ದಿನಗಳಲ್ಲಿ ಯಾವ ಕೆಲಸವನ್ನೂ ಮಾಡಿದರೂ ಯಶಸ್ಸು ದೊರಕುವುದೆಂಬ ನಂಬಿಕೆ ಇದೆ.
  • ಇದಲ್ಲದೇ ವರ್ಷದಲ್ಲಿ ಆಚರಿಸಲಾಗದ ಯಾವುದೇ ವ್ರತ, ಹಬ್ಬಗಳನ್ನೂ ಈ ಸಮಯದಲ್ಲಿ ಆಚರಿಸುವರು. ಈ ದಿನಗಳಲ್ಲಿ ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನಗಳು ಲಕ್ಷ್ಮಿಯೆಂದೂ, ನಂತರದ ಮೂರು ದಿನಗಳಲ್ಲಿ ಸರಸ್ವತಿ ಎಂದೂ ಮತ್ತು ಕಡೆಯ ಮೂರು ದಿನಗಳಲ್ಲಿ ಗೌರೀ ಅಥವಾ ದುರ್ಗಿಯೆಂದೂ ಆರಾಧಿಸುವರು.

ಪ್ರಥಮಾ ತಿಥಿಯಂದು ಪ್ರಾತಃಕಾಲದಲ್ಲಿ ಅಭ್ಯಂಜನ ಸ್ನಾನ ಮಾಡಿ ಕಲಶ ಸ್ಥಾಪನೆ ಮಾಡಿ, ಷೋಡಶಾಂಗ ಪೂಜೆಯನ್ನು ದೇವಿಗೆ ಅರ್ಪಿಸುವರು.

  • ಬಲಿ ಕೊಡುವುದರ ಸಂಕೇತವಾಗಿ ಉದ್ದಿನ ಅನ್ನ ಅಥವಾ ಬೂದುಗುಂಬಳಕಾಯಿಯನ್ನು ಮೊದಲನೆಯ ದಿನ ಅಥವಾ ಕೊನೆಯ ದಿನದಂದು ಅರ್ಪಿಸುವರು. ಈ ಸಮಯದಲ್ಲಿ ಚಂಡೀ ಸಪ್ತಶತಿ, ನಾರಾಯಣ ಹೃದಯ ಪಾಠ, ಲಕ್ಷ್ಮೀ ಹೃದಯ ಪಾಠ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆಯನ್ನೂ ಮಾಡುವ ಪದ್ಧತಿ ಇದೆ. ಎರಡು ವರ್ಷದಿಂದ ಹತ್ತು ವರ್ಷ ವಯಸ್ಸಿನ ಹೆಣ್ಣು ಮಕ್ಕಳನ್ನು ಕೌಮಾರಿಯೆಂದು ಪೂಜಿಸುವ ಸಂಪ್ರದಾಯವೂ ಇದೆ.
  • ಕುಮಾರಿ, ತ್ರಿಮೂರ್ತಿ, ಕಲ್ಯಾಣೀ, ರೋಹಿಣೀ, ಕಾಳಿ, ಚಂಡಿಕಾ, ಶಾಂಭವಿ, ದುರ್ಗಾ ಮತ್ತು ಭದ್ರಾ ಎಂದ ಹೆಸರುಗಳಿಂದ ಆವಾಹಿಸಿ ಭವಾನೀ ಸಹಸ್ರನಾಮವನ್ನು ಪಾರಾಯಣ ಮಾಡುವರು. ಪಂಚಮೀ ತಿಥಿಯಂದು ಉಪಾಂಗ ಲಲಿತಾ ದೇವಿಯನ್ನು ಪೂಜಿಸಿದರೆ, ಮೂಲಾ ನಕ್ಷತ್ರದಂದು ಸರಸ್ವತೀ ದೇವಿಯನ್ನು ಪೂಜಿಸಿ, ಅಷ್ಟಮಿಯಂದು ದುರ್ಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು.
  • ಮಹಾನವಮಿಯಂದು ಶತಚಂಡೀ ಹೋಮವನ್ನೂ ಮಾಡುವರು. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಸಿಂಹದ ಮೇಲೆ ಕುಳಿತು ಮಹಿಷಾಸುರನೆಂಬ ರಕ್ಕಸನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ ಚಾಮುಂ ಡಿ ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.
  • ಮೈಸೂರಿನ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನೂ ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು. ದಕ್ಷಿಣ ಕರ್ನಾಟಕ (ಹಳೆಯ ಮೈಸೂರು ಪ್ರಾಂತ್ಯ) ಮನೆಗಳಲ್ಲಿ ಗೊಂಬೆ ಕೂರಿಸುವರು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸು ವರು. ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ಪಟ್ಟದ ಗೊಂಬೆಗಳನ್ನು (ತೇಗ ಅಥವಾ ಚಂದನದ ಮರದಿಂದ ಮಾಡಿದ) ನೀಡುವರು.
  • ಪ್ರತಿದಿನ ಸಂಜೆಯ ವೇಳೆಯಲ್ಲಿ ಪುಟ್ಟ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಇಲ್ಲಿ ವಿಶೇಷವೇನೆಂದರೆ, ಈ ಎಲ್ಲ ತಿಂಡಿಗಳು ಸಣ್ಣ ಸಣ್ಣ ಸ್ವರೂಪ ದಲ್ಲಿರುವುವು. ವಿಜಯದಶಮಿ ಯಂದು ಪಟ್ಟದ ಗೊಂಬೆಗಳನ್ನು ಮಲಗಿಸಿ ಇಟ್ಟು ಮಾರನೆಯ ದಿನ ಬೆಳಗ್ಗೆ ಕಲಶವನ್ನು ವಿಸರ್ಜಿಸುವರು. ಲಲಿತಾ ದೇವಿಗೆ ಸಹಸ್ರನಾಮಯುತ ಕುಂಕುಮಾರ್ಚನೆ - ವಿಜಯದಶಮಿಯಂದು ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿ.

