ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೮ ನೇ ಸಾಲು: ೮ ನೇ ಸಾಲು:
==ವಿವಿಧ ವರ್ಷಗಳಲ್ಲಿ ಬಂದ ನೋಬೆಲ್ ಪ್ರಶಸ್ತಿಗಳು==
==ವಿವಿಧ ವರ್ಷಗಳಲ್ಲಿ ಬಂದ ನೋಬೆಲ್ ಪ್ರಶಸ್ತಿಗಳು==
#[[೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು]]
#[[೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು]]
#[[೨೦೧೫ನೇ ಸಾಲಿನನೋಬೆಲ್ ಪ್ರಶಸ್ತಿಗಳು]]
#[[೨೦೧೫ನೇ ಸಾಲಿನ ನೋಬೆಲ್ ಪ್ರಶಸ್ತಿಗಳು]]


==ನೋಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು ==
==ನೋಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು ==

೧೨:೪೬, ೨೧ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ಸರ್ ಎಡ್ವರ್ಡ್ ವಿಕ್ಟರ್ ಅಪೆಲ್ ಟನ್‌ರ ಪದಕ

ನೊಬೆಲ್ ಪ್ರಶಸ್ತಿಯು ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇವನ್ನು ಕೆಳಗೆ ನಮೂದಿ ಸಿರುವ ವಿಭಾಗಗಳಿಗೆ ಪ್ರದಾನಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ. ನವೆಂಬರ್ ೨೦೦೫ರವರೆಗೆ ಒಟ್ಟು ೭೭೬ ನೊಬೆಲ್ ಪದಕಗಳನ್ನು ನೀಡಲಾಗಿದೆ. (೭೫೮ನ್ನು ಸಾಧಕರಿಗೂ ಉಳಿದ ೧೮ನ್ನು ಸಂಸ್ಥೆಗಳಿಗೆ ನೀಡಲಾಗಿದೆ).

ಪ್ರಶಸ್ತಿಯ ಇತಿಹಾಸ

ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, ೧೮೯೫ರಲ್ಲಿ ತನ್ನ ಸಂಪತ್ತಿನ ೯೪% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ ೧೯೦೧ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.

ವಿವಿಧ ವರ್ಷಗಳಲ್ಲಿ ಬಂದ ನೋಬೆಲ್ ಪ್ರಶಸ್ತಿಗಳು

  1. ೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು
  2. ೨೦೧೫ನೇ ಸಾಲಿನ ನೋಬೆಲ್ ಪ್ರಶಸ್ತಿಗಳು

ನೋಬೆಲ್ ಪ್ರಶಸ್ತಿಯ ವಿವಿಧ ಕ್ಷೇತ್ರಗಳು

ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು

೨೦೦೯ ರ ವರೆಗೆ ಭಾರತೀಯರಾದ (ಅಥವ ಭಾರತೀಯ ಮೂಲದ) ೮ ಜನಕ್ಕೆ ಈ ಪ್ರಶಸ್ತಿ ಸಂದಿದೆ. ಇವರುಗಳು-

ಕೈಲಾಸ್ ಸತ್ಯಾರ್ಥಿ - ಶಾಂತಿ (2014)

  • ಗಾಂಧಿವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ 'ಬಚಪನ್ ಬಚಾವೋ' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಶೋಷಿತರ ಧ್ವನಿಯಾಗಿ ನಿಂತಿದ್ದಾರೆ.
  • ಮಹಾತ್ಮನ ಅಹಿಂಸಾ ಹೋರಾಟದ ಪರಂಪರೆಯನ್ನು ಅವರು ಮುಂದವರಿಸಿಕೊಂಡು ಬಂದಿದ್ದು, ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿ ಕೊಂಡಿದ್ದಾರೆ.
  • ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಮಲಾಲ ಅವರಿಗೆ ಪಾಕ್‌`ನ ಮಲಾಲಾ ಯೂಸುಫ್ ಝಾಯಿ ಅವರಿಗೆ ೨೦೧೪ ರ ನೊಬೆಲ್ ಶಾಂತಿ ಪುರಸ್ಕಾರ ನೀಡಿದೆ. ತಾಲಿಬಾನ್‌ ಉಗ್ರರ ದಾಳಿಗೆ ಸಿಲುಕಿ ಬಚಾವಾಗಿದ್ದ ಮಲಾಲ ಯೂಸುಫ್ ಝಾಯಿ ನೊಬೆಲ್‌ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
  • (ವಿಜಯ ಕರ್ನಾಟಕ ಸುದ್ದಿ -೧೧-೧೦-೨೦೧೪)