ಮೈಸೂರು ಪ್ರಜೆಗಳ ಕಣ್ಣಲ್ಲಿ ದಸರಾ

  • ದಸರಾ ಹಳೆಯ ಮೈಸೂರಿಗರಿಗೆ ಇಂದಿಗೂ ನಾಡಹಬ್ಬ. ಇದೊಂದು ಸಂಭ್ರಮದ ಸಂದರ್ಭ. ರಾಜರ ಆಳ್ವಿಕೆಯ ಕಾಲದ ನೆನಪಿನಲ್ಲಿ ಈಗಿನ ಆಚರಣೆಗಳನ್ನು ನೋಡುವ ಹಿರಿಯ ತಲೆಗಳಿಗೆ ಆಗಿನ ದಿನಗಳೇ ಚಂದ ಎಂಬ ಹಳಹಳಿಕೆ. ಮೈಸೂರು ನಗರದಲ್ಲಿ ಮಾತ್ರವಲ್ಲದೆ, ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ, ದಸರೆಯ ದಿನಗಳಲ್ಲಿ ಮೈಸೂರಿಗೆ ಭೇಟಿ ನೀಡುತ್ತಿದ್ದ ಮಂಡ್ಯ, ಚಾಮರಾಜನಗರ ಜಿಲ್ಲೆಯ ಗ್ರಾಮೀಣರಿಗೆ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ನೆನಪನ್ನೇ ಪ್ರಧಾನವಾಗಿ ಉಳಿಸಿದೆ.
  • ಈಗಿನ ಚಾಮುಂಡೇಶ್ವರಿ ಮೆರವಣಿಗೆ ಹಿರಿಯ ತಲೆಗಳಿಗೆ ಮಹಾರಾಜರು ಅಂಬಾರಿಯ ಮೇಲೆ ಸಾಗುತ್ತಿದ್ದ ಅಂದಿನ ದೃಶ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ.

ದಸರಾ ಅಂದ್ರೆ ಜಂಬೂ ಸವಾರಿ, ಅದ್ದೂರಿ ಮೆರವಣಿಗೆ, ಆಮೇಲೆ ಚಾಮುಂಡಿ ಬೆಟ್ಟ, ಅಲ್ಲಿನ ಜಾತ್ರೆ, ತೇರು, ಕೆ.ಆರ್.ಎಸ್. ಡ್ಯಾಮ್ ಎಲ್ಲಾ ನೆನಪಾಗುತ್ತವೆ. ಈಗಿನ ದಸರಾ ಪರವಾಗಿಲ್ಲ. ಮಹಾರಾಜರು ದಸರಾ ನಡೆಸುತ್ತಿದ್ದಾಗ ಜಂಬೂ ಸವಾರಿ ಅರಮನೆಯಿಂದ ಬನ್ನಿಮಂಟಪಕ್ಕೆ ಹೋಗಿ ಮತ್ತೆ ಅಲ್ಲಿಂದ ವಾಪಸ್ಸು ಬರುತ್ತಿತ್ತು.

  • ಅಂಬಾರಿ ಮೇಲೆ ಮಹಾರಾಜರು ಕುಳಿತಿರುತ್ತಿದ್ದರು. ಅವರ ಹಿಂದೆ ಮಂತ್ರಿ ಕುಳಿತಿರುತ್ತಿದ್ದರು. ಅವರು ದೇವರ ರೀತಿ ಇದ್ರು, ಜನ ಅವರಿಗೆ ಕೈ ಮುಗಿಯುತ್ತಿದ್ದರು. ಅವರೂ ನಮಗೆ ನಮ್ಮತ್ತ ಕೈ ಬೀಸುತ್ತಿದ್ದರು. ಈಗ ಅಂಬಾರಿ ಮೇಲೆ ಮಹಾರಾಜರು ಇಲ್ಲ, ಚಾಮುಂಡಿ ದೇವಿ ವಿಗ್ರಹ ಇರುತ್ತೆ. ಈಗಿನ ಮೆರವಣಿಗೆಗಿಂತ ಆಗಿನ ಮೆರವಣಿಗೆಯೇ ಚೆನ್ನಾಗಿತ್ತು. ರಾಜರ ಕಾಲದಲ್ಲಿ ಅರಮನೆಯ ಆವರಣದಲ್ಲಿ ಮೈಸೂರಿನ ಪ್ರತಿಷ್ಠಿತ ವ್ಯಕ್ತಿಗಳಿಗೆ ಸುಖಾಸೀನಗಳ ವ್ಯವಸ್ಥೆ ಮಾಡಿ ದರ್ಬಾರು ನಡೆಸುತ್ತಿದ್ದರು; ಅದರಲ್ಲಿ ವೈಭವವಿತ್ತು. *ಸಂಗೀತ, ಕಲೆ, ನೃತ್ಯ ಇವುಗಳಿಗೆ ರಾಜಾಶ್ರಯದಲ್ಲಿದ್ದವರಿಗೆ ಹೆಚ್ಚಿನ ಮನ್ನಣೆ ದೊರೆಯುತ್ತಿತ್ತು. ಈಗ ರಾಜಾಶ್ರಯ ಇಲ್ಲ, ಎಲ್ಲವು ಸರ್ಕಾರದ ಆಣತಿಯಂತೆ ನಡೆಯುತ್ತಿದೆ.. ಈಗ ಜನಜಂಗುಳಿ. ವಯಸ್ಸಾದವರು ಅಲ್ಲಿಗೆ ಹೋಗಿ ದಸರಾ ನೋಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿಯೇ ಟಿ.ವಿ.ಯಲ್ಲಿ ವೀಕ್ಷಿಸುವುದೇ ಸರಿ..’ ಅಂತ ಅವರಿಗೆ ಅನಿಸಿದೆ.

ಜಂಬೂ ಸವಾರಿ ನೋಡಲು ಸಂತಸವಾಗುತ್ತದೆ. ಮತ್ತು ಆ ಜನರ ಗುಂಪಿನಲ್ಲಿ ಹರ ಸಾಹಸ ಮಾಡಿ ವೀಕ್ಷಿಸುವುದು ಖುಷಿ ನೀಡಿದೆ. ಹಿಂದೆ ಒಮ್ಮೆ ತಳ್ಳುವ ಗಾಡಿಯ ಮೇಲೆ ನಿಂತು ದಸರಾ ವೀಕ್ಷಣೆ ಮಾಡಿದ್ದ ಅವರಿಗೆ ವಸ್ತು ಪ್ರದರ್ಶನಕ್ಕೂ ಭೇಟಿ ಕಡ್ಡಾಯ. ಆದರೆ ಅಲ್ಲಿಗೆ ಕುಟುಂಬದವರೆಲ್ಲಾ ಹೋಗಿ ಸುತ್ತಾಡಿ ವಿವಿಧ ಆಟಗಳನ್ನು ಆಡುವ ಉಮೇದು. ಆದರೆ ಕೊಳ್ಳುವುದಕ್ಕೆ ಹೋದರೆ ಎಲ್ಲವೂ ದುಬಾರಿ’ ಎಂಬ ಆಸಮಾಧಾನ.

  • ಗಂಜಾಂ ವ್ಯಾಪಾರಿ ಮಂಜುನಾಥ್ ಅವರಿಗೆ ‘ದಸರಾ ಅಂದ್ರೆ ಮಹಾರಾಜರ ನೆನಪಾಗುತ್ತದೆ. ಆದರೂ ಈಗಿನ ಅಂಬಾರಿ ಮೆರವಣಿಗೆ ಆಕರ್ಷಕವಾಗಿದೆ. ನಮ್ಮ ತಂದೆ ಹೇಳುತ್ತಿದ್ದ ದಸರಾಗೂ ಇಂದಿನ ದಸರಾಗೂ ವ್ಯತ್ಯಾಸ ಇದೆ. ಜಾನಪದ ಕಲಾ ಮೇಳಗಳು ಖುಷಿ ಕೊಡುತ್ತವೆ. ಅಂದಿನ ದಸರಾ ಸೊಗಡು ಈಗ ಇಲ್ಲ. ಎಂಟ್ಹತ್ತು ಬಾರಿ, ಮಕ್ಕಳು ಮರಿ ಕಟ್ಟಿಕೊಂಡು ದಸರಾ ನೋಡಿದ್ದೀನಿ. ಮೈಸೂರು ಹೊಸದೇನಲ್ಲ. ಆದರೆ ದಸರಾ ಸಂದರ್ಭದ ಮೈಸೂರು ಅಂದರೆ ನಾಡಿನ ಪರಂಪರೆಯನ್ನು ಬಿಂಬಿಸುವ ಕೇಂದ್ರವಾಗಿ ಬದಲಾಗುತ್ತದೆ.’ ಎಂಬ ಸಮಾಧಾನ.
  • ಮಲ್ಲೇಗೌಡನಕೊಪ್ಪಲು ಗೃಹಿಣಿ ಮಂಜುಳಾ ಮರೀಗೌಡರಿಗೆ ‘ದಸರಾ ಅಂದರೆ ಚಿನ್ನದ ಅಂಬಾರಿನೇ ನೆನಪಾಗೋದು. ಈಗಿನ ದಸರಾ ಆಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಮೆರಗು ಪಡೆದುಕೊಂಡಿವೆ. ಸರ್ಕಾರ ನಾಡಹಬ್ಬಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಿರುವುದರಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಹಿಂದೆ ಮಹಾರಾಜರೇ ಅಂಬಾರಿ ಏರಿ ರಾಜಬೀದಿಯಲ್ಲಿ ಸಾಗುತ್ತಿದ್ದುದರಿಂದ ಉತ್ಸವ ಕಳೆಗಟ್ಟುತ್ತಿತ್ತಂತೆ...’
  • ‘ಈಗಿನ ದಸರಾ ಆಚರಣೆ ಬರೀ ಹಣದ , ನಾಜೂಕು, ಥಳುಕಿನಿಂದ ಕೂಡಿದೆ. ಮಹಾರಾಜರ ಕಾಲದ ದಸರಾ ನೋಡಿದ್ದೇನೆ. ಆಗಿನ ವೈಭವ, ಅಂದ-ಚೆಂದವೇ ಬೇರೆ. ಅದನ್ನು ಈಗ ಎಲ್ಲಿ ನೋಡಲು ಸಾಧ್ಯ? ಅದೇ ಊರಿನ ಚಿಕ್ಕಣ್ಣನವರಿಗೆ ದಸರಾ ಎಂದಾಕ್ಷಣ ‘ಜಂಬೂ ಸವಾರಿ ಹಾಗೂ ಅದರ ಜೊತೆ ಬರುವ ಆನೆಗಳು, ಕುದುರೆಗಳು, ಒಂಟೆ ಗಳು, ಗೊಂಬೆಗಳು ನೆನಪಾಗುತ್ತವೆ’. ‘ಕಳೆದ ಎಂಟು ವರ್ಷಗಳಿಂದ ಹೋಗುತ್ತಲೇ ಇದ್ದೇನೆ. ಅರಮನೆ, ಮೃಗಾಲಯ, ಜಂಬೂ ಸವಾರಿ ನೋಡುತ್ತೇನೆ. ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತೇನೆ.. ಇವೆಲ್ಲ ಹಳ್ಳಿಯ ನಮಗೊಂದು ಅವಕಾಶ ಎಂಬ ಮೆಚ್ಚುಗೆ.
  • ೧೯೫೫ ರಲ್ಲಿ ದಸರಾ ನೋಡುವ ಸೌಭಾಗ್ಯ ಪಡೆದಿದ್ದ ಚಾಮರಾಜನಗರ ಜಿಲ್ಲೆ ಅರಳೀಕಟ್ಟೆಯ ರೈತ ಬಸಪ್ಪ ಅವರಿಗೆ ‘ಆಗ ಜಯಚಾಮರಾಜೇಂದ್ರ ಒಡೆಯರ್ ರಾಜ ಪೋಷಾಕು ತೊಟ್ಟು ಆನೆಯ ಅಂಬಾರಿಯನ್ನೇರಿ ಸಾರೋಟಿನಲ್ಲಿ ಹೋಗುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದಾಗಿತ್ತು. ಈಗ ಸರ್ಕಾರವೇ ದಸರಾ ನಡೆಸುವುದರಿಂದ ಅಂದಿನ ವೈಭವ ಕೊಡಲು ಸಾಧ್ಯವಿಲ್ಲ. ಆಗ ಜನರೂ ಇಂತಹ ದೊಡ್ಡ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿದ್ದರು. ಗತಕಾಲದ ವೈಭವವನ್ನು ಬಿಂಬಿಸುವ ಉತ್ಸವ ಇದಾಗಿದೆ. ಇಲ್ಲಿ ಪ್ರಜಾರಾಜ್ಯದ ವೈಖರಿ ಎದ್ದು ಕಾಣುತ್ತಿದೆ. ಸರ್ಕಾರ ಜನಪ್ರತಿನಿಧಿಗಳೊಂದಿಗೆ ತನ್ನದೇ ಆದ ರೀತಿಯಲ್ಲಿ ಆಚರಿಸುತ್ತಿದೆ ಎಂಬ ವಿಶ್ವಾಸ.
  • ನಮ್ಮ ತಂದೆಯವರು ಅವರ ಸ್ನೇಹಿತರ ಜೊತೆ ದಸರಾ ವೀಕ್ಷಿಸಲು ಹೋಗುತ್ತಿದ್ದರು. ಬಂದು ಅಲ್ಲಿ ನಡೆದ ಘಟನಾವಳಿಗಳನ್ನು ಹಂಚಿ ಕೊಳ್ಳುತ್ತಿದ್ದರು. ಈಗಿನ ದಸರಾ ಆಚರಣೆ ಯಲ್ಲಿ ಅಷ್ಟೇನೂ ಸ್ವಾರಸ್ಯವಿಲ್ಲ. ಎಲ್ಲರಲ್ಲಿಯೂ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ’ ಎನ್ನುವುದು ಕಳೆದ ಇಪ್ಪತ್ತು ವರ್ಷಗಳಿಂದ ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ಕೊಡುತ್ತಿರುವ ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತುಪ್ಪೂರಿನ ರೈತ ವಿ.ಕೆ. ಗಿರೀಶರ ಅಭಿಪ್ರಾಯ.
  • ಈಗಿನದು ಅಧಿಕಾರಿಗಳ ದಸರಾ’ ಎಂಬುದು ಗುಂಡ್ಲುಪೇಟೆಯ ಎ.ಜಿ.ಸುರೇಶ್ ಅವರ ಆಕ್ಷೇಪ. ಅವರಿಗೆ ‘ಜಂಬೂ ಸವಾರಿ ಮೊದಲಿಗೆ ನೆನಪಿಗೆ ಬರುತ್ತದೆ. ಆದರೀಗ ಮಹಾರಾಜರು ಆ ಅಂಬಾರಿ ಮೇಲೆ ಇರುವುದಿಲ್ಲವಲ್ಲ ಎನ್ನುವ ಕೊರಗು. ಈಗಿನ ದಸರಾ ಕೇವಲ ತೋರಿಕೆ ಮತ್ತು ರಾಜಕೀಯ ಮಿಶ್ರಿತ.

‘ಮಹಾರಾಜರ ಕಾಲವೇ ಚೆನ್ನ’

  • ‘ನಮಗೆ ದಸರಾ ದೊಡ್ಡ ಹಬ್ಬ. ಮನೆ ತುಂಬ ನೆಂಟರು ಇರುತ್ತಾರೆ. ಜಂಬೂ ಸವಾರಿ, ಹೊಸ ಬಟ್ಟೆ ತೆಗೆದುಕೊಳ್ಳುವುದು, ವಾರಪೂರ್ತಿ ಬಗೆಬಗೆ ಊಟ, ತಿಂಡಿ ಮಾಡುವುದು ಸಂತೋಷ ನೀಡುತ್ತದೆ. ಈಗ ಸಾಧಾರಣವಾಗಿದೆ. ಮಹಾರಾಜರ ಕಾಲದ ದಸರಾ ಚೆನ್ನಾಗಿತ್ತು. ಜಂಬೂ ಸವಾರಿಗೆ ಎಂಟು ದಿನದ ಮೊದಲೇ ಬೇರೆ ಬೇರೆ ಕಡೆಯಿಂದ ಜನ ಎತ್ತಿನ ಗಾಡಿ ಕಟ್ಟಿಕೊಂಡು ಬರುತ್ತಿದ್ದರು. ಈಗಿನ ಬೋಟಿ ಬಜಾರ್ ಬಳಿ ಗಾಡಿ ಚೌಕ ಇತ್ತು, ಅಲ್ಲಿ ಗಾಡಿಗಳನ್ನು ನಿಲ್ಲಿಸಿ ತಂಗುತ್ತಿದ್ದರು.
  • ನಮ್ಮ ಹಳ್ಳಿ ಜನ ದಸರಾಕ್ಕೆ ಪೋಜು ಅನ್ನೋರು. ತೊಣಚಿಕೊಪ್ಪಲು ಮಾರುಕಟ್ಟೆಯಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿರುವ ಕುಮಾರ್ ದೃಷ್ಟಿಯಲ್ಲಿ ‘ಅಂದಿನ ದಸರಾ ಎಂದರೆ ಅಂಬಾರಿ, ಮೆರವಣಿಗೆಯಲ್ಲಿ ಬರುವ ಜನಪದ ಕಲಾ ತಂಡಗಳ ಪ್ರದರ್ಶನ, ಆನೆಗಳು ನೆನಪಾಗುತ್ತವೆ. ಆದರೆ, ಈಗಿನ ದಸರಾ ಸರ್ಕಾರವನ್ನು ಅವಲಂಬಿಸಿದೆ. ದಸರಾದಲ್ಲಿ ಏನು ಇರಬೇಕು, ಇರಬಾರದು ಅನ್ನುವುದನ್ನು ಅಧಿಕಾರದಲ್ಲಿ ಇರುವವರು ನಿರ್ಧರಿಸುತ್ತಾರೆ. ಆ ಕಾಲಕ್ಕೆ ಅದೇ ಚೆಂದ, ಈ ಕಾಲಕ್ಕೆ ಇದೇ ಚೆಂದ ಅನಿಸುತ್ತದೆ.’

ರೂಪಾಯಿಗೆ ಬಾಡಿಗೆ ಸೂಟು

  • ಶ್ರೀರಂಗಪಟ್ಟಣ ಬಳಿಯ ಬೆಳಗೊಳದ ರೈತ ಬೋನಾಸಿ ರಾಮೇಗೌಡರಿಗೆ ದಸರಾ ಅಂದಾಕ್ಷಣ ‘ಪಟ್ಟದಾನೆ ಮೇಲೆ ಮಹಾರಾಜರು ಕುಳಿತುಕೊಂಡು ಬರೋದು ನೆನಪಾಗುತ್ತದೆ. ಜಂಬೂ ಸವಾರಿಯಲ್ಲಿನ ಕುಣಿತ, ಮೆರೆತ ಎಲ್ಲ 40 ವರ್ಷದ ಹಿಂದೆ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ರಮ್ಮನಹಳ್ಳಿ ಜನರು ತಲೆ ಮೇಲೆ ಲೈಟ್ ಹೊತ್ಕಂಡು ಹೋಗೋದು, ಅರಮನೆ ಒಳಗೆ ರಾಜರ ಎದುರಿಗೆ ನಡೆಯುತ್ತಿದ್ದ ಕುಸ್ತಿ, ರಾತ್ರಿ ಸವಾರಿ, ಬ್ಯಾಂಡ್ ಎಲ್ಲ ಮಜವಾಗಿತ್ತು.
  • ಒಂದು ರೂಪಾಯಿ ಬಾಡಿಗೆ ಕೊಟ್ಟು ಮಹಾರಾಜರ ರೀತಿ ನಾವೂ ಸೂಟು, ಬೂಟು, ಪೇಟ, ಕನ್ನಡಕ, ಒಂದೆಳೆ ಹೂವಿನ ಹಾರ ಹಾಕಿಕೊಂಡು ಕುಣಿಯುತ್ತಿದ್ದೆವು. ಆ ದಿನದ ದಸರಾದಲ್ಲಿ ಈ ಹೊತ್ತು ಒಂದಾಣಿ ಭಾಗವೂ ಕಾಣಿಸುತ್ತಿಲ್ಲ. ಬೆಳಗೊಳದಿಂದ (15 ಕಿ.ಮೀ.) ನಡೆದುಕೊಂಡೇ ಹೋಗುತ್ತಿದ್ದೆವು. ಪಟ್ಟದ ಆನೆ, ಪಟ್ಟದ ಹಸು, ಸಂಗೀತ, ಸಿಂಹಾಸನಕ್ಕೆ ಅವುಲು ಎರಚಿ ಮಹಾರಾಜರು ಕುಳಿತುಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ದೊಡ್ಡಪೇಟೆ ಮಾರ್ಗದಲ್ಲಿ ಬರುತ್ತಿದ್ದ ರಾತ್ರಿ ಸವಾರಿ ವ್ಹಾ!’

ಭಾರತದ ಇತರೆಡೆಗಳಲ್ಲಿ ದಸರಾ

  • ಇದೇ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ 'ದಶೇರ'ವಾಗಿಯೂ, 'ದುರ್ಗಾ ಪೂಜೆ'ಯಾಗಿಯೂ ಆಚರಿಸುತ್ತಾರೆ. ೯ ದಿನಗಳ ಈ ಹಬ್ಬಕ್ಕೆ 'ನವರಾತ್ರಿ' ಎಂಬ ಹೆಸರೂ ಇರುವುದು. ಆಯುಧ ಪೂಜೆ, ವಿಜಯ ದಶಮಿ ಗಳನ್ನೊಳಗೊಂಡ ಹಲವು ದಿನಗಳ ಹಬ್ಬದಾಚರಣೆ ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
  • ಬಂಗಾಳದಲ್ಲಿ ಈ ಸಮಯದಲ್ಲಿ ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುವುದು. ಆ ಸಮಯದಲ್ಲಿ ಕೊಲ್ಕತ್ತಾ ದಲ್ಲಿ ವಿಪರೀತವಾದ ಜನಸಂದಣಿ ಸೇರುವುದು. ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುವರು.
  • ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಧಿಸುವರು. ಅವು ಯಾವುವೆಂದರೆ, ದುರ್ಗಾ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ (ಚಂದ್ರಕಾಂತ), ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾ ಗೌರಿ ಮತ್ತು ಸಿದ್ಧಿಧಾತ್ರಿ. ದೇವೀಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಷಿತ್ವಾ ಮತ್ತು ವಷಿತ್ವಾ ಎಂಬ ಎಂಟು ಸಿದ್ಧಿಗಳನ್ನು ದೇವಿಯ ಆರಾಧನೆಯಿಂದ ಪ್ರಾಪ್ತಗೊಳಿಸಿಕೊಳ್ಳಬಹುದು.

ಮಡಿಕೇರಿ ದಸರಾ

ಮಡಿಕೇರಿಯ ದಂಡಿನ ಮಾರಿಯಮ್ಮ ದೇವಾಲಯದ ಕರಗ
ಮಡಿಕೇರಿಯ ಕರಗ ಕುಣಿತದ ಒಂದು ದ್ರಶ್ಶ
ಮಡಿಕೇರಿಯ ದಸರಾ ಮೆರವಣಿಗೆಯ ಮಂಟಪದ ಒಂದು ದ್ರಶ್ಶ
  • ಮಡಿಕೇರಿಯಲ್ಲಿ ದಸರಾ ಆಚರಣೆ ಬಹಳ ವಿಭಿನ್ನವಾಗಿರುತ್ತದೆ. ಮಹಾಲಯ ಅಮವಾಸ್ಯೆಯ ಮಾರನೆಯ ದಿನದಂದು ಕರಗ ಹೊರಡುವುದರೊಂದಿಗೆ ದಸರಾ ಉಥ್ಸವ ಅರಂಭ ವಾಗುತ್ತದೆ. ಮಡಿಕೇರಿ ದಸರಾಕ್ಕೆ ಸುಮಾರು ಇನ್ನೂರು ವರುಶದ ಇಥಿಹಾಸವಿದೆ. ನವರಾತ್ರಿಯ ಮೊದಲೆನೆಯ ದಿನದಂದು ನಾಲಕ್ಕು ಮಾರಿಯಮ್ಮ ದೇವಾಲಯದ ಪೂಜಾರಿಗಳು ಕರಗ ಕಟ್ಟುವ ಸಲಕರಣೆಗಳೊಂದಿಗೆ ನಗರದ ಹೊರವಲಯದಲ್ಲಿರುವ ಪಂಪಿನ ಕೆರೆ ಬಳಿ ಥೆರಳಿ ಕರಗವನ್ನು ಕಟ್ಟಲಾಗುತ್ತದೆ.
  • ಬಳಿಕ ಒಂಬತ್ತು ದಿನಗಳ ಕಾಲ ನಗರಪ್ರದಷ್ಕಿಣೆ ಮಾಡಿ ಪೂಜೆ ಸ್ವೀಕರಿಸುತ್ತದೆ.ಇಲ್ಲಿಯ ಕರಗ ಕುಣಿಥವು ನೊಡಲು ಬಲು ಅಂದ.ದಸರೆಯ ದಿನದಂದು ಬನ್ನಿ ಮಂಟಪಕ್ಕೆ ಥೆರಳಿ ಬನ್ನಿ ಕಡಿಯುವುದರರೊಂದಿಗೆ ಕರಗ ಉತ್ಸವ ಮುಕ್ತಾಯಗೊಳ್ಳುವುದು. ದಸರೆಯ ದಿನ ರಾತ್ರಿ ನಡೆಯುವ ದಶ ಮಂಟಪಗಳ ಮೆರವಣಿಗೆಯಂತೂ ದೇವ ಲೊಕವನ್ನೇ ಧರೆಗಿಳಿಸಿದಂತೆ ಭಾಸವಾಗುವುದು.
  • ಪ್ರತಿ ಮಂಟಪವು ದೇವತೆಗಳಿಂದ ರಕ್ಕಸರನ್ನು ಸಂಹರಿಸುವ ಕಲಾಕೃತಿಯನ್ನು ಹೊಂದಿರುತ್ತವೆ. ಲಕ್ಷ ಸಂಖ್ಯೆಯಲ್ಲಿ ಜನರು ಬಂದು ಈ ಮೆರವಣಿಗೆಯನ್ನು ನೋಡಿ ಆನಂದಿಸುತ್ತಾರೆ.

ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ಈ ಹಬ್ಬದ ವಿಶೇಷ.

ಹಾಸನ ದಸರಾ

"https://kn.wikipedia.org/w/index.php?title=ದಸರ&oldid=654636" ಇಂದ ಪಡೆಯಲ್ಪಟ್ಟಿದೆ